Tag: Malaika Arora

  • ಬಾತುಕೋಳಿಯಂತೆ ನಡೆದ ಮಲೈಕಾ- ಸಖತ್ ಹಾಟ್

    ಬಾತುಕೋಳಿಯಂತೆ ನಡೆದ ಮಲೈಕಾ- ಸಖತ್ ಹಾಟ್

    ಮುಂಬೈ: ಬಾಲಿವುಡ್ ಸಿನಿಮಾ ಅಂಗಳದಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ನಟಿ, ಡಾನ್ಸರ್ ಮಲೈಕಾ ಅರೋರಾ. ಇದೀಗ ಬಾತುಕೋಳಿಯಂತೆ ನಡೆದು ಸಖತ್ ಹಾಟ್ ಆಗಿ ಕಾಣಿಸಿಕೊಂಡು ಚರ್ಚೆಯ ಮೂಲವಾಗಿದ್ದಾರೆ.

    47 ವರ್ಷದ ಮಲೈಕಾ ದಿನವೂ ಜಿಮ್‍ಗೆ ತೆರಳುವಾಗ ನೆರೆದಿರುವ ಪಾಪರಾಜಿಗಳಿಗೆ ಪೋಸ್ ನೀಡುತ್ತಾರೆ. ಅಂತೆಯೇ ಇತ್ತೀಚೆಗೆ ಕೂಡ ಪೋಸ್ ನೀಡಿದ್ದಾರೆ. ಅದರೊಂದಿಗೆ ವಿಚಿತ್ರವಾಗಿ ನಡೆದಿದ್ದಾರೆ. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಇದನ್ನೂ ಓದಿ:  ಕಟೌಟ್ ಡ್ರೆಸ್‍ನಲ್ಲಿ ನೋರಾ ಫತೇಹಿ ಸಖತ್ ಹಾಟ್

    ಮಲೈಕಾ ಅವರ ಬಾತುಕೋಳಿ ನಡಿಗೆ ಕಂಡ ಅವರ ಅಭಿಮಾನಿಗಳಲ್ಲಿ ಕೆಲವರು ಮೆಚ್ಚುಕೊಂಡಿದ್ದಾರೆ, ಇನ್ನು ಕೆಲವರಿಗೆ ಇಷ್ಟವಾಗಿಲ್ಲ. ಬಾತುಕೋಳಿ ನಡಿಗೆ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಮತ್ತೆ ಹಲವರು ಏಕೆ ಹಾಗೆ ನಡೆಯುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮಲೈಕಾ ಹಾಗೂ ನಟ ಅರ್ಜುನ್ ಬಹಳ ಕಾಲದಿಂದ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಇತ್ತೀಚೆಗಷ್ಟೇ ಗೆಳತಿಯ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅರ್ಜುನ್ ಕಪೂರ್, ನಾನು ದುಃಖದಲ್ಲಿದ್ದಾಗ, ಖುಷಿಯಲ್ಲಿದಾಗ ಯಾವುದೇ ಸಂದರ್ಭವಿರಲಿ ಅದು ಆಕೆಗೆ ತಿಳಿಯುತ್ತದೆ. ಒಂದು ವೇಳೆ ನಾನು ಕದ್ದು ಕುಳಿತರೂ ಅದು ಆಕೆಗೆ ತಿಳಿದಿರುತ್ತದೆ ಎಂದು ಮಲೈಕಾ ಕುರಿತು ಹೇಳಿದ್ದರು.

     

    View this post on Instagram

     

    A post shared by Bollywood Pap (@bollywoodpap)

    ಸಾಮಾಜಿಕ ಜಾಲತಾಣಗಳಲ್ಲೂ ಈ ಜೋಡಿ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅಧಿಕೃತವಾಗಿ ದಾಂಪತ್ಯಕ್ಕೆ ಕಾಲಿಟ್ಟಿಲ್ಲವಾದರೂ, ಇಬ್ಬರೂ ಜೊತೆಯಾಗಿಯೇ ಸುತ್ತಾಡುವುದನ್ನು ಒಪ್ಪಿಕೊಂಡಿದ್ದಾರೆ. ಬಾತುಕೋಳಿಯಂತೆ ನಡೆದ ಮಲೈಕಾ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಆಲಿಯಾ ಹಾಟ್ ಫಿಟ್ನೆಸ್ ಫೋಟೋ ವೈರಲ್ – ಬೆರಗಾದ ಕತ್ರಿನಾ

    ಮುಂಬೈ: ಬಾಲಿವುಡ್ ನಟಿ ಆಲಿಯಾ ಭಟ್ ಫಿಟ್ನೆಸ್ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಫೋಟೋದಲ್ಲಿ ಅಲಿಯಾ ಭಟ್ ಸ್ಪೋಟ್ಸ್ ಬ್ರಾ ಧರಿಸಿ ಅದಕ್ಕೆ ಮ್ಯಾಚ್ ಆಗುವಂತಹ ಟೈಟ್ಸ್ ತೊಟ್ಟು ಸೈಡ್ ಲುಕ್‍ನಲ್ಲಿ ಸಖತ್ ಹಾಟ್ ಆಗಿ ಪೋಸ್ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಆಲಿಯಾ ಭಟ್ ಸಾಮಾನ್ಯವಾಗಿ ತಮ್ಮ ದಿನಚರಿಯ ಫೋಟೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

    ಇದೀಗ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ 40 ದಿನದ ಫಿಟ್ನೆಸ್ ಚಾಲೆಂಜ್‍ನನ್ನು ಸ್ವೀಕರಿಸಿದ್ದು, ಅದರಲ್ಲಿ 20 ದಿನ ಪೂರೈಸಿದ್ದಾರೆ. ಹೀಗಾಗಿ ತಮ್ಮ ಫಿಟ್ನೆಸ್ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, 20 ಮುಗಿದಿದೆ, 20 ಇದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗೆ ನಟಿ ಕತ್ರಿನಾ ಕೈಫ್, ಮಲೈಕಾ ಆರೋರಾ ಕಾಮೆಂಟ್ ಮಾಡಿದ್ದು, ಉಹ್ ಉಹ್ ಎಂದು ಕತ್ರಿನಾ ಮಾಡಿರುವ ಕಾಮೆಂಟ್‍ಗೆ ಒಎಂಜಿ ನನಗೆ ಕತ್ರಿನಾರಿಂದ ಅನುಮೋದನೆ ಸಿಕ್ಕಿತು ಎಂದು ಆಲಿಯಾ ಭಟ್ ಮರು ಟ್ವೀಟ್ ಮಾಡಿದ್ದಾರೆ. ಇನ್ನೂ ನಟಿ ಮೈಲಕಾ ಅರೋರಾ ಬೆಂಕಿಯ ಎಮೋಜಿ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.

    ಸದ್ಯ ಆಲಿಯಾ ಭಟ್ ಹಾಗೂ ರಣಬೀರ್ ಸಿಂಗ್ ಬ್ರಹ್ಮಸ್ತ್ರ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಸಿನಿಮಾದ ಬಾಕಿ ಕೆಲಸಗಳು ಭರದಿಂದ ಸಾಗುತ್ತಿದೆ. ಅಲ್ಲದೇ ಟಾಲಿವುಡ್ ನಟ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್‍ಟಿಆರ್ ಅಭಿನಯಿಸುತ್ತಿರುವ ಆರ್‍ಆರ್‍ಆರ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಅಭಿನಯಿಸಿದ್ದು, ಈ ಎರಡು ಅಲಿಯಾ ಭಟ್ ಅಭಿನಯದ ಬಹುನೀರಿಕ್ಷಿತ ಸಿನಿಮಾವಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣಗಾಗಿ ಕನ್ನಡ ಕಲಿತ ಜಾಕ್ವೆಲಿನ್

     

    View this post on Instagram

     

    A post shared by Alia Bhatt ☀️ (@aliaabhatt)

  • ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಶಿಲ್ಪಾ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ – ಬಾಲಿವುಡ್ ಗಣ್ಯರಿಂದ ಶುಭಾಶಯಗಳ ಸುರಿಮಳೆ

    ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ಇಂದು 46ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆ ಬಾಲಿವುಡ್‍ನ ಖ್ಯಾತ ನಟಿಯರು ಸೇರಿದಂತೆ ಅನೇಕ ಗಣ್ಯರು ಸೋಶಿಯಲ್ ಮೀಡಿಯಾದಲ್ಲಿ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ವಿಶ್ ಮಾಡುತ್ತಿದ್ದಾರೆ.

    ಮೂಲತಃ ಕರ್ನಾಟಕದ ಕರಾವಳಿ ಮೂಲದವರೆ ಆಗಿದ್ದರೂ, ಶಿಲ್ಪಾ ಶೆಟ್ಟಿಯವರು ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹೆಚ್ಚು ಪ್ರಖ್ಯಾತಿ ಪಡೆದರು. ಸದ್ಯ ಮುಂಬೈನಲ್ಲಿ ಬದುಕು ಕಟ್ಟಿಕೊಂಡು, ಸುಂದರವಾದ ಕುಟುಂಬ ಹೊಂದಿರುವ ಶಿಲ್ಪಾ ಶೆಟ್ಟಿ ಎಷ್ಟೇ ವಯಸ್ಸಾದರೂ ಇಂದಿನ ನಟಿಯರಿಗೆ ತಾವೇನು ಕಡಿಮೆ ಇಲ್ಲ ಎಂಬಂತೆ ಫಿಟ್‍ನೆಸ್ ಮೈನ್‍ಟೆನ್ ಮಾಡಿದ್ದಾರೆ.

    ಜೂನ್ 8ರಂದು ನಟಿ ಶಿಲ್ಪಾಶೆಟ್ಟಿಯವರು 46ನೇ ವಸಂತಕ್ಕೆ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಬಾಲಿವುಡ್ ಸ್ಟಾರ್ ನಟಿ ಮಾಧುರಿ ದೀಕ್ಷಿತ್, ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ. ಸಕಾರಾತ್ಮಕ ಆಲೋಚನೆಗಳು ನಿಮ್ಮದಾಗಿರಲಿ ಎಂದು ಶುಭಹಾರೈಸುತ್ತೇನೆ. ನೀವು ಮತ್ತು ನಿಮ್ಮವರು ಕ್ಷೇಮವಾಗಿದ್ದೀರಾ ಎಂದು ಭಾವಿಸುತ್ತೇನೆ. ಫಿಟ್ ಹಾಗೂ ಅದ್ಭುತವಾಗಿರಿ ಎಂದು ವಿಶ್ ಮಾಡಿದ್ದಾರೆ. ಇದನ್ನು ಓದಿ:ರಶ್ಮಿಕಾ ಬಗ್ಗೆ ಕಮೆಂಟ್ ಮಾಡಿದವರ ಚಳಿ ಬಿಡಿಸಿದ ರಕ್ಷಿತ್ ಶೆಟ್ಟಿ

    ರವೀನಾ ಟಂಡನ್‍ರವರು ಹುಟ್ಟು ಹಬ್ಬದ ಶುಭಾಶಯಗಳು ಶಿಲ್ಪಾ ಶೆಟ್ಟಿ. ಲವ್ ಯೂ ಲಾಟ್. ಈ ದಿನ ಅದ್ಭುತವಾಗಿರಲಿ ಎಂದು ವಿಶ್ ಮಾಡಿದ್ದಾರೆ. ಜೊತೆಗೆ ಬಾಲಿವುಡ್ ನಟಿ ಮಲೈಕಾ ಅರೋರಾ, ನಿರೂಪಕ ಮನೀಷ್ ಪೌಲ್ ಸೇರಿದಂತೆ ಅನೇಕ ಮಂದಿ ಶುಭಾಶಯ ತಿಳಿಸಿದ್ದಾರೆ.

    ಸುಮಾರು 13 ವರ್ಷಗಳ ಬಳಿಕ ಶಿಲ್ಪಾಶೆಟ್ಟಿಯವರು ನಿಕ್ಕಾಮಾ ಸಿನಿಮಾದ ಮೂಲಕ ಮತ್ತೆ ಬಾಲಿವುಡ್‍ಗೆ ಕಮ್ ಬ್ಯಾಕ್ ಮಾಡಿದ್ದು, ಜೂನ್ 5 ರಂದು ಚಿತ್ರ ತೆರೆ ಕಾಣಬೇಕಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದನ್ನು ಓದಿ:ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?

  • ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಗೆಳೆಯ ಅರ್ಜುನ್ ನಂತರ ಮಲೈಕಾ ಅರೋರಾಗೆ ಕೊರೊನಾ ಪಾಸಿಟಿವ್

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಇಂದು ಬೆಳಗ್ಗೆ ಮಲೈಕಾ ಅವರ ಪ್ರಿಯಕರ ಅರ್ಜುನ್ ಕಪೂರ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಸ್ವತಃ ಅವರೇ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ದೃಢಪಡಿಸಿದ್ದರು. ಈಗ ಅರ್ಜುನ್ ಜೊತೆ ಇದ್ದ ಮಲೈಕಾ ಅರೋರಾ ಅವರಿಗೂ ಕೊರೊನಾ ವೈರಸ್ ದೃಢಪಟ್ಟಿದೆ.

    ಈಗ ಸಂಜೆ ಮಲೈಕಾ ಅರೋರಾ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಅವರ ಸಹೋದರಿ ಅಮೃತ ಅರೋರಾ ಅವರು ರಾಷ್ಟ್ರೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಲೈಕಾ ಆರೋರ ಇತ್ತೀಚೆಗೆ ಹಿಂದು ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗುವ ಇಂಡಿಯನ್ ಬೆಸ್ಟ್ ಡ್ಯಾನ್ಸರ್ ಎಂಬ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಇವರ ಜೊತೆ ನಟಿ ನೋರಾ ಫತೇಹಿಯವರು ಕೂಡ ಕಾಣಿಸಿಕೊಂಡಿದ್ದರು.

    ತನಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಇಂದು ಬೆಳಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿಕೊಂಡಿದ್ದ ಅರ್ಜುನ್ ಕಪೂರ್, ನನಗೆ ಕೊರೊನಾ ಸೋಂಕು ತಗುಲಿರೋದು ನಿಮಗೆ ತಿಳಿಸುವುದು ನನ್ನ ಕರ್ತವ್ಯ. ಸದ್ಯ ನಾನು ಆರೋಗ್ಯವಾಗಿದ್ದು, ಕೆಲ ಕೊರೊನ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಶನ್ ನಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ನಿಮ್ಮ ಬೆಂಬಲಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಆರೋಗ್ಯದ ಅಪ್‍ಡೇಟ್ ನೀಡುತ್ತಿರುತ್ತೇನೆ ಎಂದು ಬರೆದುಕೊಂಡಿದ್ದರು.

    ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ಅರ್ಜುನ್ ಕಪೂರ್ ಅವರ ತಂದೆ ಬೋನಿ ಕಪೂರ್ ಮತ್ತು ಅವರ ಮನೆಯ ಸಿಬ್ಬಂದಿಗೆ ಸಹ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಸದ್ಯ ಬೋನಿ ಕಪೂರ್ ಮತ್ತು ಅವರ ಮಕ್ಕಳಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಕೊರೊನಾದಿಂದ ಗುಣಮುಖರಾಗಿದ್ದಾರೆ. ನಂತರ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಮತ್ತು ಅವರ ಮಗಳಿಗೂ ಕೊರೊನಾ ವೈರಸ್ ತಗುಲಿತ್ತು.

  • ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾಮೆನ್‍ಗೆ ಮಲೈಕಾ ಸನ್ನೆ: ವಿಡಿಯೋ

    ಫೋಟೋ ಕ್ಲಿಕ್ಕಿಸುತ್ತಿದ್ದ ಕ್ಯಾಮೆರಾಮೆನ್‍ಗೆ ಮಲೈಕಾ ಸನ್ನೆ: ವಿಡಿಯೋ

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಫೋಟೋಗಳು ಹಾಗೂ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗೆಯೇ ಅವರು ಜಿಮ್‍ಗೆ ಹೋಗುವ ವೇಳೆ ಸೆರೆ ಹಿಡಿಯಲಾಗಿದ್ದ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ.

    ಮಲೈಕಾ ಅವರ ವಿಡಿಯೋವೊಂದು ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಲೈಕಾ ಕಾರಿನಿಂದ ಇಳಿದು ಜಿಮ್‍ಗೆ ಬೇಗ ಬೇಗ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಛಾಯಗ್ರಾಹಕರು ಅವರ ಫೋಟೋವನ್ನು ಕ್ಲಿಕ್ಕಿಸುತ್ತಿರುತ್ತಾರೆ. ಈ ವೇಳೆ ಮಲೈಕಾ ಹಿಂದೆ ತಿರುಗಿ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡುತ್ತಾರೆ.

     

    View this post on Instagram

     

    #malaikaarora snapped at divayoga today #viralbhayani @viralbhayani

    A post shared by Bollywood Pap (@bollywoodpap) on

    ಸದ್ಯ ವಿಶ್ವಾದ್ಯಂತ ಕೊರೊನಾ ವೈರಸ್ ಹರಡುತ್ತಿದೆ. ಭಾರತದಲ್ಲಿ ಕೊರೊನಾ ವೈರಸ್‍ಗೆ ಇಬ್ಬರು ಬಲಿಯಾಗಿದ್ದಾರೆ. ಹೀಗಿರುವಾಗ ಮಲೈಕಾ ಫೋಟೋಗ್ರಾಫರ್ ಗಳಿಗೆ ಮಾಸ್ಕ್ ಧರಿಸಿ ಎಂದು ಸನ್ನೆ ಮಾಡಿದ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.

    ಮಲೈಕಾ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅವರು ತಮ್ಮ ಪ್ರಿಯಕರ, ನಟ ಅರ್ಜುನ್ ಕಪೂರ್ ಅವರ ಕೈ ಹಿಡಿದುಕೊಂಡು ಹೋಗುತ್ತಿದ್ದಾರೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

     

    View this post on Instagram

     

    #arjunkapoor #malaikaarora

    A post shared by Anil Nalawade (@anil_nalawade) on

    ಸದ್ಯ ಮಲೈಕಾ ಈಗ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ ಕಾರ್ಯಕ್ರಮದಲ್ಲಿ ತೀರ್ಪುಗಾರ್ತಿ ಆಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಲೈಕಾ ಜೊತೆ ಕೊರಿಯೋಗ್ರಫರ್ ಗಳಾದ ಗೀತಾ ಕಪೂರ್ ಹಾಗೂ ಟೆರೆನ್ಸ್ ಲೂಯಿಸ್ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳಲಿದ್ದಾರೆ.

  • ಗರ್ಲ್ ಫ್ರೆಂಡ್ ಹೆಸರು ಬರ್ತಿದ್ದಂತೆ ಕಾಲ್ಕಿತ್ತ ಅರ್ಜುನ್ ಕಪೂರ್

    ಗರ್ಲ್ ಫ್ರೆಂಡ್ ಹೆಸರು ಬರ್ತಿದ್ದಂತೆ ಕಾಲ್ಕಿತ್ತ ಅರ್ಜುನ್ ಕಪೂರ್

    ಮುಂಬೈ: ಬಾಲಿವುಡ್ ನಟ ಅರ್ಜುನ್ ಕಪೂರ್ ತಮ್ಮ ಗರ್ಲ್ ಪ್ರೆಂಡ್ ಹೆಸರು ಕೇಳುತ್ತಿದ್ದಂತೆ ಕುಳಿತ ಜಾಗದಿಂದ ಎದ್ದು ಹೋಗಿದ್ದಾರೆ. ಈ ವಿಡಿಯೋವನ್ನು ಅರ್ಜುನ್ ಕಪೂರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

    ಭಾನುವರಾ ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿಡಿಯೋ ಆಪ್ಲೋಡ್ ಮಾಡಿಕೊಂಡಿರುವ ಅರ್ಜುನ್ ಕಪೂರ್, ತನ್ನ ಆಪ್ತ ಮಹಿಳೆಯರ ಬಗ್ಗೆ ಒಂದು ಪದದಲ್ಲಿ ಹೇಳುವ ಪ್ರಯತ್ನ ಮಾಡಿದ್ದಾರೆ. ಅಮ್ಮ, ಸೋದರಿಯರು, ತನ್ನ ಸಹಾಯಕಿಯರು, ಮಹಿಳಾ ಮ್ಯಾನೇಜರ್ ಹೀಗೆ ಎಲ್ಲರ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ಹೇಳಿ ಎಂದಾಗ ತುಟಿಯ ಮೇಲೆ ಬೆರಳಿಟ್ಟು ಶ್..! ಎಂದು ನಕ್ಕು ಹೋಗಿದ್ದಾರೆ.

    ಈ ವಿಡಿಯೋ ನೋಡಿದ ನೆಟ್ಟಿಗರು, ಈ ಪ್ರಶ್ನೆಗೆ ನಮಗೆ ಉತ್ತರ ತಿಳಿದಿದೆ. ನೀವು ಹೇಳುವುದು ಬೇಡ ಎಂದು ಪ್ರತಿಕ್ರಿಯಿಸಿದ್ರೆ, ಕೆಲವರು ಮಲೈಕಾ ಅರೋರಾಗೆ ಟ್ಯಾಗ್ ಮಾಡಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲು ಕದ್ದುಮುಚ್ಚಿ ಓಡಾಡುತ್ತಿದ್ದ ಜೋಡಿ ಸದ್ಯ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ಪರೋಕ್ಷವಾಗಿ ತಮ್ಮ ಪ್ರೀತಿಯನ್ನು ರಿವೀಲ್ ಮಾಡಿದ್ದಾರೆ. ಮಲೈಕಾ ಪತಿ ಅರ್ಬಾಜ್ ಖಾನ್ ನಿಂದ ವಿಚ್ಛೇದನ ಪಡೆದು ಮಗನೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಅರ್ಜುನ್ ಕಪೂರ್ ಗಿಂತ ಮಲೈಕಾ 10 ವರ್ಷ ಹಿರಿಯರಾಗಿದ್ದು, 17 ವರ್ಷದ ಮಗನಿದ್ದಾನೆ.

    https://www.instagram.com/p/B9dzhCWpSBC/

  • ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಲೈಕಾ ಟ್ರೋಲ್

    ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಮಲೈಕಾ ಟ್ರೋಲ್

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಾಕಿದ ಕೆಲವೇ ಗಂಟೆಗಳಲ್ಲಿ ಮಲೈಕಾ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.

    ಪೋಸ್ಟ್ ಮಾಡಿರುವ ಫೋಟೋದಲ್ಲಿ ಮಲೈಕಾ ಹೆಚ್ಚು ಮೇಕಪ್ ಮಾಡಿಕೊಂಡಿದ್ದಾರೆ. ಇದು ಕೆಲವರಿಗೆ ಇಷ್ಟವಾದರೆ ಮತ್ತೆ ಕೆಲವರಿಗೆ ಅವರ ಮೇಕಪ್ ಇಷ್ಟವಾಗಿಲ್ಲ. ಹಾಗಾಗಿ ಅವರು ಮಲೈಕಾರನ್ನು ಸಾಕಷ್ಟು ಟ್ರೋಲ್ ಮಾಡುತ್ತಿದ್ದಾರೆ.

    ಮಲೈಕಾ ಅವರ ಪೋಸ್ಟ್ ನೋಡಿ ಕೆಲವರು, ನಿಮ್ಮ ಮುಖದ ಮೇಲೆ ಮೇಕಪ್ ಇದೆಯಾ ಅಥವಾ ನೀವು ಮೇಕಪ್ ಮೇಲೆ ಇದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಮೇಕಪ್ ಫೌಂಡೇಶನ್ ಹೆಚ್ಚಾಗಿದೆ ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ನೀವು ಮೇಕಪ್ ಇಲ್ಲದೆಯೇ ಸುಂದರವಾಗಿ ಕಾಣುತ್ತೀರಾ ಎಂದು ಕಮೆಂಟ್ ಮಾಡಿದ್ದಾರೆ.

    ಇತ್ತೀಚೆಗೆ ಮಲೈಕಾ ಅವರು ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ವೇಳೆ ಅವರು ಡೀಪ್ ನೆಕ್ ಡ್ರೆಸ್ ಧರಿಸಿದ್ದರು. ಬಳಿಕ ಕ್ಯಾಮೆರಾ ಮುಂದೆ ನಿಂತು ಫೋಟೋಗೆ ಪೋಸ್ ಕೊಡುವಾಗ ಅವರು ಧರಿಸಿದ್ದ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ.

    ಈ ನಡುವೆ ಮಲೈಕಾ ಸಾಕಷ್ಟು ಸುದ್ದಿ ಆಗುತ್ತಿದ್ದಾರೆ. ಕೆಲವೊಮ್ಮೆ ಫಿಟ್ನೆಸ್ ವಿಷಯಕ್ಕಾಗಿ ಸುದ್ದಿಯಾದರೆ, ಕೆಲವು ಬಾರಿ ತಮ್ಮ ಪ್ರೀತಿ ವಿಷಯದಿಂದ ಸುದ್ದಿ ಆಗಿರುತ್ತಾರೆ. ಮಲೈಕಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿರುತ್ತಾರೆ. ಅಲ್ಲದೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

  • ಕ್ಯಾಮೆರಾಗೆ ಪೋಸ್ ಕೊಡೋ ಭರದಲ್ಲಿ ಜಾರಿತು ಮಲೈಕಾ ಡ್ರೆಸ್

    ಕ್ಯಾಮೆರಾಗೆ ಪೋಸ್ ಕೊಡೋ ಭರದಲ್ಲಿ ಜಾರಿತು ಮಲೈಕಾ ಡ್ರೆಸ್

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಕ್ಯಾಮೆರಾಗೆ ಪೋಸ್ ಕೊಡುವಾಗ ಡ್ರೆಸ್ ಜಾರಿ ಮುಜುಗರಕ್ಕೊಳಗಾಗಿದ್ದಾರೆ.

    ಇತ್ತೀಚೆಗೆ ಮಲೈಕಾ ಅವರು ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್ ಅವರ ಪತ್ನಿ ಗೌರಿ ಖಾನ್ ಕಾಸ್ಟ್ಯೂಮ್ ಡಿಸೈನ್ ಮಾಡಿರುವ ಶಾಪ್ ಲಾಂಚ್ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಕಾರ್ಯಕ್ರಮಕ್ಕೆ ಮಲೈಕಾ ಡೀಪ್ ನೆಕ್ ಡ್ರೆಸ್ ಧರಿಸಿದ್ದರು.

    ಮಲೈಕಾ ಕಾರ್ಯಕ್ರಮಕ್ಕೆ ಆಗಮಿಸಿದಾಗ ಕ್ಯಾಮೆರಾ ಮುಂದೆ ನಿಂತು ಫೋಟೋಗೆ ಪೋಸ್ ಕೊಡುತ್ತಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೆಸ್ ಮತ್ತಷ್ಟು ಕೆಳಗೆ ಜಾರಿದೆ. ಡ್ರೆಸ್ ಜಾರುತ್ತಿದೆ ಎಂದು ಗೊತ್ತಾದ ತಕ್ಷಣ ಮಲೈಕಾ ಅಲ್ಲಿಂದ ಬಂದಿದ್ದಾರೆ. ಮಲೈಕಾ ಅವರ ಉಡುಪು ಜಾರಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

    ಇತ್ತೀಚೆಗೆ ಮಲೈಕಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಈ ಶರ್ಟ್‍ಗೆ ಅವರು ಪ್ಯಾಂಟ್ ಹಾಕದೆ ಬೂಟ್ಸ್ ಧರಿಸಿ ಅದಕ್ಕೆ ಹ್ಯಾಟ್ ಧರಿಸಿದ್ದರು. ಮಲೈಕಾರ ಈ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಕೆಟ್ಟದಾಗಿ ಕಮೆಂಟ್ಸ್ ಮಾಡಲು ಶುರು ಮಾಡಿದ್ದರು.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ಕೆಲವರು, “ಮಲೈಕಾ ಪ್ಯಾಂಟ್ ಧರಿಸುವುದನ್ನು ಏಕೆ ಮರೆತು ಹೋಗುತ್ತಾರೆ” ಎಂದು ಕಮೆಂಟ್ ಮಾಡಿದ್ದರು. ಮತ್ತೆ ಕೆಲವರು, “ಮಲೈಕಾ ಅವರ ಮುಖದಲ್ಲಿ ಹೆಚ್ಚಾಗುತ್ತಿರುವ ಅವರ ವಯಸ್ಸು ಕಾಣಿಸುತ್ತಿದೆ”. ಇನ್ನು ಕೆಲವರು ಮಲೈಕಾರಿಗೆ ವಯಸ್ಸಿಗೆ ತಕ್ಕಂತೆ ಉಡುಪು ಹಾಕಿ ಎಂದು ಸಲಹೆ ನೀಡಿದ್ದರು.

    1998ರಲ್ಲಿ ಮಲೈಕಾ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಪ್ರೀತಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಸಂದರ್ಶನದಲ್ಲಿ ಪರಸ್ಪರ ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

  • ಶರ್ಟ್ ಧರಿಸಿ ಪ್ಯಾಂಟ್ ಹಾಕದೆ ಮನೆಯಿಂದ ಹೊರ ಬಂದ ಮಲೈಕಾ

    ಶರ್ಟ್ ಧರಿಸಿ ಪ್ಯಾಂಟ್ ಹಾಕದೆ ಮನೆಯಿಂದ ಹೊರ ಬಂದ ಮಲೈಕಾ

    ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಶರ್ಟ್ ಹಾಕಿ ಅದಕ್ಕೆ ಪ್ಯಾಂಟ್ ಧರಿಸದೆ ಓಡಾಡುತ್ತಿದ್ದ ವಿಡಿಯೋ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಇದೀಗ ಅದು ವೈರಲ್ ಆಗುತ್ತಿದೆ.

    ಮಲೈಕಾ ಭಾನುವಾರ ತಮ್ಮ ಸಹೋದರಿ ಅಮೃತ ಅರೋರಾ ಅವರ ಮನೆಯ ಹೊರಗೆ ಕಾಣಿಸಿಕೊಂಡಿದ್ದರು. ಈ ವೇಳೆ ಮಲೈಕಾ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಈ ಶರ್ಟ್ ಗೆ ಅವರು ಪ್ಯಾಂಟ್ ಹಾಕದೆ ಬೂಟ್ಸ್ ಧರಿಸಿ ಅದಕ್ಕೆ ಹ್ಯಾಟ್ ಧರಿಸಿದ್ದರು. ಮಲೈಕಾರ ಈ ಲುಕ್ ಅವರ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅವರು ಕೆಟ್ಟದಾಗಿ ಕಮೆಂಟ್ಸ್ ಮಾಡಲು ಶುರು ಮಾಡಿದ್ದರು.

    ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೆಲವರು, “ಮಲೈಕಾ ಪ್ಯಾಂಟ್ ಧರಿಸುವುದನ್ನು ಏಕೆ ಮರೆತು ಹೋಗುತ್ತಾರೆ” ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, “ಮಲೈಕಾ ಅವರ ಮುಖದಲ್ಲಿ ಹೆಚ್ಚಾಗುತ್ತಿರುವ ಅವರ ವಯಸ್ಸು ಕಾಣಿಸುತ್ತಿದೆ”. ಅಲ್ಲದೆ ಇನ್ನು ಕೆಲವರು ಮಲೈಕಾರಿಗೆ ವಯಸ್ಸಿಗೆ ತಕ್ಕಂತೆ ಉಡುಪು ಹಾಕಿ ಎಂದು ಸಲಹೆ ನೀಡಿದ್ದಾರೆ.

    1998ರಲ್ಲಿ ಮಲೈಕಾ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಪ್ರೀತಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಸಂದರ್ಶನದಲ್ಲಿ ಪರಸ್ಪರ ಬಹಿರಂಗವಾಗಿ ಮಾತನಾಡುತ್ತಿರುತ್ತಾರೆ.

  • 18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋ ಹಂಚಿಕೊಂಡ ಮಲೈಕಾ

    18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋ ಹಂಚಿಕೊಂಡ ಮಲೈಕಾ

    ಮುಂಬೈ: ಬಾಲಿವುಡ್ ಹಾಟ್ ಬೆಡಗಿ ಮಲೈಕಾ ಅರೋರಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ 18 ವರ್ಷದ ಹಿಂದಿನ ಟಾಪ್‍ಲೆಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಮಲೈಕಾ ಅವರು ತಮ್ಮ ಇನ್‍ಸ್ಟಾಗ್ರಾಂನಲ್ಲಿ ವರ್ಕೌಟ್ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಈಗ ಮಲೈಕಾ ಅವರು 18 ವರ್ಷದ ಹಿಂದಿನ ಹಳೆಯ ಬಿಕಿನಿ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಅವರು ತುಂಬಾನೇ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.

    18 ವರ್ಷದ ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ ಮಲೈಕಾ ಅವರು ಸಮುದ್ರದ ಅಲೆಗಳನ್ನು ಆನಂದಿಸುತ್ತಿರುವುದು ಕಂಡು ಬಂದಿದೆ. ಅಲ್ಲದೆ ಮಲೈಕಾ ಅವರು ಬಿಳಿ ಬಣ್ಣದ ಬಿಕಿನಿ ಧರಿಸಿ ಫೋಟೋಗೆ ಬ್ಯಾಕ್ ಪೋಸ್ ನೀಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

     

    View this post on Instagram

     

    #Repost @farrokhchothia with @get_repost ・・・ With the eternal Malaika, #archives

    A post shared by Malaika Arora (@malaikaaroraofficial) on

    ಮಲೈಕಾ ಅವರ ಈ ಫೋಟೋಗೆ ಅಭಿಮಾನಿಗಳು ಸೇರಿದಂತೆ ಕಲಾವಿದರು ಕೂಡ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಟಿ ಇಲಿಯಾನಾ ಡಿಕ್ರೂಸ್ ಅವರು ಮಲೈಕಾ ಅವರ ಪೋಸ್ಟ್ ಗೆ ಬೆಂಕಿ ಎಮೋಜಿ ಹಾಕಿದ್ದಾರೆ. ಅಲ್ಲದೆ ನಟ ಅರ್ಜುನ್ ರಾಂಪಾಲ್ ಅವರ ಗೆಳತಿ ಗೈಬ್ರಿಲಾ ದೇಮಿತ್ರಿಯಾದ್ ಅವರು ಕಮೆಂಟ್ ಮಾಡಿದ್ದಾರೆ.

    1998ರಲ್ಲಿ ಮಲೈಕಾ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಈ ಜೋಡಿಗೆ ಒಂದು ಮಗುವಿದೆ. ಆದರೆ 2017ರಲ್ಲಿ ಮಲೈಕಾ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು, ಬೇರೆಯಾಗಿದ್ದರು. ಈಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಪ್ರೀತಿಸುತ್ತಿದ್ದಾರೆ.