Tag: mallamma

  • ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

    ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

    ಸೋಷಿಯಲ್ ಮೀಡಿಯಾದಲ್ಲಿ ಮಾತಿನಿಂದಲೇ ಎಲ್ಲರ ಮನಕದ್ದಿದ್ದ ಮಲ್ಲಮ್ಮ ಇದೀಗ ಬಿಗ್‌ಬಾಸ್ (BBK 12) ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಲೆಮನ್ ಟೀ ಇಂದಲೇ ಫೇಮಸ್ ಆಗಿದ್ದ ಮಲ್ಲಮ್ಮ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಮನರಂಜನೆ ನೀಡಿದ್ದರು. 12 ವರ್ಷಗಳ ಹಿಂದೇ ಬೆಂಗಳೂರಿಗೆ ಬಂದಿದ್ದ ಮಲ್ಲಮ್ಮ ಬಾಟಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೀಗ ಮಲ್ಲಮ್ಮ ಬಿಗ್‌ಬಾಸ್ ಮನೆಗೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್

    ಈಗಾಗಲೇ ಕಾಕ್ರೋಚ್ ಸುಧಿ, ಕೊತ್ತಲವಾಡಿ ನಟಿ ಕಾವ್ಯ, ಡಾಗ್ ಸತೀಶ್, ಕಾಮಿಡಿ ಕಲಾವಿದ ಗಿಲ್ಲಿ, ಗಿಚ್ಚಿಗಿಲಿಗಿಲಿ ಚಂದ್ರಪ್ರಭ, ಮಂಜು ಭಾಷಿಣಿ, ಮನದ ಕಡಲು ನಟಿ ರಾಶಿಕಾ ಶೆಟ್ಟಿ, ಅಭಿಷೇಕ್, ಲಕ್ಷಣ ಧಾರಾವಾಹಿಯ ಮೌರ್ಯ, ನಟ ಧನುಷ್, ನಿರೂಪಕಿ ಜಾನ್ಹವಿ ಬಿಗ್‌ಬಾಸ್ ಮನೆಗೆ ಕಂಟೆಸ್ಟಂಟ್‌ಗಳಾಗಿ ಹೋಗಿದ್ದಾರೆ.

  • ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!

    ಬಿಗ್‌ಬಾಸ್‌ನಲ್ಲಿ ʻಮಾತಿನ ಮಲ್ಲಿ ಮಲ್ಲಮ್ಮನ’ ಪವಾಡ!

    ಬಿಗ್‌ಬಾಸ್ ಕನ್ನಡ ಸೀಸನ್ 12ರ ((Bigg Boss Kannada Season 12) ಸ್ಪರ್ಧಿಯಾಗಿ ಮಲ್ಲಮ್ಮ ಎಂಟ್ರಿ ಕೊಟ್ಟಿದ್ದಾರೆ. ಹೌದು, ಮೂರನೇ ಕಂಟೆಸ್ಟಂಟ್ ಆಗಿ ಉತ್ತರ ಕರ್ನಾಟಕದ ಮುಗ್ಧ ಪ್ರತಿಭೆ ಸೋಶಿಯಲ್ ಮೀಡಿಯಾ ಸ್ಟಾರ್ ಮಲ್ಲಮ್ಮ (Mallamma) ಅಖಾಡಕ್ಕಿಳಿದಿದ್ದಾರೆ.

    ಮುಗ್ಧತೆ, ಫಿಲ್ಟರ್ ಇಲ್ಲದ ನೇರನುಡಿಯಿಂದ ಮಲ್ಲಮ್ಮ ಈಗಾಗ್ಲೇ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುವ ಪ್ರತಿಭೆ. ಹಾಸ್ಯಪ್ರಜ್ಞೆ, ಕೌಂಟರ್ ಡೈಲಾಗ್ ಹೊಡೆಯೋದು ಮಲ್ಲಮ್ಮನ ಸ್ಟೈಲ್‌. ಇದೀಗ ದೊಡ್ಡ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಪಾದಾರ್ಪಣೆ ಮಾಡಿದ್ದಾರೆ. ಸೆಲೆಬ್ರಿಟಿಗಳ ಜೊತೆ ಈ ಸರಳ ಹಳ್ಳಿಹೆಣ್ಣುಮಗಳು ಮಲ್ಲಮ್ಮ ಹೇಗೆ ಸರ್ವೈವ್ ಆಗ್ತಾರೆ ಅನ್ನೋ ಪ್ರಶ್ನೆ ಮೂಡಿದೆ.ಇದನ್ನೂ ಓದಿ: ಬಿಗ್‌ಬಾಸ್‌ಗೆ ಯೂಟ್ಯೂಬ್ ಸ್ಟಾರ್ ರಕ್ಷಿತಾ ಶೆಟ್ಟಿ ಎಂಟ್ರಿ|

