Tag: Maine Pyar Kiya

  • ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    ಸಲ್ಲು ತುಟಿಗೆ ಮುತ್ತಿಡಲು ಗಳಗಳನೇ ಕಣ್ಣೀರಿಟ್ಟಿದ್ದ ನಟಿ ಭಾಗ್ಯ ಶ್ರೀ

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಭಾಗ್ಯ ಶ್ರೀ ಜೊತೆಯಾಗಿ ಅಭಿನಯಿಸಿದ್ದ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಸಲ್ಲು ತುಟಿಗೆ ಮುತ್ತಿಡಲು ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

    ಪ್ರಸ್ತುತ ಬಾಲಿವುಡ್ ಸಿನಿಮಾಗಳಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳು ಸರ್ವೇ ಸಾಮಾನ್ಯವಾಗಿ ಹೋಗಿದೆ. ಹಿಂದಿನ ಕಾಲದಲ್ಲಿ ಸಿನಿಮಾದಲ್ಲಿ ಕಿಸ್ಸಿಂಗ್ ದೃಶ್ಯಾವಳಿಗಳಿದೆ ಎಂದರೆ ಎಷ್ಟೋ ನಟಿಯರು ಅಭಿನಯಿಸುವುದಿಲ್ಲ ಎಂದು ಸಿನಿಮಾವನ್ನೇ ರಿಜೆಕ್ಟ್ ಮಾಡಿರುವ ಸಂಗತಿಗಳು ಇದೆ. ಇದನ್ನೂ ಓದಿ: ಕೃತಿ ಶೆಟ್ಟಿ ಜೊತೆ ರೊಮ್ಯಾನ್ಸ್ ಗೆ ನೋ ಅಂದ್ರು ವಿಜಯ್ ಸೇತುಪತಿ

    salman

    ಸದ್ಯ ಸಂದರ್ಶನವೊಂದರಲ್ಲಿ ಮೈನೆ ಪ್ಯಾರ್ ಕಿಯಾ ಸಿನಿಮಾದ ಚಿತ್ರೀಕರಣದ ವೇಳೆ ಆನ್ ಸ್ಕ್ರೀನ್‍ನಲ್ಲಿ ಸಲ್ಮಾನ್ ತುಟಿಗೆ ಚುಂಬಿಸುವ ದೃಶ್ಯದಲ್ಲಿ ನಟಿಸಬೇಕಾದ ಸಂದರ್ಭದಲ್ಲಿ ಭಾಗ್ಯ ಶ್ರೀ ಗಳಗಳನೇ ಅತ್ತಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟ ಗೋವಿಂದ್ ಸ್ಯಾಂಡಲ್‍ವುಡ್‍ಗೆ ಎಂಟ್ರಿ

    salman

    ಈ ಸಿನಿಮಾದಲ್ಲಿ ನಟಿಸುವಾಗ ನನಗಿನ್ನು 18 ವರ್ಷವಾಗಿತ್ತು. ನಾನು ಆಗಲೇ ಒಬ್ಬರನ್ನು ಪ್ರೀತಿಸುತ್ತಿದ್ದೆ. ಅವರನ್ನೇ ಮದುವೆಯಾಗುವುದಾಗಿ ನಿಶ್ಚಯಿಸಿದ್ದೆ. ಹೀಗಾಗಿ ಬೇರೆ ಪುರುಷರನ್ನು ತಬ್ಬಿಕೊಳ್ಳಲು ನನಗೆ ಬಹಳ ಮುಜುಗರ ಹಾಗೂ ಕಷ್ಟವಾಗುತ್ತಿತ್ತು. ಆಗ ನಾನು ನಟಿಸುವುದಿಲ್ಲ ಎಂದು ಅತ್ತಿದ್ದೆ. ನಂತರ ಸಲ್ಮಾನ್ ಖಾನ್ ಬಂದು ಈ ದೃಶ್ಯದಲ್ಲಿ ನಟಿಸುವಂತೆ ಕೇಳಿಕೊಂಡಿದ್ದರು. ಕೊನೆಗೆ ನಿರ್ದೇಶಕರು ಇಬ್ಬರ ತುಟಿ ಮಧ್ಯೆ ಗ್ಲಾಸ್ ಇರಿಸಿ ಈ ದೃಶ್ಯವನ್ನು ಸೆರೆಹಿಡಿಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಕುರಿಗಾಯಿ ಜೊತೆಗೆ ಕುಳಿತು ಊಟ ಮಾಡಿದ ನಟ ಪುನೀತ್

    salman

    ಹಿಂದೆ ಈ ಸಿನಿಮಾ ಸಲ್ಮಾನ್‍ಖಾನ್‍ಗೆ ಹಿಟ್ ತಂದು ಕೊಡುವುದರ ಜೊತೆಗೆ ಖ್ಯಾತಿ ತಂದು ಕೊಟ್ಟತ್ತು. ಜೊತೆಗೆ ಸಿನಿಮಾದ ಹಾಡುಗಳು ಕೂಡ ಸಖತ್ ಫೇಮಸ್ ಆಗಿತ್ತು.

     

  • ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ಸೀತಾರಾಮನಿಗೆ ಸಿಕ್ಕ ಬಾಲಿವುಡ್ ಭಾಗ್ಯ!

    ನಿಖಿಲ್ ಕುಮಾರಸ್ವಾಮಿ ಅಭಿನಯದ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಮೊದಲ ಚಿತ್ರ ಜಾಗ್ವಾರ್ ಅನ್ನೇ ಮೀರಿಸುವಂತೆ ಈ ಚಿತ್ರ ಸದ್ದು ಮಾಡುತ್ತಿದೆ. ಅವ್ಯಾಹತವಾಗಿ ಚಿತ್ರೀಕರಣ ನಡೆಸಿಕೊಳ್ತಿರೋ ಈ ಚಿತ್ರಕ್ಕೀಗ ಮತ್ತೋರ್ವ ಅತಿಥಿಯ ಆಗಮನವಾಗಿದೆ!

    ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಕನ್ನಡ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಭಾಗ್ಯಶ್ರೀ ಇದೀಗ ಸೀತಾರಾಮನಿಗೆ ಜೊತೆಯಾಗಿದ್ದಾರೆ. ಆಕೆ ನಿಖಿಲ್ ಅಮ್ಮನ ಪಾತ್ರಕ್ಕೆ ಜೀವ ತುಂಬಲಿದ್ದಾರಂತೆ.

    ಹಿಂದಿಯ ಮೈನೆ ಪ್ಯಾರ್ ಕಿಯಾ ಚಿತ್ರದ ಮೂಲಕವೇ ಪ್ರಸಿದ್ಧಿ ಪಡೆದಿದ್ದ ಭಾಗ್ಯ ನಾನಾ ಭಾಷೆಗಳ ಚಿತ್ರಗಳಲ್ಲಿಯೂ ಮಿಂಚಿದ್ದರು. ಈ ತಲೆಮಾರಿನ ಕನ್ನಡ ಪ್ರೇಕ್ಷಕರಿಗೆ ಅಷ್ಟಾಗಿ ಪರಿಚಯವಿಲ್ಲದ ಈಕೆ ಈಗ ಇಪ್ಪತ್ತು ವರ್ಷಗಳ ನಂತರ ಮರಳಿದ್ದಾರೆ. ಸೀತಾರಾಮ ಕಲ್ಯಾಣದಲ್ಲಿ ನಾಯಕನ ಫ್ಲ್ಯಾಶ್ ಬ್ಯಾಕ್ ಸೀನೊಂದಿದೆ. ಇಡೀ ಚಿತ್ರದಲ್ಲಿ ಬಹು ಮುಖ್ಯವಾದ ಇದರಲ್ಲಿ ಭಾಗ್ಯ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಚಿತ್ರತಂಡ ಈ ಪಾತ್ರಕ್ಕೆ ಭಾಗ್ಯ ಅವರನ್ನೇ ಕರೆ ತರಬೇಕೆಂದು ನಿರ್ಧರಿಸಿ ಅದರಲ್ಲಿ ಯಶ ಕಂಡಿದೆ. ಭಾಗ್ಯ ಕೂಡಾ ಇಪ್ಪತ್ತು ವರ್ಷಗಳ ಹಿಂದೆ ತಾನು ನಾಯಕಿಯಾಗಿ ಮಿಂಚಿದ್ದ ಕನ್ನಡ ಚಿತ್ರ ರಂಗಕ್ಕೆ ಖುಷಿಯಿಂದಲೇ ಮರಳಿ ಬರಲು ಒಪ್ಪಿಕೊಂಡಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv