Tag: Malavika

  • ಲೀಲಾವತಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟ, ನಟಿಯರು

    ಲೀಲಾವತಿ ಅಂತಿಮ ದರ್ಶನ ಪಡೆದ ಸ್ಯಾಂಡಲ್‌ವುಡ್‌ ನಟ, ನಟಿಯರು

    ಲೀಲಾವತಿ (Leelavathi) ಅವರ ನಿಧನಕ್ಕೆ ಸ್ಯಾಂಡಲ್‌ವುಡ್ ನಟ, ನಟಿಯರು ಕಂಬನಿ ಮಿಡಿದಿದ್ದಾರೆ. ನಟಿ ತಾರಾ (Tara), ಸುಧಾರಾಣಿ, ಶ್ರುತಿ (Shruthi), ಮಾಳವಿಕಾ, ಭವ್ಯ (Bhavya) ಅವರು ಲೀಲಾವತಿ ಅಂತಿಮ ದರ್ಶನ ಪಡೆದಿದ್ದಾರೆ. ಲೀಲಾವತಿ ಜೊತೆಗಿನ ಬಾಂಧವ್ಯದ ಬಗ್ಗೆ ನಟಿಯರು ಮಾತನಾಡಿದ್ದಾರೆ. ಇದನ್ನೂ ಓದಿ:ಬೆಂಗಳೂರಿನಿಂದ ಹೊರಟ ಲೀಲಾವತಿ ಪಾರ್ಥೀವ ಶರೀರ

    ಲೀಲಾವತಿಯವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ನಾನು ಹೆಚ್ಚು ಒಡನಾಟ ಇಲ್ಲ. ಅವರ ಜೊತೆ ಹೆಚ್ಚು ಆಕ್ಟ್ ಮಾಡೋದಕ್ಕೆ ನನಗೆ ಸನ್ನಿವೇಶ ಇರಲಿಲ್ಲ. ಆದರೆ ವಿನೋದ್ ರಾಜ್ ಜೊತೆ ನಾನು ಆಕ್ಟ್ ಮಾಡಿದ್ದೇನೆ ಎಂದು ತಾರಾ ಮಾತನಾಡಿದ್ದಾರೆ. ವಿನೋದ್ ರಾಜ್ ಮಾತ್ರ ತಾಯಿ ಬಿಟ್ಟು ಬಂದಿರೋದನ್ನು ಎಲ್ಲೂ ನೋಡಿಲ್ಲ. ಹೀಗಾಗಿ ಅವರ ಬಗ್ಗೆ ನನಗೆ ನೋವು ಆಗುತ್ತಿದೆ. ಲೀಲಾವತಿ ಅವರು ಆದರ್ಶ ಜೀವನ ನಡೆಸಿದ್ದಾರೆ. ಅವರ ಕುಟುಂಬಕ್ಕೆ ಮುಖ್ಯವಾಗಿ ವಿನೋದ್ ರಾಜ್‌ಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಾರಾ (Tara) ಮಾತನಾಡಿದ್ದಾರೆ.

    ನಾನು ನಟಿಸಿದ ಮೊದಲ ಚಿತ್ರದಲ್ಲೇ ಲೀಲಾವತಿ ಅವರ ಜೊತೆ ನಟಿಸುವ ಚಾನ್ಸ್ ಸಿಕ್ಕಿತ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಅವರನ್ನ ಭೇಟಿಯಾಗಿದ್ದೆ, ಇದೀಗ ನಾನು ನಟಿಸುತ್ತಿರೋ ಧಾರಾವಾಹಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನನಗೆ ವೈಯಕ್ತಿಕವಾಗಿ ಲೀಲಾವತಿ ಅವರು ರೋಲ್ ಮಾಡೆಲ್ ಆಗಿದ್ದರು. ನಟಿ, ತಾಯಿಯಾಗಿ ಮಾತ್ರವಲ್ಲ ಪರಿಸರ ಪ್ರೇಮಿಯಾಗಿ, ಸಮಾಜಮುಖಿ ಕಾರ್ಯಗಳ ಮೂಲಕ ಲೀಲಾವತಿ ಆದರ್ಶ ವ್ಯಕ್ತಿಯಾಗಿದ್ದರು. ಲೀಲಾವತಿ ನಿಧನದಿಂದ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ನಷ್ಟ ಆಗಿದೆ ಎಂದು ಸುಧಾರಾಣಿ (Sudharani) ಮಾತನಾಡಿದ್ದಾರೆ.

    ಅಭಿನಯ, ಹಲವು ದಶಕಗಳ ಪಯಣ ಎಲ್ಲವೂ ನಮಗೆ ಪ್ರೇರಣೆ. ಕಲಾವಿದೆಯಾಗಿ ಅವರಿಗೆ ಅವರೇ ಸಾಟಿ ಎಂದು ಲೀಲಾವತಿ ಅವರನ್ನ ಬಣ್ಣಿಸಿದ್ದಾರೆ ನಟಿ ಮಾಳವಿಕಾ. ಹಿರಿಯ ಕಲಾವಿದೆಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಸಾರ್ಥಕ ಬದುಕನ್ನು ಲೀಲಾವತಿ ಅಮ್ಮ ಕಟ್ಟಿಕೊಂಡಿದ್ದಾರೆ. ಎಲ್ಲರಿಗೂ ಕಷ್ಟ ಬರುತ್ತೆ, ಆದರೆ ತುಂಬಾ ಧೈರ್ಯದಿಂದ ದಿಟ್ಟ ಮಹಿಳೆಯಾಗಿ ನಿಭಾಯಿಸಿದ್ದಾರೆ. ಅಮ್ಮ ಸಿಂಗಲ್ ಪೇರೆಂಟ್ ಆಗಿ ಒಳ್ಳೆಯ ವ್ಯಕ್ತಿಯನ್ನಾಗಿ ಮಗನನ್ನು ಬೆಳೆಸಿದ್ದರು. ಭಗವಂತ ಕೊಟ್ಟ ಆಯಸ್ಸಿನಲ್ಲಿ ಆದರ್ಶವಾಗಿ ಬೆಳೆದಿದ್ದರು. ನಮ್ಮಂತಹ ಅನೇಕ ಕಲಾವಿದರಿಗೆ ಆದರ್ಶರಾಗಿದ್ದಾರೆ. ಅಮ್ಮ, ಮಗ ಬೆಳೆದ ರೀತಿ ಆಶ್ಚರ್ಯ ಆಗುತ್ತಿದೆ. ತಾಯಿಯನ್ನು ಕಳೆದುಕೊಂಡು ವಿನೋದ್ ರಾಜ್ ಹೇಗಿರ್ತಾರೋ ಅನಿಸುತ್ತಿದೆ. ಎಲ್ಲರ ಆಶೀರ್ವಾದದಿಂದ ವಿನೋದ್ ರಾಜ್ ಚೆನ್ನಾಗಿರಲಿ ಎಂದು ನಟಿ ಶ್ರುತಿ (Shruthi) ಮಾತನಾಡಿದ್ದಾರೆ.

    ಚಿತ್ರರಂಗದಲ್ಲಿ ಲೀಲಾವತಿ ಅಮ್ಮನ ಸಾಧನೆ ಅಪಾರವಾದದ್ದು, ಪ್ರೀತಿಯ ಅಮ್ಮ ನಮ್ಮನ್ನೆಲ್ಲ ಅಗಲಿದ್ದಾರೆ. ಲೀಲಾವತಿ ಅವರ ತಾಳ್ಮೆಯ ಮೂರ್ತಿಯಾಗಿದ್ದರು. ನಿಸರ್ಗಕ್ಕೆ ಹತ್ತಿರವಾಗಿ ಜೀವನ ಮಾಡುತ್ತಿದ್ದರು. ವಿನೋದ್, ಲೀಲಾವತಿ ಬಾಂಧವ್ಯ ಅಪರೂಪದ್ದು ಎಂದು ಹಿರಿಯ ನಟಿ ಭವ್ಯ ಹೇಳಿದ್ದಾರೆ. ‘ಹೊಸಬಾಳು’ ಸಿನಿಮಾದಲ್ಲಿ ಲೀಲಾವತಿ ಜೊತೆ ತೆರೆಹಂಚಿಕೊಂಡಿದ್ದರ ಬಗ್ಗೆ ಭವ್ಯ ಸ್ಮರಿಸಿದ್ದಾರೆ.

    ದಶಕಗಳ ಕಾಲ ಕನ್ನಡ ಸಿನಿಮಾದಲ್ಲಿ ನಟಿಸಿ ಕೋಟಿ ಕೋಟಿ ಅಭಿಮಾನಿಗಳಲ್ಲಿ ಚಿರಸ್ಥಾಯಿಯಾಗಿ ನಿಂತಿದ್ದಾರೆ. ಲೀಲಕ್ಕ ಮಾತೃ ಸ್ಥಾನದಲ್ಲಿದ್ದಾರೆ. ಕನ್ನಡ ಚಿತ್ರರಂಗ ಪ್ರಖ್ಯಾತಿ ಹೊಂದಲು ಅವರ ಕೊಡುಗೆ ಅಪಾರ. ನಮ್ಮ ಕುಟುಂಬದಲ್ಲಿ ಹಿರಿಯರನ್ನ ಕಳೆದುಕೊಳ್ಳುತ್ತಲೇ ಇದ್ದೇವೆ. ಅದಕ್ಕಿಂತಲೂ ಹೆಚ್ಚಾಗಿ ತಾಯಿಗೆ ಮಗ – ಮಗನಿಗೆ ತಾಯಿ ಹೀಗೆ ಅವರಿಬ್ಬರ ಬಾಂಧವ್ಯ ಬಹಳ ವಿಶೇಷ. ಕಷ್ಟಕೋಟಲೆಗಳ ಮಧ್ಯೆ ದೃತಿಗೆಡದೆ ಎದ್ದು ನಿಂತ ಮಹಿಳೆ. ಬಡವರಿಗೆ ಸಹಾಯ ಮಾಡುತ್ತಿದ್ದರು. ಕೃಷಿಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಹೀಗೆ ಸಾರ್ಥಕ ಜೀವನ ನಡೆಸಿದ್ದಾರೆ. ಅವರ ಮಗನಿಗೆ ದುಃಖ ಬರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಹಿರಿಯ ನಟ ರಮೇಶ್‌ ಭಟ್‌ ಕಂಬನಿ ಮಿಡಿದಿದ್ದಾರೆ.

    ಅವರ ಜೊತೆಗೆ ಕಾಲ ಕಳೆಯುವ ಅದ್ಭುತ ಅವಕಾಶ ಸಿಕ್ಕಿತು. ಅವರು ಕೊಟ್ಟ ಊಟ ಮಾಡಿದ್ದೆ. ನಾನು ಸಹ ನಿರ್ದೇಶಕನಿದ್ದಾಗಿನಿಂದಲೂ ಲೀಲಾವತಿ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಅವರ ಸಂಸ್ಥೆಯ 2 ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ವಿನೋದ್‌ ರಾಜ್‌ ಅವರ 4 ಚಿತ್ರಗಳಿಗೆ ನಿರ್ದೇಶನ ಮಾಡಿದ್ದೇನೆ. ನಮ್ಮ ಒಡನಾಟ ಹೇಳಿಕೊಳ್ಳಲಾಗದು. ಬಹಳ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ. ನನ್ನ ತಾಯಿ ಕಳೆದುಕೊಂಡಷ್ಟೇ ದುಃಖವಾಗುತ್ತಿದೆ. ಇನ್ನೂ ವಿಶೇಷವಾಗಿ ನಮಗೆ ಕಾಣುವುದು ತಾಯಿ-ಮಗನ ಬಾಂಧವ್ಯ. ಮಗನನ್ನು ಬೆಳೆಸಿದ ರೀತಿ, ಕಲಿಸಿದ ಸಂಸ್ಕೃತಿಯಲ್ಲಿ ತಾಯಿ ಮಾರ್ಗದರ್ಶಕರಾದರೆ, ಕೆಲವೊಂದು ಸಂದರ್ಭದಲ್ಲಿ ಮಗನೇ ತಾಯಿಗೇ ಗುರುವಾಗಿದ್ದರು. ವಿನೋದ್‌ ರಾಜ್‌ ಅವರಂತಹ ಮಗನಿಗೆ ಜನ್ಮ ಕೊಡದೇ ಇದ್ದಿದ್ದರೆ 30 ವರ್ಷಗಳ ಮುಂಚೆಯೇ ನಮ್ಮನ್ನು ಬಿಟ್ಟು ಹೋಗಿಬಿಡುತ್ತಿದ್ದರು. ಏಕೆಂದರೆ ವಿನೋದ್‌ ತಾಯಿಗೆ ಆಕ್ಸಿಜನ್‌ ಆಗಿದ್ದರು. ಒಬ್ಬರಿಗೊಬ್ಬರು ಗುರುವಾಗಿ ಬದುಕಿದ್ದಾರೆ. ಈಗ ತಾಯಿ ಇಲ್ಲದ ಪ್ರಪಂಚವನ್ನು ವಿನೋದ್‌ ರಾಜ್‌ ಹೇಗೆ ನೋಡುತ್ತಾರೆ ಅನ್ನೋದು ಚಿಂತೆಯಾಗಿದೆ ಎಂದು ಎಸ್‌. ನಾರಾಯಣ್‌ ಭಾವುಕ ನುಡಿಗಳನ್ನಾಡಿದ್ದಾರೆ.

    ನಟಿ ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ (ಡಿ.8) ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಡಿಸೆಂಬರ್ 8ರಂದು ಮಧ್ಯಾಹ್ನ ದಿಢೀರ್ ಅಂತ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಲೀಲಾವತಿ ಇಹಲೋಕ ತ್ಯಜಿಸಿದ್ದರು.

  • ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಿಂದ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿಯಿಂದ ರಾಮ ಮಂದಿರಕ್ಕೆ ನಿಧಿ ಸಮರ್ಪಣೆ

    ಬೆಂಗಳೂರು: ಭಾರತದ ಖ್ಯಾತ ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್ ಮತ್ತು ಸುನಿಲ್ ಜೋಶಿ ಅವರು ರಾಮ ಮಂದಿರ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ನೀಡಿ ನಿಧಿ ಅರ್ಪಣೆ ಮಾಡಿದ್ದಾರೆ.

     

    ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಅಭಿಯಾನ ದೇಶದ್ಯಾಂತ ನಡೆಯುತ್ತಿದೆ. ಹೀಗಾಗಿ ಖ್ಯಾತ ನಟಿ ಮತ್ತು ವಕೀಲರಾದ ಮಾಳವಿಕಾ ಅವಿನಾಶ್ ಅವರು ಭಾರತ ಮಾಜಿ ಆಟಗಾರರಾದ ವೆಂಕಟೇಶ್ ಪ್ರಸಾದ್, ಸುನಿಲ್ ಜೋಶಿ, ವಿಜಯ್ ಭಾರದ್ವಾಜ್ ಹಾಗೂ ರಣಜಿ ಆಟಗಾರ ಅಖಿಲ್ ಅವರನ್ನು ಭೇಟಿಯಾಗಿ ನಿಧಿ ಸಂಗ್ರಹಿಸಿದರು.

    ನಿಧಿ ನೀಡಿದ ಬಳಿಕ ಮಾತನಾಡಿದ ವೆಂಕಟೇಶ್ ಪ್ರಸಾದ್, ತುಂಬಾ ಖುಷಿಯಾಗುತ್ತಿದೆ ನಾನು ಈ ಅಭಿಯಾನಕ್ಕೆ ಕೈ ಜೋಡಿಸುತ್ತೇನೆ, ರಾಮ ಮಂದಿರದ ನಿರ್ಮಾಣ ದೇಶದ ನಿರ್ಮಾಣ ಎನ್ನುವ ಮೂಲಕ ಸಂತಸ ಹಂಚಿಕೊಂಡರು.

     

    ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ನಿಧಿ ಸಂಗ್ರಹಿಸಲಾಗುತ್ತಿದೆ. ಹಲವು ಸ್ಟಾರ್ ನಟ-ನಟಿಯರು ಮತ್ತು ಸೆಲೆಬ್ರಿಟಿಗಳು ರಾಮ ಮಂದಿರಕ್ಕೆ ನಿಧಿ ಅರ್ಪಣೆ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ನಕ್ಷೆ ಈಗಾಗಲೇ ನಿರ್ಮಾಣವಾಗಿದ್ದ, ವಿಶ್ವದ ಮೂರನೇ ಅತೀ ದೊಡ್ಡ ಹಿಂದೂ ದೇಗುಲವಾಗಿ ಗುರುತಿಸಿಕೊಳ್ಳಲಿದೆ.

     

  • ಆರ್ ಆರ್ ನಗರದಲ್ಲಿ ಸುಗಮ ಮತದಾನ -ವೋಟ್ ಮಾಡಲು ಬಂದು ಎಡವಿ ಬಿದ್ದ ನಟಿ ಮಾಳವಿಕಾ

    ಆರ್ ಆರ್ ನಗರದಲ್ಲಿ ಸುಗಮ ಮತದಾನ -ವೋಟ್ ಮಾಡಲು ಬಂದು ಎಡವಿ ಬಿದ್ದ ನಟಿ ಮಾಳವಿಕಾ

    ಬೆಂಗಳೂರು: ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಈ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ರಾಜರಾಜೇಶ್ವರಿನಗರದಲ್ಲಿ ಇಂದು ಮತದಾನ ನಡೆಯುತ್ತಿದೆ.

    ಸದ್ಯಕ್ಕೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸುಗಮ ಮತದಾನ ನಡೆಯುತ್ತಿದೆ. 11 ಗಂಟೆ ಹೊತ್ತಿಗೆ ಶೇಕಡಾ 10ಕ್ಕೂ ಹೆಚ್ಚು ಮತದಾನ ಆಗಿದೆ. ಆದರೆ ಮೌಂಟ್ ಕಾರ್ಮೆಲ್ ಸ್ಕೂಲ್ ಮತಗಟ್ಟೆಯಲ್ಲಿ ಮತ ಹಾಕಲು ನಟಿ ಮಾಳವಿಕಾ ಅವಿನಾಶ್ ಮತ್ತು ನಟ ಅವಿನಾಶ್ ಬಂದಿದ್ದರು. ಈ ವೇಳೆ ಮತಗಟ್ಟೆಗೆ ಹೋಗಲು ಮೆಟ್ಟಿಲು ಹತ್ತುವಾಗ ಮಾಳವಿಕಾ ಎಡವಿ ಬಿದ್ದಿದ್ದಾರೆ. ನಂತರ ಮಾಳವಿಕಾ ಅವಿನಾಶ್ ಮೇಲೆ ಎದ್ದು, ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ.

    ಮತ ಚಲಾಯಿಸಿ ಮಾಧ್ಯಮರೊಂದಿಗೆ ಮಾತನಾಡಿದ ಮಾಳವಿಕಾ ಅವಿನಾಶ್ ದಂಪತಿ, ವೋಟ್ ಬೂತ್ ಗೆ ಎಂಟ್ರಿ ಆದಾಗ, ನಮಗೆ ಆ ಶಕ್ತಿ ಇದೆ ಅಂತ ಅಹಂಕಾರ ಬರುತ್ತದೆ. ಅದು ನಮ್ಮ ಕರ್ತವ್ಯ. ಅದು ನಮ್ಮ ಜವಬ್ದಾರಿ. ಆದಷ್ಟು ಬೇಗ ಬಂದು ವೋಟ್ ಮಾಡಿ ಎಂದು ನಾಗರಿಕರಲ್ಲಿ ಮನವಿ ಮಾಡಿದರು.

    ಕ್ಷೇತ್ರವನ್ನು ಗೆದ್ದು ವಿಧಾನಸಭಾ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಹಪಹಪಿಸುತ್ತಿದ್ರೆ, ಮತ್ತೊಂದು ಕಡೆ ಮೈತ್ರಿಕೂಟದ ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರತ್ಯೇಕವಾಗಿ ಕಣಕ್ಕಿಳಿದಿವೆ. ಇಂದು ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮತದಾನ ನಡೆಯಲಿದೆ. ಆರ್ ಆರ್ ನಗರದಲ್ಲಿ 4 ಲಕ್ಷದ 71 ಸಾವಿರದ 459 ಮತದಾರರಿದ್ದು, ಒಟ್ಟು 421 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

    ಬಿಜೆಪಿ ಪರ ಮುನಿರಾಜು ಕಣಕ್ಕೆ ಇಳಿದಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕೆ ಇಳಿದಿದ್ದಾರೆ. ಇನ್ನು ಜೆಡಿಎಸ್‍ನಿಂದ ನಟಿ ಅಮೂಲ್ಯ ಮಾವ ಜಿ.ಎಚ್.ರಾಮಚಂದ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ನಡುವೆ ಬಿಜೆಪಿ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಆರ್.ಆರ್.ನಗರದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರದ ಚುನಾವಣೆಯನ್ನು ಇಂದಿಗೆ ಮುಂದೂಡಲಾಗಿತ್ತು.