Tag: malini krishnamurthy

  • ಬೆಳಗಾವಿಯ ಹಿಂಡಲಗಾ ಜೈಲಿಗೆ ದರ್ಶನ್ ಶಿಫ್ಟ್?

    ಬೆಳಗಾವಿಯ ಹಿಂಡಲಗಾ ಜೈಲಿಗೆ ದರ್ಶನ್ ಶಿಫ್ಟ್?

    ಬೆಳಗಾವಿ: ಬೆಂಗಳೂರಿನ ಪರಪ್ಪನ ಆಗ್ರಹಾರದಲ್ಲಿರುವ (Parappana Agrahara) ದರ್ಶನ್ ಅವರನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಬೇರೆ ಜೈಲಿಗೆ ಕಳುಹಿಸಲು ಸೂಚನೆ ನೀಡಿದ ಬೆನ್ನಲ್ಲೇ ಬೆಳಗಾವಿಯ ಹಿಂಡಲಗಾ ಜೈಲಿಗೆ (Hindalga Jail) ದರ್ಶನ್ ಸ್ಥಳಾಂತರವಾಗುವ ಸಾಧ್ಯತೆಯಿದೆ.

    ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ (Malini Krishnamurthy) ಪ್ರಮುಖ ಜೈಲುಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬೆಳಗಾವಿಯ ಹಿಂಡಲಗಾ ಜೈಲಿನ ಬಂದೋಬಸ್ತ್ ವ್ಯವಸ್ಥೆ ಮತ್ತು ದರ್ಶನ್ ಅಥವಾ ಆತನ ಗ್ಯಾಂಗ್ ಶಿಫ್ಟ್ ಮಾಡಿದರೆ ಆಗುವ ಸಾಧಕ ಬಾಧಕಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಇದರಿಂದಾಗಿ ಆರೋಪಿ ನಟ ದರ್ಶನ್ ಅಥವಾ ಆತನ ಗ್ಯಾಂಗ್ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ದರ್ಶನ್‌ನನ್ನು ಬೇರೆ ಜೈಲಿಗೆ ಕಳಿಸಿ: ಸಿಎಂ ತಾಕೀತು

     

    ಈಗಾಗಲೇ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗಾ, ಮಾಜಿ ಸಚಿವ ವಿನಯ್ ಕುಲಕರ್ಣಿ ಸೇರಿ ಹಲವರು ಸೆರೆವಾಸ ಅನುಭವಿಸಿದ್ದಾರೆ. ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಕೂಡ ಹಿಂಡಲಗಾ ಜೈಲಿನಲ್ಲಿದ್ದರು. ಇದನ್ನೂ ಓದಿ: ಪಾಕ್‌ನಲ್ಲಿ ಉಗ್ರರ ದಾಳಿ | ಬಸ್ಸಿನಿಂದ ಇಳಿಸಿ ಗುರುತು ಚೆಕ್‌ ಮಾಡಿ ಶೂಟೌಟ್‌ – 23 ಮಂದಿ ಬಲಿ

     

  • ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ

    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ – ಇಬ್ಬರು ಐಜಿಪಿಗಳ ನೇತೃತ್ವದಲ್ಲಿ ತನಿಖಾ ತಂಡ ರಚನೆ

    – ರಾಜಾತಿಥ್ಯ ನೀಡಿರುವ ಅಧಿಕಾರಿ, ಸಿಬ್ಬಂದಿಗಳಿಗೆ ನಡುಕ

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ (Parappana Agrahara) ದರ್ಶನ್‌ಗೆ (Darshan) ವಿಶೇಷ ಆತಿಥ್ಯ ನೀಡಿರುವದನ್ನ ತನಿಖೆ ಮಾಡಲು ಇಬ್ಬರು ಐಜಿಪಿಗಳ(Inspector- General Of Police) ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಿ ಕಾರಗೃಹ ಡಿಜಿ ಮಾಲಿನಿ ಕೃಷ್ಣಮೂರ್ತಿ(Malini Krishnamurthy) ಆದೇಶ ನೀಡಿದ್ದಾರೆ.

