ಚಾಮರಾಜನಗರ: ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕಾಗಿ ರಾಜಕೀಯ ಪಕ್ಷಗಳ ನಡುವಿನ ಗುದ್ದಾಟ ತಾರಕಕ್ಕೇರಿದ್ದು, ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ.
ಜಿಲ್ಲೆಯ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮುಕ್ಕಡಹಳ್ಳಿ ಗ್ರಾಮ ಪಂಚಾಯ್ತಿ ಗೊಂದಲದ ಗೂಡಾಗಿ ಮಾರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಧ್ಯಕ್ಷ ಗಾದಿ ಬಿಜೆಪಿ ಪಾಲಾಗಿದೆ. 15 ಸದಸ್ಯ ಬಲದ ಗ್ರಾಪಂ ಇದಾಗಿದ್ದು, 9 ಕಾಂಗ್ರೆಸ್ ಬೆಂಬಲಿತ, 6 ಸದಸ್ಯರು ಬಿಜೆಪಿ ಬೆಂಬಲಿತರಿದ್ದಾರೆ. ಆದರೆ ಮೇ 19ರಂದು ನಡೆದ ಅಧ್ಯಕ್ಷ ಚುನಾವಣೆಯ ಗೌಪ್ಯ ಮತದಾನದಲ್ಲಿ ಬಿಜೆಪಿ ಬೆಂಬಲಿತ ಭಾಸ್ಕರ್‌ಗೆ ಎಂಟು ಮತ ದೊರೆತಿದ್ದು ಬಹುಮತ ಸಾಧಿಸಿದ್ದರೂ ಕಾಂಗ್ರೆಸ್ ನೆಲಕಚ್ಚಬೇಕಾಗಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ
ಚುನಾವಣಾಧಿಕಾರಿ ಕುಮ್ಮಕ್ಕಿನಿಂದಲೇ ಈ ರೀತಿಯ ಅವ್ಯವಹಾರ ನಡೆದಿದೆ. ಕಾಂಗ್ರೆಸ್ ಬೆಂಬಲಿತ 9 ಸದಸ್ಯರಲ್ಲಿ ಒಬ್ಬರೂ ಅಡ್ಡ ಮತದಾನ ಮಾಡಿಲ್ಲ. ಶಾಸಕ ನಿರಂಜನಕುಮಾರ್ ಅವರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಬ್ಯಾಲೆಟ್ ಪೇಪರ್ ತಿರುಚಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕಾಗಿ ಶಾಸಕರನ್ನು ಖರೀದಿಸಿದಂತೆ ಬಿಜೆಪಿಯವರು ಗ್ರಾಪಂ ಆಡಳಿತವು ತಮಗೆ ಬೇಕೆಂದು ಈ ರೀತಿ ಅಡ್ಡದಾರಿ ಹಿಡಿದಿದ್ದಾರೆ. ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಮರುಚುನಾವಣೆ ನಡೆಸಿ ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡಬೇಕು ಎಂದು ಕಾಂಗ್ರೆಸ್ ಬೆಂಬಲಿತ ಸದಸ್ಯರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?
ಶಾಸಕರ ಕುಮ್ಮಕ್ಕಿನಿಂದ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂಬ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಕಾಂಗ್ರೆಸ್ ಬೆಂಬಲಿತ ಇಬ್ಬರು ಸದಸ್ಯರೇ ನಮಗೆ ವೋಟು ನೀಡಿದ್ದಾರೆ. ಆಪರೇಷನ್ ಕಮಲ ಮಾಡುವ ಯಾವ ಅವಶ್ಯಕತೆಯೂ ಇಲ್ಲ. ಅಧ್ಯಕ್ಷ ಸ್ಥಾನ ತಪ್ಪಿತಲ್ಲ ಎಂಬ ಹತಾಷೆಯಿಂದ ಕಾಂಗ್ರೆಸ್‍ನವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ. ಚುನಾವಣೆ ಪಾರದರ್ಶಕತೆಯಿಂದ ನಡೆದಿದ್ದು ತನಿಖೆ ನಡೆಸಲಿ. ಸುಖಾ ಸುಮ್ಮನೆ ಕ್ಷೇತ್ರ ಶಾಸಕರ ಮೇಲೆ ಗುರುತರ ಆರೋಪ ಮಾಡುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಗ್ರಾಪಂನ 9 ಸದಸ್ಯರ ಸಾಮೂಹಿಕ ರಾಜೀನಾಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಧಿಕಾರಕ್ಕಾಗಿ ಬಿಜೆಪಿ ಅಡ್ಡ ದಾರಿ ಹಿಡಿದಿದೆಯೋ ಅಥವಾ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸ್ವ-ಇಚ್ಛೆಯಿಂದ ಬಿಜೆಪಿ ಬೆಂಬಲಿತ ಸದಸ್ಯರಿಗೆ ಮತದಾನ ಮಾಡಿದ್ದಾರೋ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ನವದೆಹಲಿ: ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಅಂಗಳ ಪ್ರವೇಶಿಸಿದ್ದು, ಇಂದು ನಡೆದ ವಾದ-ಪ್ರತಿವಾದಗಳು ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡಿತ್ತು. ರಾಜ್ಯಪಾಲರ ಪರ ತುಷಾರ್ ಮೆಹ್ತಾ, ಬಿಜೆಪಿ ಪರ ಮುಕುಲ್ ರೋಹ್ಟಗಿ, ಅಜಿತ್ ಪವಾರ್ ಪರ ಮಣಿಂದರ್ ಸಿಂಗ್ ಮತ್ತು ಶಿವಸೇನೆ, ಎನ್‍ಸಿಪಿ, ಕಾಂಗ್ರೆಸ್ ಪರ ಕಪಿಲ್ ಸಿಬಲ್ ಹಾಗೂ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತ್ರಿ ಸದಸ್ಯ ಪೀಠ ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ.
ತುಷಾರ್ ಮೆಹ್ತಾ ವಾದ (ರಾಜ್ಯಪಾಲರ ಪರ):
ರಾಜ್ಯಪಾಲರ ಬಹುಮತದ ಪತ್ರವನ್ನು ಇಂದು ಸುಪ್ರೀಂಕೋರ್ಟಿಗೆ ಸಲ್ಲಿಕೆ ಮಾಡಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಚುನಾವಣಾ ಪೂರ್ವ ಮೈತ್ರಿಯಾಗಿ ಕ್ಷೇತ್ರಗಳ ಹೊಂದಾಣಿಕೆ ಆಗಿತ್ತು. ಶಿವಸೇನೆಯ ನಿರ್ಧಾರದಿಂದಾಗಿ ಸ್ಥಿರ ಸರ್ಕಾರ ರಚನೆ ಮಾಡಲು ಸಾಧ್ಯವಾಗಲಿಲ್ಲ. ಫಲಿತಾಂಶ ಬಂದ 22 ದಿನ ಕಳೆದರೂ ಸರ್ಕಾರ ರಚನೆಯಾಗಲಿಲ್ಲ. ಹಾಗಾಗಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸ್ಸು ಮಾಡಿದರು ಎಂದು ರಾಜ್ಯಪಾಲರ ಪರ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಇದನ್ನೂ ಓದಿ: ಚಿಂತೆ ಬೇಡ, ಆಲ್ ಈಸ್ ವೆಲ್: ಅಜಿತ್ ಪವಾರ್
@KapilSibal : To ensure that the Speaker is one who enjoys the confidence of the House, I request you exercise your jurisdiction under A 142 and pass orders@DrAMSinghvi : Let us ask why Mr. Rohatgi is pressing for a regular Speaker
ಇದೇ ವೇಳೆ ತುಷಾರ್ ಮೆಹ್ತಾ, ಎನ್‍ಸಿಪಿಯ 54 ಶಾಸಕರ ಬೆಂಬಲ ಪತ್ರ ನೀಡಿದರು. ಎಲ್ಲ ಶಾಸಕರು ದೇವೇಂದ್ರ ಫಡ್ನವೀಸ್ ಅವರಿಗೆ ಬೆಂಬಲವಿದೆ ಎಂದು ಹೇಳಿದ್ದಾರೆ. ಎನ್‍ಸಿಪಿ ಶಾಸಕಾಂಗದ ಪಕ್ಷದ ನಾಯಕರಾಗಿ ಅಜಿತ್ ಪವಾರ್ ಆಯ್ಕೆಯಾಗಿದ್ದರು. ನವೆಂಬರ್ 22ರಂದು ಅಜಿತ್ ಪವಾರ್ ನೀಡಿದ ಪತ್ರದಲ್ಲಿ 54 ಶಾಸಕರ ಸಹಿ ಇತ್ತು. ಆ ಪತ್ರವನ್ನು ಸ್ವೀಕರಿಸಿ ರಾಜ್ಯಪಾಲರು ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಪತ್ರದಲ್ಲಿಯ ಸಹಿ ಅಸಲಿಯೋ ಅಥವಾ ನಕಲಿಯೋ ಎಂಬುದರ ತನಿಖೆ ಮಾಡೋದು ರಾಜ್ಯಪಾಲರ ಕೆಲಸವಲ್ಲ. ಸ್ಥಿರ ಸರ್ಕಾರಕ್ಕಾಗಿ ಫಡ್ನವೀಸ್ ಅವರಿಗೆ ಬೆಂಬಲ ನೀಡಿದ್ದೇವೆ ಎಂದು ಅಜಿತ್ ಪವಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ರಾಜ್ಯಪಾಲರ ನಡೆಯನ್ನು ತುಷಾರ್ ಮೆಹ್ತಾ ಸಮರ್ಥಿಸಿಕೊಂಡರು. ಇದನ್ನೂ ಓದಿ:ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯ ಆರಂಭ: ಶಿವಸೇನೆ
ಮುಕುಲ್ ರೋಹ್ಟಗಿ ವಾದ(ಬಿಜೆಪಿ ಪರ):
ಸರ್ಕಾರ ರಚನೆ ಮಾಡಿದ ಬಿಜೆಪಿಗೆ 170 ಶಾಸಕರ ಬೆಂಬಲವಿದೆ. ಚುನಾವಣೆಯ ಮಿತ್ರ ನಮಗೆ ಶತ್ರುವಾದರು. ಬೆಂಬಲ ಪತ್ರದಲ್ಲಿರುವ ಎಲ್ಲ ಸಹಿಗಳು ಅಸಲಿ. ಎನ್‍ಸಿಪಿ ಶಾಸಕಾಂಗ ಪಕ್ಷದ ನಾಯಕರು ನೀಡಿದ್ದ ಪತ್ರದ ಮೇಲೆ ರಾಜ್ಯಪಾಲರು ಸರ್ಕಾರ ರಚನೆಗೆ ಅವಕಾಶ ನೀಡಿದರು. ಇದೇ ವೇಳೆ ಮುಕುಲ್ ರೋಹ್ಟಗಿ ಕರ್ನಾಟಕದ ಪ್ರಕರಣವನ್ನು ಉಲ್ಲೇಖಿಸಿದರು. ವಿಶ್ವಾಸಮತ ಯಾಚನೆ ಮಾಡಲು ನಮಗೆ 10 ದಿನಗಳ ಕಾಲಾವಕಾಶ ನೀಡಬೇಕಿತ್ತು. ರಾಜ್ಯಪಾಲರು ಐದು ಮಾತ್ರ ಟೈಮ್ ಕೊಟ್ಟಿದ್ದಾರೆ. ಆದರೂ ಬಹುಮತ ಯಾಚನೆಗೆ ನಾವು ಸಿದ್ಧವಿದೆ. ರಾಜ್ಯಪಾಲರ ನಿರ್ಧಾರ ಸರಿಯೇ ಅಥವಾ ತಪ್ಪೇ ಎಂಬುದನ್ನು ನೀವು ತೀರ್ಮಾನಿಸಬೇಕು. ನೀವು (ಸುಪ್ರೀಂಕೋರ್ಟ್) ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡುವಂತಿಲ್ಲ.
A Singhvi for NCP-Congress: I'm happy to lose floor test today, but they (BJP alliance) don’t want floor test. He placed on record, affidavits signed by 154 MLAs showing their support, SC refused to accept it saying it can't now expand scope of petition.He withdrew the affidavits https://t.co/jY2W2nInKa
ಶಿವಸೇನೆ, ಕಾಂಗ್ರೆಸ್ ಮತ್ತು ಎನ್‍ಸಿಪಿ ಮೈತ್ರಿ ಕೂಟ ವಿಚಾರಣೆಗೂ ಮೊದಲೇ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಈ ಮಧ್ಯೆ ಎನ್‍ಸಿಪಿ ತನ್ನ ಶಾಸಕರನ್ನು ಹಿಡಿದಿಡ್ಡುಕೊಳ್ಳುವ ಸಲುವಾಗಿ ಕೇರಳಕ್ಕೆ ಶಿಫ್ಟ್ ಮಾಡಲು ತಯಾರಿ ನಡೆಸಿದೆ. ವಿಶ್ವಾಸಮತಯಾಚನೆ ಯಾವಾಗ ಮಾಡಬೇಕು ಎಂಬುದನ್ನು ವಿಧಾನಸಭೆಯಲ್ಲಿ ಸ್ಪೀಕರ್ ತೀರ್ಮಾನ ಮಾಡುತ್ತಾರೆ. ಈ ಮೊದಲು ಹಂಗಾಮಿ ಸ್ಪೀಕರ್ ನೇಮಕವಾದ ನಂತರವೇ ವಿಶ್ವಾಸಮತ ಆಗಬೇಕು. ವಿಧಾನಸಭಾ ಕಲಾಪ ಮತ್ತು ಹಂಗಾಮಿ ಸ್ಪೀಕರ್ ನೇಮಕ ಪ್ರಕ್ರಿಯೆ ಸುಪ್ರೀಂ ವ್ಯಾಪ್ತಿಗೆ ಬರಲ್ಲ. ಹಾಗಾಗಿ ಮಧ್ಯಂತರ ಆದೇಶ ನೀಡಬೇಡಿ. ಶಿವಸೇನೆಗಿಂತ ನಮಗೆ ಎರಡು ಪಟ್ಟ ಬೆಂಬಲವಿದೆ ಎಂದು ವಾದ ಮಂಡಿಸಿದರು. ಇದನ್ನೂ ಓದಿ: ಇತಿಹಾಸ ಸೃಷ್ಟಿ – ಒಂದೇ ವರ್ಷ ಮೂರು ಬಾರಿ ರಜಾದಿನದಲ್ಲಿ ಸುಪ್ರೀಂ ಕಲಾಪ
ಹೊಸದಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕರಿಸಬೇಕು. ಎಲ್ಲವೂ ವಿಧಾನಸಭಾ ನಿಯಮಾವಾಳಿಗಳ ಪ್ರಕಾರ ನಡೆಯಲಿ. ಅವಸರೇ ಮಾಡದೇ ನಿಧಾನವಾಗಿ ನಡೆಯಲಿ. ಸುಪ್ರೀಂಕೋರ್ಟ್ ವಿಧಾನಸಭಾ ಕಲಾಪದಲ್ಲಿ ಮಧ್ಯ ಪ್ರವೇಶಿಸುವಂತಿಲ್ಲ. ಹಂಗಾಮಿ ಸ್ಪೀಕರ್ ನೇಮಕ ಮಾಡುವಂತೆ ಆದೇಶಿಸುವಂತಿಲ್ಲ. ವಿಶ್ವಾಸಮತಯಾಚನೆಗೆ ನಮಗೆ 14 ದಿನಗಳ ಅವಕಾಶ ನೀಡಿ. 14 ದಿನ ಆಗಲ್ಲ ಅಂದ್ರೆ ಕನಿಷ್ಠ ಏಳು ದಿನಗಳನ್ನಾದರು ನೀಡಬೇಕು. ಇದನ್ನೂ ಓದಿ:ಮಹಾರಾಷ್ಟ್ರ ರಾಜಕೀಯ ಡ್ರಾಮಾ ನೋಡಿ ಅನಾರೋಗ್ಯಕ್ಕೀಡಾದ ಪ್ರೊಫೆಸರ್ – ರಜಾ ಅರ್ಜಿ ವೈರಲ್
Singhvi-What BJP alliance has shown to Court are signatures of 54 NCP MLAs electing Ajit Pawar as legislative party leader.They weren't signed support for joining BJP alliance to form govt.NCP support to Ajit Pawar was w/o any covering letter. How can Guv turn a blind eye to this https://t.co/jY2W2nInKa
ಮಣಿಂದರ್ ಸಿಂಗ್ (ಅಜಿತ್ ಪವಾರ್ ಪರ ವಕೀಲ): ನವೆಂಬರ್ 22ರಂದು ಎನ್‍ಸಿಪಿ ಪಕ್ಷದ ಶಾಸಕಾಂಗ ನಾಯಕನಾಗಿ ಅಜಿತ್ ಪವಾರ್ ಬೆಂಬಲ ಪತ್ರ ನೀಡಿದ್ದಾರೆ. ರಾಜ್ಯಪಾಲರು ತಮ್ಮ ವಿವೇಚನಾಧಿಕಾರ ಬಳಸಿ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಇದರಲ್ಲಿ ಅಜಿತ್ ಪವಾರ್ ನಡೆದುಕೊಂಡಿದ್ದು ಸರಿ ಇದೆ. ಇದರಲ್ಲಿ ಅಜಿತ್ ಪವಾರ್ ಅವರದ್ದು ತಪ್ಪಿಲ್ಲ. ಅಜಿತ್ ಪವಾರ್ ಎನ್‍ಸಿಪಿ ನಾಯಕ ಎಂದಾಗ ನ್ಯಾಯಾಧೀಶ ಖನ್ನಾ ಒಂದು ಕ್ಷಣ ನಸು ನಕ್ಕರು. ನಾವು ಕೊಟ್ಟ ಪತ್ರ ಅಸಲಿಯಾಗಿದ್ದು, ಎಲ್ಲ ಸಮಸ್ಯೆಗಳನ್ನು ಪಕ್ಷದೊಳಗೆಯೇ ಬಗೆಹರಿಸಿಕೊಳ್ಳುತ್ತೇವೆ. ನಾನೇ ಎನ್‍ಸಿಪಿ ಆಗಿದ್ದರಿಂದ ಬೇರೆಯವರ ಅರ್ಜಿಯನ್ನು ಸ್ವೀಕಾರ ಮಾಡಬಾರದು. ಎನ್‍ಸಿಪಿಯ ಎಲ್ಲ ಶಾಸಕರು ಬೆಂಬಲ ನೀಡಿದ್ದಾರೆ. ನಾವು ನೀಡಿರುವ ಬೆಂಬಲ ಪತ್ರ ಕಾನೂನು ಮತ್ತು ಸಂವಿಧಾನ ಬದ್ಧವಾಗಿದೆ ಎಂದು ಅಜಿತ್ ಪವಾರ್ ನಡೆಯನ್ನು ಮಣಿಂದರ್ ಸಿಂಗ್ ಸಮರ್ಥಿಸಿಕೊಂಡರು. ಇದನ್ನೂ ಓದಿ: 1978ರ ಇತಿಹಾಸ ಮರುಕಳಿಸಿದ ಅಜಿತ್ ಪವಾರ್
Abhishek Manu Singhvi representing NCP & Congress: When both the groups are open for Floor Test, why should there be a delay? Does a single NCP MLA here say we will join the BJP alliance? Is there a single covering letter saying this. This was the fraud committed on democracy. pic.twitter.com/Gyl0xCBmcB
ಕಪಿಲ್ ಸಿಬಲ್ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ನವೆಂಬರ್ 23ಕ್ಕೆ ನಾವು ಹಕ್ಕು ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ರಾಜ್ಯಪಾಲರು ನಮಗೆ ಅವಕಾಶ ನೀಡಲಿಲ್ಲ. ನವೆಂಬರ್ 22 ರಾತ್ರಿ 7ರಿಂದ ಬೆಳಗ್ಗೆ 5.47ರ ನಡುವೆ ಏನಾಯ್ತು ಎಂಬುದರ ಬಗ್ಗೆ ಮಾಹಿತಿ ನೀಡಬೇಕು. ಅಕ್ಟೋಬರ್ 24ರಿಂದ ನವೆಂಬರ್ 22ರವರೆಗೆ ರಾಜ್ಯಪಾಲರು ಕಾಯುತ್ತಿದ್ದರು. ಇಷ್ಟು ದಿನ ಕಾದಿದ್ದ ರಾಜ್ಯಪಾಲರಿಗೆ ಒಂದು ಕಾಯಲು ಆಗಲಿಲ್ಲ. ಒಂದು ದಿನ ಮೊದಲೇ ಸುದ್ದಿಗೋಷ್ಠಿ ನಡೆಸಿ ಉದ್ಧವ್ ಠಾಕ್ರೆ ನಮ್ಮ ಸಿಎಂ ಎಂದು ಘೋಷಣೆ ಮಾಡಲಾಗಿತ್ತು. ಎನ್‍ಸಿಪಿ ನಿರ್ಣಯ ಪತ್ರವನ್ನು ತೋರಿಸಿಲ್ಲ. ಈ ಕ್ಷಣಕ್ಕೂ 54 ಶಾಸಕರು ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವಶ್ಯವಿದ್ದರೆ ನಾವು ಅಫಡವಿಟ್ ಸಲ್ಲಿಸಲು ಸಿದ್ಧರಿದ್ದೇವೆ. ಬಿಜೆಪಿಗೆ ಬೆಂಬಲ ನೀಡಬೇಕು ಎಂಬುದರ ಬಗ್ಗೆ ಎನ್‍ಸಿಪಿ ತೀರ್ಮಾನ ತೆಗೆದುಕೊಂಡಿರಲಿಲ್ಲ. ರಾಜ್ಯಪಾಲರು ಬಿಜೆಪಿಗೆ ಅನಕೂಲವಾಗುವಂತೆ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ವಿವೇಚನೆ ಮೀರಿ ವರ್ತಿಸಿದ್ದಾರೆ. ಹಾಗಾಗಿ ಬೇಗ ಬಹುಮತ ಸಾಬೀತಿಗೆ ಸೂಚಿಸಬೇಕೆಂದು ಕಪಿಲ್ ಸಿಬಲ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಬಿಜೆಪಿಗೆ ಅಧಿಕಾರದ ಕುರ್ಚಿ ನೀಡಿದ ಅಜಿತ್ ಪವಾರ್ ಯಾರು? ಇಲ್ಲಿದೆ ಮಾಹಿತಿ
NCP-Congress-Shiv Sena petition: Kapil Sibal says, floor test should be conducted in 24 hrs.Senior member of House should conduct it with videography & single ballot. It is in cover of night that for some, new opportunities come knocking, let floor test be conducted in full light https://t.co/mc7o4iFR9e
ರಾತ್ರಿಯವರೆಗೂ ಕಾಯೋದು ಬೇಡ, ಇವತ್ತೆ ಅಂದ್ರೆ ಹಗಲಲ್ಲೇ ಬಹುಮತ ಪ್ರಕ್ರಿಯೆ ನಡೆಯಲಿ. ಅಜಿತ್ ಪವಾರ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಅಜಿತ್ ಪವಾರ್ ನೀಡಿದ ಪತ್ರಕ್ಕೆ ಯಾವುದೇ ಬೆಲೆ ನೀಡುವುದು ಬೇಡ. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಎನ್‍ಸಿಪಿ ಶಾಸಕರರನ್ನು ಯಾರು ಹೈಜಾಕ್ ಮಾಡಿಲ್ಲ. ಎಲ್ಲರೂ ಶರದ್ ಪವಾರ್ ಜೊತೆಯಲ್ಲಿದ್ದಾರೆ. ಹಿರಿಯ ಶಾಸಕರೊಬ್ಬರು ಸ್ಪೀಕರ್ ಆಗಲಿ, ಅವರೇ ಕಲಾಪ ನಡೆಸಿಕೊಡಲಿ. ಇದನ್ನೂ ಓದಿ: ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ
ಶಾಸಕರು ನೀಡಿದ ಸಹಿ ಪತ್ರಕ್ಕೆ ಯಾವುದೇ ಕವರಿಂಗ್ ಲೆಟರ್ ಇರಲಿಲ್ಲ. ಆದರೆ ರಾಜ್ಯಪಾಲರು ಆ ಪತ್ರವನ್ನು ಹೇಗೆ ಒಪ್ಪಿದ್ರೆ ಎಂಬುವುದು ಗೊತ್ತಾಗಿಲ್ಲ. ನಾವು ನಮ್ಮ ಮೈತ್ರಿಗಾಗಿ ಮತ್ತು ಅಜಿತ್ ಪವಾರ್ ಶಾಸಕಾಂಗ ನಾಯಕರಾಗಿ ಮಾಡಲು ಶಾಸಕರು ಸಹಿ ಮಾಡಿದ್ದರು. ಅದೇ ಪತ್ರವನ್ನು ಅಜಿತ್ ಪವಾರ್ ರಾಜ್ಯಪಾಲರಿಗೆ ನೀಡಿದ್ದಾರೆ. 154 ಶಾಸಕರ ಬೆಂಬಲ ಪತ್ರವನ್ನು ನೀಡಿದರು. ಆದ್ರೆ ಎನ್‍ಸಿಪಿಯ ಅಫಿಡವಿಟ್ ಮಾನ್ಯ ಮಾಡಲಿಲ್ಲ. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್
Letter by Congress-NCP -Shiv Sena given at Raj Bhawan staking claim to form government, saying that the present govt doesn't have the numbers. pic.twitter.com/bpgifp6xQG
ಅಭಿಷೇಕ್ ಮನುಸಿಂಘ್ವಿ (ಎನ್‍ಸಿಪಿ, ಶಿವಸೇನೆ, ಕಾಂಗ್ರೆಸ್ ಪರ): ಕರ್ನಾಟಕದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ತೆಗೆದುಕೊಂಡ ತೀರ್ಮಾನವನ್ನು ಇಲ್ಲಿಯೂ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವಕ್ಕೆ ಮೋಸ ಮಾಡಲಾಗುತ್ತಿದೆ. ಹಾಗಾಗಿ ಇಂದೇ ಬಹುಮತ ಸಾಬೀತು ಮಾಡಲು ಸೂಚಿಸಬೇಕು. ಬಿಜೆಪಿಯವರದ್ದು ಅರ್ಧ ಬುದ್ಧಿಯಾಗಿದ್ದು, ಕೆಲ ಶಾಸಕರ ಸಹಿಯನ್ನು ನಕಲು ಮಾಡಿದ್ದಾರೆ. ನಮಗೆ ಏಳು ಪಕ್ಷೇತರರ ಜೊತೆ 161 ಶಾಸಕರ ಬೆಂಬಲ ನಮ್ಮ ಮೈತ್ರಿಗಿದೆ. ಇಂದು ವಿಶ್ವಾಸಮತಯಾಚನೆ ಆದೇಶ ನೀಡಬೇಕು. ತಕ್ಷಣವೇ ವಿಶ್ವಾಸಮತಯಾಚನೆಗೆ ಆದೇಶ ನೀಡಬೇಕು, ಇಲ್ಲವಾದ್ರೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತದೆ. ಅಜಿತ್ ಪವಾರ್ ನೀಡಿರುವ ಪತ್ರಕ್ಕೆ ಯಾವುದೇ ಬೆಲೆ ಇಲ್ಲ. ವಿಶ್ವಾಸಮತಯಾಚನೆ ವೇಳೆ ಬಿಜೆಪಿ ನಮ್ಮನ್ನು ಸೋಲಿಸಿದ್ರೆ, ನಾವು ಒಪ್ಪಿಕೊಳ್ಳುತ್ತೇವೆ. ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡುವಾಗ ಶಾಸಕರು ಹಾಕಿದ ಸಹಿಯುಳ್ಳ ಪತ್ರವನ್ನೇ ಅಜಿತ್ ಪವಾರ್ ನೀಡಿದ್ದಾರೆ. ಅದೇ ಪತ್ರವನ್ನು ರಾಜ್ಯಪಾಲರು ಒಪ್ಪಿಕೊಂಡಿದ್ದು ತಪ್ಪು. ತಮಗೆ ಬೆಂಬಲವಿದೆ ಎಂದು ಹೇಳುವ ಬಿಜೆಪಿ 24 ಗಂಟೆಯೊಳಗೆ ಬಹುಮತ ಸಾಬೀತು ಮಾಡಲಿ ಎಂದು ಸಿಂಘ್ವಿ ಸವಾಲು ಎಸೆದರು.
ನವದೆಹಲಿ: ಇಂದು ವಾದ-ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ, ಮಹಾರಾಷ್ಟ್ರ ಸರ್ಕಾರಕ್ಕೆ ಸಂಬಂಧಿಸಿದ ತೀರ್ಪನ್ನು ನಾಳೆ ಬೆಳಗ್ಗೆ 10.30ಕ್ಕೆ ಕಾಯ್ದಿರಿಸಿದೆ. ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಮತ್ತೊಂದು ದಿನದ ಜೀವದಾನ ಸಿಕ್ಕಂತಾಗಿದೆ.
ನಿನ್ನೆ ಸುಪ್ರೀಂನಲ್ಲಿ ಏನಾಗಿತ್ತು?
ಬಹುಮತ ಇಲ್ಲದಿದ್ದರೂ ಫಡ್ನವಿಸ್ ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯಪಾಲರ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪ್ರತ್ಯೇಕವಾಗಿ ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ಸೋಮವಾರ ನ್ಯಾ.ಎನ್‍ವಿ ರಮಣ, ಅಶೋಕ್ ಭೂಷಣ್, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆದಿತ್ತು. ವಿಚಾರಣೆಯಲ್ಲಿ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸಿದ ಪತ್ರ ಮತ್ತು ಸರ್ಕಾರ ರಚನೆ ಮಾಡಲು ದೇವೇಂದ್ರ ಫಡ್ನವಿಸ್ ಅವರಿಗೆ ಇರುವ ಅಗತ್ಯ ಸಂಖ್ಯೆಯ ಶಾಸಕರ ಸಹಿಯುಳ್ಳ ಪತ್ರವನ್ನು ಪೀಠದ ಮುಂದೆ ಹಾಜರುಪಡಿಸುವಂತೆ ಪೀಠ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
Mukul Rohatgi representing Maharashtra BJP: Governor in this case has given 14 days for floor test, reasonable time can be 7 days.The most important thing right now is the procedure of Appointment of Protem Speaker, Oath, Election of Speaker, and Agenda.
ಈ ಅರ್ಜಿಯ ವಿಚಾರಣೆ ವೇಳೆ ಅವಕಾಶ ನೀಡಿದರೆ ನಾವೇ ಬಹುಮತ ಸಾಬೀತು ಮಾಡ್ತೇವೆ ಯಾಕೆ ಎಲ್ಲರೂ ತೊಂದರೆ ತೆಗೆದುಕೊಳ್ಳುತ್ತೀರಿ ಎಂದು ಮಹಾರಾಷ್ಟ್ರ ಸರ್ಕಾರದ ಪರವಾಗಿ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಅಷ್ಟೇ ಅಲ್ಲದೇ ಈ ಪ್ರಕರಣ ವಿಚಾರಣೆಗೆ ಅರ್ಹವಲ್ಲ. ಭಾನುವಾರ ರಜೆ ಇದೆ. ಹೀಗಾಗಿ ತುರ್ತು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಮನವಿ ಮಾಡಿದ್ದರು. ಈ ವೇಳೆ ನ್ಯಾ.ಎನ್‍ವಿ ರಮಣ ಅವರು, ಭಾನುವಾರ ನಮಗೂ ರಜೆ. ಆದರೆ ಮುಖ್ಯ ನ್ಯಾಯಾಧೀಶರು ತುರ್ತು ಅರ್ಜಿ ವಿಚಾರಣೆ ನಡೆಸಬೇಕು ಎಂದು ನಮಗೆ ಸೂಚಿಸಿದ್ದಾರೆ. ಹೀಗಾಗಿ ನಾವು ವಿಚಾರಣೆ ನಡೆಸುತ್ತೇವೆ ಎಂದು ಹೇಳಿದ್ದರು.
ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಕಳೆದ ವರ್ಷ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಒಂದು ದಿನದ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದನ್ನು ಉಲ್ಲೇಖಿಸಿ, ರಾಜ್ಯಪಾಲರ ನಿರ್ಧಾರ ಸರಿಯಲ್ಲ. ಯಾವ ದಾಖಲೆಗಳು ಇಲ್ಲದೇ ಪ್ರಕ್ರಿಯೆ ಅನುಸರಿಸದೇ ಸರ್ಕಾರ ರಚನೆ ಆಗಿದೆ. ರಾಷ್ಟ್ರಪತಿ ಆಡಳಿತ ತೆರವಿನ ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಅವರಿಗೆ ಬಹುಮತ ಇದ್ದರೇ ಸಾಬೀತು ಮಾಡಲಿ. ಅವಸರವಾಗಿ ಯಾಕೆ ಪ್ರಮಾಣ ವಚನ ಸ್ವೀಕರಿಸಬೇಕು ಕೂಡಲೇ ಸುಪ್ರೀಂ ಬಹುಮತ ಸಾಬೀತಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದರು.
ನವದೆಹಲಿ: ಲೋಕಸಭೆಯಲ್ಲಿ ಭರ್ಜರಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಕಡಿಮೆ ಸಂಖ್ಯಾಬಲ ಹೊಂದಿದ್ದ ಎನ್‍ಡಿಎ ಈಗ ಮೇಲ್ಮನೆಯಲ್ಲೂ ಬಹುಮತದ ಹತ್ತಿರ ಬಂದಿದೆ.
ಕರ್ನಾಟಕದ ಸಂಸದ ಕೆ.ಸಿ. ರಾಮಮೂರ್ತಿ ಅವರು ಕಾಂಗ್ರೆಸ್‍ಗೆ ರಾಜೀನಾಮೆ ಘೋಷಿಸಿದ್ದರಿಂದ ರಾಜ್ಯಸಭೆಯಲ್ಲಿ ಕೈ ಪಾಳಯದ ಬಲಾಬಲ 45ಕ್ಕೆ ಕುಸಿದಿದೆ. ಈ ಸ್ಥಾನಕ್ಕಾಗಿ ನಡೆಯುವ ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿರುವ ಕಾರಣ ಈ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ರಾಜ್ಯಸಭಾ ಸಂಖ್ಯಾಬಲ 84ಕ್ಕೆ ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ಒಟ್ಟು 245 ಸ್ಥಾನಗಳಿರುವ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸದಸ್ಯರ ಬೆಂಬಲ ಬೇಕು. ಸದ್ಯ ಈಗ ಒಟ್ಟು ಐದು ಸ್ಥಾನಗಳು ಖಾಲಿಯಿದ್ದು, ಎನ್‍ಡಿಎ ಮೈತ್ರಿಕೂಟದ ಒಟ್ಟು ಬಲಾಬಲ 106 ಇದೆ. ಮಹತ್ವದ ಮಸೂದೆ ಚರ್ಚೆಯ ವೇಳೆ ಎಐಎಡಿಎಂಕೆ 11, ಬಿಜೆಡಿ 7, ಟಿಆರ್‍ಎಸ್ 6, ವೈಎಸ್‍ಆರ್ ಕಾಂಗ್ರೆಸ್ 2 ಸೇರಿದಂತೆ ಇನ್ನೂ ಮೂರು ಪ್ರಾದೇಶಿಕ ಪಕ್ಷಗಳ ಸದಸ್ಯರು ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ.
ಬಿಜೆಪಿಯ ಮುಖಂಡರು ಈಗಾಗಲೇ ಪ್ರತಿಪಕ್ಷಗಳಿಂದ ಇನ್ನೂ ಹೆಚ್ಚು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮತ್ತೆ ಯಾವ ಪಕ್ಷದಿಂದ ಯಾರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ರಾಜೀನಾಮೆ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ರಾಮಮೂರ್ತಿ ಪ್ರತಿಕ್ರಿಯಿಸಿ, ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಬಗ್ಗೆ ಸೋನಿಯಗಾಂಧಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ತಕ್ಷಣಕ್ಕೆ ತೆಗೆದುಕೊಂಡಿರುವ ನಿರ್ಧಾರ ಅಲ್ಲ. ಒಂದು ವರ್ಷಕ್ಕೂ ಹೆಚ್ಚು ಸಮಯ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಹಿಂದೆ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಅನುಭವವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಬಿಜೆಪಿ ಸೇರುವ ಬಗ್ಗೆ ಒಲವು ಇದೆ. ನನ್ನನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ನಾನು ಬಿಜೆಪಿ ಸೇರಲು ಸಿದ್ಧವಾಗಿದ್ದೇನೆ. ಅಮಿತ್ ಶಾ ಅವರನ್ನು ಬೇರೆ ಬೇರೆ ಕಾರಣಗಳಿಗೆ ಭೇಟಿ ಮಾಡಿದ್ದೇನೆ. ಬಿಜೆಪಿ ಕೆಲ ನಾಯಕರನ್ನು ಭೇಟಿ ಮಾಡಿದ್ದೆ. ಬಿಜೆಪಿ ಸೇರುವ ಬಗ್ಗೆ ಇನ್ನು ಮಾತುಕತೆ ಮಾಡಿಲ್ಲ ಮತ್ತು ಈಗಲೇ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಯಾವುದೇ ಆಮಿಷಗಳಿಗೆ ನಾನು ಬಲಿಯಾಗಿಲ್ಲ ಮತ್ತು ರಾಜೀನಾಮೆ ನೀಡಲು ಯಾವುದೇ ಬೆದರಿಕೆಗಳು ಇಲ್ಲ. ಒಂದೆರಡು ದಿನದಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.
ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಿದ್ದಾರೆ. 105 ಶಾಸಕರು ಸರ್ಕಾರದ ಪರ ಬೆಂಬಲ ವ್ಯಕ್ತಪಡಿಸಿದ ಪರಿಣಾಮ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕೃತವಾಗಿ ಕರ್ನಾಟಕದ ಚುಕ್ಕಾಣಿ ಹಿಡಿದಿದೆ.
ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲ 224 ಆಗಿದ್ದು 17 ಮಂದಿಯನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದರು. 105 ಶಾಸಕರ ಬೆಂಬಲ ಹೊಂದಿದ್ದರಿಂದ ಬಿಎಸ್‍ವೈ ಬಹುಮತ ಸಾಬೀತು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಬಹುಮತ ಸಾಬೀತು ಪಡಿಸಲು 105 ಶಾಸಕರ ಬೆಂಬಲ ಬೇಕಿತ್ತು. ಧ್ವನಿಮತದ ಮೂಲಕ ಯಡಿಯೂರಪ್ಪ ಸರ್ಕಾರ ಪಾಸ್ ಆಗಿದ್ದು ಮುಂದಿನ 6 ತಿಂಗಳು ಯಾವುದೇ ಸಮಸ್ಯೆ ಇಲ್ಲದೇ ಅಧಿಕಾರ ನಡೆಸಬಹುದು.
ಸದನದಲ್ಲಿ ಮಾತನಾಡಿದ ಯಡಿಯೂರಪ್ಪ, ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಿದ್ದೇನೆ. ಜನ ಸೇವೆಯೇ ಜನಾರ್ದನ ಸೇವೆ ಎಂದು ತಿಳಿದುಕೊಂಡಿದ್ದೇನೆ. ನಮ್ಮ ಸರ್ಕಾರಕ್ಕೆ ವಿರೋಧ ಪಕ್ಷಗಳ ಸಹ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು. ನನ್ನನ್ನು ವಿರೋಧಿಸಿದರೂ ನಾನು ದ್ವೇಷ ಮಾಡುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಮಾತನಾಡಿ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ದೀರ್ಘ ಕಾಲ ಚರ್ಚೆ ನಡೆದಿದೆ. ಹೀಗಾಗಿ ಜಾಸ್ತಿ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿ, ನಾನು ನಾಯಕರ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಜಾಸ್ತಿ ಮಾತನಾಡುವುದಿಲ್ಲ. ಮಾತೇ ಸಾಧನೆಯಾಗಬಾರದು. ಸಾಧನೆ ಮಾತನಾಡಬೇಕು ಎಂದರು.
ಬೆಂಗಳೂರು: ರಾಜ್ಯದ ಜನರಿಗೆ ಸುಭದ್ರ, ರೈತ, ಜನಪರ ಸರ್ಕಾರವನ್ನು ನೀಡುವುದು ಬಿಜೆಪಿ ಪಕ್ಷದ ಉದ್ದೇಶವಾಗಿದೆ. ಉತ್ತಮ ಆಡಳಿತವನ್ನು ಬಿಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ನೀಡುತ್ತೇವೆ ಎಂದು ಸಂಸದ ಪ್ರಹ್ಲಾದ್ ಜೋಶಿ ಭರವಸೆ ನೀಡಿದ್ದಾರೆ.
ಬಿಎಸ್‍ವೈ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸೋಮವಾರ ಸದನದಲ್ಲಿ ಸರ್ಕಾರ ಬಹುಮತ ಸಾಬೀತು ಮಾಡಲಿದ್ದು, ನೂರಕ್ಕೆ ನೂರು ವಿಶ್ವಾಸ ಇದೆ ಎಂದರು.
ಸೌಹಾರ್ದಯುತ ಭೇಟಿ ಮಾಡಿ ಬಿಎಸ್‍ವೈ ಅವರಿಗೆ ಶುಭ ಹಾರೈಸಿದ್ದೇನೆ. ಅವರು ಹೋರಾಟಗಾರರಾಗಿದ್ದು, ಸ್ವಪ್ರಯತ್ನದಿಂದ ರೈತ ನಾಯಕನಾಗಿ ಹೊರ ಹೊಮ್ಮಿದವರು. ಅಧಿಕಾರಕ್ಕೆ ಬಂದ ತಕ್ಷಣ ರೈತರ ಪರವಾದ ನಿರ್ಣಯ ಕೈಗೊಂಡಿದ್ದಾರೆ. ಅವರ ಈ ನಿರ್ಣಯ ಬಡವರು, ಕೂಲಿಕಾರ್ಮಿಕರು, ನೇಕಾರರ ಜೀವನಗುಣಮಟ್ಟ ಹೆಚ್ಚಿಸಲಿದ್ದಾರೆ ಎಂದರು.
ಬೆಂಗಳೂರು: ಸಿಎಂಗೆ ಮಾನ, ಮರ್ಯಾದೆ ಇದ್ದರೆ ಸಂತೆ ಭಾಷಣ ಬಿಟ್ಟು ಬಹುಮತ ಸಾಬೀತು ಮಾಡಲಿ ಎಂದು ಬಿಜೆಪಿ ನಾಯಕ ಆರ್. ಅಶೋಕ್ ಮುಖ್ಯಮಂತ್ರಿಯವರಿಗೆ ಸವಾಲು ಹಾಕಿದ್ದಾರೆ.
ಇಂದು ವಿಧಾನಸೌಧದ ಕೆಂಗಲ್ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನ್ಯ ಮುಖ್ಯಮಂತ್ರಿ ಅವರಿಗೆ ಪ್ರಮಾಣ ವಚನ ಬೋಧನೆ ಮಾಡಿರುವುದು ಗವರ್ನರ್. ಅವರ ಮುಂದೆ ಬಹುಮತ ಸಾಬೀತು ಮಾಡಲಿ ಎಂದು ಹೇಳಿದರು.
ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಆರಂಭವಾಗಿದೆ. ಜೆಡಿಎಸ್ ಪಕ್ಷಕ್ಕೆ ತಲೆಬುಡವಿಲ್ಲ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಸಹ ಮೌನವಹಿಸಿ ಸುಮ್ಮನೆ ಕಾಲಹರಣ ಮಾಡುತ್ತಿದೆ. ಈ ರೀತಿಯ ವಿಚಾರದಲ್ಲಿ ನಮ್ಮ ರಾಜ್ಯ ದೇಶಕ್ಕೆ ಮಾದರಿಯಗುವಂತಹ ನಡೆ ಇರಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ಸದನದಲ್ಲಿ ಶಾಸಕ ಶ್ರೀನಿವಾಸ್‍ಗೌಡ ಬಿಜೆಪಿ ನನಗೆ ಹಣದ ಆಮಿಷವನ್ನು ನೀಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, ಈ ವಿಚಾರದ ಬಗ್ಗೆ ಇದೇ ರೀತಿಯ ಹೇಳಿಕೆ ನೀಡಿರುವ ಸಂಬಂಧ ಶ್ರೀನಿವಾಸ್‍ಗೌಡಗೆ ಮೂರು ಬಾರಿ ನೊಟೀಸ್ ನೀಡಲಾಗಿತ್ತು. ಅವರು ಎಸಿಬಿಗೆ ಉತ್ತರಿಸಲಾಗದೇ ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎಂದು ಹೇಳಿದರು.
ಪಣಜಿ: ಇಂದು ನಡೆದ ವಿಶ್ವಾಸ ಮತಯಾಚನೆಯಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್ ಬಹುಮತವನ್ನು ಸಾಬೀತು ಪಡಿಸಿದ್ದಾರೆ.
20 ಶಾಸಕರು ಸರ್ಕಾರದ ಪರವಾಗಿ ವೋಟ್ ಚಲಾಯಿಸಿದ ಪರಿಣಾಮ ಬಿಜೆಪಿ ಗೋವಾ ರಾಜ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 11 ಬಿಜೆಪಿ, 3 ಎಂಜೆಪಿ, 3 ಜಿಎಂಫ್‍ಪಿ, ಮೂರು ಮಂದಿ ಪಕ್ಷೇತರ ಸದಸ್ಯರು ವಿಶ್ವಾಸ ಮತಯಾಚನೆಯ ಪರವಾಗಿ ವೋಟ್ ಹಾಕಿದ್ದರೆ, 14 ಕಾಂಗ್ರೆಸ್, ಓರ್ವ ಎನ್‍ಸಿಪಿ ಶಾಸಕರು ವಿರೋಧಿಸಿ ವೋಟ್ ಹಾಕಿದರು.
20 MLAs voted for the motion (11 BJP, 3 Maharashtrawadi Gomantak Party, 3 Goa Forward Party, and 3 Independents) and 15 MLAs voted against the motion (14 Congress and 1 NCP) in the Goa assembly. https://t.co/tycar2i7KQ
ಒಟ್ಟು 40 ಸಂಖ್ಯಾ ಬಲದ ಗೋವಾ ವಿಧಾನಸಭೆಯಲ್ಲಿ ಪ್ರಸ್ತುತ 36 ಸದಸ್ಯರಿದ್ದಾರೆ. ಪ್ರಸ್ತುತ ಗೋವಾದಲ್ಲಿ ಬಿಜೆಪಿ 12 ಸದಸ್ಯ ಬಲವನ್ನು ಹೊಂದಿದ್ದು, ಬಿಜೆಪಿ ಮೈತ್ರಿ ಪಕ್ಷಗಳಾದ ಎಂಜಿಪಿ ಮತ್ತು ಜಿಎಫ್‍ಪಿ ಮೂರು ಶಾಸಕರನ್ನು ಹೊಂದಿದೆ. ಆ ಮೂಲಕ ಬಿಜೆಪಿ ಮೈತ್ರಿಕೂಟ ಒಟ್ಟು 15 ಸ್ಥಾನಗಳನ್ನು ಹೊಂದುವ ಮೂಲಕ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದು ಬಿಜೆಪಿ ಹೇಳಿತ್ತು. ಅಷ್ಟೇ ಅಲ್ಲದೇ ಮೂವರು ಪಕ್ಷೇತರ ಶಾಸಕರೂ ಕೂಡ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರು.
#Goa: Floor Test begins in Goa Assembly. Goa CM Pramod Sawant to prove majority of his government in the assembly. pic.twitter.com/RmQVYtWMOV
ಮಾಜಿ ಸಿಎಂ ದಿವಂಗತ ಮನೋಹರ್ ಪರಿಕ್ಕರ್ ಅವರ ಸಾವಿನ ಬೆನ್ನಲ್ಲೇ ಗೋವಾದಲ್ಲಿ ಭಾರೀ ರಾಜಕೀಯ ಬೆಳವಣಿಗೆ ಆರಂಭವಾಗಿತ್ತು. ಪರಿಕ್ಕರ್ ನಿಧನರಾದ ರಾತ್ರಿಯೇ ಕಾಂಗ್ರೆಸ್ ಸರ್ಕಾರಕ್ಕೆ ಬಹುಮತವಿಲ್ಲ. ಸರ್ಕಾರ ರಚಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿತ್ತು. ಕಾಂಗ್ರೆಸ್ ಸರ್ಕಾರ ರಚಿಸಲು ಪ್ರಯತ್ನ ನಡೆಸುತ್ತಿದ್ದಂತೆ ಎಚ್ಚೆತ್ತ ಬಿಜೆಪಿ ನಾಯಕರು ಮಂಗಳವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದರು.
ಢಾಕಾ: ಬಾಂಗ್ಲಾದೇಶ ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಏಕದಿನ ಕ್ರಿಕೆಟ್ ತಂಡದ ನಾಯಕ ಮಷ್ರಫೆ ಮೊರ್ತಜಾ ಎದುರಾಳಿ ವಿರುದ್ಧ ಬಾರಿ ಅಂತರದ ಮತಗಳಲ್ಲಿ ಗೆಲುವು ಪಡೆಯುವ ಮೂಲಕ ಸಂಸತ್‍ಗೆ ಆಯ್ಕೆ ಆಗಿದ್ದಾರೆ.
ಬಾಂಗ್ಲಾದೇಶದ 11ನೇ ಸಂಸತ್ ಚುನಾವಣೆಯಲ್ಲಿ ಮೊರ್ತಜಾ, ನರೈಲ್ -2 ಕ್ಷೇತ್ರದಲ್ಲಿ ಆಡಳಿತಾರೂಢ ಅವಾಮಿ ಲೀಗ್‍ನಿಂದ ಸ್ಪರ್ಧೆ ಮಾಡಿದ್ರು. ಈ ಚುನಾವಣೆಯಲ್ಲಿ ಮೊರ್ತಜಾ ಒಟ್ಟು 2,74,418 ಮತ ಪಡೆದಿದ್ದು, ಅವರ ಎದುರಾಳಿ ಅಭ್ಯರ್ಥಿ ಕೇವಲ 7,883 ಮತ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಡಿ.9 ರಂದು ಆರಂಭವಾದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಮೊರ್ತಜಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವುದರಿಂದ ನನ್ನ ಆಟದ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ ಎಂದು ತಿಳಿಸಿದ್ದರು.
ರಾಜಕೀಯ ಪ್ರವೇಶದ ಕುರಿತು ಈ ಹಿಂದೆ ಹೇಳಿಕೆ ನೀಡಿದ್ದ 35 ವರ್ಷದ ಮೊರ್ತಜಾ, ದೇಶ ಸೇವೆ ಮಾಡಲು ಜನರ ಬಳಿ ಅವಕಾಶ ನೀಡಲು ಜನರ ಬಳಿ ಮನವಿ ಮಾಡುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೇ ದೇಶದ ಪ್ರಧಾನಿಗಳು ಈ ಅವಕಾಶವನ್ನು ನನಗೆ ನೀಡಿದ್ದಾಗಿ ಹೇಳಿದ್ದರು. ಕ್ರಿಕೆಟ್ ವೃತ್ತಿ ಜೀವನದ ಕುರಿತ ಪ್ರಶ್ನೆಗೆ ಉತ್ತರಿಸಿ, 2019ರ ವಿಶ್ವಕಪ್ ತಮ್ಮ ಗುರಿ ಆಗಿದ್ದು, ಆ ಬಳಿಕ ನಿವೃತ್ತಿ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದರು.
ಅಂದಹಾಗೇ ಮಷ್ರಫೆ ಮೊರ್ತಜಾ ಚುನಾವಣೆ ಸ್ಪರ್ಧಿಸಿದ್ದ ಪಕ್ಷ ಆಡಳಿತಾ ರೂಢ ಶೇಖ್ ಹಸೀನ ಅವರ ನಾಯಕತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆ ಮಾಡುವ ಅವಕಾಶ ಪಡೆದಿದೆ.