Tag: mail

  • ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ಸುಪ್ರೀಂಕೋರ್ಟ್ ಇಮೇಲ್‍ಗಳಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಬಳಕೆಗೆ ಬ್ರೇಕ್

    ನವದೆಹಲಿ: ಸುಪ್ರೀಂಕೋರ್ಟ್‍ನಿಂದ ಕಳುಹಿಸಲಾಗುತ್ತಿದ್ದ ಇಮೇಲ್‍ಗಳ ಅಡಿ ಟಿಪ್ಪಣಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ತೆಗೆದು ಹಾಕುವಂತೆ ಇಮೇಲ್ ಸೇವೆಗಳನ್ನು ಒದಗಿಸುವ ನ್ಯಾಷನಲ್ ಇನ್ಫಾಮ್ರ್ಯಾಟಿಕ್ಸ್ ಸೆಂಟರ್ (NIC)ಗೆ ಸುಪ್ರೀಂಕೋರ್ಟ್ ರಿಜಿಸ್ಟರ್ ಸೂಚಿಸಿದ್ದಾರೆ.

    ಹಲವು ವಕೀಲರ ದೂರಿನ ಬಳಿಕ ಎಚ್ಚೇತ್ತುಕೊಂಡ ಸುಪ್ರೀಂಕೋರ್ಟ್ ರಿಜಿಸ್ಟರ್ ನಿನ್ನೆ ಈ ಬಗ್ಗೆ ಪತ್ರ ಬರೆದಿದ್ದು, ಇಮೇಲ್ ಅಡಿ ಟಿಪ್ಪಣಿಯಲ್ಲಿರುವ ಅಜಾದಿ ಕಾ ಅಮೃತ್ ಮಹೋತ್ಸವ ಜಾಹೀರಾತು ಜೊತೆಗಿರುವ ಪ್ರಧಾನಿ ನರೇಂದ್ರ ಮೋದಿ ಫೋಟೋ ಬದಲಿಗೆ ಸುಪ್ರೀಂಕೋರ್ಟ್ ಫೋಟೋ ಬಳಕೆ ಮಾಡುವಂತೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕ್ವಾಡ್ ಜಾಗತಿಕ ಒಳಿತಿಗಾಗಿ ಸದಾ ಶ್ರಮಿಸುತ್ತದೆ: ಪ್ರಧಾನಿ ಮೋದಿ

    75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ಕೇಂದ್ರ ಸರ್ಕಾರ ಭಾರತ ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಹೆಸರಿನಲ್ಲಿ ಪ್ರಚಾರ ಆಚರಿಸಲು ಶುರು ಮಾಡಿತ್ತು. ಇದರ ಭಾಗವಾಗಿ ಸಾಕಷ್ಟು ಜಾಹೀರಾತು ಕೂಡಾ ನೀಡಿತ್ತು. ಸರ್ಕಾರಿ ಕಚೇರಿಗಳಿಂದ ಕಳುಹಿಸುತ್ತಿದ್ದ ಇಮೇಲ್ ಗಳಲ್ಲೂ ಈ ಜಾಹೀರಾತು ಬಳಕೆ ಮಾಡಲಾಗುತ್ತಿತ್ತು. ಅದೇ ರೀತಿ ಸುಪ್ರೀಂಕೋರ್ಟ್ ಇಮೇಲ್ ನಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಇರುವ ಅಜಾದಿ ಕಾ ಅಮೃತ್ ಮಹೋತ್ಸವ ಜಾಹೀರಾತು ಅಡಿ ಟಿಪ್ಪಣಿಯಲ್ಲಿ ರವಾನೆಯಾಗುತ್ತಿತ್ತು. ಈ ಜಾಹೀರಾತನ್ನು ಹಲವು ವಕೀಲರು ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ಸ್ವತಂತ್ರ ಸಂಸ್ಥೆಯಾಗಿದ್ದು ಇಲ್ಲಿ ಪ್ರಧಾನಿ ಫೋಟೋ ಸಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದನ್ನೂ ಓದಿ: ಕಮಲಾ ಹ್ಯಾರಿಸ್‍ಗೆ ಅಪರೂಪದ ಗಿಫ್ಟ್ ನೀಡಿದ ಪ್ರಧಾನಿ ಮೋದಿ

    ಸುಪ್ರೀಂಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಷನ್ ವಾಟ್ಸಾಪ್ ಗ್ರೂಪ್ ನಲ್ಲಿ ಈ ಬಗ್ಗೆ ವಕೀಲರು ಚರ್ಚೆ ಮಾಡಿದ್ದು, ಸುಪ್ರೀಂಕೋರ್ಟ್ ಸ್ವತಂತ್ರವಾಗಿದೆ, ಸ್ವತಂತ್ರವಾಗಿರುವುದನ್ನೂ ನೋಡಬೇಕು. ಜನರ ಮನಸ್ಸಿನಲ್ಲಿ ನ್ಯಾಯಾಂಗವು ರಾಜಕೀಯ, ಕಾರ್ಯಕಾರಿಣಿಯಿಂದ ಪ್ರತ್ಯೇಕವಾಗಿರುವ ಚಿತ್ರಣವನ್ನು ಉಳಿಸಿಕೊಳ್ಳಬೇಕಾದರೆ ನಾವು ಇದನ್ನು ವಿರೋಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಚರ್ಚೆ ಬಳಿಕ ಎಚ್ಚೇತ್ತುಕೊಂಡ ರಿಜಿಸ್ಟರ್ NICಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಅಮೆರಿಕ ಸಂಬಂಧ ವೃದ್ಧಿಗೆ ಬೀಜ ಬಿತ್ತಲಾಗಿದೆ: ಪ್ರಧಾನಿ ಮೋದಿ

  • ವಿಶ್ವಾದ್ಯಂತ  ಜಿಮೇಲ್‌ ಸೇವೆ ಡೌನ್‌

    ವಿಶ್ವಾದ್ಯಂತ ಜಿಮೇಲ್‌ ಸೇವೆ ಡೌನ್‌

    ಕ್ಯಾಲಿಫೋರ್ನಿಯಾ: ಜಿಮೇಲ್‌ ಸೇವೆ ಡೌನ್‌ ಆಗಿದ್ದು ವಿಶ್ವಾದ್ಯಂತ ಬಳಕೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ.

    ಭಾರತ ಅಲ್ಲದೇ ಅಮೆರಿಕ, ಆಸ್ಟ್ರೇಲಿಯ, ಜಪಾನ್‌ ಸೇರಿದಂತೆ ವಿಶ್ವದ ಹಲವೆಡೆ ಬಳಕೆದಾರರಿಗೆ ಸಮಸ್ಯೆಯಾಗುತ್ತಿದೆ. ಇಂದು ಬೆಳಗ್ಗೆಯಿಂದಲೇ ಸೇವೆ ಡೌನ್‌ ಆಗಿದೆ. ಯಾವುದೇ ಇಮೇಲ್‌ ಮತ್ತು ಅಟ್ಯಾಚ್‌ ಫೈಲ್‌ಗಳನ್ನು ಸೆಂಡ್‌ ಮಾಡಲು ಆಗುತ್ತಿಲ್ಲ.

    ಗೂಗಲ್‌ ಡ್ರೈವ್‌ನಲ್ಲೂ ಫೈಲ್‌ಗಳ ಅಪ್ಲೋಡ್‌, ಡೌನ್‌ಲೋಡ್‌ ಮತ್ತು ಶೇರ್‌ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗೂಗಲ್‌ ಪ್ರತಿಕ್ರಿಯಿಸಿ, ಸಮಸ್ಯೆ ಅರಿವಿಗೆ ಬಂದಿದೆ. ಶೀಘ್ರವೇ ಸಮಸ್ಯೆ ಬಗೆ ಹರಿಸುವುದಾಗಿ ತಿಳಿಸಿದೆ.

    ಈ ರೀತಿ ಎರಡನೇ ಬಾರಿ ಜಿಮೇಲ್‌ನಲ್ಲಿ ಸಮಸ್ಯೆ ಕಾಣಿಸಿದೆ. ಜುಲೈನಲ್ಲಿ ಮೇಲ್‌ ಲಾಗಿನ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬಳಿಕ ಸಮಸ್ಯೆಯನ್ನು ಬಗೆ ಹರಿಸಿತ್ತು. ಆದರೆ ಯಾಕೆ ಈ ಸಮಸ್ಯೆ ಸೃಷ್ಟಿಯಾಯಿತು ಎಂಬುದಕ್ಕೆ ಗೂಗಲ್‌ ಯಾವುದೇ ವಿವರಣೆ ನೀಡಿರಲಿಲ್ಲ.

    ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯಗಳನ್ನು ಬರೆದು ಹಾಕುತ್ತಿದ್ದು, ವಿಶ್ವದಲ್ಲೇ ಜಿಮೇಲ್‌ ಟ್ರೆಂಡ್‌ ಆಗಿದೆ.

  • ಫೋನಿನಲ್ಲಿ ಮಾತನಾಡ್ತಾ 7ನೇ ಮಹಡಿಯಿಂದ ಬಿದ್ದ ಐಐಟಿ ವಿದ್ಯಾರ್ಥಿ – ಮೇಲ್ ನಲ್ಲಿ ಆತ್ಮಹತ್ಯೆ ಸಂದೇಶ

    ಫೋನಿನಲ್ಲಿ ಮಾತನಾಡ್ತಾ 7ನೇ ಮಹಡಿಯಿಂದ ಬಿದ್ದ ಐಐಟಿ ವಿದ್ಯಾರ್ಥಿ – ಮೇಲ್ ನಲ್ಲಿ ಆತ್ಮಹತ್ಯೆ ಸಂದೇಶ

    ಹೈದರಾಬಾದ್: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಓದುತ್ತಿದ್ದ 21 ವರ್ಷದ ವಿದ್ಯಾರ್ಥಿ 7ನೇ ಅಂತಸ್ತಿನ ಹಾಸ್ಟೆಲ್ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದ್ಯಾರ್ಥಿಯನ್ನು ಸಿಕಂದರಾಬಾದ್ ನ ಎಂ.ಅನಿರುಧ್ಯ ಎಂದು ಗುರುತಿಸಲಾಗಿದೆ. ವಿದ್ಯಾರ್ಥಿ ತನ್ನ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಕಟ್ಟಡದಿಂದ ಬಿದ್ದಿದ್ದಾನೆ ಎಂದು ತಿಳಿದು ಬಂದಿತ್ತು. ಆದರೆ ತನಿಖೆಯ ಬಳಿಕ ಇದು ಆಕಸ್ಮಿಕ ಸಾವಲ್ಲ, ಆತ್ಮಹತ್ಯೆ ಎಂದು ತಿಳಿದು ಬಂದಿದೆ.

    ಗುರುವಾರ ಬೆಳಗ್ಗೆ ಮೃತ ಎಂ.ಅನಿರುಧ್ಯ ತನ್ನ ಸ್ನೇಹಿತನಿಗೆ ಒಂದು ಮೇಲ್ ಮಾಡಿದ್ದು, ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ಮಾಡಿದ್ದಾನೆ. ಅನಿರುಧ್ಯ ಖಿನ್ನತೆಗೆ ಒಳಗಾಗಿದ್ದನು. ಆದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ನೇಹಿತ ತಿಳಿಸಿದ್ದಾನೆ.

    ಮೇಲ್ ನಲ್ಲಿ ಏನಿದೆ?
    “ನಾನು ನನ್ನ ಜೀವನ ಸಂಪೂರ್ಣವಾಗಿ ತಾರ್ಕಿಕವಾಗಿದ್ದು, ಮುಂದಿನ ಭವಿಷ್ಯವನ್ನು ಅಂದಾಜಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ನನ್ನ ಈ ನಿರ್ಧಾರದಲ್ಲಿ ಯಾರ ಒಳಸಂಚಿಲ್ಲ. ನನ್ನ ಲೈಫ್ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ. ಹೀಗಾಗಿ ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುವ ನಿರ್ಧಾರವನ್ನು ಮಾಡಿದ್ದೇನೆ” ಎಂದು ಮೇಲ್ ಮಾಡಿದ್ದಾನೆ.

    ಅಷ್ಟೇ ಅಲ್ಲದೇ ಇತ್ತೀಚೆಗಷ್ಟೇ ಮೃತ ವಿದ್ಯಾರ್ಥಿ ಮನೋವೈದ್ಯರನ್ನು ಭೇಟಿಯಾಗಿದ್ದನು. ಸಿಕಂದರಾಬಾದ್ ನ ಬೋವೆನ್ಪಲ್ಲಿಯ ನಿವಾಸಿ ಅನರುಧ್ಯ ಎಂದು ಗುರುತಿಸಲಾಗಿದ್ದು, ವಿದ್ಯಾರ್ಥಿ ನಾಲ್ಕನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಬೆದರಿಕೆ ಮೇಲ್: ಸೈಬರ್ ಸೆಲ್‍ಗೆ ಇನ್ಫೋಸಿಸ್ ದೂರು

    ಬೆದರಿಕೆ ಮೇಲ್: ಸೈಬರ್ ಸೆಲ್‍ಗೆ ಇನ್ಫೋಸಿಸ್ ದೂರು

    ಬೆಂಗಳೂರು: ಈ ಮೇಲ್ ಮೂಲಕ ಸಂಸ್ಥೆಗೆ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನ ವಿರುದ್ಧ ಇನ್ಫೋಸಿಸ್ ಸೈಬರ್ ಕ್ರೈಂ ಪೊಲೀಸ್‍ಗೆ ದೂರು ನೀಡಿದೆ.

    ಅಲ್ಪೇಶ್‍ಪಟೇಲ್ ಎಂಬಾತನ ವಿರುದ್ಧ ಇನ್ಫೋಸಿಸ್ ಸೆಪ್ಟೆಂಬರ್ 26 ರಂದು ದೂರು ನೀಡಿದೆ.

    ಇಮೇಲ್ ನಲ್ಲಿ ಏನಿತ್ತು?
    ಇನ್ಫೋಸಿಸ್ ಸಂಸ್ಥೆ ಸಮಾಜದಲ್ಲಿ ಭಯೋತ್ಪಾದನೆಯನ್ನ ಹಬ್ಬಿಸುತ್ತಿದೆ. ಹೀಗಾಗಿ ಸಂಸ್ಥೆಗೆ ಯಾವುದೇ ರೀತಿಯ ಗುತ್ತಿಗೆಗಳನ್ನು ಕೊಡದಂತೆ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಂದಿನ ಭಾರತದ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರಿಗೆ ಪತ್ರ ಬರೆಯುವುದಾಗಿ ಜುಲೈ 28ರಂದು ಇನ್ಫೋಸಿಸ್ ಉದ್ಯೋಗಿಗಳಾದ ಮಣಿಕಾಂತ್, ರಂಗನಾಥ್ ದ್ವಾರಕನಾಥ್ ಮಾವಿನಕೆರೆ, ಸಂದೀಪ್ ಮಹಿಂದ್ರೊ ಅವರ ಖಾತೆಗಳಿಗೆ patelbalpesh@yahoo.com ಮೂಲಕ ಬೆದರಿಕೆ ಬಂದಿತ್ತು.

    ಪೊಲೀಸರು ಐಪಿ ಅಡ್ರೆಸ್ ಮೂಲಕ ಇಮೇಲ್ ಕಳುಹಿಸಿದ ವ್ಯಕ್ತಿಯನ್ನು ಪತ್ತೆ ಮಾಡಲು ಮುಂದಾಗಿದ್ದಾರೆ. ಇಮೇಲ್ ಕಳುಹಿಸಿದ ವ್ಯಕ್ತಿ ಇನ್ಫಿಯ ಮಾಜಿ ಉದ್ಯೋಗಿಯಾಗಿದ್ದು, ಮೇಲಿನ ಅಧಿಕಾರಿಗಳ ಹೆಸರಿಗೆ ಕಳಂಕ ತರಲು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.