Tag: Mallikarjun Kahrge

  • ಬರೀ ಭಾಷಣ ಮಾಡ್ಕೊಂಡು ಕೂತ್ರೆ ಆಗಲ್ಲ, ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡ್ಬೇಕು: ಖರ್ಗೆ

    ಬರೀ ಭಾಷಣ ಮಾಡ್ಕೊಂಡು ಕೂತ್ರೆ ಆಗಲ್ಲ, ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡ್ಬೇಕು: ಖರ್ಗೆ

    ಕಲಬುರಗಿ: ಬರೀ ಭಾಷಣ ಮಾಡಿಕೊಂಡು ಕುಳಿತರೆ ಆಗಲ್ಲ. ನಮ್ಮನ್ನ ಕೆಣಕಿದವರಿಗೆ ತಕ್ಕ ಉತ್ತರ ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

    ಕಲಬುರಗಿ (Kalaburagi) ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಐಕ್ಯತೆಗಾಗಿ ಮೋದಿ (Narendra Modi) ಸರ್ಕಾರ ಏನೇ ಕ್ರಮ ಕೈಗೊಂಡರೂ ನಮ್ಮ ಬೆಂಬಲವಿದೆ. ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಬೇಕು. ಆದರೆ ಇದರಲ್ಲೂ ರಾಜಕೀಯ ಆಗಬಾರದು. ನಮ್ಮ ದೇಶದನ್ನು ಕೆಣಕಿದ್ರೆ ನಾವು ಸುಮ್ಮನಿರಬಾರದು. ಪಾಕಿಸ್ತಾನದ (Pakistan) ಮೇಲೆ ಕ್ರಮ ಆಗಲಿ ಎಂದು ನಾವು ಬೆಂಬಲ ಕೊಟ್ಟಿದ್ದೇವೆ. ನಮಗೆ ದೇಶ ಮುಖ್ಯ. ಹೀಗಾಗಿ ಯಾವುದೇ ಕ್ರಮ ಕೈಗೊಂಡರೂ ನಮ್ಮ ಬೆಂಬಲ ಇರುತ್ತದೆ ಎಂದರು. ಇದನ್ನೂ ಓದಿ: ಮಂಗಳೂರು ಸುಹಾಸ್ ಶೆಟ್ಟಿ ಕೊಲೆ ಕೇಸ್ NIA ತನಿಖೆ ಆಗಲಿ: ಸದಾನಂದ ಗೌಡ

    ಜಾತಿ ಜನಗಣತಿ (Caste Census) ಬಗ್ಗೆ ನಾವು ಮೊದಲೇ ಆಗ್ರಹಿಸಿದ್ದೆವು. ಆದರೆ ಆಗ ಜಾತಿ ವಿಷಬೀಜ ಬಿತ್ತುತ್ತಾರೆ ಎಂದು ನಮ್ಮನ್ನು ಹೀಯಾಳಿಸಿದ್ದರು. ಬಿಹಾರ ಚುನಾವಣಾ ಗಿಮಿಕ್ ಇರಬಹುದು. ಆದರೆ ನಾನು ಅದರ ಬಗ್ಗೆ ಮಾತನಾಡಲ್ಲ. ದುರುದ್ದೇಶದಿಂದ ನೀವು ನಡೆದುಕೊಂಡರೆ ಯಾರೂ ಸಹಿಸಲ್ಲ. ಒಳ್ಳೆಯ ಉದ್ದೇಶದಿಂದ ಮಾಡಿ ಎಂದು ತಿಳಿಸಿದರು. ಇದನ್ನೂ ಓದಿ: ರಾಮನಗರ | ಹಾಡಹಗಲೇ ರೌಡಿಶೀಟರ್‌ನ ಬರ್ಬರ ಹತ್ಯೆ!

  • ಪಾಕಿಸ್ತಾನವನ್ನು ಹತೋಟಿಯಲ್ಲಿಡಲು ಪ್ರಧಾನಿಗೆ ಬೆಂಬಲ: ಮಲ್ಲಿಕಾರ್ಜುನ ಖರ್ಗೆ

    ಪಾಕಿಸ್ತಾನವನ್ನು ಹತೋಟಿಯಲ್ಲಿಡಲು ಪ್ರಧಾನಿಗೆ ಬೆಂಬಲ: ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಯಾವುದೇ ರೀತಿಯಲ್ಲಿ ಭಾರತ ದೇಶದ ಸೈನಿಕರಿಗಾಗಲಿ, ಜನರಿಗಾಗಲಿ ತೊಂದರೆ ಆಗಬಾರದು. ಪಾಕಿಸ್ತಾನವನ್ನ (Pakistan) ಹತೋಟಿಯಲ್ಲಿ ಇಡಲು ನಾವು ಪ್ರಧಾನಿಗೆ ಬೆಂಬಲ ಕೊಟ್ಟಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದ್ದಾರೆ.

    ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾವು ಅವರಿಗೆ ಸಂಪೂರ್ಣ ಅಧಿಕಾರ ಕೊಟ್ಟಿದ್ದೇವೆ. ಜನರ ಅನಿಸಿಕೆ ಹಾಗೂ ದೇಶದಲ್ಲಿ ಇರುವ ಭಾವನೆ ಜೊತೆಗೆ ಎಲ್ಲಾ ಪಕ್ಷಗಳು ಅವರಿಗೆ ಅಧಿಕಾರ ನೀಡಿದ್ದೇವೆ. ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ಅಧಿಕಾರ ಮಾಡಲು ಕೊಟ್ಟಿದ್ದೇವೆ. ಅದನ್ನು ಅವರು ಉಪಯೋಗ ಮಾಡಿಕೊಳ್ಳಲಿ, ತಮ್ಮ ಕೆಲಸವನ್ನು ಅವರು ಮಾಡಲಿ. ದೇಶದ ರಕ್ಷಣೆ ಮಾಡುವುದಕ್ಕೆ ಆದಷ್ಟು ಬೇಗನೆ ಒಳ್ಳೆಯ ಹೆಜ್ಜೆಯನ್ನು ಇಡಬೇಕು ಎಂದರು. ಇದನ್ನೂ ಓದಿ: MBBS ವಿದ್ಯಾರ್ಥಿಗಳಿಗೆ 80 ಕೋಟಿ ಸ್ಕಾಲರ್‌ಶಿಪ್‌ ವಂಚನೆ ಆರೋಪ – `ಕೈ’ ಮುಖಂಡನ ಮನೆ ಮೇಲೆ ಇಡಿ ದಾಳಿ

    ನಾವು ಎಲ್ಲಾ ಪಕ್ಷದವರು ಒಂದಾಗಿ ಅಧಿವೇಶನ ಕರೆಯಬೇಕು ಎಂದು ಹೇಳಿದ್ದೇವೆ. ಪ್ರಧಾನ ಮಂತ್ರಿಗಳು (Narendra Modi) ಅಧಿವೇಶನದಲ್ಲಿ ಇರಬೇಕು. ಪ್ರಧಾನಮಂತ್ರಿಗಳು ಯಾವೆಲ್ಲ ಕ್ರಮ ತೆಗೆದುಕೊಂಡಿದ್ದಾರೆ ಅದನ್ನು ಹೇಳಬೇಕು. ಕೆಲವೊಂದು ಗುಪ್ತ ಕಾರ್ಯಸೂಚಿಗಳಿರುತ್ತದೆ, ಅದನ್ನು ಮಾಡಲಿ. ಇವತ್ತಿನ ಪರಿಸ್ಥಿತಿ ಏನಿದೆ, ಅವರು ಏನು ಮಾಡಬೇಕು ಎಂಬುದು ಮನಸ್ಸಿನಲ್ಲಿದೆ. ಅದನ್ನು ಫ್ಲೋರ್ ಲೀಡರ್ಸ್ನ ಕರೆದು ಮಾತನಾಡಿಸುವುದು ಒಳ್ಳೆಯದು ಎಂದು ಹೇಳಿದರು. ಇದನ್ನೂ ಓದಿ: ಬೆಳಿಗ್ಗೆ ಪಹಲ್ಗಾಮ್‌ನಲ್ಲಿ ಎಂಜಾಯ್ ಮಾಡಿ ಹೋಗಿದ್ವಿ – ಉಗ್ರರ ದಾಳಿಯಿಂದ ಪಾರಾದ ಬೀದರ್ ದಂಪತಿ

    ಮೋದಿ ತಲೆ ಇಲ್ಲದ ಫೋಟೋ ಹಾಕಿ ಗಾಯಬ್ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ವಿಚಾರ ನನಗೆ ಗೊತ್ತಿಲ್ಲ. ಯಾವುದೇ ವ್ಯಕ್ತಿಗೆ, ಯಾರೇ ಇರಲಿ, ಅದು ಪ್ರಧಾನಮಂತ್ರಿಯೇ ಇರಲಿ, ಯಾವುದೇ ಮುಖಂಡರಿಗೇ ಇರಲಿ, ಅವರ ಗೌರವಕ್ಕೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಅವರಾಗಲಿ ನಮ್ಮವರೇ ಆಗಲಿ ಈ ರೀತಿ ಮಾಡೋದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊರಗಜ್ಜನಿಗೆ ನಮಿಸಿ ಕಾಣಿಕೆ ಹುಂಡಿ ಕದ್ದೊಯ್ದ ಕಳ್ಳ

    ಪಹಲ್ಗಾಮ್ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ಕೈ ನಾಯಕರಿಗೆ ಸೂಚನೆ ವಿಚಾರವಾಗಿ ಮಾತನಾಡಿದ ಅವರು, ಅದರ ಸುತ್ತೋಲೆ ಹೊರಡಿಸಿದ್ದೇವೆ. ದೆಹಲಿಯಲ್ಲಿ ವರ್ಕಿಂಗ್ ಕಮಿಟಿ ಸಭೆ ಮಾಡಿದ್ದೆವು. ವರ್ಕಿಂಗ್ ಕಮಿಟಿಯಲ್ಲಿ ನಿರ್ಣಯ ತೆಗೆದುಕೊಂಡಿದ್ದೆವು. ಆ ನಿರ್ಣಯವನ್ನ ಎಲ್ಲರೂ ಪಾಲಿಸಬೇಕು. ಇದನ್ನ ಮತ್ತೊಮ್ಮೆ ಅವರಿಗೆ ಮನವರಿಕೆ ಮಾಡಿದ್ದೇವೆ. ಎಲ್ಲರೂ ಅದನ್ನು ಫಾಲೋ ಮಾಡಬೇಕು ಎಂದು ಸೂಚನೆ ನೀಡಿದರು. ಇದನ್ನೂ ಓದಿ: ಪಾಕ್‌ ಸೈನಿಕರಿಂದ 24*7 ಭದ್ರತೆ – ಲಾಹೋರ್‌ನಲ್ಲಿ ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್‌ ಸಯೀದ್‌ ಐಷಾರಾಮಿ ಜೀವನ