ಕನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಕಮ್ ಮಾಡೆಲ್ ಸಂಹಿತಾ ವಿನ್ಯಾ (Samhita Vinya) ‘ಮೆಜೆಸ್ಟಿಕ್ 2’ (Majestic 2) ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಸಿನಿಮಾ ಕೆಲಸದ ನಡುವೆ ತನ್ನ ಹುಟ್ಟುಹಬ್ಬವನ್ನು (Birthday) ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ನಟಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ
ʻಹಾಲು ತುಪ್ಪʼ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ನಾಯಕಿ ಪ್ರಧಾನ ‘ಸೀತಮ್ಮ ಬಂದ್ಲು ಸಿರಿಮಲ್ಲಿಗೆ ತೊಟ್ಟು’ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿ ಪ್ರೇಕ್ಷಕರ ಹಾಗೂ ವಿಮರ್ಶಕರ ಪ್ರಶಂಸೆ ಗಳಿಸಿದ್ದರು. ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸಂಹಿತಾ ವಿನ್ಯಾಗೆ ಬಾಲಿವುಡ್‌ನಿಂದಲೂ ಆಫರ್ಸ್ ಬಂದಿದೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು
75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಲ್ಲಿ ಸಂಹಿತಾ ವಿನ್ಯಾ ಭಾಗವಹಿಸಿದ್ದಾರೆ. ನಟಿಗೆ ಫ್ಯಾಷನ್ ಡಿಸೈನರ್ ಆಗಿ ಫಾರೆವರ್ ನವೀನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿರುವ ಅಚ್ಚ ಕನ್ನಡದ ಪ್ರತಿಭೆ ಸಂಹಿತಾಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲಿ ಎಂಬುದೇ ಅಭಿಮಾನಿಗಳ ಆಶಯ.
ಈಗಿನ ಮೆಜೆಸ್ಟಿಕ್ ಏರಿಯಾ ಹೇಗಿದೆ, ಅಲ್ಲಿ ನಡೆಯುವ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯನ್ನು ಮೆಜೆಸ್ಟಿಕ್-2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳಹೊರಟಿದ್ದಾರೆ. ಹೀಗೆ ಸಾಮಾನ್ಯ ಜನರಿಗೆ ಗೊತ್ತಿಲ್ಲದಂಥ ಅನೇಕ ಚಟುವಟಿಕೆಗಳನ್ನು ಮೆಜೆಸ್ಟಿಕ್-2 ಅನಾವರಣಗೊಳಿಸಲಿದೆ. ಇದೀಗ ಈ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರ ನಿರ್ಮಾಣದ ಈ ಚಿತ್ರಕ್ಕೆ ರಾಮು ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಯುವನಟ ಭರತ್, ಸಂಹಿತಾ ವಿನ್ಯಾ ನಾಯಕ, ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಮೋಷನ್ ಪೋಸ್ಟರ್ ಬಿಡುಗಡೆಯ ಜೊತೆ ಶೂಟಿಂಗ್ ಅನುಭವಗಳ ಹೇಳಿಕೊಳ್ಳಲು ಇಡೀ ಚಿತ್ರತಂಡ ಮಾಧ್ಯಮದ ಮುಂದೆ ಹಾಜರಾಗಿತ್ತು.
ಮೊದಲಿಗೆ ಮಾತನಾಡಿದ ನಿರ್ಮಾಪಕ ಹೆಚ್. ಆನಂದಪ್ಪ, ಮಾರ್ಚ್ 31ಕ್ಕೆ ನಮ್ಮ ಚಿತ್ರದ ಶೂಟಿಂಗ್ ಆರಂಭಿಸಿ, ಬೆಂಗಳೂರು ಸುತ್ತಮುತ್ತ ನಿರಂತರವಾಗಿ,ಅಲ್ಲದೆ ಮರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ಚಿತ್ರೀಕರಣ ಮಾಡಿದ್ದು, ಅಂದುಕೊಂಡಂತೆಯೇ ಮುಗಿದಿದೆ. ಇಡೀ ಸಿನಿಮಾ ಶೂಟಿಂಗ್ನಲ್ಲಿ ನಾನೇ ಜೊತೆ ಇದ್ದು ನೋಡಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದರು. ನಿರ್ದೇಶಕ ರಾಮು ಮಾತನಾಡಿ ಸತತವಾಗಿ 126 ದಿನ ಶೂಟಿಂಗ್ ಮಾಡಿದ್ದೇವೆ. ನನ್ನ ಸಬ್ಜೆಕ್ಟ್ ಕೇಳಿ ಅವಕಾಶ ಕೊಟ್ಟಿದ್ದು ಆನಂದಪ್ಪ ಅವರು. ನಾನು ಏನು ಕೇಳಿದೆನೋ ಅದೆಲ್ಲವನ್ನೂ ಒದಗಿಸಿಕೊಟ್ಟು ಸಹಕರಿಸಿದ್ದಾರೆ. ಮೊದಲ ಚಿತ್ರಕ್ಕೇ ಇಂಥ ನಿರ್ಮಾಪಕರು ಸಿಕ್ಕಿದ್ದು ನನ್ನ ಅದೃಷ್ಟ. ಈಗ ಡಬ್ಬಿಂಗ್ ಆರಂಭಿಸಬೇಕಿದೆ. ಚಿತ್ರವನ್ನು ಡಿಸೆಂಬರ್ 26ಕ್ಕೆ ರಿಲೀಸ್ ಮಾಡಬೇಕೆಂಬ ಪ್ಲಾನಿದೆ. ನಾನು, ಭರತ್ ಇಬ್ಬರೂ ದರ್ಶನ್ ಅಭಿಮಾನಿಗಳು. ರಿಲೀಸ್ ಟೈಮಲ್ಲಿ ಮೈಸೂರಿನಿಂದ ಬೆಂಗಳೂರುವರೆಗೆ 101 ಸ್ಟಾರ್ಸ್ ಮೆರವಣಿಗೆ ಮಾಡಿಸಬೇಕು, ದರ್ಶನ್ ಅವರ 101 ಅಡಿ ಕಟೌಟ್ ಹಾಕಬೇಕು ಎಂಬ ಪ್ಲಾನಿದೆ ಎಂದರು. ಮಾಲಾಶ್ರೀ ಅಭಿನಯದ ಹೀರೋ ಇಂಟ್ರಡಕ್ಷನ್ ಸಾಂಗನ್ನು ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.
ನಾಯಕ ಭರತ್ ಮಾತನಾಡಿ ಇದು 2024ರ ಮೆಜೆಸ್ಟಿಕ್ ಕಥೆ. ಬೆಂಗಳೂರಲ್ಲಿ ಏನೇನೆಲ್ಲ ನಡೀತಿದೆ ಅಂತ ತೋರಿಸಿದ್ದೇವೆ. ನಾವೆಲ್ಲ ತುಂಬಾ ಎಫರ್ಟ್ ಹಾಕಿ ಸಿನಿಮಾ ಮಾಡಿದ್ದೇವೆ. 6ಫೈಟ್ ಅದ್ಭುತವಾಗಿ ಮೂಡಿಬಂದಿವೆ. ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನ ಕಥೆ. ನನ್ನ ಪಾತ್ರಕ್ಕೆ 2 ಶೇಡ್ಸ್ ಇದೆ. ನಿರ್ಮಾಪಕನ ಕಷ್ಟ ಏನೆಂದು ನನಗೆ ಗೊತ್ತು. ನಿರ್ಮಾಪಕರು ಯಾವುದಕ್ಕೂ ಕೊರತೆ ಮಾಡದೆ ಒದಗಿಸಿಕೊಟ್ಟಿದ್ದಾರೆ. ಮೆಜೆಸ್ಟಿಕ್ ಅಂಡರ್ ಪಾಸ್, ಬಸ್ ಸ್ಟಾಪ್ ನಲ್ಲೂ ಶೂಟ್ ಮಾಡಿದ್ದೇವೆ. ಈ ಸಿನಿಮಾ ಮುಗಿಯುವ ಮುನ್ನವೇ ನನಗೆ ಮತ್ತೊಂದು ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಹೆವಿ ಆಕ್ಷನ್ , ಫನ್ , ರೊಮ್ಯಾನ್ಸ್ ಸೆಂಟಿಮೆಂಟ್ ಎಲ್ಲವೂ ಚಿತ್ರದಲ್ಲಿದೆ ಎಂದರು.
ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತುಂಬಾ ದಿನಗಳ ಶ್ರಮ. ಸಿನಿಮಾಗೆ ಎಲ್ಲರೂ ಸಪೋರ್ಟ್ ಮಾಡಿದ್ದಾರೆ. ಮಿಡಲ್ ಕ್ಲಾಸ್ ಹುಡುಗಿ ಪಾತ್ರ ನನ್ನದು ಎಂದರು. ಛಾಯಾಗ್ರಾಹಕ ವೀನಸ್ ಮೂರ್ತಿ, ಅಸೋಸಿಯೇಟ್ ಡೈರೆಕ್ಟರ್ ವಿಜಯಕುಮಾರ್, ಸಾಹಸ ನಿರ್ದೇಶಕ ಎಲ್ಲರೂ ಚಿತ್ರದ ಕುರಿತಂತೆ ಮಾತನಾಡಿದರು. ಈ ಚಿತ್ರಕ್ಕೆ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದೆ.
ರಾಮು ಅವರ ನಿರ್ದೇಶನದ ಮೆಜೆಸ್ಟಿಕ್-2 (Majestic 2) ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯ ಹಂತ ತಲುಪಿದೆ. ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ದರ್ಶನ್ ಅಭಿನಯಿಸಿದ್ದ ಚಿತ್ರ ಹೇಳಿದ್ದರೆ, ಈಗಿನ ಮೆಜೆಸ್ಟಿಕ್ ಏರಿಯಾದಲ್ಲಿ ಏನೆಲ್ಲಾ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು ಅಲ್ಲದೆ ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕಥೆಯ ಮೂಲಕ ಮೆಜೆಸ್ಟಿಕ್-2 ಚಿತ್ರದ ಮೂಲಕ ನಿರ್ದೇಶಕ ರಾಮು ಹೇಳಲು ಪ್ರಯತ್ನಿಸಿದ್ದಾರೆ. ಈ ಚಿತ್ರದಿಂದ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಹೊಸ ನಾಯಕನಾಗಿ ಇಂಡಸ್ಟ್ರಿಗೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಹೀರೋ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್ ನಲ್ಲಿ ನಡೆಯುತ್ತಿದೆ. ಈ ಹಾಡಿನಲ್ಲಿ (Song) ಕನಸಿನ ರಾಣಿ ಮಾಲಾಶ್ರೀ (Malashree) ಹಾಗೂ ನಾಯಕ ಭರತ್ ಕುಮಾರ್ ಹಾಗೂ ನೂರಾರು ಡಾನ್ಸರ್ಸ್ ಅಭಿನಯಿಸಿದ್ದರು. ಕೊರಿಯಾಗ್ರಾಫರ್ ತ್ರಿಭುವನ್ ಮಾಸ್ಟರ್ ಡಾನ್ಸ್ ಸ್ಟೆಪ್ಸ್ ಹೇಳಿಕೊಡುತ್ತಿದ್ದರು.
ಈ ಸಂದರ್ಭದಲ್ಲಿ ನಟಿ ಮಾಲಾಶ್ರೀ ಮಾತನಾಡುತ್ತ ಇದರಲ್ಲಿ ನನ್ನದು ಒಂದು ಸ್ಪೆಷಲ್ ಎಂಟ್ರಿ. ನಿರ್ದೇಶಕ ರಾಮು ಅವರು ನಮ್ಮ ರಾಮು ಫಿಲಂಸ್ ಬ್ಯಾನರಿನಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ಕಂಡರೆ ತುಂಬಾ ಅಭಿಮಾನ. ಅವರು ಬಂದು ಮೇಡಂ ನನ್ನ ಮೊದಲ ಸಿನಿಮಾಗೆ ನಿಮ್ಮ ಆಶೀರ್ವಾದ ಬೇಕು. ನೀವು ಬಂದು ಒಂದ್ ಸ್ಟೆಪ್ ಹಾಕಬೇಕು ಎಂದು ಕೇಳಿಕೊಂಡರು. ನಾನು ಸ್ಟೆಪ್ ಹಾಕಿ ತುಂಬಾ ವರ್ಷವಾಯ್ತು. ಎಲ್ಲಾ ಮರೆತುಹೋಗಿದೆ ಎಂದೆ. ಆಗ ತ್ರಿಭುವನ್ ಮಾಸ್ಟರ್ ಬಂದು ಮೇಡಂ ನೀವು ಟ್ರೈ ಮಾಡಿ ನಾನಿದ್ದೇನೆ ಅಂದರು. ಇದು ಮಾರಮ್ಮ ದೇವಿ ಸಾಂಗ್. ನನ್ನ ಸ್ಟೆಪ್ಸ್ ನೋಡಿ ನನಗೇ ಖುಷಿಯಾಯ್ತು. ಇದು ನಾನೇನಾ ಅನಿಸ್ತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು. ಐ ಯಾಮ್ ರಿಯಲಿ ಎಂಜಾಯ್ಡ್ ಎಂದು ಖುಷಿಯಿಂದ ಹೇಳಿದರು.
ಚಿತ್ರದ ನಿರ್ಮಾಪಕ ಹೆಚ್.ಆನಂದಪ್ಪ ಅವರು ಮಾತನಾಡಿ ಈಗಾಗಲೇ ಚಿತ್ರದ ಶೇ.80ರಷ್ಡು ಚಿತ್ರೀಕರಣ ಮುಕ್ತಾಯಗೊಂಡಿದೆ. ಇಂದು ನಾಯಕ ಹಾಗೂ ಮಾಲಾಶ್ರೀ ಮೇಡಂ ಅಭಿನಯದ ಹಾಡಿನ ಶೂಟಿಂಗ್ ನಡೆಯುತ್ತಿದೆ. ಆಂಥ ಮಹಾನ್ ನಟಿ ನಮ್ಮ ಚಿತ್ರದಲ್ಲಿ ಅಭಿನಯಿಸುತ್ತಿರುವುದು ನಮಗೆ ನಿಜಕ್ಕೂ ಹೆಮ್ಮೆಯ ವಿಷಯ. ಬರುವ ದೀಪಾವಳಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ನಿರ್ದೇಶಕ ರಾಮು ಮಾತನಾಡುತ್ತ ಈ ಹಾಡನ್ನು ಮೂರು ದಿನಗಳ ಕಾಲ ಶೂಟ್ ಮಾಡುತ್ತೇನೆ. ಇದಾದ ನಂತರ ಒಂದು ಡ್ಯುಯೆಟ್ ಸಾಂಗ್ ಹಾಗೂ ಆಕ್ಷನ್ ಸೀಕ್ವೇನ್ಸ್ ಮಾಡಬೇಕಿದೆ. ಶೂಟಿಂಗ್ ಜೊತೆ ಜೊತೆಗೇ ಎಡಿಟಿಂಗ್ ಕೂಡ ನಡೆಯುತ್ತಿದೆ. ಚಿತ್ರ ನಾವಂದುಕೊಂಡದ್ದಕ್ಕಿಂತ ಚೆನ್ನಾಗಿ ಬಂದಿದೆ ಎಂದರು.
ನಾಯಕ ಭರತ್ ಮಾತನಾಡಿ ನನ್ನ ಮೊದಲ ಚಿತ್ರದಲ್ಲೇ ಲೆಜೆಂಡರಿ ಆಕ್ಟರ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಡಂ ಅವರನ್ನು ನೋಡಿ ತುಂಬಾ ಕಲಿತೆ. ಮೆಜೆಸ್ಟಿಕ್ ನಲ್ಲೇ ಹುಟ್ಟಿಬೆಳೆದ ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನ ಮೆಜೆಸ್ಟಿಕ್ ಹೇಗಿರುತ್ತೆ ಅಂತ ಚಿತ್ರದಲ್ಲಿ ನೋಡಬಹುದು. ಈ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆ ಎಂದು ಹೇಳಿದರು. ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಕೊರಿಯೋ ಗ್ರಾಫರ್ ತ್ರಿಭುವನ್ ಮಾತನಾಡಿ ಈಗಾಗಲೇ ಈ ಚಿತ್ರದಲ್ಲಿ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೇನೆ. ಈಗಾಗಲೇ ಒಂದು ಹಾಡನ್ನು ಶೂಟ್ ಮಾಡಿದ್ದೇವೆ. ಮಾಲಾಶ್ರೀ ಅವರ ಜೊತೆ ತುಂಬಾ ಹಾಡುಗಳನ್ನು ಮಾಡಿದ್ದೇನೆ. ಈಗ ಮತ್ತೆ ಕೆಲಸ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದು ಹೇಳಿದರು. ಚಿತ್ರದಲ್ಲಿ ನಾಯಕ ಭರತ್, ದರ್ಶನ್ ಫ್ಯಾನ್ ಆಗಿಯೇ ಕಾಣಿಸಿಕೊಂಡಿದ್ದಾರೆ.
ಈಗಾಗಲೇ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬಹುತೇಕ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ “ಮೆಜೆಸ್ಟಿಕ್ 2” ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ.
‘ಮೆಜೆಸ್ಟಿಕ್’ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಹೆಸರು ತಂದುಕೊಟ್ಟ ಚಿತ್ರ. ದಶಕಗಳ ನಂತರ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ‘ಮೆಜೆಸ್ಟಿಕ್-2’ ಹೆಸರಿನಡಿ ಚಿತ್ರವೊಂದು ನಿರ್ಮಾಣವಾಗುತ್ತಿದೆ. ಆಗಿನ ಮೆಜೆಸ್ಟಿಕ್ ನಲ್ಲಿ ತೊಂಭತ್ತರ ದಶಕದಲ್ಲಿ ರೌಡಿಸಂ ಹೇಗೆ ನಡೆಯುತ್ತಿತ್ತು ಎಂದು ಹೇಳಿದ್ದರೆ, ಈಗಿನ ಮೆಜೆಸ್ಟಿಕ್-2, ಮೂಲಕ ಅಲ್ಲಿ ನಡೆಯುವ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂಬುದನ್ನು ನಿರ್ದೇಶಕ ರಾಮು ಹೇಳ ಹೊರಟಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕನಾಗಿ ಪರಿಚಯವಾಗುತ್ತಿದ್ದಾರೆ.
ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಹೆಚ್.ಹನುಮಂತಪ್ಪ ಅವರು ನಿರ್ಮಿಸುತ್ತಿರುವ ಈ ಚಿತ್ರದ ಐಟಂ ಸಾಂಗ್ ವೊಂದರ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಹಾಕಲಾಗಿರುವ ಕಲರ್ಫುಲ್ ಸೆಟ್ ನಲ್ಲಿ ನಡೆದಿದೆ. ಚಿತ್ರದಲ್ಲಿ ನಾಯಕ ದರ್ಶನ್ ಅವರ ಫ್ಯಾನ್ ಆಗಿ ಕಾಣಿಸಿಕೊಂಡಿದ್ದು, ಅವರ ಮೇಲಿನ ಅಭಿಮಾನದಿಂದ ಮಾಡುತ್ತಿರುವ, ಈಗಿನ ಟ್ರೆಂಡ್ ಗೆ ತಕ್ಕಂತೆ ಲಿರಿಕ್ ಹೆಣೆದಿರುವ ಹಾಡು ಇದಾಗಿದೆ, ‘ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ’ ಎಂದು ನಿರ್ದೇಶಕ ರಾಮು ಅವರು ಬರೆದ ಸಾಹಿತ್ಯಕ್ಕೆ ಗಾಯಕಿ ಮೇಘನಾ ಹಳ್ಳಿಹಾಳ ದನಿಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಹಾಡಿನ ಚಿತ್ರೀಕರಣದಲ್ಲಿ ಐಟಂ ಡಾನ್ಸರ್ ಹಾಗೂ ನಾಯಕನ ಜೊತೆಗೆ ಸಹ ಕಲಾವಿದರುಗಳೂ ಸಹ ಭಾಗವಹಿಸಿದ್ದರು. ಸಂತೋಷ್ ಈ ಹಾಡಿಗೆ ಕೊರಿಯಾಗ್ರಾಫ್ ಮಾಡಿದ್ದಾರೆ.
ಈಗಾಗಲೇ ರಾಮೋಹಳ್ಳಿ, ಹೆಚ್.ಎಂ.ಟಿ., ಮಾಕಳಿ ಬಳಿಯ ಸಕ್ರೆ ಅಡ್ಡ, ಆರ್.ಟಿ.ನಗರದ ನಿಸರ್ಗ ಹೌಸ್ ಸೇರಿದಂತೆ ಬೆಂಗಳೂರು ಸುತ್ತಮುತ್ತ ಶೇ.50ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಜೊತೆಗೆ ಚಿತ್ರದುರ್ಗದ ಮುರುಘಾ ಮಠದಲ್ಲಿ ಡ್ಯುಯೆಟ್ ಸಾಂಗ್ ವೊಂದನ್ನು ಸಹ ಶೂಟ್ ಮಾಡಲಾಗಿದೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥಾಹಂದರ ಹೊಂದಿರುವ “ಮೆಜೆಸ್ಟಿಕ್ 2” ಚಿತ್ರದಲ್ಲಿ ನಾಯಕಿಯಾಗಿ ನಟಿ ಸಂಹಿತಾ ವಿನ್ಯಾ ಅವರು ನಟಿಸಿದ್ದಾರೆ. ಹಿರಿಯನಟಿ ಶೃತಿ ಅವರು ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದರೆ ಮೆಜೆಸ್ಟಿಕ್. ಈ ಮೆಜೆಸ್ಟಿಕ್ ಕುರಿತು ಒಂದು ಇತಿಹಾಸವನ್ನೇ ಬರೆಯಬಹುದು, ಅಲ್ಲಿ ಹಗಲಲ್ಲಿ ನಡೆಯುವ ಚಟುವಟಿಕೆಗಳದ್ದು ಒಂದು ಕಥೆಯಾದರೆ, ರಾತ್ರಿ ನಡೆಯುವ ಚಟುವಟಿಕೆಗಳದ್ದು ಮತ್ತೊಂದು ಕಥೆಯಾಗುತ್ತೆ. ಈಗ ಆ ಮೆಜೆಸ್ಟಿಕ್ ಬಗ್ಗೆ ಮತ್ತೊಂದು ಚಿತ್ರ ನಿರ್ಮಾಣವಾಗುತ್ತಿದೆ. ಹಿಂದಿನ ಮೆಜೆಸ್ಟಿಕ್ ನಲ್ಲಿ ಆಗಿನ ಕಾಲದ ರೌಡಿಸಂ ಹೇಗೆ ನಡೆಯುತ್ತಿತ್ತೆಂದು ಹೇಳಿದರೆ, ಹೊಸ ಮೆಜೆಸ್ಟಿಕ್ ಈಗಿನ ಕಾಲದ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೆಯುತ್ತವೆ, ಈಗಲೂ ಅಲ್ಲಿ ರೌಡಿಸಂ ಹೇಗೆ ನಡೆಯುತ್ತೆ ಎಂದು ನಿರ್ದೇಶಕ ರಾಮು ಹೇಳಲು ಹೊರಟಿದ್ದಾರೆ. ಆಗಿನ ಮೆಜೆಸ್ಟಿಕ್‌ಗೆ ರಾಮು ಅವರೇ ಕಥೆ ಬರೆದಿದ್ದರು. ಈಗ ಮೆಜೆಸ್ಟಿಕ್ ೨ ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಮುಹೂರ್ತ ಸಮಾರಂಭ ಭಾನುವಾರ ಬೆಳಿಗ್ಗೆ ಬುಲ್‌ಟೆಂಪಲ್ ರಸ್ತೆಯ ರಾಘವೇಂದ್ರ ಮಠದ ರಾಯರ ಸನ್ನಿಧಿಯಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯನಟಿ ಶೃತಿ ಕ್ಯಾಮೆರಾ ಚಾಲನೆ ಮಾಡಿದರೆ, ನಿರ್ಮಾಪಕ ಆನಂದಪ್ಪ ಅವರ ಶ್ರೀಮತಿ ನಿರ್ಮಲಾ ಅವರು ಕ್ಲಾಪ್ ಮಾಡಿದರು, ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ ಹಾಗೂ ವಿತರಕ ಶಿಲ್ಪಾ ಶ್ರೀನಿವಾಸ್ ಪುತ್ರ ಭರತ್ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗದ ಟಿ.ಆನಂದಪ್ಪ ಅವರು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ಸಂದರ್ಭಲ್ಲಿ ಮಾತನಾಡಿದ ನಿರ್ಮಾಪಕರು, ನಮ್ಮ ಸಂಸ್ಥೆಯಿಂದ ಈಗಾಗಲೇ ಪಿಂಕ್‌ನೋಟ್ ಚಿತ್ರವನ್ನು ನಿರ್ಮಿಸುತ್ತಿದ್ದು ಅದರ ಡಬ್ಬಿಂಗ್ ಕಾರ್ಯ ನಡೀತಿದೆ. ಇದು ಎರಡನೇ ಚಿತ್ರ. 2 ಹಂತಗಳಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ, ಉತ್ತಮ ಚಿತ್ರವನ್ನು ಜನರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು. ನಿರ್ದೇಶಕ ರಾಮು ಮಾತನಾಡಿ ಆರಂಭದಲ್ಲಿ ನಾನು ನಿರ್ದೇಶಕ ಪಿ.ಎನ್. ಸತ್ಯ, ಜೋಗಿ ಪ್ರೇಮ್ ಅವರ ಜೊತೆ ಕೆಲಸ ಮಾಡಿದ್ದೆ, ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ಏನೇನೆಲ್ಲ ಚಟುವಟಿಕೆಗಳು ನಡೀತಿದ್ವು ಎಂಬುದನ್ನು ಕಣ್ಣಾರೆ ನೋಡಿದ್ದೆ. ಆ ಘಟನೆಗಳನ್ನು ಇಟ್ಟುಕೊಂಡು ಮೆಜೆಸ್ಟಿಕ್ ಕಥೆ ಬರೆದಿದ್ದೆ, ಈಗಿನ ಕಾಲದಲ್ಲಿ ಅಲ್ಲಿ ರೌಡಿಸಂ ಹೇಗೆ ನಡೀತಿದೆ ಎಂದು ಈ ಚಿತ್ರದಲ್ಲಿ ಹೇಳುತ್ತಿದ್ದೇನೆ. ರೌಡಿಸಂ ಹಾಗೂ ಆಕ್ಷನ್ ಬೇಸ್ ಕಥೆಯಿದು. ಹಿರಿಯನಟಿ ಶೃತಿ ಅವರು ಮರಿದಾಸನ ತಾಯಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭರತ್ ರನ್ನು ಸೆಲೆಕ್ಟ್ ಮಾಡಿಕೊಂಡು ಆನಂದಪ್ಪ ಅವರಿಗೆ ಹೇಳಿದಾಗ ಅವರೂ ಒಪ್ಪಿದರು. ಅವತ್ತಿನ ಮೆಜೆಸ್ಟಿಕ್‌ನಲ್ಲಿ ಏನು ನೋಡಿದ್ದಿರೋ ಅದಕ್ಕಿಂತ ಹತ್ತು ಪಟ್ಟು ಈ ಸಿನಿಮಾದಲ್ಲಿ ನೋಡಬಹುದು. ಚಿತ್ರದ ಮೂಲಕ ಎಲ್ಲರ ಮನಸ್ಸನ್ನು ತಟ್ಟುತ್ತೇನೆ ಎನ್ನುವ ಧೈರ್ಯ ನನ್ನಲ್ಲಿದೆ ಎಂದು ಹೇಳಿದರು.
ನಾಯಕ ಭರತ್ ಮಾತನಾಡುತ್ತ ನನ್ನ ಮೊದಲ ಚಿತ್ರಕ್ಕೆ ಇಷ್ಟೊಂದು ಅತಿಥಿಗಳು ಬಂದಿರುವುದು ನೋಡಿ ಖುಷಿಯಾಯ್ತು. ಇಷ್ಟೆಲ್ಲ ಆಗಿರುವುದು ಈ ಟೈಟಲ್‌ನಿಂದ, ಚಿತ್ರದ ಮೇನ್ ಫೋಕಸ್ ಅಂದ್ರೆ ಮೆಜೆಸ್ಟಿಕ್ ಟೈಟಲ್, ಮೆಜೆಸ್ಟಿಕ್ ಅಂದಕೂಡಲೇ ನೆನಪಿಗೆ ಬರೋದು ನಮ್ಮ ಡಿಬಾಸ್, ನಾನು ದರ್ಶನ್ ಅವರ ಅಭಿಮಾನಿ. ಚಿತ್ರದಲ್ಲಿ ಮರಿದಾಸ ಎನ್ನುವ ಕ್ಯಾರೆಕ್ಟರ್ ಪ್ಲೇ ಮಾಡುತ್ತಿದ್ದೇನೆ, ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ.
ಈಗಿನ ಕಾಲದ ಮೆಜೆಸ್ಟಿಕ್‌ನಲ್ಲಿ ಏನೇನು ನಡೆಯುತ್ತೆ, ಈಗಲ್ಲಿ ರೌಡಿಸಂ ಹೇಗಿರುತ್ತೆ, ಅಲ್ಲಿ ವ್ಯವಹಾರ ಹೇಗೆಲ್ಲ ನಡೆಯುತ್ತೆ ಎಂದು ಚಿತ್ರದಲ್ಲಿ ಹೇಳುತ್ತಿದ್ದೇವೆ. ದರ್ಶನ್ ಅವರು ಯಶಸ್ಸಿನಲ್ಲಿ ಕೊಂಚವಾದರೂ ನಾವು ಮಾಡಿದರೆ ಅದೇ ನಮ್ಮಭಾಗ್ಯ ಅಂತ ತಿಳಿದುಕೊಳ್ಳುತ್ತೇನೆ ಎಂದು ಹೇಳಿದರು, ನಂತರ ನಾಯಕಿ ಸಂಹಿತಾ ವಿನ್ಯಾ ಮಾತನಾಡಿ ತನ್ನ ಪಾತ್ರದ ಕುರಿತಂತೆ ಹೇಳಿಕೊಂಡರು. ಈ ಚಿತ್ರಕ್ಕೆ ವಿನು ಮನಸು ಅವರ ಸಂಗೀತ ನಿರ್ದೇಶನವಿದ್ದು, ವೀನಸ್ ಮೂರ್ತಿ ಅವರು ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ.
ನಟ ದರ್ಶನ್ ಗೆ ದಾಸ ಎಂಬ ಹೆಸರು ಬಂದಿದ್ದೇ ಮೆಜೆಸ್ಟಿಕ್ ಚಿತ್ರದಿಂದ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ ಗೆ ಒಳ್ಳೇ ಹೆಸರನ್ನೂ ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ ಮೆಜೆಸ್ಟಿಕ್ 2 ಹೆಸರಲ್ಲಿ ಚಿತ್ರ ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಆ ಚಿತ್ರ ಸೆಟ್ಟೇರಲು ಸಿದ್ದವಾಗಿದೆ. ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ (Shilpa Srinivas) ಅವರ ಪುತ್ರ ಭರತ್ (Bharat)ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್ ಪ್ರೈಸಸ್ ಮೂಲಕ ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಸೋಮವಾರ ಮೆಜೆಸ್ಟಿಕ್ -2 (Majestic 2) ಚಿತ್ರದ ಟೈಟಲ್ ಅನಾವರಣ ಸಮಾರಂಭ ನೆರವೇರಿತು. ಈ ಸಂದರ್ಭದಲ್ಲಿ ಚಿತ್ರರಂಗದ ಅನೇಕ ಸ್ನೇಹಿತರು ಹಾಜರಿದ್ದು ಶುಭ ಹಾರೈಸಿದರು. ಆರಂಭದಲ್ಲಿ ಮಾತನಾಡಿದ ನಿರ್ಮಾಪಕ ಆನಂದಪ್ಪ ನಾನು ಈ ಹಿಂದೆ ಪಿಂಕ್ ನೋಟ್ ಎಂಬ ಚಿತ್ರವನ್ನು ಆರಂಭಿಸಿದ್ದೆ, ಅದಾಗಲೇ ೯೦ರಷ್ಟು ಮುಗಿದಿದೆ. ಇದು ಎರಡನೇ ಚಿತ್ರ. ಸ್ನೇಹಿತ ರಾಮು ಬಹಳ ದಿನಗಳಿಂದ ಈ ಕಥೆ ಚೆನ್ನಾಗಿದೆ ನೋಡಿ ಅಂತ ಹೇಳ್ತಾ ಇದ್ದರು, ಒಮ್ಮೆ ಕಥೆ ಕೇಳಿದೆ, ಇಷ್ಟವಾಯ್ತು, ಜನ ನಮ್ಮ ಸಿನಿಮಾ ನೋಡಿ ಅದರಲ್ಲಿ ಏನಾದರೂ ಆಯ್ಕೆ ಮಾಡಿಕೊಳ್ಳಬೇಕು, ಅಂಥ ಸಿನಿಮಾ ಮಾಡಿ ಎಂದೆ, ನಾವೆಲ್ಲ ಸೇರಿ ಒಳ್ಳೇ ಚಿತ್ರ ಮಾಡುತ್ತಿದ್ದೇವೆ, ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದರು.
ನಂತರ ಮಾತನಾಡಿದ ಶಿಲ್ಪಾ ಶ್ರೀನಿವಾಸ್, ನಾನು 1976ರಿಂದ ಚಿತ್ರರಂಗದಲ್ಲಿದ್ದೇನೆ, ಬಹುತೇಕ ಸ್ಟಾರ್‌ಗಳ ಜೊತೆ 25 ಸಿನಿಮಾಗಳನ್ನು ನಿರ್ಮಿಸಿದ್ದು, 500ಕ್ಕೂ ಹೆಚ್ಚು ಚಿತ್ರಗಳನ್ನು ವಿತರಿಸಿದ್ದೇನೆ. ನನ್ನ ಮಗ ಭರತ್ ಮೊದಲ ಬಾರಿಗೆ ಹೀರೋ ಆಗ್ತಿದಾನೆ. ದೇವರ ರೂಪದಲ್ಲಿ ಆನಂದಪ್ಪ ಅವರನ್ನು ಕಳಿಸಿದ್ದಾನೆ. ನಿರ್ದೇಶಕ ರಾಮು, ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ವೀನಸ್ ಮೂರ್ತಿ ಇವರೆಲ್ಲರ ಕಲ್ಪನೆಯಲ್ಲಿ ಮೆಜೆಸ್ಟಿಕ್ ಚಿತ್ರ ಮೂಡಿಬರುತ್ತಿದೆ. ನಮ್ಮ ಉಸಿರಲ್ಲಿ ಉಸಿರಾಗಿ, ಜೀವದಲ್ಲಿ ಜೀವವಾಗಿ, ಬೆರೆತು ಹೋಗಿರೋ ಮಾಧ್ಯಮಮಿತ್ರರು, ಇದು ನಿಮ್ಮ ಸಿನಿಮಾ ಅಂತ ಚಿತ್ರಕ್ಕೆ ಆಶೀರ್ವಾದ ಮಾಡಿ ಎಂದು ವಿನಂತಿಸಿಕೊಳ್ಳುತ್ತೇನೆ. 25 ವರ್ಷದ ಹಿಂದೆ ದರ್ಶನ್‌ರನ್ನು ಹೇಗೆ ಮೇಲಕ್ಕೆತ್ತಿದಿರೋ ಹಾಗೆ ನಮ್ಮ ಪುತ್ರನನ್ನು ಹರಸಿ ಬೆಳೆಸಿ ಎಂದು ಮನವಿ ಮಾಡಿದರು.
ನಿರ್ದೇಶಕ ರಾಮು ಮಾತನಾಡಿ ಆರಂಭದಲ್ಲಿ ನಾನು ಪಿ.ಎನ್.ಸತ್ಯ ಪ್ರೇಂ ಜೊತೆ ಕೆಲಸ ಮಾಡಿದ್ದೆ, ಮೆಜೆಸ್ಟಿಕ್ ಸ್ಕ್ರಿಪ್ಟ್ ಬರೆದಿದ್ದು ನಾನೇ, ನಂತರ ಸತ್ಯ ಅವರಜೊತೆ ಮನಸ್ತಾಪವಾಗಿ ನನ್ನನ್ನು ಬಿಟ್ಟು ಚಿತ್ರ ಮಾಡಿದರು. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ನಡೀತಿರುವ ಘಟನೆಗಳನ್ನು ನೋಡಿದಾಗಲೇ ಈ ಟೈಟಲ್ ಹೊಳೆದಿತ್ತು, ಮೆಜೆಸ್ಟಿಕ್ ಸಿನಿಮಾ ನನ್ನ ಕನಸು, ಅದೀಗ ನನಸಾಗುತ್ತಿದೆ ಎಂದರು.
ನಾಯಕ ಭರತ್ ಮಾತನಾಡಿ ನಿರ್ದೇಶಕರು ಈ ಕಥೆ, ಟೈಟಲ್ ಹೇಳಿದಾಗ ತುಂಬಾ ಖುಷಿಯಾಯ್ತು. ನಾನು ದರ್ಶನ್ ಅವರ ಅಭಿಮಾನಿ. ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ಸಿನಿಮಾ ಲಾಂಚ್ ಆಗ್ತಿದೆ. ಮರಿದಾಸನ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದರು, ನಂತರ ನಾಯಕಿ ಸಂಹಿತಾ ವಿನ್ಯಾ, ಸಂಗೀತ ನಿರ್ದೇಶಕ ವಿನು ಮನಸು, ಛಾಯಾಗ್ರಾಹಕ ವೀನಸ್ ಮೂರ್ತಿ, ಸ್ಟಂಟ್ ಮಾಸ್ಟರ್ ಚಿನ್ನಯ್ಯ ಚಿತ್ರದ ಕುರಿತಂತೆ ಮಾತನಾಡಿದರು.