Tag: Male

  • ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತ ಆಗಿರಲಿ: ಯಾರಿಗಾಗಿ ಬರೆದರು ಕಂಗನಾ?

    ಲೈಂಗಿಕ ಆದ್ಯತೆಗಳು ಹಾಸಿಗೆಗೆ ಸೀಮಿತ ಆಗಿರಲಿ: ಯಾರಿಗಾಗಿ ಬರೆದರು ಕಂಗನಾ?

    ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ (Kangana Ranaut), ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಪೋಸ್ಟ್ ಹಾಕಿ ಬೆಂಕಿ ಹಾಕುತ್ತಲೇ ಇರುತ್ತಾರೆ. ಒಂದೊಂದು ಸಲ ಆ ಬೆಂಕಿ ಯಾರಿಗೋ ತಟ್ಟುತ್ತದೆ. ಮತ್ತೊಂದು ಸಾರಿ ತಟ್ಟದೇ ಆರುತ್ತದೆ. ಈ ಬಾರಿಯೂ ಟ್ವಿಟರ್ (Twitter) ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿರುವ ಅವರು, ಅದನ್ನು ಯಾರಿಗೆ ಹೇಳಿದ್ದಾರೆ ಎನ್ನುವುದನ್ನು ಮಾತ್ರ ಗೌಪ್ಯವಾಗಿ ಇಟ್ಟಿದ್ದಾರೆ.

    ಕೆಲವು ವಿಚಾರಗಳಲ್ಲಿ ಕಂಗನಾ ರಣಾವತ್ ನೇರ, ದಿಟ್ಟ. ಯಾರಿಗೆ ತಮ್ಮ ಮಾತು ತಲುಪಬೇಕಿತ್ತೋ ಅದನ್ನು ನೇರವಾಗಿಯೇ ತಲುಪಿಸುತ್ತಾರೆ. ಅದರಲ್ಲೂ ಕರಣ್ ಜೋಹಾರ್ ಬಗ್ಗೆ ನೇರವಾಗಿಯೇ ರಣಕಣಕ್ಕೆ ಆಹ್ವಾನಿಸುತ್ತಾರೆ. ಆದರೆ, ಕೆಲವರ ವಿಚಾರದಲ್ಲಿ ಪರೋಕ್ಷವಾಗಿ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಗಾಗಿ ಇವತ್ತು ಬರೆದ ಬೆಡ್, ಹಾಸಿಗೆ, ಲೈಂಗಿಕ ವಿಚಾರ ಯಾರ ಮೇಲಿನ ಪ್ರಸ್ತಾಪ ಎನ್ನುವುದು ಗೊತ್ತಾಗಿಲ್ಲ. ಇದನ್ನೂ ಓದಿ:ನೆಗೆಟಿವ್ ರೋಲ್ ಮಾಡಿದ್ದಕ್ಕೆ ಮದುವೆ ಸಂಬಂಧ ಕ್ಯಾನ್ಸಲ್- ನಟಿ ಅನಿಕಾ ಸಿಂಧ್ಯ

    ಹೆಣ್ಣು (Female)  ಗಂಡು (Male) ತಾರತಮ್ಯದ ಬಗ್ಗೆಯೂ ಮಾತನಾಡಿದ ಅವರು, ನಮ್ಮ ವೃತ್ತಿಯ ಮೇಲೆಯೇ ನಮ್ಮ ಐಡೆಂಟಿಟಿ ನಿರ್ಧಾರವಾಗುತ್ತದೆ. ಯಾರೂ ಈಗ ನಟಿ, ನಿರ್ದೇಶಕಿ ಎಂದು ಕರೆಯುವುದಿಲ್ಲ. ಕಲಾವಿದರು ಮತ್ತು ನಿರ್ದೇಶಕರು ಎನ್ನುತ್ತಾರೆ. ಜಗತ್ತು ನೀವು ಏನು ಮಾಡುತ್ತೀರಿ ಎನ್ನುವುದರ ಮೇಲೆ ನಿಮ್ಮನ್ನು ನಿರ್ಧರಿಸುತ್ತದೆ ಹೊರತು, ನೀವು ಬೆಡ್ ಮೇಲೆ ಏನು ಮಾಡಿದ್ದೀರಿ ಎನ್ನುವುದರ ಮೇಲಲ್ಲ’ ಎಂದು ಬರೆದುಕೊಂಡಿದ್ದಾರೆ.

    ಲೈಂಗಿಕ ಆದ್ಯತೆಗಳು ಅವು  ಕೇವಲ ಹಾಸಿಗೆಗೆ ಮಾತ್ರ ಸೀಮಿತವಾಗಿರಲಿ. ಅದೇ ನಿಮ್ಮ ಗುರುತಾಗಬಾರದು ಎಂದು ಮಾರ್ಮಿಕವಾಗಿ ಕಂಗನಾ ಬರೆದುಕೊಂಡಿದ್ದಾರೆ. ಈ ಕುರಿತಂತೆ ಹಲವರು ಹಲವು ರೀತಿಯಲ್ಲಿ ಕಂಗನಾಗೆ ಪ್ರಶ್ನೆ ಮಾಡಿದ್ದಾರೆ. ಏನನ್ನು ನೀವು ನೇರವಾಗಿ ಹೇಳುವುದಕ್ಕೆ ಹೊರಟಿದ್ದೀರೋ, ಅದನ್ನು ನೇರವಾಗಿ ಹೇಳಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

