Tag: Maldives Trips

  • ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

    ಮೋದಿ ಭೇಟಿ ಬಳಿಕ ಲಕ್ಷದ್ವೀಪ ಪ್ರವಾಸದತ್ತ ಭಾರತೀಯರ ಚಿತ್ತ – #BoycottMaldives ಫುಲ್‌ ಟ್ರೆಂಡ್‌

    ಕವರಟ್ಟಿ: ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ (Lakshadweep) ಸಮುದ್ರತೀರಕ್ಕೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಭೇಟಿ ಬಳಿಕ ಪ್ರವಾಸಿಗರ ಚಿತ್ತ ಲಕ್ಷದ್ವೀಪದತ್ತ ಹರಿದಿದ್ದು, ಮಾಲ್ಡೀವ್ಸ್‌ನಲ್ಲಿ ಕಿಚ್ಚು ಹೊತ್ತಿಸಿದೆ.

    ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ ಕೆಲವು ದಿನಗಳ ಬಳಿಕ ಮಾಲ್ಡೀವ್ಸ್‌ (Maldives) ಸಚಿವರೊಬ್ಬರು, ಭಾರತವು ಮಾಲ್ಡೀವ್ಸ್‌ ದೇಶವನ್ನು ಗುರಿಯಾಗಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸಚಿವ ಅಬ್ದುಲ್ಲಾ ಮಹಜೂಮ್ ಮಜೀದ್, ಭಾರತವು ಮಾಲ್ಡೀವ್ಸ್‌ ಅನ್ನು ಟಾರ್ಗೆಟ್ ಮಾಡುತ್ತಿದೆ. ಮಾಲ್ಡೀವ್ಸ್‌ನ ಬೀಚ್ ಪ್ರವಾಸೋದ್ಯಮದ (Maldives Beach Tourism) ಜೊತೆಗೆ ಸ್ಪರ್ಧಿಸಲು ಭಾರತಕ್ಕೆ ಸಾಕಷ್ಟು ಸವಾಲುಗಳಿವೆ. ಭಾರತದ ಬೀಚ್‌ಗಳು ಕೊಳಕಾಗಿವೆ ಎಂಬುದಾಗಿ ವ್ಯಂಗ್ಯವಾಡಿದ್ದಾರೆ. ಆದ್ರೆ ಸಚಿವರು ಮಾಡಿರುವ ಅವಹೇಳನಾಕಾರಿ ಟ್ವೀಟ್‌ಗೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಅದಕ್ಕೆ ಉತ್ತರವಾಗಿ, ಮಾಲ್ಡೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವನ್ನಾಗಿ ಪ್ರಚಾರ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಗೆ ಭೇಟಿ ನೀಡಿದ್ದೇ ಕಾರಣ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಆಶ್ರಯ ಮನೆಯಿಂದ 26 ಬಾಲಕಿಯರು ನಾಪತ್ತೆ

    ದೇಶದ ಕೇಂದ್ರಾಡಳಿತ ಪ್ರದೇಶಕ್ಕೆ ಮೋದಿ ಅವರು ಭೇಟಿ ನೀಡಿದ್ದಾಗ, ಅಲ್ಲಿನ ವಿಹಂಗಮ ಸಮುದ್ರ ತೀರದಲ್ಲಿ ಫೋಟೋ ಶೂಟ್‌ ಹಾಗೂ ವಿಡಿಯೋಗಳನ್ನು ತೆಗೆಸಿಕೊಂಡಿದ್ದರು. ಸ್ನಾರ್ಕ್ಲಿಂಗ್‌ ಮಾಡುವ ಜೊತೆಗೆ ದ್ವೀಪ ರಾಷ್ಟ್ರದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದ್ದರು. ಅಲ್ಲದೇ ಸಾಹಸಪ್ರಿಯರೆಲ್ಲ ಲಕ್ಷದ್ವೀಪಕ್ಕೆ ಭೇಟಿ ನೀಡಿ, ಪ್ರವಾಸ ಇಷ್ಟಪಡುವ ಜನರು ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕರೆ ಕೊಟ್ಟಿದ್ದರು. ಈ ಬೆನ್ನಲ್ಲೇ ಮಾಲ್ಡೀವ್ಸ್‌ ಪ್ರವಾಸಕ್ಕೆ ಪ್ಲ್ಯಾನ್‌ ಮಾಡಿದ್ದ ಬಹುತೇಕ ಭಾರತೀಯರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿದ್ದು, ಲಕ್ಷದ್ವೀಪದತ್ತ ಚಿತ್ತ ಹರಿಸಿದ್ದಾರೆ. ಟ್ವಿಟ್ಟರ್‌ನಲ್ಲೂ ಇದರ ಅಲೆಗಳು ಜೋರಾಗಿವೆ.

    ಮಾಲ್ಡೀವ್ಸ್ ಬದಲು ಲಕ್ಷದ್ವೀಪಕ್ಕೆ ಹೋಗಿ: ಮಾಲ್ಡೀವ್ಸ್‌ನ ಭಾರತ ವಿರೋಧಿ ನೀತಿ ಬಹಿರಂಗವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ತಮ್ಮ ನೆಚ್ಚಿನ ಪ್ರವಾಸಕ್ಕಾಗಿ ಮಾಲ್ಡೀವ್ಸ್‌ ತಾಣವನ್ನು ಆಯ್ಕೆ ಮಾಡಿಕೊಂಡಿದ್ದ ಹೆಚ್ಚಿನ ಭಾರತೀಯರು ಪ್ರವಾಸವನ್ನು ತಮ್ಮ ಪಟ್ಟಿಯಿಂದ ಕೈಬಿಟ್ಟು, ಲಕ್ಷದ್ವೀಪವನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಲಾಗುತ್ತಿದೆ. ʻ#ಬಾಯ್ಕಾಟ್ ಮಾಲ್ಡೀವ್ಸ್ʼ ಎಂಬ ಹ್ಯಾಷ್‌ಟ್ಯಾಗ್ ಎಕ್ಸ್‌ ತಾಣದಲ್ಲಿ ಟ್ರೆಂಡ್ ಆಗಿದೆ.

    ಅನೇಕರು ತಮ್ಮ ಮಾಲ್ಡೀವ್ಸ್ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ. ಪ್ರಯಾಣ ಹಾಗೂ ಹೋಟೆಲ್ ಬುಕಿಂಗ್ ರದ್ದುಗೊಳಿಸಿರುವ ಮಾಹಿತಿಯ ಸ್ಕ್ರೀನ್‌ಶಾಟ್‌ಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ವೇಳೆ ಮುಸ್ಲಿಮರು ರೈಲಿನಲ್ಲಿ ಪ್ರಯಾಣಿಸಬೇಡಿ.. ಮನೆಯಲ್ಲೇ ಇರಿ: ಬದ್ರುದ್ದೀನ್‌ ಅಜ್ಮಲ್‌ ಕರೆ

    ಬಾಲಿವುಡ್‌ ಸ್ಟಾರ್‌ಗಳ ಬೆಂಬಲ: ಲಕ್ಷದ್ವೀಪ ಪ್ರವಾಸಕ್ಕೆ ಹೋಗುವಂತೆ ಶುರುವಾಗಿರುವ ಸೋಶಿಯಲ್‌ ಮೀಡಿಯಾ ಅಭಿಯಾನಕ್ಕೆ ಖ್ಯಾತ ಬಾಲಿವುಡ್‌ ನಟರಾದ ಅಕ್ಷಯ್ ಕುಮಾರ್, ಜಾನ್ ಅಬ್ರಹಾಂ ಹಾಗೂ ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕರು ಬೆಂಬಲ ನೀಡಿದ್ದಾರೆ. ಲಕ್ಷದ್ವೀಪ ಮತ್ತು ಮಹಾರಾಷ್ಟ್ರದ ಸಿಂಧುದುರ್ಗದಂತಹ ತಾಣಗಳಿಗೆ ಪ್ರವಾಸ ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