Tag: Make in India

  • ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ

    ನವರಾತ್ರಿಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ – ಸ್ವದೇಶಿ ವಸ್ತುಗಳನ್ನು ಖರೀದಿಸಿ: ಮೋದಿ ಕರೆ

    – ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ
    – ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು

    ನವದೆಹಲಿ: ನಾಳೆಯಿಂದ ದೇಶದಲ್ಲಿ ಜಿಎಸ್‌ಟಿ (GST) ಉಳಿತಾಯ ಉತ್ಸವ ಆರಂಭವಾಗುತ್ತಿದೆ, ಹಬ್ಬದ ಋತುವಿನಲ್ಲಿ ಬಾಯಿ ಸಿಹಿಯಾಗಲಿದೆ. ಇದರೊಂದಿಗೆ ದೇಶದ ಜನರು ಸ್ವದೇಶಿ ವಸ್ತುಗಳನ್ನು ಖರೀದಿ ಆತ್ಮನಿರ್ಭರ ಭಾರತವನ್ನು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.

    ಸೋಮವಾರದಿಂದಿಂದ ವಸ್ತುಗಳ ಜಿಎಸ್‌ಟಿ ದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.

    ಸ್ವದೇಶಿ ಚಳುವಳಿಯಿಂದ ಸ್ವಾತಂತ್ರ್ಯ ಸಿಕ್ಕಿದೆ. ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಹೆಮ್ಮೆಯಿಂದ ಖರೀದಿಸಬೇಕು. ಪ್ರತಿ ಮನೆಯನ್ನೂ ಸ್ವದೇಶಿ ಪ್ರತೀಕ ಮಾಡಬೇಕು. ಪ್ರತಿ ಅಂಗಡಿಯನ್ನು ಸ್ವದೇಶಿ ವಸ್ತುಗಳಿಂದ ಅಲಂಕರಿಸಬೇಕು ಎಂದರು

    ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು. ಹೂಡಿಕೆ ವಾತಾವರಣ ಸೃಷ್ಟಿಸಬೇಕು. ಇದರಿಂದ ಪ್ರತಿಯೊಂದು ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

     

    ಮೋದಿ ಭಾಷಣದಲ್ಲಿ ಹೇಳಿದ್ದೇನು?
    ನವರಾತ್ರಿ (Navarathri) ಮೊದಲ ದಿನದಂದು ಭಾರತ ಮಹತ್ವದ ಹೆಜ್ಜೆ ಇಡುತ್ತಿದೆ. ಆತ್ಮನಿರ್ಭರ ಭಾರತದ ದೊಡ್ಡ ಹೆಜ್ಜೆ ನಾಳೆಯಿಂದ ಆರಂಭವಾಗಲಿದೆ. ನವರಾತ್ರಿ ಮೊದಲ ದಿನ ಸುರ್ಯೋದಯದ ಜೊತೆಗೆ ಹೊಸ ತಲೆಮಾರಿನ ಜಿಎಸ್‌ಟಿ ಜಾರಿಯಾಗುತ್ತಿದೆ.

    ನಾಳೆಯಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ ಆರಂಭವಾಗುತ್ತಿದೆ, ನಿಮ್ಮ ಉಳಿತಾಯ ಹೆಚ್ಚಾಗಲಿದೆ. ಇದರಿಂದಾಗಿ ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿಸಬಹುದು. ಬಡವರು, ಮಧ್ಯಮ ವರ್ಗ, ಮಹಿಳೆಯರು, ರೈತರು, ಉದ್ಯಮಿಗಳಿಗೆ ಈ ನಿರ್ಧಾರದಿಂದ ಲಾಭವಾಗಲಿದೆ.

    ಹಬ್ಬಗಳ ಈ ಋತುವಿನಲ್ಲಿ ಎಲ್ಲರ ಬಾಯಿ ಸಿಹಿಯಾಗಲಿದೆ. ಉಳಿತಾಯ ಉತ್ಸವಕ್ಕೆ ಶುಭಾಶಯ ಕೋರುತ್ತೇನೆ. ಇದು ಭಾರತದ ಅಭಿವೃದ್ಧಿಗೆಯನ್ನು ವೇಗ ನೀಡಲಿದೆ. ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹ ನೀಡಲಿದೆ. ಪ್ರತಿ ರಾಜ್ಯದ ಅಭಿವೃದ್ಧಿಗೆ  ವೇಗ ನೀಡಲಿದೆ.

    ಹಳೆಯ ಇತಿಹಾಸ ಬದಲಿಸುವ, ಹೊಸ ಇತಿಹಾಸ ಸೃಷ್ಟಿಯಾಗಲಿದೆ. ನಮ್ಮ ಜನರು ದಶಕಗಳಿಂದ ಹಲವು ತೆರಿಗೆಗಳಲ್ಲಿ ಮುಳುಗಿ ಹೋಗಿದ್ದರು. ಒಂದು ನಗರದಿಂದ ಮತ್ತೊಂದು ನಗರಕ್ಕೆ ವಸ್ತುಗಳ ಸಾಗಿಸಲು ಹಲವು ಫಾರಂ ತುಂಬಿಸಬೇಕಿತ್ತು. ಹಲವು ಕಡೆ ಹಲವು ತೆರಿಗೆ ಪದ್ದತಿಗಳಿದ್ದವು.  ಇದನ್ನೂ ಓದಿ:  ಡಬಲ್‌ ಸಂಭ್ರಮ – ಅಗತ್ಯ ವಸ್ತುಗಳ ಜಿಎಸ್‌ಟಿ ಇಳಿಕೆ| ಹಿಂದೆ ಎಷ್ಟು ದರ? ಈಗ ಎಷ್ಟು ಇಳಿಕೆ?

    ನಾನು ಪ್ರಧಾನಿಯಾದ ಆರಂಭದಲ್ಲಿ ಒಂದು ಕಂಪನಿ ಬೆಂಗಳೂರಿನಿಂದ ಹೈದರಾಬಾದ್‌ಗೆ ವಸ್ತುಗಳನ್ನು ಕಳುಹಿಸಲು ಕಷ್ಟಪಡುತ್ತಿತ್ತು. ಮೊದಲು ಬೆಂಗಳೂರಿನಿಂದ ಯುರೋಪ್ ಕಳುಹಿಸಿ ಬಳಿಕ ಹೈದರಾಬಾದ್‌ಗೆ ಬರುತ್ತಿತ್ತು. ವ್ಯಾಟ್‌, ಅಕ್ಟ್ರಾಯ್‌, ಅಬಕಾರಿ ಸುಂಕದಂತಹ ತೆರಿಗೆಗಳಿಂದ ಈ ಸಮಸ್ಯೆಯಾಗಿತ್ತು. ಈ ತೆರಿಗೆಯನ್ನು ಜನರು ಭರಿಸಬೇಕಿತ್ತು.

    ಜನರ ಮತ್ತು ದೇಶದ ಹಿತಕ್ಕಾಗಿ ಎಲ್ಲಾ ರಾಜ್ಯಗಳು, ಸರ್ಕಾರಗಳ ಜೊತೆಗೆ ಚರ್ಚಿಸಿ ಜಿಎಸ್‌ಟಿಯನ್ನು ಜಾರಿ ಮಾಡಲಾಯಿತು. ಈಗ ಒಂದೇ ರೀತಿಯ ತೆರಿಗೆ ವ್ಯವಸ್ಥೆ ಜಾರಿ ಮಾಡಿದೆ. ಪರಿಷ್ಕರಣೆ ಒಂದು ನಿರಂತರ ಪ್ರಕ್ರಿಯೆ. ಸಮಯ ಬದಲಾದಂತೆ ಪರಿಷ್ಕರಣೆ ಅಗತ್ಯ. ಈಗ 5% ಮತ್ತು 18% ಎರಡೇ ಸ್ಲ್ಯಾಬ್ ಗಳನ್ನು ಮಾಡಿದ್ದು ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಸುಮಾರು 99% ವಸ್ತುಗಳು 5% ತೆರಿಗೆಯ ಅಡಿ ಬಂದಿವೆ.

    1 ವರ್ಷದಲ್ಲಿ 25 ಕೋಟಿ ಜನರ ಬಡತನವನ್ನು ನಿರ್ಮೂಲನೆ ಮಾಡಿದ್ದು ಅವರು ಮಧ್ಯಮ ವರ್ಗಕ್ಕೆ ಬಂದಿದ್ದಾರೆ. ಈ ಮಧ್ಯಮ ವರ್ಗಕ್ಕೆ ಅವರದ್ದೇ ಆದ ಕನಸುಗಳಿದೆ. ಅದಕ್ಕಾಗಿ 12 ಲಕ್ಷ ರೂ.ವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಲಾಗಿದೆ. ಇದರಿಂದ ಮಧ್ಯಮ ವರ್ಗದ ಜನರಲ್ಲಿ ದೊಡ್ಡ ಬದಲಾವಣೆ ಯಾಗಲಿದೆ. ಬಡವರು, ಮಧ್ಯಮ ವರ್ಗಕ್ಕೆ ಡಬಲ್ ಆಫರ್ ಸಿಕ್ಕಾಂತಾಗಿದೆ.

    ಮನೆ ಕಟ್ಟಲು, ಟಿವಿ ಫ್ರಿಡ್ಜ್‌, ಕಾರು ಬೈಕ್ ಖರೀದಿಗೆ ಕಡಿಮೆ ಖರ್ಚು ಆಗಲಿದೆ. ಪ್ರವಾಸದ ಖರ್ಚು ಕಡಿಮೆಯಾಗಲಿದೆ. ಅಂಗಡಿಯವರಿಗೆ ಈ ಬಗ್ಗೆ ಸಾಕಷ್ಟು ಖುಷಿ ಇದ್ದು ಅವರು ಜಿಎಸ್‌ಟಿ ಲಾಭವನ್ನು ಜನರಿಗೆ ತಲುಪಿಸುತ್ತಿದ್ದಾರೆ

    ನಾಗರಿಕ ದೇವೋ ಭವ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ. ಈ ನಿರ್ಧಾರದಿಂದ ಜನರಿಗೆ 2.5 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ವಿಕಸಿತ್ ಭಾರತ ಕನಸು ತಲುಪಲು ಆತ್ಮ ಭಾರತ್ ಹಾದಿಯಲ್ಲಿ ನಡೆಯಬೇಕಿದೆ.

  • ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    ಪ್ರಧಾನಿ ಮೋದಿ ಆತ್ಮನಿರ್ಭರ ಕನಸು ನನಸು – ಉಡುಪಿಯಿಂದ ನಾರ್ವೆಗೆ ಮೇಕ್ ಇನ್ ಇಂಡಿಯಾ ಹಡಗು

    – ಭಾರತದ ಹಡಗು ನಿರ್ಮಾಣ ಸಂಸ್ಥೆಯ ಮೈಲಿಗಲ್ಲು

    ಉಡುಪಿ: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ (Udupi) ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ (Norway) ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.

    ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಮಾಡಿಕೊಂಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗಳು ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು. ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ (Ship) ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ

    ಆತ್ಮನಿರ್ಭರ (Aatmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make In India) ಕಾನ್ಸೆಪ್ಟ್‌ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟ್ ಅನ್ನು ಭಾರತ ಸರ್ಕಾರ ನೀಡಿದೆ. ಇದನ್ನೂ ಓದಿ: Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್‌ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!

  • ಮೇಕ್ ಇನ್ ಇಂಡಿಯಾದಿಂದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡಿದೆ: ಪುಟಿನ್ ಶ್ಲಾಘನೆ

    ಮೇಕ್ ಇನ್ ಇಂಡಿಯಾದಿಂದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡಿದೆ: ಪುಟಿನ್ ಶ್ಲಾಘನೆ

    ಮಾಸ್ಕೋ: ಮೇಕ್ ಇನ್ ಇಂಡಿಯಾ (Make in India) ಮೂಲಕ ಸಣ್ಣ ಮತ್ತು ದೊಡ್ಡ ಗಾತ್ರದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡುತ್ತಿದೆ ಎಂದು ಭಾರತ ಸರ್ಕಾರ ಹಾಗೂ ನಾಯಕತ್ವವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶ್ಲಾಘಿಸಿದ್ದಾರೆ.

    ಮಾಸ್ಕೋದಲ್ಲಿ (Moscow) ವಿಟಿಬಿ ಹೂಡಿಕೆ ಕುರಿತು ನಡೆದ ಕಾರ್ಯಕ್ರಮದಲ್ಲಿ ಭಾರತದ `ಮೇಕ್ ಇನ್ ಇಂಡಿಯಾ’ ಬಗ್ಗೆ ಮಾತನಾಡಿದರು.ಇದನ್ನೂ ಓದಿ: ಅಮ್ಮ ಲೀಲಾವತಿಗಾಗಿ ಸ್ಮಾರಕ ನಿರ್ಮಿಸಿದ ವಿನೋದ್‌ ರಾಜ್‌

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧತೆಯನ್ನು ನಡೆಸಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.

    ಭಾರತೀಯ ನಾಯಕತ್ವದಿಂದಾಗಿ ಭಾರತ (India) ಸರ್ಕಾರವು ಸ್ಥಿರವಾದ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಜೊತೆಗೆ ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.

    ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್‌ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ‍್ಯಾಂಡ್‌ಗಳು ಯಶಸ್ಸು ಗಳಿಸಿದೆ. ಇದು ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಇನ್ನೂ ಕೃಷಿಯಲ್ಲಿ ತಯಾರಕರ ಮತ್ತು ಉತ್ಪಾದಕರ ಸಂಖ್ಯೆಯು ಬೆಳೆಯುತ್ತಲೇ ಇದೆ. 1988ರಲ್ಲಿ, ಸೋವಿಯತ್ ಒಕ್ಕೂಟವು ಯುಎಸ್‌ಡಿ 35 ಶತಕೋಟಿಗೆ ಧಾನ್ಯವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ, ಯುಎಸ್‌ಡಿ 66 ಶತಕೋಟಿಯಷ್ಟು ಧಾನ್ಯವನ್ನು ರಫ್ತು ಮಾಡಿದ್ದೇವೆ. ಇದು ನಮ್ಮ ರೈತರ ಅರ್ಹತೆಯಾಗಿದೆ. ರಷ್ಯಾ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿ, ಹೈಟೆಕ್ ಸೇರಿದಂತೆ, ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಅವಕಾಶಗಳನ್ನು ವಿಸ್ತರಿಸುವ ತೀವ್ರ ಅವಶ್ಯಕತೆಯಿದೆ ಎಂದರು.

    ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದರು.ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – NIAಯಿಂದ 16 ಕಡೆ ದಾಳಿ

  • ವರ್ಷದಿಂದ ವರ್ಷಕ್ಕೆ ರಾಕೆಟ್‌ ವೇಗದಲ್ಲಿ ಚಿಮ್ಮುತ್ತಿದೆ ಭಾರತದ ರಕ್ಷಣಾ ರಫ್ತು!

    ವರ್ಷದಿಂದ ವರ್ಷಕ್ಕೆ ರಾಕೆಟ್‌ ವೇಗದಲ್ಲಿ ಚಿಮ್ಮುತ್ತಿದೆ ಭಾರತದ ರಕ್ಷಣಾ ರಫ್ತು!

    ಭಾರತದ (India) ರಫ್ತು ಉತ್ಪನ್ನಗಳು ಎಂದರೆ ಸಾಂಬಾರು ಪದಾರ್ಥಗಳು ಎಂದು ಉತ್ತರ ಬರೆಯುತ್ತಿದ್ದ ಕಾಲ ಈಗ ಸರಿದಿದೆ. ಇದೀಗ ಭಾರತ ರಕ್ಷಣಾ ಉತ್ಪನ್ನಗಳನ್ನು ಸಹ ವಿದೇಶಗಳಿಗೆ ರಫ್ತು (Defence exports) ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಮೇಕ್‌ ಇನ್‌ ಇಂಡಿಯಾದ ಸಹಕಾರದಿಂದ ಈ ಬಾರಿಯ (2023-24)ನಮ್ಮ ದೇಶದ ರಕ್ಷಣಾ ರಫ್ತು 21,083 ಕೋಟಿ ರೂ.ಗೆ ಏರಿಕೆಯಾಗಿದೆ.

    ಭಾರತ ಮೂಲತಃ ಶಾಂತಿಯ ಮಾರ್ಗವನ್ನೇ ಅನುಸರಿಸಿ ಸ್ವಾತಂತ್ರ್ಯ ಪಡೆದ ದೇಶ. ಇದಾದ ಬಳಿಕವೂ ಶಾಂತಿಯ ಮಾರ್ಗದಲ್ಲೇ ಸಾಗುತ್ತಿದ್ದರು. ಅಕ್ಕಪಕ್ಕದ ಹಿತಶತ್ರು ದೇಶಗಳ ದಾಳಿ, ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವಾಗ ಭದ್ರತೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಭಾರತ ಮದ್ದು ಗುಂಡುಗಳು, ಅಣ್ವಸ್ತ್ರಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ಅಗತ್ಯ ಇರುವ ದೇಶಗಳಿಗೆ ರಫ್ತನ್ನು ಸಹ ಮಾಡುತ್ತಿದೆ. ಶಸ್ತ್ರಾಸ್ತ್ರಗಳ ರಫ್ತು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್‌ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

    ಮ್ಯಾನ್ಮಾರ್ ಭಾರತದ ಶಸ್ತ್ರಾಸ್ತ್ರಗಳ ಅತಿದೊಡ್ಡ ಆಮದುದಾರ

    ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, 2000 ಮತ್ತು 2023 ರ ನಡುವೆ ಮ್ಯಾನ್ಮಾರ್ ಭಾರತದ ಶಸ್ತ್ರಾಸ್ತ್ರಗಳ ಅತಿದೊಡ್ಡ ಆಮದುದಾರ ಎಂದು ವರದಿ ಮಾಡಿದೆ. ಇದು ಭಾರತದ ರಫ್ತಿನ 31% ಭಾಗ ಹೊಂದಿದೆ. ಶ್ರೀಲಂಕಾ 19%, ಮಾರಿಷಸ್, ನೇಪಾಳ, ಅರ್ಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್ಸ್ ಇತರ ಪ್ರಮುಖ ಆಮದುದಾರರಾಗಿದ್ದಾರೆ.

    ಶಸ್ತ್ರಾಸ್ತ ರಫ್ತು ಹೆಚ್ಚಳ

    ಖಾಸಗಿ ಕಂಪನಿಗಳು ಸಹ ಶಸ್ತ್ರಾಸ್ತ್ರಗಳ ತಯಾರಿಸುತ್ತಿರುವ ಕಾರಣ ಭಾರತ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳ ರಫ್ತು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯದ ಪ್ರಕಾರ 2014-15 – 1,941 ಕೋಟಿ ರೂ., 2017-18 – 4,682 ಕೋಟಿ ರೂ., 2018-19- 10,746 ಕೋಟಿ ರೂ., 2021-22- 12,815 ಕೋಟಿ ರೂ., 2022-23  15,918 ಕೋಟಿ ರೂ. ಹಾಗೂ 2023-24 ರಲ್ಲಿ 21,083 ಕೋಟಿ ರೂ. ಮೊತ್ತದ ರಕ್ಷಣಾ ಸಾಮಾಗ್ರಿಗಳನ್ನು ಭಾರತ ರಫ್ತು ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿನ ಬೆಳವಣಿಗೆಯಾಗಿದೆ.

    2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಬದ್ಧತೆಯಲ್ಲಿ ಭಾರತ ಮುಂದುವರಿದರೆ ಈ ಗುರಿಯನ್ನು ಮೀರಿ ಬೆಳೆಯುವುದರಲ್ಲಿ ಯಾವುದೇ ಸಂದೇಹ ಇಲ್ಲ. 

    ಯಾವೆಲ್ಲ ರಕ್ಷಣಾ ಉತ್ಪನ್ನಗಳು ರಫ್ತಾಗುತ್ತಿವೆ? 

    ಭಾರತೀಯ ಹಡಗುಗಳು ಅತ್ಯಂತ ಆಕರ್ಷಕ ರಕ್ಷಣಾ ಸರಕುಗಳಾಗಿವೆ. ಇದು ದೇಶದ ಒಟ್ಟು ರಕ್ಷಣಾ ರಫ್ತಿನ 61% ಹೊಂದಿದೆ. ಇದಾದ ನಂತರ 20% ರಷ್ಟು ವಿಮಾನಗಳು, 14% ರಷ್ಟು ಸಂಪರ್ಕ ಸಾಧನಗಳು, 2.8% ರಷ್ಟು ಶಸ್ತ್ರಸಜ್ಜಿತ ವಾಹನಗಳು ಮತ್ತು 1.1% ರಷ್ಟು ಫಿರಂಗಿಗಳನ್ನು ಭಾರತ ರಫ್ತು ಮಾಡುತ್ತಿದೆ. 

    ಕಳೆದ ಐದು ವರ್ಷಗಳಲ್ಲಿ ರಫ್ತು ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್, ಅಶ್ರುವಾಯು ಲಾಂಚರ್, ALH ಹೆಲಿಕಾಪ್ಟರ್‌ಗಳು, ಟಾರ್ಪಿಡೊ-ಲೋಡಿಂಗ್ ಮೆಕ್ಯಾನಿಸಂ, ಅಲಾರ್ಮ್ ಮಾನಿಟರಿಂಗ್ ಮತ್ತು ಕಂಟ್ರೋಲ್, ನೈಟ್ ವಿಷನ್ ಮಾನೋಕ್ಯುಲರ್ ಮತ್ತು ಬೈನಾಕ್ಯುಲರ್, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸ್ತ್ರಸಜ್ಜಿತ ರಕ್ಷಣಾ ವಾಹನ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ರಾಡಾರ್, ಆಕಾಶ್ ಕ್ಷಿಪಣಿ, ಹೈ ಫ್ರಿಕ್ವೆನ್ಸಿ ರೇಡಿಯೊ, ಡ್ರೋಣ್‌ಗಳು ಸೇರಿದಂತೆ ಇತ್ಯಾದಿಗಳನ್ನು ರಫ್ತು ಮಾಡಲಾಗಿದೆ.

    ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳು ರಫ್ತು ಲಿಸ್ಟ್‌ನಲ್ಲಿವೆ. 

    ಖಾಸಗಿ ವಲಯಯದ ಕೊಡುಗೆ 

    ಭಾರತದಲ್ಲಿ ಖಾಸಗಿ ವಲಯದ ಸುಮಾರು 50 ಕಂಪನಿಗಳು ರಕ್ಷಣಾ ರಫ್ತಿಗೆ ಕೊಡುಗೆ ನೀಡಿವೆ. ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ನೌಕೆಗಳಂತಹ ಸ್ವದೇಶಿ ಉತ್ಪನ್ನಗಳಲ್ಲಿ ತಯಾರಿಸಲು ಖಾಸಗಿ ಕಂಪನಿಗಳು ಉತ್ಸಾಹ ತೋರಿಸುತ್ತಿವೆ. ಅಲ್ಲದೇ ಫಿರಂಗಿ ಬಂದೂಕುಗಳು, ಬ್ರಹ್ಮೋಸ್ ಕ್ಷಿಪಣಿಗಳು, ಪಿನಾಕಾ ರಾಕೆಟ್‌ಗಳು ಮತ್ತು ಲಾಂಚರ್‌ಗಳು, ರಾಡಾರ್‌ಗಳು, ಸಿಮ್ಯುಲೇಟರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳಂತಹ ವಿಮಾನ ಸೇರಿದಂತೆ ಉತ್ತಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿವೆ. 

    ಮೇಕ್ ಇನ್ ಇಂಡಿಯಾ ನೀಡಿದ ಚುರುಕು 

    ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಕ್ ಇನ್ ಇಂಡಿಯಾ ನೀತಿಯಿಂದ (Make In India) ಭಾರತದ ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ಪಾದನೆಗೆ ಪ್ರೋತ್ಸಾಹ ದೊರೆತಿದೆ. ಇದು ಭಾರತದ ಆಮದನ್ನು ಖಡಿತಗೊಳಿಸಿದ್ದು, ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಸಾಧ್ಯವಾಗಿದೆ. 

    ಈ ವರ್ಷ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ರಫ್ತು

    ಜ.2022 ರಲ್ಲಿ, ಎರಡು ದೇಶಗಳು 3,130 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಹೈಸ್ಪೀಡ್ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂರು ರಫ್ತು ಆವೃತ್ತಿಗಳೊಂದಿಗೆ ಕ್ಷಿಪಣಿಗಳನ್ನು ಪೂರೈಸುತ್ತಿದೆ. ಅಲ್ಲದೇ ಈ ಒಪ್ಪಂದದಲ್ಲಿ  ಬ್ರಹ್ಮೋಸ್ ನಿರ್ವಹಣೆಗೆ ಬೇಕಾದ ಅಗತ್ಯ ತರಬೇತಿಯನ್ನು ಸಹ ನಿರ್ವಾಹಕರಿಗೆ ನೀಡಲಿದೆ. ಇದೀಗ ಯುದ್ಧ ಸಾಮಗ್ರಿಗಳ ಮೊದಲ ಬ್ಯಾಚ್ ಅಂತಿಮವಾಗಿ ಫಿಲಿಪೈನ್ಸ್‌ಗೆ ತಲುಪಿದೆ. ಇದರೊಂದಿಗೆ ಭಾರತ ವಿಶ್ವದ 12 ದೇಶಗಳಿಗೆ ಬ್ರಹ್ಮೋಸ್‌ (BrahMos) ಕ್ಷಿಪಣಿಯನ್ನು ರಫ್ತು ಮಾಡಲು ಮಾತುಕತೆ ನಡೆದಿದೆ.

    ಬ್ರಹ್ಮೋಸ್‌ ವಿಶೇಷತೆ ಏನು?

    ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ.

    ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್‌ ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ. ಬ್ರಹ್ಮೋಸ್ ಕ್ಷಿಪಣಿಯು 2.8 ಮ್ಯಾಕ್ ವೇಗದಲ್ಲಿ ಚಲಿಸುತ್ತದೆ, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. 

    ಬ್ರಹ್ಮೋಸ್‌ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಾಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಮಿಷನ್‌ ದಿವ್ಯಾಸ್ತ್ರ ಪ್ರಯೋಗ ಯಶಸ್ವಿ – ಏನಿದು MIRV ತಂತ್ರಜ್ಞಾನ? ಯುದ್ಧದ ವೇಳೆ ಹೇಗೆ ಸಹಾಯವಾಗುತ್ತೆ? ಯಾರ ಬಳಿಯಿದೆ?

  • ಮೊದಲ ಬಾರಿಗೆ ಗಡಿ ದಾಟಿದ 21,000 ಕೋಟಿ ರೂ. ರಕ್ಷಣಾ ರಫ್ತು

    ಮೊದಲ ಬಾರಿಗೆ ಗಡಿ ದಾಟಿದ 21,000 ಕೋಟಿ ರೂ. ರಕ್ಷಣಾ ರಫ್ತು

    – ಮಹತ್ವದ ಬೆಳವಣೆಗೆ ಎಂದ ರಾಜನಾಥ್ ಸಿಂಗ್

    ನವದೆಹಲಿ: ದೇಶದ ರಕ್ಷಣಾ ರಫ್ತು (Indian Defence Exports) ಅಭೂತಪೂರ್ವ ಎತ್ತರಕ್ಕೆ ಏರಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ.

    2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

    ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ್ ಭಾರತ್ (Aatmanirbharta) ಮತ್ತು ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ರಫ್ತು ಮಹತ್ವದ ಪ್ರಗತಿಯ ಗುರಿಯನ್ನು ಸಾಧಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಮೇಕ್ ಇನ್ ಇಂಡಿಯಾ‌ (Make in India), ಮೇಕ್ ಫಾರ್‌ ವರ್ಲ್ಡ್ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ಮಹಿಳೆಗೆ ಅವಾಚ್ಯ ಪದ ಬಳಕೆ ಆರೋಪ: ನಟ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ದೂರು

  • ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ಮೋದಿಯವರ `ಮೇಕ್ ಇನ್ ಇಂಡಿಯಾ’ ಭಾರತದ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರಿದೆ: ಪುಟಿನ್

    ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆ ಭಾರತದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬಣ್ಣಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು, 2014ರಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಬಿತ್ತಿದ್ದರು. ಇದು ಭಾರತದ ಆರ್ಥಿಕತೆಯ ಮೇಲೆ ಯಶಸ್ವಿ ಪರಿಣಾಮವನ್ನು ಬೀರಿದೆ. ಭಾರತದ ಉತ್ತಮ ನಾಯಕ ಮತ್ತು ರಷ್ಯಾದ ಉತ್ತಮ ಸ್ನೇಹಿತ ನರೇಂದ್ರ ಮೋದಿಯವರಿಂದ ಇದು ಸಾಧ್ಯವಾಗಿದೆ ಎಂದು ಅವರು ಹೊಗಳಿದ್ದಾರೆ. ರಷ್ಯಾದಲ್ಲಿ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತದ ಈ ವಿಚಾರವನ್ನು ಅವರು ಚರ್ಚಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್‌; ಕೆ.ಆರ್‌. ಪುರಂ ತಹಶೀಲ್ದಾರ್‌ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್‌

    ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್‌ ಇತ್ತೀಚೆಗೆ ಮಾತನಾಡಿ, ರಷ್ಯಾ ಮತ್ತು ಭಾರತದ ಪಾಲುದಾರಿಕೆ ವಿಶ್ವಕ್ಕೆ ಬಲವನ್ನು ತೋರಿಸಿದೆ. ಇದರಿಂದಾಗಿ ಜಗತ್ತಿನಲ್ಲಿ ಎರಡೂ ದೇಶಗಳು ಬಲವಾಗಿ ಬೆಳೆಯುತ್ತಿವೆ ಎಂದಿದ್ದರು. ಆದರೆ ರಷ್ಯಾದ ಬಗ್ಗೆ ಪ್ರತಿದಿನ ಜಾಗತಿಕ ಮಟ್ಟದಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅಲ್ಲದೇ ರಷ್ಯಾ ಮತ್ತು ಭಾರತದ ಸಂಬಂಧವನ್ನು ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಆಷಾಢ ಸಂಭ್ರಮ – 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಶಂಕುಸ್ಥಾಪನೆ, ಫೆ.6ಕ್ಕೆ ಮೋದಿಯಿಂದ ಉದ್ಘಾಟನೆ – ತುಮಕೂರು HAL ಹೆಲಿಕಾಪ್ಟರ್‌ ಘಟಕದ ವಿಶೇಷತೆ ಏನು?

    ಅಂದು ಶಂಕುಸ್ಥಾಪನೆ, ಫೆ.6ಕ್ಕೆ ಮೋದಿಯಿಂದ ಉದ್ಘಾಟನೆ – ತುಮಕೂರು HAL ಹೆಲಿಕಾಪ್ಟರ್‌ ಘಟಕದ ವಿಶೇಷತೆ ಏನು?

    ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಪ್ರಧಾನಿ ಮೋದಿ (PM Narendra Modi) ಅವರ ರಾಜ್ಯ ಪ್ರವಾಸವೂ ಜೋರಾಗಿದೆ. ಫೆ.6 ರಂದು ತುಮಕೂರಿನಲ್ಲಿ (Tumakuru) ನಿರ್ಮಾಣವಾಗಿರುವ ಎಚ್‌ಎಎಎಲ್‌ ಹೆಲಿಕಾಪ್ಟರ್‌ ಘಟಕ ಉದ್ಘಾಟನೆಗೆ ಪ್ರಧಾನಿ ಆಗಮಿಸಲಿದ್ದಾರೆ.

    ಹಳೇ ಮೈಸೂರು (Old Mysuru) ಭಾಗದಲ್ಲಿ ಬಿಜೆಪಿಯನ್ನು ಬಲಗೊಳಿಸಬೇಕು ಎಂದು ಸಂಕಲ್ಪ ತೊಟ್ಟ ಕಮಲ ಪಡೆ ಪಧಾನಿ ಮೋದಿ ಅವರನ್ನು ಕರೆತಂದು ಎರಡನೇ ಹಂತದ ಪ್ರಚಾರ ಆರಂಭಿಸುತ್ತಿದೆ. ಅಂದು ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆ ಕಾವಲ್ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೆಲಿಕಾಪ್ಟರ್‌ ಘಟಕವನ್ನು (HAL Helicopter Manufacturing Unit) ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

    ಅಂದು ಮಧ್ಯಾಹ್ನ 3 ಗಂಟೆಗೆ ಎಚ್‌ಎಎಲ್‌ ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬಳಿಕ 3:15 ರಿಂದ ಪ್ರಾರಂಭವಾಗಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಚ್‌ಎಎಲ್‌ ಘಟಕ ಉದ್ಘಾಟನೆ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.

    ಯಾವ ಹೆಲಿಕಾಪ್ಟರ್‌ ತಯಾರಾಗುತ್ತೆ?
    ಮೇಕ್‌ ಇನ್‌ ಇಂಡಿಯಾಗೆ ಒತ್ತು ನೀಡಲು ಸಂಪೂರ್ಣ ಸ್ವದೇಶದಲ್ಲೇ ಸೇನೆಗೆ ಅಗತ್ಯ ಇರುವ ಶಸ್ತ್ರ ಹಾಗೂ ವಾಹನಗಳನ್ನು ತಯಾರಿಸಿರುವ ದೂರ ದೃಷ್ಟಿ ಹಿನ್ನೆಯಲ್ಲಿ ಮೋದಿಯವರೇ 2016 ರಲ್ಲಿ ಈ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದರು. 2018 ರಲ್ಲಿ ಪ್ರಯೋಗಾರ್ಥವಾಗಿ ಹೆಲಿಕಾಪ್ಟರ್ ಹಾರಾಟ ಮಾಡಿತ್ತು. ಈ ಘಟಕ ಮೊದಲೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕೋವಿಡ್‌ ಇತ್ಯಾದಿ ಕಾರಣಗಳಿಂದ ತಡವಾಗಿ ಲೋಕಾರ್ಪಣೆಯಾಗುತ್ತಿದೆ.

    ಒಟ್ಟು 616 ಎಕರೆ ಭೂ ಪ್ರದೇಶದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಲಘು ಯುದ್ದ ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗಲಿದೆ. ಈ ಘಟಕದಲ್ಲಿ ತಯಾರಾದ 5 ರಿಂದ 6 ಮಂದಿ ಕುಳಿತುಕೊಳ್ಳುವ ಕಾಪ್ಟರ್‌ಗಳು ಭೂ ಸೇನೆ, ವಾಯುಸೇನೆಗೆ ಬಳಕೆಯಾಗಲಿದೆ. ಒಟ್ಟು 5 ಸಾವಿರ ಜನರಿಗೆ ಈ ಘಟಕದ ಮೂಲಕ ಉದ್ಯೋಗ ಲಭಿಸಲಿದೆ. ಇದನ್ನೂ ಓದಿ: ಫೆ.13 ರಿಂದ ಬೆಂಗ್ಳೂರಲ್ಲಿ ಏರ್ ಶೋ – LCA Tejas ಪ್ರಮುಖ ಆಕರ್ಷಣೆ

    ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ಕನಸಿನ ಕೂಸು ಎಂದೇ ಬಿಂಬಿತವಾಗಿರುವ ಎಚ್‌ಎಎಲ್‌ ಘಟಕದ 614 ಎಕರೆ ಜಾಗದ ಪೈಕಿ 529 ಎಕರೆ ಜಾಗದಲ್ಲಿ ಹೆಲಿಕಾಪ್ಟರ್‌ ಬಿಡಿ ಭಾಗ ತಯಾರಿಸುವ, ಜೋಡಿಸುವ ಕಟ್ಟಡಗಳ ಘಟಕಗಳ ನಿರ್ಮಾಣವಾಗಿದೆ. ಈ ಘಟಕದಲ್ಲಿ ರನ್‌ವೇ, ಆಸ್ಪತ್ರೆ, ಆಡಳಿತ ವಿಭಾಗ ಸೇರಿದಂತೆ ಇನ್ನಿತರೆ ಕಚೇರಿಗಳನ್ನು ಒಳಗೊಂಡಿದೆ. ಈ ಘಟಕ ಸ್ಥಾಪನೆ ತುಮಕೂರು ಜಿಲ್ಲೆಯ ಪಾಲಿಗೆ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಪ್ರತಿ ವರ್ಷ 75 ಹೆಲಿಕಾಪ್ಟರ್ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. 1 ಲಘು ಹೆಲಿಕಾಪ್ಟರ್ ಉತ್ಪಾದನೆಗೆ 30 ಕೋಟಿ ರೂ. ವೆಚ್ಚವಾಗಲಿದ್ದು ಪ್ರತೀ ವರ್ಷ 2 ಸಾವಿರ ಕೋಟಿ ರೂ. ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ.


    ಮಾರ್ಗ ಬದಲಾವಣೆ:
    ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಬದಲಿಸಲಾಗಿದೆ. ಫೆ.6 ರಂದು ತಿಪಟೂರು ಶಿವಮೊಗ್ಗ ಕಡೆಗೆ ಹೋಗುವ ವಾಹನಗಳು ನಿಟ್ಟೂರು, ಟಿ.ಬಿ‌.ಕ್ರಾಸ್, ತುರುವೇಕೆರೆ ಮೂಲಕ ಕೆ.ಬಿ‌.ಕ್ರಾಸ್ ಬದಲಾಯಿಸಲಾಗಿದೆ. ಅದೇ ರೀತಿ ಶಿವಮೊಗ್ಗ, ತಿಪಟೂರಿಂದ ಬೆಂಗಳೂರಿಗೆ ಹೋಗುವ ವಾಹನಗಳು ಕೂಡ ಕೆ.ಬಿ.ಕ್ರಾಸ್, ತುರುವೇಕೆರೆ, ಟಿ.ಬಿ.ಕ್ರಾಸ್ ಮೂಲಕ ನಿಟ್ಟೂರು ಮೂಲಕ ಸಾಗಬಹುದಾಗಿದೆ.

    1 ಲಕ್ಷ ಜನ ಭಾಗಿ ಸಾಧ್ಯತೆ:
    ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದೆ. ಸಾರ್ವಜನಿಕರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವ ಸಾರ್ವಜನಿಕರು ನೀರಿನ ಬಾಟಲ್, ಬಟ್ಟೆ, ಸೇರಿದಂತೆ ಯಾವುದೇ ವಸ್ತುಗಳನ್ನು ತರುವಂತಿಲ್ಲ. ಸುಮಾರು 2.5 ಸಾವಿರ ಪೊಲೀಸರನ್ನು ಭದ್ರತೆಗೆಗಾಗಿ ನಿಯೋಜನೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • KSRTC ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಚಾಲನೆ – ಒಂದು ಬಾರಿ ಚಾರ್ಜ್‌ ಮಾಡಿದ್ರೆ 300 ಕಿ.ಮೀ ಸಂಚಾರ

    KSRTC ಎಲೆಕ್ಟ್ರಿಕ್‌ ಬಸ್‌ ಸೇವೆಗೆ ಚಾಲನೆ – ಒಂದು ಬಾರಿ ಚಾರ್ಜ್‌ ಮಾಡಿದ್ರೆ 300 ಕಿ.ಮೀ ಸಂಚಾರ

    ಬೆಂಗಳೂರು: ಕೆಎಸ್‌ಆರ್‌ಟಿಸಿಯ(KSRTC) ಅಂತರ ನಗರ ಎಲೆಕ್ಟ್ರಿಕ್‌ ಬಸ್‌(Electric Bus) ಸೇವೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.

    ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ(Make In India) ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್‍ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಿದೆ.

    ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ‘ಇವಿ ಪವರ್ ಪ್ಲಸ್’ ಎಂದು ಹೆಸರಿಸಲಾಗಿದ್ದು ‘ಅತ್ಯುತ್ತಮ ಅನುಭವ’ ಎಂದು ಟ್ಯಾಗ್‍ಲೈನ್‌ ನೀಡಲಾಗಿದೆ.

    ಈ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ನಂತರ  ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್‌ ಕೇಂದ್ರವನ್ನು ಬೆಂಗಳೂರಿನ ಕೆಂಪೇಗೌಡ ಬಸ್‌ ನಿಲ್ದಾಣ, ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಗುವುದು.

    ಎಂಇಐಎಲ್‌ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ರಸ್ತೆಗಿಳಿಸುತ್ತಿರುವ ಪರಿಸರ ಸ್ನೇಹಿ ಬಸ್‌ ಎರಡೂವರೆ ತಾಸು ಚಾರ್ಜ್‌ ಮಾಡಿದರೆ 300 ಕಿ.ಮೀ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ.

    ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿಚಾರ್ಜ್‌ ಆಗುವ ರಿ ಜನರೇಷನ್‌ ಆಗುವ ಸಿಸ್ಟಮ್‌ ಇದಾಗಿದೆ. ಬಸ್‌ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್‌ ಚಾರ್ಜಿಂಗ್‌ ಸ್ಪಾಟ್‌, ಮನರಂಜನೆಗಾಗಿ 2 ಟಿವಿ ಅಳವಡಿಸಲಾಗಿದೆ. ಒಟ್ಟಾರೆ ಬಸ್‌ 43 + 2 ಸೀಟಿಂಗ್‌ ಕೆಪಾಸಿಟಿ ಹೊಂದಿದೆ. ಬಸ್‌ ಸಂಪೂರ್ಣ ಸೆನ್ಸರ್‌ ಇರಲಿದೆ. ಮುಂದುಗಡೆ ಮತ್ತು ಹಿಂದುಗಡೆ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಇದನ್ನೂ ಓದಿ: ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್‌ ಮೋದಿ ಆಸ್ತಿ ಹರಾಜು

    ಈ ವೇಳೆ, ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಬಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯದ 1 ಕೋಟಿ ರೂ. ಚೆಕ್ ಹಸ್ತಾಂತರಿಸಲಾಯ್ತು. ಅಂತರ ನಿಗಮ ವರ್ಗಾವಣೆ 1013 ನೌಕರರಿಗೆ ವರ್ಗಾವಣೆ ಆದೇಶವನ್ನು ನೀಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    ಕೋಲಾರ/ಬೆಂಗಳೂರು: ಆಪಲ್ ಕಂಪನಿಗೆ ಐಫೋನ್ (Apple iPhone) ತಯಾರಿಸಿಕೊಡುವ ವಿಸ್ಟ್ರಾನ್‌ (Wistron Infocomm Manufacturing (India) Private Limited) ಕಂಪನಿಯನ್ನ ಖರೀದಿಸಲು ಟಾಟಾ ಸಮೂಹ (TaTa Group) ಉತ್ಸಾಹ ತೋರಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

    ಕೋಲಾರದ (Kolara) ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್‌ ಘಟಕದ ಖರೀದಿಗೆ ಟಾಟಾ ಸಮೂಹ ಆಸಕ್ತಿ ತೋರಿದೆ. ಸುಮಾರು 4,000 ರಿಂದ 5,000 ಕೋಟಿ ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ (Apple iPhone) ತಯಾರಿಸುವ ದೇಶದ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ

    ಟಾಟಾ ಎಲೆಕ್ಟ್ರಾನಿಕ್ಸ್‌ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ. ಅದರಂತೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆಪಲ್ ಉತ್ಪಾದನೆಯ ಕಾರ್ಖಾನೆಯನ್ನು ಖರೀದಿಸುವುದು ಟಾಟಾ ಗುರಿಯಾಗಿದೆ. ಈಗಾಗಲೇ ದೇಶದಲ್ಲಿ ವಿಸ್ಟ್ರಾನ್‌ ಕಂಪನಿ ಆಪಲ್ ಐಫೋನ್ (Apple iPhone) ಉತ್ಪಾದಿಸುತ್ತಿವೆ. ಇದನ್ನೂ ಓದಿ: 50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!

    2020 ಡಿಸೆಂಬರ್ 12 ರಂದು ಈ ಪ್ರತಿಷ್ಟಿತ ಬಹುರಾಷ್ಟ್ರೀಯ ವಿಸ್ಟ್ರಾನ್‌ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ವಿವಿಧ ಕಾರಣಗಳಿಂದ ದಾಂಧಲೆ ಮಾಡಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ವಿಚಾರ ಅಂ‌ತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

    ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

    ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಭಾರತದಲ್ಲಿ ಸುಮಾರು 96 ಸುಧಾರಿತ ಯುದ್ಧ ವಿಮಾನಗಳನ್ನು ನಿರ್ಮಿಸಲು ಯೋಜಿಸಿದ್ದು, ಇದಕ್ಕಾಗಿ ಜಾಗತಿಕ ವಿಮಾನ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿದೆ. ಈ ಮೂಲಕ ಮೇಕ್ ಇನ್ ಇಂಡಿಯಾಗೆ ಇನ್ನೊಂದು ಪ್ರಮುಖ ಉತ್ತೇಜನ ದೊರಕಿದೆ.

    ಐಎಎಫ್ ತನ್ನ ಭತ್ತಳಿಕೆಗೆ 114 ವಿಮಾನಗಳನ್ನು ಸೇರಿಸಲು ಯೋಜನೆ ನಡೆಸಿದೆ. ಅದರಲ್ಲಿ 18 ವಿಮಾನಗಳನ್ನು ವಿದೇಶೀ ಮಾರಾಟಗಾರರಿಂದ ಆಮದು ಮಾಡಿಕೊಂಡು, ಉಳಿದ 96 ವಿಮಾನಗಳನ್ನು ಭಾರತದಲ್ಲೇ ತಯಾರಿಸಲು ಯೋಜಿಸಿದೆ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

    Fighter jet

    60 ವಿಮಾನಗಳನ್ನು ಭಾರತೀಯ ಕರೆನ್ಸಿಯಲ್ಲಿ ಪಾವತಿ ಮಾಡಲಾಗುವುದು. ಉಳಿದ 36 ವಿಮಾನಗಳಿಗಾಗಿ ಭಾಗಶಃ ಭಾರತೀಯ ಹಾಗೂ ಭಾಗಶಃ ವಿದೇಶೀ ಕರೆನ್ಸಿಯಿಂದ ಪಾವತಿ ಮಾಡಲಾಗುವುದು. ಸುಮಾರು ಶೇ.70 ರಷ್ಟು ವೆಚ್ಚವನ್ನು ಪಾವತಿಸಲು ಭಾರತೀಯ ಕರೆನ್ಸಿಯನ್ನೇ ಬಳಸುವ ಬಗ್ಗೆ ಯೋಜಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ದೇಶದಲ್ಲಿ ಆರಂಭವಾಗಿರುವ ದ್ವೇಷದ ಭಾವನೆ ಕುರಿತು ಮೋದಿ ಮೌನ ಮುರಿಯಲಿ: ಶಶಿ ತರೂರ್

    ದೇಶದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಹಳೆ ವಿಮಾನಗಳನ್ನು ಬದಲಿಸಲು ಐಎಎಫ್ 114 ವಿಮಾನಗಳನ್ನು ಸ್ವಾಧೀನಪಡಿಸುವ ಯೋಜನೆ ಮಾಡಿದೆ. ಯೋಜನೆಯಲ್ಲಿ ಕೆಲವು ವಿದೇಶೀ ವಿಮಾನಗಳನ್ನು ಸ್ಪರ್ಧೆಗೆ ನಿಲ್ಲಿಸಿ, ಪ್ರಯೋಗಗಳನ್ನು ನಡೆಸಿ, ಬಳಿಕ ಆಯ್ಕೆ ಮಾಡಲಾಗುವ 18 ವಿಮಾನಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಬೋಯಿಂಗ್, ಲಾಕ್‌ಹೀಡ್ ಮಾರ್ಟಿನ್, ಎಂಐಜಿ, ಡಸಲ್ಟ್ ಹಾಗೂ ಸಾಬ್‌ನಂತಹ ಕಂಪನಿಗಳು 3 ವರ್ಷಗಳಲ್ಲಿ ವಿಮಾನಗಳನ್ನು ತಯಾರಿಸುವ ಗುರಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ.