Tag: malayalam

  • ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

    ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ

    ಲಯಾಳಂನ (Malayalam) ಖ್ಯಾತ ನಟ ಮೋಹನ್ ಲಾಲ್‌ಗೆ (Mohanlal) ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು (Dadasaheb Phalke Award) ಘೋಷಿಸಲಾಗಿದೆ. ಸೆ.23 ರಂದು ನಡೆಯಲಿರುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮೋಹನ್ ಲಾಲ್‌ಗೆ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಘೋಷಿಸಿದೆ.

    ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್, ಮಲಯಾಳಂ ಮಾತ್ರವೇ ಅಲ್ಲದೆ ಭಾರತದ ಹಲವಾರು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಫಾಲ್ಕೆ ಪ್ರಶಸ್ತಿ ಗೌರವಕ್ಕೆ ಭಾಜನರಾದ ಮಲಯಾಳಂ ಚಿತ್ರರಂಗದ ಎರಡನೇ ಕಲಾವಿದರು ಮೋಹನ್ ಲಾಲ್. 2004ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮಲಯಾಳಂ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ನೀಡಲಾಗಿತ್ತು. ಮೋಹನ್ ಲಾಲ್ ಸಿನಿಮಾ ರಂಗಕ್ಕೆ ಸಲ್ಲಿಸಿರುವ ಅಭೂತಪೂರ್ವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

    2024ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮಿಥುನ್ ಚಕ್ರವರ್ತಿ ಅವರಿಗೆ ನೀಡಿ ಗೌರವಿಸಲಾಗಿತ್ತು. 2019ರಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನೀಡಲಾಗಿತ್ತು. ಇದೀಗ 2023ರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವ ಹಾಗೂ ಅತ್ಯದ್ಭುತ ನಟರಾಗಿರುವ ಮೋಹನ್ ಲಾಲ್ ಅವರಿಗೆ ಘೋಷಿಸಲಾಗಿದೆ. ಮೋಹನ್ ಲಾಲ್ ಅವರು ಫಾಲ್ಕೆ ಪ್ರಶಸ್ತಿಗೆ ಆಯ್ಕೆ ಆಗಿರುವುದಕ್ಕೆ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳು ಶುಭಾಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಮೋಹನ್ ಲಾಲ್ ಅವರಿಗೆ ಶುಭಾಶಯ ಕೋರಿದ್ದಾರೆ.

    ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಮೋಹನ್ ಲಾಲ್ ಅವರ ಸಿನಿಮೀಯ ಪ್ರಯಾಣವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತದೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ನಟ, ನಿರ್ದೇಶಕ ಮತ್ತು ನಿರ್ಮಾಪಕರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದೆ.

    ಮೋಹನ್ ಲಾಲ್ ಅವರು ಕಳೆದ 45 ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದಾರೆ. ಆರಂಭದ ಸುಮಾರು 25 ಸಿನಿಮಾಗಳಲ್ಲಿ ಮೋಹನ್ ಲಾಲ್ ವಿಲನ್ ಪಾತ್ರಗಳಲ್ಲಿಯೇ ನಟಿಸಿದರು. ಮೋಹನ್ ಲಾಲ್ ವಿಲನ್ ಆಗಿ ಜನಪ್ರಿಯರಾದ ಬಳಿಕ 1984ರಲ್ಲಿ ಮೊದಲ ಬಾರಿ ನಾಯಕನಾಗಿ ನಟಿಸಿದರು. ಆ ಸಿನಿಮಾ ಹಿಟ್ ಆಗುವ ಮೂಲಕ ಮೋಹನ್‌ ಲಾಲ್ ನಾಯಕನಾಗಿಯೇ ಮುಂದುವರೆದರು. 1980 ರಿಂದ ಈ ವರೆಗೆ ಮೋಹನ್ ಲಾಲ್ ಅವರು 400 ಸಿನಿಮಾಗಳಲ್ಲಿ ನಟಿಸಿದ್ದಾರೆ. 1986ರಲ್ಲಿ ಒಂದೇ ವರ್ಷದಲ್ಲಿ 36 ಸಿನಿಮಾಗಳಲ್ಲಿ ಮೋಹನ್ ಲಾಲ್ ನಟಿಸಿದ್ದರು.

  • ಪ್ರಧಾನಿ ಮೋದಿ ಬಯೋಪಿಕ್: ಮೋದಿ ಪಾತ್ರದಲ್ಲಿ ಮಲಯಾಳಂ ನಟ

    ಪ್ರಧಾನಿ ಮೋದಿ ಬಯೋಪಿಕ್: ಮೋದಿ ಪಾತ್ರದಲ್ಲಿ ಮಲಯಾಳಂ ನಟ

    ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಅವರ ಹುಟ್ಟುಹಬ್ಬದ ಅಂಗವಾಗಿ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಎಂಬ ನಿರ್ಮಾಣ ಸಂಸ್ಥೆ `ಮಾ ವಂದೇ’ ಚಿತ್ರ ಘೋಷಣೆ ಮಾಡಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಜೀವನ ಆಧಾರಿತ ಸಿನಿಮಾವಾಗಿದೆ. ವೀರ್ ರೆಡ್ಡಿ ಎಂ. ನಿರ್ಮಿಸಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಉನ್ನಿ ಮುಕುಂದನ್ ನರೇಂದ್ರ ಮೋದಿಯವರ (Narendra Modi) ಪಾತ್ರದಲ್ಲಿ ನಟಿಸಲಿದ್ದಾರೆ.

