Tag: Mallika Sherawat

  • ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

    ಮುನಿಸು ಮರೆತು 20 ವರ್ಷಗಳ ನಂತರ ಒಂದಾದ ಇಮ್ರಾನ್ ಹಶ್ಮಿ, ಮಲ್ಲಿಕಾ ಶೆರಾವತ್

    ಬಾಲಿವುಡ್ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ (Mallika Sherawat) ಮತ್ತೆ ಸುದ್ದಿಯಲ್ಲಿದ್ದಾರೆ. ಮುನಿಸು ಮರೆತು 20 ವರ್ಷಗಳ ನಂತರ ಇಮ್ರಾನ್ ಹಶ್ಮಿ (Emraan Hashmi) ಮತ್ತು ಮಲ್ಲಿಕಾ ಶೆರಾವತ್ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಜೊತೆಯಾಗಿ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಫ್ಯಾನ್ಸ್‌ಗೆ ಅಚ್ಚರಿ ಮೂಡಿಸಿದ್ದಾರೆ.

    ಬಾಲಿವುಡ್ ನಿರ್ಮಾಪಕ ಆನಂದ್ ಪಂಡಿತ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಇಡೀ ಹಿಂದಿ ಸೆಲೆಬ್ರೆಟಿಗಳ ದಂಡೇ ಹಾಜರಿ ಹಾಕಿತ್ತು. ಈ ವೇಳೆ, ಅನಿರೀಕ್ಷಿತವಾಗಿ ಈ ಕಾರ್ಯಕ್ರಮಲ್ಲಿ ಇಮ್ರಾನ್ ಮತ್ತು ಮಲ್ಲಿಕಾ ಭೇಟಿಯಾಗಿದ್ದಾರೆ. ಮುನಿಸೆಲ್ಲಾ ಮರೆತು ಇಬ್ಬರೂ ಖುಷಿ ಖುಷಿಯಾಗಿ ಮಾತನಾಡಿದ್ದಾರೆ. ಬಳಿಕ ಕ್ಯಾಮೆರಾಗೆ ಪೋಸ್ ಕೊಡುವ ಮೂಲಕ ಸಂಭ್ರಮಿಸಿದ್ದಾರೆ.

    20 ವರ್ಷಗಳ ಹಿಂದೆ ಸಿನಿಮಾವೊಂದರ ವಿಚಾರವಾಗಿ ಮನಸ್ತಾಪವಾಗಿತ್ತು. ಹಾಗಾಗಿ ಮಾತು ಬಿಟ್ಟಿದ್ದರು. ಈಗ ಸಮಯ ಬದಲಾಗಿದೆ. ಇಬ್ಬರ ನಡುವೆ ಅದೇನೇ ಆಗಿರಲಿ ಎಲ್ಲಾ ಮರೆತು ಖುಷಿಯಾಗಿರೋದನ್ನ ನೋಡಿ ಅಭಿಮಾನಿಗಳು ಭೇಷ್ ಎಂದಿದ್ದಾರೆ. ಮತ್ತೆ ಮುಂದೆ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರಲಿ ಎಂದು ಆಶಿಸಿದ್ದಾರೆ. ಇದನ್ನೂ ಓದಿ:ಎದೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ‘ವೀರಕನ್ನಡಿಗ’ ನಟ ಸಯಾಜಿ ಶಿಂಧೆ

    ಮಲ್ಲಿಕಾ (Mallika Sherawat) ಮತ್ತು ಇಮ್ರಾನ್ ಜೋಡಿಯಾಗಿ ಮರ್ಡರ್, ಮರ್ಡರ್ ಚಿತ್ರದ ಸೀಕ್ವೆಲ್, ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

  • ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ದ್ವೇಷಿಸುತ್ತಾರೆ: ಮಲ್ಲಿಕಾ ಶೆರಾವತ್

    ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ದ್ವೇಷಿಸುತ್ತಾರೆ: ಮಲ್ಲಿಕಾ ಶೆರಾವತ್

