Tag: Mallikarjun Karge

  • ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ಕಾಂಗ್ರೆಸ್‌ ಅಧ್ಯಕ್ಷೀಯ ಚುನಾವಣೆ; ತ್ರಿಪಾಠಿ ನಾಮಪತ್ರ ತಿರಸ್ಕೃತ – ಖರ್ಗೆ, ಶಶಿ ತರೂರ್‌ ನಡುವೆ ಫೈಟ್

    ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ (Congress Presidential Poll) ಜಾರ್ಖಂಡ್‌ನ ಮಾಜಿ ಸಚಿವ ಕೆ.ಎನ್.ತ್ರಿಪಾಠಿ (K.N.Tripathi) ಅವರ ನಾಮಪತ್ರವನ್ನು ಶನಿವಾರ ತಿರಸ್ಕರಿಸಲಾಗಿದೆ ಎಂದು ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ತಿಳಿಸಿದ್ದಾರೆ.

    ಈಗ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಶಶಿ ತರೂರ್ (Shashi Tharoor) ನಡುವೆ ಮಾತ್ರ ಪೈಪೋಟಿ ಇದ್ದು, ಕುತೂಹಲ ಮೂಡಿಸಿದೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಿಸ್ತ್ರಿ, ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಒಟ್ಟು 20 ನಮೂನೆಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ನಾಲ್ಕು ಸಹಿ ಸಮಸ್ಯೆಯಿಂದಾಗಿ ತಿರಸ್ಕರಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೆ ಖರ್ಗೆ ರಾಜೀನಾಮೆ

    ನಿನ್ನೆ ಒಟ್ಟು 20 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಆ ಪೈಕಿ ನಾಲ್ಕು ನಾಮಪತ್ರಗಳನ್ನು ಸಹಿ ಸಮಸ್ಯೆಯಿಂದಾಗಿ ಪರಿಶೀಲನಾ ಸಮಿತಿ ತಿರಸ್ಕರಿಸಿದೆ. ಹಿಂಪಡೆಯಲು ಅಕ್ಟೋಬರ್ 8 ರವರೆಗೆ ಸಮಯವಿದ್ದು, ಅದರ ನಂತರ ಚಿತ್ರವು ಸ್ಪಷ್ಟವಾಗುತ್ತದೆ. ಯಾರೂ ಹಿಂತೆಗೆದುಕೊಳ್ಳದಿದ್ದರೆ, ಮತದಾನ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಮಿಸ್ತ್ರಿ ಮಾಹಿತಿ ನೀಡಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಒಟ್ಟು 14, ಶಶಿ ತರೂರ್ ಐದು ಮತ್ತು ಜಾರ್ಖಂಡ್ ಕಾಂಗ್ರೆಸ್ ನಾಯಕ ಕೆ.ಎನ್.ತ್ರಿಪಾಠಿ ಒಂದು ನಾಮಪತ್ರ ಸಲ್ಲಿಸಿದ್ದರು. ಈಗ ತ್ರಿಪಾಠಿ ಅವರ ನಾಮಪತ್ರ ತಿರಸ್ಕೃತವಾಗಿದ್ದು, ಖರ್ಗೆ ಮತ್ತು ಶಶಿ ತರೂರ್‌ ಅವರು ಮಾತ್ರ ಕಣದಲ್ಲಿರಲಿದ್ದಾರೆ.‌ ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ರೇಸ್‍ನಲ್ಲಿ ಖರ್ಗೆ – ಕಡೆಯ ಹಂತದಲ್ಲಿ ಕಣಕ್ಕಿಳಿಯುವ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ- ಬಿಎಸ್‍ವೈಗೆ ಎಸ್.ಆರ್.ಪಾಟೀಲ್ ಟಾಂಗ್

    ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ- ಬಿಎಸ್‍ವೈಗೆ ಎಸ್.ಆರ್.ಪಾಟೀಲ್ ಟಾಂಗ್

    ಬಾಗಲಕೋಟೆ: ಹೊಟ್ಟೆಯಲ್ಲಿ ಕೂಸು ಇಟ್ಟುಕೊಂಡು ಜಟ್ಟೆಪ್ಪ ಎಂದು ಹೆಸರಿಟ್ಟಂತೆ ಬಿಎಸ್‍ವೈ ಹೇಳಿಕೆ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಟಾಂಗ್ ನೀಡಿದ್ದಾರೆ.

    ಮೇ 17 ರಂದು ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂಬ ಬಿಎಸ್‍ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ 120 ಕ್ಕೂ ಹೆಚ್ಚು ಸ್ಥಾನದಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಬಾದಾಮಿಯಲ್ಲಿ ಗೌರವಯುತ ಮತಗಳ ಅಂತರದಿಂದ ಸಿಎಂ ಗೆಲ್ಲುತ್ತಾರೆ ಎಂದ ಅವರು, ಸಿಎಂ ವಿರುದ್ಧ 32 ಸಾವಿರ ಕೋಟಿ ರೂ. ಹಗರಣ ಮಾಡಿದವರು ಸ್ಪರ್ಧಿಸಿದ್ದಾರೆಂದು ಆರೋಪಿಸಿದರು.

    ದಲಿತ ಸಿಎಂ ತೀರ್ಮಾನ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಸೋಲಿನ ಭೀತಿ, ಆತಂತ್ರ ಸ್ಥಿತಿ ಎನ್ನುವ ಉದ್ದೇಶದಿಂದ ಈ ಹೇಳಿಕೆಯನ್ನು ನೀಡಿಲ್ಲ. ಸಿಎಂ ಯಾರೆಂದು ನಿರ್ಧರಿಸುವುದು ಹೈಕಮಾಂಡ್, ಯಾರು ಶಾಸಕಾಂಗ ಪಕ್ಷದ ನಾಯಕರಾಗುತ್ತಾರೊ ಅವರು ಸಿಎಂ ಆಗ್ತಾರೆ. ಇದರಲ್ಲಿ ಹೈಕಮಾಂಡ್ ನಿರ್ಧಾರ ಅಂತಿಮ ಎಂದರು.

  • ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ: ಮೋದಿಗೆ ಖರ್ಗೆ ಟಾಂಗ್

    ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ: ಮೋದಿಗೆ ಖರ್ಗೆ ಟಾಂಗ್

    ಕಲಬುರಗಿ: ದೇವೇಗೌಡರು ಹಿರಿಯರು ಅನ್ನುವ ಕಾರಣಕ್ಕೆ ಮೋದಿಯವರು ಗೌರವದಿಂದ ಮಾತನಾಡುತ್ತಿರಬಹುದು. ಆದರೆ ಮೊದಲು ಅವರ ಪಕ್ಷದ ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಅಡ್ವಾಣಿ, ಜೋಷಿಯವರು ಸಭೆ ಸಮಾರಂಭಗಳಲ್ಲಿ ನಮಸ್ಕಾರ ಹೇಳಿದರೂ ಪ್ರತಿ ನಮಸ್ಕಾರ ಹೇಳುವ ಸೌಜನ್ಯ ಮೋದಿಗೆ ಇಲ್ಲ. ಚುನಾವಣೆಗಾಗಿ ಈ ರೀತಿ ಮಾತನಾಡುವ ಗಿಮಿಕ್ ನಡೆಯುವುದಿಲ್ಲ. ಮೊದಲಿಗೆ ಸಂವಿಧಾನದ ಆಶಯದಂತೆ ಸರ್ಕಾರ ನಡೆಯಲು ಸದಾ ಕಣ್ಣು ಕಿವಿಗಳನ್ನು ತೆರೆದಿಡಬೇಕು ಎಂದು ಹೇಳಿದರು.

    ಕಾರ್ಪೆಟ್ ಬಾಂಬಿಂಗ್ ಮಾಡುತ್ತೀನಿ ಎನ್ನುವ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ ಮೋದಿಯ ಬಾಂಬ್ ನಿಷ್ಕ್ರಿಯ ಮಾಡುವ ಅಸ್ತ್ರಗಳು ನಮ್ಮಲ್ಲಿವೆ. ನಮ್ಮಲ್ಲಿನ ಪ್ರತ್ಯಸ್ತ್ರಗಳ ಮೂಲಕ ಮೋದಿ ಬಾಂಬ್ ನಿಷ್ಕ್ರಿಯ ಮಾಡುವ ಕಲೆ ನಮಗೂ ಗೊತ್ತಿದೆ. ಕಾಂಗ್ರೆಸ್ ನಾಶ ಮಾಡಲು ಎಲ್ಲಾ ಪಕ್ಷಗಳು ಸೇರಿ ಯತ್ನಿಸುತ್ತಿವೆ. ಆದರೆ ಇದನ್ನ ಜನ ತೀರ್ಮಾನಿಸಬೇಕೇ ಹೊರತು ಮೋದಿ ತೀರ್ಮಾನಿಸುವುದಲ್ಲ. ಕಾಂಗ್ರೆಸ್ ಬೀಜದ ಗುಣ ಹೊಂದಿರುವ ಪಕ್ಷ. ನೀವು ಎಷ್ಟೇ ಮಣ್ಣೊಳಗೆ ಹೂತರೂ ಸಸಿಯಾಗಿ ಮೇಲೆಳುವುದೇ ಅದರ ಗುಣ ಎಂದು ಹೇಳಿದರು.

    ಮೋದಿ ಅಶಕ್ತ ಬಿಜೆಪಿಗೆ ಟಾನಿಕ್ ಕೊಡಲು ಬಂದಿಲ್ಲ. ಕಾಂಗ್ರೆಸ್ ನಾಶ ಮಾಡುವ ಮಾತನಾಡಲು ಬಂದಿದ್ದಾರೆ. ಕರ್ನಾಟಕದ ಜನ ಮೋದಿ, ಬಿಜೆಪಿ, ಆರ್‍ಎಸ್‍ಎಸ್ ಗುಲಾಮರಾಗಲು ಇಷ್ಟಪಡುತ್ತಿಲ್ಲ. ಗುಜರಾತ್ ಜನ ಮೋದಿಗೆ ಯಾವ ರೀತಿ ಪೆಟ್ಟು ಕೊಟ್ಟಿದ್ದಾರೆ ಅಂತ ಇನ್ನೂ ಅರಿವಿಗೆ ಬಂದಂತಿಲ್ಲ. ಹೋದಲೆಲ್ಲಾ ನೆಹರೂ ಕಟುಂಬವನ್ನೂ ಕೀಳಾಗಿ ಟೀಕಿಸುತ್ತಿದ್ದಾರೆ. ದೇಶದ ಅಭಿವೃದ್ಧಿಯ ಮಾತು ಬಿಟ್ಟು ಸಣ್ಣ ಸಣ್ಣ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಬಿಎಸ್‍ವೈ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿಲ್ಲ: ಖರ್ಗೆ

    ಬಿಎಸ್‍ವೈ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿಲ್ಲ: ಖರ್ಗೆ

    ಕಲಬುರಗಿ: ಹುಟ್ಟಿದ ಮಗುವಿಗೆ ಹೊಟ್ಟೆಯೊಳಗೆ ವಿಷ ಹೋಗಬಾರದು ಅಂತಾ ನಾಲಿಗೆ ಮೇಲಿನ ವಿಷ ತೆಗೆಯುತ್ತಾರೆ. ಬಿಎಸ್ ಯಡಿಯೂರಪ್ಪ ಹುಟ್ಟಿದ್ದಾಗ ಅವರ ನಾಲಿಗೆ ಮೇಲಿಂದ ವಿಷ ತೆಗೆದಿರಲಿಕ್ಕಿಲ್ಲ. ಅದಕ್ಕೆ ಹೋದಕಡೆಯಲ್ಲ ಸುಳ್ಳು ಹೇಳುತ್ತಾ ತಿರುಗಾಡುತ್ತಿರುತ್ತಾರೆ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.

    ಅಫಜಲ್ಪುರದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಗ್ಗೆ ಬಿಎಸ್‍ವೈ ಕೀಳಾಗಿ ಮಾತನಾಡುತ್ತಾರೆ. ಆರ್ ಎಸ್‍ ಎಸ್ ಹಿನ್ನೆಲೆಯುಳ್ಳವರ ಬಾಯಲ್ಲಿ ಇದೆಂಥ ಮಾತು, ಇದೆನಾ ಶಿಸ್ತಿನ ಪಕ್ಷ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅಹಿಂದ ವರ್ಗದ ಜನರ ಬಗ್ಗೆ ಕಾಳಜಿಯುಳ್ಳ ಏಕೈಕ ಪಕ್ಷ ಕಾಂಗ್ರೆಸ್. ಸಿದ್ದರಾಮಯ್ಯ ಮತ್ತೆ ಸಿಎಂ ಆಗಿ ನಿಮಗೆ ಎಲ್ಲಾ ಸೌಲಭ್ಯ ಕೊಡುತ್ತಾರೆ. ಈಗಿರುವ ಸೌಲಭ್ಯಗಳು ಮುಂದುವರೆಯುತ್ತವೆ. ಮಂತ್ರಿ ಸ್ಥಾನ ಸಿಕ್ಕಿಲ್ಲ ಅಂತಾ ಗುತ್ತೇದಾರ್ ನನ್ನ ಮೇಲೆ ಸಿಟ್ಟು ಮಾಡಿಕೊಂಡರು. ಸಿಎಂ ಸಿದ್ದರಾಮಯ್ಯ ಮೇಲೆ ಯಾಕೆ ಅವರು ಸಿಟ್ಟು ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದರು.

    ಬಿಜೆಪಿಯವರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಅಂಬೇಡ್ಕರ್ ನೀಡಿದ ಹಕ್ಕುಗಳನ್ನ ಕಿತ್ತುಕೊಳ್ಳಲು ಬಿಜೆಪಿಯವರು ಹೊರಟಿದ್ದಾರೆ. ಮೋದಿ, ಶಾ ಹೋದ ಕಡೆಯಲ್ಲ ಸುಳ್ಳು ಹೇಳೋದೆ ಮಾಡುತ್ತಿದ್ದಾರೆ. ಹರ್ ಏಕ್ ಜೇಬ್‍ಮೆ ಪಂದ್ರ ಪಂದ್ರ ಲಾಕ್ ಜಮಾ ಕರ್ತೆ ಅಂತಾ ಮೋದಿ ಹೇಳಿದ್ದರು. ಲೇಕಿನ್ ಏಕ್ ಪೈಸೆಬಿ ಜಮಾ ನಹಿ ಹುವಾ ರೈತರಿಗಾಗಿ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕೇಂದ್ರ ಮಾಡಲಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

  • ಟಿಕೆಟ್ ಸಿಕ್ಕಿದ್ರೂ ಬಿ ಫಾರಂ ಸಿಕ್ಕಿಲ್ಲ – ಬಾದಾಮಿ ಕ್ಷೇತ್ರದ ಕೈ ಅಭ್ಯರ್ಥಿ ಯಾರು?

    ಟಿಕೆಟ್ ಸಿಕ್ಕಿದ್ರೂ ಬಿ ಫಾರಂ ಸಿಕ್ಕಿಲ್ಲ – ಬಾದಾಮಿ ಕ್ಷೇತ್ರದ ಕೈ ಅಭ್ಯರ್ಥಿ ಯಾರು?

    ಬೆಂಗಳೂರು: ಬಾದಾಮಿಯ ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಕಾರಣ ಪಟ್ಟಿಯಲ್ಲಿ ದೇವರಾಜ್ ಪಾಟೀಲ್ ಹೆಸರು ಘೋಷಣೆ ಆದರೂ ಅವರಿಗೆ ಇನ್ನೂ ಬಿ ಫಾರಂ ಸಿಕ್ಕಿಲ್ಲ.

    ಕಾಂಗ್ರೆಸ್ ಪಟ್ಟಿಯಲ್ಲಿ ಬಾದಾಮಿ ಕ್ಷೇತ್ರದಿಂದ ದೇವರಾಜ್ ಪಾಟೀಲ್ ಹೆಸರು ಪ್ರಕಟವಾಗಿದೆ. ಇನ್ನೂ ಬಿ ಫಾರಂ ಸಿಗದಿದ್ದಕ್ಕೆ ದೇವರಾಜ್ ಪಾಟೀಲ್ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ.

    ಬಾಗಲಕೋಟೆ ಕಾಂಗ್ರೆಸ್ ಮುಖಂಡರಗಳು ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನಾನು ಎರಡು ಕಡೆಯಿಂದ ಸ್ಪರ್ಧೆ ಮಾಡಲ್ಲ. ಬಾದಾಮಿ ಕ್ಷೇತ್ರದ ಅಭ್ಯರ್ಥಿಯ ವಿಚಾರದಲ್ಲಿ ಸ್ವಲ್ಪ ಗೊಂದಲವಿದೆ. ಹಾಗಾಗಿ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

    ಸಿಎಂ ಎರಡು ಕಡೆ ಟಿಕೆಟ್ ಕೇಳಿಲ್ಲ. ನಾನು ಅಡ್ಡಿಯೂ ಮಾಡಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.

    ಕೆಪಿಸಿಸಿ ಕಚೇರಿ ಮುಂಭಾಗ ಇವತ್ತು ಮೂರ್ನಾಲ್ಕು ಕ್ಷೇತ್ರಗಳ ಟಿಕೆಟ್ ವಂಚಿತರ ಬೆಂಬಲಿಗರು ಜೊತೆಗೂಡಿ ಪ್ರತಿಭಟನೆಗಳ ಮೇಲೆ ಪ್ರತಿಭಟನೆ ನಡೆಸಿದ್ರು. ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್‍ನಲ್ಲಿ ಅಧಿಕೃತ ಅಭ್ಯರ್ಥಿಗಳನ್ನ ಸೋಲಿಸ್ತೀವಿ ಅನ್ನೋ ಎಚ್ಚರಿಕೆ ನೀಡಿದ್ದಾರೆ.