  • ಮಾಲ್ಡೀವ್ಸ್‌ನಲ್ಲಿ ಭೀಕರ ಅಗ್ನಿ ದುರಂತ – 9 ಮಂದಿ ಭಾರತೀಯರು ಸಾವು

    ಮಾಲ್ಡೀವ್ಸ್‌ನಲ್ಲಿ ಭೀಕರ ಅಗ್ನಿ ದುರಂತ – 9 ಮಂದಿ ಭಾರತೀಯರು ಸಾವು

    ಮಾಲೆ: ಬೇರೆ ಬೇರೆ ದೇಶಗಳಿಂದ ಕೆಲಸಕ್ಕಾಗಿ ಬಂದು ಮಾಲ್ಡೀವ್ಸ್ (Maldives) ರಾಜಧಾನಿ ಮಾಲೆಯಲ್ಲಿ (Male) ವಾಸವಾಗಿದ್ದವರ ಇಕ್ಕಟ್ಟಾದ ವಸತಿಗೃಹಗಳಲ್ಲಿ ಅಗ್ನಿ ಅವಘಡ ಕಾಣಿಸಿಕೊಂಡಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ನೆಲ ಮಹಡಿಯಲ್ಲಿ ವಾಹನಗಳನ್ನು ರಿಪೇರಿ ಮಾಡುವ ಗ್ಯಾರೇಜ್‍ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯನ್ನು ನಂದಿಸಲು ಸುಮಾರು ನಾಲ್ಕು ಗಂಟೆಗಳ ಕಾಲ ಬೇಕಾಯಿತು. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಇದೀಗ ಕಟ್ಟಡದ ಮೇಲಿನ ಮಹಡಿಯಿಂದ 10 ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತರಲ್ಲಿ ಒಂಬತ್ತು ಮಂದಿ ಭಾರತ ಮೂಲದವಾರಗಿದ್ದು, ಓರ್ವ ಬಾಂಗ್ಲಾದೇಶದ ಪ್ರಜೆಯಾಗಿದ್ದಾನೆ ಎಂದು ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ- ವಿವಾದಿತ ವಸ್ತುವಿನ ರಕ್ಷಣೆ ವಿಸ್ತರಣೆಗೆ ಮನವಿ

    ಘಟನೆ ಕುರಿತಂತೆ ಮಾಲ್ಡೀವ್ಸ್‍ನಲ್ಲಿರುವ ಭಾರತದ ಹೈಕಮಿಷನ್ ಅಗ್ನಿ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದೆ. ಮಾಲೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನಮ್ಮ ಭಾರತೀಯ ಮೂಲದ ಪ್ರಜೆಗಳು ಸೇರಿದಂತೆ ಹಲವರು ಸಾವನ್ನಪ್ಪಿದ್ದಾರೆ. ನಾವು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಹೈಕಮಿಷನ್ ಟ್ವೀಟ್ ಮಾಡಿದೆ. ಇದನ್ನೂ ಓದಿ: ಗುಜರಾತ್ ವಿಧಾನಸಭೆ ಚುನಾವಣೆ – 14 ಮಂದಿ ಮಹಿಳೆಯರು ಸೇರಿ 160 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ

    ಬೇರೆ ಬೇರೆ ದೇಶದಿಂದ ಇಲ್ಲಿಗೆ ಬಂದಿದ್ದ ಮತ್ತು ಮಾಲ್ಡೀವ್ಸ್‍ನಲ್ಲಿ ವಾಸವಾಗಿದ್ದ ಉದ್ಯೋಗಿಗಳು ಈ ಕಟ್ಟದಲ್ಲಿ ಅರ್ಧದಷ್ಟು ಜನ ಇದ್ದರು ಮತ್ತು ಹೆಚ್ಚಾಗಿ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದಿಂದ ಬಂದವರು ಎಂದು ಹೇಳಲಾಗುತ್ತದೆ. ಯಾವುದೇ ಸಹಾಯಕ್ಕಾಗಿ, HCI ಅನ್ನು ಈ ಸಂಖ್ಯೆಗಳಲ್ಲಿ ಸಂಪರ್ಕಿಸಿ ಎಂದು +9607361452 ; +9607790701 ಮಾಲ್ಡೀವ್ಸ್ ಟ್ವೀಟ್ ಮಾಡಿದೆ.

    ದ್ವೀಪಗಳ ರಾಜಧಾನಿ, ರಜೆಯನ್ನು ಕಳೆಯಲು ಮತ್ತು ಉನ್ನತ ಮಾರುಕಟ್ಟೆಯನ್ನು ಹೊಂದಿರುವ ಮಾಲ್ಡೀವ್ಸ್ ಪ್ರಸಿದ್ಧ ತಾಣವಾಗಿದ್ದು, ಇದು ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಚುನಾಯಿತರಾಗಿದ್ದು ಮಹಿಳೆಯರು; ಆದ್ರೆ ಪ್ರಮಾಣವಚನ ಸ್ವೀರಿಸಿದ್ದು ಪತಿ, ತಂದೆ – ಅಧಿಕಾರಿ ಅಮಾನತು

    ಚುನಾಯಿತರಾಗಿದ್ದು ಮಹಿಳೆಯರು; ಆದ್ರೆ ಪ್ರಮಾಣವಚನ ಸ್ವೀರಿಸಿದ್ದು ಪತಿ, ತಂದೆ – ಅಧಿಕಾರಿ ಅಮಾನತು

    ಭೋಪಾಲ್: ಮಧ್ಯಪ್ರದೇಶದ ಕೆಲವು ಗ್ರಾಮಗಳಲ್ಲಿ ಹೊಸದಾಗಿ ಮಹಿಳಾ ಪಂಚಾಯತ್ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ಆದರೆ ಚುನಾಯಿತ ಮಹಿಳೆಯರು ಪ್ರಮಾಣ ವಚನ ಸ್ವೀಕರಿಸದೇ ಅವರ ಪುರುಷ ಸಂಬಂಧಿಗಳಿಗೆ ಪ್ರಮಾಣ ವಚನ ಬೋಧಿಸಲಾಗಿದೆ.

    ಸಾಗರ್ ಹಾಗೂ ದಾಮೋಹ್ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಚುನಾಯಿತ ಮಹಿಳೆಯರ ತಂದೆ ಹಾಗೂ ಪತಿ ಸೇರಿದಂತೆ ಪುರುಷ ಸಂಬಂಧಿಗಳು ಪ್ರಮಾಣ ವಚನ ಸ್ವೀಕರಿಸಿದ್ದು, ಇದರ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವೀಡಿಯೋ ಹೊರಬೀಳುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.

    ಸಾಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಚುನಾಯಿತ ಮಹಿಳೆಯರ ಪತಿ, ತಂದೆ, ಸೋದರ ಮಾವ ಸೇರಿದಂತೆ ಪುರುಷ ಸಂಬಂಧಿಕರಿಗೆ ಪ್ರಮಾಣ ವಚನ ಬೋಧಿಸಿದ ಆರೋಪದ ಮೇಲೆ ಜೈಸಿನಗರ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆಶಾರಾಮ್ ಸಾಹು ಅವರನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಬಂದಾಗ ಮಾತ್ರ ರಸ್ತೆ ಮಾಡಿಸ್ತೀರಾ; ನಮ್ಮ ಮಕ್ಕಳು ಒಳ್ಳೆ ರಸ್ತೆಯಲ್ಲಿ ಓಡಾಡಬಾರದಾ – ಪ್ರಕಾಶ್‌ ರಾಜ್‌ ಪ್ರಶ್ನೆ

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಶಾರಾಮ್ ಸಾಹು, ಚುನಾಯಿತ ಮಹಿಳೆಯರು ಪ್ರಮಾಣ ವಚನ ಸ್ವೀಕಾರದ ಕಾರ್ಯಕ್ರಮಕ್ಕೆ ಹಾಜರಾಗುವಲ್ಲಿ ವಿಳಂಬವಾಗಿತ್ತು. ಅವರಿಗೆ ಮತ್ತೆ ಹಾಜರಾಗುವಂತೆ ಸೂಚನೆಯನ್ನೂ ನೀಡಲಾಗಿತ್ತು. ಆದರೆ ಕೊನೆಯಲ್ಲಿ ಅವರ ಪರವಾಗಿ ಅವರ ಕುಟುಂಬದ ಸದಸ್ಯರಿಗೆ ಪ್ರಮಾನವಚನ ಸ್ವೀಕರಿಸಲು ಅವಕಾಶ ನೀಡಲಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಪು, ಬಿಳಿ, ಹಸಿರು ಎಂದು ಬಾವುಟದ ಬಣ್ಣ ತಪ್ಪಾಗಿ ಹೇಳಿದ ಸಿದ್ದರಾಮಯ್ಯ

    ಜೈಸಿನಗರ ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತರಾದ 10 ಮಹಿಳೆಯರಲ್ಲಿ ಒಬ್ಬರ ತಂದೆ, ಇಬ್ಬರ ಗಂಡಂದಿರು ಮತ್ತು ಇನ್ನೊಬ್ಬ ಮಹಿಳೆಯ ಸೋದರ ಮಾವ ಚುನಾಯಿತ ಸದಸ್ಯರ ಬದಲಿಗೆ ಪ್ರಮಾಣವಚನ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.

    Live Tv
    [brid partner=56869869 player=32851 video=960834 autoplay=true]

  • ನೀವು ಬರಬೇಡಿ.. ನಿಮ್ಮ ಮನೆಯ ಪುರುಷರನ್ನು ಕೆಲಸಕ್ಕೆ ಕಳಿಸಿ: ಮಹಿಳಾ ಉದ್ಯೋಗಿಗಳಿಗೆ ತಾಲಿಬಾನ್‌ ಸೂಚನೆ

    ಕಾಬೂಲ್: ಅಫ್ಘಾನಿಸ್ತಾನದ ಮಹಿಳಾ ಉದ್ಯೋಗಿಗಳಿಗೆ ತಮ್ಮ ಕೆಲಸ ಮಾಡಲು ಪುರುಷ ಸಂಬಂಧಿಯನ್ನು ಕಳುಹಿಸುವಂತೆ ತಾಲಿಬಾನ್‌ ಸೂಚನೆ ನೀಡಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

    ಈ ಕುರಿತು ಮಾತನಾಡಿರುವ ಮಹಿಳಾ ಉದ್ಯೋಗಿಯೊಬ್ಬರು, ನಿಮ್ಮ ಬದಲಿಗೆ ಮನೆಯ ಪುರುಷನನ್ನು ಉದ್ಯೋಗಕ್ಕೆ ಕಳುಹಿಸಿ ಎಂದು ತಾಲಿಬಾನ್‌ ಅಧಿಕಾರಿಗಳು ಕರೆ ಮಾಡಿ ತಿಳಿಸಿದ್ದಾರೆ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಿದೆ. ನಿಮ್ಮ ಬದಲು ಪುರುಷರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದು ತಾಲಿಬಾನ್‌ ಅಧಿಕಾರಿಗಳು ಹೇಳಿರುವುದಾಗಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ದಿಢೀರ್ ಪ್ರವಾಹ – 12 ಸಾವು, ಹಲವರು ನಾಪತ್ತೆ, ಸಾವಿರಾರು ಜನ ಸ್ಥಳಾಂತರ

    ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ನನ್ನನ್ನು ಉದ್ಯೋಗದಲ್ಲಿ ಪ್ರಮುಖ ಸ್ಥಾನದಿಂದ ಕೆಳಗಿಳಿಸಿದ್ದಾರೆ. ನನ್ನ ಸಂಬಳವನ್ನು 60,000 ಅಫ್ಘಾನಿಗಳಿಂದ 12,000 ಅಫ್ಘಾನಿಗೆ ಇಳಿಸಿದ್ದಾರೆ. ಇದರಿಂದ ನನ್ನ ಮಗನ ಶಾಲಾ ಶುಲ್ಕವನ್ನು ಭರಿಸುವುದಕ್ಕೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಕುರಿತು ಪ್ರಶ್ನಿಸಿದರೆ, ಕಚೇರಿಯಿಂದ ಹೊರಹೋಗುವಂತೆ ಅಧಿಕಾರಿಗಳು ಉಗ್ರವಾಗಿ ವರ್ತಿಸುತ್ತಾರೆ ಎಂದು ಉದ್ಯೋಗಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.

    15 ವರ್ಷಗಳ ಕಾಲ ತಾನು ಕೆಲಸ ಮಾಡಿದ ಹುದ್ದೆಗೆ ಪುರುಷನನ್ನು ಬದಲಿ ಶಿಫಾರಸು ಮಾಡುವಂತೆ ಸಚಿವಾಲಯದ ಮಾನವ ಸಂಪನ್ಮೂಲ ಇಲಾಖೆಯಿಂದ ಕರೆ ಬಂದಿದೆ ಎಂದು ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಮತ್ತು ಸಚಿವಾಲಯದಲ್ಲಿ ವಿಭಾಗದ ಮುಖ್ಯಸ್ಥರಾಗಿರುವ ಮಹಿಳಾ ಅಧಿಕಾರಿಯೊಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

    ತಾಲಿಬಾನ್‌ ನೀತಿಗಳನ್ನು ಜಾಗತಿಕ ಸಂಸ್ಥೆಗಳು ತೀವ್ರವಾಗಿ ಟೀಕಿಸಿವೆ. ಇಂತಹ ನೀತಿಗಳಿಂದ ದೇಶದಲ್ಲಿ ಆರ್ಥಿಕ ನಷ್ಟದ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿವೆ. ಮಹಿಳೆಯರ ಉದ್ಯೋಗದ ಮೇಲಿನ ಪ್ರಸ್ತುತ ನಿರ್ಬಂಧಗಳು 1 ಬಿಲಿಯನ್‌ ಡಾಲರ್‌ ವರೆಗೆ ತಕ್ಷಣದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು ಎಂದು UN ಮಹಿಳೆಯರ ಕಾರ್ಯನಿರ್ವಾಹಕ ನಿರ್ದೇಶಕಿ ಸಿಮಾ ಬಹೌಸ್ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಅಂದಿನಿಂದ ಮಹಿಳೆಯರ ಹಕ್ಕುಗಳನ್ನು ಹಿಂತೆಗೆದುಕೊಳ್ಳುವ ಹಲವಾರು ತೀರ್ಪುಗಳನ್ನು ಹೊರಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಲ್ಡೀವ್ಸ್‌ನಲ್ಲಿ ಯೋಗ ಕಾರ್ಯಕ್ರಮದ ವೇಳೆ ದಾಳಿ

    ಮಾಲ್ಡೀವ್ಸ್‌ನಲ್ಲಿ ಯೋಗ ಕಾರ್ಯಕ್ರಮದ ವೇಳೆ ದಾಳಿ

    ಮಾಲೆ: ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಮಾಲ್ಡೀವ್ಸ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮಕ್ಕೆ ಗುಂಪೊಂದು ನುಗ್ಗಿ ಯೋಗ ಮಾಡಿದ್ದವರನ್ನು ಅಡ್ಡಿ ಪಡಿಸಿದ ಘಟನೆ ನಡೆದಿದೆ.

    ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿಶ್ವದೆಲ್ಲೆಡೆ ಯೋಗ ಮಾಡಿ ಯೊಗ ದಿನವನ್ನು ಆಚರಿಸಿದ್ದಾರೆ.  ಈ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನ ಯುವ, ಕ್ರೀಡೆ ಮತ್ತು ಸಮುದಾಯ ಸಬಲೀಕರಣ ಸಚಿವಾಲಯವು ಭಾರತೀಯ ಸಾಂಸ್ಕೃತಿಕ ಕೇಂದ್ರದೊಂದಿಗೆ ಮಂಗಳವಾರ ಗಲೋಲ್ಹು ಕ್ರೀಡಾಂಗಣದಲ್ಲಿ ಧ್ಯಾನ ಮತ್ತು ಯೋಗವನ್ನು ಆಯೋಜಿಸಿತ್ತು. ಆದರೆ ಅಲ್ಲಿಗೆ ಬಂದ ಗುಪೊಂದು ಯೋಗಾಭ್ಯಾಸಕ್ಕೆ ಅಡ್ಡಿ ಪಡಿಸಿ ಪ್ರತಿಭಟನೆ ನಡೆಸಿದೆ.

    ಆ ಗುಂಪು ಯೋಗಾಭ್ಯಾಸದಲ್ಲಿ ಪಾಲ್ಗೊಂಡವರು ಕೂಡಲೇ ಕ್ರೀಡಾಂಗಣವನ್ನು ತೆರವು ಮಾಡಬೇಕೆಂದು ಆಗ್ರಹಿಸಿದೆ. ಅಷ್ಟೇ ಅಲ್ಲದೇ ಬೆದರಿಕೆಯನ್ನು ಹಾಕಿದೆ. ಇದರಿಂದಾಗಿ ಯೋಗಾಭ್ಯಾಸಕ್ಕೆ ಹಾಜರಾದವರಿಗೆ ಧ್ಯಾನವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

    ಘಟನೆ ಸಂಬಂಧಿಸಿದಂತೆ ಅತಿರೇಕಕ್ಕೆ ಹೋಗುವ ಮೊದಲು ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ಆಯೋಜಿಸುವ ಘೋಷಣೆಯು ಕೆಲವು ಸಾರ್ವಜನಿಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಅವರು ಅದನ್ನು ನಡೆಸದಂತೆ ಬೆದರಿಕೆ ಹಾಕಿದರು. ಇದನ್ನೂ ಓದಿ: ಯೋಗ ದಿನದಂದು ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

    ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಹೇಳಿದ್ದಾರೆ. ಮಾಲ್ಡೀವ್ಸ್ ಸರ್ಕಾರವು ಈ ಸಮಸ್ಯೆಯನ್ನು ಅತ್ಯಂತ ಕಾಳಜಿಯಿಂದ ಪರಿಗಣಿಸುತ್ತಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ಮಠದ ಶಿಷ್ಯರೊಂದಿಗೆ ಯೋಗ ಮಾಡಿದ ಪೇಜಾವರ ಶ್ರೀ

    Live Tv

  • ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ದಾಳಿ – ಐವರು ಅರೆಸ್ಟ್

    ನವದೆಹಲಿ: ಪೊಲೀಸರು ವಿಶೇಷ ಸಿಬ್ಬಂದಿಯ ಜಂಟಿ ತಂಡವೊಂದನ್ನು ರಚಿಸಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮನೆಯಿಂದ ಒಬ್ಬ ಪುರುಷ ಮತ್ತು ನಾಲ್ವರು ಮಹಿಳೆಯರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ. ಘಟನೆಯು ನಗರದ ಈಶಾನ್ಯ ಭಾಗದ ದಿಲ್ಶಾದ್ ಕಾಲೋನಿ ಪ್ರದೇಶದ ಮನೆಯೊಂದರಲ್ಲಿ ನಡೆದಿದೆ.

    ಆರೋಪಿಯನ್ನು ಹಿಡಿಯಲು, ಪೊಲೀಸರು ತಮ್ಮ ಕಾನ್‍ಸ್ಟೆಬಲ್ ಅನ್ನು ಡಿಕಾಯ್ ಗಿರಾಕಿಯಾಗಿ ಕಳುಹಿಸಿದ್ದರು. ಆರೋಪಿಗಳ ಪೈಕಿ ದರ್ಶನ್ ಸೈನಿಯನ್ನು ಭೇಟಿಯಾಗಿ ಅವರು ಮಹಿಳೆಯರ ಬಗ್ಗೆ ತಿಳಿದುಕೊಂಡಿದ್ದಾರೆ. ಇದನ್ನೂ ಓದಿ: ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ – ಜಿಲ್ಲಾ ಪಂಚಾಯತ್‌ ಪತ್ರವೇ ನಕಲು

    ಈ ವೇಳೆ ಆರೋಪಿಯು ಮನೆಯ ನೆಲ ಮಹಡಿಗೆ ಕಾನ್‍ಸ್ಟೆಬಲ್ ಅನ್ನು ಕರೆದುಕೊಂಡು ಹೋಗಿ ಮಹಿಳೆಯೊಬ್ಬರಿಗೆ ಪರಿಚಯಿಸಿದನು. ಅವನು ಅದೇ ಅಡ್ಡೆಯಲ್ಲಿದ್ದ ಇನ್ನೂ ಮೂವರು ಹುಡುಗಿಯರನ್ನು ತಲಾ 1,500 ರೂ. ಪರಿಚಯಿಸಿದನು. ಈ ವೇಳೆ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸ್ ತಂಡಕ್ಕೆ ಸೂಚಿಸಲಾಯಿತು. ಇದನ್ನೂ ಓದಿ: ಯೋಗಿ ಸರ್ಕಾರವನ್ನು ಜನರೇ ಬಲ್ಡೋಜರ್‌ನಿಂದ ಕಿತ್ತೆಸೆಯುವ ದಿನ ಬರಲಿದೆ: ಅಖಿಲೇಶ್ ಯಾದವ್

    ತಂಡವು ಆವರಣದಲ್ಲಿ ದಾಳಿ ನಡೆಸಿ ಐವರನ್ನು ಸ್ಥಳದಲ್ಲೇ ಬಂಧಿಸಿದೆ. ಈ ಕುರಿತು ಸೀಮಾ ಪುರಿ ಪೊಲೀಸ್ ಠಾಣೆಯಲ್ಲಿ ಅನೈತಿಕ ಸಂಚಾರ ಪ್ರಕರಣವನ್ನು ದಾಖಲಿಸಲಾಗಿದೆ. ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮನೆಯ ಮಾಲೀಕ ದೀಪಾ ಇನ್ನೂ ತಲೆಮರೆಸಿಕೊಂಡಿದ್ದಾಳೆ. ಪ್ರಕರಣದ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

  • ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮಹಿಳೆ ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥಮಾಡಿಕೊಳ್ಳಬೇಕು: ಮಾಧವನ್

    ಮುಂಬೈ:  ಮಹಿಳೆಯರು ಹೆಚ್ಚು ಸ್ಟ್ರಾಂಗ್ ಎಂಬುದನ್ನು ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ಬಾಲಿವುಡ್ ನಟ ಮಾಧವನ್ ಹೇಳಿದ್ದಾರೆ.

    ಲಿಂಗ ತಾರತಮ್ಯದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಸಕ್ರಿಯವಾಗಿ ಏನನ್ನೂ ಮಾಡದಿದ್ದರೂ, ತಮ್ಮ ನಿಯಮಗಳನ್ನು ತೊಡೆದುಹಾಕುವುದು ಅತ್ಯಂತ ಮುಖ್ಯವಾದ ವಿಷಯ ಎಂದು ನಾನು ಭಾವಿಸುತ್ತೇನೆ. ಆದರೆ ಎಲ್ಲದಕ್ಕೂ ಪುರುಷರನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಈ ನಿಯಮಗಳಲ್ಲಿ ಬೆಳೆದು ಬಂದಿದ್ದಾರೆ ಎಂದು ವಿವರಿಸಿದ ಅವರು, ಪುರುಷ ಮತ್ತು ಮಹಿಳೆಯರ ಕೆಲಸ ಹೇಗೆ ಹಂಚಿಕೆಯಾಗಿದೆ ಎಂಬುದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಕಹಳೆ – ರಷ್ಯಾ ಮೇಲೆ ಹಣಕಾಸು ಸೇರಿ ವಿವಿಧ ನಿರ್ಬಂಧ ಹೇರಿದ ಅಮೆರಿಕ!
    ಮಹಿಳೆಯರು ಮತ್ತು ಪುರುಷರು ಬೆಳೆದು ಬರುವ ವಾತಾವರಣದಿಂದ ವ್ಯಕ್ತಿತ್ವ ನಿರ್ಧಾರವಾಗುತ್ತೆ. ಇದರಲ್ಲಿ ಜನರದ್ದು ಏನೂ ತಪ್ಪಿಲ್ಲ. ಕುಟುಂಬವೂ ಮೊದಲು ಶಿಕ್ಷಣ ಕೊಡಬೇಕು. ಕುಟುಂಬವೇ ಮಹಿಳೆಯರನ್ನು ಕೆಲವೊಮ್ಮೆ ನಿರ್ಬಂಧಿಸುವ ವಿಷಯಗಳು ಇವೆ ಎಂಬುದು ನನ್ನ ಭಾವನೆ ಎಂದು ಹೇಳಿದ್ದಾರೆ.

    ಮಹಿಳೆಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲಶಾಲಿಗಳು. ಪುರುಷರಿಗೆ ಈ ವಿಷಯವನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತೆ. ಆದರೆ ಇದು ಸತ್ಯ. ಮಹಿಳೆಯರು ಬೆಳೆದಂತೆ ಅವರ ಬುದ್ದಿಶಕ್ತಿ ಹೆಚ್ಚಾಗುತ್ತೆ ಎಂದಿದ್ದಾರೆ. ಇದನ್ನೂ ಓದಿ: ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

    Actor Madhavan Family Members Wife, Son, Father, Mother Photos & Biography - YouTube

    ನನ್ನ ಮನೆಯಲ್ಲಿ ಎಲ್ಲ ಮಹಿಳೆಯರು ಪವರ್‌ಫುಲ್ ಆಗಿದ್ದಾರೆ. ನನ್ನ ತಾಯಿ, ಅಜ್ಜಿ ಎಲ್ಲರು ಮಾತೃಪ್ರಧಾನವಾಗಿ ಮನೆಯನ್ನು ನಡೆಸುತ್ತಾರೆ. ಇದರಿಂದ ನಮ್ಮ ಮನೆಯಲ್ಲಿ ಪುರುಷರು ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತ ಸಂತೋಷವಾಗಿದ್ದಾರೆ. ಅವರು ಕಾಳಜಿ ವಹಿಸುವುದು, ನಮ್ಮನ್ನು ನೋಡಿಕೊಳ್ಳುವ ರೀತಿ ನೋಡಿದರೆ ಸಂತೋಷವಾಗುತ್ತೆ ಎಂದು ತಿಳಿಸಿದ್ದಾರೆ.

  • ಮಹಿಳೆ ಒಪ್ಪಿಗೆ ಇಲ್ಲದೇ ಕಾಂಡೋಮ್ ತೆಗೆದ್ರೆ ಕಾನೂನು ಬಾಹಿರ

    ಮಹಿಳೆ ಒಪ್ಪಿಗೆ ಇಲ್ಲದೇ ಕಾಂಡೋಮ್ ತೆಗೆದ್ರೆ ಕಾನೂನು ಬಾಹಿರ

    ಕ್ಯಾಲಿಫೋರ್ನಿಯಾ: ಸೆಕ್ಸ್ ವೇಳೆ ಮಹಿಳೆಯ ಒಪ್ಪಿಗೆ ಪಡೆಯದೇ ಕಾಂಡೋಮ್ ತೆಗೆಯೋದು ಕಾನೂನು ಬಾಹಿರ ಎಂದು ಆದೇಶಿಸಲು ಕ್ಯಾಲಿಫೋರ್ನಿಯಾ ಹೊಸ ಕಾಯ್ದೆ ತರಲು ಮುಂದಾಗಿದೆ. ಈ ಕಾಯ್ದೆ ಜಾರಿಗೆ ತರಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗಲಿದೆ ಎಂದು ವರದಿಯಾಗಿದೆ.

    ಕ್ಯಾಲಿಫೋರ್ನಿಯಾ ಅಸೆಂಬ್ಲಿ ಸದಸ್ಯೆ ಕ್ರಿಸ್ಟಿನಾ ಗಾರ್ಸಿಯಾ, ಈ ಪ್ರಸ್ತಾವವನ್ನ ಅಧಿವೇಶನದಲ್ಲಿ ಮಂಡಿಸಿದ್ದಾರೆ. ಈ ಪ್ರಸ್ತಾವದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ಮಸೂದೆ ಪಾಸ್ ಆದ್ರೆ ಕ್ಯಾಲಿಫೋರ್ನಿಯಾ ಇಂತಹ ಕಾಯ್ದೆ ತಂದ ಅಮೆರಿಕದ ಮೊದಲ ರಾಜ್ಯವಾಗಲಿದೆ. ಇದನ್ನೂ ಓದಿ: ಮಾರುಕಟ್ಟೆಗೆ ಬಂತು ವಿಶ್ವದ ಅತಿ ಚಿಕ್ಕ ಕಾಂಡೋಮ

    ಲೈಂಗಿಕ ಕ್ರಿಯೆ ವೇಳೆ ಮಹಿಳೆಗೆ ತಿಳಿಯದಂತೆ ಕಾಂಡೋಮ್ ತೆಗೆದು ಸೆಕ್ಸ್ ನಡೆಸಿದ್ರೆ ಸ್ಟೆಲ್ಥಿಂಗ್ ಎನ್ನಲಾಗುತ್ತದೆ. ಸ್ಟೆಲ್ಥಿಂಗ್ ಲೈಂಗಿಕ ಕಿರುಕುಳಕ್ಕೆ ಸಮನಾವಾದದ್ದು. ಮಹಿಳೆಯ ಅನುಮತಿ ಇಲ್ಲದೇ ಆಕೆಯನ್ನ ಸ್ಪರ್ಶಿಸೋದು, ಸೆಕ್ಸ್ ಗೆ ಆಹ್ವಾನಿಸೋದನ್ನ ಸೆಕ್ಷುವಲ್ ಬ್ಯಾಟರಿ ಎಂದು ಕರೆಯಲಾಗುತ್ತದೆ. ಇದು ಅನುಮತಿ ಇಲ್ಲದೇ ಕಾಂಡೋಮ್ ತೆಗೆಯುವುದನ್ನ ಅಪರಾಧ ಎಂದು ಸ್ಪಷ್ಟವಾಗಿ ಹೇಳುತ್ತದೆ. ಇದನ್ನೂ ಓದಿ: ಸೆಕ್ಸ್ ವೇಳೆ ಸ್ಫೋಟಗೊಂಡ ಕಾಂಡೋಮ್-ದೂರು ದಾಖಲಿಸಿದ ಮಹಿಳೆ

    ಮಸೂದೆ ಮಂಡಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ಕ್ರಿಸ್ಟಿನಾ ಗಾರ್ಸಿಯಾ, ದೇಶದಲ್ಲಿ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಕಾನೂನುಗಳಿವೆ. ಸ್ಟೆಲ್ಥಿಂಗ್ (ಕಳ್ಳತನ) ಹೆಸರಲ್ಲಿ ನಡೆಯುವ ಲೈಂಗಿಕ ದೌರ್ಜನಕ್ಕೂ ಕಾನೂನಿನ ಅವಶ್ಯಕತೆ ಇದೆ. ಹಲವು ವರ್ಷಗಳಿಂದ ಸ್ಟೆಲ್ಥಿಂಗ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೇನೆ. ಹಾಗಾಗಿ ಸಂತ್ರಸ್ತೆಗೆ ನ್ಯಾಯ ಸಿಗಬೇಕಾದ್ರೆ ಈ ಕಾನೂನು ಬೇಕಿದೆ. ಹೆಚ್ಚಾಗಿ ಕಪ್ಪು ವರ್ಣದ ಮಹಿಳೆಯ ಮೇಲೆ ಸ್ಟೆಲ್ಥಿಂಗ್ ಪ್ರಕರಣಗಳು ವರದಿ ಆಗುತ್ತೇವೆ. ಮಹಿಳೆಯ ಸುರಕ್ಷತೆ ಕಾನೂನು ಅನಿವಾರ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೆಳತಿಗೆ ಹೇಳದೇ ಕಾಂಡೋಮ್‍ಗೆ ರಂಧ್ರ ಹಾಕಿ ಸೆಕ್ಸ್- 4 ವರ್ಷ ಜೈಲು ಶಿಕ್ಷೆ

  • ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

    ಕೇರಳದ ಈ ದೇಗುಲಗಳಲ್ಲಿ ಪುರುಷರಿಗಿಲ್ಲ ಪ್ರವೇಶ

    – ದೇಶದ ಒಟ್ಟು ಆರು ಕ್ಷೇತ್ರಗಳಲ್ಲೂ ಪುರುಷರಿಗೆ ನಿರ್ಬಂಧ

    ಕೇರಳದ ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಕನಕದುರ್ಗ ಮತ್ತು ಬಿಂದು ಎಂಬ ಇಬ್ಬರು ಪ್ರವೇಶಿಸಿದ್ದಾರೆ. ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ದೇವರನಾಡಿನಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಭಾರತದ ಸಂಸ್ಕೃತಿಯಲ್ಲಿ ಕೆಲವು ದೇಗುಲಗಳ ಪ್ರವೇಶಕ್ಕೆ ನಿರ್ಬಂಧವಿದ್ದರೆ ಮತ್ತೆ ಕೆಲ ದೇವಸ್ಥಾನಗಳಿಗೆ ಪ್ರವೇಶ ನಿಷೇಧವಿದೆ.

    ಈಗ ಲಿಂಗಸಮಾನತೆ ಕೇಳುವ ಕಾಲವಾಗಿದ್ದು, ಸುಪ್ರೀಂಕೋರ್ಟ್ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ತೀರ್ಪು ಪ್ರಕಟಿಸಿತ್ತು. ತೀರ್ಪು ಬಂದ ಬಳಿಕ ಅಯ್ಯಪ್ಪ ದೇಗುಲ ಪ್ರವೇಶಿಸಲು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ, ತೃಪ್ತಿ ದೇಸಾಯಿ ಸೇರಿದಂತೆ ಹಲವರು ಪ್ರಯತ್ನಿಸಿ ವಿಫಲವಾಗಿದ್ದರು. ಕೊನೆಗೆ ಇಂದು ಕನಕದುರ್ಗ ಮತ್ತು ಬಿಂದು ದೇಗುಲ ಪ್ರವೇಶಿಸಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇದೇ ರೀತಿ ದೇಶದ ಕೆಲವು ದೇವಸ್ಥಾನಗಳಲ್ಲಿ ಪುರುಷರ ಅನುಮತಿಯನ್ನು ನಿಷೇಧಿಸಲಾಗಿದೆ. ಅಂತಹ ಎರಡು ದೇವಸ್ಥಾನದ ಕೇರಳದಲ್ಲಿಯೇ ಇದೆ. ಹಾಗಾದ್ರೆ ಆ ದೇವಸ್ಥಾನಗಳ ಮಾಹಿತಿ ಇಲ್ಲಿದೆ.

    1. ಅತ್ತಕುಲ ಭಾಗ್ಯವತಿ ದೇವಾಲಯ:
    ಇದು ಕೇರಳ ರಾಜ್ಯದ ತಿರುವನಂತಪುರ ಜಿಲ್ಲೆಯಲ್ಲಿದೆ. ಈ ದೇವಾಲಯದಲ್ಲಿ ಮಹಿಳೆಯರು ಅರ್ಚಕಿಯರಾಗಿದ್ದು, ಪುರುಷರಿಗೆ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ದೇವಸ್ಥಾನದ ಪೊಂಗಲ್ ಹಬ್ಬದಲ್ಲಿ 30 ಲಕ್ಷಕ್ಕೂ ಹೆಚ್ಚು ಮಹಿಳಾ ಭಕ್ತಾದಿಗಳು ಭಾಗಿಯಾಗಿ ಗಿನ್ನಿಸ್ ದಾಖಲೆಯನ್ನು ಸೇರಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳದಲ್ಲಿ 10 ದಿನ ಪೊಂಗಲ್ ಆಚರಿಸಲಾಗುತ್ತದೆ.

    2. ಚಕ್ಕುಲತುಕವು ದೇವಾಲಯ:
    ಈ ದೇವಾಲಯ ಕೇರಳದ ಅಲಪುಳಾ ಜಿಲ್ಲೆಯ ನಿರಟ್ಟಪುರಂ ಎಂಬಲ್ಲಿದೆ. ಇಲ್ಲಿ ದುರ್ಗಾ ಮಾತೆಯ ಪ್ರತಿರೂಪ ಭಾಗ್ಯವತಿ ತಾಯಿಗೆ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿನಿತ್ಯ ಮಹಿಳಾ ಅರ್ಚಕಿಯರೇ ಪೂಜೆಯನ್ನು ಸಲ್ಲಿಸುತ್ತಾರೆ. ಇಲ್ಲಿ ಆಚರಿಸುವ ಸಂಪ್ರದಾಯವನ್ನು ನಾರಿ ಪೂಜೆ ಎಂದು ಕರೆಯಲಾಗುತ್ತದೆ. ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪೂಜೆಯಲ್ಲಿ ಪಾಲ್ಗೊಳ್ಳುವ ಮಹಿಳಾ ಭಕ್ತಾದಿಗಳು 10 ದಿನ ಉಪವಾಸ ವ್ರತ ಆಚರಿಸಬೇಕಾಗುತ್ತದೆ.

    3. ಸಂತೋಷಿ ಮಾ ದೇವಾಲಯ:
    ದೇಶದ ಹಲವೆಡೆ ಇರುವ ಸಂತೋಷಿ ಮಾ ದೇಗುಲಗಳಿಗೆ ಮಹಿಳೆಯರೇ ಅರ್ಚಕಿಯರು. ಪುರುಷರ ತಾಯಿಗೆ ಪೂಜೆ ಸಲ್ಲಿಸುವಂತಿಲ್ಲ. ಸಂತೋಷಿ ಮಾ ಮಹಿಳಾ ಭಕ್ತಾದಿಗಳನ್ನೇ ಹೊಂದಿದ್ದು, ಕನ್ಯೆಯರು ಮತ್ತು ಅಥವಾ ಮಹಿಳೆಯರು ಕಟ್ಟುನಿಟ್ಟಿನ ಸಂತೋಷಿ ಮಾ ವ್ರತ ಆಚರಣೆ ಮಾಡುತ್ತಾರೆ. ಇದನ್ನೂ ಓದಿ: ದೇಶದ ಐದು ಧಾರ್ಮಿಕ ಕೇಂದ್ರಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ

    4. ಬ್ರಹ್ಮ ದೇವಾಲಯ:
    ರಾಜಸ್ಥಾನದ ಪುಷ್ಕರದಲ್ಲಿರುವ ಬ್ರಹ್ಮ ದೇವಾಲಯಕ್ಕೆ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ. ಇಲ್ಲಿ ಬ್ರಹ್ಮದೇವನನ್ನು ಪೂಜಿಸಲಾಗುತ್ತದೆ. ಕಾರ್ತಿಕ ಪೌರ್ಣಿಮ ದಿನ ಬ್ರಹ್ಮದೇವನಿಗೆ ವಿಶೇಷ ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ.

    5. ಭಾಗತಿ ಮಾ ದೇವಾಲಯ:
    ಭಾಗತಿ ಮಾ ದೇವಾಲಯ ತಮಿಳುನಾಡಿನ ಕನ್ಯಾಕುಮಾರಿಯಲ್ಲಿದೆ. ಪಾರ್ವತಿ ದೇವಿ ಸಮುದ್ರದ ಮಧ್ಯೆ ಏಕಾಂಗಿಯಾಗಿ ಕುಳಿತು ಶಿವದೇವನೇ ನನ್ನ ಪತಿಯಾಗಬೇಕೆಂದು ಪಾರ್ವತಿ ದೇವಿ ಕಠಿಣ ತಪಸ್ಸು ಮಾಡಿದ್ದಳಂತೆ. ಹಾಗಾಗಿ ಭಾಗತಿ ದೇಗುಲಕ್ಕೆ ಮಹಿಳೆಯರಿಗೆ ಮಾತ್ರ ಪ್ರವೇಶವಿದೆ. ಇದನ್ನು ಕನ್ಯಾಕುಮಾರಿ ದೇಗುಲ ಅಂತಾನೂ ಕರೆಯಲಾಗುತ್ತದೆ. ಕನ್ಯಾ ಮಾ ಭಗವತಿ ದುರ್ಗಾ ತಾಯಿಗೆ ಮಹಿಳೆಯರೇ ಅರ್ಚಕಿಯರಾಗಿ ಪೂಜೆ ಸಲ್ಲಿಸುತ್ತಾರೆ.

    6. ಮಾತಾ ದೇಗುಲ:
    ಬಿಹಾರದ ಮುಜಫರ್ ನಗರದಲ್ಲಿ ಮಾತಾ ದೇವಸ್ಥಾನವಿದೆ. ಇಲ್ಲಿ ದೇಗುಲದ ಆವರಣದಲ್ಲಿಯೂ ಪುರುಷರು ಪ್ರವೇಶಿಸಬಾರದೆಂಬ ಕಠಿಣ ನಿಯಮವಿದೆ.

    ಒಟ್ಟಿನಲ್ಲಿ ದೇಶದಲ್ಲಿ ಹೇಗೆ ಮಹಿಳೆಯರಿಗೆ ಕೆಲವು ದೇಗುಲಗಳಿಗೆ ಪ್ರವೇಶವಿಲ್ಲ. ಅಂತೆಯೇ ಕೆಲವು ಕಡೆ ಪುರುಷರಿಗೂ ಪ್ರವೇಶವಿಲ್ಲ. ಇಂದು ಶಬರಿಮಲೆ ದೇಗುಲವನ್ನು ಪ್ರವೇಶಿಸುವ ಮೂಲಕ 800 ವರ್ಷಗಳ ಇತಿಹಾಸಕ್ಕೆ ಇಬ್ಬರು ಬ್ರೇಕ್ ಕೊಟ್ಟಿದ್ದಾರೆ.

    ಎಲ್ಲದರಲ್ಲೂ ಸಮಾನತೆಯನ್ನು ಕಾಣುವ ಕಾಲ ಇದಾಗಿದ್ದು, ಪ್ರವೇಶ ಮಾಡಬೇಕೇ ಅಥವಾ ಮಾಡಬಾರದೇ ಎನ್ನುವುದು ಜನರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ದೇವಸ್ಥಾನದ ಪ್ರವೇಶ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸನ್ನಿಯ ಈ ನ್ಯೂ ಲುಕ್ ನೋಡಿದ್ರೆ ಆಶ್ಚರ್ಯ ಪಡ್ತೀರಾ

    ಸನ್ನಿಯ ಈ ನ್ಯೂ ಲುಕ್ ನೋಡಿದ್ರೆ ಆಶ್ಚರ್ಯ ಪಡ್ತೀರಾ

    ಮುಂಬೈ: ಬಾಲಿವುಡ್‍ನ ಮಾದಕ ಬೆಡಗಿ ಸನ್ನಿ ಲಿಯೋನ್ ವಿಭಿನ್ನ ಪಾತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಈಗ ಹೊಸ ಅವತಾರದಲ್ಲಿ ಅಭಿಮಾನಿಗಳನ್ನು ರಂಜಿಸಲು ಪುರುಷನ ವೇಷದಲ್ಲಿ ಬರುತ್ತಿದ್ದಾರೆ.

    ಸನ್ನಿ ಲಿಯೋನ್ ಬಹುದಿನಗಳ ನಂತರ `ತೇರಾ ಇಂತೇಜಾರ್’ ಸಿನಿಮಾದಲ್ಲಿ ಲೀಡ್ ರೋಲ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಬಾರ್ಬಿ ಗರ್ಲ್ ಹಾಡಿನಲ್ಲಿ ಈ ರೀತಿಯ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿಯೇ ಈ ರೀತಿಯ ಮೇಕಪ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದ್ದು, ವೈರಲ್ ಆಗಿವೆ.

    ಹುಡುಗನ ರೀತಿ ಮೇಕಪ್ ಮಾಡಿಕೊಂಡಿರುವ ಮಾದಕ ಬೆಡಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ತಾವು ಮೇಕಪ್ ಮಾಡಿಸಿಕೊಂಡಿದ್ದ ವಿಡಿಯೋ ಮತ್ತು ಫೊಟೋಗಳನ್ನು ಹಾಕಿ, ನಾನು ಈ ರೀತಿಯ ಮೇಕಪ್‍ನಲ್ಲಿ ನನ್ನ ಅಣ್ಣ ಮತ್ತು ಅಪ್ಪನ ರೀತಿ ಕಾಣಿಸುತ್ತಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಈ ರೀತಿ ಮಾಡಿದ ಮೇಕಪ್ ಮ್ಯಾನ್ ತಾಮಸ್ ಮೌಚ್ಕಾ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

    `ತೇರಾ ಇಂತೇಜಾರ್’ ಸಿನಿಮಾದಲ್ಲಿ ಅರ್ಬಾಜ್, ಸುಧಾ ಚಂದ್ರನ್, ಸಲಿಲ್ ಅಂಕೋಲಾ, ಖುಚಾ ಶರ್ಮಾ, ಗೌಹರ್ ಖಾನ್, ಹನೀಫ್ ನೋಯಿಡಾ, ಆರ್ಯ ಬಬ್ಬರ್ ಮತ್ತು ಬಾನಿ ಸಿಂಹ ಸೇರಿದಂತೆ ದೊಡ್ಡ ತಾರಾಗಣವನ್ನು ಸಿನಿಮಾ ಹೊಂದಿದೆ. ಸಿನಿಮಾಗೆ ಅಮನ್ ಮೆಹ್ತಾ ಬಿಜಲ್ ಮೆಹ್ತಾ ಬಂಡವಾಳ ಹೂಡಿದ್ದು, ರಾಜೀವ್ ವಾಲಿಯಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ರೋಮ್ಯಾಂಟಿಕ್ ಮತ್ತು ಸಸ್ಪೆನ್ಸ್ ಕಥಾ ಹಂದರವನ್ನು ಹೊಂದಿದೆ. ಈ ಸಿನಿಮಾ ಇದೇ ತಿಂಗಳು 24 ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.