    ಬಾಲಿವುಡ್ ಹಾಟ್ ನಟಿಯರಲ್ಲಿ ಒಬ್ಬರಾಗಿರುವ ಮಲ್ಲಿಕಾ ಶೆರಾವತ್ ಸದ್ಯ `RK/RKAY’ ಚಿತ್ರದ ಮೂಲಕ ಬಿಟೌನ್‌ಗೆ ಕಂಬ್ಯಾಕ್ ಮಾಡಿದ್ದಾರೆ. ಈ ವೇಳೆ ತನ್ನ ಬೋಲ್ಡ್ ಸೀನ್ ಅನ್ನು ನೋಡಿದಾಗ ಫ್ಯಾನ್ಸ್ ಹೇಗೆ ರಿಯಾಕ್ಟ್ ಮಾಡುತ್ತಾರೆ ಅಂತಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಬಿಟೌನ್‌ನಲ್ಲಿ ಹಸಿಬಿಸಿ ದೃಶ್ಯಗಳ ಮೂಲಕ ಸುದ್ದಿಯಾದ ನಟಿ ಮಲ್ಲಿಕಾ ಶೆರಾವತ್, `ಮರ್ಡರ್’ ಚಿತ್ರದಲ್ಲಿ ಬೋಲ್ಡ್ ದೃಶ್ಯದ ಮೂಲಕ ಪಡ್ಡೆಹುಡುಗರ ಗಮನ ಸೆಳೆದ ನಟಿ, ಮಲ್ಲಿಕಾ ಸಿನಿಮಾಗಳನ್ನ ಇಂದಿಗೂ ನೋಡಿ ಅಭಿಮಾನದಿಂದ ಕಾಣುವವರಿದ್ದಾರೆ. ಇದೀಗ ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಲ್ಲಿಕಾ, ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ನನ್ನನ್ನು ದ್ವೇಷಿಸುತ್ತಾರೆ ಎಂದು ಮಲ್ಲಿಕಾ ಮಾತನಾಡಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ದಿಶಾ ಪಟಾನಿ ನಯಾ ಫೋಟೋಶೂಟ್

    Mallika Sherawatಸಿನಿಮಾದಲ್ಲಿ ನನ್ನ ಬೋಲ್ಡ್ ದೃಶ್ಯಗಳನ್ನು ನೋಡಿದಾಗ ನನ್ನನ್ನು ಕೀಳಾಗಿ ಕಂಡಿದ್ದು ಇದೆ. ನನ್ನ ಚಿತ್ರಗಳಿಗೆ ಪುರುಷರು ಬೆಂಬಲಿಸುತ್ತಿದ್ದರು. ಆದರೆ ಯುವತಿಯರು ನನ್ನ ವಿರುದ್ಧವಾಗಿ ಮಾತನಾಡುತ್ತಿದ್ದರು. ಪುರುಷರು ನನ್ನನ್ನು ಪ್ರೀತಿಸುತ್ತಾರೆ, ಮಹಿಳೆಯರು ದ್ವೇಷಿಸುತ್ತಾರೆ ಎಂದು ಸಂದರ್ಶನದ ವೇಳೆ ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಈ ಹಿಂದಿನ ತಮಗೆ ಆದ ಅನುಭವವನ್ನು ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ʻಗೆಹರಾಯಿಯಾʼ ಸಿನಿಮಾದಲ್ಲಿ ದೀಪಿಕಾ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ: ಮಲ್ಲಿಕಾ ಶೆರಾವತ್

    ʻಗೆಹರಾಯಿಯಾʼ ಸಿನಿಮಾದಲ್ಲಿ ದೀಪಿಕಾ ಮಾಡಿದ್ದನ್ನು ನಾನು 15 ವರ್ಷಗಳ ಹಿಂದೆಯೇ ಮಾಡಿದ್ದೆ: ಮಲ್ಲಿಕಾ ಶೆರಾವತ್

    ಬಾಲಿವುಡ್‌ನ ಹಾಟ್ ಬ್ಯೂಟಿ ಮಲ್ಲಿಕಾ ಶೆರಾವತ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. `RK/RKAY’ ಚಿತ್ರದ ಮೂಲಕ ಬಿಟೌನ್‌ನಲ್ಲಿ ಮಲ್ಲಿಕಾ ಸದ್ದು ಮಾಡ್ತಿದ್ದಾರೆ. ಈ ವೇಳೆ ತಮ್ಮ `ಮರ್ಡರ್’ ಚಿತ್ರವನ್ನು ದೀಪಿಕಾ ಪಡುಕೋಣೆ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಹೋಲಿಸಿ ಮಾತನಾಡಿದ್ದಾರೆ.

    ಬೋಲ್ಡ್ ಪಾತ್ರಗಳ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದ ನಟಿ ಮಲೈಕಾ ಶೆರಾವತ್ ಕೆಲ ಸಮಯ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಬಿಟೌನ್‌ನಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ವೇಳೆ ತಾವು ನಟಿಸಿರುವ ಮರ್ಡರ್ ಚಿತ್ರವನ್ನು ಈಗಿನ ದೀಪಿಕಾ ನಟನೆಯ `ಗೆಹರಾಯಿಯಾ’ ಚಿತ್ರಕ್ಕೆ ಕಂಪೇರ್ ಮಾಡಿ, ಮಾತನಾಡಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಮಾಡಿದ್ದನ್ನು 15 ವರ್ಷಗಳ ಹಿಂದೆಯೇ ನಾನು ಮಾಡಿದ್ದೆ ಎಂದು ಬೋಲ್ಡ್ ಉತ್ತರ ಕೊಟ್ಟಿದ್ದಾರೆ.

    ನಟಿ ಮಲೈಕಾ ಹಾಟ್ ಮತ್ತು ಬೋಲ್ಡ್ ಸೀನ್‌ಗಳ ಮೂಲಕ ಗುರುತಿಸಿಕೊಂಡಿರುವ ನಟಿ, ಆಗ ಬೋಲ್ಡ್ ಸೀನ್‌ಗಳಲ್ಲಿ ಕಾಣಿಸಿಕೊಂಡ್ರೆ ಸಂಕೋಚ ಸ್ವಭಾವದಿಂದ ನೋಡುತ್ತಿದ್ದರು. ಜತೆಗೆ ನಮ್ಮ ನಟನೆಗೆ ಬೆಲೆ ಕೊಡುತ್ತಿರಲಿಲ್ಲ. ನಾನು `ಮರ್ಡರ್’ ಚಿತ್ರದಲ್ಲಿ ಕಿಸ್ ಮತ್ತು ಬಿಕಿನಿ ದೃಶ್ಯದಲ್ಲಿ ಕಾಣಿಸಿಕೊಂಡಾಗ ಜನರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಜನ ಬೋಲ್ಡ್ ಸಿನಿಮಾಗಳತ್ತ ವಾಲುತ್ತಿದ್ದಾರೆ. `ಗೆಹರಾಯಿಯಾ’ ಚಿತ್ರದಲ್ಲಿ ದೀಪಿಕಾ ಕಾಣಿಸಿಕೊಂಡಂತೆ ನಾನು 15 ವರ್ಷಗಳ ಹಿಂದೆಯೇ ಕಾಣಿಸಿಕೊಂಡಿದ್ದೆ, ಆಗ ನನ್ನ ನಟನೆಯ ಬಗ್ಗೆ ಯಾರು ಮಾತನಾಡಲಿಲ್ಲ ಎಂದು ಮಲೈಕಾ ಮನಬಿಚ್ಚಿ ಮಾತನಾಡಿದ್ದಾರೆ.

    ಮಲೈಕಾ ಅವರು ಸದ್ಯ ತಮ್ಮ ಹೊಸ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಜುಲೈ 22ರಂದು ಮಲೈಕಾ ನಟನೆಯ RK/RKAY ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಮಲೈಕಾ ಜತೆ ಕುಬ್ರಾ ಸೇಠ್ ಕೂಡ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಗ್ನ ದೃಶ್ಯಗಳಿಗೆ ಮಲ್ಲಿಕಾ ಟಾರ್ಗೆಟ್ ಆಗಿದ್ದೇಕೆ? – ಕಷ್ಟದ ದಿನಗಳನ್ನು ನೆನಪಿಸಿಕೊಂಡ ಮರ್ಡರ್ ಚೆಲುವೆ

    ನಗ್ನ ದೃಶ್ಯಗಳಿಗೆ ಮಲ್ಲಿಕಾ ಟಾರ್ಗೆಟ್ ಆಗಿದ್ದೇಕೆ? – ಕಷ್ಟದ ದಿನಗಳನ್ನು ನೆನಪಿಸಿಕೊಂಡ ಮರ್ಡರ್ ಚೆಲುವೆ

    ಮುಂಬೈ: ಬಾಲಿವುಡ್‍ಗೆ ಎಂಟ್ರಿ ಕೊಟ್ಟ ತಕ್ಷಣ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಲು ಆರಂಭಿಸಿದೆ ಎಂದು ಅನೇಕ ಮಂದಿ ಟೀಕಿಸಲು ಪ್ರಾರಂಭಿಸಿದರು. ಅಲ್ಲದೇ ಆ ಸಮಯದಲ್ಲಿ ನನ್ನ ಸಹ ನಟರೂ ಕೂಡ ನನ್ನಿಂದ ದೂರ ಆದಾಗ ಸಾಕಷ್ಟು ಕ್ರೂರವಾದ ಪರೀಕ್ಷೆಗಳನ್ನು ಎದುರಿಸಬೇಕಾಯಿತು ಎಂದು ನಟಿ ಮಲ್ಲಿಕಾ ಶೆರಾವತ್ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

    Mallika Sherawat

    ನಾನು ಹಲವು ಬಾರಿ ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದ್ದರಿಂದ ಒಂದು ರೀತಿ ಟಾರ್ಗೆಟ್ ಆಗಿದ್ದೆ ಮತ್ತು ಈ ವೇಳೆ ಸಮಾಜ ಕೂಡ ಹೇಗೆ ಬದಲಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. 2004ರಲ್ಲಿ ಮಲ್ಲಿಕಾ ಶೆರಾವತ್ ಅಭಿನಯಿಸಿದ್ದ ಮರ್ಡರ್ ಸಿನಿಮಾದ ಬಗ್ಗೆ ಮಾತನಾಡಿದ ಅವರು, ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸುವ ಮಹಿಳೆ ಹಾಗೂ ಪುರುಷರನ್ನು ಸಮಾಜ ಯಾವ ದೃಷ್ಟಿಯಲ್ಲಿ ನೋಡುತ್ತದೆ ಹಾಗೂ ಪುರುಷರು ಎಲ್ಲದರಿಂದ ದೂರ ಆದರು ಮಹಿಳೆಯರು ಮಾತ್ರ ಟಾರ್ಗೆಟ್ ಆಗಿರುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ಪರಿಹಾರ ನೀಡಲು NDMA ಶಿಫಾರಸು

    Mallika Sherawat

    ಬಾಲಿವುಡ್‍ನಲ್ಲಿ ಮಹಿಳೆಯರನ್ನೇ ಯಾಕೆ ಗುರಿಯಾಗಿಸಿಕೊಳ್ಳುತ್ತಾರೆ. ಪುರುಷರನ್ನು ಮಾತ್ರ ಯಾಕೆ ಗುರಿ ಮಾಡುವುದಿಲ್ಲ. ಇದು ಕೇವಲ ಭಾರತ ಮಾತ್ರವಲ್ಲ ಇಡೀ ಪ್ರಪಂಚದಾದ್ಯಂತ ಇದೆ. ಪುರುಷರು ಎಲ್ಲದರಿಂದ ದೂರ ಆಗಬಹುದು ಆದರೆ ಮಹಿಳೆಯರನ್ನು ಮಾತ್ರ ಯಾಕೆ ಎಲ್ಲರೂ ದೂಷಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಅದರಲ್ಲಿಯೂ ಭಾರತದಲ್ಲಿಯೇ ಹೆಚ್ಚು ಎಂದು ನಾನು ಭಾವಿಸುತ್ತೇನೆ. ನಮ್ಮ ಸಮಾಜವು ವಿಕಸನಗೊಂಡಿಲ್ಲ ಎಂದು ನಾನು ಅಂದುಕೊಳ್ಳುತ್ತೇನೆ. ಇಲ್ಲಿನ ಜನರು ವಿಭಿನ್ನವಾಗಿ ಯೋಚಿಸುತ್ತಾರೆ. ಅಲ್ಲದೇ ಈ ಹಿಂದೆ ಮಾಧ್ಯಮಗಳು ಸಹ ಇಂತಹ ದೃಶ್ಯಗಳಿಗೆ ಬೆಂಬಲಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೋಲೂರಿನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಹುಲ್ಲನ್ನು ಬಳಸಿ ಬಯೋ ಗ್ಯಾಸ್ ತಯಾರು – ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

    ನನಗೆ ಕೆಲವು ವಿಷಯಗಳು ಕಷ್ಟವಾಗಿದ್ದರೂ, ನನ್ನ ವೃತ್ತಿ ಜೀವನದ ಆರಂಭದಲ್ಲಿ ಚಲನಚಿತ್ರಗಳ ಆಯ್ಕೆ ಮಾಡುವಾಗ ಒಂದು ರೀತಿ ಪೊಲೀಸ್  ಆಗಿದ್ದೆ. ಆದರೀಗ ಸಮಾಜ ಬದಲಾಗಿದೆ ಎಂದು ನಾನು ಅಂದುಕೊಂಡಿದ್ದೇನೆ. ಅಲ್ಲದೇ ಮಾಧ್ಯಮಗಳು ಕೂಡ ಈಗ ಹೆಚ್ಚಾಗಿ ಮಹಿಳೆಯರಿಗೆ ಬೆಂಬಲ ನೀಡುತ್ತದೆ. ಜೊತೆಗೆ ನಟಿಯರು ಈಗ ನಗ್ನ ದೃಶ್ಯಗಳಲ್ಲಿ ಅಭಿನಯಿಸಲು ಒಪ್ಪಿಕೊಳ್ಳುತ್ತಿದ್ದಾರೆ. ಇದನ್ನು ಬಹಳ ಕಲಾತ್ಮಕವಾಗಿ ಪರಿಗಣಿಸಲಾಗಿದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

    https://www.youtube.com/watch?v=AGXNkNZoTOM

  • ಸೀರೆ ಧರಿಸಿ ಬಂದ ಹಾಟ್ ಗರ್ಲ್ ಮಲ್ಲಿಕಾ ಟ್ರೋಲ್

    ಸೀರೆ ಧರಿಸಿ ಬಂದ ಹಾಟ್ ಗರ್ಲ್ ಮಲ್ಲಿಕಾ ಟ್ರೋಲ್

    ಸಿಬಿಸಿ ದೃಶ್ಯಗಳಿಂದಲೇ ತುಂಡೈಕ್ಳ ಹಾಟ್ ಫೇವರೇಟ್ ಆಗಿರೋ ಮರ್ಡರ್ ಗರ್ಲ್ ಮಲ್ಲಿಕಾ ಶೆರಾವತ್ ಹೊಸ ಅವತಾರದೊಂದಿಗೆ ಬಂದಿದ್ದಾರೆ. ಖಾಸಗಿ ವಾಹಿನಿಯ ಕಾಮಿಡಿ ಶೋ ಜಡ್ಜ್ ಆಗಿರೋ ಮಲ್ಲಿಕಾ ನೀಲಿ ಬಣ್ಣದ ಸೀರೆಯಲ್ಲಿ ಕಾಣಿಸಿಕೊಂಡು ಟ್ರೋಲ್ ಆಗುತ್ತಿದ್ದಾರೆ. ಮಾಡರ್ನ್ ಲುಕ್ ಸೀರೆಯಲ್ಲಿ ಬಂದ ಮಲ್ಲಿಕಾಳನ್ನ ಕಂಡು ನೆಟ್ಟಿಗರು ಇದ್ಯಾವ ಉಡುಪು ಅಂತ ಕಮೆಂಟ್ ಮಾಡ್ತಿದ್ದಾರೆ.

    ಭಾರತೀಯ ಸಿನಿ ಅಂಗಳದಿಂದ ದೂರವಾಗಿದ್ದ ಮಲ್ಲಿಕಾ ಶೆರವಾತ್ ವಿದೇಶದಲ್ಲಿಯೇ ನೆಲೆಸಿದ್ದರು. ಇದೀಗ ಭಾರತಕ್ಕೆ ಹಿಂದಿರುಗಿರುವ ಮಲ್ಲಿಕಾ ಮುಂಬೈನಲ್ಲಿ ವಾಸವಾಗಿದ್ದಾರೆ.

    ಮರ್ಡರ್ ಸಿನಿಮಾ ಮೂಲಕ ಜನಪ್ರಿಯ ಗಿಟ್ಟಿಸಿಕೊಂಡಿದ್ದ ಮಲ್ಲಿಕಾ ಶೆರಾವತ್ ಬಹುಭಾಷಾ ನಟಿ.

    ಸಿನಿಮಾಗಳಲ್ಲಿ ಬೋಲ್ಡ್ ಆ್ಯಂಡ್ ಸೆಕ್ಸಿಯಾಗಿ ಕಾಣಿಸಿಕೊಳ್ಳುವ ಮಲ್ಲಿಕಾ, ಸೋಶಿಯಲ್ ಮೀಡಿಯಾದಲ್ಲಿ ತುಂಡುಡುಗೆ ತೊಟ್ಟ ಫೋಟೋ ಹಾಕಿ ತುಂಡೈಕ್ಳ ನಿದ್ದೆ ಕೆಡಸ್ತಾರೆ.

    2017ರ ಜೀನತ್ ಸಿನಿಮಾದಲ್ಲಿ ಮಲ್ಲಿಕಾ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ನಂತರ ಒಟಿಟಿ ಪ್ಲಾಟ್‍ಪಾರಂ ದಿ ಸ್ಟೋರಿ ವೆಬ್ ಸಿರೀಸ್ ಮೂಲಕ ಕಮ್ ಬ್ಯಾಕ್ ಮಾಡಿದ್ದರು.

    ಫ್ರೆಂಚ್ ರಿಯಲ್ ಸ್ಟೇಟ್ ಉದ್ಯಮಿ ಸೈಯಿರಲ್ ಅಕ್ಸೊಜೆನಫೆಂಸ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ. ಪ್ಯಾರಿಸ್ ನಲ್ಲಿ ಇಬ್ಬರು ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದಾರೆ.

    ಸ್ಟಾರ್ ನಿರ್ದೇಶಕ ಜೋಗಿ ಪ್ರೇಮ್ ಕನ್ನಡಕ್ಕೆ ಮಲ್ಲಿಕಾರನ್ನು ಕರೆತಂದಿದ್ದರು.

    ಪ್ರೀತಿ ಯಾಕೆ ಭೂಮಿ ಮೇಲಿದೆ ಸಿನಿಮಾದಲ್ಲಿಯ ಗೌರಿ ಆಂಟಿಯ ಗಲ್ಲಿಯೊಳಗೆ ಹಾಡಿಗೆ ಮಲ್ಲಿಕಾ ಸೊಂಟ ಬಳುಕಿಸಿದ್ದರು. ಇದನ್ನೂ ಓದಿ: 75 ಸಾವಿರದ ಚೆರ್ರಿ ರೆಡ್ ಘರಾರಾ ಡ್ರೆಸ್‍ನಲ್ಲಿ ಮಿಂಚಿದ ಚಂದ್ರಮುಖಿ

  • ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡ್ಬೇಕು ಎಂದಿದ್ರು: ಮಲ್ಲಿಕಾ ಶೆರಾವತ್

    ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡ್ಬೇಕು ಎಂದಿದ್ರು: ಮಲ್ಲಿಕಾ ಶೆರಾವತ್

    ಮುಂಬೈ: ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಬೇಕು ಎಂದು ಹೇಳಿದ್ದರು ಎಂಬ ವಿಷಯವನ್ನು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಮಲ್ಲಿಕಾ ತಮ್ಮ ‘ಬೂ ಸಬ್ಕಿ ಫಟೇಗಿ’ ಚಿತ್ರತಂಡದ ಜೊತೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದರು. ಈ ವೇಳೆ ಕಪಿಲ್ ಶರ್ಮಾ ಅತಿಥಿಗಳಾಗಿದ್ದ ಏಕ್ತಾ ಕಪೂರ್, ತುಷಾರ್ ಕಪೂರ್ ಹಾಗೂ ಮಲ್ಲಿಕಾ ಶೆರಾವತ್ ಜೊತೆ ತಮಾಷೆ ಮಾಡುತ್ತಿದ್ದರು.

    ಕಪಿಲ್ ಕಾರ್ಯಕ್ರಮದಲ್ಲಿ ಚಿತ್ರತಂಡದ ಜೊತೆ ಮಾತನಾಡುತ್ತಿದ್ದಾಗ ಮಲ್ಲಿಕಾ ಅವರ ಹಾಟ್‍ನೆಸ್ ಬಗ್ಗೆ ಮಾತನಾಡುತ್ತಿದ್ದರು. ಮೊದಲು ಒಂದು ಕಾಲ ಪಾಪ್ಯೂಲರ್ ಆಗಿತ್ತು. ಜನರು ಚಪಾತಿಯನ್ನು ಬಿಸಿ ಮಾಡಲು ನಿಮ್ಮ ಪೋಸ್ಟರ್ ಅಥವಾ ನಿಮ್ಮ ಫೋಟೋ ಇರುವ ನ್ಯೂಸ್‍ಪೇಪರ್ ಉಪಯೋಗಿಸುತ್ತಿದ್ದರು ಎಂದು ಹೇಳಿದರು.

    ಕಪಿಲ್ ಹೇಳಿದ ಮಾತಿಗೆ ಮಲ್ಲಿಕಾ ಇದು ನಿಜ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ ಶೂಟಿಂಗ್ ಸಮಯದಲ್ಲಿ ನಿರ್ಮಾಪಕರೊಬ್ಬರು ನನ್ನ ಹೊಟ್ಟೆ ಮೇಲೆ ಮೊಟ್ಟೆ ಫ್ರೈ ಮಾಡಿ ನನ್ನ ಹಾಟ್‍ನೆಸ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ಮಲ್ಲಿಕಾ ತಿಳಿಸಿದರು.

    ಮಲ್ಲಿಕಾ ಈಗ ಏಕ್ತಾ ಕಪೂರ್ ವೆಬ್ ಸಿರೀಸ್‍ನ `ಬೂ ಸಬ್ಕಿ ಫಟೇಗಿ’ಯಲ್ಲಿ ನಟಿಸುತ್ತಿದ್ದಾರೆ. ಮಲ್ಲಿಕಾ, ನಟ ತುಷಾರ್ ಜೊತೆ ನಟಿಸುತ್ತಿದ್ದು, ಬೂ ಸಬ್ಕಿ ಫಟೇಗಿ ಮೂಲಕ ಅವರು ಡಿಜಿಟಲ್‍ನಲ್ಲಿ ಡೆಬ್ಯೂ ಮಾಡಲಿದ್ದಾರೆ. ಇದು ಹಾರರ್ ಹಾಗೂ ಕಾಮಿಡಿ ಚಿತ್ರ ಎಂದು ಹೇಳಲಾಗುತ್ತಿದೆ

  • ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ: ಮಲ್ಲಿಕಾ ಶೆರಾವತ್

    ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ: ಮಲ್ಲಿಕಾ ಶೆರಾವತ್

    ಮುಂಬೈ: ಬಾಲಿವುಡ್ ಬೆಡಗಿ ಮಲ್ಲಿಕಾ ಶೆರಾವತ್ ಹೀರೋ ಜೊತೆ ಡೇಟ್ ಮಾಡದ್ದಕ್ಕೆ ಸಿನಿಮಾ ಆಫರ್ ಸಿಗಲಿಲ್ಲ ಎಂದು ಹೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ಮಲ್ಲಿಕಾ ಶೆರಾವತ್, ನಾನು ನಟ, ನಿರ್ದೇಶಕ ಹಾಗೂ ನಿರ್ಮಾಪಕನ ಮಾತು ಕೇಳಲಿಲ್ಲ. ಹಾಗಾಗಿ ನನಗೆ ಸಿನಿಮಾ ಅವಕಾಶಗಳು ಸಿಗಲಿಲ್ಲ. ಅಲ್ಲದೆ ಕೆಲವು ನಟ, ನಿರ್ದೇಶಕ ಹಾಗೂ ನಿರ್ಮಾಪಕರು ಕೇವಲ ತಮ್ಮ ಗರ್ಲ್ ಫ್ರೆಂಡ್ ಜೊತೆ ಸಿನಿಮಾ ಮಾಡಲು ಇಷ್ಟಪಡುತ್ತಾರೆ ಎಂದು ಹೇಳಿದ್ದಾರೆ.

     

    View this post on Instagram

     

    New poster of upcoming horror comedy web series @tusshark89 @altbalaji @krushna30 @kikusharda @vipulroy

    A post shared by Mallika Sherawat (@mallikasherawat) on

    ನಾನು ಯಾವುದೇ ನಟನ ಜೊತೆಯೂ ಡೇಟಿಂಗ್ ಮಾಡಲಿಲ್ಲ. ನಾನು ಯಾರಿಗೂ ಗರ್ಲ್ ಫ್ರೆಂಡ್ ಕೂಡ ಆಗಲಿಲ್ಲ. ಹಾಗಾಗಿ ನನಗೆ ಬಾಲಿವುಡ್‍ನಲ್ಲಿ ಸಿನಿಮಾಗಳ ಅವಕಾಶ ಸಿಕ್ಕಿಲ್ಲ. ಅಲ್ಲದೆ ಕೆಲವರು ನನಗೆ ಚಿತ್ರದಿಂದಲೇ ಹೊರ ತೆಗೆದಿದ್ದರು ಎಂದು ಮಲ್ಲಿಕಾ ತಿಳಿಸಿದ್ದಾರೆ.

     

    View this post on Instagram

     

    ???????? #sundayfunday #sunday @dior @marco.tassini

    A post shared by Mallika Sherawat (@mallikasherawat) on

    ಬಾಲಿವುಡ್ ಚಿತ್ರರಂಗದಲ್ಲಿ ನನಗೆ ಯಾರೂ ಲೈಂಗಿಕ ಬೇಡಿಕೆ ಇಟ್ಟಿಲ್ಲ. ನಾನು ತುಂಬಾ ಬೋಲ್ಡ್ ಇರುವ ಕಾರಣ ನನ್ನ ಬಳಿ ಬಂದು ಯಾರೂ ಲೈಂಗಿಕ ಬೇಡಿಕೆಯಿಡುವ ಧೈರ್ಯ ಮಾಡಲಿಲ್ಲ ಎಂದಿದ್ದಾರೆ.

    ಮಲ್ಲಿಕಾ ಈಗ ಏಕ್ತಾ ಕಪೂರ್ ವೆಬ್ ಸಿರೀಸ್‍ನ ‘ಬೂ ಸಬ್ಕಿ ಫಟೇಗಿ’ಯಲ್ಲಿ ನಟಿಸುತ್ತಿದ್ದಾರೆ. ಮಲ್ಲಿಕಾ, ನಟ ತುಷಾರ್ ಜೊತೆ ನಟಿಸುತ್ತಿದ್ದು, ಬೂ ಸಬ್ಕಿ ಫಟೇಗಿ ಮೂಲಕ ಅವರು ಡಿಜಿಟಲ್‍ನಲ್ಲಿ ಡೆಬ್ಯೂ ಮಾಡಲಿದ್ದಾರೆ. ಇದು ಹಾರರ್ ಹಾಗೂ ಕಾಮಿಡಿ ಚಿತ್ರ ಎಂದು ಹೇಳಲಾಗುತ್ತಿದೆ.