ಅಗ್ನಿ ಅವಘಡದ ವೇಳೆ ಅಂಗಡಿ ಒಳಗಡೆ ಸುಮಾರು 10 ಜನ ಕೆಲಸಗಾರರು ಮಲಗಿದ್ದರು. ಅಕ್ಕಪಕ್ಕದ ನಿವಾಸಿಗಳು ಅವರನ್ನು ಎಚ್ಚರಿಸಿದ್ದಾರೆ. ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಆಯಿಲ್ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ – ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ
ಬೆಳಗಿನ ಜಾವ 4:30ಕ್ಕೆ ಈ ಘಟನೆ ನಡೆದಿದೆ. ಲಾರಿ ಗುದ್ದಿದ ಪರಿಣಾಮ ಬೇಕರಿಯ ಬಾಗಿಲು ಜಖಂಗೊಂಡು ಗೋಡೆ ಹಾಳಾಗಿದೆ. ಪುಟ್‌ಪಾತ್ ಕಾಂಕ್ರಿಟ್ ಕುಸಿದಿದೆ. ಮಲ್ಲೇಶ್ವರಂ ಪೊಲೀಸರು ಲಾರಿ ಮತ್ತು ಚಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ಸಂಭವಿಸಿದ್ಯಾ ಅಥವಾ ಬ್ರೇಕ್ ಫೇಲ್ ಆಗಿ ಈ ಘಟನೆ ನಡೆದಿದ್ಯಾ ಎನ್ನುವುದರ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
ಬೆಂಗಳೂರು: ಮಹಾಮಾರಿ ಕೊರೊನಾ(Corona) ರಾಜ್ಯಕ್ಕೆ ಮತ್ತೆ ವಕ್ಕರಿಸಿಕೊಂಡಿದ್ದು, ಮಲ್ಲೇಶ್ವರಂ, ರಾಜಾಜಿನಗರದ ಇಬ್ಬರಿಗೆ ಕೋವಿಡ್ ಪಾಸಿಟಿವ್ ಕಾಣಿಸಿದೆ.
ಮಲ್ಲೇಶ್ವರಂನ(Malleshwaram) 45 ವರ್ಷದ ವ್ಯಕ್ತಿಗೆ ಹಾಗೂ ರಾಜಾಜಿನಗರದ(Rajajinagara) 38 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದೇ ಇವರಿಬ್ಬರಿಗೂ ಕೋವಿಡ್ ಕಾಣಸಿಕೊಂಡಿದ್ದು, ಇಬ್ಬರನ್ನು ಹೋಂ ಐಸೂಲೇಷನ್‌ನಲ್ಲಿ ಇರಿಸಲಾಗಿದೆ. ಇದನ್ನೂ ಓದಿ: 3 ವರ್ಷಗಳ ಬಳಿಕ ಮತ್ತೆ ವಕ್ಕರಿಸಿದ ಕೊರೊನಾ – ದೇಶದ ಹಲವು ರಾಜ್ಯಗಳಲ್ಲಿ JN1 ಎಂಟ್ರಿ
ಬೆಂಗಳೂರಿನಲ್ಲಿ ವೈಟ್‌ಫೀಲ್ಡ್‌ನ(Whitefield) 84 ವರ್ಷದ ವೃದ್ಧ ಮೇ 17ರಂದು ಕೊರೊನಾಗೆ ಬಲಿಯಾಗಿದ್ದಾರೆ. ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು, ಕೊರೊನಾಗೆ ತುತ್ತಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು 38 ಸಕ್ರಿಯ ಕೋವಿಡ್ ಕೇಸ್ ಇವೆ. ಬೆಂಗಳೂರಿನಲ್ಲಿ 9 ತಿಂಗಳ ಮಗು ಸೇರಿ ಒಟ್ಟು ಮೂರು ಜನ ಮಕ್ಕಳಿಗೆ ಕೋವಿಡ್ ಪಾಸಿಟಿವ್(Covid Positive) ಬಂದಿದೆ. ಸದ್ಯ ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಾಲುಗಳಿಗೆ ಹಗ್ಗ ಕಟ್ಟಿ ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಆತ್ಮಹತ್ಯೆ
ಶನಿವಾರ ರಾಜ್ಯದಲ್ಲಿ 108 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ ಐವರಿಗೆ ಕೋವಿಡ್ ಬಂದಿದೆ. ಶನಿವಾರ ಬೆಂಗಳೂರಲ್ಲಿ 2, ಮೈಸೂರು 2 ಹಾಗೂ ವಿಜಯನಗರದಲ್ಲಿ ಒಂದು ಕೋವಿಡ್ ಕೇಸ್ ಪತ್ತೆಯಾಗಿತ್ತು.
ಬೆಂಗಳೂರು: ಇದೇ ಮೊದಲ ಬಾರಿಗೆ ಸಾಯಿಬಾಬಾರ ಮೂಲ ಪಾದುಕೆಗಳು ಬೆಂಗಳೂರಿನ (Bengaluru) ಸಾಯಿ ಮಂದಿರಕ್ಕೆ ಬಂದಿವೆ. ಈ ಪಾದುಕೆಯ ಆಶೀರ್ವಾದಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದು, ಇಂದು ದರ್ಶನಕ್ಕೆ ಕೊನೆಯ ದಿನವಾಗಿದೆ. ಈ ಪಾದುಕೆಯ ಮಹತ್ವ, ವಿಶೇಷದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಶಿರಡಿ ಸಾಯಿ ಬಾಬಾರ ಮೂಲ ಪಾದುಕೆ ಕೇವಲ ಮೂರು ಕಡೆಗಳಲ್ಲಿ ಮಾತ್ರ ಇದೆ. ಒಂದು ಸಂಸ್ಥಾನದಲ್ಲಿ, ಒಂದು ಮ್ಯೂಸಿಯಂನಲ್ಲಿ ಹಾಗೂ ಮೂರನೇಯದು ಬೆಂಗಳೂರಿನ ಸಾಯಿ ಮಂದಿರಲ್ಲಿದೆ. ಅಪರೂಪದಲ್ಲಿ ಅಪರೂಪಕ್ಕೆ ಸಿಗುವ ಈ ಮೂಲ ಪಾದುಕೆಯ ದರ್ಶನಕ್ಕೆ ಜನ ಮುಗಿಬಿದ್ದಿದ್ದಾರೆ. ಶಿರಡಿಯಿಂದ ಬಂದಿರುವ ಅರ್ಚಕರ ತಂಡವೇ ಮಧ್ಯಾಹ್ನ 12 ಗಂಟೆಗೆ ಶಿರಡಿ ಆರತಿ, ಸಂಜೆ ಆರೂವರೆಗೆ ದೂಪಾರ್ಥಿ ಪೂಜೆ ಮಾಡುತ್ತಾರೆ. ಗುರುವಾರದಿಂದ ಭಕ್ತರಿಗೆ ಅವಕಾಶ ಕಲ್ಪಿಸಿದ್ದು, ಇಂದು ಕೊನೆಯ ದಿನವಾಗಿದೆ. ಬೆಳಗ್ಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಇರಲಿದೆ.
ಏ.16ನೇ ತಾರೀಖಿಗೆ ಮೂಲ ಪಾದುಕೆ ಬೆಂಗಳೂರಿಗೆ ಬಂದಿದೆ. ಮಲ್ಲೇಶ್ವರಂ 18ನೇ ಅಡ್ಡರಸ್ತೆಯಿಂದ ಸಾಯಿ ಮಂದಿರಕ್ಕೆ ಮೆರವಣಿಗೆ ಮೂಲಕ ಪಾದುಕೆಯನ್ನು ಸಾಯಿ ಸನ್ನಿದಿಗೆ ತಂದು ಇಡಲಾಗಿದೆ. ಈ ಪಾದುಕೆಯನ್ನು ಕೆಲವೇ ಕೆಲವು ಸಾಯಿ ಮಂದಿರಗಳಲ್ಲಿ ಭಕ್ತರ ದರ್ಶನಕ್ಕೆ ಕಳುಹಿಸಿ ಕೊಡುವ ಧಾರ್ಮಿಕ ಪದ್ಧತಿ ಇದೆ. ಅದರಂತೆ ಈ ಬಾರಿ ಮಲ್ಲೇಶ್ವರಂನ ಸಾಯಿ ಮಂದಿರಕ್ಕೆ ಪಾದುಕೆ ಬಂದಿದ್ದು, ಭಕ್ತರು ಸಾಯಿ ಬಾಬಾರ ಕೃಪೆಗೆ ಪಾತ್ರರಾಗಿದ್ದಾರೆ.ಇದನ್ನೂ ಓದಿ: ಗರ್ಭಧರಿಸಿದ್ದ ಗೋವಿನ ಹತ್ಯೆಗೈದು ದುರುಳರ ವಿಕೃತಿ
ಬೆಂಗಳೂರು: 2025 ನೇ ಸಾಲಿನ ದ್ವಿತೀಯ ಪಿಯುಸಿ (PUC Exam) ಪರೀಕ್ಷೆಯ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಲಿದೆ.
ಇಂದು ಮಧ್ಯಾಹ್ನ 12:30ಕ್ಕೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಮಲ್ಲೇಶ್ವರದಲ್ಲಿರುವ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಸ ಪ್ರಕಟಿಸಲಿದ್ದಾರೆ. ಸುದ್ಧಿಗೋಷ್ಠಿಯ ಬಳಿಕ ಮಧ್ಯಾಹ್ನ 1:30 ಗಂಟೆಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಈ ಬಾರಿ ಸುಮಾರು 7.13 ಲಕ್ವ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಏಪ್ರಿಲ್ 8ರಂದು ಫಲಿತಾಂಶ ಘೋಷಣೆ ಮಾಡಲಾಗುತ್ತಿದೆ. ಇದನ್ನೂ ಓದಿ: UGCET ಪ್ರವೇಶ ಪತ್ರ ಬಿಡುಗಡೆ – ಮೊದಲ ಬಾರಿಗೆ ಕ್ಯೂಆರ್ ಕೋಡ್ ಮಾದರಿ OMR Sheet
ಫಲಿತಾಂಶ ಚೆಕ್ ಮಾಡೋದು ಹೇಗೆ?
ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಹೋಗಿ: karresults.nic.in
ಹಂತ 2: ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ 2ನೇ ಪಿಯುಸಿ ಫಲಿತಾಂಶ 2025 ಲಿಂಕ್ ಅನ್ನು ಕ್ಲಿಕ್ ಮಾಡಿ
ಹಂತ 3: ಸ್ಟ್ರೀಮ್ ಆಯ್ಕೆಮಾಡಿ ಮತ್ತು ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ
ಹಂತ 4: ಕರ್ನಾಟಕ 2 ನೇ ಪಿಯುಸಿ ಫಲಿತಾಂಶ 2025 ಪರದೆಯ ಮೇಲೆ ಕಾಣಿಸುತ್ತದೆ
ಹಂತ 5: ಸ್ಕೋರ್‌ಕಾರ್ಡ್ ಪಿಡಿಎಫ್ ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ
ಹಂತ 6: ಭವಿಷ್ಯದ ದಾಖಲೆಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್ ಸ್ವಚ್ಛ ಮಾಡಿದ್ರೆ ಶಿಕ್ಷಕರ ಮೇಲೆ ಕೇಸ್
ಬೆಂಗಳೂರು: ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ (Seat Block) ಮಾಡುವ ದಂಧೆಯಲ್ಲಿ ತೊಡಗಿದ್ದ 10 ಆರೋಪಿಗಳನ್ನು ಮಲ್ಲೇಶ್ವರಂ (Malleshwaram) ಪೊಲೀಸರು ಬಂಧಿಸಿದ್ದಾರೆ.
ಈ ಗ್ಯಾಂಗ್ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕ್ ದಂಧೆ ಮಾಡುತ್ತಿದ್ದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (Karnataka Examination Authority) ಕೌನ್ಸಲಿಂಗ್‌ಗೆ ಹಾಜರಾಗಿ ಕಾಲೇಜು ಆಯ್ಕೆಯಾಗದೇ ಇರುವವರನ್ನು ಗುರಿಯಾಗಿಸಿಕೊಂಡಿದ್ದರು. ಈ ರೀತಿ ನಾನಾ ಕಾರಣಗಳಿಂದ 2,625 ವಿದ್ಯಾರ್ಥಿಗಳು ಸೀಟ್ ರಿಜೆಕ್ಟ್ ಮಾಡಿದ್ದರು.
ಕೆಇಎ (KEA) ನೌಕರ ಅವಿನಾಶ್‌ನ ಸಹಾಯದಿಂದ ಪಡೆದ ಪಾಸ್‌ವರ್ಡ್‌ನಿಂದ ಸರ್ಕಾರಿ ಸೀಟ್ ಪಡೆದು ಕಾಲೇಜು ಆಯ್ಕೆ ಮಾಡಿಕೊಳ್ಳದ ವಿದ್ಯಾರ್ಥಿಗಳ ಸೀಟ್ ಬ್ಲಾಕ್ ಮಾಡುತ್ತಿದ್ದರು. ಆ ಸೀಟ್‌ಗಳನ್ನು ಲಕ್ಷಾಂತರ ರೂ.ಗೆ ಮ್ಯಾನೇಜ್‌ಮೆಂಟ್ ಕೋಟಾದಡಿ ಬೇರೆಯವರಿಗೆ ಡೀಲ್ ಮಾಡುತ್ತಿದ್ದರು. ಕಾಲೇಜಿನ ಮ್ಯಾನೇಜ್‌ಮೆಂಟ್ ಹಾಗೂ ಮಧ್ಯವರ್ತಿಗಳ ಸಹಾಯದಿಂದ ಡೀಲ್ ಮಾಡುವುದರಲ್ಲಿ ತೊಡಗಿದ್ದರು.
ಆರೋಪಿ ಪ್ರಕಾಶ್ ದೂರು ದಾಖಲಾಗಿದೆ ಎಂದು ಗೊತ್ತಾದ ಕೂಡಲೇ ತಮ್ಮ ಬಳಿಯಿದ್ದ ಲ್ಯಾಪ್‌ಟಾಪ್‌ಗಳನ್ನು ಕಡೂರಿನ ತನ್ನ ಜಮೀನಿನಲ್ಲಿ ಸುಟ್ಟುಹಾಕಿ ಸಾಕ್ಷಿ ನಾಶ ಮಾಡಿದ್ದ. ಸದ್ಯ ಮಲ್ಲೇಶ್ವರಂ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ನಡೆಸಿದ್ದಾರೆ.ಇದನ್ನೂ ಓದಿ: ಹುಟ್ಟೂರಿಗೆ ಶೋಭಿತಾ ಮೃತದೇಹ – ಇಂದು ಅಂತ್ಯಕ್ರಿಯೆ
ಬೆಂಗಳೂರು: ಸಿಬ್ಬಂದಿಗೆ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರದ ಕೆಲವು ಇಂದಿರಾ ಕ್ಯಾಂಟೀನ್‌ಗಳಲ್ಲಿ (Indira Canteen) ಊಟ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳು ಮುಚ್ಚಿವೆ.
ಬುಧವಾರದಿಂದ ಬೆಳಗ್ಗೆ ಉಪಹಾರ, ಮಧ್ಯಾಹ್ನ, ರಾತ್ರಿ ಊಟ ಪೂರೈಕೆ ಸ್ಥಗಿತವಾಗಿದೆ. ಬಡವರ ಹಸಿವು ನೀಗಿಸುವ ಕೆಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟ ಪೂರೈಕೆಯಾಗುತ್ತಿಲ್ಲ. ಇದರಿಂದ ಊಟ ಸಿಗದೇ ಜನ ಹಸಿದ ಹೊಟ್ಟೆಯಲ್ಲಿಯೇ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್ ಸಿಬ್ಬಂದಿಗೆ ಆರು ತಿಂಗಳ ವೇತನ ಪಾವತಿ ಮಾಡದ ಹಿನ್ನೆಲೆಯಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರಾಗಿದ್ದಾರೆ. ಇದರಿಂದ ಊಟ ಕೂಡ ಪೂರೈಕೆಯಾಗುತ್ತಿಲ್ಲ. ಇದನ್ನೂ ಓದಿ: ಮತ್ತೆ ಕೋಟ್ಯಧೀಶನಾದ ಮಲೆ ಮಾದಪ್ಪ – 2.43 ಕೋಟಿ ರೂ. ಕಾಣಿಕೆ ಹಣ ಸಂಗ್ರಹ
ಪಶ್ಚಿಮ ವಲಯದ ಮಲ್ಲೇಶ್ವರಂ (Malleshwaram), ನಂದಿನಿಲೇಔಟ್ ಇಂದಿರಾ ಕಿಚನ್‌ಗಳ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಕೆಯಾಗುತ್ತಿಲ್ಲ. ನೂರಾರು ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸಂಬಳ ನೀಡಿಲ್ಲ. ಈ ಕಿಚನ್‌ಗಳನ್ನು ಚೆಫ್ ಟಾಕ್ ಕಂಪನಿ ನಿರ್ವಹಣೆ ಮಾಡುತ್ತಿದೆ. ಈ ಕಂಪನಿಗೆ ಬಿಬಿಎಂಪಿ ಹಣ ಪಾವತಿ ಮಾಡಲಿಲ್ಲ. ಪಾಲಿಕೆ, ಚೆಫ್ ಟಾಕ್ ಕಂಪನಿಗೆ ಹಣ ನೀಡದ ಕಾರಣ ಸಿಬ್ಬಂದಿಗೂ ಸಂಬಳ ಸಿಗದೇ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ಮನೋಹರ್ ತಹಶೀಲ್ದಾರ್ ವಿಧಿವಶ
ನಗರದ ಯಾವ್ಯಾವ ಇಂದಿರಾ ಕ್ಯಾಂಟೀನ್‌ಗಳಿಗೆ ಬೀಗ?
ಮಂತ್ರಿ ಮಾಲ್ ರಸ್ತೆ, ಸುಭಾಶ್ ನಗರ, ಮೆಜೆಸ್ಟಿಕ್ (Mejestic) ಮೆಟ್ರೋ ನಿಲ್ದಾಣ ಸಮೀಪ, ಗಾಂಧಿನಗರ, ಅರಮನೆ ನಗರ, ಸರ್ಕಲ್ ಮಾರಮ್ಮ ದೇವಸ್ಥಾನ ಯಶವಂತಪುರ ರಸ್ತೆ, ಮಲ್ಲೇಶ್ವರಂ ಇಂದಿರಾ ಕಿಚನ್‌ಗಳಿಗೆ ಬೀಗ ಬಿದ್ದಿದೆ. ಇದನ್ನೂ ಓದಿ: ಧಾರವಾಡದಲ್ಲಿ ತಾಯಂದಿರಿಂದಲೇ ಮಕ್ಕಳ ಕಿಡ್ನ್ಯಾಪ್ – ತಾಯಂದಿರು, ಅವರ ಪ್ರೇಮಿಗಳು ಅರೆಸ್ಟ್
ಉತ್ತರ ಪ್ರದೇಶದ (Uttar Pradesh )ಕೆಲ ಯುವಕರು ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ವೇತನ ಆಗಿಲ್ಲ. ಮನೆ ನಿರ್ವಹಣೆ ಕಷ್ಟ ಆಗಿದೆ. ಸಂಬಳ ಕೊಟ್ಟರೆ ನಾವು ಊರಿಗೆ ಹೋಗುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬಡವರ ಹಸಿವು ನೀಗಿಸಬೇಕಿದ್ದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಈಗ ಊಟ ಸಿಗದೇ ಜನ ಪರದಾಡುತ್ತಿರುವುದು ವಿಪರ್ಯಾಸ. ಮುಂದಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನ ಸ್ಥಗಿತಗೊಳಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಇದನ್ನೂ ಓದಿ: ತಾಯಿಯಿಂದ ಬೇರ್ಪಟ್ಟು ಒಂಟಿಯಾಗಿ ಅಲೆದಾಡುತ್ತಿದ್ದ ಮರಿ ಕರಡಿ ಸಾವು
-ನ.25, 26ರಂದು ಬಸವನಗುಡಿಯಲ್ಲಿ ಪರಿಷೆ, 3 ಲಕ್ಷ ಜನ ಭಾಗಿ ಸಾಧ್ಯತೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ಬಸವನಗುಡಿ ಮತ್ತು ಮಲ್ಲೇಶ್ವರಂ ಕಡಲೆಕಾಯಿ ಪರಿಷೆಯ (Kadalekai Parishe) ದಿನಾಂಕವನ್ನ ಮುಜರಾಯಿ ಇಲಾಖೆ (Muzrai Department) ಘೋಷಣೆ ಮಾಡಿದೆ. ಎರಡು ದಿನಗಳ ಕಾಲ ಈ ಪರಿಷೆ ನಡೆಸಲು ನಿರ್ಧರಿಸಿದೆ. ಈ ಬಾರಿಯ ಕಡಲೆಕಾಯಿ ಪರಿಷೆ ಹಲವು ವಿಶೇಷತೆಗಳಿಂದ ಕೂಡಿರಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಸವನಗುಡಿ ಕಡಲೆಕಾಯಿ ಪರಿಷೆ ಮಾಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ನವೆಂಬರ್ 25 ಮತ್ತು 26ರಂದು ಎರಡು ದಿನಗಳ ಕಾಲ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಈ ಸಂಬಂಧ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವಾರು ಸಲಹೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್ ಬಂದಿತ್ತು: ಸಿಎಂ ಬಾಂಬ್
ಇನ್ನೂ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ನವೆಂಬರ್ 15 ರಿಂದ 3 ದಿನಗಳ ಕಾಲ ನಡೆಯಲಿದೆ. ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತವಾಗಿ ಮಾಡಲು ನಿರ್ಧರಿಸಲಾಗಿದೆ. ಪರಿಷೆಗೆ ಬರುವವರು ಮತ್ತು ವ್ಯಾಪಾರಸ್ಥರು ಪ್ಲಾಸ್ಟಿಕ್ ಬಿಟ್ಟು, ಬಟ್ಟೆ ಚೀಲವನ್ನೆ ಬಳಸಬೇಕು ಎಂಬ ನಿಯಮ ಜಾರಿ ಮಾಡಲಾಗುತ್ತದೆ. ಇನ್ನು ಈ ಪರಿಷೆಯಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಈ ಬಾರಿ ಮೂರು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ರಝಾಕರು ಮುಸ್ಲಿಮರಲ್ಲ, ಸುಟ್ಟಿದ್ದು ನಮ್ಮನೆ, ಹೋಗಿದ್ದು ನಮ್ಮವರ ಜೀವ, ಯೋಗಿಗೆ ಏನಾಗಬೇಕು? – ಪ್ರಿಯಾಂಕ್ ತಿರುಗೇಟು
ಕಳೆದ ಬಾರಿ ಕಡಲೆಕಾಯಿ ಪರಿಷೆಯಲ್ಲಿ ವ್ಯಾಪಾರಸ್ಥರಿಂದ ಸುಂಕ ವಸೂಲಿ ಮಾಡಿರೋ ಆರೋಪ ಎದ್ದಿತ್ತು. ಹೀಗಾಗಿ ಈ ಬಾರಿ ಆ ರೀತಿ ಅಕ್ರಮಗಳು ನಡೆಯದಂತೆ ಕ್ರಮವಹಿಸಿ ಯಶಸ್ವಿಗೊಳಿಸಲು ಪ್ಲ್ಯಾನ್ ಮಾಡಲಾಗಿದೆ. ಇದನ್ನೂ ಓದಿ: ಗುರುವಾರ ಬಿಎಸ್‌ವೈ, ರಾಮುಲುಗೆ ಬಿಗ್ ಡೇ!
ಬೆಂಗಳೂರು: ಎರಡೂವರೆ ವರ್ಷದ ಹೆಣ್ಣು ಮಗುವನ್ನು ಮಾತನಾಡಿಸಿ ಮಹಿಳೆಯೊಬ್ಬಳು ಅಪಹರಿಸಿರುವ ಘಟನೆ ನಗರದ ಮಲ್ಲೇಶ್ವರಂ (Malleshwaram) ಪೈಪ್‌ಲೈನ್‌ನ ಮಕ್ಕಳ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.
ಇಂದು (ನ.7) ಬೆಳಗ್ಗೆ 9:20ರ ಸುಮಾರಿಗೆ ಈ ಘಟನೆ ನಡೆದಿದೆ. ತಾಯಿ ಮೊದಲ ಮಗುವನ್ನು ಶಾಲೆಗೆ ಕಳಿಸಲು ರೆಡಿ ಮಾಡುತ್ತಿದ್ದರು. ಈ ವೇಳೆ ನವ್ಯ ಮನೆಯ ಹೊರಗೆ ಆಟವಾಡುತ್ತಿದ್ದಳು. ಮನೆ ಬಳಿ ಅಪರಿಚಿತ ಮಹಿಳೆಯೊಬ್ಬಳು ಬಂದು ಮಗುವನ್ನು ಮಾತನಾಡಿಸಿ ಕರೆದೊಯ್ದಿದ್ದಾಳೆ. ಮಗುವನ್ನು ಅಪಹರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಗಳೂರು: ಗೇಟ್ ಬಿದ್ದು ಬಾಲಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದತ್ತಾತ್ರೇಯ ವಾರ್ಡ್‌ನ (Dattatreya Ward) ಸಹಾಯಕ ಎಂಜಿನಿಯರ್ ಟಿ .ಶ್ರೀನಿವಾಸ ರಾಜು ಅವರನ್ನು ಅಮಾನತುಗೊಳಿಸಲಾಗಿದೆ.
ಪಾಲಿಕೆ ಉಪಯುಕ್ತ ಅಡಳಿತ ವಿಭಾಗ ತಕ್ಷಣವೇ ಜಾರಿಗೆ ಬರುವಂತೆ ಅದೇಶ ಹೊರಡಿಸಿದೆ. ಕರ್ತವ್ಯ ನಿರ್ಲಕ್ಷ್ಯ, ಗೇಟ್ ಸಾಮರ್ಥ್ಯಕ್ಕೆ ತಕ್ಕಂತೆ ಕೀಲುಗಳನ್ನು ಅಳವಡಿಸಿಲ್ಲ, ಸರಿಯಾದ ಸಮಯಕ್ಕೆ ನಿರ್ವಹಣೆ ಮಾಡದ್ದಕ್ಕೆ ಬಿಬಿಎಂಪಿ (BBMP) ಅಡಳಿತ ವಿಭಾಗದ ಉಪ ಅಯುಕ್ತರು ಅಮಾನತು ಮಾಡಿ ಅದೇಶ ಪ್ರಕಟಿಸಿದ್ದಾರೆ.
ಮೈದಾನದ ಗೇಟ್ ಮುರಿದು ತಲೆಗೆ ಬಿದ್ದು ಬಾಲಕ ಸಾವಿಗೀಡಾದ ಘಟನೆ ಮಲ್ಲೇಶ್ವರಂ ಬಿಬಿಎಂಪಿ ಗ್ರೌಂಡ್‌ನಲ್ಲಿ ಭಾನುವಾರ ನಡೆದಿತ್ತು. ಘಟನೆಯಲ್ಲಿ ನಿರಂಜನ್ (10) ಮೃತಪಟ್ಟಿದ್ದ. ಆಟ ಆಡಲು ನಿರಂಜನ್ ಮೈದಾನಕ್ಕೆ ಬಂದಿದ್ದ. ಈ ವೇಳೆ ಬಾಲಕ ಗೇಟ್ (Gate) ಬಳಿಯೇ ನಿಂತಿದ್ದ. ಗೇಟ್ ತೆರೆಯುತ್ತಿದ್ದಂತೆ ಆತನ ತಲೆ ಮೇಲೆ ಮುರಿದು ಬಿದ್ದಿತ್ತು. ಪರಿಣಾಮವಾಗಿ ತಲೆಗೆ ತೀವ್ರ ಗಾಯವಾಗಿ ಮೃತಪಟ್ಟಿದ್ದ.