    ಈಗಾಗ್ಲೇ ಮಲ್ಲಮ್ಮ ಬಿಗ್‌ಹೌಸ್‌ಗೆ ಎಂಟ್ರಿ ಕೊಟ್ಟಿರುವ ಪ್ರೋಮೋ ರಿಲೀಸ್ ಆಗಿದೆ. ಅಲ್ಲಿ ವೇದಿಕೆ ಮೇಲೆ ಮಲ್ಲಮ್ಮನ ಮಾತಿಗೆ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. ಮಲ್ಲಮ್ಮನ ಎಂಟ್ರಿ ಬಿಗ್‌ಹೌಸ್‌ನಲ್ಲಿ ಭಾರೀ ಹಾವಳಿ ಎಬ್ಬಿಸೋದ್ರಲ್ಲಿ ಡೌಟಿಲ್ಲ. ಇನ್ನು ಬಿಗ್‌ಬಾಸ್‌ನಲ್ಲಿ ಏನ್ಮಾಡ್ಬೇಕು ಎಂದು ಸುದೀಪ್ ಪ್ರಶ್ನೆ ಕೇಳ್ದಾಗ ಬಿಗ್‌ಬಾಸ್ ಮನೆಗೆ ಹೋಗಿ ಜಗಳ ಮಾಡ್ಬೇಕು ಎಂದು ಮಲ್ಲಮ್ಮ ಉತ್ತರ ಕೊಟ್ಟಿದ್ದಾರೆ.

    ಉತ್ತರ ಕರ್ನಾಟಕದ ಈ ಮುಗ್ಧ ಗಟ್ಟಿಗಿತ್ತಿ ಬಿಗ್‌ಹೌಸ್ ಇತರ ಸ್ಪರ್ಧಿಗಳಿಗೆ ಕ್ವಾಟ್ಲೆ ಕೊಡ್ತಾರಾ? ಅಥವಾ ಸೆಲೆಬ್ರಿಟಿಗಳ ಥಳುಕು ಬಳುಕಿನ ಆಟಕ್ಕೆ ಇವರೇ ಕ್ವಾಟ್ಲೆ ಅನುಭವಿಸುತ್ತಾರಾ? ಅನ್ನೋದನ್ನ ನೋಡುವ ಕುತೂಹಲ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ. ಒಟ್ನಲ್ಲಿ ಈ ಬಾರಿಯ ಬಿಗ್‌ಬಾಸ್‌ನ ಹೈಲೈಟ್ ಕಂಟೆಸ್ಟಂಟ್ ಮಲ್ಲಮ್ಮ.ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿಯಾಗಿ ಕಿರುತೆರೆ ನಟಿ ಮಂಜು ಭಾಷಿಣಿ

  • ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ನಿಧನ

    ಡಾಲಿ ಧನಂಜಯ ಅಜ್ಜಿ ಮಲ್ಲಮ್ಮ ನಿಧನ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅಜ್ಜಿ ಮಲ್ಲಮ್ಮ (Mallamma) ಅವರು 95ನೇ ವಯಸ್ಸಿಗೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹಾಸನ ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕೊನೆಯುಸಿರೆಳೆದಿದ್ದಾರೆ.

