Tag: Major

  • ‘ಮಾಜರ್’ ಸಿನಿಮಾ ಹಾಡು ರಿಲೀಸ್ ಮಾಡಿದ ಸಚಿವ ಕೆ.ಗೋಪಾಲಯ್ಯ

    ‘ಮಾಜರ್’ ಸಿನಿಮಾ ಹಾಡು ರಿಲೀಸ್ ಮಾಡಿದ ಸಚಿವ ಕೆ.ಗೋಪಾಲಯ್ಯ

    ಗೀತ ರಚನೆಕಾರನಾಗಿ ಸಾಕಷ್ಟು ಜನಪ್ರಿಯ ಚಿತ್ರಗೀತೆಗಳನ್ನು ಬರೆದಿರುವ ಲೋಕಲ್ ಲೋಕಿ (Local Loki) ನಿರ್ದೇಶನದ ‘ಮಾಜರ್’ (Major) ಚಿತ್ರದ ಹಾಡುಗಳನ್ನು (Song Release) ಸಚಿವ ಕೆ‌.ಗೋಪಾಲಯ್ಯ (K. Gopalaya) ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಾಯಕ ಶ್ರೀನಗರ ಕಿಟ್ಟಿ, ರಾಜಕೀಯ ಮುಖಂಡರಾದ ಜಯರಾಮ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ, ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಚಿತ್ರಕ್ಕೆ ಶುಭ ಹಾರೈಸಿದರು.

    ನಾನು ಸಾಕಷ್ಟು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗೀತರಚನೆಕಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈಗ ಮಾಜರ್ ಎಂಬ ಚಿತ್ರವನ್ನು ನಿರ್ದೇಶಿಸಿದ್ದೇನೆ. ಈ ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಮೂರು ಬಿಟ್ ಗಳಿದೆ. ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಹುಚ್ಚ ವೆಂಕಟ್, ಸಂತೋಷ್ ವೆಂಕಿ, ಶಶಾಂಕ್ ಶೇಷಗಿರಿ ಹಾಡಿದ್ದಾರೆ. ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ರಾಜೇಶ್ ರಾಮನಾಥ್ ಅವರದು. ಇನ್ನು ಚಿತ್ರದ ಬಗ್ಗೆ ಹೇಳುವುದಾದರೆ, ಅನಾದಿಕಾಲದಿಂದಲೂ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ. ಆದರೆ ತಪಿತಸ್ಥರಿಗೆ ನೀಡುವ ಶಿಕ್ಷೆ ಬಹಳ ಕಡಿಮೆ. ಹೆಣ್ಣನ್ನು ಶೋಷಣೆ ಮಾಡಿದವರಿಗೆ ಯಾವ ರೀತಿ ಶಿಕ್ಷೆ ನೀಡಬೇಕೆಂದು ಈ ಚಿತ್ರದಲ್ಲಿ ತೋರಿಸಿದ್ದೇವೆ. ಬರೀ ಇಷ್ಟೇ ಅಲ್ಲ. ಲವ್ ಸ್ಟೋರಿ ಕೂಡ ನಮ್ಮ ಚಿತ್ರದಲ್ಲಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಲೋಕಲ್ ಲೋಕಿ ಹೇಳಿದರು. ಇದನ್ನೂ ಓದಿ: ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಕನ್ನಡದಲ್ಲಿ ಚಿತ್ರವೊಂದನ್ನು ನಿರ್ಮಿಸುವ ಆಸೆಯಿತ್ತು. ಲೋಕಿ ಅವರು ಹೇಳಿದ ಕಥೆ ಇಷ್ಟವಾಗಿ, ನಿರ್ಮಾಣ ಮಾಡಿದ್ದೇನೆ ಎಂದರು ನಿರ್ಮಾಪಕ ಮುರುಗನಂಥನ್.  ಹಾಡುಗಳ ಬಗ್ಗೆ ಎ.ಟಿ.ರವೀಶ್ ಮಾಹಿತಿ ನೀಡಿದರು. ಚಿತ್ರದಲ್ಲಿ ನಟಿಸಿರುವ ಉಗ್ರಂ ರವಿ, ಅರ್ಜುನ್, ರಂಜಿತ್ ಪ್ರಿನ್ಸ್  ಹಾಗೂ ನೃತ್ಯ ನಿರ್ದೇಶಕರಾದ ಸೈ ಗೀತ, ವಾಸ್ತು ನಾಗ ಮಾಜರ್ ಚಿತ್ರದ ಬಗ್ಗೆ ಮಾತನಾಡಿದರು.

  • ಅಭಿಮಾನಿಗಳ ಒತ್ತಾಯ: ಕನ್ನಡದಲ್ಲಿ ಬರಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ

    ಅಭಿಮಾನಿಗಳ ಒತ್ತಾಯ: ಕನ್ನಡದಲ್ಲಿ ಬರಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ

    ನ್ನಡಿಗರೇ ಆಗಿ ಹೋಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬದುಕಿನ ಕುರಿತಾಗಿ ‘ಮೇಜರ್’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಲೀಸ್ ಆಗಿದ್ದು, ಕನ್ನಡಕ್ಕೆ ಡಬ್ ಮಾಡದೇ ತಮಿಳಿನಲ್ಲೇ ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ಹಾಗಾಗಿ ಕನ್ನಡದಲ್ಲೂ ಈ ಸಿನಿಮಾ ರಿಲೀಸ್ ಆಗಲಿ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

    ಬೆಂಗಳೂರಿನಲ್ಲೇ ಬಾಳಿ ಬದುಕಿ, ಕೊನೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದಾಗಲೂ ಅವರ ಸಮಾಧಿಯನ್ನು ಬೆಂಗಳೂರಿನಲ್ಲೇ ಮಾಡಲಾಗಿದೆ. ಈ ಹೊತ್ತಿಗೂ ಸಂದೀಪ್ ಅವರ ಕುಟುಂಬ ಬೆಂಗಳೂರಿನಲ್ಲೇ ನೆಲೆಯೂರಿದೆ. ಕನ್ನಡಿಗರ ನೆಚ್ಚಿನ ಮೇಜರ್ ಆಗಿದ್ದ ಸಂದೀಪ್ ಅವರ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ. ಇದನ್ನೂ ಓದಿ : Exclusive : ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಮೊದಲ ವರ್ಷದ ಪುಣ್ಯಸ್ಮರಣೆ : ಪುತ್ಥಳಿ ಅನಾವರಣ

    ಈ ಸಿನಿಮಾದ ಪ್ರಚಾರಕ್ಕೆಂದು ಸಿನಿಮಾ ತಂಡ ಬೆಂಗಳೂರಿಗೂ ಬಂದಿತ್ತು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಯಾಕೆ ಈ ಸಿನಿಮಾ ಬರುತ್ತಿಲ್ಲ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕೆ ಎದುರಾಯಿತು. ಸ್ಸಾರಿ ಮಾಡುವುದಕ್ಕೆ ಆಗಲಿಲ್ಲ, ಕ್ಷಮಿಸಿ ಎಂದಷ್ಟೇ ಉತ್ತರ ಸಿಕ್ಕಿತು. ಕನ್ನಡಿಗರೇ ಆಗಿದ್ದ ಸಂದೀಪ್ ಅವರ ಬಗ್ಗೆ ಕನ್ನಡದಲ್ಲೇ ಸಿನಿಮಾ ನೋಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಆದರೆ, ಈ ಸಿನಿಮಾವನ್ನು ಪರಭಾಷೆಯಲ್ಲಿ ನೋಡುವುದು ಅನಿವಾರ್ಯವಾಗಿದೆ. ಇದನ್ನೂ ಓದಿ : ಕೆಜಿಎಫ್ 2 ಐವತ್ತು ದಿನ ಪೂರೈಸಿದ ಬೆನ್ನಲ್ಲೆ ಮತ್ತೊಂದು ಹೊಸ ಸಿನಿಮಾ ರಿಲೀಸ್ ಘೋಷಣೆ

    ಸಂದೀಪ್ ಉನ್ನಿಕೃಷ್ಣ ಅವರ ಬಯೋಪಿಕ್ ಗೆ ‘ಮೇಜರ್’ ಎಂದು ಹೆಸರಿಡಲಾಗಿದೆ. ತೆಲುಗಿನ ನಟ ಅರಿವಿ ಶೇಷ ಅವರು ಸಂದೀಪ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಖ್ಯಾತ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ಈ ಸಿನಿಮಾದ ಹಿಂದಿದ್ದಾರೆ.

  • ಕನ್ನಡದಲ್ಲಿ ಇಲ್ಲ, ಕನ್ನಡಿಗರೇ ಆಗಿದ್ದ  ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ

    ಕನ್ನಡದಲ್ಲಿ ಇಲ್ಲ, ಕನ್ನಡಿಗರೇ ಆಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಸಿನಿಮಾ

    ಮೂಲತಃ ಮಲಯಾಳಿ ಆದರೂ, ಕನ್ನಡಿಗರೇ ಆಗಿ ಹೋಗಿದ್ದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಬದುಕಿನ ಕುರಿತಾಗಿ ‘ಮೇಜರ್’ ಹೆಸರಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾ ಇದೇ ಜೂ.03ರಂದು ದೇಶಾದ್ಯಂತ ರಿಲೀಸ್ ಆಗುತ್ತಿದೆ. ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಕನ್ನಡದಲ್ಲಿ ಮಾತ್ರ ಬೇರೆ ಭಾಷೆಯಲ್ಲೇ ಈ ಸಿನಿಮಾ ನೋಡಬೇಕಂತೆ. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಬೆಂಗಳೂರಿನಲ್ಲೇ ಬಾಳಿ ಬದುಕಿ, ಕೊನೆಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಹುತಾತ್ಮರಾದಾಗಲೂ ಅವರ ಸಮಾಧಿಯನ್ನು ಬೆಂಗಳೂರಿನಲ್ಲೇ ಮಾಡಲಾಗಿದೆ. ಈ ಹೊತ್ತಿಗೂ ಸಂದೀಪ್ ಅವರ ಕುಟುಂಬ ಬೆಂಗಳೂರಿನಲ್ಲೇ ನೆಲೆಯೂರಿದೆ. ಕನ್ನಡಿಗರ ನೆಚ್ಚಿನ ಮೇಜರ್ ಆಗಿದ್ದ ಸಂದೀಪ್ ಅವರ ಸಿನಿಮಾವನ್ನು ಕನ್ನಡ ಭಾಷೆಯಲ್ಲಿ ಏಕೆ ಬಿಡುಗಡೆ ಮಾಡುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಲಾಗುತ್ತಿದೆ.

    ಈ ಸಿನಿಮಾದ ಪ್ರಚಾರಕ್ಕೆಂದು ಸಿನಿಮಾ ತಂಡ ಬೆಂಗಳೂರಿಗೂ ಬಂದಿತ್ತು. ಈ ಸಂದರ್ಭದಲ್ಲಿ ಕನ್ನಡದಲ್ಲಿ ಯಾಕೆ ಈ ಸಿನಿಮಾ ಬರುತ್ತಿಲ್ಲ ಎಂಬ ಪ್ರಶ್ನೆ ಕೂಡ ಚಿತ್ರತಂಡಕ್ಕೆ ಎದುರಾಯಿತು. ಸ್ಸಾರಿ ಮಾಡುವುದಕ್ಕೆ ಆಗಲಿಲ್ಲ, ಕ್ಷಮಿಸಿ ಎಂದಷ್ಟೇ ಉತ್ತರ ಸಿಕ್ಕಿತು. ಕನ್ನಡಿಗರೇ ಆಗಿದ್ದ ಸಂದೀಪ್ ಅವರ ಬಗ್ಗೆ ಕನ್ನಡದಲ್ಲೇ ಸಿನಿಮಾ ನೋಡಬೇಕು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು. ಆದರೆ, ಈ ಸಿನಿಮಾವನ್ನು ಪರಭಾಷೆಯಲ್ಲಿ ನೋಡುವುದು ಅನಿವಾರ್ಯವಾಗಿದೆ.

    ಸಂದೀಪ್ ಉನ್ನಿಕೃಷ್ಣ ಅವರ ಬಯೋಪಿಕ್ ಗೆ ‘ಮೇಜರ್’ ಎಂದು ಹೆಸರಿಡಲಾಗಿದೆ. ತೆಲುಗಿನ ನಟ ಅರಿವಿ ಶೇಷ ಅವರು ಸಂದೀಪ್ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಖ್ಯಾತ ತೆಲುಗು ನಟ ಪ್ರಿನ್ಸ್ ಮಹೇಶ್ ಬಾಬು ಅವರು ಈ ಸಿನಿಮಾದ ಹಿಂದಿದ್ದಾರೆ.

  • ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು ಸಿನಿಮಾ: ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ

    ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತು ಸಿನಿಮಾ: ಸಂದೀಪ್ ತಂದೆಯ ಪಾತ್ರದಲ್ಲಿ ಪ್ರಕಾಶ್ ರೈ

    ದಿಮೂರು ವರ್ಷಗಳ ಹಿಂದೆ ಮುಂಬೈನ ತಾಜ್ ಹೋಟೆಲ್ ನಲ್ಲಿ ನಡೆದ ಟೆರರ್ ಅಟ್ಯಾಕ್ ನಲ್ಲಿ ಪ್ರಾಣ ತೆತ್ತ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಕುರಿತಾಗಿ ತೆಲುಗುನಲ್ಲಿ ಸಿನಿಮಾವೊಂದು ತಯಾರಾಗಿದೆ. ಅವರ ತ್ಯಾಗ, ಬಲಿದಾನಗಳ ಕಥಾ ಹಂದರ ಹೊತ್ತ ತಯಾರಾಗುತ್ತಿರುವ ಸಿನಿಮಾದಲ್ಲಿ ಸಂದೀಪ್ ಅವರ ಲೈಫ್ ಜರ್ನಿ ಕೂಡ ಇದೆಯಂತೆ. ಸಂದೀಪ್ ಉನ್ನಿಕೃಷ್ಣನ್ ಪಾತ್ರದಲ್ಲಿ ಅಡವಿ ಶೇಷು ಕಾಣಿಸಿಕೊಂಡಿದ್ದರೆ, ಸಂದೀಪ್ ಅವರ ತಂದೆಯಾಗಿ ಕನ್ನಡಿಗ ಪ್ರಕಾಶ್ ರೈ ನಟಿಸಿದ್ದಾರೆ. ಇದನ್ನೂ ಓದಿ : ಮಗುವಿಗಾಗಿ ಪ್ಲ್ಯಾನ್ ಮಾಡಿದ್ದಾರಂತೆ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್

    ಮುಂಬೈ ತಾಜ್ ಹೋಟೆಲ್ ಹೈಜಾಕ್ ಮಾಡಿ, ಸಾವು ನೋವಿಗೆ ಕಾರಣವಾದ ಆ ಘಟನೆಯನ್ನು 26/11 ಅಟ್ಯಾಕ್ ಎಂದೇ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಕರಾಳ ಅಧ್ಯಾಯವನ್ನು ಸಿನಿಮಾ ಮಾಡಿ, ಅದನ್ನು ತೆರೆಗೆ ತರುತ್ತಿದ್ದಾರೆ ಪ್ರಿನ್ಸ್ ಮಹೇಶ್ ಬಾಬು ಪ್ರೊಡಕ್ಷನ್ ಕಂಪೆನಿ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ವಿವಾದ : ಶಶಿ ತರೂರು ಮತ್ತು ಅನುಪಮ್ ಖೇರ್ ಜಟಾಪಟಿ

    ಸಂದೀಪ್ ಉನ್ನಿಕೃಷ್ಣನ್ ಮೂಲತಃ ಕೇರಳದವರು. ಆದರೆ, ವಾಸವಾಗಿದ್ದು ಬೆಂಗಳೂರಿನಲ್ಲಿ ಹಾಗಾಗಿ ಕೇರಳ, ಕರ್ನಾಟಕ ಸೇರಿದಂತೆ ಹಲವು ಕಡೆ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆಯಂತೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು, ನೋಡುಗರು ಟ್ರೈಲರ್ ಗೆ ಫಿದಾ ಆಗಿದ್ದಾರೆ. ದೇಶಭಕ್ತಿ ಸಾರುವಂತಹ ಇಂತಹ ಸಿನಿಮಾಗಳು ಇನ್ನಷ್ಟು ಬರಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ : ಜ್ಯೂ.ರವಿಚಂದ್ರನ್ ಖ್ಯಾತಿಯ ಲಕ್ಷ್ಮಿ ನಾರಾಯಣ್ ನಿಧನ

    ಈ ಸಿನಿಮಾಗಾಗಿ ಸತತ ಹತ್ತು ವರ್ಷಗಳಿಂದ ಪ್ರಯತ್ನ ನಡೆದಿದೆಯಂತೆ. ಕೊನೆಗೂ ಸಂದೀಪ್ ಅವರ ತಂದೆ ತಾಯಿಯನ್ನು ಒಪ್ಪಿಸಿ, ಇಂಥದ್ದೊಂದು ಪಾತ್ರದಲ್ಲಿ ನಾನು ಕಾಣಿಸಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ ಶೇಷು. ಈ ಚಿತ್ರಕ್ಕೆ ಶಶಿ ಕಿರಣ್ ಅವರು ನಿರ್ದೇಶನ ಮಾಡಿದ್ದು ಪ್ರಿನ್ಸ್ ಮಹೇಶ್ ಬಾಬು ನಿರ್ಮಾಪಕರು. ಹೀಗಾಗಿ ಹಿಂದಿ, ತೆಲುಗು ಮತ್ತು ಮಲಯಾಳಂನಲ್ಲಿ ಈ ಸಿನಿಮಾ ತಯಾರಾಗಿದೆ. ಈ ಚಿತ್ರಕ್ಕೆ ಮೇಜರ್ ಎಂದು ಹೆಸರಿಡಲಾಗಿದೆ.

  • ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

    ಗಡಿಯಲ್ಲಿ ಮತ್ತೆ ಉಗ್ರರ ಪುಂಡಾಟ- ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

    ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು, ಓರ್ವ ಲ್ಯಾನ್ಸ್ ನಾಯ್ಕ್, ರೈಫಲ್ ಮ್ಯಾನ್ ಹಾಗೂ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾದವರು. ಉಗ್ರರು ಭಾರತೀಯ ಯೋಧರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಘಟನೆ ನಡೆದಿದೆ. ಇದನ್ನೂ ಓದಿ: ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು, ಓರ್ವ ಸಹಚರನನ್ನು ಸದೆಬಡಿದ ಸೇನೆ

    ಶ್ರೀನಗರದಿಂದ 70 ಕಿ.ಮೀ ದೂರದಲ್ಲಿರುವ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರದ ಚಂಜ್‍ಮುಲ್ಲಾ ಪ್ರದೇಶದಲ್ಲಿ ಶನಿವಾರ ರಾತ್ರಿ ಉಗ್ರರು ಗುಂಡಿ ದಾಳಿ ನಡೆಸಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅಲ್ಲಿನ ನಾಗರಿಕರ ರಕ್ಷಣೆಗೆ ಮುಂದಾಗಿತ್ತು. ಆದರೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಐವರು ಭದ್ರತಾ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ.

    ಕುಪ್ವಾರಾ ಜಿಲ್ಲೆಯ ಚಂದಿಮುಲ್ಲಾದಲ್ಲಿರುವ ಜನರನ್ನು ಒತ್ತೆಯಾಳು ಮಾಡಿಕೊಳ್ಳಲು ಉಗ್ರರು ಕರೆದೊಯ್ಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಭಾರತೀಯ ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದರು. ಸೇನೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ತಂಡವು ಚಂದಿಮುಲ್ಲಾ ಪ್ರದೇಶದಿಂದ ನಾಗರಿಕನನ್ನು ಯಶಸ್ವಿಯಾಗಿ ಹೊರಹಾಕಿತು. ಆದರೆ ಕಾರ್ಯಾಚರಣೆಯಲ್ಲಿ ಕರ್ನಲ್ ಆಶುತೋಷ್ ಶರ್ಮಾ, ಮೇಜರ್ ಅಂಜು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ.

    ಆಶುತೋಷ್ ಶರ್ಮಾ ಅವರು 21 ರಾಷ್ಟ್ರೀಯ ರೈಫಲ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಗಡಿಯಲ್ಲಿ ಒಳನುಸುಳುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಹೀರೋ ಎಂದು ಗುರುತಿಸಿಕೊಂಡಿದ್ದರು. ಈ ಹಿಂದೆ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಆಶುತೋಷ್ ಶರ್ಮಾ ಅವರ ಕೂಡುಗೆ ಮಹತ್ವದ್ದಾಗಿತ್ತು.

  • ಸಸ್ಯಾಹಾರದಿಂದಲೇ ಉಕ್ಕಿನಂಥ ದೇಹ – ಮಲೇಷ್ಯಾದ ಐರನ್‍ಮ್ಯಾನ್ ಪ್ರಶಸ್ತಿ ವಿಜೇತರು

    ಸಸ್ಯಾಹಾರದಿಂದಲೇ ಉಕ್ಕಿನಂಥ ದೇಹ – ಮಲೇಷ್ಯಾದ ಐರನ್‍ಮ್ಯಾನ್ ಪ್ರಶಸ್ತಿ ವಿಜೇತರು

    ಬೆಳಗಾವಿ: ದೇಹದಾರ್ಢ್ಯ ಸೇರಿದಂತೆ ದೇಹ ದಂಡಿಸುವ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಬಹುತೇಕ ಮಾಂಸಾಹಾರಿ ಆಗಿರುತ್ತಾರೆ. ಆದರೆ ಸಸ್ಯಾಹಾರಿ ಸೇನಾಧಿಕಾರಿಯೊಬ್ಬರು ಮಲೇಷಿಯಾದಲ್ಲಿ ನಡೆದ ಐರನ್ ಮ್ಯಾನ್ ಕಠಿಣ ದೇಹ ದಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತಂದಿದ್ದಾರೆ.

    ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಐರನ್ ಮ್ಯಾನ್ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿ ಶಂಕರ್ ಕರಜಗಿ ಪ್ರಥಮ ಸ್ಥಾನ ಪಡೆದಿದ್ದಾರೆ. ಶಂಕರ್ ಕರಜಗಿ ಕನ್ನಡಿಗರು ಎನ್ನುವುದು ನಮ್ಮೆಲ್ಲರ ಹೆಮ್ಮೆ. ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿಯಾಗಿರುವ ಶಂಕರ್ ಟೆರಿಟೋರಿಯಲ್ ಆರ್ಮಿಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

    17 ಗಂಟೆಯ ಅವಧಿಯಲ್ಲಿ ಶಂಕರ್ ಅವರು 3 ಕಿ.ಮೀ ಸಮುದ್ರದಲ್ಲಿ ಈಜುವ, ನಂತರ 42 ಕಿ.ಮೀ ಬೆಟ್ಟ ಗುಡ್ಡಗಳಲ್ಲಿ ಓಡುವ ಹಾಗು 40 ಡಿಗ್ರಿ ತಾಪಮಾನವಿರುವ ಬೆಟ್ಟ ಗುಡ್ಡಗಳ ಸಾಲಿನಲ್ಲಿ 180 ಕಿ.ಮೀ ಸೈಕಲ್ ಸವಾರಿ ಮಾಡುವ ಚಾಲೆಂಜ್ ಸ್ವೀಕರಿಸಿ 15 ಗಂಟೆ 43 ನಿಮಿಷಗಳಲ್ಲಿ ಯಶಸ್ವಿಯಾಗಿ ನಿಭಾಯಿಸಿ ಐರನ್ ಮ್ಯಾನ್ ಪ್ರಶಸ್ತಿ ಜಯಿಸಿದ್ದಾರೆ. ಇವರ ಸಾಧನೆ ಮೆಚ್ಚಿರುವ ಸೇನೆ, ಈಗ ಸೇನಾಪದಕ ಪುರಸ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ಸಾಮಾನ್ಯವಾಗಿ ದೇಹದಂಡನೆಗೆ ಕನಿಷ್ಠ ಮೊಟ್ಟೆಯನ್ನಾದರೂ ಸೇವಿಸಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಶಂಕರ್ ಅವರು ಪಕ್ಕಾ ಸಸ್ಯಾಹಾರಿ. ರಾತ್ರಿ ಊಟ ಕೂಡ ಮಾಡದೆ ಫಿಟ್ ಆ್ಯಂಡ್ ಫೈನ್ ಆಗಿದ್ದಾರೆ. ಶಂಕರ್ ಅವರಿಗೆ ಸದ್ಯ 53 ವಯಸ್ಸು. ಈ ವಯಸ್ಸಿನಲ್ಲಿ ಗಣನೀಯ ಸಾಧನೆ ಮಾಡಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

    ಮಾಂಸಾಹಾರ ಸೇವಿಸಿಯೇ ಇಂತಹ ಕಠಿಣ ಸ್ಪರ್ಧೆಯಲ್ಲಿ ಭಾಗಿಯಾಗಬೇಕು ಎನ್ನುವ ಮನಸ್ಥಿತಿಯನ್ನು ಬದಿಗಿಟ್ಟು ಯುವಕರೇ ನಾಚಿಸುವಂಥ ಸಾಧನೆ ಮಾಡಿದ್ದಾರೆ. ಶಂಕರ್ ಅವರು ಬೆಂಗಳೂರಿನ ಎಂಜಿ ರಸ್ತೆಯ ಭಾರತ್ ಪೆಟ್ರೋಲಿಯಂ ಬ್ರಾಂಚ್‍ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದಾರೆ.

  • ಪಾರ್ಟಿ ಹೆಸ್ರಲ್ಲಿ ಕರೆದೊಯ್ದು ಮೇಜರ್ ಅತ್ಯಾಚಾರ..!

    ಪಾರ್ಟಿ ಹೆಸ್ರಲ್ಲಿ ಕರೆದೊಯ್ದು ಮೇಜರ್ ಅತ್ಯಾಚಾರ..!

    ಬೆಂಗಳೂರು: ಪಾರ್ಟಿ ಹೆಸರಲ್ಲಿ ಮೇಜರ್ ವೊಬ್ಬ ಯುವತಿಯನ್ನು ಕರೆದೊಯ್ದ ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಕಳೆದ ಫೆ.4ರಂದು ಬೆಂಗಳೂರಿನ ಹಳೆ ಏರ್ ಪೋರ್ಟ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಅಮೀತ್ ಚೌದ್ರಿ ಅತ್ಯಾಚಾರವೆಸಗಿದ ಮೇಜರ್. ಬಾಸ್ ಮನೆಗೆ ಪಾರ್ಟಿಗೆಂದು ಹೋಗಿದ್ದೆ. ಬಳಿಕ ಬಾಸ್ ಮನೆಯಲ್ಲಿ ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರಿನಲ್ಲೇ ಅಮೀತ್ ಚೌದ್ರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಆರೋಪಿಸುತ್ತಿದ್ದಾಳೆ.

    ಪೊಲೀಸರು ಆರೋಪಿ ಅಮೀತರ್ ಚೌದ್ರಿಯನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ. ಈ ಪ್ರಕರಣ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆದ್ರೆ ಇದೀಗ ಕೇಸ್ ಹಲಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದೆ.

    ಹಲಸೂರು ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಸದ್ಯ ಈ ಪ್ರಕರಣದಲ್ಲಿ ಆರೋಪಿ ಅಮೀತ್ ಚೌದ್ರಿಗೆ ಜಾಮೀನು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

    ಮೇಜರ್ ಪತ್ನಿಯನ್ನು ಮತ್ತೊಬ್ಬ ಮೇಜರ್ ಹತ್ಯೆಗೈದ!

    ನವದೆಹಲಿ: ಸೇನಾ ಮೇಜರ್ ಒಬ್ಬರ ಪತ್ನಿಯ ಶವ ದೆಹಲಿಯ ರಸ್ತೆಯೊಂದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಮೇಜರ್ ಅಮಿತ್ ದ್ವಿವೇದಿ ಪತ್ನಿ ಶೈಲಜಾ ದ್ವಿವೇದಿ (35) ಮೃತದೇಹ ಶನಿವಾರ ಮಧ್ಯಾಹ್ನ ದೆಹಲಿಯ ದೆಹಲಿಯ ಕಂಟೋನ್ಮೆಂಟ್ ಮೆಟ್ರೋ ನಿಲ್ದಾಣ ಸಮೀಪದಲ್ಲಿ ಸಿಕ್ಕಿದೆ.

    ಶವ ಪತ್ತೆಯಾದ ಆರಂಭದಲ್ಲಿ ಅಪಘಾತದಿಂದ ಶೈಲಾಜ ದ್ವಿವೇದಿ ಮೃತಪಟ್ಟಿದ್ದಾರೆ ಎಂದು ತಿಳಿಯಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಶೈಲಾಜ ಪತಿಗೆ ಪರಿಚಯವಿದ್ದ ಮೇಜರ್ ಒಬ್ಬ ಈ ಕೃತ್ಯ ಎಸಗಿದ್ದಾನೆ ಎನ್ನುವ ಶಂಕೆ ವ್ಯಕ್ತವಾಗಿದೆ.

    ಪ್ರಾಥಮಿಕ ವರದಿಯ ಪ್ರಕಾರ ಶೈಲಜಾ ಅವರು ಅಪಘಾತದಲ್ಲಿ ಮೃತಪಟ್ಟಿಲ್ಲ. ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಲಾಗಿದ್ದು, ಕೊಲೆ ಮಾಡಿರುವ ವ್ಯಕ್ತಿ ಅಮಿತ್ ಹಾಗೂ ಶೈಲಜಾ ಅವರ ಆತ್ಮೀಯ ವ್ಯಕ್ತಿಯಾಗಿದ್ದಾನೆ. ಅಲ್ಲದೇ ಶಂಕಿತ ವ್ಯಕ್ತಿ ಮೇಜರ್ ಆಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತ ಪಡೆಸಿದ್ದಾರೆ. ಸದ್ಯ ಶಂಕಿತ ವ್ಯಕ್ತಿಯ ಸುಳಿವು ಸಿಕ್ಕಿದೆ. ಆದರೆ ಆತನ ಮೊಬೈಲ್ ನಂಬರ್ ಸ್ವೀಚ್ ಆಫ್ ಮಾಡಿಕೊಂಡಿದ್ದಾನೆ ಎಂದು ದೆಹಲಿಯ ನಗರ ಪೊಲೀಶ್ ಜಂಟಿ ಆಯುಕ್ತ ಮಧುಪ್ ತಿವಾರಿ ತಿಳಿಸಿದ್ದಾರೆ.

    ನಡೆದಿದ್ದು ಏನು?
    ಶೈಲಜಾ ಅವರು ಬೆಳಗ್ಗೆ 10 ಗಂಟೆಗೆ ಬ್ಯಾಸ್ ಆಸ್ಪತ್ರೆಗೆ ಫಿಸಿಯೋಥೆರಫಿ ಅಧಿವೇಶನಕ್ಕೆ ಹೋಗಿಬೇಕಿತ್ತು. ಅಧಿವೇಶನದ ನಂತರ ಶೈಲಜಾ ಅವರನ್ನು ಕರೆದುಕೊಂಡು ಬರಲು ಚಾಲಕ ಆಸ್ಪತ್ರೆಗೆ ಬಂದಿದ್ದನು. ಈ ವೇಳೆ ಶೈಲಜಾ ಅವರು ಅಧಿವೇಶನಕ್ಕೆ ಹಾಜರಾಗಿಲ್ಲ ಎನ್ನುವ ಮಾಹಿತಿ ಪಡೆದ ಚಾಲಕ, ಶೈಲಜಾ ಅವರ ಪತಿ ಮೇಜರ್ ಅಮಿತ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಪತಿಯನ್ನು ಹುಡುಕುತ್ತ ಅಮಿತ್ ಅವರು ಪೆರೆಡ್ ಗ್ರೌಂಡ್ ಕಡೆಗೆ ಹೋಗುತ್ತಾರೆ. ಶೈಲಜಾ ಅವರ ಕುರಿತಾಗಿ ಯಾವುದೇ ಮಾಹಿತಿ ದೊರೆಯದ ಕಾರಣ ಸಂಜೆ 4.30 ಗಂಟೆಗೆ ನಾಪತ್ತೆ ದೂರು ದಾಖಲಿಸಲು ಠಾಣೆಗೆ ಹೋಗುತ್ತಾರೆ. ಈ ವೇಳೆ ಪೊಲೀಸರು ರಸ್ತೆ ಅಪಘಾತದಲ್ಲಿ ಬಿದ್ದಿದ್ದ ಮಹಿಳೆಯ ಶವವನ್ನು ತೋರಿಸುತ್ತಾರೆ. ಈ ಶವವನ್ನು ನೋಡಿದ ಪತಿ ಅಮಿತ್ ಶೈಲಜಾ ಅವರ ಗುರುತು ಹಿಡಿಯುತ್ತಾರೆ.

    ಕೊಲೆ ಶಂಕೆ ವ್ಯಕ್ತವಾಗಿದ್ದು ಹೇಗೆ?
    ಮಧ್ಯಾಹ್ನ 1.28 ಗಂಟೆಗೆ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಶೈಲಜಾ ರಸ್ತೆಯಲ್ಲೇ ಬಿದ್ದಿದ್ದಾರೆ. ಅಪಘಾತದ ಮಾಹಿತಿ ಪಡೆದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನಾ ಸ್ಥಳದಲ್ಲಿ ಒಂದೇ ವಾಹನ ಪದೇ ಪದೇ ಶೈಲಜಾ ಮೃತ ದೇಹದ ಸುತ್ತ ಹಾದು ಹೋಗಿದ್ದ ಗುರುತುಗಳು ಪೊಲೀಸರಿಗೆ ಸಿಕ್ಕಿದೆ. ಪತಿ ಅಮಿತ್ ಪತ್ನಿಯ ಗುರುತು ಹಿಡಿಯುವವರೆಗೂ ಶೈಲಜಾ ಯಾರು ಎನ್ನುವುದು ಪೊಲೀಸರಿಗೆ ತಿಳಿದಿರಲಿಲ್ಲ. ಮಾಹಿತಿ ಸಿಗುತ್ತಿದ್ದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಪರಿಚಿತ ವ್ಯಕ್ತಿಯೇ ಕೊಲೆ ಮಾಡಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಿದ್ದರು. ತೀವ್ರ ತನಿಖೆ ಕೈಗೊಂಡ ಪೊಲೀಸರು, ಶೈಲಜಾ ಅವರ ಫೋನ್ ಕರೆ ದಾಖಲೆಗಳನ್ನು ಪರಿಶೀಸಿದಾಗ ಶಂಕಿತ ಆರೋಪಿಯು ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ಅಮೀತ್ ದ್ವಿವೇದಿ ಅವರು ನಾಗಾಲ್ಯಾಂಡ್‍ನ ಜಾಕ್ಲೀಸ್ ಯುನಿಟ್‍ನ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪತ್ನಿ ಶೈಲಜಾ ಹಾಗೂ ಆರು ವರ್ಷದ ಮಗನೊಂದಿಗೆ ವಾಸವಾಗಿದ್ದರು. ಎರಡು ತಿಂಗಳ ಹಿಂದಷ್ಟೇ ರಜೆ ಪಡೆದು ದೆಹಲಿಗೆ ಬಂದಿದ್ದರು. ಅಲ್ಲದೇ ಅಮಿತ್ ಅವರನ್ನು ಕೆಲವು ವಾರಗಳ ಮಟ್ಟಿಗೆ ವಿಶ್ವಸಂಸ್ಥೆಯ ಶಾಂತಿ ಪಾಲನಾ ಪಡೆಯ ಸದಸ್ಯರಾಗಿ ಸುಡಾನ್‍ಗೆ ಹೋಗಬೇಕಿತ್ತು.

    ಅಪ್‍ಡೇಟ್ ಮಾಹಿತಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಮೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.