Tag: Male Mahadeshwara Hills

  • ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿ 66 ಸಾವಿರ ರೂ. ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಾದಪ್ಪ- ಹುಂಡಿಯಲ್ಲಿ 2 ಕೋಟಿ 66 ಸಾವಿರ ರೂ. ಸಂಗ್ರಹ

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 2 ಕೋಟಿ 16 ಸಾವಿರ ರೂ. ಸಂಗ್ರಹವಾಗಿದೆ.

    ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷ ವಿದ್ವಾನ್ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಎಣಿಕೆ ಕಾರ್ಯ ಪ್ರಾರಂಭ ಮಾಡಲಾಯಿತು. ಎಣಿಕೆ ಕಾರ್ಯವು ಸಂಜೆ 7 ಗಂಟೆಯವರೆಗೂ ನಡೆಯಿತು.

    ಈ ಬಾರಿ ಅಮಾವಾಸ್ಯೆ ಹಾಗೂ ಸರ್ಕಾರಿ ರಜಾ ದಿನಗಳಂದು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದರು. ಕಳೆದ 40 ದಿನಗಳ ಅವಧಿಯಲ್ಲಿ 2 ಕೋಟಿ 16 ಸಾವಿರದ 340 ರೂ ನಗದು, 50 ಗ್ರಾಂ ಚಿನ್ನ ಹಾಗೂ 2.342 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

    ಶ್ರೀ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ, ಉಪಕಾರ್ಯದರ್ಶಿ ಬಸವರಾಜು ಸೇರಿದಂತೆ ಇತರರು ಹಾಜರಿದ್ದರು. ಇದನ್ನೂ ಓದಿ: ಜೊಮ್ಯಾಟೊಗೆ ಶಾಕ್ – ಲೇಟ್ ಮಾಡಿ ಆರ್ಡರ್ ಕ್ಯಾನ್ಸಲ್ ಆದ್ರೆ ದಂಡದ ಜೊತೆ ಊಟನೂ ಫ್ರೀ ಕೊಡ್ಬೇಕು

    Live Tv
    [brid partner=56869869 player=32851 video=960834 autoplay=true]

  • ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಲ್ಲ – ವಿ.ಸೋಮಣ್ಣ

    ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡಲ್ಲ. ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

    ಮಲೆಮಹದೇಶ್ವರ ಬೆಟ್ಟದ ವ್ಯಾಪ್ತಿಯ ಪೊನ್ನಾಚಿಯಲ್ಲಿ ಆಲಂಬಾಡಿ ಮಠದ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಮುಜರಾಯಿ ದೇಗುಲಗಳಲ್ಲಿ ವರಮಹಾಲಕ್ಷ್ಮಿ ಹಬ್ಬಕ್ಕೆ ಗಿಫ್ಟ್ – ಮಹಿಳೆಯರಿಗೆ ಬಳೆ, ಅರಿಶಿನ-ಕುಂಕುಮ

    ಇಲ್ಲಿ ಹುಲಿ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಮಲೆಮಹದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧ ಕ್ಷೇತ್ರ. ಈ ಭಾಗದಲ್ಲಿ ಕಾಡಂಚಿನ ಗ್ರಾಮಗಳು ಹೆಚ್ಚಾಗಿವೆ. ಕಾಡಿನೊಳಗೂ ಗ್ರಾಮಗಳಿವೆ. ಈ ಭಾಗದ ಜನರಿಗೆ, ಬೆಟ್ಟಕ್ಕೆ ಬರುವ ಭಕ್ತರಿಗೆ ತೊಂದರೆಯಾಗಬಾರದು. ಮಲೆಮಹದೇಶ್ವರ ಬೆಟ್ಟಕ್ಕೆ ಈ ಭಾಗದ ರೈತರೇ ವಾರಸುದಾರರು. ಸರ್ಕಾರ ಅನುಷ್ಠಾನಗೊಳಿಸುವ ಯಾವುದೇ ಯೋಜನೆಗಳು ಜನರಿಗೆ ಅನುಕೂಲವೇಗಬೇಕೇ ಹೊರತು ಅನಾನುಕೂಲವಾಗಬಾರದು ಎಂದರು. ಇದನ್ನೂ ಓದಿ: ಮಾಜಿ ಸಚಿವ ಪಾರ್ಥ ಚಟರ್ಜಿ ಮೇಲೆ ಚಪ್ಪಲಿ ಎಸೆದ ಮಹಿಳೆ 

    ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್ ಆಗ್ಬೇಕು: ಇದೇ ವೇಳೆ ಎಸ್‌ಡಿಪಿಐ ಸಂಘಟನೆ ವಿಚಾರವಾಗಿ ಮಾತನಾಡಿದ ಸಚಿವ ವಿ.ಸೋಮಣ್ಣ, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಬ್ಯಾನ್ ಆಗ್ಬೇಕು. ಈ ಸಂಘಟನೆಗಳನ್ನು ನಿಷೇಧಿಸಲು ಸರ್ಕಾರ ಹಂತ-ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದು ಯಾರ ಪಾಪದ ಕೂಸು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಂಘಟನೆಗಳು ಎಲ್ಲರಿಗೂ ತಲೆನೋವಾಗಿದ್ದು, ಇವುಗಳನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಲಡ್ಡು ಜೊತೆಗೆ 2.19 ಲಕ್ಷ ರೂ. ಬಂದಿದ್ದ ಹಣ ವಾಪಸ್ ನೀಡಿದ ಭಕ್ತ!

    ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆ ಬಂದಿದ್ದ ಹಣವನ್ನು ಭಕ್ತ ಹಿಂದುರುಗಿಸಿದ್ದಾರೆ.

    ಬೆಂಗಳೂರು ಜಿಲ್ಲೆ ಯಶವಂತಪುರ ತಾಲೂಕು ಮೇದರಹಳ್ಳಿಯ ನರಸಿಂಹಮೂರ್ತಿ ಹಣ ಹಿಂದಿರುಗಿಸಿದ ಭಕ್ತ. ಪೊಲೀಸರ ಸಮ್ಮುಖದಲ್ಲಿ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಬಸವರಾಜುಗೆ ಹಣ ಹಿಂದಿರುಗಿಸಿದ್ದಾರೆ.

    ಈ ಸಂಬಂಧ ಮಾತನಾಡಿದ ನರಸಿಂಹಮೂರ್ತಿ, ಮನೆಯಲ್ಲಿ ಪ್ರಸಾದದ ಜೊತೆ ಹಣವಿರುವುದನ್ನು ನೋಡಿ ಗಾಬರಿಗೊಂಡಿದ್ದೆ. ತಕ್ಷಣ ದೇವಸ್ಥಾನದ ಅಧಿಕಾರಿಗಳನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದೆ ಎಂದರು.

    ನರಸಿಂಹ ಮೂರ್ತಿ ಅವರು ಜುಲೈ 29ರಂದು ಅಭಿಷೇಕದ ಪ್ರಸಾದದ ಟಿಕೆಟ್ ಪಡೆದಿದ್ದರು. ಪ್ರಸಾದದ ಚೀಲಗಳನ್ನು ನೀಡುವಾಗ ಹಣವಿದ್ದ ಚೀಲವೊಂದನ್ನು ಸಹ ಆಕಸ್ಮಿಕವಾಗಿ ನೌಕರ ನಾಗಭೂಷಣ ಕೊಟ್ಟಿದ್ದರು. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿತ್ತು.

    ಈ ಸಂಬಂಧ ಮಲೆ ಮಹದೇಶ್ವರಬೆಟ್ಟದ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇದೀಗ ಭಕ್ತ ಹಣ ವಾಪಸ್ ನೀಡುವ ಮೂಲಕ ಪ್ರಕರಣ ಸುಖಾಂತ್ಯಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಹುಂಡಿ ಎಣಿಕೆಯಲ್ಲಿ ಕೋಟ್ಯಾಧೀಶನಾದ ಮಾದಪ್ಪ – ಎಣಿಕೆ ವೇಳೆ 500 ರೂ.ಗಳ 80 ನೋಟು ಕದ್ದ ಗುತ್ತಿಗೆ ನೌಕರ

    ಹುಂಡಿ ಎಣಿಕೆಯಲ್ಲಿ ಕೋಟ್ಯಾಧೀಶನಾದ ಮಾದಪ್ಪ – ಎಣಿಕೆ ವೇಳೆ 500 ರೂ.ಗಳ 80 ನೋಟು ಕದ್ದ ಗುತ್ತಿಗೆ ನೌಕರ

    ಚಾಮರಾಜನಗರ: ಮಹದೇಶ್ವರನ ಹುಂಡಿಯಲ್ಲಿ 1.70 ಕೋಟಿ ರೂಪಾಯಿಗೂ ಹೆಚ್ಚು ನಗದು ಹಣ ಸಂಗ್ರಹವಾಗಿದೆ. ಈ ಮೂಲಕ ಮಲೆಮಹದೇಶ್ವರ ಕೋಟ್ಯಾಧೀಶನಾಗಿದ್ದಾನೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಹುಂಡಿ ಎಣಿಕೆಯ ಬಳಿಕ ಮಹದೇಶ್ವರನಿಗೆ 1,70,65,814 ರೂಪಾಯಿ ಸಂಗ್ರಹವಾಗಿದೆ. ನಗದು ಹಣದ ಪೈಕಿ 9 ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಭಕ್ತರು ಕಾಣಿಕೆ ಸಲ್ಲಿಸಿದ್ದಾರೆ. ನಗದು ಜೊತೆಗೆ 80 ಗ್ರಾಂ ಚಿನ್ನ, 1 ಕೆ.ಜಿ 400 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಇದನ್ನೂ ಓದಿ: ಭಾರತದಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ – ಕೇರಳದ ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡ ಸೋಂಕು

    ಹಣ ಕದ್ದು ಸಿಕ್ಕಿಬಿದ್ದ:
    ಹುಂಡಿ ಎಣಿಕೆಯಲ್ಲಿ 40 ಸಾವಿರ ರೂಪಾಯಿ ಕಳವು ಮಾಡಿದ್ದ ಆರೋಪದಡಿ ಗುತ್ತಿಗೆ ಆಧಾರಿತ ನೌಕರನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಗುತ್ತಿಗೆ ಆಧಾರಿತ ಡಿ ಗ್ರೂಪ್ ನೌಕರ ಪುದೂರು ಗ್ರಾಮದ ಪನೀರ್ ಸೆಲ್ವಂ ಬಂಧಿತ ಆರೋಪಿ. ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಸಮೀಪವಿರುವ ವಾಣಿಜ್ಯ ಸಂಕೀರ್ಣದಲ್ಲಿ ಹುಂಡಿ ಎಣಿಕೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯದಲ್ಲಿ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗದ ನೌಕರರು ಭಾಗವಹಿಸಿದ್ದರು. ಇದರಲ್ಲಿ ಪನೀರ್ ಸೆಲ್ವಂ ಕೂಡ ಭಾಗಿಯಾಗಿದ್ದನು. ಈ ವೇಳೆ ಆತನ ವರ್ತನೆಯಲ್ಲಿ ಬದಲಾವಣೆ ಕಂಡು ಬಂದಿತ್ತು. ಇದರಿಂದ ಅನುಮಾನಗೊಂಡ ಪ್ರಾಧಿಕಾರದ ಅಧಿಕಾರಿಗಳು, ನೌಕರರು ಈತನನ್ನು ಪರಿಶೀಲಿಸಿದಾಗ ಜೇಬಿನಲ್ಲಿ 500 ರೂಪಾಯಿ ಮುಖಬೆಲೆಯ 80 ನೋಟುಗಳು ಕಂಡು ಬಂದವು. ಈ ಹಿನ್ನಲೆ ಪ್ರಾಧಿಕಾರದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ಬೆಂಗಳೂರು ಜನರಿಗೆ ಗುಡ್‌ ನ್ಯೂಸ್‌ – ಇನ್ಮುಂದೆ ಉದ್ಯಾನಗಳು ರಾತ್ರಿ 8ರ ವರೆಗೂ ಓಪನ್

    Live Tv
    [brid partner=56869869 player=32851 video=960834 autoplay=true]

  • ಮತ್ತೆ ಕೋಟ್ಯಧೀಶನಾದ ಮಾದಪ್ಪ- 34 ದಿನಗಳಲ್ಲಿ 2.58 ಕೋಟಿ ರೂ. ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಾದಪ್ಪ- 34 ದಿನಗಳಲ್ಲಿ 2.58 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ವೇಳೆ 2,57,25,859 ಕೋಟಿ ರೂ. ಸಿಕ್ಕಿದೆ.

    ಶುಕ್ರವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಆಗ 2,57,25,859 ಕೋಟಿ ರೂ. ಜೊತೆಗೆ 127 ಗ್ರಾಂ ಚಿನ್ನ, 3.447 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದನ್ನೂ ಓದಿ: ನೀರೆಂದರೆ ಈಕೆಗೆ ಅಲರ್ಜಿ, ಮೈಗೆ ತಾಗಿದರೆ ಸಾಕು ಆ್ಯಸಿಡ್ ಬಿದ್ದಂತಾಗುತ್ತಂತೆ!

    ಕೊರೊನಾ ನಂತರ ಮಹದೇಶ್ವರ ದರ್ಶನಕ್ಕೆ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಣದ ಜೊತೆಗೆ ಚಿನ್ನ ಬೆಳ್ಳಿ ಕೂಡ ಭಕ್ತರು ಮಾದಪ್ಪನ ಹುಂಡಿಗೆ ಹಾಕಿದ್ದಾರೆ.

  • ಮಾದಪ್ಪನ ಬೆಟ್ಟದಲ್ಲಿ ಸರಳವಾಗಿ ನಡೆದ ಹಾಲರುವೆ ಉತ್ಸವ

    ಮಾದಪ್ಪನ ಬೆಟ್ಟದಲ್ಲಿ ಸರಳವಾಗಿ ನಡೆದ ಹಾಲರುವೆ ಉತ್ಸವ

    ಚಾಮರಾಜನಗರ: ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಹಾಲುರುವೆ ಉತ್ಸವ ನಡೆಯಿತು.

    ಕೊರೊನಾ ಸೋಂಕಿನ ಹಿನ್ನಲೆ ಈ ಬಾರಿಯೂ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ರದ್ದುಗೊಳಿಸಲಾಗಿದೆ. ಆದರೆ ಅಮಾವಾಸ್ಯೆ ದಿನವಾದ ಇಂದು ಸಾಂಪ್ರದಾಯಿಕವಾಗಿ ಹಾಲುರುವೆ ಉತ್ಸವ ನಡೆಸಲು ಅವಕಾಶ ನೀಡಲಾಗಿದ್ದು, ಹೊರಗಿನ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ ಮತ್ತು ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್

    Male Mahadeshwara

    101 ಬೇಡಗಂಪಣ ಬಾಲಕಿಯರಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಾಲಹಳ್ಳದಿಂದ ನೀರು ಹೊತ್ತು ತರುವ ಹಾಲರುವೆ ಉತ್ಸವ ನಡೆಯಿತು. ಬಳಿಕ ಬೇಡಗಂಪಣ ಬಾಲಕಿಯರು ಹೊತ್ತು ತಂದ ಹಾಲಹಳ್ಳದ ನೀರಿನಿಂದ ಮಹದೇಶ್ವರನಿಗೆ ಅಭಿಷೇಕ ಮಾಡಲಾಯಿತು. ಲಕ್ಷಾಂತರ ಜನರು ಸೇರುತ್ತಿದ್ದ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಗೆ ನಿರ್ಬಂಧ ಹೇರಲಾಗಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

  • ಇಂದಿನಿಂದ ಮಾದಪ್ಪನ ಬೆಟ್ಟದಲ್ಲಿ ಎಲ್ಲಾ ಸೇವೆಗಳು ಆರಂಭ

    ಇಂದಿನಿಂದ ಮಾದಪ್ಪನ ಬೆಟ್ಟದಲ್ಲಿ ಎಲ್ಲಾ ಸೇವೆಗಳು ಆರಂಭ

    ಚಾಮರಾಜನಗರ: ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆ ಇಂದಿನಿಂದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಎಲ್ಲಾ ಸೇವೆಗಳನ್ನು ಪುನಾರಂಭಗೊಳಿಸಲು ಡಿಸಿ ಡಾ.ಎಂ.ಆರ್.ರವಿ ಆದೇಶಿಸಿದ್ದಾರೆ.

    Mahadeshwara Hills

    ಮಲೆಮಹದೇಶ್ವರ ಬೆಟ್ಟ ನಾಡಿನ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದ್ದು ಜಾತ್ರೆಗಷ್ಟೇ ನಿಬರ್ಂಧ ಮುಂದುವರೆದಿದ್ದು, ಉಳಿದಂತೆ ದಾಸೋಹ, ಚಿನ್ನದ ರಥ, ಬಸವ-ರುದ್ರಾಕ್ಷಿ ವಾಹನ, ಲಾಡು ಪ್ರಸಾದ ಜೊತೆಗೆ ಮುಖ್ಯವಾಗಿ ಒಂದು ವರ್ಷದ ಬಳಿಕ ಮುಡಿಸೇವೆ ಮತ್ತೆ ಇಂದಿನಿಂದ ಆರಂಭಗೊಂಡಿದೆ. ಇದನ್ನೂ ಓದಿ:  ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ, ತ್ರಿಶೂಲಗಳನ್ನು ಕೊಟ್ಟು ಹಿಂಸೆಯ ದೀಕ್ಷೆ ಕೊಡಿ – ಸಿದ್ದರಾಮಯ್ಯ ಕಿಡಿ

    Mahadeshwara Hills

    ಡಿಸಿ ಅದೇಶದ ಬೆನ್ನಲ್ಲೇ ದಾಸೋಹ ಭವನದಲ್ಲಿ ಉಪಾಹಾರ ನೀಡಲಾಗುತ್ತಿದ್ದು, ಲಾಡು ಸೇವೆ ಸಂಜೆಯಿಂದ ಪ್ರಾರಂಭವಾಗಲಿದೆ. ಆದರೆ ಜಾತ್ರೆ, ತೆಪ್ಪೋತ್ಸವ ಆಚರಣೆಗೆ ನಿರ್ಬಂಧ ಇದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ:  ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು

  • ಮೂರು ದಿನಗಳ ಕಾಲ ಮಾದಪ್ಪ ದರ್ಶನಕ್ಕೆ ನಿರ್ಬಂಧ

    ಮೂರು ದಿನಗಳ ಕಾಲ ಮಾದಪ್ಪ ದರ್ಶನಕ್ಕೆ ನಿರ್ಬಂಧ

    ಚಾಮರಾಜನಗರ: ಶ್ರಾವಣದಲ್ಲಿ ಹೆಚ್ಚು ಭಕ್ತರ ಆಗಮನ ಹಿನ್ನೆಲೆ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದರ್ಶನಕ್ಕೆ ಮೂರು ದಿನ ನಿರ್ಬಂಧ ವಿಧಿಸಲಾಗಿದೆ.

    ಸೆಪ್ಟೆಂಬರ್ 5, 6 ಹಾಗೂ 7 ರಂದು ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹೆಚ್ಚು ಜನ ಆಗಮಿಸುವ ಹಿನ್ನೆಲೆ ಕೊರೋನಾ ಕಾರಣದಿಂದ ಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮೂರು ದಿನಗಳ ಕಾಲ ಎಣ್ಣೆಮಜ್ಜನ, ಪೂಜೆ, ಕುಂಭಾಬಿಷೇಕ ನಡೆಯಲಿದೆ. ಹೀಗಾಗಿ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜನಸಂದಣಿ ಉಂಟಾಗಬಾರದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಫಿಟ್ ಆಗಿದ್ದ ಸಿದ್ಧಾರ್ಥ್ ಹೃದಯಾಘಾತಕ್ಕೆ ಕಾರಣವೇನು?

    ಈಗಾಗಲೇ ಶ್ರಾವಣದ ಹಿನ್ನೆಲೆ ಹಿಮವದ್ ಗೋಪಾಲಸ್ವಾಮಿ ದರ್ಶನಕ್ಕೂ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಇದೀಗ ಮೂರು ದಿನಗಳ ಕಾಲ ಮಹದೇಶ್ವರನ ದರ್ಶನಕ್ಕೂ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಹಿನ್ನೆಲೆ ಗಡಿ ಜಿಲ್ಲೆಯಾದ್ದರಿಂದ ಡಿಸಿ ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ.

  • ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ

    ಚಾಮರಾಜನಗರ: ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ನಡೆದಿದ್ದು, ಬರೋಬ್ಬರಿ 2.33 ಕೋಟಿ ಸಂಗ್ರಹವಾಗಿದೆ.

    122 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದರೂ ಕೊರೊನಾ ಲಾಕ್ ಡೌನ್ ಪರಿಣಾಮ 75 ದಿನ ಭಕ್ತರಿಗೆ ದೇವಾಲಯ ಬಂದ್ದಾಗಿದ್ದರಿಂದ ಕೇವಲ 47 ದಿನಗಳಲ್ಲಿ 2,33,57,28 ಕೋಟಿ ರೂ. ಸಂಗ್ರಹವಾಗಿದ್ದು ಭಕ್ತಾದಿಗಳು ಮಾದಪ್ಪನಿಗೆ ಹಣದ ರೂಪದಲ್ಲಿ ಭಕ್ತಿಯ ಹೊಳೆಯನ್ನೇ ಹರಿಸಿದ್ದಾರೆ. ಇಷ್ಟೇ ಅಲ್ಲದೇ ಹುಂಡಿಯಲ್ಲಿ 150 ಗ್ರಾಂ ಚಿನ್ನ, 2.2 ಕೆಜಿ ಬೆಳ್ಳಿಯನ್ನು ಭಕ್ತರು ದೇವರಿಗೆ ಅರ್ಪಿಸಿದ್ದಾರೆ.

    ಇಂದಿನಿಂದ ದಾಸೋಹ ವ್ಯವಸ್ಥೆ: ಮಹಾಮಾರಿ ಕರಿ ಛಾಯೆ ಮಲೆಮಹದೇಶ್ವರ ಬೆಟ್ಟದಲ್ಲಿ ಸ್ಥಗಿತಗೊಂಡಿದ್ದ ದಾಸೋಹ ವ್ಯವಸ್ಥೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ ಲಾಡು ವಿತರಣೆ, ವಿಶೇಷ ಸೇವೆಗಳು, ಮುಡಿ ಸೇವೆಗಳಿಗೆ ನಿರ್ಬಂಧ ಹೇರಲಾಗಿದೆ. ಇದನ್ನೂ ಓದಿ:  ಬಿಎಸ್‍ವೈ ರಾಜೀನಾಮೆ ನೀಡಿದ್ರೆ ಬಿಜೆಪಿಯಿಂದ ಲಿಂಗಾಯತ ಸಮುದಾಯ ದೂರಾಗುತ್ತೆ: ಸಿದ್ದಲಿಂಗ ಸ್ವಾಮೀಜಿ

  • ಮಾದಪ್ಪನ ಬೆಟ್ಟದಲ್ಲಿ 400 ಕೆ.ಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಗಟ್ಟಿ ತಯಾರಿ ಕಾರ್ಯಕ್ಕೆ ಚಾಲನೆ

    ಮಾದಪ್ಪನ ಬೆಟ್ಟದಲ್ಲಿ 400 ಕೆ.ಜಿ ಅನುಪಯುಕ್ತ ಬೆಳ್ಳಿ ಕರಗಿಸಿ ಗಟ್ಟಿ ತಯಾರಿ ಕಾರ್ಯಕ್ಕೆ ಚಾಲನೆ

    ಚಾಮರಾಜನಗರ: ಮಲೆ ಮಹದೇಶ್ವರ ದೇಗುಲದ ಖಜಾನೆಯಲ್ಲಿದ್ದ 400 ಕೆ.ಜಿ ಅನುಪಯುಕ್ತ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಪ್ರಕ್ರಿಯೆ ಆರಂಭಿಸಲಾಗಿದೆ. ಈ ವೇಳೆ ಶತಮಾನಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.

    ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದ್ದು, ಇದಕ್ಕೆ ಬೇಕಾಗುವ ಬೆಳ್ಳಿಯನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯಲು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನಿರ್ಧರಿಸಿ ಆ ಕಾರ್ಯವೂ ನಡೆಯುತ್ತಿತ್ತು. ಈ ನಡುವೆ ದೇಗುಲದ ಖಜಾನೆಯಲ್ಲಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಅದನ್ನೇಕೆ ಬೆಳ್ಳಿರಥ ನಿರ್ಮಾಣಕ್ಕೆ ಬಳಸಿಕೊಳ್ಳಬಾರದು ಎಂದು ಚಿಂತಿಸಿದ ಪ್ರಾಧಿಕಾರ, ಬೆಳ್ಳಿ ಕರಗಿಸುವ ಪರಿಣಿತರನ್ನು ದೇವಾಲಯಕ್ಕೇ ಕರೆಸಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮಕ್ಷಮದಲ್ಲಿ ಬೆಳ್ಳಿ ಕರಗಿಸಿ ಶುದ್ಧ ಬೆಳ್ಳಿಗಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

    ನಾಲ್ಕು ಕ್ವಿಂಟಾಲ್ ನಷ್ಟಿರುವ ಬೆಳ್ಳಿ ವಸ್ತುಗಳನ್ನು ಕರಗಿಸಿ ಶುದ್ಧ ಬೆಳ್ಳಿ ಗಟ್ಟಿಗಳನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರಡು ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬೆಳ್ಳಿ ಕರಗಿಸುವ ಪ್ರಕ್ರಿಯೆಗೆ 3 ರಿಂದ 4 ದಿನ ಹಿಡಿಯಲಿದೆ. ಇದರಿಂದ ಬರುವ ಗಟ್ಟಿ ಬೆಳ್ಳಿ ಶೇ.100 ಶುದ್ಧ ಇರುವುದಿಲ್ಲ. ಸುಮಾರು ಶೇ.70 ರಿಂದ 80 ರಷ್ಟು ಶುದ್ಧ ಬೆಳ್ಳಿ ಬರಬಹುದು ಎಂದು ಪಬ್ಲಿಕ್ ಟಿವಿಗೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದರು.