ಚಾಮರಾಜನಗರ: ನಾಡಿನ ಪ್ರಸಿದ್ಧ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಬೆಳಗ್ಗೆ 8 ರಿಂದ 9 ರವರೆಗಿನ ಶುಭ ಲಗ್ನದಲ್ಲಿ ಯುಗಾದಿ ರಥೋತ್ಸವ ನಡೆಯಿತು.
ಯುಗಾದಿ ರಥೋತ್ಸವಕ್ಕೆ ರಾಜ್ಯ ಅಷ್ಟೇ ಅಲ್ಲದೇ, ತಮಿಳುನಾಡನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ಹರಕೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಉತ್ಸವ ಮೂರ್ತಿ ಇರಿಸಿ ಬೂದು ಕುಂಬಳಕಾಯಿ ದೃಷ್ಟಿ ತೆಗೆದು ಮಹಾಮಂಗಳಾರತಿ ಹಾಗೂ ಬೇಡಗಂಪಣ ಸಮುದಾಯದ ಹೆಣ್ಣುಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ಬಳಿಕವಷ್ಟೇ ಮಹಾ ರಥೋತ್ಸವ ಆರಂಭಗೊಂಡಿತು.
ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸೂರಿಪಾನಿ, ಛತ್ರಿ, ಚಾಮರ, ನಂದಿ ದ್ವಜ ಹಾಗೂ ಮಂಗಳವಾದ್ಯದೊಂದಿಗೆ ತೇರು ಎಳೆಯಲಾಯಿತು. ಹುಲಿವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ವಾಹನೋತ್ಸವವು ನಡೆಯಿತು. ವೀರಗಾಸೆ ಕುಣಿತ ಭಕ್ತಾದಿಗಳ ಗಮನ ಸೆಳೆಯಿತು. ಭಕ್ತರು ತೇರಿಗೆ ಹಣ್ಣು, ದವಸ ಧಾನ್ಯಗಳನ್ನು ಎಸೆದು ಮಾದಪ್ಪನ ಕೃಪೆಗೆ ಪಾತ್ರರಾದರು.
ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಜಾತ್ರೆಗೆ ಸಹಸ್ರಾರು ಮಂದಿ ಭಕ್ತರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದರು. ಪ್ರಾಧಿಕಾರದ ವತಿಯಿಂದ ನಿರಂತರ ಪ್ರಸಾದ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಸೇರಿ ಮೂಲಸೌಕರ್ಯ ಕಲ್ಪಿಸಿತ್ತು. ಜೊತೆಗೆ, ಯಾವುದೇ ಅಹಿತಕರ ಘಟನೆ ಆಗದಂತೆ ಜಿಲ್ಲಾ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿತ್ತು.
ಚಾಮರಾಜನಗರ: ಜಿಲ್ಲೆಯ ಹನೂರು (Hanuru) ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Hill) ಯುಗಾದಿ ಜಾತ್ರೆ ಹಿನ್ನಲೆಯಲ್ಲಿ 3 ದಿನ ಕಾಲ ಬೆಟ್ಟಕ್ಕೆ ತೆರಳುವ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಬೆಟ್ಟದಲ್ಲಿ ಯುಗಾದಿ ಜಾತ್ರೆ ಹಿನ್ನಲೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ ಮಾ. 29ರಿಂದ ಮಾ. 31ರವರೆಗೆ ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ, ಗೂಡ್ಸ್ ವಾಹನಗಳ ಪ್ರವೇಶ ನಿಷೇಧಿಸಿ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಭೂಕಂಪ – 144ಕ್ಕೇರಿದ ಸಾವಿನ ಸಂಖ್ಯೆ; ತುರ್ತು ಪರಿಸ್ಥಿತಿ ಘೋಷಣೆ
ಮಲೆ ಮಹದೇಶ್ವರನ ಹುಂಡಿಯಲ್ಲಿ 2.90 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದು ಕಳೆದ ಒಂದು ತಿಂಗಳ ಅವಧಿಯಲ್ಲಿ ಭಕ್ತರು ಮಹದೇಶ್ವರನಿಗೆ ನಗದು ರೂಪದಲ್ಲಿ ಒಟ್ಟು 2,90,00,732 ರೂಪಾಯಿ ಕಾಣಿಕೆ ಸಮರ್ಪಿಸಿದ್ದಾರೆ.
ಈ ಪೈಕಿ 13 ಲಕ್ಷ ರೂ.ಗೂ ಹೆಚ್ಚು ಹಣ ನಾಣ್ಯಗಳ ರೂಪದಲ್ಲೇ ಕಾಣಿಕೆ ಸಲ್ಲಿಸಿರುವುದು ವಿಶೇಷವಾಗಿದೆ. ನಗದು ಜೊತೆಗೆ 102 ಗ್ರಾಂ ಚಿನ್ನ, 3 ಕೆಜಿ 155 ಗ್ರಾಂ ಬೆಳ್ಳಿಯನ್ನು ಭಕ್ತರ ಮಾದಪ್ಪನಿಗೆ ಅರ್ಪಿಸಿದ್ದಾರೆ. ಇದಲ್ಲದೇ 23 ಅಮೆರಿಕನ್ ಡಾಲರ್, ಕೆನಡಾದ 100 ಡಾಲರ್, ಓಮನ್ ದೇಶದ 4 ರಿಯಾಲ್ ನೋಟುಗಳು ಸಹ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿವೆ.
ಮೈಸೂರು: ಮಲೆ ಮಾದಪ್ಪನ ದರ್ಶನಕ್ಕೆಂದು ತೆರಳಿದ್ದ ಟಂಟಂ ವಾಹನ (Tum Tum) ಪಲ್ಟಿಯಾದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ಘಟನೆಯಲ್ಲಿ ದರ್ಶನ್ (20) ಮೃತಪಟ್ಟಿದ್ದಾನೆ. ಮೈಸೂರಿನ ಟಿ ನರಸೀಪುರ ಮುಖ್ಯರಸ್ತೆಯ ಮೆಗಳಾಪುರ ಬಳಿ ಘಟನೆ ನಡೆದಿದೆ. ದರ್ಶನ್ ಸೇರಿದಂತೆ ಕೆಲ ಯುವಕರು ಮಲೈ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನ ಪಲ್ಟಿಯಾಗಿದೆ. ಇದನ್ನೂ ಓದಿ: 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಗೆ ಹಠಾತ್ ಬ್ರೇಕ್ – ಇಬ್ಬರ ದುರ್ಮರಣ
ಚಾಮರಾಜನಗರದ: ನಗರದ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ (Male Mahadeshwara Hill) ಅಭಿವೃದ್ಧಿಗೆ (Development) ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಮಂಗಳವಾರ ತಿಳಿಸಿದ್ದಾರೆ.
ಬೊಮ್ಮಾಯಿ ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮಲೆಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಬೆಟ್ಟಕ್ಕೆ ಭಕ್ತಾದಿಗಳು ಹೆಚ್ಚಾಗಿ ಬರುತ್ತಿದ್ದು, ಪ್ರತಿದಿನ 10-20 ಸಾವಿರ ಜನರು ಭೇಟಿ ನೀಡುತ್ತಿದ್ದಾರೆ. ಅಮಾವಾಸ್ಯೆ, ಹುಣ್ಣಿಮೆ ದಿನಗಳಂದು, ವಾರಾಂತ್ಯಗಳಲ್ಲಿ ಇನ್ನೂ ಹೆಚ್ಚಾಗಿ ಬರುತ್ತಾರೆ. ಜಾತ್ರೆಗಳು ನಡೆಯುವ ವೇಳೆ ಲಕ್ಷಾಂತರ ಜನರು ಸೇರುತ್ತಾರೆ. ಇಲ್ಲಿ 159 ಎಕರೆ ಪ್ರದೇಶವಿದ್ದು, ಇನ್ನೂ 70 ಎಕರೆ ಬಳಕೆಯಾಗಿಲ್ಲ. 80 ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳನ್ನು ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ. ಮೂಲ ದೇವಸ್ಥಾನದ 70 ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ಧವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು ನಿರ್ಮಿಸಬೇಕು. ಸುಮಾರು 5 ಸಾವಿರ ಜನರು ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.
ಮೂರ್ತಿ ಅನಾವರಣ:
ಮಲೆಮಹದೇಶ್ವರನ ಮೂರ್ತಿ ಪೂರ್ಣಗೊಂಡಿದ್ದು, ಅದು ಮುಂದಿನ ತಿಂಗಳು ಅನಾವರಣವಾಗಲಿದೆ. ಹಲವಾರು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದರು.
ಸಂಪರ್ಕ ರಸ್ತೆಗೆ 100 ಕೋಟಿ:
ಮಲೆಮಹದೇಶ್ವರ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಬಹಳ ಪ್ರಮುಖವಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು 100 ಕೋಟಿ ರೂ. ಮಲೆಮಹದೇಶ್ವರ ಬೆಟ್ಟ ಹಾಗೂ ಕ್ಷೇತ್ರದ ಎರಡೂ ಬದಿಗಳಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ನೀಡಲಾಗುವುದು. ಒಟ್ಟಾರೆ ಮಲೆಮಹದೇಶ್ವರ ಬೆಟ್ಟದ ಯೋಜನಾಬದ್ಧವಾದ ಅಭಿವೃದ್ಧಿ ಸರ್ಕಾರದ ಮುಂದಿರುವ ಗುರಿಯಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಕ್ಷೇತ್ರದಲ್ಲಿ ಭಕ್ತಾದಿಗಳ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು. ಶ್ರೀ ಕ್ಷೇತ್ರದಲ್ಲಿ ದೇವರ ಸನ್ನಿಧಾನಕ್ಕೆ ಸಾಲುಗಟ್ಟಿ ನಿಲ್ಲುವ ಭಕ್ತರಿಗೆ ನೆರಳು ಹಾಗೂ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಕರ್ಯಗಳನ್ನು ಕಲ್ಪಿಸಲು ಅನುಮೋದನೆಯನ್ನು ನೀಡಲಾಗಿದೆ ಎಂದರು. ಇದನ್ನೂ ಓದಿ: ಚಾಮರಾಜನಗರಕ್ಕೆ ಹೋಗಬಾರದು ಅಂತಾರೆ, ಇಲ್ಲಿಗೆ ಬಂದಿರುವ ನಾನೇ ಪುಣ್ಯವಂತ: ಬೊಮ್ಮಾಯಿ
ಹುಲಿ ಯೋಜನೆ:
ಹುಲಿ ಯೋಜನೆಯ ಪ್ರಸ್ತಾಪ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇಲ್ಲಿನ ಜನವಸತಿಗೆ ಯಾವುದೇ ರೀತಿಯ ತೊಂದರೆಯಾಗುವ ಬಗ್ಗೆ ಕೆಲವು ಸಂದೇಹಗಳು ವ್ಯಕ್ತವಾಗಿದೆ. ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.
ಗಡಿ ವಿಚಾರ – ರಾಜ್ಯ ಅಚಲ ನಿಲುವು:
ನಾಳೆ ನವದೆಹಲಿಯ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿ ವಿಚಾರದ ಬಗ್ಗೆ ಚರ್ಚಿಸಲು ಬೆಳಗಾವಿ ಉಸ್ತುವಾರಿ ಸಚಿವರು, ಎಜಿ, ಗೃಹಸಚಿವರು ಇರಲಿದ್ದಾರೆ. ರಾಜ್ಯ ಪುನರ್‌ರಚನೆ ನಂತರದ ಎಲ್ಲಾ ಬೆಳವಣಿಗೆಗಳು, ಗಡಿಗಳ ಬಗ್ಗೆ ರಾಜ್ಯದ ಅಚಲವಾದ ನಿಲುವನ್ನು ನಾಳಿನ ಸಭೆಯಲ್ಲಿ ಪುನಃ ಪ್ರತಿಪಾದಿಸಲಾಗುವುದು ಎಂದರು. ಇದನ್ನೂ ಓದಿ: ಡಿಸೆಂಬರ್ 15ಕ್ಕೆ ಜೆಪಿ ನಡ್ಡಾ ರಾಜ್ಯಕ್ಕೆ ಎಂಟ್ರಿ – 10 ಜಿಲ್ಲೆಗಳಲ್ಲಿ ಪಕ್ಷದ ನೂತನ ಕಾರ್ಯಾಲಯಗಳ ಉದ್ಘಾಟನೆ
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಸ್ವಾಮಿ (Male Mahadeshwara Hill) ದೇವಾಲಯ ಹುಂಡಿಯಲ್ಲಿ (Hundi) 2.50 ಕೋಟಿ ರೂಪಾಯಿ ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ.
ಚಾಮರಾಜನಗರ (Chamarajanagara) ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಹುಂಡಿ ಎಣಿಕೆ ನಡೆಸಲಾಯಿತು. ಈ ವೇಳೆ ಹುಂಡಿಯಲ್ಲಿ 2.50 ಕೋಟಿ ರೂಪಾಯಿಗು ಹೆಚ್ಚು ಹಣ ಸಂಗ್ರಹವಾಗಿದೆ. ತಡರಾತ್ರಿವರೆಗೂ ನಡೆದ ಹುಂಡಿ ಎಣಿಕೆ ನಡೆದಿದ್ದು, 2,50,85,794 ರೂಪಾಯಿ ನಗದು, 122 ಗ್ರಾಂ ಚಿನ್ನ, 2.71 ಕೆ.ಜಿ ಬೆಳ್ಳಿ ಸಂಗ್ರಹವಾಗಿದೆ. ಕಳೆದ 36 ದಿನಗಳ ಅವಧಿಯಲ್ಲಿ ಭಕ್ತರು ಸಲ್ಲಿಸಿದ ಕಾಣಿಕೆ ಇದಾಗಿದ್ದು, 14 ಲಕ್ಷ ರೂಪಾಯಿಗೂ ಹೆಚ್ಚು ಹಣ ನಾಣ್ಯದ ರೂಪದಲ್ಲಿ ಕಾಣಿಕೆಯನ್ನು ಭಕ್ತರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಗುಜರಾತ್ ಚುನಾವಣೆ – ಮಾಜಿ ಪತ್ರಕರ್ತ, ಟಿವಿ ಆ್ಯಂಕರ್ ಇಸುದನ್ ಗಧ್ವಿ ಎಎಪಿ ಸಿಎಂ ಅಭ್ಯರ್ಥಿ
ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ವರ್ಷಕ್ಕೆ ಮೂರು ಬಾರಿ ನಡೆಯವ ಜಾತ್ರೆ ಹಾಗು ಪ್ರತಿ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಹದೇಶ್ವರನ ಸನ್ನಿಧಿಗೆ ಬರುತ್ತಾರೆ. ದೇವಾಲಯ ಒಳಾಂಗಣದಲ್ಲಿ ಹುಂಡಿಗಳನ್ನು ಇಡಲಾಗಿದ್ದು, ಭಕ್ತರು ಹುಂಡಿಗಳಲ್ಲೇ ಹಾಕಿ ತಮ್ಮ ಕಾಣಿಕೆ ಸಲ್ಲಿಸಬೇಕಿತ್ತು. ನೂಕು ನುಗ್ಗಲಿನ ಕಾರಣ ಕಾಣಿಕೆ ಸಲ್ಲಿಸಲು ಸಹ ಹಲವು ರೀತಿಯ ಅಡಚಣೆಗಳು ಎದುರಾಗುತ್ತಿದ್ದವು. ಆದರೀಗ ಇ-ಹುಂಡಿ ಸ್ಥಾಪನೆ ಮಾಡಲಾಗಿದ್ದು, ಈ ಮೂಲಕ ಕೂಡ ಭಕ್ತರು ಕಾಣಿಕೆಯನ್ನು ಸಲ್ಲಿಸಬಹುದಾಗಿದೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಅತೀ ವೇಗದಲ್ಲಿ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ 20 ಅಡಿ ಆಳದ ಹಳ್ಳಕ್ಕೆ ಬಿದ್ದ ಘಟನೆ ಹನೂರು(Hanuru) ಪಟ್ಟಣದ ಬಳಿ ನಡೆದಿದೆ.
ಬೆಂಗಳೂರಿನ(Bengaluru) ಅತ್ತಿಬೆಲೆಯಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ(Male Mahadeshwara Hill) ಐದು ಮಂದಿ ಬಾಡಿಗೆ ಕಾರಿನಲ್ಲಿ ಬರುತ್ತಿದ್ದರು. ನಸುಕಿನ ಜಾವ ಮೂರು ಗಂಟೆಯ ವೇಳೆ ನಿಯಂತ್ರಣ ತಪ್ಪಿದ ಕಾರು ಹನೂರು ಪಟ್ಟಣದ ಸ್ವಾಮಿ ಹಳ್ಳಕ್ಕೆ ಬಿದ್ದಿದೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ 1 ಕೋಟಿ ರೂ. ದೇಣಿಗೆ ನೀಡಿದ ಮುಸ್ಲಿಂ ದಂಪತಿ
ಸಣ್ಣ ಪುಟ್ಟ ಗಾಯಗೊಂಡಿರುವ ಐವರನ್ನು ಹನೂರಿನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಹನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಮಾದಪ್ಪನ ದರ್ಶನ ಪಡೆಯಲು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಾರೆ. ದಟ್ಟಾರಣ್ಯದಲ್ಲಿ ಕಲ್ಲುಮುಳ್ಳಿನ ಹಾದಿ ನಡುವೆಯೂ ಮಹದೇಶ್ವರನ ದರ್ಶನ ಮಾಡುತ್ತಾರೆ. ಇದನ್ನರಿತ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗೆ ಗುಡ್ ನ್ಯೂಸ್‍ವೊಂದನ್ನು ನೀಡುತ್ತಿದೆ.
ಹೌದು ರಾಜ್ಯದಲ್ಲಿರುವ ದೇಗುಲಗಳಲ್ಲಿ ಅತೀ ಹೆಚ್ಚು ಆದಾಯ ಬರುವ ಎರಡನೇ ದೇವಾಲಯ ಎಂದರೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ದೇವಸ್ಥಾನ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡಿ ಮಾದಪ್ಪನ ದರ್ಶನ ಪಡೆದು ಧನ್ಯರಾಗುತ್ತಾರೆ. ಅದರಲ್ಲೂ ದೀಪಾವಳಿ, ಶಿವರಾತ್ರಿ ಹಬ್ಬದ ವೇಳೆಯಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ. ಈ ಸಮಯದಲ್ಲಿ ಭಕ್ತರು ಹರಕೆ ಮಾಡಿಕೊಂಡು ಮಂಡ್ಯ, ಮೈಸೂರು, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳಿಂದ ಮಲೆ ಮಹದೇಶ್ವರ ದೇವಸ್ಥಾನಕ್ಕೆ ದಟ್ಟ ಕಾಡಿನ ನಡುವೆ ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ಕಾಡಿನ ನಡುವೆ ಕೆಲವು ಕಡೆ ದುರ್ಗಮ ಹಾದಿಗಳಿವೆ. ಈ ಹಾದಿಯಲ್ಲಿ ಭಕ್ತರು ನಡೆಯಲು ಸಾಕಷ್ಟು ಪ್ರಯಾಸ ಪಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಮಲೆ ಮಹದೇಶ್ವರ ಪ್ರಾಧಿಕಾರದವರು ಕಾಡಿನ ನಡುವೆ ದುರ್ಗಮ ಹಾದಿ ಇರುವ ಕಡೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡುವ ಕೆಲಸಕ್ಕೆ ಮುಂದಾಗಿದೆ.
ಮಲೆ ಮಹದೇಶ್ವರ ಪ್ರಾಧಿಕಾರ ಈಗಾಗಲೇ ಮೆಟ್ಟಿಲು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಅಂದಾಜು 25 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಟ್ಟಿಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ತಾಳ ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗೂ 7 ಕಿ.ಮೀ ಮೆಟ್ಟಿಲು ನಿರ್ಮಾಣವಾಗುತ್ತಿದೆ. ಈಗಾಗಲೇ 2 ಕಿಮೀ ನಷ್ಟು ಮೆಟ್ಟಿಲು ಮಾಡುವ ಕೆಲಸ ನಡೆದಿದೆ. ಇನ್ನೆರಡು ತಿಂಗಳಲ್ಲಿ ಮೆಟ್ಟಿಲು ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: 12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್? – ಭಾರತದಲ್ಲಿ ಯಾವ ಕಂಪನಿಯ ಪಾಲು ಎಷ್ಟಿದೆ?
ಈ ಕುರಿತಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಭಕ್ತರೊಬ್ಬರು, ಈ ಕಾಡಿನಲ್ಲಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಭಕ್ತರಿಗೂ ಸಂತಸ ತಂದಿದೆ. ಇಷ್ಟು ವರ್ಷ ನಾವು ಕಾಡಿನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಲೆಕ್ಕಿಸದೇ ನಡೆಯುತ್ತಿದ್ದೆವು. ಈ ವೇಳೆ ಕಲ್ಲು ಬಡಿದು ಕಾಲಿಗೆ ಗಾಯವಾಗಿರುವ ಉದಾಹರಣೆ ಸಹ ಇವೆ. ಸದ್ಯ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದರಿಂದ ಈ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ನಾವು ಸಹ ಆರಾಮಾಗಿ ಕಾಡಿನ ಮಧ್ಯೆ ನಡೆದು ಹೋಗಬಹುದು ಎಂದು ಹೇಳುತ್ತಾರೆ.
ಒಟ್ಟಾರೆ ಭಕ್ತರ ಅನುಕೂಲಕ್ಕಾಗಿ ಮೆಟ್ಟಿಲು ನಿರ್ಮಾಣ ಮಾಡುತ್ತಿರುವುದು ಮಾದಪ್ಪನ ಭಕ್ತರಿಗೆ ಖುಷಿ ನೀಡಿದೆ. ಇಷ್ಟು ದಿನ ಕಾಡಿನ ದುರ್ಗಮ ಹಾದಿಯಲ್ಲಿ ನಡೆದು ಮಾದಪ್ಪನ ದರ್ಶನ ಪಡೆಯುತ್ತಿದ್ದ ಭಕ್ತರು ಇನ್ಮುಂದೆ ಕಾಡಿನ ನಡುವೆ ಸಹಾ ಸುಗಮ ಹಾದಿಯಲ್ಲಿ ಸಾಗಬಹುದಾಗಿದೆ. ಇದನ್ನೂ ಓದಿ: ಪಿಎಸ್‍ಐ ಆಯ್ತು, ಇದೀಗ ಕೆಪಿಟಿಸಿಎಲ್ ಎಕ್ಸಾಂನಲ್ಲಿ ಗೋಲ್‍ಮಾಲ್
Live Tv
[brid partner=56869869 player=32851 video=960834 autoplay=true]
ಚಾಮರಾಜನಗರ: ಮಹಾ ಶಿವರಾತ್ರಿ ಆಚರಣೆಯು ಜಿಲ್ಲೆಯಲ್ಲಿ ಕಳೆಗಟ್ಟಿದ್ದು ವಿವಿಧ ದೇವಾಲಯಗಳಿಗೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬರುತ್ತಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಂತೂ ಭಕ್ತ ಸಾಗರವೇ ಜಮಾಯಿಸಿದೆ.
ಮಲೆ ಮಹದೇಶ್ವರ ಬೆಟ್ಟದ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾರಿಗಳಿಂದ ಮಲೆ ಮಹದೇಶ್ವರ ದೇವಾಲಯ ಕಂಗೊಳಿಸುತ್ತಿದೆ. ಇದನ್ನೂ ಓದಿ: 23,000 ರುದ್ರಾಕ್ಷಿ ಬಳಸಿ ಶಿವನ ಶಿಲ್ಪಕಲೆ – ಕಲಾವಿದನ ಕೈಚಳಕಕ್ಕೆ ಮನಸೋತ ನೆಟ್ಟಿಗರು
ಇಂದು ಮಲೆ ಮಹದೇಶ್ವರನಿಗೆ ಎಣ್ಣೆಮಜ್ಜನ ಸೇವೆ, ವಿಶೇಷ ಸೇವೆ ನಡೆದಿದ್ದು, ಸಂಜೆ ಹೊತ್ತಿಗೆ ಉತ್ಸವಗಳು ಜರುಗಲಿವೆ. ಬುಧವಾರ ಅಮಾವಾಸ್ಯೆ ವಿಶೇಷ ಪೂಜೆ, ಗುರುವಾರ ಬೆಳಗ್ಗೆ 8.10 ರಿಂದ 8.45ಕ್ಕೆ ಸಲ್ಲುವ ಶುಭ ಮುಹೂರ್ತದಲ್ಲಿ ಮಾದೇಶ್ವರ ಸ್ವಾಮಿಯ ಮಹಾ ರಥೋತ್ಸವ ನೆರವೇರಲಿದೆ. ಅದೇ ದಿನ ರಾತ್ರಿ ಅಭಿಷೇಕ ಮುಗಿದ ಬಳಿಕ ನಡೆಯುವ ಕೊಂಡೋತ್ಸದೊಂದಿಗೆ ಈ ಬಾರಿಯ ಶಿವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ. ಇದನ್ನೂ ಓದಿ: ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ
ಚಾಮರಾಜನಗರ: ಮೈಸೂರಿನ ಚಾಮುಂಡಿ ಬೆಟ್ಟದ ಬಳಿಕ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿ ಕೆಲತಾಸು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಕಳೆದ ಒಂದು ವಾರದಿಂದ ಭರ್ಜರಿ ಮಳೆಯಾಗುತ್ತಿದ್ದು, ಮಲೆಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ಹೋಗುವ ಪಾಲಾರ್ ಮಾರ್ಗದಲ್ಲಿ ಭೂ ಕುಸಿತ ಉಂಟಾಗಿ ಭತ್ತ ಕಟಾವು ಯಂತ್ರ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಜೆಸಿಬಿ ಸಹಾಯದಿಂದ ಕುಸಿತ ಉಂಟಾದ ಸ್ಥಳದಲ್ಲಿ ಕಲ್ಲು, ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ರಮೇಶ್‌ಕುಮಾರ್‌ನ ಜೈಲಿಗೆ ಕಳುಹಿಸುತ್ತೇನೆ – ಸುಧಾಕರ್ ಶಪಥ
2019ರಲ್ಲೂ ಜೋರು ಮಳೆಯಿಂದಾಗಿ ಸುಮಾರು 10 ಕಡೆ ಭೂ ಕುಸಿತ ಉಂಟಾಗಿ ಆತಂಕ ಸೃಷ್ಟಿಯಾಗಿತ್ತು. ಸದ್ಯ ಮಳೆಯಿಂದಾಗಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ಕೆಲ ಕಾಮಗಾರಿಗೂ ಅಡಚಣೆ ಉಂಟಾಗಿದೆ. ಇದನ್ನೂ ಓದಿ:ಭಾರೀ ಮಳೆ – ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತ