Tag: Malaika Arora

  • ಮಲೈಕಾ ಜೊತೆ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಪ್ರತಿಕ್ರಿಯೆ ನೀಡಿದ ವಿಡಿಯೋ ವೈರಲ್

    ಮಲೈಕಾ ಜೊತೆ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಪ್ರತಿಕ್ರಿಯೆ ನೀಡಿದ ವಿಡಿಯೋ ವೈರಲ್

    ಕ್ಯಾನ್ಬೆರಾ: ಬಾಲಿವುಡ್ ನಟಿ ಮಲೈಕಾ ಅರೋರಾ ಜೊತೆ ಕಿರುತೆರೆ ನಟ ಕರಣ್ ಟ್ಯಾಕರ್ ಫ್ಲರ್ಟ್ ಮಾಡಿದ್ದಕ್ಕೆ ಅರ್ಜುನ್ ಕಪೂರ್ ಪ್ರತಿಕ್ರಿಯೆ ನೀಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಲ್ಬೋರ್ನ್ ನ ಭಾರತೀಯ ಚಲನಚಿತ್ರೋತ್ಸವ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಭಾಗವಹಿಸಿದ್ದರು. ಮೆಲ್ಭೋರ್ನ್‍ನ ಸೆಂಟ್ ಕಿಲ್ಡಾದಲ್ಲಿ ಇರುವ ಪಲೈಸ್ ಥಿಯೇಟರ್ ನಲ್ಲಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರಾ ಒಟ್ಟಿಗೆ ಕುಳಿತಿದ್ದರು. ಈ ವೇಳೆ ಕಿರುತೆರೆ ನಟ ಕರಣ್ ಟ್ಯಾಕರ್, ಮಲೈಕಾ ಜೊತೆ ನಡೆಸಿದ ಸಂಭಾಷಣೆ ವಿಡಿಯೋ ವೈರಲ್ ಆಗಿದೆ.

    ವಿಡಿಯೋದಲ್ಲಿ ಕರಣ್ ನಟಿ ಮಲೈಕಾ ಅವರಿಗೆ “20 ಗಂಟೆ ವಿಮಾನದಲ್ಲಿ ಸಂಚಾರ ಮಾಡಿದ್ದರು ಸುಂದರವಾಗಿ ಕಾಣಿಸುತ್ತಿದ್ದೀರಾ” ಎಂದು ಹೇಳಿದ್ದಾರೆ. ಈ ವೇಳೆ ಪಕ್ಕದಲ್ಲಿಯೇ ಕುಳಿತಿದ್ದ ಅರ್ಜುನ್, “ಹಿಂದೆ ಬೇರೆ ಮಹಿಳೆಯರು ಕುಳಿತಿದ್ದಾರೆ. ಅವರ ಜೊತೆ ಫ್ಲರ್ಟ್ ಮಾಡು ಹೋಗು’ ಎಂದು ನಗುತ್ತಾ ಕರಣ್‍ಗೆ ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಮಾತು ಕೇಳಿ ಅಲ್ಲಿದ್ದ ಬೇರೆ ಕಲಾವಿದರು ಜೋರಾಗಿ ನಗಲು ಶುರು ಮಾಡಿದ್ದರು.

    ಮಲೈಕಾ ಅರೋರಾ ಅವರು 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಮಲೈಕಾ ಪ್ರೇಮ ಬಂಧನದಲ್ಲಿ ಬಂಧಿಯಾಗಿದ್ದಾರೆ.

  • ಪ್ರೀತಿಯಲ್ಲಿ ಎಲ್ಲರೂ ಎರಡನೇ ಅವಕಾಶಕ್ಕೆ ಅರ್ಹರು: ಮಲೈಕಾ

    ಪ್ರೀತಿಯಲ್ಲಿ ಎಲ್ಲರೂ ಎರಡನೇ ಅವಕಾಶಕ್ಕೆ ಅರ್ಹರು: ಮಲೈಕಾ

    – ಅರ್ಜುನ್ ಕಪೂರ್ ಜತೆಗಿನ ಸಂಬಂಧ ರಿವೀಲ್ ಮಾಡಿದ ನಟಿ

    ಮುಂಬೈ: ಪ್ರೀತಿಯಲ್ಲಿ ಎಲ್ಲರೂ ಎರಡನೇ ಅವಕಾಶಕ್ಕೆ ಅರ್ಹರು ಎಂದು ಹೇಳುವ ಮೂಲಕ ಬಾಲಿವುಡ್ ನಟಿ ಮಲೈಕಾ ಅರೋರಾ, ನಟ ಅರ್ಜುನ್ ಕಪೂರ್ ಜತೆಗಿನ ಸಂಬಂಧವನ್ನು ರಿವೀಲ್ ಮಾಡಿದ್ದಾರೆ.

    ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಮಲೈಕಾ, ಪ್ರೀತಿಯಲ್ಲಿ ಪ್ರತಿಯೊಬ್ಬರಿಗೂ ಸೆಕೆಂಡ್ ಚಾನ್ಸ್ ಇರುತ್ತೆ ಹಾಗೂ ಅದಕ್ಕೆ ಎಲ್ಲರೂ ಅರ್ಹರು. ಪ್ರೀತಿಯಲ್ಲಿ ಮಹಿಳೆಗೆ ಎರಡನೇ ಚಾನ್ಸ್ ಕೊಡಬೇಕು. ಹಾಗೇ ನಾನು ಎರಡನೇ ಅವಕಾಶವನ್ನು ಹೆಚ್ಚು ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯ ಹೊಂದಿರುವೆ ಎಂದು ಹೇಳಿದ್ದಾರೆ.

    ಎರಡನೇ ಅವಕಾಶದ ವಿಚಾರವಾಗಿ ನಮ್ಮ ದೇಶದಲ್ಲಿ ಸಾಕಷ್ಟು ಸಮಸ್ಯೆ ಹಾಗೂ ಸನ್ನಿವೇಶವನ್ನು ನಿಭಾಯಿಸಬೇಕಾಗುತ್ತದೆ. ಹೀಗಾಗಿ ಕೆಲವು ಸಂಗತಿಗಳಿಗೆ ನಿಷೇಧ ಹೇರಲಾಗಿದೆ. ಅವೆಲ್ಲವನ್ನೂ ಕೈ ಚೆಲ್ಲಿ ನಾವು ತೆರೆದ ಮನಸ್ಸಿನಿಂದ ನೋಡಬೇಕು. ಆಗಲೇ ಜೀವನ ಸುಂದರವಾಗಿರಲು ಸಾಧ್ಯ ಎಂದು ಮಲೈಕಾ ಹೇಳಿದ್ದಾರೆ.

    ಒಬ್ಬರ ಅಭಿಪ್ರಾಯಕ್ಕೆ ಇನ್ನೊಬ್ಬರು ಬೆಲೆ ಕೊಡಬೇಕು. ಒಬ್ಬರ ಪರಿಸ್ಥಿತಿಯನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಮೂಲಕ ನಟಿ ಮಲೈಕಾ ತಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಂತೆ ಪರೋಕ್ಷವಾಗಿ ಹೇಳಿದ್ದಾರೆ.

    ಮಲೈಕಾ ಅರೋರಾ ಅವರು 1998ರಲ್ಲಿ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೊಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದಾರೆ. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರ ಜೊತೆಗೆ ಸುತ್ತಾಡುತ್ತಿದ್ದು, ಪರಸ್ಪರ ಪ್ರೇಮ ಬಂಧನದಲ್ಲಿ ಬಂಧಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ವಿರುದ್ಧ ಕಿಡಿಕಾರಿದ್ದ ಮಲೈಕಾ ಅವರು, ನಾನು ವಿಚ್ಛೇದನ ಪಡೆದ ಮೇಲೆ ಯಾರೊಂದಿಗಾದರೂ ಇರಬೇಕಾ ಎನ್ನುವ ಪ್ರಶ್ನೆಗೆ ನನಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಮತ್ತೆ ಹಾರ್ಟ್ ಬ್ರೇಕ್ ಆಗಬಹುದೆಂಬ ಭಯದಿಂದ. ಆದರೆ ನನಗೆ ಮತ್ತೆ ಪ್ರೀತಿ ಬೇಕಿತ್ತು, ಸಂಬಂಧ ಬೇಕಿತ್ತು. ಇದರಿಂದ ನನಗೆ ಆತ್ಮ ವಿಶ್ವಾಸ ಬಂದಿದೆ. ಎರಡು ಮನಸ್ಸು ಹಾಗೂ ಹೃದಯ ಕನೆಕ್ಟ್ ಆದಾಗ ವಯಸ್ಸಿನ ವಿಷಯ ಸುಳಿಯೋದೇ ಇಲ್ಲ ಎಂದು ಹೇಳಿಕೊಂಡಿದ್ದರು.

