Tag: Malakareddy

  • ರಾಹುಲ್ ಗಾಂಧಿ ಅಪ್ರಬುದ್ಧ, ಪ್ರಿಯಾಂಕ್ ಖರ್ಗೆಗೆ ಬುದ್ಧಿಯಿಲ್ಲ: ಮಾಲೀಕಯ್ಯ ಗುತ್ತೇದಾರ್

    ರಾಹುಲ್ ಗಾಂಧಿ ಅಪ್ರಬುದ್ಧ, ಪ್ರಿಯಾಂಕ್ ಖರ್ಗೆಗೆ ಬುದ್ಧಿಯಿಲ್ಲ: ಮಾಲೀಕಯ್ಯ ಗುತ್ತೇದಾರ್

    ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಬುದ್ಧ. ಹೀಗಾಗಿ ಅವರು ಪ್ರಧಾನಿ ಅಭ್ಯರ್ಥಿಯಾಗಲು ಯೋಗ್ಯರಿಲ್ಲ. ಹಾಗೆಯೇ ಕಾಂಗ್ರೆಸ್ಸಿನ ಸಿಸ್ಟಮ್‍ಗೆ ಬೇಸತ್ತು ಕೈ ನಾಯಕರು ಕಮಲ ಹಿಡಿದಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನೆಲ್ಲ ಮೂಲೆಗುಂಪು ಮಾಡಿದರು. ಕಾಂಗ್ರೆಸ್ ಅವರ ಮನೆ ಆಸ್ತಿ ಎಂದುಕೊಂಡರು. ಕೈ ಹೈ ಕಮಾಂಡ್‍ಗೆ ಈ ವಿಷ್ಯ ಗೊತ್ತಿಲ್ಲ, ಯಾಕೆಂದರೆ ರಾಹುಲ್ ಗಾಂಧಿ ಅಪ್ರಬುದ್ಧ, ಅವರು ಪ್ರಧಾನಿ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ ಪಾದ ತೊಳೆದ ಹಾಗೆ ಬಂದು ನನ್ನ ಪಾದವನ್ನು ತೊಳೆಯಲಿ ಅಂತ ಪ್ರಿಯಾಂಕ್ ಖರ್ಗೆ ಹೇಳುತ್ತಾನೆ. ಪ್ರಿಯಾಂಕ್ ಖರ್ಗೆ ಬಗ್ಗೆ ಮಾತಾಡಲ್ಲ, ಅವನಿಗೆ ಬುದ್ಧಿಯಿಲ್ಲ. ಬೇಕಾದ್ರೆ ಖರ್ಗೆ ವಿರುದ್ಧ ಮೋದಿಯೇ ಸ್ಪರ್ಧಿಸಲಿ ಅಂತ ಪ್ರಿಯಾಂಕ್ ಹೇಳ್ತಾನೆ. ಕಲಬುರಗಿ ಕ್ಷೇತ್ರ ಮೀಸಲು ಲೋಕಸಭೆ ಕ್ಷೇತ್ರವಾಗಿದ್ದು, ಅಲ್ಲಿ ಹೇಗೆ ಮೋದಿ ಸ್ಪರ್ಧಿಸಲು ಸಾಧ್ಯ? ಆ ಕಾರಣಕ್ಕಾಗಿಯೇ ಪ್ರಿಯಾಂಕ್‍ಗೆ ಬುದ್ಧಿ ಇಲ್ಲ ಎಂದು ಹೇಳುವುದು ಎಂದರು.

    ಬಿಜೆಪಿ ಸೇರುವಂತೆ ಕಾಂಗ್ರೆಸ್ ನಾಯಕ ಮಾಲಕರೆಡ್ಡಿಗೆ ನಾವು ಮನವಿ ಮಾಡಿದ್ದೇವು. ಲೋಕಸಭೆ ಚುನಾವಣೆ ಬಳಿಕ ಖರ್ಗೆ ಮತ್ತು ಸನ್ಸ್ ಮನೆಯಲ್ಲಿ ಕೂರುತ್ತಾರೆ. ನಾವೆಲ್ಲ ಒಂದಾಗಿದ್ದು ಖರ್ಗೆ ಸೋಲಿಸಲು ಅಲ್ಲ. ಜಾಧವ್ ಗೆಲ್ಲಿಸಲು ಅಷ್ಟೇ ಎಂದು ಖರ್ಗೆ ಕುಟುಂಬದ ವಿರುದ್ಧ ಗುತ್ತೇದಾರ್ ವಾಗ್ದಾಳಿ ನಡೆಸಿದರು.

  • ನನ್ನನ್ನು ಗೆಲ್ಲಿಸಲು ನನ್ನ ಗುರುಗಳು ಬಂದಿದ್ದು, ಆನೆಬಲ ಸಿಕ್ತು: ಉಮೇಶ್ ಜಾಧವ್

    ನನ್ನನ್ನು ಗೆಲ್ಲಿಸಲು ನನ್ನ ಗುರುಗಳು ಬಂದಿದ್ದು, ಆನೆಬಲ ಸಿಕ್ತು: ಉಮೇಶ್ ಜಾಧವ್

    ಕಲಬುರಗಿ: ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಧಿಕೃತವಾಗಿ ಅಂಗಿಕಾರವಾಗದೇ ಇದ್ದರೂ ಲೋಕಸಭಾ ಚುನಾವಣೆಯ ಸ್ಪರ್ಧೆ ಖಚಿತ ಎಂದು ಕಲಬುರಗಿಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಹೇಳಿದ್ದಾರೆ.

    ಕಲಬುರಗಿಯಲ್ಲಿ ಮಾತನಾಡಿದ ಅವರು, ನನಗೆ ಟಿಕೆಟ್ ನೀಡಿಕೆಯ ಬಗ್ಗೆ ಕೆಲ ಶಕ್ತಿಗಳು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ. ಇದೀಗ ನನ್ನ ಗೆಲ್ಲಿಸಲು ನನ್ನ ಗುರುಗಳಾದ ಮಾಲಕರೆಡ್ಡಿ ಸಹ ಬಿಜೆಪಿ ಬಂದಿದ್ದಾರೆ. ಮಾಲಕರೆಡ್ಡಿ ಸೇರ್ಪಡೆಯಿಂದ ನನಗೆ ಆನೆ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ.

    ನನ್ನ ಸ್ಪರ್ಧೆ ಬಗ್ಗೆ ಜನರು ತಲೆಕೆಡಿಸಿಕೊಳ್ಳಬಾರದು. ಆಡಳಿತ ಯಂತ್ರ ದುರುಪಯೋಗವಾಗಲು ಬಿಡುವುದಿಲ್ಲ. ಅಧಿಕಾರಿಗಳು ನಿಸ್ಪಕ್ಷವಾಗಿ ಚುನಾವಣೆ ನಡೆಸುತ್ತಾರೆ. ಪಕ್ಷದ ಮುಖಂಡರ ಜೊತೆ ಚರ್ಚಿಸಿ ನಾಮಪತ್ರ ಸಲ್ಲಿಸುವ ದಿನಾಂಕ ಫೈನಲ್ ಮಾಡುವುದಾಗಿ ಹೇಳಿದ್ದರು.

    ಇದೇ ಸಂದರ್ಭದಲ್ಲಿ ಶಹಬಾದ್ ನಗರಸಭೆಯ ಜೆಡಿಎಸ್ ಸದಸ್ಯ ಜಬೀಖಾನ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಮುಸ್ಲಿಂ ಮತವನ್ನು ಸೆಳೆಯಲು ಉಮೇಶ್ ಜಾಧವ್ ಜಬೀಖಾನ್ ಅವರನ ಮನ ಒಲಿಸಿ ಬಿಜೆಪಿಗೆ ಸೇರ್ಪಡೆಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

  • ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸಿದ್ಧರಾಗಿಲ್ಲ : ಕಾಂಗ್ರೆಸ್ ಮಾಜಿ ಸಚಿವ

    ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸಿದ್ಧರಾಗಿಲ್ಲ : ಕಾಂಗ್ರೆಸ್ ಮಾಜಿ ಸಚಿವ

    ಕಲಬುರಗಿ: ಭಾರತದ ಪ್ರಧಾನಿಯಾಗಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೂಕ್ತವಲ್ಲ. ಅವರು ಇನ್ನೂ ಪ್ರಧಾನಿಯಾಗುವ ಮಟ್ಟಿಗೆ ಸಿದ್ಧವಾಗಿಲ್ಲ ಎಂದು ಕಾಂಗ್ರೆಸ್ ಮಾಜಿ ಸಚಿವ ಮಾಲಕರೆಡ್ಡಿ ನೀಡಿದ್ದಾರೆ.

    ಬಿಜೆಪಿ ಸೇರ್ಪಡೆ ವದಂತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಲಕರೆಡ್ಡಿ, ನಾನು ಕಾಂಗ್ರೆಸ್ ಬಿಡುವುದಿಲ್ಲ. ಅನಾರೋಗ್ಯದ ಕಾರಣದಿಂದ ಚುನಾವಣೆ ವಿಚಾರದಲ್ಲಿ ದೂರವಿದ್ದೇನೆ. ದೇಶದ ಪ್ರಧಾನಿ ಹುದ್ದೆಗೆ ರಾಹುಲ್ ಸೂಕ್ತವಲ್ಲ. ಅವರು ಪ್ರಧಾನಿ ಹುದ್ದೆ ನಿರ್ವಹಿಸಲು ಸಿದ್ಧರಾಗಿಲ್ಲ. ದೇಶದ ರಕ್ಷಣೆ ಮುಖ್ಯ, ಸದ್ಯ ಇರುವ ಪರಿಸ್ಥತಿಯಲ್ಲಿ ಮೋದಿ ಅವರು ದೇಶದ ರಕ್ಷಣಾ ವಿಚಾರದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಈ ವಿಷಯದಲ್ಲಿ ನಾನು ಪ್ರಧಾನಿ ಮೋದಿಯನ್ನು ಬೆಂಬಲಿಸುತ್ತೆನೆ. ರಾಷ್ಟ್ರ ಮಟ್ಟದಲ್ಲಿ ರಾಜಕಾರಣ ಮಾಡಿ ಅನುಭವವಿರುವ ನಾಯಕರೇ ಮೋದಿ ನಾಯಕತ್ವವನ್ನು ಒಪ್ಪಿದ್ದಾರೆ ಎಂದು ಹೇಳಿದರು.

    ಸೋನಿಯಾ ಗಾಂಧಿ ಅವರಿಗೆ ರಾಜಕೀಯದ ಮೇಲಿದ್ದ ಜಾಣ್ಮೆ ರಾಹುಲ್ ಅವರಲ್ಲಿ ನಾನು ಕಂಡಿಲ್ಲ. ಅವರು ಇನ್ನೂ ರಾಜಕೀಯದಲ್ಲಿರುವ ಅನುಭವ ಸಾಲದು. ನಾನು ಪಕ್ಷ ಬಿಡುವ ಆಲೋಚನೆ ಮಾಡಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ. ನಾನು ಖರ್ಗೆ ಪರ ಪ್ರಚಾರ ಮಾಡಲ್ಲ, ಪಕ್ಷದ ಪರವಾಗಿ ಪ್ರಚಾರ ಮಾಡುತ್ತೆನೆ. ಯಾಕೆಂದರೆ ಇತ್ತೀಚಿಗೆ ಕ್ಷೇತ್ರದಲ್ಲಿ ಖರ್ಗೆಯವರ ವರ್ಚಸ್ಸು ಕಡಿಮೆ ಆಗಿದೆ. ಅದಕ್ಕಾಗಿ ಖರ್ಗೆ ಆಪ್ತರು ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ನಾನು ಖರ್ಗೆಯ ನಾಯಕತ್ವ ಸಹ ಒಪ್ಪಲ್ಲ ಎಂದು ಹೇಳುವ ಮೂಲಕ ಸ್ಥಳೀಯ ನಾಯಕತ್ವದ ಬಗ್ಗೆ ಬೇಸರ ವ್ಯಕ್ತಪಡಿಸಿದರು.