    ಅಜ್ಜಿ ಮಲ್ಲಮ್ಮಗೆ 5 ಜನ ಮಕ್ಕಳಿದ್ದರು. ಅದರಲ್ಲಿ ಡಾಲಿ ಅವರ ತಂದೆ ಅಡವಿಸ್ವಾಮಿ ಎರಡನೇಯವರಾಗಿದ್ದಾರೆ. ಇದೀಗ ವಯೋಸಹಜ ಕಾಯಿಲೆಯಿಂದ ಮಲ್ಲಮ್ಮ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇದನ್ನೂ ಓದಿ:ಡಿಕೆಶಿ ಭೇಟಿಯಾದ ವಿಜಯಲಕ್ಷ್ಮಿ ದರ್ಶನ್

    ಅಂದಹಾಗೆ, ಅಜ್ಜಿ ಜೊತೆ ಡಾಲಿ ಅಟ್ಯಾಚ್ ಆಗಿದ್ದರು. ಇನ್ನೂ ‘ವೀಕೆಂಡ್ ವಿತ್ ರಮೇಶ್ ಸೀಸನ್ 5’ರಲ್ಲಿ ಮಲ್ಲಮ್ಮ ಕೂಡ ಬಂದಿದ್ದರು. ಆಗ ಮೊಮ್ಮಗ ಡಾಲಿಯ ಮದುವೆ ಬಗ್ಗೆ ಮಾತನಾಡಿದ್ದರು. ಧನಂಜಯಗೆ ಬೇಗ ಮದುವೆ ಮಾಡಿಸಬೇಕು ಎಂದು ಅಜ್ಜಿ ಹೇಳಿದ್ದರು.

  • ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾ

    ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಮಕ್ಕಳನ್ನ ದತ್ತು ಪಡೆದ ಅಮಿತ್ ಶಾ

    ಕಲಬುರಗಿ: ಹುತಾತ್ಮ ಪಿಎಸ್‍ಐ ಮಲ್ಲಿಕಾರ್ಜುನ್ ಬಂಡೆ ಅವರ ಇಬ್ಬರು ಮಕ್ಕಳಾದ ಶಿವಾನಿ ಮತ್ತು ಸಾಯಿರನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದತ್ತು ಪಡೆದಿದ್ದಾರೆ. ಇಬ್ಬರು ಮಕ್ಕಳ ಪೂರ್ಣ ಪ್ರಮಾಣದ ಶಿಕ್ಷಣದ ವೆಚ್ಚವನ್ನ ಬಿಜೆಪಿಯೇ ನೋಡಿಕೊಳ್ಳಲ್ಲಿದೆ ಅಂತಾ ಭರವಸೆ ನೀಡಿದ್ದಾರೆ.

    ಸೋಮವಾರದಂದು ಸೇಡಂ ರಸ್ತೆಯ ಇಎಸ್‍ಐ ಆಸ್ಪತ್ರೆಯ ಆಡಿಟೋರಿಯಂನಲ್ಲಿ ನಡೆದಿದ್ದ ಬಿಜೆಪಿ ವಿಭಾಗೀಯ ಮಟ್ಟದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಬಂಡೆ ಮಕ್ಕಳ ಪರಿಸ್ಥಿತಿಯ ಬಗ್ಗೆ ಹಾಗೂ ಸರ್ಕಾರ ತಿಂಗಳಿಗೆ ಕೇವಲ ಒಂದು ಸಾವಿರ ರೂಪಾಯಿ ಹಣ ಮಾತ್ರ ನೀಡುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಅಂತಾ ಶಾ ಗಮನಕ್ಕೆ ತಂದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಶಾ, ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚ ಪಕ್ಷವೇ ಭರಿಸುವುದರ ಜೊತೆಗೆ ಇಬ್ಬರು ಮಕ್ಕಳನ್ನ ದತ್ತು ಪಡೆಯುವುದಾಗಿ ಘೋಷಣೆ ಮಾಡಿದರು.

    ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ 2014ರ ಜನವರಿ 8ರಂದು ಶಾರ್ಪ್ ಶೂಟರ್ ಮುನ್ನಾ ಜೊತೆ ನಡೆದಿದ್ದ ಗುಂಡಿನ ಕಾಳಗದಲ್ಲಿ ಎದೆಗೆ ಗುಂಡೇಟು ಬಿದ್ದು ಸುಮಾರು ವಾರಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮರಾಗಿದ್ದರು. ನಂತರ ಮಕ್ಕಳ ಜವಬ್ದಾರಿ ಪತ್ನಿ ಮಲ್ಲಮ್ಮ ಬಂಡೆ ಹೆಗಲಿಗೆ ಬಿದ್ದಿತ್ತು. ಆದರೆ ಮಲ್ಲಮ್ಮ ಬಂಡೆ ಕೂಡ ಬ್ರೇನ್ ಟ್ಯೂಮರ್‍ನಿಂದ ಬಳಲುತ್ತ ಚಿಕಿತ್ಸೆ ಪಡೆಯುತ್ತಿದ್ದರು. 2016 ಜುಲೈ 9ರಂದು ಮಲ್ಲಮ್ಮ ಕೂಡ ವಿಧಿವಶರಾಗಿದ್ದರು.

    ಹೀಗಾಗಿ ಅಮಿತ್ ಶಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಘಟಕ ಬಂಡೆಯವರ ಇಬ್ಬರು ಮಕ್ಕಳನ್ನ ದತ್ತು ಪಡೆದಿದೆ.

  • ಬಿಜೆಪಿಯವ್ರ ಕಿರುಕುಳದಿಂದ ಯೊಗೇಶ್ ಗೌಡ ಪತ್ನಿ ಕಾಂಗ್ರೆಸ್ ಗೆ ಸೇರ್ಪಡೆ: ಸಿಎಂ

    ಬಿಜೆಪಿಯವ್ರ ಕಿರುಕುಳದಿಂದ ಯೊಗೇಶ್ ಗೌಡ ಪತ್ನಿ ಕಾಂಗ್ರೆಸ್ ಗೆ ಸೇರ್ಪಡೆ: ಸಿಎಂ

    ಕಲಬುರಗಿ: ಬಿಜೆಪಿಯವರ ಕಿರುಕುಳ ತಾಳಲಾರದೇ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಲ್ಲಮ್ಮಳನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂಬುದು ಸುಳ್ಳು ಆರೋಪವಾಗಿದೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯ ಯೊಗೇಶ್‍ಗೌಡ ಹತ್ಯೆ ಪ್ರಕರಣ ಮತ್ತು ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಲ್ಲಮ್ಮ ಅವರನ್ನು ಕಾಂಗ್ರೆಸ್ ಹೈಜಾಕ್ ಮಾಡಿಲ್ಲ. ಅವರಾಗೇ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರಿಂದ ಅಸಂಬದ್ಧ ಪದ ಬಳಕೆ ವಿಚಾರದ ಕುರಿತು ಮಾತನಾಡಿದ ಸಿಎಂ, ಬೋಗಳೆದಾಸಯ್ಯ ಯಾರೆಂಬ ವಿಷಯ ಚರ್ಚೆಗೆ ಬರಬೇಕು. ಬಿಜೆಪಿಯವರಿಗೆ ಚರ್ಚೆಗೆ ಬರುವುದಕ್ಕೆ ತಾಕತ್ತಿಲ್ಲ ಅಂದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಇನ್ನು ಕಾಂಗ್ರೆಸ್‍ನಲ್ಲಿ ವಯಸ್ಸಾದವರಿಗೆ ನಿವೃತ್ತಿ ರಾಹುಲ್ ಗಾಂಧಿ ಹೇಳಿಕೆ ಸಂಬಂಧ, ಪಕ್ಷದಲ್ಲಿ ಹಿರಿಯರು ಬೇಕು, ಯುವಕರು ಬೇಕು. ಪ್ರಿಯಾಂಕ ಗಾಂಧಿ ರಾಹುಲ್‍ಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಚುನಾವಣೆಗೆ ನಿಲ್ಲೋದು ಸದ್ಯಕ್ಕೆ ಅಪ್ರಸ್ತುತ. ಸೋನಿಯಾ ಗಾಂಧಿ ಅಧ್ಯಕ್ಷ ಸ್ಥಾನ ತ್ಯಜಿಸಿದ್ದರು ಸಹ ರಾಜಕೀಯದಲ್ಲಿ ಸಕ್ರಿಯರಾಗಿರುತ್ತಾರೆ. ರಾಯಬರೇಲಿ ಕ್ಷೇತ್ರದಿಂದಲೇ ಸೋನಿಯಾ ಸ್ಫರ್ಧೆ ಮಾಡುತ್ತಾರೆ ಅಂತ ಅವರು ತಿಳಿಸಿದ್ರು.

  • ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಕಾಂಗ್ರೆಸ್ ನಿಂದ ಯೋಗೇಶ್ ಗೌಡ ಪತ್ನಿಯ ಹೈಜಾಕ್ ಪ್ರಕರಣಕ್ಕೆ ಹೊಸ ಟ್ವಿಸ್ಟ್!

    ಹುಬ್ಬಳ್ಳಿ: ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ. ನನ್ನ ಬಗ್ಗೆ ಕೇಳಿಬರುತ್ತಿರುವ ಎಲ್ಲಾ ಮಾಹಿತಿಗಳು ಸುಳ್ಳು. ನನ್ನನ್ನು ಕಾಂಗ್ರೆಸ್ ಪಕ್ಷದ ಯಾರು ಸಂಪರ್ಕಿಸಿಲ್ಲ ಅಂತ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನ್ನ ಗಂಡನ ಹತ್ಯೆಯಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರ ಇದೆ ಅಂತ ನಾನು ಸುಮ್ಮನೆ ಆರೋಪ ಮಾಡಲ್ಲ. ಗಂಡನನ್ನು ಕೊಂದವರಿಗೆ ಶಿಕ್ಷೆ ಆಗಬೇಕು. ನನಗೂ, ನನ್ನ ನಾಲ್ಕು ಮಕ್ಕಳಿಗೂ ನ್ಯಾಯ ಸಿಗಬೇಕು ಅಷ್ಟೆ ಎಂದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ನಿಂದ ಯೋಗೇಶ್‍ಗೌಡ ಪತ್ನಿ ಹೈಜಾಕ್?- ರಾತ್ರೋರಾತ್ರಿ ಕರೆದೊಯ್ದು ಪಕ್ಷ ಸೇರುವಂತೆ ಬೆದರಿಕೆ ಆರೋಪ

    ಸಿಎಂ ಸಿದ್ದರಾಮಯ್ಯ ನಮ್ಮ ಜಾತಿಯವರು. ಅವರ ಬಳಿ ಹೋದರೆ ನನಗೆ ನ್ಯಾಯ ಸಿಗುತ್ತೆ. ಅವರು ಸೇರಿಸಿಕೊಂಡ್ರೆ ನಾನು ಕಾಂಗ್ರೆಸ್ ಸೇರುತ್ತೇನೆ. ಸಚಿವ ವಿನಯ್ ಕುಲಕರ್ಣಿ ಇದುವರೆಗೆ ನನ್ನೊಂದಿಗೆ ಯಾವತ್ತೂ ಮಾತಾಡಿಲ್ಲ. ನನ್ನ ಭಾವ ಗುರುನಾಥ್ ಗೌಡ ಪ್ರತಿಯೊಂದಕ್ಕೂ ನನಗೆ ಅಡ್ಡಿಪಡಿಸುತ್ತಿದ್ದಾರೆ. ನಾನು ಯಾರನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಗಂಡನ ಸಾವನ್ನು ನನ್ನ ಭಾವ ಹಾಗೂ ಸ್ಥಳೀಯ ನಾಯಕರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಅಂತ ಮಲ್ಲಮ್ಮ ತನ್ನ ಅಳಲು ತೋಡಿಕೊಂಡಿದ್ದಾರೆ.

    ಗುರುವಾರ ರಾತ್ರೋ ರಾತ್ರಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮರನ್ನು ಕಾಂಗ್ರೆಸ್ ನಾಯಕರು ಕರೆದೊಯ್ದಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಸುರೇಶಗೌಡ ಹಾಗೂ ನಾಗರಾಜ ಗೌರಿಯ ಮೂಲಕ ಕಾಂಗ್ರೆಸ್ ಗೆ ಸೇರ್ಪಡೆಯಾಗುವಂತೆ ಒತ್ತಾಯಿಸಿದ್ದು, ಜೀವ ಬೆದರಿಕೆ ಒಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಳ್ಳುವ ಯತ್ನ ನಡೆದಿದೆ ಎಂದು ಯೋಗೇಶ್‍ಗೌಡ ಸಹೋದರ ಗುರುನಾಥ ಗೌಡ ಆರೋಪಿಸಿದ್ದರು.

    https://www.youtube.com/watch?v=BYTYCPOHHdE