Tag: malayalam actress

  • 3 ವರ್ಷದಿಂದ ಅಶ್ಲೀಲ ಮೆಸೇಜ್‌ ಕಳಿಸ್ತಿದ್ದಾರೆ, ಹೋಟೆಲ್‌ಗೆ ಕರೀತಿದ್ದಾರೆ – ರಾಜಕಾರಣಿ ವಿರುದ್ಧ ನಟಿ ರಿನಿ ಜಾರ್ಜ್ ಆರೋಪ

    3 ವರ್ಷದಿಂದ ಅಶ್ಲೀಲ ಮೆಸೇಜ್‌ ಕಳಿಸ್ತಿದ್ದಾರೆ, ಹೋಟೆಲ್‌ಗೆ ಕರೀತಿದ್ದಾರೆ – ರಾಜಕಾರಣಿ ವಿರುದ್ಧ ನಟಿ ರಿನಿ ಜಾರ್ಜ್ ಆರೋಪ

    – ಕಾಂಗ್ರೆಸ್‌ ಶಾಸಕನ ಪಾತ್ರ ಇರೋದಾಗಿ ಬಿಜೆಪಿ ಆರೋಪ

    ತಿರುವನಂತಪುರಂ: ಕೇರಳದ ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು (Kerala Politician) ಮೂರು ವರ್ಷಗಳಿಂದ ತನಗೆ ಆಕ್ಷೇಪಾರ್ಹ ಸಂದೇಶ ಕಳಿಸುತ್ತಿದ್ದಾರೆ. ಅಲ್ಲದೇ ತನ್ನನ್ನು ಫೈವ್‌ ಸ್ಟಾರ್‌ ಹೋಟೆಲ್‌ಗೆ ಕರೆಯುತ್ತಿದ್ದಾರೆ ಎಂದು ಮಲಯಾಳಂ ನಟಿ ರಿನಿ ಜಾರ್ಜ್ (Rini George) ಆರೋಪಿಸಿದ್ದಾರೆ.

    ರಾಜ್ಯದ ಪ್ರಮುಖ ರಾಜಕೀಯ ಪಕ್ಷದ ಕಾರ್ಯಕರ್ತೆಯೂ ಆಗಿರುವ ನಟಿ, ಅಶ್ಲೀಲ ಸಂದೇಶ (Objectionable Texts) ಕಳುಹಿಸಿದ ರಾಜಕಾರಣಿಯ ಹೆಸರನ್ನ ಬಹಿರಂಗಪಡಿಸಿಲ್ಲ. ಆದ್ರೆ ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಪಾತ್ರ ಇರುವುದಾಗಿ ಬಿಜೆಪಿ ಆರೋಪ ಮಾಡಿದೆ. ಇದನ್ನೂ ಓದಿ: ಚಹಲ್‌ಗೆ ಟಕ್ಕರ್ ಕೊಟ್ಟ ಮಾಜಿ ಪತ್ನಿ ಧನಶ್ರೀ

    ನಟಿ ಹೇಳಿದ್ದೇನು?
    ಪ್ರಮುಖ ರಾಷ್ಟ್ರೀಯ ಪಕ್ಷದ ನಾಯಕರೊಬ್ಬರು ನನಗೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನ ಕಳುಹಿಸುತ್ತಿದ್ದಾರೆ. ಫೈವ್‌ ಸ್ಟಾರ್‌ ಹೋಟೆಲ್‌ಗೆ (five-star hotel) ಬರುವಂತೆ ಕರೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಕ್ಷದ ನಾಯಕರಿಗೆ ತಿಳಿಸುವುದಾಗಿ ಹೇಳಿದ್ರೆ, ಹೇಳುವಂತೆ ಸವಾಲ್‌ ಹಾಕಿದ್ದಾರೆ. ಈ ಬಗ್ಗೆ ಪಕ್ಷದ ನಾಯಕರಿಗೆ ದೂರು ನೀಡಿದ್ರೆ ನಿರ್ಲಕ್ಷ್ಯ ಮಾಡಿದ್ದಾರೆ. ದೂರು ನೀಡಿದ ಬಳಿಕವೂ ಅವರಿಗೆ ಪಕ್ಷದೊಳಗೆ ಪ್ರಮುಖ ಹುದ್ದೆಯನ್ನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇದು ನನ್ನೊಬ್ಬಳ ಸಮಸ್ಯೆಯಲ್ಲ, ಹಲವಾರು ರಾಜಕಾರಣಿಗಳ ಪತ್ನಿಯರು ಹಾಗೂ ಹೆಣ್ಣುಮಕ್ಕಳೂ ತಮ್ಮೊಂದಿಗೆ ಈ ರೀತಿಯ ಅನುಭವ ಎದುರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತಮ್ಮ ಕುಟುಂಬದಲ್ಲಿನ ಮಹಿಳೆಯರನ್ನೇ ರಕ್ಷಿಸಲು ಸಾಧ್ಯವಾಗದ ಈ ರಾಜಕಾರಣಿಗಳು ಯಾವ ಮಹಿಳೆಯನ್ನ ರಕ್ಷಿಸಲು ಸಾಧ್ಯ? ಅಂತಲೂ ರಿನಿ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಕಾನ್ಸ್‌ಟೇಬಲ್‌ಗೆ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ್ದ 6 ಪೊಲೀಸರು ಅರೆಸ್ಟ್‌

    ಅಲ್ಲದೇ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಅನೇಕ ಮಹಿಳೆಯರು ಈ ರೀತಿಯ ಸಮಸ್ಯೆಗಳನ್ನ ಎದುರಿಸ್ತಿರೋದನ್ನ ನೋಡಿದ್ದೇನೆ. ಆದ್ರೆ ಯಾಕೆ ಯಾರೊಬ್ಬರೂ ಅದರ ಬಗ್ಗೆ ಒಂದು ಮಾತೂ ಆಡ್ತಿಲ್ಲ ಅಂತ ಯೋಚನೆ ಬಂತು. ಅವರೆಲ್ಲರ ಪರವಾಗಿ ನಾನು ದನಿ ಎತ್ತಲು ನಿರ್ಧರಿಸಿದೆ. ಅದಕ್ಕಾಗಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

    ʻಕೈʼ ಶಾಸಕನ ವಿರುದ್ಧ ಬಿಜೆಪಿ ಆರೋಪ
    ರೀತಿ ತನಗೆ ಅಶ್ಲೀಲ ಸಂದೇಶ ಕಳಿಸಿದ ರಾಜಕಾರಣಿಯ ಹೆಸರು ಬಹಿರಂಹಪಡಿಸಿಲ್ಲ. ಆದ್ರೆ ಬಿಜೆಪಿಯು ಪಾಲಕ್ಕಾಡ್‌ನ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ವಿರುದ್ಧ ಆರೋಪ ಮಾಡಿದೆ. ಶಾಸಕನ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜೀನಾಮೆಗೂ ಒತ್ತಾಯಿಸಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಲ್ಲಿ ಗಂಟೆಗಟ್ಟಲೆ ಕಾದು ದರ್ಶನ್ ಭೇಟಿಯಾದ ವಿಜಯಲಕ್ಷ್ಮಿ

    ರಾಹುಲ್ ಮಮ್‌ಕೂಟತಿಲ್ ಕೇರಳದ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

  • AI ಬಳಸಿ ನನ್ನ ಖಾಸಗಿ ವೀಡಿಯೋ ಲೀಕ್ ಮಾಡಿದ್ದಾರೆ – ನಟಿ ಪ್ರಗ್ಯಾ ನಗ್ರಾ ಆರೋಪ

    AI ಬಳಸಿ ನನ್ನ ಖಾಸಗಿ ವೀಡಿಯೋ ಲೀಕ್ ಮಾಡಿದ್ದಾರೆ – ನಟಿ ಪ್ರಗ್ಯಾ ನಗ್ರಾ ಆರೋಪ

    – ಎಲ್ಲಾ ಮಳೆಯರು ಸುರಕ್ಷಿತವಾಗಿರಿ ಎಂದ ನಟಿ

    ಡೀಪ್‌ ಫೇಕ್‌ನ ಕಾಟ ಕನ್ನಡಕ್ಕೆ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗಕ್ಕೆ ಅಂಟಿಕೊಂಡಿದೆ. ಅದರಲ್ಲಿಯೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚುಬಲಿಯಾಗುತ್ತಿದ್ದಾರೆ. ಯಾವುದು ಅಸಲಿ, ಯಾವುದು ನಕಲಿ ಎನ್ನುವುದು ತಿಳಿಯುವುದೇ ಕಷ್ಟವಾಗಿದೆ. ಬಹುಭಾಷಾ ನಟಿ ಪ್ರಗ್ಯಾ ನಗ್ರಾ (Pragya Nagra) ಅವರದ್ದು ಎನ್ನಲಾದ ಖಾಸಗಿ ವಿಡಿಯೋ (Private Video) ಲೀಕ್‌ ಆಗಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಯಾಗುತ್ತಿದೆ.

    ತಮಿಳು, ತೆಲುಗು ಮತ್ತು ಮಲಯಾಳಿ ಸಿನಿಮಾಗಳಲ್ಲಿ ಫೇಮಸ್‌ ಆಗಿರೋ ನಟಿ ಪ್ರಗ್ಯಾ ಅವರದ್ದು ಎನ್ನಲಾದ ಕೆಲವು ಖಾಸಗಿ ಕ್ಷಣಗಳ ವಿಡಿಯೋಗಳು ವೈರಲ್‌ ಆಗಿದ್ದು, ಇದು ಎಲ್ಲರಿಗೂ ದೊರಕುವಂತಾಗುತ್ತಿದೆ. ಈ ವಿಡಿಯೋದಲ್ಲಿ ನಟಿಯು, ವ್ಯಕ್ತಿಯೊಬ್ಬರ ಜೊತೆಗೆ ಕೆಲವು ಖಾಸಗಿ ಕ್ಷಣಗಳನ್ನು ಕಳೆದಿರುವಂತೆ ತೋರಿಸಲಾಗುತ್ತಿದೆ. ಇದಕ್ಕೆ ನಟಿ ಪ್ರತಿಕ್ರಿಯೆ ನೀಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

    ಇನ್‌ಸ್ಟಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಪ್ರಗ್ಯಾ, ಇದೊಂದು ಕೆಟ್ಟ ಕನಸು ಅಂತ ನಾನು ಭಾವಿಸುತ್ತೇನೆ, ತಂತ್ರಜ್ಞಾನದಲ್ಲಿ ಒಳ್ಳೆಯದೂ ಇದೆ, ಕೆಟ್ಟದ್ದಕ್ಕೂ ಇದೆ. ಆದ್ರೆ ಕೆಲವರು ಇದನ್ನು ಎಐ ರಚಿಸಲು ಬಳಿಸಿ, ದುರುಪಯೋಗಪಡಿಸಿಕೊಳ್ಳುವ ಕೆಲಸವನ್ನು ಕೆಲ ದುಷ್ಟರು ಮಾಡುತ್ತಿದ್ದಾರೆ. ಈ ಕ್ಷಣದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ಕೃತಜ್ಞಳಾಗಿರುತ್ತೇನೆ. ಬೇರೆ ಯಾವ ಮಹಿಳೆಯೂ ಇಂತಹ ಅಗ್ನಿಪರೀಕ್ಷೆಗೆ ಒಳಗಾಗಬಾರದು, ಎಲ್ಲರೂ ಸುರಕ್ಷಿತವಾಗಿರಲಿ ಎಂದು ನಾನು ಭಾವಿಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಅಷ್ಟಕ್ಕೂ ಪ್ರಗ್ಯಾ ನಾಗ್ರಾ ಹಾಟ್‌ ಬ್ಯೂಟಿ ಎಂದೇ ಫೇಮಸ್‌ ಆದವರು. ಸೀರೆಯುಟ್ಟರೂ ಅದರಲ್ಲಿಯೂ ಹಾಟ್‌ ಆಗಿಯೇ ಕಾಣಿಸಿಕೊಳ್ಳುವ ನಟಿಗೆ ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್ಸ್‌ ಇದ್ದಾರೆ. ಇಲ್ಲಿ ಕೂಡ ಅವರು ಸದಾ ಹಾಟ್‌, ಬೋಲ್ಡ್‌ ಫೋಟೋ ಶೇರ್‍‌ ಮಾಡಿಕೊಳ್ಳುತ್ತಿರುತ್ತಾರೆ. ಇದೇ ಕಾರಣಕ್ಕೆ, ಈ ವಿಡಿಯೋದಲ್ಲಿ ಇರುವಾಕೆ ಕೂಡ ಪ್ರಗ್ಯಾ ಎನ್ನುವುದು ಹಲವರ ಅಭಿಮತ.

    2022 ರಲ್ಲಿ ಪ್ರಗ್ಯಾ ತಮಿಳಿನ ‘ವರಲಾರು ಮುಕ್ಕಿಯಂ’ ಮೂಲಕ ಸಿನಿ ಪಯಣ ಆರಂಭಿಸಿದರು. 2023 ರಲ್ಲಿ ಮಲಯಾಳಂ ಚಿತ್ರ ‘ನಾಧಿಕಲಿಲ್ ಸುಂದರಿ ಯಮುನಾ’ದಲ್ಲಿ ಮಿಂಚಿದರು. ಇದರಲ್ಲಿ ಅವರು ಕನ್ನಡ ಹುಡುಗಿಯ ಪಾತ್ರವನ್ನು ನಿರ್ವಹಿಸಿದರು. ತಮಿಳು ಎನ್‌-4 ಚಿತ್ರದಲ್ಲಿ ಸ್ವಾತಿ ಹೆಸರಿನ ಪಾತ್ರ ನಿರ್ವಹಿಸಿ ಖ್ಯಾತಿ ಗಳಿಸಿದ್ದರು. ತೆಲುಗಿನಲ್ಲಿ ಲಗ್ಗಂ ಸಿನಿಮಾ ಕಳೆದ ನವೆಂಬರ್ ನಲ್ಲಿ OTTಯಲ್ಲಿ ಬಿಡುಗಡೆಯಾಗಿದೆ.

  • ಕ್ಯಾನ್ಸರ್​ನಿಂದ  ಬಳಲುತ್ತಿದ್ದ ನಟಿ ಶರಣ್ಯ ನಿಧನ

    ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ಶರಣ್ಯ ನಿಧನ

    ತಿರುವನಂತಪುರಂ: ಕ್ಯಾನ್ಸರ್, ಬ್ರೇನ್ ಟ್ಯೂಮರ್‌ನಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ಚಲನಚಿತ್ರ ಮತ್ತು ಕಿರುತೆರೆ ನಟಿ ಶರಣ್ಯ ಶಶಿ ಸಾವನ್ನಪ್ಪಿದ್ದಾರೆ.

    ನಟಿ ಶರಣ್ಯ(35) 2012 ರಲ್ಲಿ ಬ್ರೈನ್ ಟ್ಯೂಮರ್ ಪತ್ತೆಯಾಗಿತ್ತು. ಬಳಿಕ ಹಲವು ಬಾರಿ ನಟಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು ಮತ್ತು ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದರು. ಕ್ಯಾನ್ಸರ್ ವಿರುದ್ಧ ನಟಿ ಧೈರ್ಯದಿಂದ ಹೋರಾಡಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲಾಗಿತ್ತು.

    ಕಳೆದ ಹತ್ತು ವರ್ಷಗಳಿಂದ ಅವರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. 2012ರಲ್ಲಿ ಅವರಿಗೆ ಬ್ರೇನ್ ಟ್ಯೂಮರ್ ಇದೆ ಎಂಬುದು ತಿಳಿದುಬಂದಿತ್ತು. 11ಕ್ಕೂ ಹೆಚ್ಚು ಬಾರಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆದರೂ ಕ್ಯಾನ್ಸರ್ ಗೆಲ್ಲಲು ಶರಣ್ಯಾಗೆ ಸಾಧ್ಯವಾಗಿಲ್ಲ. ಕಳೆದ ಮೇ 23 ರಂದು ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಶರಣ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಆಸ್ಪತ್ರೆಯ ವೆಂಟಿಲೇಟರ್ ಐಸಿಯುನಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಜೂನ್ ನಲ್ಲಿ ಕೆಲ ದಿನಗಳ ಕಾಲ ಐಸಿಯುನಿಂದ ಹೊರಬಂದಿದ್ದರು. ಆದರೆ ಆಕೆಯ ಸ್ಥಿತಿ ಮತ್ತಷ್ಟು ಹದಗೆಟ್ಟ ನಂತರ ಪುನಃ ದಾಖಲಾಗಿದ್ದರು. ಅಂತಿಮವಾಗಿ ಇಂದು ಕೊನೆಯುಸಿರೆಳೆದಿದ್ದಾರೆ.

    ಶರಣ್ಯಾ ಶಶಿ ನಿಧನಕ್ಕೆ ಅನೇಕರು ಕಂಬನಿ ಮಿಡಿದಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ನಮ್ಮ ಮನೋಬಲದ ಕಾರಣಕ್ಕೆ ಅವರು ಅನೇಕರಿಗೆ ಸ್ಫೂರ್ತಿ ಆಗಿದ್ದರು. ಈಗ ಅವರ ನಿಧನದಿಂದ ಮಲಯಾಳಂ ಚಿತ್ರರಂಗದಲ್ಲಿ ಶೋಕದ ವಾತಾವರಣ ನಿರ್ಮಾಣ ಆಗಿದೆ. ಚಿಕಿತ್ಸಾ ವೆಚ್ಚಗಳಿಂದಾಗಿ ನಟಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಹೀಗಾಗಿ ಚಲನಚಿತ್ರ ಮತ್ತು ಟಿವಿ ಉದ್ಯಮದ ಅನೇಕ ಸಹ ನಟರು ನಟಿಯನ್ನು ಬೆಂಬಲಿಸಲು ಒಗ್ಗೂಡಿದರು ಮತ್ತು ಶರಣ್ಯ ಅವರಿಗೆ ಸಹಾಯ ಮಾಡಿದ್ದರು.