    ಕ್ರಾಂತಿ ಕುಮಾರ್ ಸಿ.ಎಚ್. ನಿರ್ದೇಶಿಸಲಿರುವ ಮಾ ವಂದೇ ಸಿನಿಮಾ ಎಲ್ಲಾ ವರ್ಗಗಳ ಪ್ರೇಕ್ಷಕರನ್ನು ಗುರಿಯಾಗಿ ಇಟ್ಟುಕೊಂಡು ರಚಿಸಲಾಗುವುದು. ಸಮಾಜದ ಕನಸುಗಳನ್ನು ಹೊಂದಿರುವ ಚಿಕ್ಕ ಹುಡುಗನಿಂದ ಭಾರತದ ಪ್ರಧಾನಿಯಾಗುವವರೆಗಿನ ಮೋದಿಯವರ ಪ್ರಯಾಣವನ್ನು ಚಿತ್ರದಲ್ಲಿ ಕಟ್ಟಿಕೊಡಲಾಗುವುದು. ಈ ಚಿತ್ರವು ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಮತ್ತು ಸತ್ಯ ಘಟನೆಗಳ ಆಧಾರದ ಮೇಲೆ ಚಿತ್ರ ಮೂಡಿ ಬರಲಿದೆ.ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೂಪ ದರ ನಿಗದಿ ವಿಚಾರ – ಮಧ್ಯಂತರ ಆದೇಶ ಕಾಯ್ದಿರಿಸಿದ ಹೈಕೋರ್ಟ್

    ನಿರ್ಮಾಪಕ ವೀರ್ ರೆಡ್ಡಿ ಮಾತನಾಡಿ, ಪ್ರಧಾನಿ ಮೋದಿಯವರ ಹುಟ್ಟುಹಬ್ಬದಂದು, ನಮ್ಮ ಸಿಲ್ವರ್ ಕ್ಯಾಸ್ಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಅವರ ಜೀವನ ಚರಿತ್ರೆ ‘ಮಾ ವಂದೇ’ ಅನ್ನು ಘೋಷಿಸಲು ನಮಗೆ ಅಪಾರ ಹೆಮ್ಮೆಯಾಗುತ್ತದೆ. ಈ ಚಿತ್ರವು ಮೋದಿ ಅವರ ವೈಯಕ್ತಿಕ ಮತ್ತು ರಾಜಕೀಯ ಪ್ರಯಾಣದ ಘಟನೆಗಳು ಮತ್ತು ಮೈಲಿಗಲ್ಲುಗಳನ್ನು ಅಧಿಕೃತ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಮಾ ವಂದೇ ಚಿತ್ರವನ್ನು ಎಲ್ಲಾ ಪ್ಯಾನ್-ಇಂಡಿಯಾ ಭಾಷೆಗಳಲ್ಲಿ ಹಾಗೂ ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುವುದು. ಮೋದಿ ಜಿ ಮತ್ತು ಅವರ ತಾಯಿ ಹೀರಾಬೆನ್ ನಡುವಿನ ಬಾಂಧವ್ಯವನ್ನು ಚಿತ್ರದಲ್ಲಿ ಭಾವನಾತ್ಮಕವಾಗಿ ತೋರಿಸಲಾಗುವುದು. ರಾಷ್ಟ್ರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ನಾಯಕನ ಗಮನಾರ್ಹ ಪ್ರಯಾಣವನ್ನು ನಾವು ಪ್ರೇಕ್ಷಕರಿಗೆ ತರುತ್ತಿದ್ದೇವೆ” ಎಂದು ಹೇಳಿದರು.

  • ಮಲಯಾಳಂಗೆ ದೇವರಾಜ್ ಪುತ್ರನ ‘S/O ಮುತ್ತಣ್ಣ’ ಸಿನಿಮಾ

    ಮಲಯಾಳಂಗೆ ದೇವರಾಜ್ ಪುತ್ರನ ‘S/O ಮುತ್ತಣ್ಣ’ ಸಿನಿಮಾ

    “ಸು ಫ್ರಮ್ ಸೋ” ಭರ್ಜರಿ ಯಶಸ್ಸಿನ ನಂತರ ಕನ್ನಡ ಚಿತ್ರಗಳ ಬೇಡಿಕೆ ಹೆಚ್ಚಾಗಿದೆ. ಪುರಾತನ ಫಿಲಂಸ್ ನಿರ್ಮಾಣದ ಶ್ರೀಕಾಂತ್ ಹುಣಸೂರು ನಿರ್ದೇಶನದ ಡೈನಾಮಿಕ್ ಹೀರೊ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಮ್ ದೇವರಾಜ್ ನಾಯಕನಾಗಿ ನಟಿಸಿರುವ ‘S/O ಮುತ್ತಣ್ಣ’ (S/O Muthanna) ಚಿತ್ರ ಕೂಡ ಅಪ್ಪ – ಮಗನ ಬಾಂಧವ್ಯವನ್ನು ಬಣಿಸುವ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರವಾಗಿದ್ದು, ಈ ಚಿತ್ರದ ಕಥೆಗೆ ಮಲಯಾಳಂನಲ್ಲೂ (Malayalam) ಬೇಡಿಕೆ ಹೆಚ್ಚಾಗಿದೆ. ಹಾಗಾಗಿ ಆಗಸ್ಟ್ 22 ರಂದು ಬಿಡುಗಡೆಯಾಗಬೇಕಿದ್ದ “s/o ಮುತ್ತಣ್ಣ” ಚಿತ್ರವನ್ನು ಸೆಪ್ಟೆಂಬರ್ 12 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

    ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಟ್ರೇಲರ್ ಆಗಸ್ಟ್ 22 ರಂದು ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದನ್ನೂ ಓದಿ: `ಅಪರಿಚಿತೆ’ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾದ ಸಿಂಧೂ ಲೋಕನಾಥ್

    ಪ್ರಣಾಮ್ ದೇವರಾಜ್ ಅವರಿಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರವಾಗಿದ್ದು, ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೆಂಡಿದ್ದಾರೆ. ಸುಚೇಂದ್ರ ಪ್ರಸಾದ್, ಗಿರೀಶ್ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ. ಇದನ್ನೂ ಓದಿ: ಹುಟ್ಟು ಹಬ್ಬಕ್ಕೆ ಮುಧೋಳ್ ಚಿತ್ರದ ಅಪ್ಡೇಟ್‌ ಕೊಟ್ಟ ವಿಕ್ರಂ ರವಿಚಂದ್ರನ್

  • ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    ಮಲಯಾಳಂ ನಟ ಕಲಾಭವನ್ ನವಾಸ್ ಹೋಟೆಲ್ ರೂಮ್‌ನಲ್ಲಿ ಶವವಾಗಿ ಪತ್ತೆ – ಹೃದಯಾಘಾತ ಶಂಕೆ

    – ಪೋಸ್ಟ್ ಮಾರ್ಟಂ ಬಳಿಕ ಸಾವಿಗೆ ನಿಖರ ಕಾರಣ ಬಯಲು

    ಲಯಾಳಂ ನಟ, ಮಿಮಿಕ್ರಿ ಕಲಾವಿದ ಕಲಾಭವನ್ ನವಾಸ್ (Kalabhavan Navas) (51) ಅವರು ಕೊಚ್ಚಿಯ ಚೊಟ್ಟನಿಕ್ಕಾರಾದಲ್ಲಿರುವ (Chottanikkaraa) ಹೋಟೆಲ್‌ವೊಂದರಲ್ಲಿ ಶವವಾಗಿ ಪತ್ತೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸಿನಿಮಾ ಚಿತ್ರೀಕರಣಕ್ಕಾಗಿ ಹೋಟೆಲ್‌ವೊಂದರಲ್ಲಿ ತಂಗಿದ್ದ ಅವರು ಹೃದಯಾಘಾತದಿಂದ (Heart Attack) ಕುಸಿದು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೋಟೆಲ್ ಸಿಬ್ಬಂದಿ ರೂಂಗೆ ಹೋದಾಗ ವಿಷಯ ತಿಳಿದಿದ್ದು, ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಇದನ್ನೂ ಓದಿ: ತೇಜಸ್ವಿ ಯಾದವ್ ಆರೋಪ ಸುಳ್ಳು – ಕರಡು ಮತದಾರರ ಪಟ್ಟಿಯಲ್ಲಿ ಹೆಸರಿದೆ: ಚುನಾವಣಾ ಆಯೋಗ ಸ್ಪಷ್ಟನೆ

    ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಕೂಡ ವೈದ್ಯರು ಸಾವನ್ನಪ್ಪಿರುವುದಾಗಿ ತಿಳಿಸಿದರು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಳಿಕ ಸಾವಿಗೆ ನಿಖರವಾದ ಕಾರಣವೇನು ಎನ್ನೋದು ತಿಳಿದು ಬರಲಿದೆ.

    ನವಾಸ್ ಅವರು ಮಲಯಾಳಂ ಚಿತ್ರರಂಗದಲ್ಲಿ ನಟ, ಮಿಮಿಕ್ರಿ ಕಲಾವಿದ, ಹಿನ್ನೆಲೆ ಗಾಯಕರಾಗಿ ವ್ಯಾಪಕ ಮೆಚ್ಚುಗೆ ಗಳಿಸಿದ್ದರು. ನವಾಸ್ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಸಂತಾಪ ಸೂಚಿಸಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಹೋರಾಟಕ್ಕೆ ಟಕ್ಕರ್ – ಆ.5ರಂದು ಗಾಂಧಿ ಪ್ರತಿಮೆ ಬಳಿ ಬಿಜೆಪಿಯೂ ಪ್ರತಿಭಟನೆ: ಬಿವೈವಿ

  • ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

    ಶಿರೂರು ಭೂಕುಸಿತ ದುರಂತ; ಮಲೆಯಾಳಂನಲ್ಲಿ ಸಿನಿಮಾ ಸಟ್ಟೇರಲು ಸಿದ್ಧತೆ

    – ಕೇರಳದ ಮೃತ ಅರ್ಜುನ್‌ನಿಂದ ಹಿಡಿದು 11 ಜನರ ಕುರಿತು ಮೂಡಿ ಬರಲಿದೆ ಸಿನಿಮಾ
    – ಸಿನಿಮಾದ ಕಥೆ ಬರೆಯುತ್ತಿರುವ ಕೇರಳದ ಶಾಸಕ ಅಶ್ರಫ್‌

    ಕಾರವಾರ: ಶಿರೂರು ಭೂಕುಸಿತ (Shirur Landslide) ದುರಂತ ಬಗ್ಗೆ ಮಾಲೆಯಾಳಂನಲ್ಲಿ ಸಿನಿಮಾ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಕೇರಳದ ಶಾಸಕ ಅಶ್ರಫ್‌ (A.K.M.Ashraf) ಅವರು ಸಿನಿಮಾ ಕಥೆ ಬರೆಯುತ್ತಿದ್ದಾರೆ ಎನ್ನಲಾಗಿದೆ.

    ಕಳೆದ ವರ್ಷ ಜುಲೈನಲ್ಲಿ ಅಂಕೋಲದ ಶಿರೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೂಕುಸಿತವಾಗಿ 11 ಜನ ಮೃತಪಟ್ಟರು. ಈವರೆಗೂ ಜಗನ್ನಾಥ, ಲೋಕೇಶ್ ಶವಗಳು ದೊರೆತಿಲ್ಲ. ಕೇರಳದ ಚಾಲಕ ಅರ್ಜುನ್ ಮೃತದೇಹ ಹುಡುಕಲು ಮೂರು ತಿಂಗಳಕಾಲ ಅವಿರತ ಕಾರ್ಯಾಚರಣೆ ನಡೆದು ಕೊನೆಗೆ ಆತನ ಶವವನ್ನು ಮಾತ್ರ ಹೊರತೆಗೆಯಲಾಯಿತು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ

    ಆತನು ಬದುಕಿ ಬರಲೆಂದು ಕೇರಳದ ಜನತೆ ಪ್ರಾರ್ಥನೆ ಮಾಡಿದ್ದರು. ಇದೀಗ ಶಿರೂರು ಘಟನೆ ನಡೆದು ಒಂದು ವರ್ಷವಾದ ಬೆನ್ನಲ್ಲೇ ಈ ದುರಂತ ಘಟನೆ ಕೇರಳದ ಮಲೆಯಾಳಂ ಭಾಷೆಯಲ್ಲಿ ಸಿನಿಮಾ ಸಟ್ಟೇರಲು ಸಿದ್ಧವಾಗಿದೆ.

    ಶಿರೂರು ದುರಂತ ಕಥೆಯನ್ನು ಬರೆಯುತ್ತಿರುವ ಕೇರಳದ ಶಾಸಕ ಅಶ್ರಫ್, ‘ಪಬ್ಲಿಕ್ ಟಿವಿ’ ಜೊತೆ ಸಿನಿಮಾ ನಿರ್ಮಾಣದ ಬಗ್ಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ

  • ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!

    ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!

    ಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ (Mohanlal) ಮಗಳು ವಿಸ್ಮಯಾ ಮೋಹನ್‌ಲಾಲ್ (Vismaya Mohanlal) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೋಹನ್‌ಲಾಲ್ ಪುತ್ರ ಪ್ರಣವ್ ಈಗಾಗ್ಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಪುತ್ರಿ ಚಿತ್ರರಂಗದಲ್ಲಿ ನಾಯಕಿಯಾಗಿ ಲಾಂಚ್ ಆಗುತ್ತಿದ್ದಾರೆ. ಈ ಖುಷಿ ವಿಚಾರವನ್ನ ಮೋಹನ್‌ಲಾಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಆಶೀರ್ವಾದ್ ಸಿನಿಮಾಸ್ ಬ್ಯಾನರ್‌ನಲ್ಲಿ ಜ್ಯೂಡ್ ಆ್ಯಂಟನಿ ಜೊಸೆಫ್ ನಿರ್ದೇಶನದ ಸಿನಿಮಾದ ಮೂಲಕ ಮೋಹನ್‌ಲಾಲ್ ಪುತ್ರಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡ್ತಿದ್ದಾರೆ. ಈ ಮೊದಲು ಸಹಾಯಕ ನಿರ್ದೇಶಕಿಯಾಗಿ ಕೂಡಾ ಕಾರ್ಯ ನಿರ್ವಹಿಸಿರುವ ವಿಸ್ಮಯ ಈ ಚಿತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಅಲ್ಲದೇ ಸಿನಿಮಾಗಾಗಿ 22 ಕೆಜಿ ತೂಕ ಇಳಿಸಿದ್ದಾರಂತೆ. ಇದನ್ನೂ ಓದಿ: `ರಾಮ್‌ಚರಣ್‌ಗೆ ಚಿತ್ರ ಮಾಡಿ ಕೆಟ್ಟೆ’ ಎಂದ ಪ್ರೊಡ್ಯೂಸರ್

    ಮೋಹನ್‌ಲಾಲ್ ಪುತ್ರಿ ಈ ಚಿತ್ರಕ್ಕಾಗಿ ಹಾಗೂ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುವುದಕ್ಕಾಗಿ ತೂಕ ಇಳಿಸುವುದರ ಜೊತೆಗೆ ಪೂರಕವಾದ ತರಬೇತಿಯನ್ನ ಥಾಯ್ಲೆಂಡ್‌ನಲ್ಲಿ ಪಡೆದಿದ್ದಾರೆ ಎನ್ನಲಾಗ್ತಿದೆ. ಇನ್ನು ಮೋಹನ್‌ಲಾಲ್ ಪುತ್ರ ಮೊದಲ ಸಿನಿಮಾದಲ್ಲೇ ಜನಮನ ಸೆಳೆದಿದ್ದರು. ಇದೀಗ ಪುತ್ರಿ ಕೂಡಾ ಚಿತ್ರರಂಗದಲ್ಲಿ ಯಶಸ್ವಿಯಾಗಲಿ ಅಂತಾ ಮೋಹನ್‌ಲಾಲ್ ಅಭಿಮಾನಿ ವರ್ಗ ಹಾರೈಸುತ್ತಿದೆ. ಇದನ್ನೂ ಓದಿ: ಪಿ.ಸಿ ಶೇಖರ್ ನಿರ್ದೇಶನ ಮಹಾನ್ ಚಿತ್ರದಲ್ಲಿ ಮಿತ್ರ ವಿಶೇಷ ಪಾತ್ರ

  • ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್ – ಮೋಹನ್‌ಲಾಲ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ದೃಶ್ಯಂ-3 ರಿಲೀಸ್ ಡೇಟ್ ಫಿಕ್ಸ್ – ಮೋಹನ್‌ಲಾಲ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ದೃಶ್ಯಂ ಸಿರೀಸ್ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಭರ್ಜರಿ ಹವಾ ಕ್ರಿಯೇಟ್ ಮಾಡಿವೆ. ಮಲಯಾಳಂ, ತೆಲುಗು ಹಾಗೂ ಕನ್ನಡ ಭಾಷೆಯಲ್ಲಿ ಈ ಸಿರೀಸ್ ಮಾಡಿದ ಸದ್ದು ಅಷ್ಟಿಸ್ಟಲ್ಲ. ಸಸ್ಪೆನ್ಸ್, ಕ್ರೈಂ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂತಹ ಕಥೆ ಪ್ರೇಕ್ಷಕರಿಗೆ ಹೊಸ ಅನುಭವವನ್ನ ನೀಡಿದ್ದವು.

    ಮೋಸ್ಟ್ ಅವೈಟೆಡ್ ದೃಶ್ಯಂ-3 (Drishyam 3) ಸಿನಿಮಾ ಇದೇ ಅಕ್ಟೋಬರ್‌ನಲ್ಲಿ ತೆರೆಗೆ ಬರಲು ರೆಡಿಯಾಗಿದೆ. ಈ ಬಗ್ಗೆ ಈಗಾಗಲೇ ಮೋಹನ್‌ಲಾಲ್ (Mohanlal) ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಇನ್ನು ಈ ಸಿನಿಮಾದ ಕಥೆ ಈ ಬಾರಿ ಡಿಫರೆಂಟ್ ಆಗಿ ಇರಲಿದ್ದು, ಮತ್ತೊಂದಿಷ್ಟು ಟ್ವಿಸ್ಟ್ ಅಂಡ್ ಟರ್ನ್ಸ್ ಇರಲಿದೆಯಂತೆ.

    ನಿರ್ದೇಶಕ ಜೀತು ಜೊಶೆಫ್ ಈ ಬಾರಿ ಜಾರ್ಜ್ ಕುಟ್ಟಿ ಪಾತ್ರವನ್ನ ಎಂಡ್ ಮಾಡ್ತಾರಾ..? ಅಥವಾ ಮತ್ತೊಂದು ಪಾರ್ಟ್‌ಗೆ ಈ ಸಿನಿಮಾದ ಎಂಡ್‌ನಲ್ಲಿ ಹಿಂಟ್ ಕೊಡುತ್ತಾರಾ ಅಂತಾ ಕಾಯ್ತಿದೆ ಅಭಿಮಾನಿ ಬಳಗ. ಅಲ್ಲದೇ ದೃಶ್ಯಂ ಪಾರ್ಟ್-1 ಹಾಗೂ ಪಾರ್ಟ್-2 ಸಿನಿಮಾಗಳಿಗಿಂತ ಅಕ್ಟೋಬರ್‌ನಲ್ಲಿ ತೆರೆಗೆ ಬರುವ ದೃಶ್ಯಂ-3 ಸಿನಿಮಾ ವಿಭಿನ್ನವಾಗಿರಲಿದೆಯಂತೆ.

    ದೃಶ್ಯಂ ಪಾರ್ಟ್-1 ಹಾಗೂ ಪಾರ್ಟ್-2 ಮಲಯಾಳಂನಲ್ಲಿ ಮುಖ್ಯಪಾತ್ರದಲ್ಲಿ ಮೋಹನ್‌ಲಾಲ್ ನಟನೆ ಮಾಡಿದ್ರೆ, ತೆಲುಗಿನಲ್ಲಿ ವೇಂಕಟೇಶ್ ದಗ್ಗುಬಾಟಿ ನಟಿಸಿದ್ದರು. ಇನ್ನು ಕನ್ನಡ ಅವತರಣಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆ ಮಾಡಿ ಪ್ರೇಕ್ಷಕ ವರ್ಗಕ್ಕೆ ಬರಪೂರ ಮನರಂಜನೆ ನಿಡಿದ್ದರು. ಫಸ್ಟ್ ಲುಕ್ ನೋಡಿಯೇ ಫಿದಾ ಆಗಿರುವ ಫ್ಯಾನ್ಸ್ ಸಿನಿಮಾ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

  • ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!

    ಮೂವತ್ತೇ ಸೆಕೆಂಡುಗಳಲ್ಲಿ ಕಲಾ ಲೋಕ ಸೃಷ್ಟಿಸಿದ ನಟಿ ರಿಮಾ ಕಲ್ಲಿಂಗಲ್, ಪದ್ಮಪ್ರಿಯಾ!

    ಟಿ ರಿಮಾ ಕಲ್ಲಿಂಗಲ್ (Rima Kallingal) ಹಾಗೂ ಪದ್ಮಪ್ರಿಯಾ (Padmapriya) ‘ಅಲಯ್ ಪಾಯುದೆ’ (Alaipayuthey Kanna) ಹಾಡಿಗೆ ಡ್ಯಾನ್ಸ್‌ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವೀಡಿಯೊದಲ್ಲಿ ಇಬ್ಬರೂ ಕಪ್ಪು ಬಟ್ಟೆ ತೊಟ್ಟು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.

    ʻನಾವು ಒಟ್ಟಿಗೆ ಹಾರುತ್ತೇವೆʼ ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಇನ್ಸ್ಟಾದಲ್ಲಿ ಇಬ್ಬರೂ ನಟಿಯರು ಹಂಚಿಕೊಂಡಿದ್ದಾರೆ. ಈ 30 ಸಕೆಂಡ್‌ಗಳ ವೀಡಿಯೋಗೆ ನಿರ್ದೇಶಕಿ ಅಂಜಲಿ ಮೆನನ್, ʻಸುಂದರವಾಗಿದೆʼ ಎಂದು ಕಾಮೆಂಟ್‌ ಮಾಡಿದ್ದಾರೆ. ಪಾರ್ವತಿ ತಿರುವೋತ್, ನೈಲಾ ಉಷಾ ಮತ್ತು ಇತರರು ಸೇರಿದಂತೆ ಅನೇಕ ತಾರೆಯರು ಸಹ ಈ ನೃತ್ಯಕ್ಕೆ ಮಾರುಹೋಗಿದ್ದಾರೆ.

    ಈ ನೃತ್ಯದ ಬಗ್ಗೆ ಪೋಸ್ಟ್‌ನಲ್ಲಿ ಕೆಲವು ಸಾಲುಗಳನ್ನು ಸಹ ಬರೆಯಲಾಗಿದೆ. ಎರಡು ಆತ್ಮಗಳು, ಒಂದೇ ಲಯ, ವೇದಿಕೆಯ ಹಿಂದೆ ಪಿಸುಗುಟ್ಟುವ ಬಿರುಗಾಳಿಗಳಿಂದ ಹಿಡಿದು, ಬೆಳಕಿನ ಬೆಳಕಿನಲ್ಲಿ ಸರಾಗವಾದ ಹೆಜ್ಜೆಗಳವರೆಗೆ.. ಮೌನ ಬಿರುಕು ಬಿಟ್ಟ ಮತ್ತು ಕೋಪ ಭುಗಿಲೆದ್ದ ಸ್ಥಳದಲ್ಲಿ, ಎರಡು ಹೃದಯಗಳು ಬಿರುಗಾಳಿಯ ಮೂಲಕ ನೃತ್ಯ ಮಾಡಿದವು. ವೇದಿಕೆಯ ಮೇಲೆ ಆ ಭೂತಕಾಲ ಕರಗಿತು, ಇಲ್ಲಿ ರೆಕ್ಕೆಗಳು ಮಾತ್ರ ಉಳಿದವು. ನಾವು ಹಾರಿಹೋದೆವು, ಆದರೆ ದೂರವಾಗಲಿಲ್ಲ ಎಂದು ಸಾಹಿತ್ಯಾತ್ಮಕವಾಗಿ ಬರೆಯಲಾಗಿದೆ. ಇದನ್ನೂ ಓದಿ: ಕಯಾದು ಸೌಂದರ್ಯಕ್ಕೆ ಕ್ಯೂ ನಿಂತ ಅರ್ಧ ಡಜನ್ ಸಿನಿಮಾ!

    ರಿಮಾ ಕಲ್ಲಿಂಗಲ್ ಮತ್ತು ಪದ್ಮಪ್ರಿಯಾ ಅಂಜಲಿ ಮೆನನ್ ನಿರ್ದೇಶನದ ‘ಬ್ಯಾಕ್ ಸ್ಟೇಜ್’ (Backstage) ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೇರಳದ ಹಿನ್ನೆಲೆಯಲ್ಲಿ ನಡೆಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಇಬ್ಬರೂ ನರ್ತಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಇಬ್ಬರೂ ನೃತ್ಯದ ವೀಡಿಯೊಕ್ಕಾಗಿ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    ʻಬ್ಯಾಕ್‌ಸ್ಟೇಜ್ʼಕಿರುಚಿತ್ರವು ಯುವ ಸಪ್ನೋ ಕಾ ಸಫರ್ ಸರಣಿಯ ಭಾಗವಾಗಿದೆ. ಒಟಿಟಿಯಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು, ಸದ್ಯ ಸ್ಟ್ರೀಮಿಂಗ್ ಆಗುತ್ತಿದೆ. ಇದನ್ನೂ ಓದಿ: ʻರಾಕಿ ಭಾಯ್‌ʼ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; KGF-3 ಬಗ್ಗೆ ಬಿಗ್‌ ಹಿಂಟ್‌ ಕೊಟ್ಟ ಹೊಂಬಾಳೆ ಫಿಲ್ಮ್ಸ್

  • 1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    1 ಲಕ್ಷ ಪಾವತಿಸಿ ಶೂಟಿಂಗ್‌ | ಗೋಪಾಲಸ್ವಾಮಿ ಬೆಟ್ಟದ ಜಾಗ ಯಾರಿಗೆ ಸೇರಿದ್ದು? ಈಗ ಮತ್ತೊಂದು ವಿವಾದ

    – ಸ್ಥಳ ಮುಜುರಾಯಿ ಇಲಾಖೆಗೆ ಸೇರಿದ್ದಾ? ಅರಣ್ಯ ಇಲಾಖೆಗೆ ಸೇರಿದ್ದಾ?

    ಚಾಮರಾಜನಗರ: ಬಂಡೀಪುರದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ (Himavad Gopalaswamy Betta) ನಡೆದ ಮಲಯಾಳಂ ಚಿತ್ರದ (Malayalam Film) ಶೂಟಿಂಗ್ ವಿಚಾರ ವಿವಾದ ಸ್ವರೂಪ ಪಡೆದಿದೆ. ಚಿತ್ರೀಕರಣ ನಡೆದ ಸ್ಥಳ ಮುಜುರಾಯಿ ಇಲಾಖೆಗೆ (Muzrai) ಸೇರಿದ್ದಾ ಅಥವಾ ಅರಣ್ಯ (Forest) ಇಲಾಖೆಗೆ ಸೇರಿದ್ದಾ ಎಂಬ ಪ್ರಶ್ನೆ ಎದ್ದಿದೆ.

    ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕೇರಳದ ಪೆಣ್ಣು ಕೇಸ್ (Pennu Case) ಸಿನಿಮಾ ಚಿತ್ರೀಕರಣ ನಡೆದಿತ್ತು. ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಹೇಗೆ?- ಬಂಡೀಪುರದ ಎಸಿಎಫ್ ಸ್ಪಷ್ಟನೆ

    ಶೂಟಿಂಗ್‌ಗೆ ಅವಕಾಶ ಕೊಡುವ ವೇಳೆ ಸರ್ಕಾರದ ಅಧೀನ ಕಾರ್ಯದರ್ಶಿಯವರು ಅರಣ್ಯ ಪರಿಸ್ಥಿತಿ ಮತ್ತು ಜೀವಿಶಾಸ್ತ್ರ ಇಲಾಖೆಯ ಪತ್ರದ ಸೂಚನೆ ಮೇರೆಗೆ ನಿಷೇಧಿತ ಪ್ರದೇಶ ಹೊರತುಪಡಿಸಿ ಜೊತೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ವನ್ಯ ಪ್ರಾಣಿಗಳಿಗೆ ಧಕ್ಕೆಯಾಗದಂತೆ ವಲಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಷರತ್ತಿಗೆ ಒಳಪಟ್ಟು ಚಿತ್ರೀಕರಿಸುವಂತೆ ಅನುಮತಿ ಕೊಟ್ಟಿದ್ದಾರೆ. ಅಲ್ಲದೇ ಚಿತ್ರೀಕರಣ ತಂಡದ ಬಳಿ ಒಂದು ಲಕ್ಷ ರೂ. ಶುಲ್ಕವನ್ನು ಸಹ ಕಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ – ಸರ್ಕಾರದ ವಿರುದ್ಧ ಸ್ಥಳೀಯರ ಆಕ್ರೋಶ

    ಅರಣ್ಯಾಧಿಕಾರಿಗಳ ಸಾರ್ವಜನಿಕ ಪ್ರಕಟಣೆ ಅನ್ವಯ ಶೂಟಿಂಗ್ ನಡೆದಿದ್ದು ನಿಷೇಧಿತ ಪ್ರದೇಶ ಅಲ್ಲದಿದ್ದರೆ ಅದು ಮುಜರಾಯಿ ಇಲಾಖೆಯ ಸ್ಥಳವೇ ಎಂಬ ಅನುಮಾನ ಹುಟ್ಟಿಸಿದೆ. ಈ ಬಗ್ಗೆ ಗುಂಡ್ಲುಪೇಟೆ ತಹಶೀಲ್ದಾರ್ ರಮೇಶ್ ಬಾಬು ಅವರನ್ನು ಕೇಳಿದ್ರೆ ಮುಜರಾಯಿ ಇಲಾಖೆಯಿಂದ ಯಾವುದೇ ಅನುಮತಿ ಕೊಟ್ಟಿಲ್ಲ. ಯಾರೂ ಕೂಡ ನಮ್ಮ ಅನುಮತಿಯನ್ನು ಕೇಳಿಲ್ಲ. ಸದ್ಯ ನಮ್ಮನ್ನು ಎಳೆದು ತರುವ ಪ್ರಯತ್ನವಾಗುತ್ತಿದೆ ಎಂದಿದ್ದಾರೆ.

    ಒಟ್ಟಿನಲ್ಲಿ ಅರಣ್ಯ ಇಲಾಖೆ ಯಾರದೋ ಮಾತಿಗೆ ಕಟ್ಟು ಬಿದ್ದು ಅನುಮತಿ ನೀಡಿ ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ನಾವು ನಿಷೇಧಿತ ಪ್ರದೇಶದಲ್ಲಿ ಶೂಟಿಂಗ್ ನಡೆಸಲು ಅನುಮತಿ ಕೊಟ್ಟಿಲ್ಲ ಎಂಬ ಸಮರ್ಥನೆ ಬೇರೆ ಮಾಡಿಕೊಳ್ಳುತ್ತಿದೆ. ಶೂಟಿಂಗ್ ನಡೆದ ಸ್ಥಳ ನಿಷೇಧಿತ ಸ್ಥಳ ಅಲ್ಲವಾದರೆ ಆ ಜಾಗ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ್ದಾ ಅಥವಾ ಅರಣ್ಯ ಇಲಾಖೆಗೆ ಸೇರಿದ್ದ ಜಾಗ ಎಂಬ ಹೊಸ ಚರ್ಚೆ ಹುಟ್ಟುಹಾಕಿದೆ.

     

  • ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲೈಂಗಿಕ ಕಿರುಕುಳ ಆರೋಪ: ನಟ, ರಾಜಕಾರಣಿ ಮುಕೇಶ್ ಬಂಧನ

    ಲಯಾಳಂ (Malayalam) ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿರೋ ಜಸ್ಟಿಸ್ ಹೇಮಾ ವರದಿ ಒಬ್ಬೊಬ್ಬರ ತಲೆದಂಡಕ್ಕೆ  ಕಾರಣವಾಗಿತ್ತು. ಈಗ ಮತ್ತೊಂದು ಹಂತ ತಲುಪಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿದೆ (Arrest). ಖ್ಯಾತ ನಟ ಹಾಗೂ ರಾಜಕಾರಣಿ ಮುಕೇಶ್ (Mukesh) ಅವರನ್ನು ಬಂಧಿಸಲಾಗಿದೆ.

    ಕೊಚ್ಚಿಯ ಕೋಸ್ಟಲ್ ಪೊಲೀಸ್ ಆಫೀಸಿನಲ್ಲಿ ಮುಕೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಎಐಜಿ ಪೂಂಗಾಝಾಲಿ ನೇತೃತ್ವದಲ್ಲಿ ನಡೆದ ವಿಚಾರಣೆಯ ನಂತರ ಮುಕೇಶ್ ಬಂಧನವಾಗಿದೆ.

    ಲೈಂಗಿಕ ದೌರ್ಜನ್ಯ (Sexual Harassment) ಪ್ರಕರಣದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರೋ ಮುಕೇಶ್ ಅವರ ಬಂಧನ ಹಲವು ಚರ್ಚೆಗೆ ಕಾರಣವಾಗಿದೆ. ಬಂಧಿಸಿ ನಂತರ ಬಿಡುಗಡೆ ಮಾಡುವ ಮಾಹಿತಿಯೂ ಇದೆ.  ಒಟ್ಟಿನಲ್ಲಿ ಮುಕೇಶ್ ಬಂಧನ ಇತರರಲ್ಲಿ ಆತಂಕ ಸೃಷ್ಟಿ ಮಾಡಿದೆ.