    ಐಜಿಪಿ ಬಿ.ವಿ. ಆನಂದ್ ರೆಡ್ಡಿ ಹಾಗೂ ಐಜಿಪಿ ಸೋಮಶೇಖರ್ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ. ಇಬ್ಬರು ಹಿರಿಯ ಅಧಿಕಾರಿಗಳಿಗೆ 15 ದಿನಗಳ ಒಳಗಾಗಿ ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ಕೊಟ್ಟಿರುವ ವರದಿ ನೀಡಲು ಸೂಚನೆ ಕೊಡಲಾಗಿದೆ. ಇದನ್ನೂ ಓದಿ: ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್

    ಕೊಲೆ ಆರೋಪಿ ನಟ ದರ್ಶನ್‌ಗೆ ಜೈಲನ್ನೇ ರೆಸಾರ್ಟ್ ಮಾಡಿಕೊಟ್ಟಿರುವ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಈಗ ನಡುಕ ಶುರುವಾಗಿದೆ. ದರ್ಶನ್‌ಗೆ ರಾಜಾತಿಥ್ಯಕ್ಕೆ (Royal Treatment) ಅನುವು ಮಾಡಿಕೊಟ್ಟಿದ್ದ ಅಧಿಕಾರಿಗಳ ಮೇಲೆ ತೂಗುಕತ್ತಿ ತೂಗಾಡುತ್ತಿದೆ. ಜೈಲಿನಲ್ಲಿ ಬಿಂದಾಸ್ ಆಗಿ ಇರಲು ವ್ಯವಸ್ಥೆ ಮಾಡಿಕೊಟ್ಟಿರುವ ಹಿಂದಿನ ಕೈ ಯಾರದು? ಇದೀಗ ಆರೋಪಿ ರೌಡಿಶೀಟರ್ಸ್ ಗಳ ಜೊತೆ ಜೈಲಿನಲ್ಲಿ ನಂಟು ಬೆಳೆಸಿಕೊಂಡು ಹಾಯಾಗಿ ಕಾಲಕಳೆಯುತ್ತಿರುವ ಪೋಟೋ, ವಿಡಿಯೋ ಬಹಿರಂಗ ಆಗಿರುವ ಬಗ್ಗೆ ಆಂತರಿಕ ತನಿಖೆಯ ಬೇಟೆಗೆ ಹಿರಿಯ ಅಧಿಕಾರಿಗಳು ಸಜ್ಜಾಗಿದ್ದಾರೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ರೌಡಿಶೀಟರ್‌ಗಳ ಜೊತೆ ನೋಟು ಬೆಳೆಸಲು ನಟ ದರ್ಶನ್‌ಗೆ ಬಿಟ್ಟಿದ್ದು ಯಾರು? ವಿಶೇಷ ಆತಿಥ್ಯಕ್ಕೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಿಗಳು ಯಾರು? ಹಣ ಪಡೆದು ದರ್ಶನ್‌ಗೆ ವಿಶೇಷ ಆತಿಥ್ಯ ಕೊಟ್ಟಿದ್ದಾರಾ? ಎಂಬಿತಾದಿ ವಿಚಾರದ ಬಗ್ಗೆ ತನಿಖೆ ಮಾಡಿ ಕಾರಗೃಹ ಇಲಾಖೆಯ ಡಿಜಿ.ಗೆ ವರದಿ ಸಲ್ಲಿಸಲಾಗುತ್ತದೆ. ವರದಿಯನ್ನ ಪರಿಶೀಲನೆ ಮಾಡಿ ತಪ್ಪಿತಸ್ತರ ವಿರುದ್ಧ ಅಮಾನತಿನ ಅಸ್ತ್ರ ಪ್ರಯೋಗ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು