Tag: Maid

  • ಮಾಲೀಕನ 11 ವರ್ಷದ ಮಗನೊಂದಿಗೆ ಸೆಕ್ಸ್- ಸೇವಕಿಗೆ ಜೈಲು ಶಿಕ್ಷೆ

    ಮಾಲೀಕನ 11 ವರ್ಷದ ಮಗನೊಂದಿಗೆ ಸೆಕ್ಸ್- ಸೇವಕಿಗೆ ಜೈಲು ಶಿಕ್ಷೆ

    ಸಿಂಗಾಪುರ: ಮಾಲೀಕನ 11 ವರ್ಷದ ಮಗನ ಜೊತೆಗೆ ಸೆಕ್ಸ್ ಮಾಡಿದ್ದ ಭಾರತೀಯ ಮೂಲದ ಮಹಿಳೆಯೊಬ್ಬಳಿಗೆ ಸಿಂಗಪುರದ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ.

    ಅಪರಾಧಿ ಮಹಿಳೆಯು 33 ವರ್ಷದವಳಾಗಿದ್ದು, ಕಳೆದ 18 ತಿಂಗಳಿನಿಂದ ಜೈಲಿನಲ್ಲಿದ್ದಳು. ಈಗ ಕೋರ್ಟ್ ಏಳು ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂಪಾಯಿಗೂ ಅಧಿಕ (20 ಸಾವಿರ ಸಿಂಗಾಪುರ ಡಾಲರ್) ದಂಡ ವಿಧಿಸಿದೆ.

    ಏನಿದು ಪ್ರಕರಣ?:
    ಭಾರತೀಯ ಮೂಲದ ಮಹಿಳೆ ಉದ್ಯೋಗಕ್ಕಾಗಿ ಸಿಂಗಾಪುರಕ್ಕೆ ಜನವರಿ 2016 ರಂದು ಹೋಗಿದ್ದಳು. ವ್ಯಕ್ತಿಯೊಬ್ಬರ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ಅವರ ಕೆಲವು ದಿನಗಳ ಬಳಿಕ ಮಾಲೀಕನ 11 ವರ್ಷದ ಮಗನ ಜೊತೆಗೆ ಸೆಕ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ ತನ್ನ ಮೊಬೈಲ್‍ನಲ್ಲಿ ಈ ಕೃತ್ಯದ ವಿಡಿಯೋವನ್ನು ಮಾಡಿಕೊಂಡಿದ್ದಳು.

    ಬಾಲಕನಿಗೆ ವಿಡಿಯೋ ಬೆದರಿಕೆಯೊಡ್ಡಿ ಸುಮಾರು ನಾಲ್ಕು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಬಾಲಕನ ಮಾನಸಿಕ ವರ್ತನೆ ಬದಲಾದ ಹಿನ್ನೆಲೆಯಲ್ಲಿ ಪೋಷಕರು ಮಹಿಳೆಯ ಮೇಲೆ ಶಂಕೆ ವ್ಯಕ್ತಪಡಿಸಿದ್ದರು. ಜುಲೈ 2016ರಂದು ಬಾಲಕನೊಂದಿಗೆ ಸೆಕ್ಸ್ ನಡೆಸುತ್ತಿರುವಾಗಲೇ ಮಹಿಳೆ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಳು. ಬಳಿಕ ಪೋಷಕರು ಆಕೆಯನ್ನು ಪೊಲೀಸರಿಗೆ ಒಪ್ಪಿಸಿ ದೂರು ದಾಖಲಿಸಿದ್ದರು.

    ಮಹಿಳೆಯ ವಿರುದ್ಧ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣದಡಿ ಪ್ರಕರಣ ದಾಖಲಾಗಿತ್ತು. ಕಳೆದ 18 ತಿಂಗಳಿನಿಂದ ಜೈಲು ಸೇರಿದ್ದ ಮಹಿಳೆಗೆ ಕೋರ್ಟ್ ನವೆಂಬರ್ 22ರಂದು ತೀರ್ಪು ಪ್ರಕಟಿಸಿತ್ತು. ನ್ಯಾಯಾಧೀಶರು ಏಳು ವರ್ಷ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ. ದಂಡ ವಿಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಮಗುವಿಗೆ ಕೋಲಿನಿಂದ ಹೊಡೆದು, ಕೆನ್ನೆ ಕಚ್ಚಿ, ಕಾಲರ್ ಹಿಡಿದು ಎತ್ತಿದ್ಳು- ಹಿಡನ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಮನೆಕೆಲಸದವಳ ಕ್ರೂರ ಕೃತ್ಯ

    ಚಂಡೀಘಢ: ಮನೆಕೆಲಸದವಳು 1 ವರ್ಷದ ಮಗುವನ್ನ ಅಮಾನುಷವಾಗಿ ಥಳಿಸಿರೋ ಘಟನೆ ಪಂಜಾಬ್‍ನ ಕಪುರ್‍ತಲಾದಲ್ಲಿ ನಡೆದಿದ್ದು, ಕ್ರೂರಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

    1 ವರ್ಷದ ಪುಟ್ಟ ಮಗುವಿಗೆ ಮಹಿಳೆ ಅಮಾನುಷವಾಗಿ ಥಳಿಸಿದ್ದಾಳೆ. ಕೋಲಿನಿಂದ ಮಗುವಿಗೆ ಹೊಡೆದು, ಮಗುವಿನ ಕೆನ್ನೆಯನ್ನ ಕಚ್ಚಿದ್ದಾಳೆ. ಅಲ್ಲದೆ ಮಗುವಿನ ಕಾಲರ್ ಹಿಡಿದು ಮೇಲೆತ್ತಿದ್ದಾಳೆ. ಮಗು ನೋವಿನಿಂದ ಅಳುತ್ತಿದ್ದರೂ ಕ್ರೂರಿ ಮಹಿಳೆಗೆ ಅದು ಯಾವುದೇ ಪರಿಣಾಮ ಬೀರಲಿಲ್ಲ. ಮಗು ಅಳುತ್ತಿರೋ ಧ್ವನಿ ಹೊರಗೆ ಕೇಳಿಸಬಾರದೆಂದು ಟಿವಿಯ ಶಬ್ದವನ್ನ ಜಾಸ್ತಿ ಮಾಡಿದ್ದಾಳೆ. ಈ ಎಲ್ಲಾ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿತ್ತು.

    ಮಗುವಿನ ತಂದೆ ಸುಖ್‍ದೇವ್ ಸಿಂಗ್ ನೀಡಿದ ದೂರಿನನ್ವಯ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನ ಬಂಧಿಸಿದ್ದಾರೆ. ಬಂಧಿತಳನ್ನು ಪರ್ವೀನ್(35) ಎಂದು ಗುರುತಿಸಲಾಗಿದ್ದು, ಈಕೆ ಕಪುರ್‍ತಲಾದ ಮೆಹ್ಟಾಬ್‍ಘರ್ ನಿವಾಸಿಯಾಗಿದ್ದಾಳೆ.

    ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವನ್ನ ನೋಡಿಕೊಳ್ಳಲು ಪರ್ವೀನ್‍ಳನ್ನ ಕೆಲಸಕ್ಕೆ ತೆಗೆದುಕೊಂಡಿದ್ದರು. ಆಕೆಗೆ ತಿಂಗಳಿಗೆ 1500 ರೂ. ಸಂಬಳ ನೀಡಲಾಗುತ್ತಿತ್ತು ಎಂದು ಮಗುವಿನ ತಂದೆ ಸುಖ್‍ದೇವ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ. ನಿರೀಕ್ಷೆಯಂತೆ ತಂದೆ ತಾಯಿ ಸಮ್ಮುಖದಲ್ಲಿ ಪರ್ವೀನ್ ಮಗುವನ್ನ ಚೆನ್ನಾಗೇ ನೋಡಿಕೊಳ್ಳುತ್ತಿದ್ದಳು.

    ಆದ್ರೆ ಮಗುವಿನ ವರ್ತನೆಯಲ್ಲಿ ಬದಲಾವಣೆ ಕಂಡುಬಂದಾಗ, ಜೊತೆಗೆ ಗಾಯದ ಗುರುತುಗಳು ಕಂಡುಬಂದಾಗ ತಂದೆ ತಾಯಿಗೆ ಅನುಮಾನ ಬಂದಿತ್ತು. ಹೀಗಾಗಿ ಗೌಪ್ಯವಾಗಿ ಮನೆಯ ಮೂಲೆಯೊಂದರಲ್ಲಿ ಮೊಬೈಲ್ ಫೋನ್ ಕ್ಯಾಮೆರಾ ಆನ್ ಮಾಡಿ ಇಟ್ಟಿದ್ದರು. ಆಗ ಪರ್ವೀನ್‍ಳ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ಮಗುವನ್ನ ಸುಮ್ಮನಿರಿಸಲು ಹೊಡೆದಿದ್ದಾಗಿ ಪರ್ವೀನ್ ಪೊಲೀಸರಿಗೆ ಹೇಳಿದ್ದಾಳೆ. ಆರೋಪಿ ಪರ್ವೀನ್ ವಿರುದ್ಧ ಐಪಿಸಿ ಸೆಕ್ಷನ್ 323 ಹಾಗೂ 380ರಡಿ ಪ್ರಕರಣ ದಾಖಲಾಗಿದೆ.

  • ವೃದ್ಧೆಗೆ ಚಾಕುವಿನಿಂದ 10 ಬಾರಿ ಇರಿದ ಮನೆಕೆಲಸದವಳು

    ವೃದ್ಧೆಗೆ ಚಾಕುವಿನಿಂದ 10 ಬಾರಿ ಇರಿದ ಮನೆಕೆಲಸದವಳು

    ನವದೆಹಲಿ: ವೃದ್ಧೆಯೊಬ್ಬರಿಗೆ ಮನೆ ಕೆಲಸದವಳು 10 ಬಾರಿ ಚಾಕುವಿನಿಂದ ಇರಿದ ಘಟನೆ ಗುರುವಾರ ಮಧ್ಯಾಹ್ನ ದೆಹಲಿಯಲ್ಲಿ ನಡೆದಿದೆ.

     

    ಇಲ್ಲಿನ ಗ್ರೇಟರ್ ಕೈಲಾಶ್-1 ರ ಅಪಾರ್ಟ್‍ಮೆಂಟ್‍ನಲ್ಲಿ ಎರಡನೇ ಮಹಡಿಯಲ್ಲಿ ವಾಸವಿದ್ದ ನೀರಜಾ ಗುಪ್ತಾ ಇರಿತಕ್ಕೊಳಗಾದ ವೃದ್ಧೆ. ಸದ್ಯ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಾಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

    ಮನೆಕೆಲಸಕ್ಕಾಗಿ 23 ವರ್ಷದ ತುಳಸಿಯನ್ನು ಇತ್ತೀಚೆಗಷ್ಟೇ ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು. ಆಕೆ ಮಾಲೀಕರ ಬಳಿ 5 ಲಕ್ಷ ರೂ. ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಳೆಂದು ವರದಿಯಾಗಿದೆ.

    ಇರಿತಕ್ಕೊಳಗದ ನೀರಜಾ ಅವರು ಅದೇ ಚಾಕು ಬಳಸಿ ತುಳಸಿ ಮೇಲೆ ದಾಳಿ ಮಾಡಿದ್ದಾರೆ. ನಂತರ ಆಟೋ ರಿಕ್ಷಾ ಏರಿ ಸ್ವಲ್ಪ ದೂರ ಬಂದು ಪೊಲೀಸರಿಗೆ ಕರೆ ಮಾಡಿ, ತನಗೆ ಚಾಕುವಿನಿಂದ ಇರಿದು ಹಣ ದೋಚಿರುವುದಾಗಿ ದೂರು ನೀಡಿದ್ದಾರೆ.

    ಸದ್ಯ ತುಳಸಿಯನ್ನ ಪೊಲಿಸರು ಬಂಧಿಸಿದ್ದಾರೆ.