Tag: malathi sudhir

  • ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ- ತರುಣ್ ಮದುವೆ ಬಗ್ಗೆ ಮಾಲತಿ ಸುಧೀರ್ ಪ್ರತಿಕ್ರಿಯೆ

    ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ- ತರುಣ್ ಮದುವೆ ಬಗ್ಗೆ ಮಾಲತಿ ಸುಧೀರ್ ಪ್ರತಿಕ್ರಿಯೆ

    ರಾಬರ್ಟ್, ಕಾಟೇರ, ಸಿನಿಮಾಗಳ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಾಲ್ (Sonal) ಮದುವೆ ಆಗ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡಿತ್ತು. ಆದರೆ ಸ್ಪಷ್ಟನೆ ಸಿಕ್ಕಿರಲಿಲ್ಲ. ಇದೀಗ ತರುಣ್, ಸೋನಾಲ್ ಮದುವೆ (Wedding) ವಿಷ್ಯ ನಿಜನಾ? ಎಂದು ತಾಯಿ ಮಾಲತಿ ಸುಧೀರ್ ಕ್ಲ್ಯಾರಿಟಿ ನೀಡಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಚಂದನ್ ಶೆಟ್ಟಿ ನಟನೆಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಪ್ರೀಮಿಯರ್ ಶೋ

    ತರುಣ್ ಸುಧೀರ್ ಶೀಘ್ರದಲ್ಲೇ ಮದುವೆಯಾಗುತ್ತಿದ್ದಾರೆ. ನಟಿ ಸೋನಾಲ್ ಜೊತೆ ತರುಣ್ ಕಲ್ಯಾಣ ನಡೆಯುತ್ತಿದೆ. ಖುಷಿ ಸುದ್ದಿ ಸದ್ಯದಲ್ಲೇ ಕೊಡ್ತೀವಿ ಎಂದು ಮಾಲತಿ ಸುಧೀರ್ ‘ಪಬ್ಲಿಕ್ ಟಿವಿ’ ಜೊತೆ ಹಂಚಿಕೊಂಡಿದ್ದಾರೆ. ಮಗನ ಮದುವೆ ದಿನಾಂಕ ಫಿಕ್ಸ್ ಆಗಿಲ್ಲ. ಆಷಾಢ ಮಾಸ ಅಲ್ವಾ? ಕನ್ಫರ್ಮ್ ಆದ್ಮೇಲೆ ಹೇಳ್ತೀವಿ ಎಂದಿದ್ದಾರೆ. ಮದುವೆ ಛತ್ರಗಳು ಅಷ್ಟು ಬೇಗ ಸಿಕ್ತಿಲ್ಲ. ಮಗನ ಕೈಲಿ ಸದ್ಯ ಜಾಸ್ತಿ ಪ್ರಾಜೆಕ್ಟ್ ಇದೆ. ಅದೆಲ್ಲಾ ನೋಡ್ಕೊಂಡು ಮದುವೆ ಮಾಡಿಕೊಳ್ತಾರೆ ಎಂದು ಮಾತನಾಡಿದ್ದಾರೆ.

    ನಾನೇ ಸರಿಯಾಗಿ ಇನ್ನೂ ಆ ಹುಡ್ಗಿನಾ ನೋಡಿಲ್ಲ. ಮನೆಯವರೆಲ್ಲಾ ಕೂತು ಮಾತಾಡಬೇಕು. ಛತ್ರ ಬುಕ್ ಆದ್ಮೇಲೆ ನಾವೇ ಮಾತಾಡ್ತೀವಿ ಎಂದು ತರುಣ್ ಮತ್ತು ಸೋನಾಲ್ ಮದುವೆ ಸುದ್ದಿಯನ್ನು ಅಧಿಕೃತವಾಗಿ ಖಾತ್ರಿ ಮಾಡಿದ್ದಾರೆ ಮಾಲತಿ ಸುಧೀರ್. ಇದನ್ನೂ ಓದಿ:ಪ್ರಜ್ವಲ್ ದೇವರಾಜ್‌ ನಟನೆಯ ಹುಟ್ಟುಹಬ್ಬಕ್ಕೆ ‘ಕರಾವಳಿ’ಯಿಂದ ಸಿಕ್ತು ಭರ್ಜರಿ ಗಿಫ್ಟ್

    ಅಂದಹಾಗೆ, ಚೌಕ, ರಾಬರ್ಟ್, ಕಾಟೇರ ಸಿನಿಮಾದ ಸಕ್ಸಸ್ ನಂತರ ತರುಣ್ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. ಇದರ ನಡುವೆ ತರುಣ್ ಶೋವೊಂದರ ಜಡ್ಜ್ ಆಗಿದ್ದಾರೆ. ಎಂಎಲ್‌ಎ, ಮದುವೆ ದಿಬ್ಬಣ, ರಾಬರ್ಟ್, ಗರಡಿ, ಶುಗರ್ ಫ್ಯಾಕ್ಟರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸೋನಾಲ್ ನಟಿಸಿದ್ದಾರೆ.

  • ನನ್ನ ಮಗ ಖಂಡಿತಾ ಹೊರ ಬರುತ್ತಾನೆ- ಕಣ್ಣೀರಿಟ್ಟ ‘ಕಾಟೇರ’ ನಿರ್ದೇಶಕನ ತಾಯಿ

    ನನ್ನ ಮಗ ಖಂಡಿತಾ ಹೊರ ಬರುತ್ತಾನೆ- ಕಣ್ಣೀರಿಟ್ಟ ‘ಕಾಟೇರ’ ನಿರ್ದೇಶಕನ ತಾಯಿ

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣವಾಗಿ ಕನ್ನಡದ ಖ್ಯಾತ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಕುಟುಂಬದ ಆಪ್ತರಾದ ಖ್ಯಾತ ನಟ ಸುಧೀರ್ ಪತ್ನಿ ಮಾಲತಿ (Malathi Sudhir) ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ ಎಂದು ಮಾಲತಿ ಸುಧೀರ್ ಕಣ್ಣೀರಿಟ್ಟಿದ್ದಾರೆ.


    ದರ್ಶನ್ (Darshan) ಸದ್ಯದ ಸ್ಥಿತಿ ನೆನೆದು ಮಾಲತಿ ಕಣ್ಣೀರು ಹಾಕಿದ್ದಾರೆ. ನನ್ನ ಮಗ ಖಂಡಿತ ಹೊರ ಬರುತ್ತಾನೆ. ಆ ರಾಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದುಃಖ ಇರುವಾಗ ಮೌನ ಇರುತ್ತದೆ. ನೋವಿರುವಾಗಲೂ ಮೌನ ಇರುತ್ತದೆ. ಮಗ ತರುಣ್ ಜೊತೆಯೂ ದರ್ಶನ್ ಪ್ರಕರಣದ ಕುರಿತು ನಾನೇನು ಕೇಳಲಿಲ್ಲ ಎಂದು ಮಾಲತಿ ಸುಧೀರ್ ಮಾತನಾಡಿದ್ದಾರೆ.

    ಅಂದಹಾಗೆ, ದರ್ಶನ್‌ರನ್ನ ಬಾಲ್ಯದಿಂದಲೂ ಖಳನಟ ಸುಧೀರ್ ಪತ್ನಿ ಮಾಲತಿ ನೋಡಿಕೊಂಡು ಬಂದಿದ್ದಾರೆ. ಪುತ್ರ ತರುಣ್ (Director Tharun Sudhir) ಮತ್ತು ದರ್ಶನ್ ಸ್ನೇಹಿತರು. ದರ್ಶನ್ ನಟನೆಯ ರಾಬರ್ಟ್, ಕಾಟೇರ (Kaatera) ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.