Tag: Makeup Man

  • ಚಂದನವನದ ಹಿರಿಯ ಮೇಕಪ್‌ ಕಲಾವಿದ ಕೇಶವಣ್ಣ ನಿಧನ

    ಚಂದನವನದ ಹಿರಿಯ ಮೇಕಪ್‌ ಕಲಾವಿದ ಕೇಶವಣ್ಣ ನಿಧನ

    ಮೈಸೂರು: ಸ್ಯಾಂಡಲ್‍ವುಡ್ ಹಿರಿಯ ಮೇಕಪ್ ಮ್ಯಾನ್ ಎಂ.ಎಸ್. ಕೇಶವಣ್ಣ ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಶವಣ್ಣ ಅವರು ಕಳೆದ ಎರಡು ದಿನಗಳಿಂದ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಇಂದು ಮೈಸೂರಿನಲ್ಲಿ ಕೇಶವಣ್ಣ ಅವರ ಅಂತ್ಯ ನೆರೆವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

    25-30 ವರ್ಷಗಳ ಕಾಲ ರಾಜ್‍ಕುಮಾರ್ ಅವರ ಕಂಪನಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಸೇವೆ ಸಲ್ಲಿಸಿದ ಕೇಶವಣ್ಣ ಅವರು, ಮೊದಲ ಬಾರಿಗೆ ಹಾಸ್ಯ ಕಲಾವಿದ ನರಸಿಂಹ ರಾಜು ಅವಿಗೆ ಮೇಕಪ್ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ರಾಜ್‍ಕುಮಾರ್, ರಜನಿಕಾಂತ್, ಅಂಬರೀಷ್, ಪುನೀತ್ ರಾಜ್ ಕುಮಾರ್, ಅನಂತ್ ನಾಗ್, ಶಿವರಾಜ್ ಕುಮಾರ್ ಸೇರಿದಂತೆ ಹಲವಾರು ಸ್ಟಾರ್ ನಟರಿಗೆ ಮೇಕಪ್ ಮಾಡಿದ್ದಾರೆ. ಅಲ್ಲದೇ ಪೃಥ್ವಿ ರಾಜ್ ಕಪೂರ್, ಬಾಲಣ್ಣ, ಉದಯ ಕುಮಾರ್, ವಜ್ರಮುನಿ ಸೇರಿದಂತೆ ಅನೇಕ ಕಲಾವಿದರಿಗೆ ಮೇಕಪ್ ಮಾಡಿದ್ದಾರೆ.  ಇದನ್ನೂ ಓದಿ: ದಿಯಾ ಖ್ಯಾತಿಯ ಪೃಥ್ವಿ ಅಂಬಾರ್‌ಗೆ ಮಾತೃ ವಿಯೋಗ

    ಅಂದಿನ ಸೂಪರ್ ಹಿಟ್ ಸಿನಿಮಾ ನಾ ನಿನ್ನ ಬಿಡಲಾರೆ ಚಿತ್ರದಲ್ಲಿ ನಟ ಅನಂತ್ ನಾಗ್ ಅವರಿಗೆ ದೆವ್ವದ ಮೇಕಪ್ ಅನ್ನು ಕೇಶವಣ್ಣ ಅವರು ಮಾಡಿದ್ದರು. ಈ ಸಿನಿಮಾದಲ್ಲಿ ಅನಂತ್ ನಾಗ್ ಅವರ ಲುಕ್ ನೋಡಿ ಜನ ಭಯಗೊಂಡಿದ್ದರು. ಕೇಶವಣ್ಣ ಅವರ ಮಾಡಿದ್ದ ಮೇಕಪ್‍ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ಗಂಧದ ಗುಡಿ ರಿಲೀಸ್ ಡೇಟ್ ಘೋಷಣೆ : ಅಕ್ಟೋಬರ್ 28ಕ್ಕೆ ತೆರೆಗೆ

    ಸಾಕ್ಷಾತ್ಕಾರ, ಹುಲಿಯ ಹಾಲಿನ ಮೇವು, ಮಯೂರ, ಶಾಂತಿ ಕ್ರಾಂತಿ, ಸಂಗೊಳ್ಳಿ ರಾಯಣ್ಣ ಮೊದಲಾದ ಚಿತ್ರಗಳಲ್ಲಿ ಕೇಶವಣ್ಣ ಕೆಲಸ ಮಾಡಿದ್ದು, ಕೊನೆಯದಾಗಿ ಕುರಕ್ಷೇತ್ರ ಸಿನಿಮಾದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ನಟ ಅಜಯ್‍ರಾವ್ ಮೇಕಪ್ ಮ್ಯಾನ್ ಕೊರೊನಾಗೆ ಬಲಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಅಜಯ್‍ರಾವ್ ಅವರ ಮೇಕಪ್ ಮ್ಯಾನ್ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕನಸಿನ ಸಿನಿಮಾ ತೆರೆಗೆ ಬರೋ ಮುನ್ನವೇ ನಿರ್ದೇಶಕ ಸಾವು

    ಜಯ್‍ರಾಮ್ ನನ್ನ ಪರ್ಸನಲ್ ಮೇಕಪ್ ಮ್ಯಾನ್ ಆಗಿದ್ದರು. ಕಳೆದ 11 ವರ್ಷದಗಳಿಂದ ನನ್ನ ಜೊತೆಗೆ ಇದ್ದರು. ಇಂದು ಕೊರೊನಾ ಸೋಂಕಿನಿಂದ ಸಾವನ್ನಪಿದ್ದಾರೆ ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಜಯ್‍ರಾವ್ ಹಂಚಿಕೊಂಡು ಬೇಸರವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಅಣ್ಣಾವ್ರ ಯೋಗ ಗುರು ಹೊನ್ನಪ್ಪ ಫಕೀರಪ್ಪ ನಾಯ್ಕರ್ ಇನ್ನಿಲ್ಲ

    ಮಹಾಮಾರಿ ಕೊರೊನಾ ವೈರಸ್‍ಗೆ ಸಾಮಾನ್ಯ ಜನರೂ ಸೇರಿದಂತೆ ಹಲವಾರು ಮಂದಿ ಸೆಲೆಬ್ರಿಟಿಗಳು ಕೂಡ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತೆಯೇ ಡಾ. ರಾಜ್ ಕುಮಾರ್ ಅವರ ಯೋಗ ಗುರು ಹೊನ್ನಪ್ಪ ಫಕೀರಪ್ಪ ಕೂಡ ಕೋವಿಡ್ 19 ನಿಂದ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಸ್ಯಾಂಡಲ್‍ವುಡ್‍ನ ತಾರೆಯರು ಅವರ ಆಪ್ತರನ್ನು ಕಳೆದುಕೊಂಡಿದ್ದಾರೆ. ನಿರ್ದೇಶಕ ಅಭಿರಾಮ್, ಹಿರಿಯ ನಟ ಶಂಖನಾದ ಅರವಿಂದ್ ಹಾಗೂ ನಿರ್ದೇಶಕ ರೇಣುಕಾ ಶರ್ಮಾ ಸೇರಿದಂತೆ ಹೀಗೆ ಹಲವು ಸೆಲೆಬ್ರಿಟಿ ಸ್ಟಾರ್‌ಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಹಾಗೂ ತಮ್ಮವರನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಯಾವ ಅಕ್ಷರದಿಂದ ನೊಂದವರ ಮನಸ್ಸಿಗೆ ಸಾಂತ್ವನ ಹೇಳಲಿ: ಜಗ್ಗೇಶ್

    ಭಾರತದಲ್ಲಿ ಕಳೆದ 19 ದಿನಗಳಿಂದ ಸೋಂಕು ಇಳಿಮುಖವಾಗುತ್ತಿದ್ದು, ಮಂಗಳವಾರ 1,27,510 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 51 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಈ ಅವಧಿಯಲ್ಲಿ 2,795 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,81,75,044ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,31,895ಕ್ಕೆ ತಲುಪಿದೆ.

  • ನಟ ದರ್ಶನ್ ಮೇಕಪ್ ಮ್ಯಾನ್ ಹೃದಯಾಘಾತದಿಂದ ಸಾವು

    ನಟ ದರ್ಶನ್ ಮೇಕಪ್ ಮ್ಯಾನ್ ಹೃದಯಾಘಾತದಿಂದ ಸಾವು

    – ಕಂಬನಿ ಮಿಡಿದ ದಾಸ, ರಾಬರ್ಟ್ ತಂಡ

    ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಕಪ್ ಮ್ಯಾನ್ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.

    ಈ ಬಗ್ಗೆ ಸ್ವತಃ ನಟ ದರ್ಶನ್ ಅವರೇ ಟ್ವೀಟ್ ಮಾಡಿದ್ದು, ಎರಡು ದಶಕಗಳಿಂದ ನನ್ನ ಬಳಿ ಮೇಕಪ್ ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೀನ ಅಲಿಯಾಸ್ ಶ್ರೀನಿವಾಸ್ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಈ ನೋವನ್ನು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂಬುದಾಗಿ ಬರೆದುಕೊಂಡು ಸಂತಾಪ ಸೂಚಿಸಿದ್ದಾರೆ.

    ಮೇಕಪ್ ಆರ್ಟಿಸ್ಟ್ ಆಗಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ಶ್ರೀನಿವಾಸ್ ಅವರು ದರ್ಶನ್ ಅವರ ಬಹುತೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ ರಾಬರ್ಟ್ ಚಿತ್ರಕ್ಕೂ ಕೆಲಸ ಮಾಡಿರುವ ಇವರ ನಿಧನಕ್ಕೆ ಚಿತ್ರತಂಡ ಕೂಡ ಕಂಬನಿ ಮಿಡಿದಿದೆ.

    ಒಟ್ಟಿನಲ್ಲಿ ಕೊರೊನಾ ಮಹಾಮಾರಿ ನರ್ತನದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ಈ ಮಧ್ಯೆ ಸಾಲು ಸಾಲು ಚಿತ್ರನಟರು ಇಹಲೋಕ ತ್ಯಜಿಸಿದ್ದಾರೆ. ಇದೀಗ ಇವರ ಸಾಲಿಗೆ ದರ್ಶನ್ ಅವರ ಮೇಕಪ್ ಮ್ಯಾನ್ ಕೂಡ ಸೇರಿದ್ದಾರೆ.

  • ಹಣವಿಲ್ಲದೆ ಪರದಾಡ್ತಿದ್ದ ನಟಿಗೆ ಮೇಕಪ್ ಮ್ಯಾನ್ ಸಹಾಯ

    ಹಣವಿಲ್ಲದೆ ಪರದಾಡ್ತಿದ್ದ ನಟಿಗೆ ಮೇಕಪ್ ಮ್ಯಾನ್ ಸಹಾಯ

    ಮುಂಬೈ: ಕೊರೊನಾ ಲಾಕ್‍ಡೌನ್‍ನಿಂದ ಇಡೀ ದೇಶವೇ ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇ ರೀತಿ ಕಿರುತೆರೆ ನಟಿಯೊಬ್ಬರು ಆರ್ಥಿಕ ಕಷ್ಟಕ್ಕೆ ಸಿಲುಕಿದ್ದಾಗ ಮೇಕಪ್ ಮ್ಯಾನ್ ಸಹಾಯ ಮಾಡುವುದಾಗಿ ಹೇಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸೀರಿಯಲ್, ರಿಯಾಲಿಟಿ ಶೋಗಳಿಂದ ಖ್ಯಾತಿ ಪಡೆದಿರುವ ಸೋನಾಲ್ ವೆಂಗುರ್ಲೇಕರ್ ಕೊರೊನಾ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸ್ವಂತ ಸೋನಾಲ್ ಇನ್‍ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

    “ಲಾಕ್‍ಡೌನ್‍ನಿಂದಾಗಿ ಮುಂದಿನ ತಿಂಗಳು ಜೀವನ ನಡೆಸಲು ನನ್ನ ಬಳಿ ಹೆಚ್ಚು ಹಣವಿಲ್ಲ. ಯಾಕೆಂದರೆ ನಿರ್ಮಾಪಕರು, ಗೆಳೆಯರು ನನಗೆ ಕೊಡಬೇಕಾದ ಹಣವನ್ನು ವಾಪಸ್ ಕೊಟ್ಟಿಲ್ಲ. ಹೀಗಾಗಿ ನಾನು ತೀವ್ರವಾಗಿ ಆರ್ಥಿಕ ಸಮಸ್ಯೆಗೆ ಸಿಲುಕಿದ್ದೇನೆ. ಇಂತಹ ಸಂಕಷ್ಟದ ಸಮಯದಲ್ಲಿ ನನ್ನ ಮೇಕಪ್ ಮ್ಯಾನ್ ನನಗೆ ಸಹಾಯ ಮಾಡಲು ಮುಂದಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ನನ್ನ ಮೇಕಪ್ ಮ್ಯಾನ್ ನನಗೆ ಹಣ ಸಹಾಯ ಮಾಡುವುದಾಗಿ ಹೇಳಿದರು. ಅವರ ಪತ್ನಿ ಗರ್ಭಿಣಿ ಆಗಿದ್ದು, ಆತನ ಬಳಿ ಹೆಚ್ಚು ಹಣವಿಲ್ಲದಿದ್ದರೂ ಸಹ ನನಗೆ ಹಣ ನೀಡುವುದಾಗಿ ಆತ ಹೇಳಿದರು. ಮೇಡಂ ನನ್ನ ಬಳಿ 15 ಸಾವಿರ ಹಣ ಇದೆ. ಈಗ ನಿಮಗೆ ಅಗತ್ಯವಿದ್ದರೆ ತೆಗೆದುಕೊಳ್ಳಿ. ನನ್ನ ಪತ್ನಿ ಗರ್ಭಿಣಿ ಆಕೆಯ ಹೆರಿಗೆ ಸಮಯದಲ್ಲಿ ಹಣವನ್ನು ವಾಪಸ್ ಕೊಡಿ ಎಂದು ಮೇಪಕ್ ಮ್ಯಾನ್ ಸಂದೇಶ ಕಳಿಸಿದ್ದಾರೆ. ಅದನ್ನು ಓದಿ ನಾನು ಅತ್ತು ಬಿಟ್ಟೆ ಎಂದು ಸೋನಾಲ್  ಹೇಳಿದ್ದಾರೆ.

    ನನಗೆ ಲಕ್ಷಾಂತರ ಹಣ ಕೊಡಬೇಕಾದವರು ಈ ಸಂದರ್ಭದಲ್ಲಿ ನನ್ನ ಫೋನ್ ರಿಸೀವ್ ಮಾಡುತ್ತಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಿದ ಹಣವನ್ನು ನನಗೆ ಕೊಡುತ್ತಿಲ್ಲ. ಆದರೆ ನನ್ನ ಮೇಕಪ್ ಮ್ಯಾನ್ ಪಂಕಜ್ ಗುಪ್ತಾ ನಮ್ಮ ಕುಟಂಬದಲ್ಲಿ ಒಬ್ಬರಂತೆ. ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತೇನೆ ಮುಂದು ಬಂದಿದ್ದಾರೆ. ತಾವು ಶ್ರೀಮಂತರು ಎಂದು ಕರೆದುಕೊಳ್ಳುವ ಜನರು ನಿಜವಾಗಿಯೂ ಶ್ರೀಮಂತವಾದ ಮತ್ತು ದೊಡ್ಡ ಹೃದಯವನ್ನು ಹೊಂದಿರಬೇಕು ಎಂದು ಸೋನಾಲ್ ಹೇಳಿದ್ದಾರೆ.

    https://www.instagram.com/p/CAHu99clGgt/?utm_source=ig_embed