Tag: Maitri

  • ‘ಪರಂವಃ’ ಸಿನಿಮಾದ 2ನೇ ಹಾಡು ರಿಲೀಸ್ ಮಾಡಿದ ಲವ್ಲಿ ಸ್ಟಾರ್ ಪ್ರೇಮ್

    ‘ಪರಂವಃ’ ಸಿನಿಮಾದ 2ನೇ ಹಾಡು ರಿಲೀಸ್ ಮಾಡಿದ ಲವ್ಲಿ ಸ್ಟಾರ್ ಪ್ರೇಮ್

    ಪ್ರಸಿದ್ದ ದೇಸಿ ಕಲೆ ವೀರಗಾಸೆ ಮತ್ತು ತಂದೆ-ಮಗನ ನಡುವಿನ ಭಾಂದವ್ಯದ ಬಗ್ಗೆಗಿನ ಕಥಾಹಂದರ ಹೊಂದಿರುವ  ಚಿತ್ರ ‘ಪರಂವಃ’ (Paramvah). ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡು ಹಾಗೂ ಟ್ರೇಲರ್ ಮೂಲಕ ಜನರ ಮನ ಗೆದ್ದಿದೆ‌. ಇತ್ತೀಚೆಗೆ ಪರಂವಃ ಚಿತ್ರಕ್ಕಾಗಿ ನಾಗೇಶ್ ಕುಂದಾಪುರ ಬರೆದಿರುವ ‘ನೂರಾರೂ ರಂಗಿರೊ’ ಎಂಬ ಹಾಡನ್ನು (Song) ಜನಪ್ರಿಯ ನಟ ಲವ್ಲೀ ಸ್ಟಾರ್ ಪ್ರೇಮ್ (Nenapirali Prem) ಬಿಡುಗಡೆ ಮಾಡಿದರು. ನಿರ್ದೇಶಕ ಜಡೇಶ್ ಕುಮಾರ್ ಸಹ ಅತಿಥಿಗಳಾಗಿ ಆಗಮಿಸಿದ್ದರು.

    ಈ ಸಿನಿಮಾ ತಂಡದ ಬಗ್ಗೆ ತಿಳಿದು ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವಿದು. ಇದು ನಿಜಕ್ಕೂ ಖುಷಿಯ ವಿಚಾರ. ನನಗೆ ಸಿನಿಮಾ ಬಗ್ಗೆ ಆಸಕ್ತಿಯಿರುವ ಪ್ರೇಕ್ಷಕರೆ ನಿರ್ಮಾಣ ಮಾಡಿದ್ದಾರೆ ಅನಿಸುತ್ತದೆ. ಈಗ ಹೊಸತಂಡದ ಹೊಸಪ್ರಯತ್ನವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರಂವಃ ಚಿತ್ರ ಸಹ ಸೇರಲಿ ಎಂದು ನಟ ಪ್ರೇಮ್ ಮನಸ್ಸಾರೆ ಹಾರೈಸಿದರು.

    ಪ್ರೇಮ್ ಸಿಡ್ಗಲ್ ನಾಯಕನಾಗಿ ಮತ್ತು ಮೈತ್ರಿ ಜೆ. ಕಶ್ಯಪ್ ನಾಯಕಿಯಾಗಿ ಅಭಿನಯಿಸಿದ್ದಾರೆ‌.  ಗಣೇಶ್ ಹೆಗ್ಗೋಡು, ನಾಜರ್, ಶ್ರುತಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.  ಸಂತೋಷ್ ಕೈದಾಳ  (Santhosh Kaidala) ಈ ಚಿತ್ರವನ್ನು ನಿರ್ದೇಶಿಸಿದ್ದಾರೆ‌. ಇದನ್ನೂ ಓದಿ:ನಟಿ ತಮನ್ನಾ ಹಾಟ್‌ ಫೋಟೋಗೆ ಸ್ವೀಟ್‌ 16 ಎಂದ ನೆಟ್ಟಿಗರು

    ಶಿವನ ಢಮರುಗದಿಂದ ಹೊಮ್ಮುವ   ನಾದಕ್ಕೆ ಪರಂವಃ ಎನ್ನುತ್ತಾರೆ. ನಮ್ಮ ಸಿನಿಮಾದ ಕಥೆಗೆ ಈ ಪದ  ಸೂಕ್ತವೆಂಬ ಕಾರಣಕ್ಕೆ ಇದೇ ಹೆಸರಿಟ್ಟಿದ್ದೇವೆ.   ಸಿನಿಮಾದಲ್ಲಿ ವೀರಗಾಸೆ ಕಲೆಯ ಬಗ್ಗೆ ಮತ್ತು ತಂದೆ-ಮಗನ ಸಂಬಂಧದ ಬಗ್ಗೆ ಪ್ರಧಾನವಾಗಿ ಹೇಳಲಾಗಿದೆ. ಅಷ್ಟೇ  ಅಲ್ಲದೆ, ಪ್ರೀತಿ, ಸ್ನೇಹ,  ಸೆಂಟಿಮೆಂಟ್, ಥ್ರಿಲ್ಲರ್, ಆ್ಯಕ್ಷನ್ ಹೀಗೆ ಎಲ್ಲ ಥರದ ವಿಷಯಗಳು ಪರಂವಃ ಚಿತ್ರದಲ್ಲಿದೆ.  ಪೀಪಲ್ಸ್ ವಲ್ಡ್ ಫಿಲಂಸ್ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಟ ಪ್ರೇಮ್, ನಿರ್ದೇಶಕ ಗುರು ದೇಶಪಾಂಡೆ ಅವರು ಸೇರಿದಂತೆ ಸ್ಯಾಂಡಲ್ ವಡ್ ನ ಗಣ್ಯರು ಹಾಗೂ ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮನತುಂಬಿ ಬಂದಿದೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ.ಎಂದರು ನಿರ್ದೇಶಕ ಸಂತೋಷ್ ಕೈದಾಳ.

    ಚಿತ್ರದ ನಾಯಕ ಪ್ರೇಮ್ ಸಿಡ್ಗಲ್ (Prem Sidgal) , ನಾಯಕಿ ಮೈತ್ರಿ  (Maitri) ಸೇರಿದಂತೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರು ಪತ್ರಿಕಾಗೋಷ್ಠಿಯಲ್ಲಿ   ಪರಂವಃ ಸಿನಿಮಾ ಕುರಿತು ಮಾತನಾಡಿದರು.

  • ತೆಲುಗು ನಟ ರಾಮ್ ಚರಣ್ ಅಭಿನಯದ ಹೊಸ ಸಿನಿಮಾ ಘೋಷಣೆ

    ತೆಲುಗು ನಟ ರಾಮ್ ಚರಣ್ ಅಭಿನಯದ ಹೊಸ ಸಿನಿಮಾ ಘೋಷಣೆ

    ರ್​ಆರ್​ಆರ್’ ಚಿತ್ರದ ಮೆಗಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಮೆಗಾ ಪವರ್ ಸ್ಟಾರ್’ ರಾಮ್​ ಚರಣ್ ತೇಜ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಅಭಿನಯದ ಇನ್ನೊಂದು ಹೊಸ ಪ್ಯಾನ್​ ಇಂಡಿಯಾ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.

    ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್​ಬಸ್ಟರ್​ ಆದ ‘ಉಪ್ಪೆನಾ’ ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ, ಈಗ ರಾಮ್​ ಚರಣ್​ ಅವರನ್ನು ಈ ಹೊಸ ಚಿತ್ರದಲ್ಲಿ ನಿರ್ದೇಶಿಸಲಿದ್ದಾರೆ. ಪ್ಯಾನ್​ ಇಂಡಿಯಾಗೆ ಆಗುವ ಚಿತ್ರಕಥೆಯೊಂದನ್ನು ಬುಚ್ಚಿ ಬಾಬು ಸಿದ್ಧಪಡಿಸಿದ್ದು, ಈ ಚಿತ್ರದಲ್ಲಿ ನಟಿಸುವುದಕ್ಕೆ ರಾಮ್​ ಚರಣ್​ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ಅನಿರುದ್ಧ್-ಅನು ಜೋಡಿ

    ಮೈತ್ರಿ ಮೂವಿ ಮೇಕರ್ಸ್ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿರುವ ವೆಂಕಟ ಸತೀಶ್ ಕಿಲಾರು ಅವರು ವೃದ್ಧಿ ಸಿನಿಮಾಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್‌ಗಳ ಅಡಿಯಲ್ಲಿ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿರುವ ಈ ಹೆಸರಿಡದ ಚಿತ್ರದ ಮುಂದಿನ ವರ್ಷ ಪ್ರಾರಂಭವಾಗಲಿದೆ.

    ಸದ್ಯ ಶಂಕರ್​ ನಿರ್ದೇಶನದ ಪ್ಯಾನ್​ ಇಂಡಿಯಾ ಚಿತ್ರದ ಚಿತ್ರೀಕರಣದಲ್ಲಿ ರಾಮ್​ ಚರಣ್​ ತೇಜ ಭಾಗವಹಿಸಿದ್ದು, ಈ ಚಿತ್ರದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ, ಬುಚ್ಚಿ ಬಾಬು ಸನಾ ನಿರ್ದೇಶನದ ಹೊಸ ಚಿತ್ರ ಪ್ರಾರಂಭವಾಗಲಿದೆ. ಅದಕ್ಕೂ ಮುನ್ನ ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ವರ್ಗದ ಅಧಿಕೃತ ಘೋಷಣೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾತಾಡಲ್ಲ: ರೇಣುಕಾಚಾರ್ಯ

    ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಮಾತಾಡಲ್ಲ: ರೇಣುಕಾಚಾರ್ಯ

    ದಾವಣಗೆರೆ: ಮೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಬಂದಿದೆ, ಮೈತ್ರಿ ಬಗ್ಗೆ ಹೇಳುವಷ್ಟು ದೊಡ್ಡವನು ನಾನಲ್ಲ, ಪಕ್ಷದ ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಜಿಲ್ಲಾ ಉಸ್ತುವಾರಿಗಳು ನಿರ್ಣಯ ಮಾಡುತ್ತಾರೆ. ಕಲಬುರಗಿಯ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಯಾವುದೇ ಕಾರಣಕ್ಕೂ ಮಾತನಾಡುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಮುರುಗೇಶ್ ನಿರಾಣಿಯವರು ಬಿಜೆಪಿಯವರೇ ಮೇಯರ್ ಆಗುತ್ತಾರೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಯಾರ ಜೊತೆ ಮೈತ್ರಿ ಮಾಡಿಕೊಂಡರೂ ನಾನು ಮಾತನಾಡುವುದಿಲ್ಲ, ರಾಜ್ಯ, ಕೇಂದ್ರದಲ್ಲಿ ನಮ್ಮದೇ ಸರ್ಕಾರ ಇದೆ. ಮೈತ್ರಿ ಬಗ್ಗೆ ಮಾತನಾಡುವುದಿಲ್ಲ ಎಂದರು.

    ಬಿಜೆಪಿ ಸೇರಲು ಹಣದ ಅಫರ್ ಕೊಟ್ಟಿದ್ದರು ಎಂಬ ಶ್ರೀಮಂತ್ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನನಗೆ ಗೊತ್ತಿಲ್ಲ, ಕಾಂಗ್ರೆಸ್, ಜೆಡಿಎಸ್ ಶಾಸಕರು ಯಡಿಯೂರಪ್ಪನವರ ನಾಯಕತ್ವ ನಂಬಿ ಬಂದಿದ್ದು. ಅಮಿತ್ ಶಾ ಬಂದಾಗ ನಾವೆಲ್ಲರೂ ಸ್ವಾಗತ ಮಾಡಿದ್ದೆವು, ಆ ಸಂದರ್ಭದಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿಲ್ಲ. ಐದು ಜನ ಶಾಸಕರು ಇದ್ದಾರೆ, ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮೊದಲಿನಿಂದಲೂ ಕೇಳಿದ್ದೇವೆ ಎಂದರು. ಇದನ್ನೂ ಓದಿ: ಅಭಯ್ ಪಾಟೀಲ್ ಡ್ರೈವಿಂಗಲ್ಲಿ ಗೋವಿಂದ ಕಾರಜೋಳ ಹೋಗಿದ್ದೆಲ್ಲಿಗೆ..?

    ಗಣೇಶ ಹಬ್ಬದ ನಂತರ ಯಡಿಯೂರಪ್ಪನವರ ರಾಜ್ಯ ಪ್ರವಾಸದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪ ಒಬ್ಬ ಮೇರು ನಾಯಕ, ಪಕ್ಷವನ್ನು ಕಟ್ಟಿ ಬೆಳೆಸಿದವರು. ರಾಜ್ಯ ಪ್ರವಾಸ ಮಾಡಿದರೆ ರಾಜ್ಯ, ರಾಷ್ಟ್ರೀಯ ನಾಯಕರು ಸ್ವಾಗತ ಮಾಡುತ್ತಾರೆ. ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿದರೆ ಪಕ್ಷಕ್ಕೆ ಲಾಭ, ಕರ್ನಾಟಕದಲ್ಲಿ 150 ಸ್ಥಾನ ಬರಬೇಕು ಎನ್ನುವುದು ಯಡಿಯೂರಪ್ಪನವರ ಸಂಕಲ್ಪವಾಗಿದೆ. ಹೀಗಾಗಿ ಪಕ್ಷದ ಪರವಾಗಿ ರಾಜ್ಯ ಪ್ರವಾಸ ಮಾಡುತ್ತಾರೆ, ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿದರೆ ಬಿಜೆಪಿಗೇ ಲಾಭ, ಕುಟುಂಬಕ್ಕೆ ಅಲ್ಲ ಎಂದರು.

    ಸಿ.ಪಿ.ಯೋಗೇಶ್ವರ್ ದೆಹಲಿ ಪ್ರವಾಸದ ಬಗ್ಗೆ ರೇಣುಕಾಚಾರ್ಯ ಟಾಂಗ್ ನೀಡಿದ್ದು, ನಾನು ಪಕ್ಷದ ಶಿಸ್ತಿನ ಸಿಪಾಯಿ, ಕ್ಷೇತ್ರ ಹಾಗೂ ಜನರ ಬಗ್ಗೆ ಮಾತ್ರ ಯೋಚಿಸುತ್ತೇನೆ. ಅದನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸೋದಿಲ್ಲ. ಯೋಗೇಶ್ವರ್ ಗೆ ಸಚಿವ ಸ್ಥಾನ ಸಿಗೋದು ಬಿಡೋದು ಪಕ್ಷದ ವಿಚಾರ ಎಂದರು.

  • ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ, ಮೋದಿ ಜೊತೆ ನಿಮಗಿಂತಲೂ ಉತ್ತಮ ಭಾಂದವ್ಯ – ಎಚ್‍ಡಿಕೆ

    ಬಿಜೆಪಿಯಿಂದ ಮೈತ್ರಿಯ ಕಪಟ ನಾಟಕ, ಮೋದಿ ಜೊತೆ ನಿಮಗಿಂತಲೂ ಉತ್ತಮ ಭಾಂದವ್ಯ – ಎಚ್‍ಡಿಕೆ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿಮಗಿಂತಲೂ ಉತ್ತಮ ಭಾಂದವ್ಯ ನನಗಿದೆ, ಬಿಜೆಪಿಯವರೇ ನನಗೆ ನಿಮ್ಮ ಸ್ನೇಹ ಬೇಕಾಗಿಲ್ಲ ಎಂದು ಟ್ವಿಟ್ ಮಾಡುವ ಮೂಲಕ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್‍ನನ್ನು ಮುಗಿಸುವ ಪ್ರಯ್ನಗಳೆಲ್ಲಾ ವಿಫಲವಾಗಿದೆ ಎಂಬ ಸತ್ಯ ಇದೀಗ ಬಿಜೆಪಿಗೆ ಮನವರಿಕೆಯಾಗಿದೆ. ಇದೇ ಕಾರಣಕ್ಕೆ ಮೈತ್ರಿಯ ಕಪಟ ನಾಟಕವಾಡಲು ಬಿಜೆಪಿ ಮುಂದಾಗಿದೆ. ಹೀಗಾಗಿ ಜೆಡಿಎಸ್ ಎನ್‍ಡಿಎ ಮೈತ್ರಿಯಾಗಲಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದ್ರೆ ಈ ಎಲ್ಲಾ ಗೊಂದಲಗಳಿಗೆ ಮಾಜಿ ಸಿಎಂ ಹೆಚ್‍ಡಿ.ಕುಮಾರಸ್ವಾಮಿ ಟ್ವಿಟ್ ಮಾಡುವ ಮೂಲಕ ಉತ್ತರಿಸಿದ್ದಾರೆ.

    ನೆನಪಿರಲಿ, ಪ್ರಧಾನಿ ಅವರೊಂದಿಗೆ ರಾಜ್ಯ ಬಿಜೆಪಿ ನಾಯಕರಿಗಿಂತಲೂ ಉತ್ತಮ ಬಾಂಧ್ಯವೂ ನನಗಿದೆ. ಯಡಿಯೂರಪ್ಪ ಹಿರಿಯರು ಎಂಬ ಗೌರವವೂ ಇದೆ. ವಿರೋಧಕ್ಕಾಗಿ ವಿರೋಧ ಪಕ್ಷವಾಗಿರಬಾರದು ಎಂಬ ಆಶಯವೂ ಇದೆ. ಬಿಜೆಪಿ ಅಪಪ್ರಚಾರಕ್ಕೆ ಕೈ ಹಾಕಿದರೆ, ಬಾಂಧವ್ಯ, ಗೌರವ, ಆಶಯಗಳಿಗೆ ಧಕ್ಕೆಯಾಗಲಿದೆ. ಜೆಡಿಎಸ್ ವಿಚಾರದಲ್ಲಿ ಬಿಜೆಪಿಯು ಎಚ್ಚರವಾಗಿರಲಿ ಎಂದು ಹೇಳಿದರು.

    ಜೆಡಿಎಸ್ ಜೊತೆಗೆ ಮಿತ್ರತ್ವದ ನಾಟಕವಾಡಿ, ಕಡೆಗೆ ಪಕ್ಷವನ್ನೇ ಒಡೆಯಲು ಯತ್ನಿಸಿದವರು ಅನೇಕರು. ಈಗ ಬಿಜೆಪಿ ಸರದಿ. ಅಷ್ಟಕ್ಕೂ ಮೈತ್ರಿಗೆ ಜೆಡಿಎಸ್‍ನಿಂದ ಬಿಜೆಪಿಗೆ ಅರ್ಜಿ ಹಾಕಿದವರು ಯಾರು? ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲವೆಂದಿರುವ ಬಿಜೆಪಿ ಉಸ್ತುವಾರಿ ಎದುರು ಮೈತ್ರಿ ಪ್ರಸ್ತಾಪ ಇಟ್ಟವರ್ಯಾರು? ಎಂದು ಪ್ರಶ್ನಿಸುವ ಮೂಲಕ ಕೆಂಡಾಮಂಡಲವಾಗಿದ್ದಾರೆ.

    ಜೆಡಿಎಸ್ ಎನ್‍ಡಿಎ ಮೈತ್ರಿಕೂಟ ಸೇರುತ್ತದೆ, ಕುಮಾರಸ್ವಾಮಿ ಅವರನ್ನು ಕೇಂದ್ರ ಮಂತ್ರಿ ಮಾಡಲಾಗುತ್ತದೆ ಎಂಬುದೆಲ್ಲವೂ ಸುಳ್ಳಿನ ಕಂತೆ. ಈ ರೀತಿಯ ಆಮಿಷಗಳ ಮೂಲಕ ಬಿಜೆಪಿಯು ಜೆಡಿಎಸ್ ಕಾರ್ಯಕರ್ತರು, ಜೆಡಿಎಸ್ ಬೆಂಬಲಿಸುವ ಜನರ ಮನಸ್ಸುಗಳಿಗೆ ವಿಷ ಬಿತ್ತುವ ಕೆಲಸ ಮಾಡುತ್ತಿದೆ. ಇದು ನೈತಿಕವಲ್ಲದ ರಾಜಕಾರಣ ಎಂಬುದನ್ನು ಬಿಜೆಪಿ ತಿಳಿಯಲಿ ಎಂದು ಕಿವಿ ಮಾತು ಹೇಳಿದರು.

    1997ರಲ್ಲಿ ದೇವೇಗೌಡರು ಪ್ರಧಾನಿ ಸ್ಥಾನದಿಂದ ಇಳಿಯುವಾಗ ಇದೇ ಬಿಜೆಪಿಯ ಅಗ್ರಮಾನ್ಯ ಸಾರ್ವಕಾಲಿಕ ನಾಯಕ ದಿ. ವಾಜಪೇಯಿ ಅವರು ದೇವೇಗೌಡರಿಗೆ, ಜನತಾದಳಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದರು. ಆಗಲೇ ಪ್ರಧಾನಿ ಹುದ್ದೆ, ಕೇಂದ್ರದ ಅಧಿಕಾರ ತಿರಸ್ಕರಿಸಿ ಬಂದವರು ನಾವು. ಇನ್ನು ಯಕಶ್ಚಿತ್ ಮಂತ್ರಿ ಸ್ಥಾನಕ್ಕೆ ಆಸೆ ಪಡುವ ವ್ಯಕ್ತಿ ನಾನಲ್ಲ.

    ಸದ್ಯ ಯಾವ ಪಕ್ಷಕ್ಕೆ ಯಾರ ಅಗತ್ಯವೂ ಇಲ್ಲ. ನಮಗಂತೂ ಬಿಜೆಪಿ ಸ್ನೇಹ ಬೇಕಿಲ್ಲ. ನಮಗೆ ಬೇಕಿರುವುದು ರಾಜ್ಯದ ಅಭಿವೃದ್ಧಿ ಹಾಗೂ ನಮ್ಮ ಕಾರ್ಯಕರ್ತರು. ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಾರ್ಯಕರ್ತರಲ್ಲಿ ಉತ್ಸಾಹ, ಚೈತನ್ಯವಿದೆ ಎಂಬುದು ಗ್ರಾ.ಪಂ. ಚುನಾವಣೆ ಫಲಿತಾಂಶದಿಂದ ಎಲ್ಲರಿಗೂ ಗೊತ್ತಾಗಿದೆ. ಈಗ ನಮ್ಮ ಮುಂದಿರುವುದು ಪಕ್ಷದ ಸಂಘಟನೆ ಮಾತ್ರ ಎಂದು ಬಿಜೆಪಿ ಜೊತೆ ನಮಗೆ ಯಾವುದೇ ಸಂಬಂಧವಿಲ್ಲ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂಬುವುದನ್ನು ಟ್ವಿಟ್ ಮಾಡುವ ಮೂಲಕ ಹೆಚ್.ಡಿ. ಕುಮಾರಸ್ವಾಮಿಯವರು ಸ್ಪಷ್ಟಪಡಿಸಿದರು.