    ನನಗೆ ಡೈವೋರ್ಸ್ ಆದರೂ ನಿಮಗೆ ಸಮಸ್ಯೆ, ನಾನು ಮತ್ತೆ ಪ್ರೀತಿಯಲ್ಲಿದ್ದೇನೆ ಅಂದರೂ ಪ್ರಾಬ್ಲಂ. ನನ್ನ ಸಂಗಾತಿ ನನಗಿಂತ ಚಿಕ್ಕವನು ಎನ್ನವುದು ನಿಮಗೆ ಪ್ರಾಬ್ಲಂ. ಇದೆಲ್ಲಾ ನಿಮಗೆ ಅನ್ನಿಸಿರಬಹುದು. ಆದರೆ ನಿಮ್ಮ ಸಮಸ್ಯೆಗಳನ್ನು ನಾನು ಕೇರ್ ಮಾಡಲ್ಲ. ಎಲ್ಲರನ್ನೂ ಖುಷಿ ಪಡಿಸುವುದಕ್ಕೆ ನಾನಿಲ್ಲಿ ಇಲ್ಲ, ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಗುರುತು-ಹೆಸರು ಇಲ್ಲದವರಿಗಾಗಿಯಂತೂ ಅಲ್ಲ ಎಂದು ಕಿಡಿಕಾರಿದ್ದರು.

  • 9 ತಿಂಗಳ ಬಳಿಕ ಕ್ಯಾಪ್ ತೆಗೆದ ಅರ್ಜುನ್ ಕಪೂರ್

    9 ತಿಂಗಳ ಬಳಿಕ ಕ್ಯಾಪ್ ತೆಗೆದ ಅರ್ಜುನ್ ಕಪೂರ್

    -ಖುಷಿಯಿಂದ ಕುಣಿದ ಮಲೈಕಾ

    ಮುಂಬೈ: ಬಾಲಿವುಡ್ ಲವರ್ ಬಾಯ್ ಪಟ್ಟದಲ್ಲಿರೋ ಅರ್ಜುನ್ ಕಪೂರ್ 9 ತಿಂಗಳ ಬಳಿಕ ತಮ್ಮ ತಲೆಯ ಮೇಲೆ ಟೋಪಿಯನ್ನು ತೆಗೆದಿದ್ದಾರೆ. ಕ್ಯಾಪ್ ತೆಗೆಯುತ್ತಿರುವ ಸಣ್ಣ ಝಲಕ್ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಅರ್ಜುನ್ ಕಪೂರ್ ವಿಡಿಯೋ ನೋಡಿದ ಪ್ರೇಯಸಿ ಮಲೈಕಾ ಅರೋರಾ ಖುಷಿಯಿಂದ ಕುಣಿದಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಇನ್ಸ್ಟಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ಕಪೂರ್, ಪಾಣಿಪತ್ ಸಿನಿಮಾಗೆ ಪೂರ್ಣವಾಗಿ ತಲೆ ಕೂದಲಿಗೆ ಕತ್ತರಿ ಹಾಕಲಾಗಿತ್ತು. ಸಿನಿಮಾಗಾಗಿ ಲುಕ್ ರಿವೀಲ್ ಗೊಳ್ಳದಂತೆ 2018 ನವೆಂಬರ್ ನಿಂದ ಕ್ಯಾಪ್ ಧರಿಸುತ್ತಾ ಬಂದಿದ್ದೇನೆ. ಇದೀಗ ಶೂಟಿಂಗ್ ಮುಕ್ತಾಯ ಹಂತಕ್ಕೆ ತಲುಪಿದೆ. ಹಾಗಾಗಿ ಕ್ಯಾಪ್ ರಿವೀಲ್ ಮಾಡುವ ದಿನ ಬಂದಿದೆ ಎಂದು ತಮ್ಮೆಲ್ಲ ಟೋಪಿಗಳನ್ನು ತೋರಿಸಿದ್ದಾರೆ. ಕೊನೆಗೆ ಕ್ಯಾಪ್ ತೆಗೆದಿದ್ದಾರೆ.

    https://www.instagram.com/p/B0X4s-Alc3F/

    ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವಿನ ಪ್ರೀತಿಯ ವಿಚಾರ ಬಾಲಿವುಡ್‍ನ ಗಲ್ಲಿ ಗಲ್ಲಿಗೂ ಗೊತ್ತು. ಆದ್ರೆ ಇಂದಿಗೂ ಈ ಜೋಡಿ ಅಧಿಕೃತವಾಗಿ ತಮ್ಮ ವಿಚಾರವನ್ನು ತಿಳಿಸದೇ ಪರೋಕ್ಷವಾಗಿ ಹೇಳುತ್ತಾ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಒಬ್ಬರನ್ನೊಬ್ಬರ ಫೋಟೋಗಳಿಗೆ ಕಮೆಂಟ್ ಮಾಡೋದು, ಹುಟ್ಟುಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಅಭಿಮಾನಿಗಳಿಗೆ ತಮ್ಮ ಪ್ರೀತಿಯ ವಿಷಯವನ್ನು ಹೇಳುತ್ತಾ ಬಂದಿದ್ದಾರೆ.

    ಈ ಹಿಂದೆ ಮಲೈಕಾ ಅರೋರಾ, ನಾನು ನನಗಿಂತ ಚಿಕ್ಕ ವಯಸ್ಸಿನ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮುಂದೆ ಮದುವೆಯಾಗುತ್ತೇನೆ. ಇದರಿಂದ ಯಾರಿಗಾದ್ರೂ ತೊಂದರೆ ಇದೆಯಾ? ಎಂದು ಖಾರವಾಗಿ ಹೇಳಿದ್ದರು.

    https://www.instagram.com/p/B0XvmF9FTVm/

  • ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

    ಅರ್ಜುನ್ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ತಿಳಿಸಿದ ಮಲೈಕಾ

    ಮುಂಬೈ: ಬಾಲಿವುಡ್ ಬೆಡಗಿ ಮಲೈಕಾ ಅರೋರಾ ನಟ ಅರ್ಜುನ್ ಕಪೂರ್ ಅವರ ಜೊತೆಗಿನ ಸಂಬಂಧದ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿದ್ದಾರೆ.

    ನಟ ಅರ್ಜುನ್ ಕಪೂರ್ ಬುಧವಾರ ತಮ್ಮ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ರೊಮ್ಯಾಂಟಿಕ್ ಫೋಟೋವನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭ ಕೋರಿದ್ದಾರೆ.

    ಮಲೈಕಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅರ್ಜುನ್ ಜೊತೆಗಿರುವ ಫೋಟೋ ಹಾಕಿ ಅದಕ್ಕೆ, “ಹುಟ್ಟುಹಬ್ಬದ ಶುಭಾಶಯಗಳು ನನ್ನ ಅದ್ಭುತ ಅರ್ಜುನ್ ಕಪೂರ್. ನಿನಗೆ ಯಾವಾಗಲೂ ಪ್ರೀತಿ ಹಾಗೂ ಖುಷಿ ಸಿಗಲಿ” ಎಂದು ಬರೆದು ಪೋಸ್ಟ್ ಮಾಡಿಕೊಂಡಿದ್ದಾರೆ.

     

    View this post on Instagram

     

    Happy bday my crazy,insanely funny n amazing @arjunkapoor … love n happiness always

    A post shared by Malaika Arora (@malaikaaroraofficial) on

    ಅರ್ಜುನ್ ಕಪೂರ್ ತಮ್ಮ ಹುಟ್ಟುಹಬ್ಬವನ್ನು ಮಲೈಕಾ ಜೊತೆ ನ್ಯೂಯಾರ್ಕ್ ನಲ್ಲಿ ಆಚರಿಸಿದ್ದಾರೆ. ಹುಟ್ಟುಹಬ್ಬ ಆಚರಿಸಲೆಂದೇ ಇಬ್ಬರು ಸೋಮವಾರ ರಾತ್ರಿ ನ್ಯೂಯಾರ್ಕ್‍ಗೆ ತಲುಪಿದ್ದರು. ಮಲೈಕಾ ನ್ಯೂಯಾರ್ಕ್ ನಲ್ಲಿ ಕಳೆದ ಕೆಲವು ಕ್ಷಣಗಳ ಫೋಟೋವನ್ನು ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಮಾಧ್ಯಮಗಳ ಮುಂದೆ ಬಂದು ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಕೂಡ ಹೇಳಿಕೊಂಡಿದ್ದರು. ಮಲೈಕಾಗೆ ಈಗಾಗಲೇ ಮದುವೆಯಾಗಿದ್ದು ತಮ್ಮ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇಧನ ನೀಡಿ ತಮ್ಮ 16 ವರ್ಷದ ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

  • ಹಾಟ್ ಫೋಟೋ ಹಂಚಿಕೊಂಡು ಟ್ರೋಲ್ ಆದ ಮಲೈಕಾ

    ಹಾಟ್ ಫೋಟೋ ಹಂಚಿಕೊಂಡು ಟ್ರೋಲ್ ಆದ ಮಲೈಕಾ

    ಮುಂಬೈ: ಬಾಲಿವುಡ್ ಬೆಡಗಿ ಮಲೈಕಾ ಅರೋರಾ ಹಾಟ್ ಫೋಟೋವೊಂದು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಟ್ರೋಲ್ ಆಗುತ್ತಿದ್ದಾರೆ.

    ಇತ್ತೀಚೆಗೆ ಮಲೈಕಾ ಅರೋರಾ ಹಾಟ್ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಲೈಕಾ ಒಳಉಡುಪಿನ ಮೇಲೆ ಲೇಸಿ ಬಾಡಿಸೂಟ್ ಧರಿಸಿದ್ದಾರೆ. ಈ ಉಡುಪಿಗೆ ಟೈಟ್ ಪೋನಿಟೇಲ್ ಹಾಕಿ ತಮ್ಮ ತಲೆ ಕೂದಲನ್ನು ಹಿಡಿದುಕೊಂಡಿದ್ದಾರೆ.

     

    View this post on Instagram

     

    #bts….

    A post shared by Malaika Arora (@malaikaaroraofficial) on

    ಈ ಫೋಟೋದಲ್ಲಿ ತಲೆಕೂದಲು ಹಿಡಿದುಕೊಂಡಿದ್ದಾಗ ಅವರು ಅಂಡರ್ ಆಮ್ಸ್ ವಾಕ್ಸ್ ಮಾಡಿಸದೇ ಇರುವುದು ಕಂಡು ಬಂದಿದೆ. ಸದ್ಯ ಇದನ್ನು ನೋಡಿದ ಜನರು ಮೊದಲು ವಾಕ್ಸ್ ಮಾಡಿಸು ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ಫೋಟೋ ನೋಡಿ ಜನರು ಅಂಡರ್ ಆಮ್ಸ್ ವಾಕ್ಸ್ ಮಾಡಬೇಕಿತ್ತಲ್ಲವೇ? ಎಂದು ಕಮೆಂಟ್ ಹಾಕಿದರೆ, ಮತ್ತೊಬ್ಬರು ಮೊದಲು ವಾಕ್ಸ್ ಮಾಡಿಸು ನೋಡಲು ಅಸಹ್ಯವಾಗಿದೆ. ಎಂದು ಕಮೆಂಟ್ ಹಾಕಿದ್ದಾರೆ. ಮತ್ತೆ ಕೆಲವರು ಈಕೆಗೆ ವಾಕ್ಸ್ ಮಾಡುವುದಕ್ಕೂ ಟೈಂ ಇಲ್ಲ ಎಂದು ಟ್ರೋಲ್ ಮಾಡುತ್ತಿದ್ದಾರೆ.

  • ನನ್ನನ್ನು ಐಟಂ ಗರ್ಲ್ ಎಂದವರಿಗೆ ಕಪಾಳಕ್ಕೆ ಬಾರಿಸುತ್ತೇನೆ: ಮಲೈಕಾ ಅರೋರಾ

    ನನ್ನನ್ನು ಐಟಂ ಗರ್ಲ್ ಎಂದವರಿಗೆ ಕಪಾಳಕ್ಕೆ ಬಾರಿಸುತ್ತೇನೆ: ಮಲೈಕಾ ಅರೋರಾ

    ಮುಂಬೈ: ನನ್ನನ್ನು ಐಟಂ ಗರ್ಲ್ ಎಂದು ಕರೆದವರ ಕಪಾಳಕ್ಕೆ ಬಾರಿಸುತ್ತೇನೆ ಎಂದು ಬಾಲಿವುಡ್ ನಟಿ ಮಲೈಕಾ ಅರೋರಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

    ಇತ್ತೀಚೆಗೆ ಮಲೈಕಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕ ನಿಮಗೆ ಐಟಂ ಗರ್ಲ್ ಎಂದು ಕರೆಯುತ್ತಿರುತ್ತಾರೆ. ಆಗ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಲೈಕಾ, “ನಾನು ಯಾವುದೇ ಹಾಡನ್ನು ಮಾಡಬೇಕೆಂದರೆ ಇಷ್ಟಪಟ್ಟು ಮಾಡಿದ್ದೇನೆ. ನನಗೆ ಇದರಲ್ಲಿ ಯಾವುದೇ ಅಭ್ಯಂತರವಿರಲಿಲ್ಲ. ನನಗೆ ಏನಾದರೂ ಇಷ್ಟವಾಗಿರಲಿಲ್ಲ ಎಂದರೆ ನಾನು ಆಗ ಮಾತನಾಡುತ್ತಿದೆ. ಇದನ್ನು ನಿರಾಕರಿಸುತ್ತಿದೆ” ಎಂದು ಹೇಳಿದ್ದಾರೆ.

    ಈಗ ಸಮಯ ಬದಲಾಗಿದೆ. ನಾನು 80 ಹಾಗೂ 90ರ ದಶಕದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾಗ ಎಲ್ಲರೂ ಐಟಂ ಸಾಂಗ್ ಎಂದು ಕರೆಯುತ್ತಿದ್ದರು. ಆಗ ನನಗೆ ಕೋಪ ಬರುತಿತ್ತು. ಅಲ್ಲದೆ ನನಗೆ ಯಾರಾದರೂ ಐಟಂ ಗರ್ಲ್ ಎಂದು ಕರೆದರೆ ಕಪಾಳಕ್ಕೆ ಬಾರಿಸಬೇಕು ಎಂದು ಅನಿಸುತ್ತಿತ್ತು. ನನಗೆ ಇಷ್ಟವಾದ ಹಾಡಿಗೆ ನಾನು ಹೆಜ್ಜೆ ಹಾಕಿದ್ದೇನೆ ಹೊರತು ಬೇರೆ ಯಾರ ಬಲವಂತಕ್ಕೂ ನಾನು ಸಿನಿಮಾಗಳಲ್ಲಿ ಡ್ಯಾನ್ಸ್ ಮಾಡಿಲ್ಲ ಎಂದು ಮಲೈಕಾ ತಿಳಿಸಿದ್ದಾರೆ.

    ಮಲೈಕಾ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಅವರ ‘ದಿಲ್ ಸೇ’ ಚಿತ್ರದಲ್ಲಿ ‘ಛಯ್ಯಾ ಛಯ್ಯಾ’ ಹಾಡಿಗೆ ಹೆಜ್ಜೆ ಹಾಕುವುದರ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲದೇ ‘ದಬಾಂಗ್’ ಚಿತ್ರದಲ್ಲಿ ಸಲ್ಮಾನ್ ಜೊತೆ ‘ಮುನ್ನಿ ಬದನಾಂ ಹುವಿ’, ‘ಹೌಸ್‍ಫುಲ್-2’ ಚಿತ್ರದಲ್ಲಿ ‘ಅರ್ನಾಕಲಿ ಡಿಸ್ಕೋ ಚಲಿ’ ಹಾಗೂ ತೆಲುಗಿನ ‘ಗಬ್ಬರ್ ಸಿಂಗ್’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು.

  • ಮಾಧ್ಯಮದವರನ್ನ ನೋಡಿ ಮುಖ ಮುಚ್ಚಿಕೊಂಡ ಅರ್ಜುನ್ ಕಪೂರ್

    ಮಾಧ್ಯಮದವರನ್ನ ನೋಡಿ ಮುಖ ಮುಚ್ಚಿಕೊಂಡ ಅರ್ಜುನ್ ಕಪೂರ್

    ಮುಂಬೈ: ಒಟ್ಟಿಗೆ ಓಡಾಡಿ ಬಿಟೌನ್‍ನಲ್ಲಿ ಬಹಳಷ್ಟು ಗಾಸಿಪ್ ಸೃಷ್ಟಿಸಿರುವ ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ಮಲೈಕಾ ಅರೋರ ಜೋಡಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

    ಶುಕ್ರವಾರದಂದು ಕರಣ್ ಜೋಹರ್, ಸಂಜಯ್ ಕಪೂರ್ ಮತ್ತು ಅವರ ಪತ್ನಿ ಹಾಗೂ ಮಲೈಕಾ ಮತ್ತು ಅರ್ಜುನ್ ಕಪೂರ್ ಎಲ್ಲರು ರೆಸ್ಟೋರೆಂಟ್‍ವೊಂದಕ್ಕೆ ಪಾರ್ಟಿಗೆಂದು ಬಂದಿದ್ದರು. ಈ ವೇಳೆ ರೆಸ್ಟೋರೆಂಟ್‍ನಿಂದ ಹೊರಬರುವಾಗ ಮಲೈಕಾ ಅವರೊಂದಿಗೆ ಬರುತ್ತಿದ್ದ ಅರ್ಜುನ್ ಮಾಧ್ಯಮದವರನ್ನು ಕಂಡು ತಮ್ಮ ಮುಖ ಮುಚ್ಚಿಕೊಂಡು ಹೋಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅರ್ಜುನ್ ಯಾಕೆ ಮುಖ ಮುಚ್ಚಿಕೊಂಡರು ಅಂತಾ ಎಲ್ಲರು ಮಾತನಾಡುವಂತಾಗಿದೆ.

    ಈ ಹಿಂದೆ ಕೂಡ ಬಹಳಷ್ಟು ಕಡೆ ಅರ್ಜುನ್ ಹಾಗೂ ಮಲೈಕಾ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಟಲಿಯಲ್ಲಿ ನಡೆದ ಮಲೈಕಾ ಅವರ ಹುಟ್ಟುಹಬ್ಬದಲ್ಲೂ ಅರ್ಜುನ್ ಪಾಲ್ಗೊಂಡಿದ್ದರು.

    https://www.instagram.com/p/BqiXpSwjq0n/?utm_source=ig_embed&utm_campaign=embed_video_watch_again

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕ್ಯಾಂಡಲ್‍ಲೈಟ್ ಡಿನ್ನರ್ ಪಾರ್ಟಿ ವೇಳೆ ಸೆಕ್ಸಿ ಅವತಾರದಲ್ಲಿ ಮಿಂಚಿದ ನಟಿ

    ಕ್ಯಾಂಡಲ್‍ಲೈಟ್ ಡಿನ್ನರ್ ಪಾರ್ಟಿ ವೇಳೆ ಸೆಕ್ಸಿ ಅವತಾರದಲ್ಲಿ ಮಿಂಚಿದ ನಟಿ

    ಮುಂಬೈ: ಬಾಲಿವುಡ್ ಅನಾರ್ಕಲಿ ಮಲೈಕಾ ಅರೋರಾ ಇತ್ತೀಚೆಗೆ ಗೆಳತಿಯರೊಂದಿಗೆ ‘ಥ್ಯಾಂಕ್ಸ್ ಗಿವಿಂಗ್ ಡೇ’ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. 45 ವರ್ಷದ ಮಲೈಕಾ ಇಂದಿಗೂ ತಮ್ಮ ಫಿಟ್‍ನೆಸ್ ನಿಂದ 18ರ ಹುಡುಗಿಯರು ನಾಚಿಸುವಂತೆ ಕಾಣುತ್ತಾರೆ. ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಸಹ ಮಲೈಕಾ ಅರೋರಾ ತಮ್ಮ ಔಟ್ ಫಿಟ್ ನಲ್ಲಿ ಇಂದಿಗೂ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ದಾರೆ.

    ಬುಧವಾರ ಇನ್ ಸ್ಟಾಗ್ರಾಂನಲ್ಲಿ ಕೆಲ ಫೋಟೋಗಳನ್ನು ಪೋಸ್ಟ್ ಮಾಡಿಕೊಂಡಿರುವ ಮಲೈಕಾ ಡೆನಿಮ್ ಡ್ರೆಸ್ ನಲ್ಲಿ ಸಖತ್ ಗ್ಲಾಮರ್ ಆಗಿ ಕಾಣಿಸುತ್ತಿದ್ದಾರೆ. ಫೋಟೋಗಳನ್ನು ನೋಡಿದ ನೆಟ್ಟಿಗರು ಈ ವಯಸ್ಸಿನಲ್ಲಿಯೂ ನೀವು ಹಾಟ್, ಪ್ರಿಟ್ಟಿ ಆಗಿ ಕಾಣುತ್ತಿದ್ದೀರಿ ಅಂತಾ ಕೆಲವರು ಬರೆದ್ರೆ, ಹಲವು ಸುಂದರವಾದ ಫೋಟೋ ಅಂತ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ದೇವರು ನೀಡಿದ ಚೆಲುವು ನಿಮ್ಮದು ಅಂದ್ರೆ, ನಿಮ್ಮ ನಗುವಿನಲ್ಲಿ ಚಮತ್ಕಾರ ಅಡಗಿದೆ ಎಂದು ಬರೆದಿದ್ದಾರೆ.

    https://www.instagram.com/p/Bqas9peBAii/

    ಕೆಲವು ದಿನಗಳಿಂದ ಅರ್ಜುನ್ ಕಪೂರ್ ಜೊತೆ ಮಲೈಕಾ ಹೆಸರು ಕೇಳಿಬರುತ್ತಿದ್ದು, ಮುಂದಿನ ವರ್ಷ ಇಬ್ಬರು ಮದುವೆ ಆಗಲಿದ್ದಾರಂತೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಆದ್ರೆ ಇದೆಲ್ಲ ಸುಳ್ಳು ಎಂದು ಹೇಳಿರುವ ಮಲೈಕಾ, ನನ್ನ ಜೀವನವನ್ನು ಸಂತೋಷವಾಗಿ ಎಂಜಾಯ್ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ.

    ಇದೂವರೆಗೂ ಮಲೈಕಾ ಅಥವಾ ಅರ್ಜುನ್ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/BqeLJU6BFh0/

    ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

    https://www.instagram.com/p/Bqb6n4yBnln/

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ತನಗಿಂತ 12 ವರ್ಷ ಹಿರಿಯ ನಟಿಯ ಜೊತೆ ಅರ್ಜುನ್ ಕಪೂರ್ ಮದುವೆ?

    ಮುಂಬೈ: ಪ್ರೀತಿಗೆ ಕಣ್ಣಿಲ್ಲ. ಪ್ರೇಮಿಗಳು ಒಬ್ಬರಿಗೊಬ್ಬರು ಇಷ್ಟಪಟ್ಟರೆ ವಯಸ್ಸಿನ ಅಂತರವೂ ಗೊತ್ತಾಗಲ್ಲ ಎಂಬ ಮಾತನ್ನು ಕೇಳಿರುತ್ತೇವೆ. ಇತ್ತೀಚೆಗೆ ನಟಿ ಪ್ರಿಯಾಂಕ ಚೋಪ್ರಾ ತಮಗಿಂತ 10 ವರ್ಷ ಚಿಕ್ಕವನಾದ ನಿಕ್ ಜೋನ್ಸ್ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸುದ್ದಿಯಾಗಿದ್ದರು. ಇದೀಗ ನಿರ್ಮಾಪಕ ಬೋನಿ ಕಪೂರ್ ಮಗ, 33 ವರ್ಷದ ಅರ್ಜುನ್ ಕಪೂರ್ ತನಗಿಂತ 12 ವರ್ಷ ಹಿರಿಯ ನಟಿ ಮಲೈಕಾ ಅರೋರ ಜೊತೆ ಮುಂದಿನ ವರ್ಷ ಮದುವೆ ಆಗಲಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

    ಇತ್ತೀಚಿನ ಕೆಲವು ದಿನಗಳಲ್ಲಿ ಅರ್ಜುನ್ ಕಪೂರ್ ಮತ್ತು 45 ವರ್ಷದ ಮಲೈಕಾ ಅರೋರಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಇಬ್ಬರ ಸಂಬಂಧದ ಬಗ್ಗೆ ಹಲವು ಸುದ್ದಿಗಳು ಬಾಲಿವುಡ್ ಅಂಗಳದಲ್ಲಿ ಹರಿದಾಡಿದುತಿತ್ತು. ಆದ್ರೆ ಇಬ್ಬರು ಒಂದು ವರ್ಷದಿಂದ ಸಾರ್ವಜನಿಕವಾಗಿ ಇಬ್ಬರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮಲೈಕಾ ಅರೋರಾ ಖಾಸಗಿ ವಾಹಿನಿಯ ರಿಯಾಲಿಟಿ ಶೋದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ಕಾರ್ಯಕ್ರಮದಲ್ಲಿ ಅರ್ಜುನ್ ಭಾಗಿಯಾಗಿದ್ದರು. ಸಿನಿಮಾ ಪ್ರಮೋಶನ್ ಅಂತಾ ಮೇಲ್ನೋಟಕ್ಕೆ ಹೇಳಿದ್ರೂ, ಮಲೈಕಾ ಪ್ರೀತಿಗಾಗಿ ಅರ್ಜುನ್ ಭಾಗಿಯಾಗಿದ್ದರು ಎಂಬುವುದು ಇನ್ ಸೈಡ್‍ಸ್ಟೋರಿ.

    ಇದೂವರೆಗೂ ಮಲೈಕಾ ಅಥವಾ ಅರ್ಜುನ್ ತಮ್ಮ ಪ್ರೀತಿ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ತಾವಿಬ್ಬರು ಪ್ರೀತಿಯಲ್ಲಿ ಇರೋದನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಮಾಧ್ಯಮಗಳ ಮುಂದೆ ನಾವಿಬ್ಬರು ಒಳ್ಳೆಯ ಗೆಳೆಯರು ಎಂಬುದನ್ನು ಹೇಳುತ್ತಾ ಬಂದಿದ್ದಾರೆ. ಮಲೈಕಾ ಈಗಾಗಲೇ ಪತಿ ಅರ್ಬಾಜ್ ಖಾನ್ ಗೆ ವಿಚ್ಛೇದನ ನೀಡಿ 16 ವರ್ಷದ ಮಗ ಅರ್ಹಾನ್ ಖಾನ್ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಇತ್ತೀಚೆಗೆ ಮಲೈಕಾ ಪತಿ, ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್ ತಮ್ಮ ಹೊಸ ಗೆಳತಿ ಜಾರ್ಜಿಯಾ ಆಂಡ್ರಿಯಾನಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv