Tag: Maldives

  • ಔಟಿಂಗ್‌ನಲ್ಲಿ ಸನ್ನಿ ಲಿಯೋನ್ ಸಖತ್ ಹಾಟ್, ಎಲ್ಲಿದ್ದಾರೆ ಪಡ್ಡೆಗಳ ರಾಣಿ?

    ಔಟಿಂಗ್‌ನಲ್ಲಿ ಸನ್ನಿ ಲಿಯೋನ್ ಸಖತ್ ಹಾಟ್, ಎಲ್ಲಿದ್ದಾರೆ ಪಡ್ಡೆಗಳ ರಾಣಿ?

    ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ತಮ್ಮ ನೋಟದಿಂದಲ್ಲೇ ಪಡ್ಡೆ ಹುಡುಗರ ನಿದ್ದೆ ಕದ್ದವರು. ಅಭಿಮಾನಿಗಳು ಸನ್ನಿ ಅಪ್ ಡೇಟ್ಸ್ ಗಾಗಿ ಕಾಯುತ್ತಿರುತ್ತಾರೆ. ಈಗ ಮತ್ತೆ ಕನಸಿನ ರಾಣಿ ಸನ್ನಿ ಬೀಚ್ ಬಳಿ ನಿಂತುಕೊಂಡು ತೆಗೆಸಿಕೊಂಡಿರುವ ಹಾಟ್ ಫೋಟೋ ಮತ್ತು ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

     

    View this post on Instagram

     

    A post shared by Sunny Leone (@sunnyleone)

    ಸನ್ನಿ ಬೇಸಿಗೆಗೆಂದು ಪತಿ ಡೇನಿಯಾಲ್ ವೆಬಲ್ ಜೊತೆ ಮಾಲ್ಡೀವ್ಸ್ ಬೀಚ್ಗೆ ಔಟಿಂಗ್ ಹೋಗಿದ್ದು, ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸನ್ನಿ, ನಾನು ಮಗುವಿನಂತೆ ಓಡುತ್ತಿದ್ದೇನೆ. ನಮಗಾಗಿ ಈ ಖಾಸಗಿ ದ್ವೀಪ ಎಂದು ಬರೆದು, ಕ್ಯಾಮರಾ ಹಿಂದೆ ಸನ್ನಿ ಬೀಚ್ ಡ್ರೆಸ್‌ನಲ್ಲಿ ಓಡಿಬರುವ ದೃಶ್ಯ ಸೆರೆಯಾಗಿದೆ. ಇದನ್ನೂ ಓದಿ:  ಆಸ್ಕರ್ 2022: ಅತ್ಯುತ್ತಮ ಪೋಷಕ ಪಾತ್ರಗಳಿಗೆ ಅರಿಯಾನಾ ಡಿಬೋಸ್, ಟ್ರಾಯ್ಕೋಟ್ಸೂರ್‌ಗೆ ಅವಾರ್ಡ್

     

    View this post on Instagram

     

    A post shared by Sunny Leone (@sunnyleone)

    ಈ ವೀಡಿಯೋ ಜೊತೆಗೆ ಸನ್ನಿ ಮಾಲ್ಡೀವ್‌ನಲ್ಲಿ ಕಾಲ ಕಳೆದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಸನ್ನಿ ಕ್ಯೂಟ್ ಆಗಿ ಕಾಣಿಸುತ್ತಿದ್ದು, ಸನ್ನಿ ಅಭಿಮಾನಿಗಳು ಫೋಟೋವನ್ನು ಫುಲ್ ಶೇರ್ ಮಾಡುತ್ತಿದ್ದಾರೆ.

  • ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಮಿಲ್ಕಿ ಬ್ಯೂಟಿಗೆ ಬಿಕಿನಿನೂ ಒಪ್ಪತ್ತೆ ಅಂದ್ರು ಫ್ಯಾನ್ಸ್ : ಖುಷ್ ಅಂದ ತಮನ್ನಾ

    ಬೇಸಿಗೆ ಬಂದತೆಂದರೆ ಬಹುತೇಕ ನಟ ನಟಿಯರು ಮಾಲ್ಡೀವ್ಸ್ ಎನ್ನುವ ಭೂಮಿ ಮೇಲಿನ ಸ್ವರ್ಗಕ್ಕೆ ಹಾರುತ್ತಾರೆ. ಈ ಸ್ವರ್ಗಕ್ಕೆ ಕರೆಯಿಸಿಕೊಳ್ಳುವುದಕ್ಕಾಗಿಯೇ ಮಾಲ್ಡೀವ್ಸ್ ನ ಅನೇಕ ಏಜನ್ಸಿಗಳು ಸಿಲಿಬ್ರಿಟಿಗಳಿಗೆ ಗಾಳ ಹಾಕುತ್ತವೆ. ಒಂದಷ್ಟು ನಿಬಂಧನೆಗಳೊಂದಿಗೆ ಒಪ್ಪಂದವಾದರೆ, ವಾಲ್ಡೀವ್ಸ್ ನ ಸ್ವರ್ಗಗದಲ್ಲಿ ಕೆಲ ದಿನಗಳ ಕಾಲ ಉಚಿತವಾಗಿ ಕಳೆಯಬೇಕು.

    ಒಪ್ಪಂದಗಳೇನು ಭಾರೀ ಕಠಿಣವಾದವುಗಳು ಅಲ್ಲ, ನಟಿಯರು ಕಡ್ಡಾಯವಾಗಿ ಬಿಕಿನಿ ಧರಿಸಬೇಕು ಮತ್ತು ಆ ವಿಡಿಯೋ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಬೇಕು. ತಾವು ಯಾವ ಸ್ಥಳದಲ್ಲಿ ಇದ್ದೇವೆ ಎನ್ನುವುದು ಸ್ಪಷ್ಟವಾಗಿ ನಮೂದಿಸಿರಬೇಕು. ಇದು ಪ್ರವಾಸಿ ಸ್ಥಳಗಳನ್ನು ಆಕರ್ಷಿಸಲು ಮಾಲ್ಡೀವ್ಸ್ ಮಾಡಿಕೊಂಡಿರುವ ವಿಶೇಷ ಪ್ಯಾಕೇಜ್. ಇದನ್ನೂ ಓದಿ : ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

     

     

    View this post on Instagram

     

    A post shared by Tamannaahspeaks (@tamannaahspe)

    ಅಂತಹದ್ದೇ ಭೂಮಿ ಮೇಲಿನ ಸ್ವರ್ಗದಲ್ಲಿ ಆನಂದವಾಗಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ ಮಿಲ್ಕಿ ಬ್ಯೂಟಿ ತಮನ್ನಾ. ಬೀಚ್ ಬಳಿ ಬಿಕಿನಿ ತೊಟ್ಟು ಕ್ಯಾಮೆರಾಗೆ ಪೋಸ್‍ ಕೊಟ್ಟಿದ್ದಾರೆ. ಅಲ್ಲದೇ ಕ್ಯಾಟ್ ವಾಕ್ ಎನ್ನುವಂತೆ ಮೆಲ್ಲನೆ ಕೆಲವು ಹೆಜ್ಜೆಗಳನ್ನು ಇಟ್ಟು ಪಡ್ಡೆಗಳ ಕಣ್ಣಿಗೆ ಹಬ್ಬವಾಗಿದ್ದಾರೆ. ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

    ಈ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಮಿಲ್ಕಿ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಮಗೆ ಬಿಕಿನಿ ಒಪ್ಪುತ್ತದೆ, ಮೊದಲಿನಗಿಂತಲೂ ಸಖತ್ತಾಗಿ ಕಾಣಿಸುತ್ತಿರಿ ಎಂದು ಕಾಮೆಂಡ್ ಮಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಈಗಷ್ಟೇ ಬಾಲಿವುಡ್ ನ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು ರಜೆ ಕಳೆಯಲು ಮಾಲ್ಡೀವ್ಸ್ಗೆ ಹಾರಿರುವ ತಮ್ಮನ್ನಾ ಕೆಲ ದಿನಗಳ ಕಾಲ ಫ್ರೆಂಡ್ಸ್ ಜತೆ ಅಲ್ಲಿಯೇ ತಂಗಲಿದ್ದಾರೆ. ನಂತರ ಮತ್ತೆ ಶೂಟಿಂಗ್ ನಲ್ಲಿ ಅವರು ಪಾಲ್ಗೊಳ್ಳಲಿದ್ದಾರಂತೆ.

  • ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್‍ಬೀಟ್ ಹೆಚ್ಚಿಸಿದ ಮಾಳವಿಕಾ ಮೋಹನನ್

    ಬಿಕಿನಿ ತೊಟ್ಟು ಪಡ್ಡೆಗಳ ಹಾರ್ಟ್‍ಬೀಟ್ ಹೆಚ್ಚಿಸಿದ ಮಾಳವಿಕಾ ಮೋಹನನ್

    ಮುಂಬೈ: ಬಹುಭಾಷಾ ನಟಿ ಮಾಳವಿಕಾ ಮೋಹನನ್ ಅವರು ತುಂಡುಡುಗೆ ತೊಟ್ಟು ಪಡ್ಡೆಗಳ ನಿದ್ದೆ ಕದಿಯುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಾನು ಮತ್ತು ವರಲಕ್ಷ್ಮಿ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಗುರುತಿಸಿಕೊಂಡವರು. ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿದ್ದಾರೆ. ಪ್ರಸ್ತುತ ಸಿನಿಮಾ ಕೆಲಸಗಳಿಂದ ಅವರು ಬ್ರೇಕ್ ತೆಗೆದುಕೊಂಡು ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. ಈ ನಟಿ, ಬಿಕಿನಿ ಧರಿಸಿ ಕಡಲ ಕಿನಾರೆಯಲ್ಲಿ ನಿಂತು ಹಾಟ್ ಫೋಸ್‍ಕೊಟ್ಟು ಫೋಟೋ ತೆಗೆಸಿಕೊಂಡಿದ್ದಾರೆ. ಇದನ್ನೂ ಓದಿ:  ಪುಷ್ಪ ಮಾಸ್ ಡೈಲಾಗ್ ಹೇಳಿದ ಡೇವಿಡ್ ವಾರ್ನರ್- Viral Video

     

    View this post on Instagram

     

    A post shared by Malavika Mohanan (@malavikamohanan_)

    ಬೋಲ್ಡ್ ಔಟ್‍ಫಿಟ್‍ಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಾಳವಿಕಾ ಕಾಣಿಸಿಕೊಳ್ಳುವುದು ಇದು ಮೊದಲೇನಲ್ಲ. ಈ ಹಿಂದೆಯೂ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಫೋಟೋ ಮೂಲಕವಾಗಿ ಸುದ್ದಿಯಾಗಿದ್ದರು. ಇದೀಗ ಮಾಲ್ಡೀವ್ಸ್ ಪ್ರವಾಸದ ಹಾಟ್ ಫೋಟೋಗಳ ಮೂಲಕವಾಗಿ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

     

    View this post on Instagram

     

    A post shared by Malavika Mohanan (@malavikamohanan_)

    ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಪೇಟಾ ಸಿನಿಮಾದಲ್ಲೂ ನಟಿಸಿದ್ದಾರೆ. ಈ ಮೂಲಕ ಕಾಲಿವುಡ್‍ಗೆ ಪದಾರ್ಪಣೆ ಮಾಡಿದರು. ಕನ್ನಡ, ಮಲಯಾಳಂ, ಹಿಂದಿ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಪ್ರಸ್ತುತ ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಮಾಳವಿಕಾ ನಟನೆಯ ಮಾರನ್ ಹಾಗೂ ಯುಧ್ರ ಚಿತ್ರದ ಕೆಲಸಗಳು ನಡೆಯುತ್ತಿವೆ. ಮಾಳವಿಕಾಗೆ ದೊಡ್ಡ ಅಭಿಮಾನಿ ಬಳಗವಿದೆ.

  • ಹನಿಮೂನ್ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಹನಿಮೂನ್ ಫೋಟೋ ಹಂಚಿಕೊಂಡ ಕತ್ರಿನಾ ಕೈಫ್

    ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಅದ್ದೂರಿಯಾಗಿ ಮದುವೆಯಾಗುವ ಮೂಲಕವಾಗಿ ಸಖತ್ ಸುದ್ದಿಯಲ್ಲಿದ್ದರು. ಈ ಜೋಡಿ ಇದೀಗ ಹನಿಮೂನ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಮದುವೆ ಡಿ.9ರಂದು ಅದ್ದೂರಿಯಾಗಿ ನಡೆಯಿತು. ಇದಾದ ಮರುದಿನವೇ ಅವರು ಹನಿಮೂನ್‍ಗೆ ಮಾಲ್ಡೀವ್ಸ್‌ಗೆ ಹೋಗಿದ್ದರು ಎನ್ನಲಾಗಿತ್ತು. ನಾಲ್ಕು ದಿನ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆದು ಭಾರತಕ್ಕೆ ವಾಪಸ್ ಬಂದಿತ್ತು. ಮಾಲ್ಡೀವ್ಸ್ ಡೈರಿಯ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಕತ್ರಿನಾ ಅವರು ಹನಿಮೂನ್ ಫೋಟೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:  ಮಗಳ ವಿಚಾರದಲ್ಲಿ ನಮ್ಮ ನಿರ್ಧಾರ, ಮನವಿ ಮೊದಲಿನಂತೆಯೇ ಇರಲಿದೆ: ಅನುಷ್ಕಾ ಶರ್ಮಾ

     

    View this post on Instagram

     

    A post shared by Katrina Kaif (@katrinakaif)

    ಮಾಲ್ಡೀವ್ಸ್ ಸಮುದ್ರ ತೀರದಲ್ಲಿ ನಿಂತಿರುವ ಚಿತ್ರವನ್ನು ಕತ್ರಿನಾ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ ಮೈ ಹ್ಯಾಪಿ ಪ್ಲೇಸ್ ಎಂದು ಅವರು ಹಾಕಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಇದನ್ನೂ ಓದಿ:  ಹಸೆಮಣೆ ಏರಲು ಸಿದ್ಧರಾದ ವಜ್ರಕಾಯ ಬೆಡಗಿ ಶುಭ್ರಾ ಅಯ್ಯಪ್ಪ

    ಕತ್ರಿನಾ ಕೈಫ್ ಲಂಡನ್ ಮೂಲದವರು. ಹಿಂದಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ನಂತರ ಅವರು ಭಾರತದಲ್ಲೇ ಸೆಟ್ಲ್ ಆಗಿದ್ದಾರೆ. ಈಗ ವಿಕ್ಕಿ ಕೌಶಲ್ ಅವರನ್ನು ಮದುವೆಯಾಗಿ ಪಂಜಾಬ್‍ನ ಸೊಸೆ ಆಗಿದ್ದಾರೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್‍ನಲ್ಲಿ ಅದ್ದೂರಿಯಾಗಿ ವಿಕ್ಕಿ ಕೌಶಲ್, ಕತ್ರಿನಾ ಕೈಫ್ ಮದುವೆ ನೆರವೇರಿತ್ತು. ಇದೀಗ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.

  • ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾನಿ ಹಾಟ್ ಅವತಾರ

    ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Kiara Advani

    ಮಾಲ್ಡೀವ್ಸ್‌ನಲ್ಲಿ ಅದ್ಭುತವಾದಂತಹ ಕಾಲ ಕಳೆದ ಕಿಯಾರಾ ಅಡ್ವಾನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಕಿಯಾರಾ ಬಿಳಿ ಬಣ್ಣದ ಬಿಕಿನಿ ಹಾಗೂ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಸಖತ್ ಹಾಟ್ ಆಗಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನಟ ಧನುಷ್, ಐಶ್ವರ್ಯಾ ಡಿವೋರ್ಸ್- 18 ವರ್ಷದ ವೈವಾಹಿಕ ಸಂಬಂಧಕ್ಕೆ ಗುಡ್‍ಬೈ

    Kiara Advani

    ಇತ್ತೀಚೆಗಷ್ಟೇ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದ ಕಿಯಾರಾ ಅಷ್ಟಾಗಿ ಯಾವುದೇ ಫೋಟೋಗಳನ್ನು ಎಲ್ಲೂ ರಿವೀಲ್ ಮಾಡಿರಲಿಲ್ಲ. ಆದರೆ ಹಲವು ದಿನಗಳ ಗ್ಯಾಪ್ ಬಳಿಕ ಇದೀಗ ಕಿಯಾರಾ ಮಾಲ್ಡೀವ್ಸ್‌ನಲ್ಲಿ ತಾವು ಎಂಜಾಯ್ ಮಾಡಿರುವ ಕೆಲವು ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ‘ಪುಷ್ಪಾ’ ಸಿನಿಮಾಗೆ ಮುದ್ದಾದ ಗೌರವ ಸಲ್ಲಿಸಿದ ಅಮುಲ್

     

    View this post on Instagram

     

    A post shared by KIARA (@kiaraaliaadvani)

    ಒಂದು ಫೋಟೋದಲ್ಲಿ ಕಿಯಾರ ಬೋಟ್‍ನಲ್ಲಿ ಕುಳಿತು ಆಕಾಶದತ್ತ ನೋಡುತ್ತಿದ್ದರೆ, ಮತ್ತೊಂದರಲ್ಲಿ ಸಮುದ್ರದಲ್ಲಿ ತಮ್ಮ ಕೂದಲನ್ನು ನೆನೆಸುತ್ತಾ ಕಣ್ಣು ಮುಚ್ಚಿ ಇದರಲ್ಲಿಯೂ ಆಕಾಶದತ್ತ ನೋಡಿದ್ದಾರೆ. ಇನ್ನೊಂದರಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದರ ಜೊತೆಗೆ ಬಿಕಿನಿ ತೊಟ್ಟು ದೂರದಿಂದ ಓಡಿ ಬರುತ್ತಿರುವ ಮತ್ತು ಬೋಟ್‍ನಲ್ಲಿ ಪ್ರಯಾಣಿಸುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಕ್ಯಾಪ್ಷನ್‍ನಲ್ಲಿ ಬಟರ್ ಫ್ಲೈ ಎಮೋಜಿಯನ್ನು ಹಾಕಿದ್ದಾರೆ. ಒಟ್ಟಾರೆ ಕಿಯಾರಾ ಹಾಟ್ ಲುಕ್‍ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದು, ವೀಡಿಯೋಗೆ ಹಲವಾರು ಲೈಕ್‍ಗಳು ಹರಿದುಬರುತ್ತಿದೆ.

  • ಪೂಜಾ ಹೆಗ್ಡೆ ಹಾಟ್ ಫೋಟೋ ವೈರಲ್

    ಪೂಜಾ ಹೆಗ್ಡೆ ಹಾಟ್ ಫೋಟೋ ವೈರಲ್

    ಹೈದರಾಬಾದ್: ಟಾಲಿವುಡ್ ನಟಿ ಪೂಜಾ ಹೆಗ್ಡೆ ಮಾಲ್ಡೀವ್ಸ್‌ನಲ್ಲಿ  ಕಾಲ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿದ ಫೋಟೋ ನೋಡಿದ ಅಭಿಮಾನಿಗಳು ಫುಲ್ ಸುಸ್ತಾಗಿದ್ದಾರೆ.

    ಮಾಲ್ಡೀವ್ಸ್ ಬೀಚ್‍ನಲ್ಲಿ ಕಾಲ ಕಳೆಯುತ್ತಿರುವ ಪೂಜಾ ಟು ಪೀಸ್ ಬಟ್ಟೆ ತೊಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೂಜಾ ಅವರ ಹಾಟ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ: ಶಲ್ಯ ಮುಖಕ್ಕೆ ಕಟ್‌ಕೊಂಡಿನ್ರೀ ಮತ್ ಮಾಸ್ಕ್ ಯಾಕ್ ಹಾಕಬೇಕು: ವ್ಯಕ್ತಿಯ ಕಿರಿಕ್

    ಕಳೆದ ಕೆಲವು ದಿನದಗಳ ಹಿಂದೆ ಪೂಜಾ ಮಾಲ್ಡೀ‌ವ್ಸ್‌ಗೆ  ಭೇಟಿ ನೀಡಿ ಸಖತ್ ಎಂಜಾಯ್ ಮಾಡಿ ಮನೆಗೆ ವಾಪಸಾಗಿ ಒಂದು ವಾರ ಕಳೆದಿದೆ. ಆದರೆ ಪೂಜಾ ಅವರ ಮನಸ್ಸು ಮಾತ್ರ ಮಾಲ್ಡೀವ್ಸ್‌ನಲ್ಲಿಯೇ ಇದೆ. ಇನ್‍ಸ್ಟಾಗ್ರಾಮ್‍ನಲ್ಲಿ ಮಾಲ್ಡೀವ್ಸ್ ಡೈರಿಯ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಪೂಜಾ ಅವರ ಫೋಟೋ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

     

    View this post on Instagram

     

    A post shared by Pooja Hegde (@hegdepooja)

    ಪೂಜಾ ಹೆಗ್ಡೆ ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜನವರಿ 14 ರಂದು ರಾಧೆ ಶ್ಯಾಮ್ ಸಿನಿಮಾ 5 ಭಾಷೆಯಲ್ಲಿ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮೂಂದುಡಲ್ಪಟ್ಟಿದೆ. ಆಚಾರ್ಯ, ಬೀಸ್ಟ್, ಸರ್ಕಸ್ ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸಿದ್ದಾರೆ. ರಿಲೀಸ್‍ಗೆ ಈ ಎಲ್ಲಾ ಸಿನಿಮಾಗಳು ತಯಾರಾಗಿವೆ.

  • ಪಡ್ಡೆಗಳ ನಿದ್ದೆಗೆ ಕಿಚ್ಚು ಹತ್ತಿಸುವ ಸನ್ನಿ ಲಿಯೋನ್- Video Viral

    ಪಡ್ಡೆಗಳ ನಿದ್ದೆಗೆ ಕಿಚ್ಚು ಹತ್ತಿಸುವ ಸನ್ನಿ ಲಿಯೋನ್- Video Viral

    ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಪಡ್ಡೆ ಹುಡುಗರ ನಿದ್ದೆಗೆ ಕಿಚ್ಚು ಹತ್ತಿಸುವ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿರುವ ಸನ್ನಿ ಲಿಯೋನ್ ಅವರು ಬೀಚ್‍ನಲ್ಲಿ ಕಾಲ ಕಳೆಯುತ್ತಿದ್ದಾರೆ. ಅಲ್ಲಿ ಅವರು ಎಂಜಾಯ್ ಮಾಡುತ್ತಾ ಸಮಯ ಕಳೆಯುತ್ತಿರುವ ಸುಂದರ ಫೋಟೋ, ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ದಿನದ ಪ್ರತಿ ನಿಮಿಷವನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡು ಹಾಟ್ ಆಗಿ ಪೋಸ್ ಕೊಟ್ಟಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:   ಮಗಳ ಫೋಟೋ ಹಂಚಿಕೊಂಡು ಅಭಿಮಾನಿಗಳಿ ಶಾಕ್ ಕೊಟ್ಟ ಸತೀಶ್ ನಿನಾಸಂ

     

    View this post on Instagram

     

    A post shared by Sunny Leone (@sunnyleone)

    ಕೆಂಪು ಬಣ್ಣದ ಬಿಕಿನಿ ಧರಿಸಿದ ಸನ್ನಿ ಕೊಟ್ಟಿರುವ ಪೋಸ್ ನೋಡುಗರನ್ನು ಕ್ಷಣಕಾಲ ಹಿಡಿದು ನಿಲ್ಲಿಸುವಂತಿದೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ:  ಧಗ ಧಗ ಉರಿಯುವ ಬೆಂಕಿ ಮೈ ಆವರಿಸಿದ್ದರೂ ರಸ್ತೆಗೆ ಓಡಿದ ದಂಪತಿ

     

    View this post on Instagram

     

    A post shared by Sunny Leone (@sunnyleone)

    ಸನ್ನಿ ಲಿಯೋನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಸದ್ಯ ಮಾಲ್ಡೀವ್ಸ್‍ನಲ್ಲಿ ಸನ್ನಿ ಸುತ್ತಾಟ ನಡೆಸುತ್ತಿದ್ದಾರೆ. ಪ್ರತಿನಿತ್ಯ ಫೋಟೋ, ವೀಡಿಯೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪಡ್ಡೆ ಹುಡುಗರ ಎದೆ ಬಡಿತವನ್ನು ಹೆಚ್ಚು ಮಾಡುತ್ತಿದ್ದಾರೆ. ಸನ್ನಿ ಲಿಯೋನ್ ಬಾಲಿವುಡ್‍ನ ಪ್ರಸಿದ್ಧ ಗ್ಲಾಮರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇವರದ್ದೆ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ.

  • ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

    ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

    ಮುಂಬೈ: ಬಾಲಿವುಡ್ ಲವ್​ ಬರ್ಡ್ಸ್ ನಟ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಈ ಬಾರಿ ಹೊಸವರ್ಷ ಸಂಭ್ರಮಾಚರಣೆಗೆ ಮಾಲ್ಡೀವ್ಸ್‌ಗೆ ಹಾರಿದರು.

    ಇಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಒಟ್ಟಿಗೆ ಕ್ಯಾಮೆರಾ ಕಣ್ಣಿಗೆ ಬಿದ್ದ ಈ ಜೋಡಿ ಪಾಪಾರಾಜಿಗಳಿಗೆ ಹಾಯ್ ಮಾಡಿದರು. ಈ ವೇಳೆ ಕಿಯಾರಾ ಸ್ಟೈಲಿಶ್ ಸನ್ ಗ್ಲಾಸ್ ತೊಟ್ಟು ಪಿಂಕ್ ಕಲರ್ ಸ್ಟೆಟ್ ಟಿ-ಶರ್ಟ್ ಮಾದರಿಯ ಉಡುಪು ಧರಿಸಿದ್ದರು ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವೈಟ್ ಕಲರ್ ಟಿ ಶಟ್ ಮತ್ತು ಗ್ರೀನ್ ಕಲರ್ ಜಾಕೆಟ್ ಅದಕ್ಕೆ ಸೂಟ್ ಆಗುವಂತೆ ಬ್ಲ್ಯಾಕ್ ಕಲರ್ ಸನ್ ಗ್ಲಾಸ್ ಧರಿಸಿದ್ದರು. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ತೇಜಸ್ವಿ ಸೂರ್ಯನ ಬುರುಡೇಲಿ ಮೆದುಳೇ ಇಲ್ಲ: ರಮ್ಯಾ

     

    View this post on Instagram

     

    A post shared by Viral Bhayani (@viralbhayani)

    ಕಿಯಾರಾ ಹಾಗೂ ಸಿದ್ಧಾರ್ಥ್ ಇಬ್ಬರ ನಡುವೆ ಲವ್ವಿ-ಡವ್ವಿ ಶುರುವಾಗಿದೆ ಎಂಬ ಸುದ್ದಿ ಮೊದಲಿನಿಂದಲೂ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದ ಶೇರ್ ಷಾ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಇವರಿಬ್ಬರ ಪ್ರೀತಿ ವಿಚಾರ ಮತ್ತಷ್ಟು ಸ್ಟ್ರಾಗ್ ಆಗಿದೆ. ಇದನ್ನೂ ಓದಿ: ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

    ಶೇರ್ ಷಾ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದು, ವಿಕ್ರಮ್‍ಗೆ ಜೋಡಿಯಾಗಿ ಡಿಂಪಲ್ ಪಾತ್ರದಲ್ಲಿ ಕಿಯಾರಾ ಕಾಣಿಸಿಕೊಂಡಿದ್ದರು. ಇದೊಂದು ಪ್ರೇಮ ಕಥೆ ಆಧಾರಿತ ಸಿನಿಮಾವಾಗಿದ್ದು, ಈ ಚಿತ್ರಕ್ಕೆ ನಿರ್ದೇಶಕ ವಿಷ್ಣುವರ್ಧನ್ ಆ್ಯಕ್ಷನ್ ಕಟ್ ಹೇಳಿದ್ದರು. ಧರ್ಮ ಪ್ರೊಡಕ್ಷನ್ಸ್ ಮತ್ತು ಕಾಶ್ ಎಂಟರ್​ಟೈನ್​ಮೆಂಟ್ ಜಂಟಿಯಾಗಿ ಬಂಡವಾಳ ಹೂಡಿದ್ದರು. 2021ರ ಆಗಸ್ಟ್ 12ರಂದು ಈ ಸಿನಿಮಾ ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿತ್ತು.

  • ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಪತಿ ಜೊತೆಗೆ ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಪ್ರಿಯಾಂಕಾ ಚಿಂಚೋಳಿ

    ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪ್ರಿಯಾಂಕಾ ಚಿಂಚೋಳಿ ಪತಿ ರಾಕೇಶ್ ಜೊತೆಗೆ ಹನಿಮೂನ್‍ಗೆ ಹಾರಿದ್ದಾರೆ.

    ಕಳೆದ ವಾರವಷ್ಟೇ ಕುಟುಂಬದವರ ಸಮ್ಮುಖದಲ್ಲಿ ರಾಕೇಶ್ ಜೊತೆಗೆ ಶಾಸ್ತ್ರೋಕ್ತವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಿಯಾಂಕಾ ಚಿಂಚೋಳಿ ಇದೀಗ ಪತಿ ಜೊತೆಗೆ ಮಾಲ್ಡೀವ್ಸ್‌ಗೆ ಹನಿಮೂನ್‍ಗೆ ಹಾರಿದ್ದಾರೆ. ಪತಿ ಜೊತೆಗೆ ಏಕಾಂತವಾಗಿ ಕಾಲ ಕಳೆಯುತ್ತಿರುವ ಅವರು, ಮಾಲ್ಡೀವ್ಸ್‌ನ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ವೀಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮಾಲ್ಡೀವ್ಸ್‌ನ  ಕಡಲ ತೀರದ ದೃಶ್ಯ,  ಏರ್‌ಪೋರ್ಟ್‌, ಮೂನ್ ಲೈಟ್ ಕೆಳಗೆ ಡಿನ್ನರ್ ಮಾಡುತ್ತಿರುವ ದೃಶ್ಯ ಸೇರಿದಂತೆ ಹಲವಾರು ಫೋಟೋಗಳನ್ನು ಇನ್‍ಸ್ಟಾ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದ ನಟಿ ಪ್ರಿಯಾಂಕಾ ಚಿಂಚೋಳಿ

    ಕಳೆದ ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆಯಂದು ರಾಕೇಶ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಿಯಾಂಕಾ ಚಿಂಚೋಳಿ, ಆಗಸ್ಟ್ 14ರಂದು ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ನಂತರ ಅಮೇರಿಕಾದಿಂದ ಮದುವೆಗಾಗಿ ಭಾರತಕ್ಕೆ ಬಂದ ರಾಕೇಶ್ ಜೊತೆಗೆ ಡಿಸೆಂಬರ್ 10-11ರಂದು ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ಸಂಪ್ರದಾಯಿಕವಾಗಿ ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು.  ಇದನ್ನೂ ಓದಿ:  ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ

    ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರವಾಹಿಯಲ್ಲಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೈ ಹನುಮಾನ್ ಮತ್ತು ಮನಸಾರೆ ಧಾರವಾಹಿಯಲ್ಲಿ ನಟಿಸುತ್ತಿದ್ದಾರೆ ಜೊತೆಗೆ ರಾಗ ಎಂಬ ಧಾರವಾಹಿಯಲ್ಲಿ ಕೂಡ ನಟಿಸುತ್ತಿದ್ದಾರೆ.

  • ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

    ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ

    ಮುಂಬೈ: ಬಾಲಿವುಡ್ ನಟಿ ಇಲಿಯಾನಾ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಿನಿಮಾ, ನಟ, ನಟಿಯರು ಮಾಲ್ಡೀವ್ಸ್‌ಗೆ ತೆರಳಿ ಸಖತ್ ಎಂಜಾಯ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ನಟಿ ಪೂಜಾ ಹೆಗ್ಡೆ ಬಿಕಿನಿ ತೊಟ್ಟು ಮಾಲ್ಡೀವ್ಸ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟು ಹುಡುಗರ ಹಾಟ್ ಬಿಟ್ ಹೆಚ್ಚಿಸಿದ್ದರು. ಇದೀಗ ಇಲಿಯಾನಾ ಮಾಲ್ಡೀವ್ಸ್‌ನಲ್ಲಿ ಬಿಕಿನಿ ತೊಟ್ಟು ಬೀಚ್‍ಗಳಲ್ಲಿ ಮಾದಕವಾಗಿ ಪೋಸ್ ನೀಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ನಂಬರ್ ನಕಲು ಮಾಡಿ ಜಾಕ್ವೆಲಿನ್ ಸ್ನೇಹ ಮಾಡಿದ್ದ ವಂಚಕ ಸುಕೇಶ್

     

    View this post on Instagram

     

    A post shared by Ileana D’Cruz (@ileana_official)

    ಕೂಲ್ ಡ್ರಿಂಕ್ ಕುಡಿಯುತ್ತಾ ಈ ಬಿಸಿಲಿನಲ್ಲಿ ನೀಲಿ ಸಮುದ್ರ ನೋಡಿಕೊಂಡು ಕುಳಿತುಕೊಳ್ಳುವುದಕ್ಕಿಂತ ಬೇರೆ ಮಜಾ ಇದ್ಯಾ? ಎಂದು ಬರೆದುಕೊಂಡು ಕೆಲವು ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಇಲಿಯಾನ ಸಾಕಷ್ಟು ದಿನಗಳಿಂದ ಮಾಲ್ಡೀವ್ಸ್‌ನಲ್ಲಿಯೇ ಬಿಡು ಬಿಟ್ಟಿದ್ದು, ಆಗಾಗ ತನ್ನ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ಇಡಿ ಮುಂದೆ ವಿಚಾರಣೆಗೆ ಹಾಜರಾದ ಜಾಕ್ವೆಲಿನ್

    ಬಿಳಿ ಮತ್ತು ನೀಲಿ ಬಣ್ಣದ ಬಿಕಿನಿ ತೊಟ್ಟು ಫೋಟೋಗಳನ್ನು ನೋಡಬಹುದಾಗಿದೆ. ಕೆಲವರು ಮೆಚ್ಚುಗೆ ಸೂಚಿಸಿದರೆ ಇನ್ನು ಕೆಲವರು ಇಲಿಯಾನ ಕಾಲೆಳೆಯವಂತ ಪ್ರಶ್ನೆಗಳನ್ನು ಕೇಳುತ್ತಾ ಕಾಮೆಂಟ್ ಮಾಡುತ್ತಿದ್ದಾರೆ.