Tag: Malai Mahadeshwara

  • ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

    ವಿಷ ಪ್ರಾಷನದಿಂದಲೇ 5 ಹುಲಿಗಳು ಸಾವು: ಖಚಿತ ಪಡಿಸಿದ ಸಿಸಿಎಫ್ ಹೀರಾಲಾಲ್

    ಚಾಮರಾಜನಗರ: ಮಲೆಮಹದೇಶ್ವರ ವನ್ಯಧಾಮದಲ್ಲಿ (Malai Mahadeshwara Wildlife Sanctuary) 5 ಹುಲಿಗಳು (Tiger) ವಿಷ ಪ್ರಾಷನದಿಂದಲೇ ಮೃತ ಪಟ್ಟಿವೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹೇಳಿದ್ದಾರೆ.

    ತಾಯಿ ಹುಲಿಗೆ 8 ವರ್ಷ ಆಗಿದ್ದರೆ ಮರಿ ಹುಲಿಗಳಿಗೆ 10 ತಿಂಗಳು ಆಗಿತ್ತು. ಹಸುವಿನಲ್ಲಿರುವ ವಿಷದ ಮಾಂಸ ತಿಂದು ಹುಲಿಗಳು ಮೃತ ಪಟ್ಟಿದೆ. ಯಾವ ಪ್ರಮಾಣದ ವಿಷ? ಹುಲಿ ಭೇಟೆಯಾಡಿದ ಮೇಲೆ ಹಸುವಿಗೆ ವಿಷ ಹಾಕಲಾಗಿದ್ಯಾ? ಅಥವಾ ಮೊದಲೇ ಹಸುವಿಗೆ ವಿಷ ಪ್ರಾಷನ ಮಾಡಲಾಗಿತ್ತಾ ಎಂಬುದು ಲ್ಯಾಬ್ ವರದಿ ಮೂಲಕ ಗೊತ್ತಾಗಲಿದೆ ಎಂದು ತಿಳಿಸಿದರು.  ಇದನ್ನೂ ಓದಿ: ಚಾ.ನಗರ| ಹುಲಿಗಳು ಸತ್ತ 10 ಹೆಜ್ಜೆ ದೂರದಲ್ಲಿಯೇ ಹಸು ಕಳೇಬರ ಪತ್ತೆ- ವಿಷಪ್ರಾಶನ ಶಂಕೆ

     

    ಹುಲಿ ಹಸುವಿನ ಹಿಂಬಂದಿಯಿಂದ  ದಾಳಿ ಮಾಡಿದೆ. ಹುಲಿ ಮತ್ತು ಹಸುವಿನ ಎಲ್ಲಾ ಅಂಗಾಂಗಳನ್ನ ಲ್ಯಾಬ್ ಕಳುಹಿಸಲಾಗಿದೆ. ಮೂರು ದಿನದ ಹಿಂದೆ ಹುಲಿ ಸಾವನ್ನಪ್ಪಿದ್ದು ಇದಕ್ಕೆ ಯಾರು ಹೊಣೆಗಾರರು ಎಂಬುದನ್ನ ಇಲಾಖಾ ಮಟ್ಟದಲ್ಲಿ ತನಿಖೆ ಮಾಡುತ್ತೇವೆ ಎಂದರು.

    ವಾಚರ್ ಗಳಿಗೆ ಸಂಬಳ ತಡವಾಗಿದೆ ಎಂಬುದಕ್ಕೆ ಗಸ್ತು ಮಾಡಿಲ್ಲ ಎಂಬ ಆರೋಪಗಳು ಇವೆ. ಎಲ್ಲದರ ಬಗ್ಗೆ ತನಿಖೆ ಮಾಡುತ್ತೇವೆ. ಹಸು ಯಾರದ್ದು ಎಂಬುದರ ಬಗ್ಗೆಯೂ ತನಿಖೆ ಮಾಡುತ್ತಿದ್ದೇವೆ. ಈ ಹಸು ತಮಿಳುನಾಡಿನಿಂದ ಬಂದಿರುವುದಾ ಅಥವಾ ಸ್ಥಳೀಯರದ್ದ ಎಂಬುದರ ಬಗ್ಗೆ ತನಿಖೆಯಾಗುತ್ತಿದೆ ಎಂದು ವಿವರಿಸಿದರು.

  • ಸೆಲ್ಫಿ ಹುಚ್ಚಿಗೆ ಬಿದ್ದು ನೀರುಪಾಲಾದ ವಿದ್ಯಾರ್ಥಿ!

    ಸೆಲ್ಫಿ ಹುಚ್ಚಿಗೆ ಬಿದ್ದು ನೀರುಪಾಲಾದ ವಿದ್ಯಾರ್ಥಿ!

    ಚಾಮರಾಜನಗರ: ಸೆಲ್ಫಿ ಹುಚ್ಚಿಗೆ ವಿದ್ಯಾರ್ಥಿಯೊಬ್ಬ ಫೋಟೋ ಕ್ಲಿಕ್ಕಿಸಿಕೊಳ್ಳುವ ವೇಳೆ ಹೊಗೆನಕಲ್ ಜಲಪಾತದಲ್ಲಿ ಬಿದ್ದು ನೀರುಪಾಲಾಗಿದ್ದಾನೆ.

    ಮೈಸೂರು ಮೂಲದ ಸಂಗಮೇಶ್, ಮಗ ಉಮಾಶಂಕರ್(19) ನರ್ಸಿಂಗ್ ವಿದ್ಯಾರ್ಥಿ ಮೃತ ದುರ್ದೈವಿ. ಈತ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಅವರೊಟ್ಟಿವೆ ರಜೆಗೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತಕ್ಕೆ ತೆರಳಿದ್ದಾರೆ. ಇದನ್ನೂ ಓದಿ: ಪತ್ನಿ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣು

    ಈ ವೇಳೆ ಸೆಲ್ಫಿ ಹುಚ್ಚಿನಿಂದಾಗಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಜಲಪಾತದ ಬಳಿ ತೆರಳಿದ್ದ ಉಮಾಶಂಕರ್ ಕಾಲುಜಾರಿ ನೀರುಪಾಲಾಗಿದ್ದಾನೆ.

    ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್ ಸ್ನೇಹಿತರು ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿದ್ದಾನೆ. ಆಗ ಸ್ನೇಹಿತರನ್ನು ಫೋಟೋ ತೆಗೆಯುವಂತೆ ಹೇಳಿದ್ದಾನೆ. ಸ್ನೇಹಿತರು ಫೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲ್ಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ಇದನ್ನೂ ಓದಿ: 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

    ಮಲೆ ಮಹದೇಶ್ವರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಮಾದೇಶ್ವರನ ಉತ್ಸವ ಮೂರ್ತಿ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆ

    ಮಾದೇಶ್ವರನ ಉತ್ಸವ ಮೂರ್ತಿ ಮೇಲಿದ್ದ ಚಿನ್ನದ ಕರಡಿಗೆ ನಾಪತ್ತೆ

    ಚಾಮರಾಜನಗರ: ಉತ್ಸವಮೂರ್ತಿ ಮೇಲಿದ್ದ ಮಲೈ ಮಹದೇಶ್ವರನ ಚಿನ್ನದ ಕರಡಿಗೆ ನಾಪತ್ತೆಯಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೈ ಮಹದೇಶ್ವರಬೆಟ್ಟದಲ್ಲಿ ಘಟನೆ ನಡೆದಿದೆ. ಕರಡಿಗೆ ಸರದಿ ಅರ್ಚಕರ ಸುಪರ್ದಿನಲ್ಲಿದ್ದಲ್ಲಿತ್ತು. ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಒಡವೆಯಾಗಿದೆ. ನಾಪತ್ತೆ ಪ್ರಕರಣ ಬೆಳಕಿಗೆ ಬಂದರೂ ಕೂಡ ಅಧಿಕಾರಿಗಳು ಮೌನ ವಹಿಸಿದ್ದಾರೆ. ಚಿನ್ನದ ಕರಡಿಗೆ ಕಾಣೆಯಾಗಿ ಐದಾರು ದಿನ ಕಳೆದರೂ ದೂರು ದಾಖಲಾಗಿಲ್ಲ.

    ಅರ್ಚಕರ ಗುಂಪುಗಳ ನಡುವಿನ ಮುಸುಕಿನ ಗುದ್ದಾಟದ ಫಲ ಚಿನ್ನದ ಕರಡಿಗೆಯೇ ನಾಪತ್ತೆಯಾಗಿದೆ. ಅರ್ಚಕರಲ್ಲೇ ಮೂರು ಗುಂಪುಗಳಿದ್ದು, ಅರ್ಚಕರ ಗುಂಪುಗಳ ನಡುವೆ ಒಳಗೊಳಗೆ ವೈಮನಸ್ಯ ಏರ್ಪಟ್ಟಿದೆ. ಒಂದು ಗುಂಪಿಗೆ ಕೆಟ್ಟ ಹೆಸರು ತರಲು ಮತ್ತೊಂದು ಗುಂಪು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಚಿನ್ನದ ಕರಡಿಗೆಯನ್ನು ಹುಂಡಿಗೆ ಹಾಕಿರಬಹುದೆಂಬ ಶಂಕೆ ಕೂಡ ವ್ಯಕ್ತವಾಗಿದೆ.

     

    ಇಂದು ನಡೆಯಲಿರುವ ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣ ಮುಚ್ಚಿಹಾಕಲು ಯತ್ನ ನಡೆದಿದೆ. ಇಲ್ಲವೇ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣಕ್ಕೆ ಇತಿ ಶ್ರೀ ಹಾಡಲೂ ಸಹ ನಿರ್ಧರಿಸಲಾಗಿದೆ ಎನ್ನಲಾಗ್ತಿದೆ. ಇಂದು ಚಿನ್ನದ ಕರಡಿಗೆ ನಾಪತ್ತೆಯಾಗಿದೆ. ನಾಳೆ ಇತರೆ ಚಿನ್ನದ ಒಡವೆ ನಾಪತ್ತೆಯಾದರೆ ಯಾರು ಜವಾಬ್ದಾರರೆಂದು ಸಾರ್ವಜನಿಕರ ಪ್ರಶ್ನಿಸುತ್ತಿದ್ದಾರೆ. ಹುಂಡಿ ಎಣಿಕೆ ವೇಳೆ ಕರಡಿಗೆ ಸಿಗುತ್ತಾ? ಇಲ್ಲವೇ ಯಾರಾದರೂ ಕದ್ದಿದ್ದಾರಾ? ಅವರ ವಿರುದ್ಧ ಕ್ರಮವಾಗುತ್ತಾ ಅನ್ನೋದ್ನ ಕಾದುನೋಡಬೇಕಾಗಿದೆ.

  • ಸೂರ್ಯ ಗ್ರಹಣದ ವೇಳೆಯೂ ಭಕ್ತರಿಗೆ ಮಲೆ ಮಹದೇಶ್ವರ ದರ್ಶನ

    ಸೂರ್ಯ ಗ್ರಹಣದ ವೇಳೆಯೂ ಭಕ್ತರಿಗೆ ಮಲೆ ಮಹದೇಶ್ವರ ದರ್ಶನ

    – ತಟ್ಟಲ್ಲ ಗ್ರಹಣದ ಎಫೆಕ್ಟ್

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಲೆ ಮಹದೇಶ್ವರನಿಗೆ ಈ ಸೂರ್ಯ ಗ್ರಹಣದ ಎಪೆಕ್ಟ್ ತಟ್ಟಲ್ಲ. ಎಂದಿನಂತೆ ಗ್ರಹಣದ ವೇಳೆಯೂ ಕೂಡ ದೇವಾಲಯ ಬಾಗಿಲು ತೆರೆಯಲಿದ್ದು ಭಕ್ತರು ದೇವರ ದರ್ಶನ ಮಾಡಬಹುದಾಗಿದೆ.

    ಬೆಳಗ್ಗೆ ದೇವಾಲಯ ಬಾಗಿಲು ತೆರೆಯಲಿದ್ದು, ವಿಶೇಷ ಪೂಜೆ ಜರುಗಲಿದೆ. ದೇವಾಲಯದ ಪೂಜೆಯ ನಂತರ ಪ್ರತಿನಿತ್ಯದಂತೆ ಗ್ರಹಣದ ವೇಳೆಯೂ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯಬಹುದು.

    ಗ್ರಹಣದ ವೇಳೆ ರಾಜ್ಯದ ಬಹುತೇಕ ದೇವಾಲಯಗಳು ಬಂದ್ ಆಗಲಿದ್ದು, ಆದರೆ ಮಾದಪ್ಪನ ಸನ್ನಿದಾನದಲ್ಲಿ ದರ್ಶನದ ಜೊತೆಗೆ ದಾಸೋಹಕ್ಕೂ ಕೂಡ ಯಾವುದೇ ಬ್ರೇಕ್ ಬಿದ್ದಿಲ್ಲ. ಎಂದಿನಂತೆ ಭಕ್ತರೂ ಬಂದು ದೇವರ ದರ್ಶನ ಪಡೆಯಬಹುದು ಎಂದು ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಮಾಹಿತಿ ನೀಡಿದ್ದಾರೆ. ಮಲೆ ಮಹವೇಶ್ವರ ದೇವಾಲಯಕ್ಕೆ ಗ್ರಹಣ ಪ್ರಭಾವ ಇರುವುದಿಲ್ಲ. ಇದುವರೆಗೂ ಯಾವುದೇ ಗ್ರಹಣದ ಸಂದರ್ಭದಲ್ಲೂ ದೇವಾಲಯಕ್ಕೆ ಬಾಗಿಲು ಹಾಕಿಲ್ಲ. ಮುಂಜಾನೆಯೇ ದೇವರಿಗೆ ಪೂಜೆ ನಡೆಯುವುದರಿಂದ ಭಕ್ತರು ದೇವರ ದರ್ಶನ ಮಾಡಬಹುದಾಗಿದೆ. ಆದರೆ ಆ ಬಳಿಕ ಯಾವುದೇ ಪೂಜಾ ಕಾರ್ಯ ಜರುಗುವುದಿಲ್ಲ ಎಂಬ ಮಾಹಿತಿ ಲಭಿಸಿದೆ.