Tag: Maldives

  • ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

    ಚೀನಾ ಸಾಲದ ಸುಳಿಗೆ ಬಿದ್ದ ಮಾಲ್ಡೀವ್ಸ್‌ಗೆ ಐಎಂಎಫ್‌ ಎಚ್ಚರಿಕೆ

    – ವಿದೇಶಗಳಿಂದ ಆರ್ಥಿಕ ಸಹಾಯ ಪಡೆಯುವುದನ್ನು ನಿಲ್ಲಿಸಿ
    – ಪ್ರವಾಸೋದ್ಯಮಕ್ಕೆ ಪೂರಕವಾಗಿರುವ ಯೋಜನೆಗಳನ್ನು ಕೂಡಲೇ ರೂಪಿಸಿ

    ಮಾಲೆ: ಭಾರತದೊಂದಿಗೆ (India) ಕಿತ್ತಾಟ ನಡೆಸಿ ಚೀನಾಗೆ (China) ಹತ್ತಿರವಾಗಿರುವ ಮಾಲ್ಡೀವ್ಸ್‌ (Maldives) ಈಗ ಸಾಲದ ಸುಳಿಯಲ್ಲಿ (Debt Distress) ಸಿಲುಕಿದೆ. ಈಗ ಚೀನಾದಿಂದ ಮತ್ತಷ್ಟು ಸಾಲ ಪಡೆಯಲು ಮುಂದಾಗಿರುವ ಮಾಲ್ಡೀವ್ಸ್‌ಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತೊಮ್ಮೆ ಎಚ್ಚರಿಕೆ ನೀಡಿದೆ.

    ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಾಲ್ಡೀವ್ಸ್‌ ಕೂಡಲೇ ತನ್ನ ಆದಾಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರ ವೆಚ್ಚವನ್ನು ಕಡಿತ ಮಾಡಬೇಕು ಮತ್ತು ಹೊರ ದೇಶಗಳಿಂದ ಆರ್ಥಿಕ ಸಹಾಯ ಪಡೆಯುವುದನ್ನು ಕಡಿಮೆ ಮಾಡಬೇಕು ಎಂದು ಸೂಚಿಸಿದೆ.

    ಸಾಲದ ಸುಳಿಯಲ್ಲಿ ಸಿಲುಕಿರುವ ಮಾಲ್ಡೀವ್ಸ್‌ ಆರ್ಥಿಕತೆ ಕುಸಿಯುವ ಲಕ್ಷಣಗಳು ಕಾಣಿಸುತ್ತಿವೆ. ಸಾಲದ ಜೊತೆಗೆ ಆದಾಯ ವೃದ್ಧಿಸುವ ಯಾವುದೇ ಯೋಜನೆಗಳನ್ನು ಸರ್ಕಾರ ಕೈಗೊಂಡಿಲ್ಲ. ಹೀಗಾಗಿ ರಾಷ್ಟ್ರದ ಪ್ರಮುಖ ಆದಾಯದ ಮೂಲವಾಗಿರುವ ಪ್ರವಾಸೋದ್ಯಮಕ್ಕೆ (Tourism) ಪೂರಕವಾಗಿರುವ ಯೋಜನೆಗಳನ್ನು ಕೂಡಲೇ ರೂಪಿಸಬೇಕು ಎಂದು ಐಎಂಎಫ್‌ ಹೇಳಿದೆ. ಇದನ್ನೂ ಓದಿ: ಇಂದು ರಾಜ್ಯದ 7 ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆ 

     

    ಕಳೆದ ವರ್ಷ ಅಂತ್ಯಕ್ಕೆ ಮಾಲ್ಡೀವ್ಸ್‌ ವಿದೇಶಗಳಿಂದ 4.038 ಬಿಲಿಯನ್‌ ಡಾಲರ್‌ (ಅಂದಾಜು 33.71 ಸಾವಿರ ಕೋಟಿ ರೂ.) ಸಾಲ ಪಡೆದಿದೆ. ಇದು ಮಾಲ್ಡೀವ್ಸ್‌ ಜಿಡಿಪಿಗಿಂತ 118%ರಷ್ಟು ಹೆಚ್ಚಿದೆ. ಈ ಪೈಕಿ 25% ರಷ್ಟು ಸಾಲವನ್ನು ಚೀನಾದ ಎಕ್ಸ್‌ಪೋರ್ಟ್‌-ಇಂಪೋರ್ಟ್‌ ಬ್ಯಾಂಕ್‌ನಿಂದಲೇ ಪಡೆದಿದೆ.

    ಭಾರತ ವಿರೋಧಿಯಾಗಿರುವ ಮೊಹಮ್ಮದ್ ಮುಯಿಜು ಅಧ್ಯಕ್ಷರಾದ ಬಳಿಕ ಚೀನಾಗೆ ಭೇಟಿ ನೀಡಿ ಸಹಾಯ ಪಡೆದ್ದರು. ಚುನಾವಣಾ ಪ್ರಚಾರದಲ್ಲಿ ಮಾಲ್ಡೀವ್ಸ್‌ನಲ್ಲಿರುವ ಭಾರತದ ಸೈನಿಕರನ್ನು ಹೊರ ಹಾಕುವುದಾಗಿ ಘೋಷಿಸಿದ್ದರು. ಅದರಂತೆ ಭಾರತದ ಸೈನಿಕರು ಈಗ ಮಾಲ್ಡೀವ್ಸ್‌ ತೊರೆದಿದ್ದು ಚೀನಾ ಈಗ ರಕ್ಷಣಾ ಸಹಾಯ ಒದಗಿಸುವುದಾಗಿ ಹೇಳಿದೆ.‌ ಇದನ್ನೂ ಓದಿ: ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್‌

    ಚೀನಾದಿಂದ ಭಾರೀ ಹೂಡಿಕೆ
    ಮಾಲ್ಡೀವ್ಸ್‌ನ ಐದಕ್ಕೂ ಹೆಚ್ಚು ದ್ವೀಪಗಳನ್ನು ಚೀನಾದ ಕಂಪನಿಗಳು 50 ವರ್ಷಗಳಿಗೆ ಗುತ್ತಿಗೆ ಪಡೆದಿವೆ. ಮಾಲೆ ಸಮುದ್ರ ಸೇತುವೆ ಅಭಿವೃದ್ಧಿ ಯೋಜನೆಯ ವೆಚ್ಚದ 50% ರಷ್ಟು ಹಣವನ್ನು ಚೀನಾವೇ ಭರಿಸಿದೆ. ಅಷ್ಟೇ ಅಲ್ಲದೇ 50% ರಷ್ಟು ವೆಚ್ಚವನ್ನು ಸಾಲದ ರೂಪದಲ್ಲಿ ನೀಡಿದೆ. ಚೀನಾ -ಮಾಲ್ಡೀವ್ಸ್‌ ಸ್ನೇಹ ಸೇತುವೆ, ವಿಮಾನ ನಿಲ್ದಾಣ ನವೀಕರಣ, ಮನೆಗಳ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಚೀನಾ ಸರ್ಕಾರ ಬಿಲಿಯನ್‌ಗಟ್ಟಲೇ ಡಾಲರ್‌ ಹಣವನ್ನು ಹೂಡಿಕೆ ಮಾಡಿದೆ. ಮಾಲ್ಡೀವ್ಸ್‌ ಮತ್ತು ಚೀನಾದ ಸಂಬಂಧ ಈಗ ಆರಂಭವಾಗಿದ್ದಲ್ಲ. 1975 ರಿಂದಲೇ ಚೀನಾ ಮಾಲ್ಡೀವ್ಸ್‌ನಲ್ಲಿ ಹೂಡಿಕೆ ಮಾಡಲು ಆರಂಭಿಸಿತ್ತು.

     
    ಏನಿದು ಚೀನಾದ ಕುತಂತ್ರ?
    ವ್ಯಾಪಾರ ಮಾರುಕಟ್ಟೆಯನ್ನು ವಿಸ್ತರಿಸುವ ನೆಪದಲ್ಲಿ ಆರಂಭಿಸಿರುವ ಒನ್‌ ಬೆಲ್ಟ್‌ ಒನ್‌ ರೋಡ್‌ ಯೋಜನೆ ಮೂಲಕ ಚೀನಾ ಇಡೀ ವಿಶ್ವವನ್ನೇ ಆಳಲು ಹೊರಟಿದೆ. ಈ ಯೋಜನೆಗೆ ಈಗ 10 ವರ್ಷ ಪೂರ್ಣಗೊಂಡಿದೆ. ಸರಳವಾಗಿ ಹೇಳುವುದಾರೆ ರಸ್ತೆ, ರೈಲು, ಹಡಗಿನ ಮೂಲಕ ವಸ್ತುಗಳನ್ನು ಸಾಗಿಸಲು ಆರಂಭವಾದ ಯೋಜನೆ ಇದು. ರಷ್ಯಾ, ಸೌದಿ ಅರೇಬಿಯಾ, ಕತಾರ್‌, ಇರಾನ್‌, ಅರ್ಜೈಂಟಿನಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ ಸೇರಿದಂತೆ ಬರೋಬ್ಬರಿ 150 ದೇಶಗಳು ಈ ಯೋಜನೆಗೆ ಸಹಿ ಹಾಕಿದೆ.

    ಯೋಜನೆಯನ್ನು ಸರಳವಾಗಿ ವಿವರಿಸುವುದಾರೆ ಹಿಂದುಳಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಚೀನಾ ಭಾರೀ ದೊಡ್ಡ ಮೊತ್ತದ ಯೋಜನೆಯನ್ನು ಕೈಗೊಳ್ಳುತ್ತದೆ. ಈ ಯೋಜನೆಗೆ ಅರ್ಧದಷ್ಟು ಹಣವನ್ನು ಚೀನಾ ಹೂಡಿಕೆ ಮಾಡಿದರೆ ಉಳಿದ ಅರ್ಧ ಹಣವನ್ನು ಆ ದೇಶಗಳು ಹೂಡಿಕೆ ಮಾಡಬೇಕು. ಆ ದೇಶಗಳಿಗೆ ಹಣ ಹೂಡಿಕೆ ಮಾಡಲು ಶಕ್ತಿ ಇಲ್ಲದ ಕಾರಣ ಚೀನಾದ ಬ್ಯಾಂಕ್‌ಗಳೇ ದೇಶಗಳಿಗೆ ಸಾಲ ನೀಡುತ್ತದೆ. ಸಾಲ ಪಾವತಿ ಆಗದೇ ಇದ್ದಾಗ ಯೋಜನೆಯನ್ನೇ ಚೀನಾ ಸಂಪೂರ್ಣ ಸ್ವಾಧೀನಪಡಿಸಿಕೊಳ್ಳುತ್ತದೆ. ಚೀನಾ -ಪಾಕಿಸ್ತಾನ ಎಕಾನಮಿಕ್‌ ಕಾರಿಡಾರ್‌ ಹೆಸರಿನಲ್ಲಿ ಪಾಕ್ ಸಾಲ ಪಡೆದುಕೊಂಡಿತ್ತು ಸದ್ಯ ಅಂದಾಜು 30 ಬಿಲಿಯನ್‌ ಡಾಲರ್‌ ಹಣವನ್ನು ಪಾಕಿಸ್ತಾನ ಚೀನಾಗೆ ಪಾವತಿ ಮಾಡಬೇಕಿದೆ. ಚೀನಾ ಹಣವನ್ನು ಪಾವತಿ ಮಾಡಲು ಕನಿಷ್ಟ 40 ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    ಶ್ರೀಲಂಕಾದ ಹಂಬನ್‌ತೋಟ ಬಂದರನ್ನು ಚೀನಾ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಅಭಿವೃದ್ಧಿ ಪಡಿಸಿದರೂ ನಿರೀಕ್ಷಿತ ಪ್ರಮಾಣದ ಲಾಭವಾಗಿಲ್ಲ. ಸಾಲ ಮರುಪಾವತಿ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ 2017ರಲ್ಲಿ 99 ವರ್ಷಗಳ ಕಾಲ ಚೀನಾದ ಚೀನಾ ಮರ್ಚಂಟ್‌ ಪೋರ್ಟ್‌ ಹೋಲ್ಡಿಂಗ್‌ಗೆ ಲೀಸ್‌ಗೆ ನೀಡಲಾಗಿದೆ.

    ಪಾಕಿಸ್ತಾನ, ಶ್ರೀಲಂಕಾ ಮಾತ್ರವಲ್ಲ ಕೀನ್ಯಾ, ದಕ್ಷಿಣ ಆಫ್ರಿಕಾ, ಉಗಾಂಡ, ಮಲೇಷ್ಯಾ ಸೇರಿದಂತೆ ಹಲವು ದೇಶಗಳು ಸಾಲದ ಸುಳಿಯಲ್ಲಿ ಸಿಲುಕಿವೆ. ಈ ಕಾರಣಕ್ಕೆ ಚೀನಾದ ಒನ್‌ ರೋಡ್‌, ಒನ್‌ ಬೆಲ್ಟ್‌ ಈಗ ಡೆಟ್‌ ಟ್ರ್ಯಾಪ್‌ ಡಿಪ್ಲೊಮಸಿ ಎಂದೇ ಎಂದೇ ಕುಖ್ಯಾತಿ ಪಡೆದಿದೆ.

     

  • ಸೇನಾ ಪೈಲಟ್‌ಗಳಿಗೆ ಭಾರತ ಕೊಟ್ಟ ವಿಮಾನಗಳನ್ನು ಹಾರಿಸಲು ಬರಲ್ಲ: ಮಾಲ್ಡೀವ್ಸ್ ರಕ್ಷಣಾ ಸಚಿವ

    ಸೇನಾ ಪೈಲಟ್‌ಗಳಿಗೆ ಭಾರತ ಕೊಟ್ಟ ವಿಮಾನಗಳನ್ನು ಹಾರಿಸಲು ಬರಲ್ಲ: ಮಾಲ್ಡೀವ್ಸ್ ರಕ್ಷಣಾ ಸಚಿವ

    ಮಾಲೆ: ಅಧ್ಯಕ್ಷ ಮೊಹಮ್ಮದ್ ಮುಯಿಝು ( Mohamed Muizzu) ಅವರ ಒತ್ತಾಯದ ಮೇರೆಗೆ 76 ಭಾರತೀಯ ರಕ್ಷಣಾ ಸಿಬ್ಬಂದಿ ಮಾಲ್ಡೀವ್ಸ್ ತೊರೆದ ಕೆಲವೇ ದಿನಗಳಲ್ಲಿಯೇ ಭಾರತ ಕೊಡುಗೆಯಾಗಿ ನೀಡಿದ ಮೂರು ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಪೈಲಟ್‌ಗಳು ದೇಶದ ಮಿಲಿಟರಿಯಲ್ಲಿ ಇನ್ನೂ ಇಲ್ಲ ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವ ಘಾಸನ್ ಮೌಮೂನ್ (Ghassan Maumoon) ಟೀಕಿಸಿದ್ದಾರೆ.

    ಭಾನುವಾರ ಮಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದಿನ ಆಡಳಿತದಲ್ಲಿ ವಿಮಾನವನ್ನು ಹಾರಿಸಲು ತರಬೇತಿಯನ್ನು ಪ್ರಾರಂಭಿಸಿದ ಮಾಲ್ಡೀವಿಯನ್ ಸೈನಿಕರು ಕಾರಣಾಂತರಗಳಿಂದ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ಎರಡು ಹೆಲಿಕಾಪ್ಟರ್‌ಗಳು ಮತ್ತು ಡೋರ್ನಿಯರ್ ಅನ್ನು ಹಾರಿಸಲು ಪರವಾನಗಿ ಪಡೆದ ಅಥವಾ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಪೈಲಟ್‌ ನಮ್ಮ ಪಡೆಯಲ್ಲಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ನಿಜ್ಜರ್ ಹತ್ಯೆ ಕೇಸ್‌ – ಕೆನಡಾದಲ್ಲಿ 4ನೇ ಭಾರತೀಯ ಪ್ರಜೆ ಬಂಧನ

    ಚೀನಾ ಪರ ಧೋರಣೆಯುಳ್ಳ ನಾಯಕರಾಗಿ ಗುರುತಿಸಿಕೊಂಡಿರುವ ಮುಯಿಝು, ಮೇ 10ರ ಒಳಗೆ ಭಾರತವು ತನ್ನ ಸಂಪೂರ್ಣ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಗಡುವು ನೀಡಿದ್ದರು. ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ಉಭಯ ದೇಶಗಳ ನಡುವಿನ ಒಪ್ಪಂದದ ನಂತರ ಮೇ 10 ರ ಗಡುವಿನ ಪ್ರಕಾರ, ಹೆಲಿಕಾಪ್ಟರ್‌ಗಳು ಮತ್ತು ಡಾರ್ನಿಯರ್ ವಿಮಾನಗಳಿಗಾಗಿ ಎರಡು ಪ್ಲಾಟ್‌ಫಾರ್ಮ್‌ಗಳನ್ನು ನಿರ್ವಹಿಸಲು ಮಾಲ್ಡೀವ್ಸ್‌ನಲ್ಲಿ ನೆಲೆಸಿದ್ದ ಭಾರತೀಯ ಮಿಲಿಟರಿ ಸಿಬ್ಬಂದಿ ಮಾಲೆ ತೊರೆದು ಶುಕ್ರವಾರ ಭಾರತಕ್ಕೆ ಮರಳಿದ್ದರು.

    ಭಾರತ ಸರ್ಕಾರ ಈ ಹಿಂದೆ ಉಡುಗೊರೆಯಾಗಿ ನೀಡಿದ್ದ 2 ಹೆಲಿಕಾಪ್ಟರ್‌ಗಳ ಮತ್ತು ಡಾರ್ನಿಯರ್‌ ಯುದ್ಧ ವಿಮಾನಗಳ ನಿರ್ವಹಣೆ ಸಲುವಾಗಿ ಭಾರತೀಯ ಸೇನಾ ಸಿಬ್ಬಂದಿ ಮಾಲ್ಡೀವ್ಸ್‌ ನಲ್ಲಿ ಉಳಿದುಕೊಂಡಿದ್ದರು.

  • ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ನಾಳೆ ಭಾರತಕ್ಕೆ ಭೇಟಿ

    ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ನಾಳೆ ಭಾರತಕ್ಕೆ ಭೇಟಿ

    ನವದೆಹಲಿ: ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ, ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ (Moosa Zameer) ಅವರು ಗುರುವಾರ ಭಾರತಕ್ಕೆ (India) ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

    ಮಾಲ್ಡೀವ್ಸ್ (Maldives) ಸಚಿವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ (S.Jaishankar) ಅವರೊಂದಿಗೆ ಪರಸ್ಪರ ಹಿತಾಸಕ್ತಿಯ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಡೆಲ್ಲಿ, ರಾಜಸ್ಥಾನ ಪಂದ್ಯದ ವೇಳೆ ಆಪ್ ಕಾರ್ಯಕರ್ತರಿಂದ ಪ್ರತಿಭಟನೆ – ಹಲವರು ವಶಕ್ಕೆ

    ಮಾಲ್ಡೀವ್ಸ್ ಹಿಂದೂ ಮಹಾಸಾಗರ ಪ್ರದೇಶದಲ್ಲಿ (ಐಒಆರ್) ಭಾರತದ ಪ್ರಮುಖ ಕಡಲ ನೆರೆಯ ರಾಷ್ಟ್ರವಾಗಿದೆ. ವಿದೇಶಾಂಗ ಸಚಿವ ಜಮೀರ್ ಅವರ ಭೇಟಿಯು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

    ವಿದೇಶಾಂಗ ಸಚಿವ ಮನ್ಸೂರ್ ಮೇ 8-10 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಲ್ಡೀವ್ಸ್ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇದಕ್ಕೂ ಮುನ್ನ ತಿಳಿಸಿತ್ತು. ಈಗ ಅಧಿಕೃತ ಭೇಟಿ ಗುರುವಾರ ಎಂದು ತಿಳಿಸಿದೆ. ಇದನ್ನೂ ಓದಿ: ಮುಸ್ಲಿಮರಿಗೆ ಸಂಪೂರ್ಣ ಮೀಸಲಾತಿ ಸಿಗಬೇಕು: ಲಾಲೂ ಪ್ರಸಾದ್ ಯಾದವ್

    ಅಧಿಕಾರ ವಹಿಸಿಕೊಂಡ ನಂತರ ಇದು ವಿದೇಶಾಂಗ ಸಚಿವ ಜಮೀರ್ ಅವರ ಮೊದಲ ಅಧಿಕೃತ ಭಾರತ ಭೇಟಿಯಾಗಿದೆ. ಮೇ 10 ರ ಮೊದಲು ಮಾಲ್ಡೀವ್ಸ್‌ನಿಂದ ತನ್ನ ಮಿಲಿಟರಿ ಸಿಬ್ಬಂದಿಯನ್ನು ಬದಲಾಯಿಸುವುದಾಗಿ ಭಾರತ ಹೇಳಿದ್ದರಿಂದ ಈ ಭೇಟಿ ನಿಗದಿಯಾಗಿದೆ.

  • ಮಾಲ್ಡೀವ್ಸ್ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಭರ್ಜರಿ ಗೆಲುವು

    ಮಾಲ್ಡೀವ್ಸ್ ಚುನಾವಣೆ: ಭಾರತ ವಿರೋಧಿ ಮುಯಿಝುಗೆ ಭರ್ಜರಿ ಗೆಲುವು

    ಮಾಲೆ: ಮಾಲ್ಡೀವ್ಸ್‌ನಲ್ಲಿ (Maldives) ಭಾನುವಾರ ನಡೆದ ಸಂಸದೀಯ ಚುನಾವಣೆಯಲ್ಲಿ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ನೇತೃತ್ವದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (PNC) 60ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿದೆ.

    ಮಾಲ್ಡೀವ್ಸ್‌ನ ಒಟ್ಟು 93 ಕ್ಷೇತ್ರಗಳಲ್ಲಿ ಸಂಸದರನ್ನು (Parliamentary Elections 2024) ಆಯ್ಕೆ ಮಾಡಲು ಮತದಾನ ನಡೆದಿದೆ. ಮಾಲ್ಡೀವ್ಸ್‌ನಲ್ಲಿ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಭಾರತ ಮತ್ತು ಚೀನಾದ ನೀತಿಗಳ ಮೇಲೆ ನಿಗಾ ಇರಿಸಿರುವ ಮುಯಿಝುಗೆ ಈ ಚುನಾವಣೆಯು ಅತ್ಯಂತ ಮಹತ್ವದ್ದಾಗಿತ್ತು.

    ಮಾಹಿತಿಯ ಪ್ರಕಾರ, 86 ಸ್ಥಾನಗಳ ಪೈಕಿ ಪಿಎನ್ ಸಿ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (MDP) ಕೇವಲ 12 ಸ್ಥಾನಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು 10 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸೀಟುಗಳು ಬೇರೆ ಪಕ್ಷಗಳ ಪಾಲಾಗಿದೆ. ಇದನ್ನೂ ಓದಿ: ಮುಸ್ಲಿಮರಿಗೆ ರಾಷ್ಟ್ರದ ಸಂಪತ್ತಿನ ಮೊದಲ ಹಕ್ಕು ಎಂದು ಕಾಂಗ್ರೆಸ್‌ ಹೇಳಿತ್ತು: ಮೋದಿ ಕಿಡಿ

    ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜು ಕಳೆದ ವರ್ಷವಷ್ಟೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಭಾರತ ಮತ್ತು ಮಾಲ್ಡೀವ್ಸ್ ನಡುವಿನ ಸಂಬಂಧಗಳು ಒಂದು ಕಾಲದಲ್ಲಿ ಬಹಳ ನಿಕಟವಾಗಿದ್ದವು. ಆದರೆ ಮೊಹಮ್ಮದ್ ಮುಯಿಝು ಅಧಿಕಾರಕ್ಕೆ ಬಂದ ನಂತರ ಈ ಎರಡು ದೇಶಗಳ ನಡುವಿನ ಸಂಬಂಧವು ಹದಗೆಟ್ಟಿದೆ.

  • ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

    ಮಾಲ್ಡೀವ್ಸ್‌ಗೆ ಅಗತ್ಯ ವಸ್ತುಗಳ ರಫ್ತಿಗೆ ಭಾರತ ಬಂದರು ನಿರ್ಬಂಧ

    ನವದೆಹಲಿ: ಮಾಲ್ಡೀವ್ಸ್‌ಗೆ (Maldives) ಅಗತ್ಯ ವಸ್ತುಗಳ ರಫ್ತಿಗೆ ಭಾರತವು (India) ಬಂದರು ನಿರ್ಬಂಧ ವಿಧಿಸಿದೆ ಎಂದು ವಿದೇಶಿ ವ್ಯಾಪಾರ ನಿರ್ದೇಶನಾಲಯದ (DGFT) ಅಧಿಸೂಚನೆ ತಿಳಿಸಿದೆ.

    ನಾಲ್ಕು ಕಸ್ಟಮ್ಸ್ ಸ್ಟೇಷನ್‌ಗಳ ಮೂಲಕ ಮಾತ್ರ ದ್ವೀಪ ರಾಷ್ಟ್ರಕ್ಕೆ ಅಗತ್ಯ ವಸ್ತುಗಳ ರಫ್ತಿಗೆ ಅನುಮತಿ ನೀಡಲಾಗುತ್ತದೆ. ಮುಂಡ್ರಾ ಸೀ ಪೋರ್ಟ್, ಟ್ಯುಟಿಕೋರಿನ್ ಸೀ ಪೋರ್ಟ್, ನ್ಹವಾ ಶೇವಾ ಸೀ ಪೋರ್ಟ್ ಮತ್ತು ಐಸಿಡಿ ತುಘಲಕಾಬಾದ್ ಸ್ಟೇಷನ್‌ಗಳು ಎಂದು ಡಿಜಿಎಫ್‌ಟಿ ಅಧಿಸೂಚನೆಯಲ್ಲಿ ಮಾಹಿತಿ ನೀಡಿದೆ. ಇದನ್ನೂ ಓದಿ: UPSC ಫಲಿತಾಂಶ ಪ್ರಕಟ; ಆದಿತ್ಯ ಶ್ರೀವಾಸ್ತವ್‌ಗೆ ಮೊದಲ ರ‍್ಯಾಂಕ್‌

    ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೂ ಮಾಲ್ಡೀವ್ಸ್‌ ಸರ್ಕಾರದ ಕೋರಿಕೆಯ ಮೇರೆಗೆ ಭಾರತವು ವಿಶಿಷ್ಟ ದ್ವಿಪಕ್ಷೀಯ ಕಾರ್ಯವಿಧಾನದ ಅಡಿಯಲ್ಲಿ 2024-25 ಕ್ಕೆ ನಿರ್ದಿಷ್ಟ ಪ್ರಮಾಣದ ಅಗತ್ಯ ಸರಕುಗಳನ್ನು ರಫ್ತು ಮಾಡಲು ಅನುಮತಿಸಿತು.

    ಭಾರತ ಮತ್ತು ಮಾಲ್ಡೀವ್ಸ್ 1981 ರಲ್ಲಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದು ಅಗತ್ಯ ಸರಕುಗಳ ರಫ್ತಿಗೆ ಸಂಬಂಧಿಸಿದ್ದಾಗಿದೆ. ಮಾಲ್ಡೀವ್ಸ್‌ನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿರ್ಮಾಣ ಉದ್ಯಮಕ್ಕೆ ನಿರ್ಣಾಯಕ ವಸ್ತುಗಳಾದ ನದಿ ಮರಳು ಮತ್ತು ಜಲ್ಲಿಕಲ್ಲು ರಫ್ತನ್ನು 25% ನಿಂದ 1,000,000 ಮೆಟ್ರಿಕ್ ಟನ್‌ಗಳಿಗೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಸೀಮಾ ಹೈದರ್‌ಗೆ ಕಾನೂನು ಸಂಕಷ್ಟ; ನೋಯ್ಡಾ ಕೋರ್ಟ್‌ನಿಂದ ಸಮನ್ಸ್‌ ಜಾರಿ

    ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ರಫ್ತು ಶೇ.5 ರಷ್ಟು ಹೆಚ್ಚಳವಾಗಿದೆ. ಕಳೆದ ವರ್ಷ ಭಾರತದಿಂದ ಈ ವಸ್ತುಗಳ ರಫ್ತಿನ ಮೇಲೆ ವಿಶ್ವಾದ್ಯಂತ ನಿಷೇಧದ ಹೊರತಾಗಿಯೂ ಭಾರತವು ಮಾಲ್ಡೀವ್ಸ್‌ಗೆ ಅಕ್ಕಿ, ಸಕ್ಕರೆ ಮತ್ತು ಈರುಳ್ಳಿ ರಫ್ತು ಮಾಡುವುದನ್ನು ಮುಂದುವರೆಸಿದೆ.

  • ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

    ಪ್ರವಾಸಿಗರಿಲ್ಲದೇ ಪರದಾಟ- ಭಾರತದಲ್ಲಿ ರೋಡ್‌ ಶೋಗೆ ಮಾಲ್ಡೀವ್ಸ್‌ ಪ್ಲಾನ್‌

    ಮಾಲೆ:‌ ಭಾರತ-ಮಾಲ್ಡೀವ್ಸ್ ರಾಜತಾಂತ್ರಿಕ ಸಂಬಂಧಗಳ ಮುನಿಸಿನ ನಡುವೆ ಪ್ರವಾಸಿಗರನ್ನು ಮರಳಿ ಸೆಳೆಯಲು ಭಾರತದಲ್ಲಿ ರೋಡ್‌ಶೋಗಳನ್ನು ನಡೆಸುವುದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ (Maldivian tourism body) ಹೇಳಿದೆ.

    ಈ ಸಂಬಂಧ ಮಾಲ್ಡೀವ್ಸ್ ಅಸೋಸಿಯೇಶನ್ ಆಫ್ ಟ್ರಾವೆಲ್ ಏಜೆಂಟ್ಸ್ ಮತ್ತು ಟೂರ್ ಆಪರೇಟರ್ಸ್ (MATATO) ಅವರು ಮಾಲೆಯಲ್ಲಿ ಭಾರತೀಯ ಹೈಕಮಿಷನರ್ ಮುನು ಮಹಾವರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು (Road Show In India) ನಡೆಸುವುದರ ವಿಚಾರವಾಗಿ ಪ್ರಸ್ತಾಪಿಸಿದ್ದಾರೆ.

    ಇತ್ತೀಚೆಗೆ ಗಮನಾರ್ಹ ಕುಸಿತ ಕಂಡ ಪ್ರವಾಸೋದ್ಯಮ ಸಂಸ್ಥೆಯನ್ನು ಮತ್ತಷ್ಟು ಉತ್ತೇಜಿಸಲು ಭಾರತದಾದ್ಯಂತದ ಪ್ರಮುಖ ಪ್ರವಾಸಿ ಸಂಘಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ಪಾಲುದಾರಿಕೆಯನ್ನು ಹೊಂದಲು ಅವರು ಎದುರು ನೋಡುತ್ತಿದ್ದಾರೆ ಎಂದು MATATO ತಿಳಿಸಿರುವುದಾಗಿ ವರದಿಯಾಗಿದೆ.

    ಪ್ರಸ್ತುತ ಭಾರತದ ಪ್ರಮುಖ ನಗರಗಳಲ್ಲಿ ಸಮಗ್ರ ರೋಡ್ ಶೋಗಳನ್ನು ಪ್ರಾರಂಭಿಸಲು ಮತ್ತು ಮುಂಬರುವ ತಿಂಗಳುಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯೋಜನೆಗಳು ನಡೆಯುತ್ತಿವೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಂಸ್ಥೆ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.  ಇದನ್ನೂ ಓದಿ: ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

    ಪ್ರವಾಸಿಗರ ಕುಸಿತ ಏಕೆ..?: ಜನವರಿ 6 ರಂದು ಲಕ್ಷ ದ್ವೀಪಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಲ್ಡೀವ್ಸ್‌ನ ಮೂವರು ಸಚಿವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು. ಇದರ ಬೆನ್ನಲ್ಲೇ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಭಾರತ 6ನೇ ಸ್ಥಾನಕ್ಕೆ ಕುಸಿದಿತ್ತು.

    ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ದೇಶಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಪ್ರಸ್ತುತ ಮಾಲ್ಡೀವ್ಸ್‌ಗೆ ಭೇಟಿ ನೀಡುವವರ ಪಟ್ಟಿಯಲ್ಲಿ ಚೀನಾ 71,995 ಪ್ರವಾಸಿಗರೊಂದಿಗೆ ಅಗ್ರಸ್ಥಾನ ಪಡೆದುಕೊಂಡಿದೆ. ಇದರ ನಂತರದಲ್ಲಿ ಬ್ರಿಟನ್‌ (66,999), ರಷ್ಯಾ (66,803), ಇಟಲಿ (61,379), ಜರ್ಮನಿ (52,256) ದೇಶಗಳಿವೆ. ಭಾರತ 37,417 ಪ್ರವಾಸಿಗರೊಂದಿಗೆ 6ನೇ ಸ್ಥಾನದಲ್ಲಿದೆ.

  • ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್‌

    ಚೀನಾದ ತಾಳಕ್ಕೆ ಕುಣಿಯುತ್ತಿದ್ದರೂ ಮಾನವೀಯ ನೆರವು – ಭಾರತದ ಸಹಾಯಕ್ಕೆ ಧನ್ಯವಾದ ಹೇಳಿದ ಮಾಲ್ಡೀವ್ಸ್‌

    – ಅಗತ್ಯ ವಸ್ತುಗಳನ್ನು ಪೂರೈಸಲು ಒಪ್ಪಿಗೆ
    – ಭಾರತಕ್ಕೆ ಥ್ಯಾಂಕ್ಸ್‌ ಹೇಳಿದ ವಿದೇಶಾಂಗ ಸಚಿವ

    ನವದೆಹಲಿ: ಚೀನಾದ (China) ತಾಳಕ್ಕೆ ಕುಣಿಯುತ್ತಿದ್ದರೂ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೆ (Maldives) ಭಾರತ (India) ನೆರವಿನ ಹಸ್ತ ನೀಡುವುದನ್ನು ಮುಂದುವರಿಸಿದ್ದು ಅಗತ್ಯ ವಸ್ತುಗಳನ್ನು ಪೂರೈಸಲು ಒಪ್ಪಿಕೊಂಡಿದೆ.

    ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಅಡಿಯಲ್ಲಿ 2024-2025 ರ ಅವಧಿಯಲ್ಲಿ ಸರ್ಕಾರವು ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಅಕ್ಕಿ, ಗೋಧಿ, ಹಿಟ್ಟು, ಸಕ್ಕರೆ, ಧಾನ್ಯ, ನದಿ ಮರಳನ್ನು ಒಳಗೊಂಡಂತೆ ಕೆಲವು ಪ್ರಮಾಣದ ಅಗತ್ಯ ವಸ್ತುಗಳನ್ನು ಮಾಲ್ಡೀವ್ಸ್‌ಗೆ ರಫ್ತು (Export) ಮಾಡಲು ಒಪ್ಪಿಗೆ ನೀಡಿದೆ.

    ಈ ವಸ್ತುಗಳ ರಫ್ತು 2024-25 ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಅಥವಾ ಭವಿಷ್ಯದ ಯಾವುದೇ ನಿರ್ಬಂಧ/ನಿಷೇಧದಿಂದ ವಿನಾಯಿತಿ ಪಡೆಯುತ್ತದೆ. ಇದನ್ನೂ ಓದಿ: ಯಾವೊಬ್ಬ ಭಾರತೀಯ ಸೈನಿಕ ದೇಶದಲ್ಲಿ ಇರಕೂಡದು: ಮಾಲ್ಡೀವ್ಸ್‌ ಅಧ್ಯಕ್ಷ

    ಅನುಮತಿಸಲಾದ ನಿರ್ದಿಷ್ಟ ಪ್ರಮಾಣದಲ್ಲಿ ಭಾರತ ಆಲೂಗಡ್ಡೆ (21,513.08 ಟನ್), ಈರುಳ್ಳಿ (35,749.13 ಟನ್), ಅಕ್ಕಿ (1,24,218.36 ಟನ್), ಗೋಧಿ ಹಿಟ್ಟು (1,09,162.96 ಟನ್), ಸಕ್ಕರೆ (64,494.33 ಟನ್), ನದಿ ಮರಳು (ಒಂದು ಮಿಲಿಯನ್ ಟನ್) ರಫ್ತು ಮಾಡಲಿದೆ.

    ಭಾರತಕ್ಕೆ ಧನ್ಯವಾದ:
    ಭಾರತದ ನೆರವಿನ ಹಸ್ತಕ್ಕೆ ಮಾಲ್ಡೀವ್ಸ್‌ ಧನ್ಯವಾದ ಹೇಳಿದೆ. ಭಾರತದಿಂದ ಅಗತ್ಯ ಸರಕುಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದವನ್ನು ನವೀಕರಣಗೊಳಿಸಿದ್ದಕ್ಕೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು. ಇದು ನಿಜವಾಗಿಯೂ ದೀರ್ಘಕಾಲದ ಸ್ನೇಹವನ್ನು ಸೂಚಿಸುತ್ತದೆ.

    ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ವಾಣಿಜ್ಯವನ್ನು ಮತ್ತಷ್ಟು ವಿಸ್ತರಿಸುವ ಬಲವಾದ ಬದ್ಧತೆಯನ್ನು ಇದು ಸೂಚಿಸುತ್ತದೆ ಎಂದು ಮಾಲ್ಡೀವ್ಸ್‌ ವಿದೇಶಾಂಗ ಸಚಿವ ಮೂಸಾ ಜಮೀರ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.  ಇದನ್ನೂ ಓದಿ: ಭಯೋತ್ಪಾದಕರನ್ನು ಬಿಡಲ್ಲ, ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ: ರಾಜನಾಥ್‌ ಸಿಂಗ್‌ ಎಚ್ಚರಿಕೆ

     

    ಈ ಪೋಸ್ಟ್‌ಗೆ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ( S Jaishankar) ಪ್ರತಿಕ್ರಿಯಿಸಿ, ನಿಮಗೆ ಸ್ವಾಗತ. ಭಾರತ ತನ್ನ ನೆರೆ ರಾಷ್ಟ್ರಗಳಿಗೆ ಮೊದಲ ಆದ್ಯತೆ ನೀಡುತ್ತದೆ. ಸಾಗರ ನೀತಿಗಳಿಗೆ ದೃಢವಾಗಿ ಬದ್ಧವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

    1981ರಲ್ಲಿ ಭಾರತ ಮತ್ತು ಮಾಲ್ಡೀವ್ಸ್ ಮಧ್ಯೆ ವ್ಯಾಪಾರ ಒಪ್ಪಂದ ನಡೆದಿದೆ. ಭಾರತವು 2022 ರಲ್ಲಿ ಮಾಲ್ಡೀವ್ಸ್‌ನ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿ ಹೊರಹೊಮ್ಮಿದರೆ 2023 ರಲ್ಲಿ ಅತಿ ದೊಡ್ಡ ಪಾಲುದಾರನಾಗಿ ಹೊರಹೊಮ್ಮಿದೆ.

    ಮಾಲ್ಡೀವ್ಸ್‌ನಿಂದ ಭಾರತ ಸ್ಕ್ರ್ಯಾಪ್ ಲೋಹಗಳು ಆಮದು ಮಾಡುತ್ತದೆ. ಆದರೆ ಮಾಲ್ಡೀವ್ಸ್‌ಗೆ ಭಾರತ ವಿವಿಧ ಎಂಜಿನಿಯರಿಂಗ್ ಮತ್ತು ಕೈಗಾರಿಕಾ ಉತ್ಪನ್ನಗಳು, ಔಷಧಗಳು, ರಾಡಾರ್ ಉಪಕರಣಗಳು, ಸಿಮೆಂಟ್, ಕೃಷಿ ಉತ್ಪನ್ನಗಳಾದ ಅಕ್ಕಿ, ಸಾಂಬಾರ ಪದಾರ್ಥಗಳು, ಹಣ್ಣುಗಳು, ತರಕಾರಿಗಳು ಮತ್ತು ಕೋಳಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ.

    ಶುಕ್ರವಾರದ ಪ್ರಕಟಣೆಯ ಪ್ರಕಾರ, ಮೊಟ್ಟೆ, ಆಲೂಗಡ್ಡೆ, ಈರುಳ್ಳಿ, ಸಕ್ಕರೆ, ಅಕ್ಕಿ, ಗೋಧಿ ಹಿಟ್ಟು ಮತ್ತು ಬೇಳೆಕಾಳುಗಳ ಕೋಟಾದಲ್ಲಿ 5% ರಷ್ಟು ಹೆಚ್ಚಳವಾಗಿದೆ.

     

  • ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

    ಮೋದಿಯನ್ನು ಟೀಕಿಸಿದ ಮಾಲ್ಡೀವ್ಸ್‌ಗೆ ಶಾಕ್ – ಭಾರತೀಯ ಪ್ರವಾಸಿಗರ ಸಂಖ್ಯೆ 33%ರಷ್ಟು ಕುಸಿತ

    ಮಾಲೆ: ಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ (Maldives) ಭೇಟಿ ನೀಡುವ ಭಾರತೀಯ (India) ಪ್ರವಾಸಿಗರ ಸಂಖ್ಯೆ 33% ರಷ್ಟು ಕಡಿಮೆಯಾಗಿದೆ ಎಂದು ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ.

    ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಕಲಹದಿಂದ ಎರಡೂ ದೇಶಗಳ ಸಂಬಂಧ ಹದಗೆಡುತ್ತಲೇ ಇದೆ. ಇದರಿಂದ ಮಾಲ್ಡೀವ್ಸ್‌ಗೆ ತೆರಳುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. 2023ರ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಮಾ.4ರ ವೇಳೆಗೆ 41,054 ಭಾರತೀಯ ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಈ ವರ್ಷದ ಮಾ.2ರ ಹೊತ್ತಿಗೆ ಭಾರತೀಯ ಪ್ರವಾಸಿಗರ ಸಂಖ್ಯೆ 27,224 ದಾಖಲಾಗಿದೆ. ಕಳೆದ ವರ್ಷಕ್ಕಿಂತ 13,830 ಕಡಿಮೆಯಾಗಿದೆ. ಇದನ್ನೂ ಓದಿ: ಬಿಜೆಪಿಗೆ ಅಭಿವೃದ್ಧಿಯೇ ಮಾನದಂಡ, 10 ವರ್ಷಗಳ ಅಭಿವೃದ್ಧಿ ಆಧಾರದ ಮೇಲೆ ಮತ ಕೇಳ್ತಿವಿ: ಶೋಭಾ ಕರಂದಾಜ್ಲೆ

    ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲಕ್ಷದ್ವೀಪ (Lakshadweep) ಭೇಟಿಯ ಚಿತ್ರಗಳ ಕುರಿತು ಮಾಲ್ಡೀವ್ಸ್‌ನ ಮೂವರು ಸಂಸದರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ನಂತರ ಭಾರತೀಯರು ಮಾಲ್ಡೀವ್ಸ್ ಪ್ರವಾಸವನ್ನು ಬಾಯ್ಕಾಟ್ ಮಾಡಲು ಆರಂಭಿಸಿದ್ದರು. ಬಳಿಕ ಭಾರತೀಯ ದ್ವೀಪ ಸಮೂಹವನ್ನು ಬೀಚ್ ಪ್ರವಾಸೋದ್ಯಮ ಮತ್ತು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ತಾಣವಾಗಿ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಇದಾದ ಬಳಿಕ ಮಾಲ್ಡೀವ್ಸ್‌ನ ಮೂವರು ಸಂಸದರನ್ನು ಅಮಾನತುಗೊಳಿಸಲಾಗಿತ್ತು.

    ಮಾಲ್ಡೀವ್ಸ್ ಪ್ರವಾಸದ ಬಾಯ್ಕಾಟ್ ಅಭಿಯಾನಕ್ಕೆ ಭಾರತದಲ್ಲಿ ಪ್ರಮುಖ ಚಿತ್ರ ನಟ – ನಟಿಯರು ಬೆಂಬಲವನ್ನು ನೀಡಿದ್ದರು. ಇದನ್ನೂ ಓದಿ: ಮಾರ್ಚ್‌ 13ರ ಒಳಗಡೆ 100 ಹೆದ್ದಾರಿ ಯೋಜನೆ, 10 ವಂದೇ ಭಾರತ್‌ ರೈಲಿಗೆ ಚಾಲನೆ ನೀಡಲಿದ್ದಾರೆ ಮೋದಿ

  • ಯಾವೊಬ್ಬ ಭಾರತೀಯ ಸೈನಿಕ ದೇಶದಲ್ಲಿ ಇರಕೂಡದು: ಮಾಲ್ಡೀವ್ಸ್‌ ಅಧ್ಯಕ್ಷ

    ಯಾವೊಬ್ಬ ಭಾರತೀಯ ಸೈನಿಕ ದೇಶದಲ್ಲಿ ಇರಕೂಡದು: ಮಾಲ್ಡೀವ್ಸ್‌ ಅಧ್ಯಕ್ಷ

    ಮಾಲೆ: ಮೇ 10 ರ ನಂತರ ಭಾರತದ ಯಾವೊಬ್ಬ ಮಿಲಿಟರಿ ಸದಸ್ಯ ದೇಶದಲ್ಲಿ ಇರಬಾರದು. ಅಷ್ಟೇ ಅಲ್ಲದೇ ನಾಗರಿಕ ಉಡುಪಿನಲ್ಲಿರುವ ಭಾರತೀಯ (India) ಅಧಿಕಾರಿಗಳೂ ನಮ್ಮ ದೇಶದಲ್ಲಿ ಇರುವಂತಿಲ್ಲ ಎಂದು ಮಾಲ್ಡೀವ್ಸ್‌ (Maldives) ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ಆದೇಶ ಪ್ರಕಟಿಸಿದ್ದಾರೆ.

    ಚೀನಾ (China) ಸಹಕಾರದಿಂದಲೇ ಅಧಿಕಾರಕ್ಕೆ ಏರಿದ ಮುಯಿಝು ಈಗ ಚೀನಾಗೆ ಮತ್ತಷ್ಟು ಹತ್ತಿರವಾಗುತ್ತಿದ್ದು ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಐಎಎಸ್‌ ಅಧಿಕಾರಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಪಾಕ್‌ ಪ್ರೇಮಿ ಮುನಾವರ್!

    ಚುನಾವಣಾ ಸಮಯದಲ್ಲಿ ಮಾಲ್ಡೀವ್ಸ್‌ನಲ್ಲಿ ಭಾರತೀಯ ಪಡೆಗಳನ್ನು ತೆಗೆದುಹಾಕುವುದು ಮುಯಿಝು ಪಕ್ಷದ ಪ್ರಮುಖ ಅಭಿಯಾನವಾಗಿತ್ತು. ಡಾರ್ನಿಯರ್ 228 ಕಡಲ ಗಸ್ತು ವಿಮಾನ ಮತ್ತು ಎರಡು HAL ಧ್ರುವ್ ಹೆಲಿಕಾಪ್ಟರ್‌ಗಳೊಂದಿಗೆ ಸುಮಾರು 88 ಭಾರತೀಯ ಸೈನಿಕರು ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿದ್ದರು. ಅಧಿಕಾರ ವಹಿಸಿಕೊಂಡಿದ್ದ ಎರಡನೇ ದಿನದಂದೇ ಮುಯಿಝು ತನ್ನ ಸೇನಾ ಸಿಬ್ಬಂದಿಯನ್ನು ಮಾಲ್ಡೀವ್ಸ್‌ನಿಂದ ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರಕ್ಕೆ ಸೂಚಿಸಿದ್ದರು.

    ಮಾಲ್ಡೀವ್ಸ್‌ ನಿರ್ಧಾರಕ್ಕೆ ಭಾರತ ತನ್ನ ಸೇನಾ ಸಿಬ್ಬಂದಿಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ನೀಡಿತ್ತು. ಆದರೆ ಸೇನೆಯಲ್ಲಿನ ನಾಗರಿಕ ವಿಭಾಗದ ಅಧಿಕಾರಿಗಳನ್ನು 1 ವಾರದ ಹಿಂದೆ ಅಲ್ಲಿಗೆ ಕಳುಹಿಸಿತ್ತು.

    ಈ ವಿಚಾರವನ್ನೇ ಭಾಷಣದಲ್ಲಿ ಪ್ರಸ್ತಾಪ ಮಾಡಿದ ಮುಯಿಝು, ನಮ್ಮ ಸೂಚನೆ ಹೊರತಾಗಿಯೂ ಭಾರತದ ಸೈನಿಕರು ಮಾಲ್ಡೀವ್ಸ್‌ ತೊರೆಯಲು ಸಿದ್ಧರಿಲ್ಲ. ತಮ್ಮ ಸೇನಾ ಸಮವಸ್ತ್ರ ಬಿಚ್ಚಿಟ್ಟು ನಾಗರಿಕ ಉಡುಪು ಹಾಕಿಕೊಂಡು ಮಾರು ವೇಷದಲ್ಲಿ ಬರುತ್ತಿದ್ದಾರೆ. ಇದಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.

    ಮೇ 10ರ ನಂತರ ದೇಶದಲ್ಲಿ ಭಾರತೀಯ ಸೈನಿಕರು ಇರಬಾರದು. ಅದು ಸಮವಸ್ತ್ರಧಾರಿ ಭಾರತೀಯ ಸೇನಾ ಸಿಬ್ಬಂದಿಯೇ ಇರಲಿ ಅಥವಾ ನಾಗರಿಕ ಉಡುಪಿನಲ್ಲಿನ ಭಾರತೀಯ ಸಿಬ್ಬಂದಿಯೇ ಇರಲಿ. ಯಾರೂ ಮಾಲ್ಡೀವ್ಸ್‌ನಲ್ಲಿ ಇರಕೂಡದು ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ನಿಯಮ – ಒಬ್ಬರಿಗೆ ಒಂದೇ ಕ್ಯಾನ್‌ ನೀರು!

    ಚೀನಾದ ತಾಳಕ್ಕೆ ಮಾಲ್ಡೀವ್ಸ್‌ ನೃತ್ಯ:
    ದ್ವೀಪ ದೇಶಕ್ಕೆ ಚೀನಾ ಉಚಿತ ಸೇನಾ ನೆರವಿನ ಘೋಷಣೆ ಮಾಡಿದೆ. ಈ ಕುರಿತು ಎರಡು ದೇಶಗಳು ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ. ಸಹಿ ಹಾಕಿದ ಬೆನ್ನಲ್ಲೇ ಮಾಲ್ಡೀವ್ಸ್‌ ಅಧ್ಯಕ್ಷ ಮುಯಿಝು ಮತ್ತೆ ಭಾರತದ ವಿರುದ್ಧ ಕಿಡಿಕಾರಿದ್ದಾರೆ. ಚೀನಾದ ಸೇನಾ ನೆರವು ಯಾವ ರೀತಿ ಇರಲಿದೆ ಎಂಬುದನ್ನು ಉಭಯ ದೇಶಗಳು ಬಹಿರಂಗಪಡಿಸಿಲ್ಲ.

  • ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

    ಪ್ರಧಾನಿ ಮೋದಿ, ಭಾರತದ ಜನತೆ ಬಳಿ ಕ್ಷಮೆಯಾಚಿಸಿ: ಮಾಲ್ಡೀವ್ಸ್‌ ಅಧ್ಯಕ್ಷರಿಗೆ ವಿಪಕ್ಷ ನಾಯಕರ ಒತ್ತಾಯ

    ಮಾಲೆ: ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಭಾರತದ ಜನತೆಯ ಕ್ಷಮೆಯಾಚಿಸಿ ಎಂದು ಮಾಲ್ಡೀವ್ಸ್‌ (Maldives) ಅಧ್ಯಕ್ಷ ಮೊಹಮ್ಮದ್‌ ಮುಯಿಜ್ಜು (Mohamed Muizzu) ಅವರಿಗೆ ಮಾಲ್ಡೀವ್ಸ್ ಜುಮ್ಹೂರಿ ಪಕ್ಷದ (ಜೆಪಿ) ನಾಯಕ ಖಾಸಿಮ್ ಇಬ್ರಾಹಿಂ ಒತ್ತಾಯಿಸಿದ್ದಾರೆ.

    ಮಾಲ್ಡೀವಿಯನ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ದೇಶದ ಪ್ರಮುಖ ಪ್ರತಿಪಕ್ಷ MDP. ಈ ಪಕ್ಷ ದೇಶದ ಅಧ್ಯಕ್ಷರ ವಿರುದ್ಧ ದೋಷಾರೋಪಣೆಯ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಇದು ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ಸದನದಲ್ಲಿ ಘರ್ಷಣೆ ಉಂಟುಮಾಡಿದ ನಂತರದ ಬೆಳವಣಿಗೆಯಾಗಿದೆ. ಇದನ್ನೂ ಓದಿ: ‘ಬಾಯ್ಕಾಟ್‌ ಮಾಲ್ಡೀವ್ಸ್‌’ ಎಫೆಕ್ಟ್‌ – ಮಾಲ್ಡೀವ್ಸ್‌ ಪ್ರವಾಸ ರ‍್ಯಾಂಕಿಂಗ್‌ನಲ್ಲಿ ನಂ.1 ರಿಂದ 5ನೇ ಸ್ಥಾನಕ್ಕೆ ಕುಸಿದ ಭಾರತ

    ಯಾವುದೇ ದೇಶವಾಗಲಿ ಅಥವಾ ನಮ್ಮ ನೆರೆಹೊರೆಯ ದೇಶದ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ನಾವು ಮಾತನಾಡಬಾರದು. ನಮ್ಮ ರಾಜ್ಯಕ್ಕೆ ನಾವು ಬಾಧ್ಯತೆಯನ್ನು ಹೊಂದಿದ್ದೇವೆ. ಅದನ್ನು ಪರಿಗಣಿಸಬೇಕು ಎಂದು ಖಾಸಿಮ್‌ ತಿಳಿಸಿದ್ದಾರೆ.

    ಡಿಕ್ರಿಯನ್ನು ರದ್ದುಗೊಳಿಸಬಾರದು. ಏಕೆಂದರೆ ಅದು ರಾಷ್ಟ್ರಕ್ಕೆ ನಷ್ಟವನ್ನು ಉಂಟುಮಾಡುತ್ತದೆ. ಅದನ್ನು ಮಾಡಲು ಸಾಧ್ಯವಿಲ್ಲ. ಇದನ್ನು ಮಾಡಬಾರದು ಎಂದು ನಾನು ಮುಯಿಜ್ಜುಗೆ ಹೇಳುತ್ತೇನೆ. ಚೀನಾ ಪ್ರವಾಸದ ನಂತರ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಕುರಿತು ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಈ ಎಲ್ಲಾ ವಿಚಾರವಾಗಿ ಔಪಚಾರಿಕವಾಗಿ ಕ್ಷಮೆಯಾಚಿಸಲು ನಾನು ಅಧ್ಯಕ್ಷ ಮುಯಿಜ್ಜು ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೇಯರ್‌ ಚುನಾವಣೆ : ಮಾಲ್ಡೀವ್ಸ್‌ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ

    ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರು. ಈ ವಿಚಾರವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಅಂಶವನ್ನು ಮುಂದಿಟ್ಟುಕೊಂಡು ಮಾಲ್ಡೀವ್ಸ್‌ ಸಚಿವರು, ಭಾರತದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದರು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಯಿತು. ಭಾರತೀಯ ಪ್ರವಾಸಿಗರು ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ನಡೆಸಿದರು. ಇದರಿಂದ ಮಾಲ್ಡೀವ್ಸ್‌ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದೆ.