Tag: Malemahadeshwara

  • ಹೆಣ್ಣು ಕರುಣಿಸೆಂದು ಮಾದಪ್ಪನ ಮೊರೆ ಹೋದ ಯುವಕರು

    ಹೆಣ್ಣು ಕರುಣಿಸೆಂದು ಮಾದಪ್ಪನ ಮೊರೆ ಹೋದ ಯುವಕರು

    ಚಾಮರಾಜನಗರ: ಹೆಣ್ಣು ಕರುಣಿಸೆಂದು ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (malavalli) ತಾಲೂಕಿನ ಅಂಚೆದೊಡ್ಡಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದಾರೆ.

    ನಗರದಲ್ಲಿರುವ ಮಲೆ ಮಾದೇಶ್ವರನ (Male Madeshwara) ಸನ್ನಿಧಿಗೆ ಅಂಚೆದೊಡ್ಡಿಯ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ಜನರು ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ್ದಾರೆ. ಊರಿಗೆ ಊರೇ ಸುಮಾರು 115 ಕಿಲೋಮೀಟರ್ ದೂರದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

    ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ ನೂರಕ್ಕೂ ಹೆಚ್ಚು ಗಂಡು ಮಕ್ಕಳಿದ್ದಾರೆ. ಕೃಷಿ ಮಾಡುವ ತಮ್ಮ ಗಂಡು ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಪೋಷಕರ ಅಳಲು ತೊಡಿಕೊಂಡಿದ್ದಾರೆ. ಮಕ್ಕಳಿಗೆ ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಪೋಷಕರಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಇದೇ ಹಿನ್ನೆಲೆಯಲಿ ಹೆಣ್ಣು ಕರುಣಿಸಪ್ಪ ಎಂದು ಪೋಷಕರು ಮಹದೇಶ್ವರನ ಮೊರೆ ಹೋಗಿದ್ದಾರೆ. ಚಿನ್ನದ ತೇರು ಎಳೆಸ್ತೀವಿ, ಹುಲಿವಾಹನ ಎಳೆಸ್ತೀವಿ, ಭಿಕ್ಷೆ ಎತ್ತಿ ಹುಂಡಿಗೆ ಹಣ ಹಾಕ್ತೀವಿ, ತಮ್ಮ ಶಕ್ತಿ ಇರುವವರೆಗೂ ಪಾದಯಾತ್ರೆ ಮಾಡಿ ನಿನ್ನ ಸೇವೆ ಮಾಡ್ತೀವಿ ಎಂದು ಹಲವಾರು ಹರಕೆಗಳನ್ನು ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

    ಈ ಮೊದಲು ಶಿವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ಬದಲಾಗಿದ್ದು, ಈಗ ಬೇರೆ ಬೇರೆ ದಿನಗಳಲ್ಲೂ ಭಕ್ತ ಸಮೂಹ ಪಾದಯಾತ್ರೆ ಕೈಗೊಳ್ಳುತ್ತಿದೆ. ಇದನ್ನೂ ಓದಿ: ತೆರಿಗೆ ತಾರತಮ್ಯ; ರಾಜ್ಯಪಾಲರ ಭಾಷಣ ಮೂಲಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ

  • ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ಮಲೆಮಹದೇಶ್ವರ ಜಾತ್ರಾಮಹೋತ್ಸವ – ಪೂರ್ವಸಿದ್ಧತೆಗಳ ಕುರಿತಂತೆ ಸಭೆ ನಡೆಸಿದ ಸೋಮಣ್ಣ

    ಬೆಂಗಳೂರು: ವಸತಿ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ‘ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ’ ವತಿಯಿಂದ 2022ನೇ ಸಾಲಿನಲ್ಲಿ ಜರುಗುವ ಮಹಾ ಶಿವರಾತ್ರಿ ಮತ್ತು ಯುಗಾದಿ ಜಾತ್ರಾ ಕಾರ್ಯಕ್ರಮಗಳ ಪೂರ್ವಸಿದ್ಧತೆಗಳ ಕುರಿತು ಮುಜರಾಯಿ ಸಚಿವರು, ಜಿಲ್ಲೆಯ ಶಾಸಕರು ಹಾಗೂ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಸಭೆ ನಡೆಯಿತು.

    ಮೊದಲಿಗೆ ಜಾತ್ರೆಯ ಕಾರ್ಯಕ್ರಮಗಳ ಪ್ರಯುಕ್ತ ಕೈಗೊಂಡಿರುವ ಮತ್ತು ಕೈಗೊಳ್ಳಲಿರುವ ಕ್ರಮಗಳ ಕುರಿತು ‘ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಸಭೆಗೆ ಮಾಹಿತಿಯನ್ನು ನೀಡಿದರು. ಇದನ್ನೂ ಓದಿ: ತಾಕತ್ತಿದ್ದರೆ ನನ್ನನ್ನು ತುಂಡು, ತುಂಡು ಮಾಡಲಿ ನೋಡೋಣ: ಆಂದೋಲಾ ಶ್ರೀ ಕಿಡಿ

    ಈ ಕುರಿತು ಸೋಮಣ್ಣ ಅವರು ಮಾತನಾಡಿದ್ದು, ಶಿವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ಲಕ್ಷಾಂತರ ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ. ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅಡೆತಡೆ ಮಾಡಬೇಡಿ. ಅತಿಯಾದ ಪ್ರಚಾರ ನೀಡುವ ಅವಶ್ಯಕತೆ ಇಲ್ಲ. ಕೋವಿಡ್ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸಿ ಯಶಸ್ವಿಗೊಳಿಸಲು ಸೂಚಿಸಿದರು.

    ನೀರಾವರಿ ಯೋಜನೆಗಳ ಕುರಿತಂತೆ ಪ್ರಸ್ತಾಪಿಸಿದ ಅವರು, ಗುಂಡಾಲ್ ಏತ ನೀರಾವರಿ ಯೋಜನೆ ಮತ್ತು ರಾಮನಗುಡ್ಡ ಹಾಗೂ ಹಬ್ಬ-ಹುಣಸೆ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.

    ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಮುಖ ರಸ್ತೆಗಳ ದುರಸ್ತಿ ಕುರಿತು ಮಾತನಾಡಿದ ಅವರು, ಸತ್ತೇಗಾಲ-ಕೊಳ್ಳೆಗಾಲ-ಯಳಂದೂರು-ಸಂತೆಮರಹಳ್ಳಿ-ಚಾಮರಾಜನಗರ ಮತ್ತು ಕೊಳ್ಳೇಗಾಲ-ಮಧುವನಹಳ್ಳಿ-ಹನೂರು-ಶ್ರೀ ಮಲೆಮಹದೇಶ್ವರ ಬೆಟ್ಟ ಮಾರ್ಗದ ರಸ್ತೆಗಳಲ್ಲಿರುವ ಗುಂಡಿಗಳು ಮತ್ತು ಅಪೂರ್ಣವಾಗಿರುವ ಕಾಮಗಾರಿಗಳಿಂದ ಸಾವ9ಜನಿಕರ ಸಂಚಾರಕ್ಕೆ ತುಂಬಾ ಅಡಚಣೆಯಾಗುತ್ತಿದೆ. ವಿಳಂಬವಿಲ್ಲದಂತೆ ಕೂಡಲೇ ಕಾರ್ಯಪ್ರವೃತ್ತರಾಗಿ ಬೆಟ್ಟದ ಶಿವರಾತ್ರಿ ಜಾತ್ರಾ ಕಾರ್ಯಕ್ರಮಗಳ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳಿಸಲು ತಿಳಿಸಿದರು. ಇದನ್ನೂ ಓದಿ: ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಶೇ.75ರಷ್ಟು ಉದ್ಯೋಗವಕಾಶ – ಸುಪ್ರೀಂನಲ್ಲಿ ಹರ್ಯಾಣಕ್ಕೆ ಜಯ

    ಸಭೆಯಲ್ಲಿ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ನರೇಂದ್ರ, ಎನ್.ಮಹೇಶ್, ಪುಟ್ಟರಂಗ ಶೆಟ್ಟಿ, ನಿರಂಜನ್ ಕುಮಾರ್, ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ತಿಮ್ಮಯ್ಯ, ಕಾವೇರಿ ನೀರಾವರಿ ನಿಗಮದ ಮುಖ್ಯ ಇಂಜನಿಯರ್ ಶಂಕರೇಗೌಡ ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಮತ್ತಿತರ ಸಂಬಂಧಿತ ಅಧಿಕಾರಿಗಳು ಉಪಸ್ಥಿತರಿದ್ದರು.

  • 82 ದಿನಗಳ ನಂತ್ರ ಮಾದಪ್ಪನ ಹುಂಡಿ ಏಣಿಕೆ – 1.47 ಕೋಟಿ ನಗದು, 17 ಗ್ರಾಂ ಚಿನ್ನ ಸಂಗ್ರಹ

    82 ದಿನಗಳ ನಂತ್ರ ಮಾದಪ್ಪನ ಹುಂಡಿ ಏಣಿಕೆ – 1.47 ಕೋಟಿ ನಗದು, 17 ಗ್ರಾಂ ಚಿನ್ನ ಸಂಗ್ರಹ

    – ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ

    ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಏಣಿಕೆ ಮಾಡಲಾಗಿದ್ದು, ಒಂದು ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ.

    ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದಲ್ಲಿ ಪ್ರತಿ ತಿಂಗಳಿಗೊಮ್ಮೆ ಹುಂಡಿ ಏಣಿಕೆ ನಡೆಯುತ್ತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆ ಮಾಡಿದ್ದರಿಂದ ಹುಂಡಿ ಏಣಿಕೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ 82 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆದರೆ ಈ ಬಾರಿ ಮಹದೇಶ್ವರನ ಆದಾಯದಲ್ಲಿ ಕುಸಿತ ಕಂಡು ಬಂದಿದೆ.

    ಹುಂಡಿಯಲ್ಲಿ 1.47 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಹಣದ ಜೊತೆಗೆ 17 ಗ್ರಾಂ ಚಿನ್ನ, 985 ಗ್ರಾಂ ಬೆಳ್ಳಿ ಸಹ ಮಹದೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದೆ. ಈ ಮೊದಲು ಪ್ರತಿ ತಿಂಗಳ ಸರಾಸರಿ 1.50 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. ಆದರೆ ಈಗ 82 ದಿನಗಳಿಗೆ 1.47 ಕೋಟಿ ರೂಪಾಯಿ ಸಂಗ್ರಹವಾಗಿದೆ.

    ಏಳು ಮಲೆಗಳ ಒಡೆಯ, ಮಲೆ ಮಹದೇಶ್ವರ ಬೆಟ್ಟ ದಕ್ಷಿಣ ಭಾರತದ ಪ್ರಮುಖ ಯಾತ್ರಸ್ಥಳಗಳಲ್ಲಿ ಒಂದು. ರಾಜ್ಯದ ಮುಜರಾಯಿ ದೇವಸ್ಥಾನಗಳ ಪೈಕಿ ಮಾದಪ್ಪನ ದೇವಾಲಯ ಅತಿ ಹೆಚ್ಚು ಆದಾಯ ತರುವ ಎರಡನೇ ದೇವಸ್ಥಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕೊರೊನಾ ಕಾರಣದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಸತತ 5 ತಿಂಗಳುಗಳ ಕಾಲ ಭಕ್ತರಿಗೆ ನಿಷೇದ ಹೇರಲಾಗಿತ್ತು.

    ಜೂನ್ 8ರಂದು ಸಾಕಷ್ಟು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ಭಕ್ತರಿಗೆ ಮಾದಪ್ಪನ ದರ್ಶನ ಮಾಡುವ ವ್ಯವಸ್ಥೆಯನ್ನ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರ ಮಾಡಿತ್ತು.ಮಲೆ ಮಹದೇಶ್ವರ ಬೆಟ್ಟಕ್ಕೆ ರಾಜ್ಯ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಬಂದು ದರ್ಶನ ಪಡೆಯುತ್ತಾರೆ.

    ಇತ್ತೀಚೆಗೆ ಅಂದರೆ ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಒಂದೇ ಸ್ಥಳದಲ್ಲಿ ಸೇರುತ್ತಾರೆ ಎಂದು 16, 17 ಮತ್ತು 18 ಮೂರು ದಿನಗಳ ಮಾದಪ್ಪನ ಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಭಕ್ತಾಧಿಗಳ ಪ್ರವೇಶವನ್ನ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು.