Tag: Maldives

  • ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಎಫೆಕ್ಟ್‌ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

    ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಎಫೆಕ್ಟ್‌ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

    – #BoycottMaldives ಅಭಿಯಾನ ನಡೆಸಿದ್ದ ಭಾರತೀಯ ಪ್ರವಾಸಿಗರು

    ನವದೆಹಲಿ: ಮಾಲ್ಡೀವ್ಸ್‌ (Maldives) ಪ್ರವಾಸೋದ್ಯಮದ ಮೇಲೆ ಭಾರತೀಯ ಪ್ರವಾಸಿಗರ ‘ಬಾಯ್ಕಾಟ್‌ ಮಾಲ್ಡೀವ್ಸ್‌’ (Boycott Maldives) ಅಭಿಯಾನದ ಬಿಸಿ ತಟ್ಟಿದೆ. ಕಳೆದ ವರ್ಷ ಮಾಲ್ಡೀವ್ಸ್‌ ಪ್ರವಾಸದಲ್ಲಿ ನಂ.1 ಸ್ಥಾನದಲ್ಲಿದ್ದ ಭಾರತ (India) ವಿವಾದದ ಬಳಿಕ ಈಗ 5ನೇ ಸ್ಥಾನಕ್ಕೆ ಕುಸಿದೆ.

    ಕಳೆದ ಮೂರು ವಾರಗಳಲ್ಲಿ ಮಾಲ್ಡೀವ್ಸ್ ಪ್ರವಾಸದಲ್ಲಿ ಗಮನಾರ್ಹ ಬದಲಾವಣೆ ಎದುರಿಸಿದೆ. ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಸಚಿವಾಲಯದ ಮಾಹಿತಿ ಪ್ರಕಾರ, ಭಾರತೀಯರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಜ.28 ರಲ್ಲಿ ಪಡೆದ ಅಂಕಿಅಂಶಗಳು ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟನ್ನು ಇದು ಪ್ರತಿಬಿಂಬಿಸುವಂತಿವೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    2023 ರಲ್ಲಿ ಯಾವ ದೇಶ ಯಾವ ಸ್ಥಾನದಲ್ಲಿತ್ತು?
    1. ರಷ್ಯಾ: 18,561 ಪ್ರವಾಸಿಗರ ಆಗಮನ (10.6% ಮಾರುಕಟ್ಟೆ ಪಾಲು, 2023 ರಲ್ಲಿ 2 ನೇ ಸ್ಥಾನ)
    2. ಇಟಲಿ: 18,111 ಆಗಮನ (10.4% ಮಾರುಕಟ್ಟೆ ಪಾಲು, 2023 ರಲ್ಲಿ 6 ನೇ ಸ್ಥಾನ)
    3. ಚೀನಾ: 16,529 ಆಗಮನ (9.5% ಮಾರುಕಟ್ಟೆ ಪಾಲು, 2023 ರಲ್ಲಿ 3 ನೇ ಸ್ಥಾನ)
    4. ಯುಕೆ: 14,588 ಆಗಮನ (8.4% ಮಾರುಕಟ್ಟೆ ಪಾಲು, 2023 ರಲ್ಲಿ 4 ನೇ ಸ್ಥಾನ)
    5. ಭಾರತ: 13,989 ಆಗಮನ (8.0% ಮಾರುಕಟ್ಟೆ ಪಾಲು, 2023 ರಲ್ಲಿ 1 ನೇ ಸ್ಥಾನ)
    6. ಜರ್ಮನಿ: 10,652 ಆಗಮನ (6.1% ಮಾರುಕಟ್ಟೆ ಪಾಲು)
    7. USA: 6,299 ಆಗಮನ (3.6% ಮಾರುಕಟ್ಟೆ ಪಾಲು, 2023 ರಲ್ಲಿ 7 ನೇ ಸ್ಥಾನ)
    8. ಫ್ರಾನ್ಸ್: 6,168 ಆಗಮನ (3.5% ಮಾರುಕಟ್ಟೆ ಪಾಲು, 2023 ರಲ್ಲಿ 8 ನೇ ಸ್ಥಾನ)
    9. ಪೋಲೆಂಡ್: 5,109 ಆಗಮನ (2.9% ಮಾರುಕಟ್ಟೆ ಪಾಲು, 2023 ರಲ್ಲಿ 14 ನೇ ಸ್ಥಾನ)
    10. ಸ್ವಿಟ್ಜರ್ಲೆಂಡ್: 3,330 ಆಗಮನ (1.9% ಮಾರುಕಟ್ಟೆ ಪಾಲು, 2023 ರಲ್ಲಿ 10 ನೇ ಸ್ಥಾನ)

    ಕಳೆದ ವರ್ಷ ಡಿ.31 ರ ಹೊತ್ತಿಗೆ ಭಾರತವು ಪ್ರವಾಸಿಗರ ಸಂಖ್ಯೆಯಲ್ಲಿ ಅಗ್ರ ಸ್ಥಾನವನ್ನು ಹೊಂದಿತ್ತು. 2,09,198 ಪ್ರವಾಸಿಗರ ಆಗಮನದೊಂದಿಗೆ ಆ ವರ್ಷದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಮಾರುಕಟ್ಟೆಯ ಸುಮಾರು ಶೇ.11 ರಷ್ಟನ್ನು ಹೊಂದಿತ್ತು. ಇದನ್ನೂ ಓದಿ: ಭಾರತದ ವಿರುದ್ಧ ಅಪಮಾನಕರ ಹೇಳಿಕೆ – ಮಾಲ್ಡೀವ್ಸ್‌ ಸಚಿವರ ಅಮಾನತು

    ಮಾಲ್ಡೀವ್ಸ್‌-ಭಾರತ ಬಿಕ್ಕಟ್ಟಿಗೆ ಕಾರಣ ಏನು?
    ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಅದು ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಹೈಪ್‌ ಕ್ರಿಯೇಟ್‌ ಮಾಡಿತ್ತು. ಗೂಗಲ್‌ನಲ್ಲಿ ಹೆಚ್ಚಿನ ಮಂದಿ ಮಾಲ್ಡೀವ್ಸ್‌ಗಿಂತ ಲಕ್ಷದ್ವೀಪ ಕುರಿತು ಸರ್ಚ್‌ ಮಾಡಿದ್ದರು. ಸಹಜವಾಗಿ ಇದು ಮಾಲ್ಡೀವ್ಸ್‌ ಬೇಸರಕ್ಕೆ ಕಾರಣವಾಯಿತು. ಪ್ರಧಾನಿ ಮೋದಿ ಅವರು ಮಾಲ್ಡೀವ್ಸ್‌ ಗುರಿಯಾಗಿಸಿಕೊಂಡಿದ್ದಾರೆ ಎಂದು ಅಲ್ಲಿನ ಸಚಿವರು ಅಸಮಾಧಾನ ಹೊರಹಾಕಿದ್ದರು.

    ಭಾರತ ಕುರಿತು ಮಾಲ್ಡೀವ್ಸ್‌ ಸಚಿವರ ಅವಹೇಳನಕಾರಿ ಹೇಳಿಕೆಗೆ ಭಾರತದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಯಿತು. ಭಾರತೀಯ ಪ್ರವಾಸಿಗರು ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಅಭಿಯಾನ ನಡೆಸಿದರು. ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಂಡಿದ್ದ ಟಿಕೆಟ್‌ ಬುಕಿಂಗ್‌ ರದ್ದುಗೊಳಿಸಿಕೊಂಡರು. ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಳ್ಳುವವರ ಸಂಖ್ಯೆಯಲ್ಲಿ ಭಾರತೀಯರೇ ಹೆಚ್ಚಿದ್ದರು. ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಮಾಲ್ಡೀವ್ಸ್‌ಗೆ ಪ್ರವಾಸ ಕೈಗೊಳ್ಳುವ ಭಾರತೀಯರ ಸಂಖ್ಯೆ ಕುಸಿದಿದೆ. ಇದನ್ನೂ ಓದಿ: ಮಾಲ್ಡೀವ್ಸ್‌ ನಾಚಿಸುವ ಸಾಗರ ತೀರಗಳು ನಮ್ಮ ಕರಾವಳಿಯಲ್ಲೇ ಇವೆ ಕಣ್ತುಂಬಿಕೊಳ್ಳಿ..!

  • ಮಾಲ್ಡೀವ್ಸ್ ಟಿಕೆಟ್ ಕ್ಯಾನ್ಸಲ್ ಮಾಡಿದ ನಟ ನಾಗಾರ್ಜುನ್

    ಮಾಲ್ಡೀವ್ಸ್ ಟಿಕೆಟ್ ಕ್ಯಾನ್ಸಲ್ ಮಾಡಿದ ನಟ ನಾಗಾರ್ಜುನ್

    ತೆಲುಗಿನ ಖ್ಯಾತ ನಟ ನಾಗಾರ್ಜುನ್ (Nagarjuna) ಮಾಲ್ಡೀವ್ಸ್ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡುವ ಮೂಲಕ ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಈ ವಿಷಯವಾಗಿ ನನಗೆ ಯಾವುದೇ ಭಯವಿಲ್ಲ ಎಂದೂ ಅವರು ಹೇಳಿಕೊಂಡಿದ್ದಾರೆ. ಲಕ್ಷ ದ್ವೀಪದಲ್ಲಿ ಮೋದಿ ಕಾಣಿಸಿಕೊಂಡ ನಂತರ ಮಾಲ್ಡೀವ್ಸ್ ಮತ್ತು ಭಾರತದ ಮಧ್ಯ ಬಿರುಕು ಕಾಣಿಸಿಕೊಂಡಿದೆ. ಮಾಲ್ಡೀವ್ಸ್ ಪ್ರಯಾಣದ ಕುರಿತಂತೆ ಹಲವಾರು ಸೆಲೆಬ್ರಿಟಿಗಳು ಮಾತನಾಡಿದ್ದಾರೆ.

    ಈ ನಡುವೆ ಮಾಲ್ಡೀವ್ಸ್‌ನಿಂದ (Maldives) ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು (Mohamed Muizzu) ತಿಳಿಸಿದ್ದಾರೆಂದು ವರದಿಯಾಗಿದೆ.  ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ.

    ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಬ್ದುಲ್ಲಾ ನಜೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಮುಯಿಝು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹಿಂತೆಗೆದುಕೊಳ್ಳಲು ಪ್ರಸ್ತಾಪಿಸಿದ್ದಾರೆ.  ಮಾರ್ಚ್ 15 ರ ಒಳಗೆ ಭಾರತೀಯ ಸೈನಿಕರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಲ್ಡೀವ್ಸ್‌ ಅಧ್ಯಕ್ಷರು ಮಾಡಿದ್ದಾರೆ. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಯಾದ ಸಭೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ.

    ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಅಬ್ದುಲ್ಲಾ ಫಯಾಜ್, ಲಾರ್ಜ್‌ನಲ್ಲಿರುವ ರಾಯಭಾರಿ ಅಲಿ ನಸೀರ್, ಭಾರತದ ಮಾಲ್ಡೀವ್ಸ್ ರಾಯಭಾರಿ ಇಬ್ರಾಹಿಂ ಶಹೀಬ್ ಮತ್ತು ರಕ್ಷಣಾ ಪಡೆಯ ಮುಖ್ಯಸ್ಥ ಅಬ್ದುಲ್ ರಹೀಂ ಅಬ್ದುಲ್ ಲತೀಫ್ ಸಭೆ ನಡೆಸಿದ್ದಾರೆ.

     

    ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಪ್ರಸ್ತುತ, ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 70 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ.

  • ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಮಾಲೆ: ಭಾರತ ವಿರೋಧಿ ನಿಲುವು ತೆಳೆದು, ಚೀನಾ ಪರ ವಾಲಿರುವ ಮಾಲ್ಡೀವ್ಸ್ (Maldives) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಅವರ ಪಕ್ಷಕ್ಕೆ ಮೇಯರ್‌ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು, ಭಾರತದ ಪರ ನಿಲುವು ಹೊಂದಿರುವ ಪಕ್ಷ ಜಯಗಳಿಸಿದೆ.

    ಮಾಲೆಯ ಮೇಯರ್‌ ಚುನಾವಣೆಯಲ್ಲಿ ಸದ್ಯ ವಿರೋಧ ಪಕ್ಷವಾಗಿರುವ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಭರ್ಜರಿ ಜಯ ಸಾಧಿಸಿದೆ.

    https://twitter.com/MayorAdamAzim/status/1746609631437500766

     

    ಈ ಮೊದಲು ಮೊಹಮ್ಮದ್ ಮುಯಿಝು ಅವರು ಮೇಯರ್‌ ಆಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೇಯರ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಉಪ ಚುನಾವಣೆ ನಡೆದಿತ್ತು.

    ಎಂಡಿಪಿ ಅಭ್ಯರ್ಥಿ ಅಜೀಂ 5,303 ಮತಗಳನ್ನು ಪಡೆದರೆ ಪ್ರತಿಸ್ಪರ್ಧಿ ಮುಯಿಝು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNP) ಪಕ್ಷದ ಐಶಾತ್ ಅಜಿಮಾ ಶಕೂರ್ ಅವರು 3,301 ಮತಗಳನ್ನು ಪಡೆದಿದ್ದಾರೆ. ಭಾರತದ ವಿರೋಧಿ ನಿಲುವು ತಳೆದಿದ್ದಕ್ಕೆ ಪಿಎನ್‌ಪಿ ಅಭ್ಯರ್ಥಿಗೆ ಸೋಲಾಗಿದೆ ಎಂದೇ ವಿಶ್ಲೇಷಿಸಲಾಗುತ್ತದೆ.  ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    ಚೀನಾ ಪ್ರವಾಸ ಮುಗಿಸಿ ಬಂದಿರುವ ಮೊಹಮ್ಮದ್ ಮುಯಿಝು ಅವರು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಸರ್ಕಾರಕ್ಕೆ ಸೂಚಿಸಿದ್ದಾರೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ.

     

  • ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಕರೆ

    ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಕರೆ

    ಮಾಲೆ: ಮಾಲ್ಡೀವ್ಸ್‌ನಿಂದ (Maldives) ಭಾರತೀಯ ಸೈನಿಕರನ್ನು (Indian Army) ವಾಪಸ್‌ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರಕ್ಕೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು (Mohamed Muizzu) ತಿಳಿಸಿದ್ದಾರೆಂದು ವರದಿಯಾಗಿದೆ.

    ಮಾರ್ಚ್‌ 15 ರ ಮುಂಚೆಗೆ ಭಾರತೀಯ ಸೇನೆಯನ್ನು ದ್ವೀಪ ರಾಷ್ಟ್ರದಿಂದ (ಮಾಲ್ಡೀವ್ಸ್‌) ಹಿಂತೆಗೆದುಕೊಳ್ಳಬೇಕು ಎಂದು ಮಾಲ್ಡೀವ್ಸ್‌ ಅಧ್ಯಕ್ಷರು ಹೇಳಿದ್ದಾರೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳು ಮತ್ತು ಮಾಲೆಯಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳ ನಡುವಿನ ಸಭೆಯ ನಂತರ ಈ ಹೇಳಿಕೆ ಬಂದಿದೆ. ಇದನ್ನೂ ಓದಿ: ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್‌ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ

    ಮಾಲ್ಡೀವ್ಸ್ ಅಧ್ಯಕ್ಷರ ಕಚೇರಿಯ ನೀತಿ ನಿರ್ದೇಶಕ ಅಬ್ದುಲ್ಲಾ ನಜೀಮ್ ಸುದ್ದಿಗಾರರೊಂದಿಗೆ ಮಾತನಾಡಿ, ಅಧ್ಯಕ್ಷ ಮುಯಿಝು ಮಾಲ್ಡೀವ್ಸ್‌ನಿಂದ ಭಾರತೀಯ ಸೈನಿಕರನ್ನು ಹಿಂತೆಗೆದುಕೊಳ್ಳಲು ಪ್ರಸ್ತಾಪಿಸಿದ್ದಾರೆ.

    ಮಾರ್ಚ್ 15 ರ ಒಳಗೆ ಭಾರತೀಯ ಸೈನಿಕರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಮಾಲ್ಡೀವ್ಸ್‌ ಅಧ್ಯಕ್ಷರು ಮಾಡಿದ್ದಾರೆ. ಆದರೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವರದಿಯಾದ ಸಭೆಯ ಬಗ್ಗೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    ಮಾಲ್ಡೀವ್ಸ್‌ ಅಧ್ಯಕ್ಷರ ಕಚೇರಿಯ ಮುಖ್ಯಸ್ಥ ಅಬ್ದುಲ್ಲಾ ಫಯಾಜ್, ಲಾರ್ಜ್‌ನಲ್ಲಿರುವ ರಾಯಭಾರಿ ಅಲಿ ನಸೀರ್, ಭಾರತದ ಮಾಲ್ಡೀವ್ಸ್ ರಾಯಭಾರಿ ಇಬ್ರಾಹಿಂ ಶಹೀಬ್ ಮತ್ತು ರಕ್ಷಣಾ ಪಡೆಯ ಮುಖ್ಯಸ್ಥ ಅಬ್ದುಲ್ ರಹೀಂ ಅಬ್ದುಲ್ ಲತೀಫ್ ಸಭೆ ನಡೆಸಿದ್ದಾರೆ.

    ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಪ್ರಸ್ತುತ, ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 70 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತದ ವಿರುದ್ಧ ಅಪಮಾನಕರ ಹೇಳಿಕೆ – ಮಾಲ್ಡೀವ್ಸ್‌ ಸಚಿವರ ಅಮಾನತು

    ಅಧಿಕಾರ ವಹಿಸಿಕೊಂಡಿದ್ದ ಎರಡನೇ ದಿನದಂದೇ, ಮುಯಿಝು, ತನ್ನ ಸೇನಾ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಅಧಿಕೃತವಾಗಿ ವಿನಂತಿಸಿದ್ದರು.

  • ಬೈಕಾಟ್ ನಡುವೆಯೂ ಮಾಲ್ಡೀವ್ಸ್ ನಲ್ಲಿ ಬಿಪಾಶಾ ಬರ್ತ್‌ಡೇ

    ಬೈಕಾಟ್ ನಡುವೆಯೂ ಮಾಲ್ಡೀವ್ಸ್ ನಲ್ಲಿ ಬಿಪಾಶಾ ಬರ್ತ್‌ಡೇ

    ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಏನೆಲ್ಲ ಸಂಗತಿಗಳು ನಡೆಯುತ್ತಿವೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಸಖತ್ ಬೆಂಬಲ ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಂದರ ತಾಣದಲ್ಲಿ ಹುಟ್ಟು ಹಬ್ಬ ಎಂದು ಫೋಟೋ ಹಂಚಿಕೊಂಡಿದ್ದಾರೆ.

    ಜನವರಿ 7 ರಂದು ಬಿಪಾಶಾ ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳು ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದೆ. ನಿಮಗೆ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಕಿತ್ತಾಟ ಗೊತ್ತಿಲ್ಲವಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಮಾಲ್ಡೀವ್ಸ್ ಅಭಿಯಾನ ಜೋರು

    ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ ಪೇಚೆಗೆ ಸಿಲುಕಿದ ಮಾಲ್ಡೀವ್ಸ್‌ (Maldives) ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ಭಾರತಕ್ಕೆ ಬರಲು ಮುಂದಾಗಿದ್ದಾರೆ.

    ಹೌದು. ಸ್ವತ: ಮಾಲ್ಡೀವ್ಸ್‌ ಜನರೇ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಸರ್ಕಾರ ಮೂವರು ಸಚಿವರನ್ನು ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿತ್ತು. ಈಗ ಮೊಹಮ್ಮದ್ ಮಿಜು ವಿರುದ್ಧ ಈಗ ವಿಪಕ್ಷ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಮೊಹಮ್ಮದ್ ಮಿಜು ಭಾರತ (India) ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

     

    ಮಾಲ್ಡೀವ್ಸ್‌ ಸರ್ಕಾರ ಈ ಪ್ರಸ್ತಾಪವನ್ನು ಭಾರತದ ಮುಂದಿಟ್ಟರೂ ಮೋದಿ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮೊದಲು ಮಾಲ್ಡೀವ್ಸ್‌ನಲ್ಲಿದ್ದ ಸರ್ಕಾರ ಭಾರತದ ಪರವಾಗಿತ್ತು. ಕೋವಿಡ್‌ ಸಮಯಲ್ಲಿ ಭಾರತ ಲಸಿಕೆಯನ್ನು ರಫ್ತು ಮಾಡಿತ್ತು. ಹೀಗಿದ್ದರೂ ಭಾರತದ ವಿರುದ್ಧವೇ ಹೇಳಿಕೆ ನೀಡಿಯೇ ಮೊಹಮ್ಮದ್ ಮಿಜು ಅಧ್ಯಕ್ಷ ಚುನಾವಣೆಯಲ್ಲಿ ಜಯಗಳಿಸಿದ್ದರು. ಸದ್ಯ ಮೊಹಮ್ಮದ್ ಮಿಜು ಚೀನಾ ಪ್ರವಾಸದಲ್ಲಿದ್ದಾರೆ.

  • ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್‌ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ

    ಭಾರತಕ್ಕೆ ಬರಲು ಮುಂದಾದ ಮಾಲ್ಡೀವ್ಸ್‌ ಅಧ್ಯಕ್ಷ – ವಿಪಕ್ಷದಿಂದ ಅವಿಶ್ವಾಸ ನಿರ್ಣಯ ಸಾಧ್ಯತೆ

    ಮಾಲೆ/ನವದೆಹಲಿ: ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ ಪೇಚೆಗೆ ಸಿಲುಕಿದ ಮಾಲ್ಡೀವ್ಸ್‌ (Maldives) ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ಭಾರತಕ್ಕೆ ಬರಲು ಮುಂದಾಗಿದ್ದಾರೆ.

    ಹೌದು. ಸ್ವತ: ಮಾಲ್ಡೀವ್ಸ್‌ ಜನರೇ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಸರ್ಕಾರ ಮೂವರು ಸಚಿವರನ್ನು ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿತ್ತು. ಈಗ ಮೊಹಮ್ಮದ್ ಮಿಜು ವಿರುದ್ಧ ಈಗ ವಿಪಕ್ಷ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಮೊಹಮ್ಮದ್ ಮಿಜು ಭಾರತ (India) ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

    ಮಾಲ್ಡೀವ್ಸ್‌ ಸರ್ಕಾರ ಈ ಪ್ರಸ್ತಾಪವನ್ನು ಭಾರತದ ಮುಂದಿಟ್ಟರೂ ಮೋದಿ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮೊದಲು ಮಾಲ್ಡೀವ್ಸ್‌ನಲ್ಲಿದ್ದ ಸರ್ಕಾರ ಭಾರತದ ಪರವಾಗಿತ್ತು. ಕೋವಿಡ್‌ ಸಮಯಲ್ಲಿ ಭಾರತ ಲಸಿಕೆಯನ್ನು ರಫ್ತು ಮಾಡಿತ್ತು. ಹೀಗಿದ್ದರೂ ಭಾರತದ ವಿರುದ್ಧವೇ ಹೇಳಿಕೆ ನೀಡಿಯೇ ಮೊಹಮ್ಮದ್ ಮಿಜು ಅಧ್ಯಕ್ಷ ಚುನಾವಣೆಯಲ್ಲಿ ಜಯಗಳಿಸಿದ್ದರು. ಸದ್ಯ ಮೊಹಮ್ಮದ್ ಮಿಜು ಚೀನಾ ಪ್ರವಾಸದಲ್ಲಿದ್ದಾರೆ.

    ಜೋರಾದ ಅಭಿಯಾನ: ಮಾಲ್ಡೀವ್ಸ್‌ ಪ್ರವಾಸಿ ಕಂಪನಿಗಳು ಭಾರತದ ವ್ಲಾಗರ್ಸ್‌ಳ ಪ್ರವಾಸದ ವೆಚ್ಚವನ್ನು ಭರಿಸಿ ಪ್ರಚಾರ ಮಾಡುತ್ತಿವೆ. ಈ ರೀತಿಯ ಪ್ರವಾಸ ಮಾಡಿ ವಿಡಿಯೋ ಮಾಡುವ ಕಂಟೆಂಟ್‌ ಕಿಯೇಟರ್ಸ್‌ಗಳನ್ನುಅನ್‌ಫಾಲೋ ಮಾಡಬೇಕು ಎಂಬ ಅಭಿಯಾನ ಈಗ ಆರಭವಾಗಿದೆ.

     

    ಸಚಿವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದರೂ ಭಾರತೀಯರ ಅಭಿಯಾನ ಮಾತ್ರ ನಿಲ್ಲುತ್ತಿಲ್ಲ. ಕಳೆದ ನಾಲ್ಕು ದಿನಗಳದಿಂದ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್‌ ಟ್ರೆಂಡಿಂಗ್‌ ಟಾಪಿಕ್‌ ಆಗಿದೆ. ಅಷ್ಟೇ ಅಲ್ಲದೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಬುಕ್‌ ಮಾಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಇಳಿಕೆ ಆಗುತ್ತಿದೆ.

    ಮಾಲ್ಡೀವ್ಸ್‌ ಪ್ರಮುಖ ಆದಾಯ ಪ್ರವಾಸೋದ್ಯಮವೇ ಆಗಿದ್ದು, ಅದರಲ್ಲೂ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಈಗ ಮಾಲ್ಡೀವ್ಸ್ ಅಸೋಸಿಯೇಷನ್ ಆಫ್ ಟೂರಿಸಂ ಇಂಡಸ್ಟ್ರಿ ಸಚಿವರ ಹೇಳಿಕೆಯನ್ನು ಖಂಡಿಸಿದೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

  • ಲಕ್ಷದ್ವೀಪದ ರೋಚಕ ಇತಿಹಾಸ, ಇಲ್ಲಿರುವ ಪ್ರವಾಸಿ ತಾಣಗಳು ಯಾವುವು..?

    ಲಕ್ಷದ್ವೀಪದ ರೋಚಕ ಇತಿಹಾಸ, ಇಲ್ಲಿರುವ ಪ್ರವಾಸಿ ತಾಣಗಳು ಯಾವುವು..?

    ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ, ಮಾಲ್ಡೀವ್ಸ್ (Maldvies) ಉದ್ಧಟತನದ ಹೇಳಿಕೆ ನಂತ್ರ ಎಲ್ಲರ ಚಿತ್ತ ಲಕ್ಷದ್ವೀಪದತ್ತ ಹೊರಳಿದೆ. ಸಾಕಷ್ಟು ಮಂದಿ ಈ ಲಕ್ಷದ್ವೀಪದ ಬಗ್ಗೆ ಗೂಗಲ್ ಮಾಡಿದ್ದಾರೆ. ಹಾಗಿದ್ರೆ ಈ ಲಕ್ಷದ್ವೀಪದ ಇತಿಹಾಸ ಏನು ಎಂಬುದನ್ನು ಸರಳವಾಗಿ ನೋಡೋಣ.

    ಲಕ್ಷದ್ವೀಪದ (Lakshadweep) ಇತಿಹಾಸ ಬಲು ರೋಚಕವಾಗಿದೆ. ಮುಸ್ಲಿಂ ಬಾಹುಳ್ಯದ ಈ ದ್ವೀಪ ಸಮೂಹವನ್ನು ವಶಕ್ಕೆ ಪಡೆಯಲು ಪಾಕಿಸ್ತಾನ ಯತ್ನಿಸಿತ್ತು. ಅರ್ಧ ಗಂಟೆ ತಡವಾಗಿದ್ದರೂ ಲಕ್ಷದ್ವೀಪ ನಮ್ಮದಾಗಿರುತ್ತಿರಲಿಲ್ಲ. ಪಾಕಿಸ್ತಾನದ ಈ ಸಂಚನ್ನು ಭಾರತ ವಿಫಲಗೊಳಿಸಿದೆ. ಇದನ್ನೂ ಓದಿ: ಲಕ್ಷದ್ವೀಪದಲ್ಲಿ ಮೋದಿ ಸ್ನಾರ್ಕ್ಲಿಂಗ್ – ಫೋಟೋಗಳು ಸಿಕ್ಕಾಪಟ್ಟೆ ವೈರಲ್‌!

    ಪಾಕ್‌ ಸಂಚನ್ನು ಭಾರತ ವಿಫಲಗೊಳಿಸಿದ್ದು ಹೇಗೆ..?: 1947ರಲ್ಲಿ ಸ್ವಾತಂತ್ರ್ಯ ನಂತರ ಲಕ್ಷದ್ವೀಪ ಭಾರತದ ಭಾಗವಾಯ್ತು. ಆರಂಭದಲ್ಲಿ ಲಕ್ಷದ್ವೀಪವನ್ನು ನಿರ್ಲಕ್ಷಿಸಲಾಗಿತ್ತು. ಹೀಗಾಗಿ ಲಕ್ಷದ್ವೀಪದ ಮೇಲೆ ಪಾಕಿಸ್ತಾನದ (Pakistan) ಪ್ರಧಾನಿ ಲಿಯಾಖತ್ ಕಣ್ಣು ಹಾಕಿದ್ದ. ಇದೇ ವೇಳೆ ಸರ್ದಾರ್ ವಲ್ಲಭಾಯ್ ಪಟೇಲ್ ಚಿತ್ತವೂ ಹರಿದಿತ್ತು. ಇದನ್ನರಿತ ಪಾಕಿಸ್ತಾನ ಕೂಡಲೇ ಲಕ್ಷದ್ವೀಪದತ್ತ ಯುದ್ಧ ನೌಕೆ ಕಳುಹಿಸಿತ್ತು. ಆದರೆ ಇದಕ್ಕೂ ಮೊದಲೇ ಭಾರತೀಯ ಸೇನೆ ಲಕ್ಷದ್ವೀಪ ತಲುಪಿತ್ತು. ಭಾರತದ ತ್ರಿವರ್ಣ ಪತಾಕೆ ಕಂಡು ಸದ್ದಿಲ್ಲದೇ ಪಾಕ್ ಸೇನೆ ವಾಪಸ್ ಆಗಿತ್ತು. ಆ ಕ್ಷಣದಿಂದಲೂ ಲಕ್ಷದ್ವೀಪ ಭಾರತದ ಭಾಗವಾಗಿದೆ.

    ವಿಸ್ತೀರ್ಣ, ಜನಸಂಖ್ಯೆ ಎಷ್ಟು..?: ಭಾರತಕ್ಕೆ ಸೇರಿದ ಅತಿ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದ ವಿಸ್ತೀರ್ಣ 32.62 ಚದರ ಕಿ.ಮೀ. ಇನ್ನು 36 ಚಿಕ್ಕ ಚಿಕ್ಕ ದ್ವೀಪಗಳ ಸಮೂಹ ಇದೆ. ಇದರಲ್ಲಿ  10 ದ್ವೀಪಗಳಲ್ಲಿ ಮಾತ್ರ ಜನ ವಾಸ ಮಾಡುತ್ತಾರೆ. 2011ರ ಜನಗಣತಿ ಪ್ರಕಾರ, ಇಲ್ಲಿ 64,473 ಮಂದಿ ಇದ್ದಾರೆ. ಇಲ್ಲಿನ ಜನಸಂಖ್ಯೆಯಲ್ಲಿ 96% ಮಂದಿ ಮುಸ್ಲಿಮರು ಇದ್ದಾರೆ. ಸಾಕ್ಷರತೆ ಪ್ರಮಾಣ 91.82% ರಷ್ಟಿದೆ. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಮೋದಿ ಭೇಟಿ ಬಳಿಕ ಟ್ರೆಂಡ್: ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ಲಕ್ಷದ್ವೀಪದ ಪ್ರವಾಸಿ ತಾಣಗಳ ಬಗ್ಗೆ ಹುಡುಕಾಟ ನಡೆದಿದೆ. ಶುಕ್ರವಾರವೊಂದೇ ದಿನ 50ಸಾವಿರಕ್ಕೂ ಹೆಚ್ಚು ಜನ ಲಕ್ಷದ್ವೀಪದ ಬಗ್ಗೆ ಜಾಲಾಡಿದ್ದಾರೆ. ಇದು 20 ವರ್ಷದಲ್ಲೇ ಗರಿಷ್ಠ.. ಮೇಕ್ ಮೈ ಟ್ರಿಪ್‍ನಲ್ಲಿ ಲಕ್ಷದ್ವೀಪಕ್ಕಾಗಿ ಹುಡುಕುವರರ ಪ್ರಮಾಣ 3,400 ಪಟ್ಟು ಜಾಸ್ತಿಯಾಗಿದೆ. ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

    ಲಕ್ಷದ್ವೀಪದಲ್ಲಿ ನೋಡಲೇಬೇಕಾದ ಪ್ರವಾಸಿ ತಾಣಗಳು ಯಾವುವು..?:
    * ಕವರಟ್ಟಿ ದ್ವೀಪ: ಇದು ಲಕ್ಷದ್ವೀಪದ ರಾಜಧಾನಿಯಾಗಿದ್ದು, ಕವರಟ್ಟಿ ಸಮುದ್ರ ತೀರದಲ್ಲಿ ಸೂರ್ಯೋದಯ, ಸೂರ್ಯಾಸ್ತ ಕಣ್ತುಂಬಿಕೊಳ್ಳುವುದು ಒಂದು ಸೌಭಾಗ್ಯವೇ ಸರಿ.
    * ಮಿನಿಕಾಯ್ ದ್ವೀಪ: ತಿಳಿ ನೀಲಿ ಅಕಾಶ ನೋಡುತ್ತಾ ತಿಳಿಯಂತೆ ಕಾಣುವ ಸಮುದ್ರದಲ್ಲಿ ಬೋಟಿಂಗ್ ಹೋಗಲು ಹೇಳಿ ಮಾಡಿಸಿದ ತಾಣ ಈ ಮಿನಿಕಾಯ್ ದ್ವೀಪವಾಗಿದೆ.
    * ಅಮಿನಿ ಬೀಚ್: ಸ್ಕೂಬಾ ಡೈವಿಂಗ್ ಮಾಡುವವರು ಈ ದ್ವೀಪಕ್ಕೆ ತಪ್ಪದೇ ಹೋಗುತ್ತಾರೆ. ಅಪಾರ ಜಲಚರ, ಹವಳದ ದಿಬ್ಬಗಳನ್ನು ಇಲ್ಲಿ ಕಾಣಬಹುದಾಗಿದೆ.

    * ಅಗಟ್ಟಿ ಐಲ್ಯಾಂಡ್: ಸುಂದರ ಸಮುದ್ರ ತೀರದಲ್ಲಿ ವಿಹಾರ ಕೈಗೊಳ್ಳಬಹುದು. ಜೊತೆಗೆ ರುಚಿಕಟ್ಟಾದ ಮೀನೂಟಕ್ಕೆ ಈ ಜಾಗ ಫೇಮಸ್ ಆಗಿದೆ. ಆಹಾರ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ ಈ ಐಲ್ಯಾಂಡ್.
    * ಮರಿನ್ ಮ್ಯೂಸಿಯಂ: ಸಮುದ್ರದ ಜಲಚರ ಮ್ಯೂಸಿಯಂ ಇದು. ಚಿತ್ರವಿಚಿತ್ರ ಸಮುದ್ರ ಜೀವಿಗಳ ಪಳಯಳಿಕೆಗಳನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ. ಅಧ್ಯಯನ ಪ್ರಿಯರ ಮೆಚ್ಚಿನ ತಾಣ ಈ ಮೂಸಿಯಂ.
    * ಪಿಟ್ಟಿ ಪಕ್ಷಿಧಾಮ: ಲಕ್ಷದ್ವೀಪ ಎಂದ್ರೆ ಬರೀ ದ್ವೀಪಗಳು ಎಂಬ ಕಲ್ಪನೆ ಇದೆ. ಆದರೆ ಇಲ್ಲಿನ ಪಿಟ್ಟಿ ಪಕ್ಷಿಧಾಮ ಅಸಂಖ್ಯಾತ ವಿದೇಶಿ ಹಕ್ಕಿಗಳ ಗೂಡಾಗಿದೆ.

  • ಉಡುಪಿ ಬೀಚ್‍ಗಳ ಬಗ್ಗೆ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್

    ಉಡುಪಿ ಬೀಚ್‍ಗಳ ಬಗ್ಗೆ ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್

    ನವದೆಹಲಿ: ಲಕ್ಷದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ್ದನ್ನು ಮಾಲ್ಡೀವ್ಸ್ ವ್ಯಂಗ್ಯವಾಡಿದ್ದು, ಈ ಹಿನ್ನೆಲೆಯಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಅಭಿಯಾನ ಆರಂಭವಾಗಿದೆ. ಈ ಬೆನ್ನಲ್ಲೇ ಕ್ರಿಕೆಟಿಗರು ಸೇರಿ ಹಲವರು ಈ ಕ್ಯಾಂಪೇನ್‍ನಲ್ಲಿ ಪಾಲ್ಗೊಂಡು ಮೋದಿ ಬೆಂಬಲಕ್ಕೆ ನಿಂತಿದ್ದಾರೆ.

    ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ (Virender Sehwag) ಅವರು ಭಾರತದ ಸುಂದರ ಬೀಚ್‌ಗಳ ಫೋಟೋಗಳನ್ನು (Beach Photo) ಶೇರ್‌ ಮಾಡಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲೆಯ ಮರವಂತೆ ಬೀಚ್ ನ ಫೋಟೋಗಳು ಕೂಡ ಇದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ. ಇದನ್ನೂ ಓದಿ: #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    ಸೆಹ್ವಾಗ್‌ ಹೇಳಿದ್ದೇನು..?: ನಮ್ಮಲ್ಲಿ ಮಾಲ್ಡೀವ್ಸ್‌ಗಿಂತ ಸುಂದರ ಬೀಚ್‍ಗಳಿವೆ. ಉಡುಪಿ, ಪುದುಚ್ಚೆರಿ, ಅಂಡಮಾನ್-ನಿಕೋಬಾರ್ ನ ದ್ವೀಪಗಳ ಜೊತೆಗೆ ಅದೆಷ್ಟೋ ಸುಂದರ ತಾಣಗಳಿವೆ. ಮೂಲಭೂತ ಸೌಕರ್ಯ ಕಲ್ಪಿಸಿದಲ್ಲಿ ಇವುಗಳು ಪ್ರವಾಸಿಗರನ್ನು ವಿಶೇಷವಾಗಿ ಆಕರ್ಷಿಸಲಿವೆ. ಆಪತ್ತಿನಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಸಮಯ ಬಂದಿದೆ. ನಮ್ಮ ಪ್ರಧಾನಿ ಬಗ್ಗೆ ಅನುಚಿತ ಹೇಳಿಕೆ ಕೊಟ್ಟ ಮಾಲ್ಡೀವ್ಸ್ ಮಂತ್ರಿಗಳಿಗೆ ಈ ರೀತಿಯಾಗಿ ತಿರುಗೇಟು ಕೊಡೋಣ ಎಂದು ಕರೆ ನೀಡಿದ್ದಾರೆ. ಇರ್ಫಾನ್ ಖಾನ್, ಸುರೇಶ್ ರೈನಾ ಸೇರಿ ಹಲವರು ಎಕ್ಸ್ ಮಾಡಿದ್ದಾರೆ.‌

    ಸೆಹ್ವಾಗ್‌ ಅವರ ಈ ಪೋಸ್ಟ್‌ಗೆ ಎಕ್ಸ್‌ ಬಳಕೆದಾರರೊಬ್ಬರು ಉಡುಪಿ ಕುಂದಾಪುರಕ್ಕೆ ಯಾವತ್ತಾದರೂ ಭೇಟಿ ನೀಡಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆಹ್ವಾಗ್‌ ಹೌದು, ಉಡುಪಿ ನಿಜಕ್ಕೂ ಅದ್ಬುತ. ಪ್ರಾಚೀನ ಕಡಲತೀರಗಳು, ದೇವಾಲಯ ಮತ್ತು ಅದ್ಭುತ ಆಹಾರಗಳಿವೆ ಎಂದು ಕರಾವಳಿ ಜಿಲ್ಲೆಯನ್ನು ಹೊಗಳಿದ್ದಾರೆ.

  • ಲಕ್ಷ ದ್ವೀಪದ ಬಗ್ಗೆ ಬಾಲಿವುಡ್ ನಟಿ ಪೂನಂ ಪಾಂಡೆ ಭಿನ್ನ ಹೇಳಿಕೆ

    ಲಕ್ಷ ದ್ವೀಪದ ಬಗ್ಗೆ ಬಾಲಿವುಡ್ ನಟಿ ಪೂನಂ ಪಾಂಡೆ ಭಿನ್ನ ಹೇಳಿಕೆ

    ಪ್ರಧಾನಿ ನರೇಂದ್ರ ಮೋದಿ ಲಕ್ಷ ದ್ವೀಪಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಅದು ವಿವಾದವಾಗಿ ಮಾರ್ಪಟ್ಟಿತು. ಮಾಲ್ಡೀವ್ಸ್ ಸಚಿವರು ಮೋದಿಯ ಲಕ್ಷ ದ್ವೀಪದ ಭೇಟಿಯನ್ನು ವಿವಾದವಾಗಿ ರೂಪಾಂತರಿಸಿದರು. ಅದಕ್ಕ ತಕ್ಕ ಪಾಠವನ್ನು ಅವರು ಕಲಿತಾಗಿದೆ. ಇದೆಲ್ಲ ಆದ ಬೆನ್ನಲ್ಲೇ ಅನೇಕರು ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿ, ಮೋದಿ ಬೆಂಬಲಕ್ಕೆ ನಿಂತಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಪೂನಂ ಪಾಂಡೆ (Poonam Pandey) ಕೂಡ ಒಬ್ಬರು.

    ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್‌ (Maldives) ಸಚಿವರು, ಭಾರತವು ಮಾಲ್ಡೀವ್ಸ್‌ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್‌ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದರು. ಆದ್ರೆ ಸಚಿವರು ಮಾಡಿರುವ ಅವಹೇಳನಾಕಾರಿ ಟ್ವೀಟ್‌ಗೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಂಡಮಾನ್ ಮತ್ತು ಉಡುಪಿ ಬೀಚ್ ಗಳ ಫೋಟೋ ಹಾಕಿ, ಮಾಲ್ಡೀವ್ಸ್  ವಿರುದ್ಧ ಹರಿಹಾಯ್ದಿದ್ದರು. ಅದಕ್ಕೆ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೂನಂ ಪಾಂಡೆ ಕೂಡ ಪೋಸ್ಟ್ ಮಾಡಿದ್ದಾರೆ.

    ಈವರೆಗೂ ಪೂನಂ ಪಾಂಡೆ ಮಾಲ್ಡೀವ್ಸ್ ನಲ್ಲಿ ತಮ್ಮ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದರಂತೆ. ಈಗಲೂ ಫೋಟೋ ಶೂಟ್ ಗಾಗಿ ಬುಕ್ ಕೂಡ ಮಾಡಿದ್ದರು. ಎಲ್ಲವನ್ನೂ ಪೂನಂ ಕ್ಯಾನ್ಸಲ್ ಮಾಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಮುಂದೆ ಅವರು ಲಕ್ಷ ದ್ವೀಪದಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುವುದಾಗಿ ಹೇಳಿದ್ದಾರೆ.

  • #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    #BoycottMaldives ಯಶಸ್ವಿ – EaseMyTripನಿಂದ ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು

    – ಮೋದಿಯನ್ನು ಟೀಕಿಸಿದ್ದ 3 ಸಚಿವರು ಸಸ್ಪೆಂಡ್‌

    ನವದೆಹಲಿ/ಮಾಲೆ: #BoycottMaldives ಅಭಿಯಾನ ಯಶಸ್ವಿಯಾಗಿದ್ದು EaseMyTrip ಮಾಲ್ಡೀವ್ಸ್‌ ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಟೀಕಿಸಿದ್ದಕ್ಕೆ ಭಾರತೀಯ ನೆಟ್ಟಿಗರು ಮಾಲ್ಡೀವ್ಸ್‌ ಪ್ರವಾಸವನ್ನು ರದ್ದು ಮಾಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದರು. ಇದಕ್ಕೆ ಬೆಂಬಲ ವ್ಯಕ್ತಪಡಿಸಿದ EaseMyTrip ಫ್ಲೈಟ್‌ ಬುಕ್ಕಿಂಗ್‌ ರದ್ದು ಮಾಡಿದೆ.

    ಭಾರತದ ಆನ್‌ಲೈನ್‌ ಟ್ರಾವೆಲ್‌ ಕಂಪನಿ EaseMyTrip ಸಿಇಒ ನಿಶಾಂತ್‌ ಪಿಟ್ಟಿ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಭಾರತೀಯ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದ್ದ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ (Maldives govt) ಅಮಾನುತು ಮಾಡಿದೆ.  ಮೋದಿ ವಿರುದ್ಧ ಕೀಳು ಅಭಿರುಚಿಯುಳ್ಳ ಹೇಳಿಕೆ ನೀಡಿದ್ದ ಮಾರಿಯಂ ಶಿಯುನಾ, ಮಲ್ಲಾ ಷರೀಫ್‌ ಹಾಗೂ ಮಝೂಂ ಮಜೀದ್ ಅವರನ್ನು ಅಮಾನತು ಮಾಡಲಾಗಿದೆ.  ಇದನ್ನೂ ಓದಿ: ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

    ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು
    ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮಿಜು

    ಪ್ರಧಾನಿ ಮೋದಿ ಕುರಿತಾಗಿ ಎರಡು ದೇಶಗಳ ಮಧ್ಯೆ ಬಿಕಟ್ಟು ಸೃಷ್ಟಿಯಾಗಿತ್ತು. ಸ್ವತ: ಮಾಲ್ಡೀವ್ಸ್‌ ಜನರೇ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ನೇತೃತ್ವದ ಸರ್ಕಾರ ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿದೆ.

    ಅಮಾನತು ಯಾಕೆ?
    ಲಕ್ಷದ್ವೀಪಕ್ಕೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಸ್ನಾರ್ಕಲಿಂಗ್ ಮಾಡಿ ಅಲ್ಲಿನ ಸಮುದ್ರ ತೀರದ ಫೋಟೋ ಹಾಕಿ ಮಾಲ್ಡೀವ್ಸ್‌ಗೆ ಲಕ್ಷದ್ವೀಪ ಪರ್ಯಾಯ ಪ್ರವಾಸಿ ತಾಣವಾಗಬಹುದು ಎಂಬ ಅಭಿಪ್ರಾಯ ಸೃಷ್ಟಿಸಿದ್ದರು. ಅಷ್ಟೇ ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿ ಎಂದು ಕರೆ ನೀಡುವ ಮೂಲಕ ಭಾರತ ವಿರೋಧಿ ಧೋರಣೆ ಬೆಳೆಸಿಕೊಳ್ಳುತ್ತಿರುವ ಮಾಲ್ಡೀವ್ಸ್‌ಗೆ ಹೋಗಬೇಡಿ ಎಂದು ಪರೋಕ್ಷವಾಗಿ ಸಂದೇಶ ರವಾನಿಸಿದ್ದರು.

    ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಮಾಲ್ಡೀವ್ಸ್‌ ಸರ್ಕಾರದ ಸಚಿವರು ಲಕ್ಷದ್ವೀಪ ಮತ್ತು ಮೋದಿಯನ್ನು ಟೀಕಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಇದರಿಂದ ಕೆರಳಿದ ನೆಟ್ಟಿಗರು #BoycottMaldives ಅಭಿಯಾನ ಆರಂಭಿಸಿದ್ದರು. ಇದರ ಜೊತೆ #ExploreIndianIslands ಬಳಸಿ ಭಾರತದ ಸುಂದರ ದ್ವೀಪಗಳನ್ನು ಪರಿಚಯ ಮಾಡಿಸುವ ಟ್ರೆಂಡ್‌ ಸೃಷ್ಟಿಸಿದ್ದರು. ಇದನ್ನೂ ಓದಿ: ಲಕ್ಷದ್ವೀಪಕ್ಕೆ ಮೋದಿ ಭೇಟಿ: ಮಾಲ್ಡೀವ್ಸ್‌ಗೆ ಬಿಗ್‌ ಶಾಕ್‌

    ಸಾಮಾಜಿಕ ಜಾಲತಾಣದಲ್ಲಿ ಆರಂಭವಾದ ಈ ಟ್ರೆಂಡ್‌ ನಿಜವಾಗಿ ಫಲ ನೀಡಲು ಆರಂಭಿಸಿತು. 8 ಸಾವಿರ ಹೋಟೆಲ್‌ ಬುಕ್ಕಿಂಗ್‌, 2,500 ವಿಮಾನ ಪ್ರಯಾಣದ ಟಿಕೆಟ್‌ ರದ್ದು ಮಾಡಿ ಭಾರತೀಯ ಪ್ರವಾಸಿಗರು ಬಿಸಿ ಮುಟ್ಟಿಸಿದ್ದರು. ರದ್ದು ಮಾಡಿದ್ದು ಮಾತ್ರವಲ್ಲದೇ ರದ್ದು ಮಾಡಿದ ಟಿಕೆಟ್‌ ವಿವರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಾಕಿ ಮತ್ತಷ್ಟು ಟ್ರೆಂಡ್‌ ಸೃಷ್ಟಿಸಿದರು. ಇದರ ಮಾಲ್ಡೀವ್ಸ್‌ ಪ್ರವಾಸಿ ವೆಬ್‌ಸೈಟ್‌ಗಳಲ್ಲಿ ಸರ್ಕಾರದ ಸಚಿವರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಲ್ಲೆದರ ಪರಿಣಾಮ ಭಾರತೀಯ ಪ್ರವಾಸಿಗರ ಆಕ್ರೋಶಕ್ಕೆ ಮಣಿದ ಮಾಲ್ಡೀವ್ಸ್‌ ಈಗ ಸಚಿವರನ್ನು ಅಮಾನತು ಮಾಡಿದೆ.

    ಭಾರತ ವಿರೋಧಿ ಸರ್ಕಾರ:
    ಮಾಲ್ಡೀವ್ಸ್‌ಗೆ ಪ್ರವಾಸೋದ್ಯಮವೇ ಮುಖ್ಯ ಅದಾಯವಾಗಿದ್ದು, ಹೆಚ್ಚಿನ ಸಂಖ್ಯೆಯ ಭಾರತೀಯರು ಭೇಟಿ ನೀಡುತ್ತಾರೆ. ಇಲ್ಲಿಯವರೆಗೆ ಭಾರತದ ಸ್ನೇಹಿತನಾಗಿದ್ದ ಮಾಲ್ಡಿವ್ಸ್‌ನಲ್ಲಿ ಈಗ ಹೊಸ ಸರ್ಕಾರ ರಚನೆಯಾಗಿದ್ದು ಈಗ ಚೀನಾದತ್ತ ವಾಲಿದೆ. ಹೊಸ ಸರ್ಕಾರ ಅಲ್ಲಿರುವ ಸೇನೆಯನ್ನು ಹಿಂದಕ್ಕೆ ಪಡೆಯುವಂತೆ ಭಾರತಕ್ಕೆ ಸೂಚಿಸಿದೆ.

    2021ರಲ್ಲಿ 2.91 ಲಕ್ಷ, 2022ರಲ್ಲಿ 2.41 ಲಕ್ಷ ಮಂದಿ ಭಾರತೀಯರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ. ಮಾಲ್ಡೀವ್ಸ್‌ಗೆ ಅತಿ ಹೆಚ್ಚು ವಿದೇಶಿಗರು ಭೇಟಿ ನೀಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. 2023ರ ಜೂನ್‌ವರೆಗೆ 1 ಲಕ್ಷ ಮಂದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.

    ಬಿಳಿ ಮರಳು, ಸ್ವಚ್ಛ ಬೀಚ್ ಹಾಗೂ ಹವಳದ ದಂಡೆಗಳು ಹೀಗೆ ಮಾಲ್ಡೀವ್ಸ್‌ ಮತ್ತು ಲಕ್ಷದ್ವೀಪದ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಈಗ ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಸಾಕಷ್ಟು ಅಭಿವೃದ್ಧಿಯಾಗಿದ್ದು ಭಾರೀ ಸಂಖ್ಯೆಯಲ್ಲಿ ವಿದೇಶಿಗರು ಭೇಟಿ ನೀಡುತ್ತಿದ್ದಾರೆ. 2021 ರಲ್ಲಿ ಕೇವಲ 4 ಸಾವಿರ ಮಂದಿ ಭೇಟಿ ನೀಡಿದ್ದರೆ 2022ರಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದೆ.