Tag: Malleswaram Blast Case

  • ಕಲಬುರಗಿ ಸೆಂಟ್ರಲ್ ಜೈಲಲ್ಲಿ ಉಗ್ರನಿಂದ ಹನಿಟ್ರ್ಯಾಪ್ – ಮಾಹಿತಿ ಕಲೆಹಾಕಿದ ಎಸ್‌ಪಿ ಯಶೋಧಾ

    ಕಲಬುರಗಿ ಸೆಂಟ್ರಲ್ ಜೈಲಲ್ಲಿ ಉಗ್ರನಿಂದ ಹನಿಟ್ರ್ಯಾಪ್ – ಮಾಹಿತಿ ಕಲೆಹಾಕಿದ ಎಸ್‌ಪಿ ಯಶೋಧಾ

    ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ (Kalaburagi Jail) ನಡೆದಿದೆ ಎನ್ನಲಾದ ಹನಿಟ್ರ್ಯಾಪ್ (Honey Trap) ಹಾಗೂ ಬ್ಲ್ಯಾಕ್‍ಮೇಲ್ ಪ್ರಕರಣದ ವಿಚಾರವಾಗಿ ಕಾರಾಗೃಹ ಎಡಿಜಿಪಿ ಕಚೇರಿಯ ಎಸ್ಪಿ ಯಶೋಧಾ ಅವರು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಜೈಲಿನಲ್ಲಿರುವ ಮಲ್ಲೇಶ್ವರಂ ಸ್ಫೋಟ ಪ್ರಕರಣದ (Malleswaram Blast Case) ಆರೋಪಿ ಜುಲ್ಫೀಕರ್ ಹಾಗೂ ಆತನ ಗ್ಯಾಂಗ್‍ನ ಬಗ್ಗೆ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಬೆಂಗಳೂರಿನಿಂದ ಕಲಬುರಗಿಗೆ ಆಗಮಿಸಿದ ಯಶೋಧಾ ಅವರು ಕಾರಾಗೃಹ ಅಧೀಕ್ಷಕರು ಹಾಗೂ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಬಿಂದಾಸ್ ಲೈಫ್ – ಪ್ರಕರಣ ಸಿಸಿಬಿಗೆ ವರ್ಗಾವಣೆ

    ಕೈದಿ ಸಾಗರ್ ಎಂಬಾತನನ್ನು ವಿಡಿಯೋ ಕರೆ ಮೂಲಕ ಹನಿಟ್ರ್ಯಾಪ್ ಜಾಲಕ್ಕೆ ದೂಡಲಾಗಿತ್ತು. ಈ ಪ್ರಕರಣ ಮುಚ್ಚಿ ಹಾಕಲು 50,000 ರೂ. ನೀಡುವಂತೆ ಆತನಿಗೆ ಬ್ಲ್ಯಾಕ್‍ಮೇಲ್ ಮಾಡಲಾಗಿತ್ತು. ಈ ವಿಚಾರವನ್ನು ಸಾಗರ್ ಆತನ ಸಹೋದರನೊಂದಿಗೆ ಹೇಳಿಕೊಂಡಿದ್ದ.

    ಇದೇ ಪ್ರಕರಣ ಬಳಸಿಕೊಂಡು ಜೈಲಿನ ಸಿಬ್ಬಂದಿಗೂ ಬ್ಲ್ಯಾಕ್‍ಮೇಲ್ ಮಾಡಲು ಜುಲ್ಫಿಕರ್ ಯತ್ನಿಸಿದ್ದಾನೆ ಎನ್ನಲಾಗುತ್ತಿದೆ. ಇದರಿಂದ ಕಾರಾಗೃಹ ಇಲಾಖೆ ಮುಜುಗರಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಎಸ್ಪಿ ಯಶೋಧಾ ಅವರನ್ನು ಘಟನೆಯ ಮಾಹಿತಿ ಕಲೆಹಾಕಲು ಕಳಿಸಿದೆ. ಇದನ್ನೂ ಓದಿ: ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?

  • ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?

    ಮಲ್ಲೇಶ್ವರಂ ಸ್ಫೋಟದಲ್ಲಿ ಭಾಗಿಯಾಗಿದ್ದ ಉಗ್ರನಿಂದ ಕಲಬುರಗಿ ಸೆಂಟ್ರಲ್ ಜೈಲಿನಿಂದಲೇ ಹನಿಟ್ರ್ಯಾಪ್?

    – ಸಹ ಕೈದಿಯ ಬೆತ್ತಲೆ ವಿಡಿಯೋ ಕಾಲ್‌ ಸ್ಕ್ರೀನ್‌ಶಾಟ್‌ ತೆಗೆದು ಬ್ಲ್ಯಾಕ್‌ಮೇಲ್

    ಕಲಬುರಗಿ: ಇಲ್ಲಿನ ಸೆಂಟ್ರಲ್ ಜೈಲಿನಿಂದ (Kalaburagi Jail) ಉಗ್ರಗಾಮಿಯೊಬ್ಬ ಇತರ ಕೈದಿಗಳನ್ನು ಹನಿಟ್ರ್ಯಾಪ್ (Honey Trap) ಖೆಡ್ಡಾಕ್ಕೆ ಕೆಡವಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆಘಾತಕಾರಿ ವಿದ್ಯಮಾನ ಬೆಳಕಿಗೆ ಬಂದಿದೆ.

    ಬೆಂಗಳೂರಿನ ಮಲ್ಲೇಶ್ವರಂ ಬಡಾವಣೆಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ (Malleswaram Blast Case) ಸಂಬಂಧಿಸಿದಂತೆ ಕಲಬುರಗಿ ಜೈಲಿನಲ್ಲಿರುವ ಉಗ್ರ ಜುಲ್ಫೀಕರ್ ಹಾಗೂ ಶಿವಮೊಗ್ಗದ (Shivamogga) ರೌಡಿ ಬಚ್ಚನ್ ಇಬ್ಬರೂ ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ತನ್ನ ಮನೆಯ ಸದಸ್ಯರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದ ಕೈದಿ ಸಾಗರ್, ಈ ಇಬ್ಬರೂ ಒಂದಾಗಿ ರಚಿಸಿದ ಹನಿಟ್ರ್ಯಾಪ್‌ಗೆ ಒಳಗಾಗಿರುವುದಾಗಿ ಸಹೋದರನೊಂದಿಗೆ ಮಾಹಿತಿ ಹಂಚಿಕೊಂಡಿದ್ದ. ಇದೀಗ ಈ ಆಡಿಯೋ ಸಂಭಾಷಣೆ ವೈರಲ್ ಆಗಿದೆ.

    ಇಷ್ಟಕ್ಕೂ ಜುಲ್ಫೀಕರ್ ಮತ್ತು ಬಚ್ಚನ್ ಇತ್ತೀಚೆಗೆ ಸಾಗರ್‌ನನ್ನು ತಾವಿರುವ ಸೆಲ್‌ಗೆ ಕರೆದು ಮನೆಯ ಸದಸ್ಯರೊಂದಿಗೆ ಮಾತನಾಡುವುದಾದರೆ ವಿಡಿಯೋ ಕಾಲ್ ವ್ಯವಸ್ಥೆ ಮಾಡುವುದಾಗಿ ಹೇಳಿ ತಮ್ಮದೇ ಮೊಬೈಲ್ ಆತನಿಗೆ ನೀಡಿದ್ದಾರೆ ಎನ್ನಲಾಗಿದೆ. ತನ್ನ ತಾಯಿ ಮತ್ತು ಸಹೋದರನ ಜೊತೆ ಸಾಗರ್ ಮಾತನಾಡಿದ ಬಳಿಕ ಓರ್ವ ಅಪರಿಚಿತ ಮಹಿಳೆಯೊಂದಿಗೆ ಮಾತನಾಡಿದರೆ ಆಕೆ ಬೆತ್ತಲೆಯಾಗಿ ನಿನ್ನೊಂದಿಗೆ ಮಾತನಾಡುವುದಾಗಿ ನಂಬಿಸಿದ್ದಾರೆ. ಈ ವೇಳೆ ಸಾಗರ್ ಸಹ ಬೆತ್ತಲೆಯಾಗಿಯೇ ಮಾತನಾಡುವಂತೆ ಪುಸಲಾಯಿಸಿ ಬಳಿಕ ಅವರಿಬ್ಬರ ಮಧ್ಯದ ಸಂಭಾಷಣೆಯ ದೃಶ್ಯಾವಳಿ ಸ್ಕ್ರೀನ್ ಶಾಟ್ ಮಾಡಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಈ ವಿಚಾರವನ್ನು ತನ್ನ ಸಹೋದರನ ಜೊತೆ ಸಾಗರ್‌ ಹಂಚಿಕೊಂಡಿದ್ದಾನೆ ಎಂದು ಹೇಳಲಾಗಿದೆ.

    ಬೆತ್ತಲೆಯಾಗಿ ನಡೆದ ವಿಡಿಯೊ ಸಂಭಾಷಣೆ ಸ್ಕ್ರೀನ್ ಶಾಟ್ ಮಾಡಿಕೊಂಡಿರುವ ಕುರಿತು ಸಾಗರ್‌ಗೆ ತೋರಿಸಿ ಆತನ ಬಳಿ 50,000 ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಹಣದ ವ್ಯವಸ್ಥೆ ಮಾಡದೆ ಹೋದರೆ ಬೆತ್ತಲೆಯಾಗಿ ಮಹಿಳೆಯೊಂದಿಗೆ ಮಾತನಾಡಿರುವ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತನ್ನ ಸಹೋದರನೊಂದಿಗೆ ಚರ್ಚಿಸಿದ ವೇಳೆ ಸಾಗರ್ ಉಲ್ಲೇಖಿಸಿದ್ದಾನೆ.

    ಜುಲ್ಫೀಕರ್ ಮತ್ತು ಬಚ್ಚನ್ ಜೋಡಿ ಸಹ ಕೈದಿಗಳಷ್ಟೇ ಅಲ್ಲ, ಜೈಲಿನ ಕೆಲವು ಸಿಬ್ಬಂದಿಗೂ ಇದೇ ವಿಡಿಯೊ ತುಣುಕು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಕಾರಾಗೃಹ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸಬೇಕಿದೆ.