Tag: Mahua Moitra

  • ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಮತ್ತೆ ಕಾಳಿ ದೇವಿಯನ್ನು ಅಪಮಾನಿಸಿದ ಲೀನಾ: ಹಿಂದೂಗಳ ಆಕ್ರೋಶ

    ಕಾಳಿ ದೇವಿಯನ್ನು ನಿರಂತರವಾಗಿ ಅಪಮಾನಿಸುತ್ತಿರುವ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಮೇಲೆ ಕ್ರಮಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆಕೆ ಯಾವುದೇ ದೇಶದಲ್ಲಿ ಇದ್ದರೂ, ಕನಿಷ್ಠ ಅವಳ ಟ್ವಿಟರ್ ಮತ್ತು ಫೇಸ್ ಬುಕ್ ಪೇಜ್ ಗಳನ್ನು ಡಿಲಿಟ್ ಮಾಡಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಾಚಿಕೆಗೇಡಿನ ಸಂಗತಿ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಅವರ ಮೇಲೆ ಕ್ರಮ ತಗೆದುಕೊಳ್ಳದೇ ಇರುವ ಕಾರಣಕ್ಕಾಗಿ ಹೀಗೆ ನಿರಂತರವಾಗಿ ಅವರು ಅಪಮಾನದ ಪೋಸ್ಟ್ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ಮೊದಲ ಸಲ ಕಾಳಿ ಕೈಯಲ್ಲಿ ಸಿಗರೇಟು ಮತ್ತು ಎಲ್‍ಜಿಬಿಡಿಕ್ಯೂ ಧ್ವಜ ಕೊಟ್ಟು ಹಿಂದೂಗಳ ಕಂಗೆಣ್ಣಿಗೆ ಗುರಿಯಾಗಿದ್ದಾರೆ. ಆನಂತರ ಶಿವ ಪಾರ್ವತಿ ಕೈಯಲ್ಲೂ ಸಿಗರೇಟು ಕೊಟ್ಟು ಅಪಮಾನ ಮಾಡಿದ್ದಾರೆ. ಇದೀಗ ಕಾಳಿಯ ಕುರಿತಾಗಿ ಮತ್ತಷ್ಟು ಬರಹಗಳನ್ನು ಬರೆದಿದ್ದು, ಸಲಿಂಗಿಗಳನ್ನು ಕಾಳಿ ಇಷ್ಟಪಡುತ್ತಾಳೆ ಎಂದೂ, ಮತ್ತು ಹಿಂದುತ್ವವನ್ನು ನಾಶ ಮಾಡಲು ಕಾಳಿ ಬರುತ್ತಾಳೆ ಎಂದು ಟ್ವಿಟರ್ ಖಾತೆಯಲ್ಲಿ ಲೀನಾ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಳಿ ಕೈಗೆ ಸಿಗರೇಟು : ಮಾಳವಿಕಾ ಅವಿನಾಶ್ ಛೀಮಾರಿ, ನಟ ಕಿಶೋರ್ ವಿಭಿನ್ನ ಪ್ರತಿಕ್ರಿಯೆ

    ಲೀನಾ ವಿರುದ್ಧ ದೂರುಗಳ ಮಹಾಪುರವೇ ಹರಿದು ಬರುತ್ತಿದ್ದರೂ, ಅವರನ್ನು ಕೂಡಲೇ ಬಂಧಿಸಬೇಕು ಎಂಬ ಆಗ್ರಹ ಶುರುವಾಗಿದ್ದರೂ, ಇವರಿಗೂ ಯಾವುದೇ ಕ್ರಮ ತಗೆದುಕೊಳ್ಳದೇ ಇರುವುದಕ್ಕೆ ಹಲವರು ಹಲವು ಅನುಮಾನಗಳನ್ನು ಹೊರಹಾಕಿದ್ದಾರೆ. ಆ ಲೀನಾ ಹಿಂದೆ ಯಾರು ಇದ್ದಾರೆ ಎಂದು ಪತ್ತೆ ಹಚ್ಚಬೇಕು ಹಾಗೂ ಕೂಡಲೇ ಸೋಷಿಯಲ್ ಮೀಡಿಯಾದಿಂದ ಅವರ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಸಿಟಿವ್‌ ಆಗಿ ಯೋಚಿಸೋಣ: ಕಾಳಿ ದೇವಿ ಕುರಿತ ವಿವಾದದ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

    ಪಾಸಿಟಿವ್‌ ಆಗಿ ಯೋಚಿಸೋಣ: ಕಾಳಿ ದೇವಿ ಕುರಿತ ವಿವಾದದ ಬಗ್ಗೆ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ

    ಕೋಲ್ಕತ್ತಾ: ಜನರು ತಪ್ಪು ಮಾಡುತ್ತಾರೆ. ಆದರೆ ಅದನ್ನು ಸರಿಪಡಿಸಿಕೊಳ್ಳಬಹುದು ಎಂದು ಕಾಳಿ ದೇವಿ ಕುರಿತು ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ವಿವಾದಿತ ಹೇಳಿಕೆ ಕುರಿತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿದ್ದಾರೆ.

    ಕೆಲಸ ಮಾಡುವಾಗ ನಾವು ತಪ್ಪುಗಳನ್ನು ಮಾಡುತ್ತೇವೆ. ಆದರೆ ಅವುಗಳನ್ನು ಸರಿಪಡಿಸಬಹುದು. ಕೆಲವರು ಒಳ್ಳೆ ಕೆಲಸವನ್ನೆಲ್ಲಾ ನೋಡದೇ ಇದ್ದಕ್ಕಿದ್ದ ಹಾಗೆ ಕೂಗಾಡ್ತಾರೆ. ನಕಾರಾತ್ಮಕತೆ ನಮ್ಮ ಮಿದುಳಿನ ಕೋಶಗಳ ಮೇಲೆ ಪರಿಣಾಮ ಬೀರುತ್ತೆ. ಹಾಗಾಗಿ ಪಾಸಿಟಿವ್‌ ಆಗಿ ಯೋಚಿಸೋಣ ಎಂದು ಟೀಕಾಕಾರರಿಗೆ ಮಮತಾ ಬ್ಯಾನರ್ಜಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ

    ವಿವಾದ ಏನು?
    ಮಹುವಾ ಅವರು ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡುವಾಗ, ಕಾಳಿ ದೇವಿಯು ಮಾಂಸ ಸೇವಿಸುವ ಹಾಗೂ ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ, ಅವರು ಪೂಜೆ ಮಾಡುವಾಗ ತಮ್ಮ ದೇವರಿಗೆ ವಿಸ್ಕಿಯನ್ನು ನೀಡುತ್ತಾರೆ. ಈಗ ನೀವು ಉತ್ತರ ಪ್ರದೇಶಕ್ಕೆ ಹೋಗಿ ನಿಮ್ಮ ದೇವರಿಗೆ ವಿಸ್ಕಿಯನ್ನು ಪ್ರಸಾದವಾಗಿ ಕೊಡುತ್ತೇವೆ ಎಂದು ಹೇಳಿದರೆ, ಅದು ಧರ್ಮನಿಂದನೆ ಎನ್ನುತ್ತಾರೆ ಎಂದು ಹೇಳಿಕೆ ನೀಡಿದ್ದರು.

    ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟು ವಿವಾದ – ಹಿಂದೂಗಳ ಕ್ಷಮೆ ಕೋರಿದ ಟೊರೆಂಟೊ ಮ್ಯೂಸಿಯಂ

    Live Tv
    [brid partner=56869869 player=32851 video=960834 autoplay=true]

  • ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ

    ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ

    ನವದೆಹಲಿ: ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ನಾನು ಬದುಕಲು ಬಯಸುವುದಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.

    ಈ ಕುರಿತು ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಾನು ಕಾಳಿ ದೇವಿ ಆರಾಧಕಿ, ಹಿಂದೂ ಧರ್ಮ ಪಾಲಿಸುವಾಕೆ, ನನ್ನ ಅಭಿಪ್ರಾಯಗಳು ನನ್ನ ಸ್ವ-ಧರ್ಮದ ಮೇಲೆಯೇ ಅವಲಂಬಿತವಾಗಿದ್ದವು. ಇದರಲ್ಲಿ ಅಪರಾಧ ಎಸಗುವ ಯಾವುದೇ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಹುವಾ ವಿರುದ್ಧ ಕೇಸ್‌ – ನಾನು ಕಾಳಿ ಆರಾಧಕಿಯಾಗಿದ್ದು ಹೆದರಲ್ಲ ಎಂದ ಸಂಸದೆ

    ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಪೈಗಂಬರ್‌ರನ್ನು ಅವಹೇಳನ ಮಾಡಿದರು. ಆದರೆ ನಾನು ಕಾಳಿದೇವಿಯನ್ನು ಕೊಂಡಾಡುತ್ತೇನೆ. ಹೀಗಿದ್ದೂ ಒಂದು ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ ಜಿಗಿತ ಕಂಡ ಪಾಕ್

    ಬಿಜೆಪಿ ತನ್ನ ಪರಿಕಲ್ಪನೆಯನ್ನು ಮತ್ತೊಬ್ಬರ ಮೇಲೆ ಹೇರಲು ಬಯಸುತ್ತಿದೆ. ಸಾಧ್ಯವಿದ್ದರೆ ಬಿಜೆಪಿ ನನ್ನ ತಪ್ಪುಗಳನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.

    ಏನುದು ವಿವಾದ?: ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಮಧ್ಯಪ್ರದೇಶದಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಕಾಳಿ ಕೈಯಲ್ಲಿ ಸಿಗರೇಟು ವಿವಾದ – ಹಿಂದೂಗಳ ಕ್ಷಮೆ ಕೋರಿದ ಟೊರೆಂಟೊ ಮ್ಯೂಸಿಯಂ

    ಈಚೆಗೆ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮೆಹುವಾ ಅವರು, ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ‍್ಯ ನಿಮಗಿದೆ ಎಂದು ಹೇಳಿ ವಿವಾದಕ್ಕೀಡಾಗಿದ್ದರು. ಸಾಮಾಜಿಕ ಜಾಲತಾಣದಲ್ಲೂ ಭಾರೀ ಟೀಕೆಗಳು ವ್ಯಕ್ತವಾಗಿತ್ತು.

    ವಿವಾದ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಟಿಎಂಸಿ, ಮಹುವಾ ಮೊಯಿತ್ರಾ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಮಹುವಾ ಹೇಳಿಕೆ ವೈಯಕ್ತಿಕ ಎಂದು ಹೇಳಿ ವಿವಾದಿಂದ ದೂರ ಉಳಿಯಿತು. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಮಹುವಾ ಅವರನ್ನು ಬಂಧಿಸಬೇಕೆಂಬ ಬೇಡಿಕೆಯನ್ನಿರಿಸಿದೆ.

    ಈ ಕುರಿತು ಬುಧವಾರ ಮತ್ತೆ ಟ್ವೀಟ್ ಮಾಡಿದ ಮಹುವಾ, ನಾನು ಕಾಳಿ ಆರಾಧಕಿಯಾಗಿದ್ದು ಯಾವುದಕ್ಕೂ ಹೆದರುವುದಿಲ್ಲ. ನಿಮ್ಮ ಮೂಢತೆ, ಗೂಂಡಾಯಿಸಂ ಅಥವಾ ಟ್ರೋಲ್‌ಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಳಿ ದೇವಿ ಮದ್ಯ, ಮಾಂಸ ಸೇವಿಸುವ ದೇವತೆ: ಟಿಎಂಸಿ ಸಂಸದೆ

    ಕಾಳಿ ದೇವಿ ಮದ್ಯ, ಮಾಂಸ ಸೇವಿಸುವ ದೇವತೆ: ಟಿಎಂಸಿ ಸಂಸದೆ

    ಕೋಲ್ಕತ್ತಾ: ಕಾಳಿ ದೇವಿಯು ಮಾಂಸ ತಿನ್ನುವ, ಮದ್ಯವನ್ನು ಸೇವಿಸುವ ದೇವತೆಯಾಗಿ ಕಾಣುತ್ತಾಳೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಚಿತ್ರದ ಪೋಸ್ಟರ್ ವಿವಾದಕ್ಕೆ ಪ್ರತಿಕ್ರಿಯಿಸಿದರು. ಅವರವರ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ಅವರವರಿಗೆ ಇರುತ್ತದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಹಾಗೂ ಇನ್ನೂ ಕೆಲವು ಸ್ಥಳಗಳಲ್ಲಿ ಧರ್ಮದ ನಿಂದನೆ ಆಗಿರುತ್ತದೆ ಎಂದು ತಿಳಿಸಿದರು.

    ಅದಕ್ಕೆ ಉದಾಹರಣೆ ಎಂಬಂತೆ ಸಿಕ್ಕಿಂನಲ್ಲಿ ಕಾಳಿ ದೇವಿಗೆ ವಿಸ್ಕಿಯನ್ನು ನೀಡುತ್ತಾರೆ. ಆದರೆ ಉತ್ತರ ಪ್ರದೇಶದಲ್ಲಿ ವಿಸ್ಕಿಯನ್ನು ಪ್ರಸಾದ ಎಂದು ಹೇಳಿದರೆ ಅವರು ಅದನ್ನು ಪ್ರಸಾದ ಎಂದರೆ ಧರ್ಮ ನಿಂದನೆ ಆಗುತ್ತದೆ ಎಂದರು. ಇದನ್ನೂ ಓದಿ: ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಲೀನಾ ಅವರು ತಮ್ಮ ಸಾಕ್ಷ್ಯಚಿತ್ರದ ಪೋಸ್ಟರ್ ಒಂದನ್ನು ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಆ ಪೋಸ್ಟರ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಅವರು ಧಕ್ಕೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಎಸಿಬಿ ದಾಳಿಗೆ ಒಳಗಾಗುವವರು ಶುದ್ಧರಾಗಿದ್ರೆ ಏಕೆ ಹೆದರಬೇಕು: ಬಿ.ಸಿ.ನಾಗೇಶ್ ಟಾಂಗ್

    Live Tv
    [brid partner=56869869 player=32851 video=960834 autoplay=true]

  • ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ

    ನನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶವಿದೆ: ಮೊಯಿತ್ರಾ

    ನವದೆಹಲಿ: ಕರ್ನಾಟಕ ರಾಜ್ಯಾದ್ಯಂತ ಹಲಾಲ್‌ಕಟ್, ಝಟ್ಕಾಕಟ್ ವಿವಾದದ ನಡುವೆ ಇದೀಗ ರಾಷ್ಟ್ರಮಟ್ಟದಲ್ಲಿ `ಮೀಟ್ ಬ್ಯಾನ್’ (ಮಾಂಸ ನಿಷೇಧ) ಅಭಿಯಾನ ತಲೆ ಎತ್ತಿದೆ. ಒಂದೆಡೆ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧಿಸುವಂತೆ ದೆಹಲಿಯಲ್ಲಿ ಮೀಟ್ ಬ್ಯಾನ್ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಮುಸ್ಲಿಂ ಬಾಂದವರು ಸಹ ಪವಿತ್ರ ರಂಜಾನ್ ಸಂದರ್ಭದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಆಗ್ರಹಿಸುತ್ತಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ, ಸಂವಿಧಾನವು ತನಗೆ ಇಷ್ಟವಾದಾಗ ಮಾಂಸ ತಿನ್ನಲು ಅವಕಾಶ ನೀಡುತ್ತದೆ. ಅದೇ ರೀತಿ ಅಂಗಡಿಯವರಿಗೆ ವ್ಯಾಪಾರ ನಡೆಸಲೂ ಸ್ವಾತಂತ್ರ್ಯ ನೀಡುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಇಸ್ಲಾಂ ಸ್ಲೀಪರ್ ಸೆಲ್ ಕೆಲಸ ಮಾಡ್ತಿದೆ: ಚಕ್ರವರ್ತಿ ಸೂಲಿಬೆಲೆ

    meat ban

    ನವರಾತ್ರಿ ಸಂದರ್ಭದಲ್ಲಿ ದಕ್ಷಿಣ ದೆಹಲಿಯ ಕೆಲ ಭಾಗಗಳಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೇಯರ್ ಮುಖೇಶ್ ಸೂರ್ಯನ್ ಅವರು ಸೂಚಿಸಿರುವ ಬೆನ್ನಲ್ಲೇ ಮೊಯಿತ್ರಾ ಈ ಹೇಳಿಕೆ ನೀಡಿದ್ದಾರೆ.

    ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿರುವ ಪ್ರತಿಯೊಬ್ಬರು ರಂಜಾನ್ ಸಮಯದಲ್ಲಿ ಸಾರ್ವಜನಿಕವಾಗಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸಬೇಕು. ರಂಜಾನ್ ಸಮಯದಲ್ಲಿ ನಾವು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಊಟ ಮಾಡುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಮುಸ್ಲಿಮೇತರರು, ಪ್ರವಾಸಿಗರು ಹಾಗೂ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಮಾಂಸಾಹಾರ ಸೇವನೆ ಮಾಡುವುದನ್ನು ನಿಷೇಧಿಸುವುದು ಸರಿಯೆಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ನಗದು ಬಹುಮಾನ – ಹಲಾಲ್ ವಿರುದ್ಧ ಅಭಿಯಾನ: ಎರಡಕ್ಕೂ ನಂಟೇನು?

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ, ಇದು ದೆಹಲಿಗೆ ಮಾತ್ರವಲ್ಲ, ಭಾರತದ ಇತರ ಭಾಗಗಳಿಗೂ ವಿಸ್ತರಿಸಬೇಕು. ನವರಾತ್ರಿ ಹಬ್ಬದ ಸಂದರ್ಭದಲ್ಲಿ ವ್ರತ ಹಿಡಿದು ದೇವಿಯನ್ನು ಪೂಜಿಸುತ್ತಾರೆ. ಮುಸ್ಲಿಮರೇ ಆಗಲಿ, ಬೇರೆಯವರೇ ಆಗಲಿ ನಮ್ಮ ಸಂಸ್ಕೃತಿ ಹೇಳುವುದನ್ನು ನಾವು ಗೌರವಿಸಬೇಕು ಹಾಗಾಗಿ ಈ ಕ್ರಮ ದೇಶಾದ್ಯಂತ ಜಾರಿಯಾಗಬೇಕು ಎಂದು ಅವರು ಹೇಳಿದ್ದಾರೆ.

    ಕಾಂಗ್ರೆಸ್ ನಾಯಕ ಸಲ್ಮಾನ್ ನಿಜಾಮಿ ಅವರು, ದಕ್ಷಿಣ ದೆಹಲಿಯಲ್ಲಿ ಮಾಂಸ ನಿಷೇಧಿಸುವ ಬಿಜೆಪಿಯ ಕ್ರಮವು ಬೂಟಾಟಿಕೆಯಾಗಿದೆ. ನವರಾತ್ರಿಯಲ್ಲಿ ಮಾಂಸ ಮಾರಾಟ ನಿಷೇಧಿಸುವುದಾದರೆ ಪವಿತ್ರ ರಂಜಾನ್ ತಿಂಗಳಲ್ಲಿ ಮದ್ಯವನ್ನು ಏಕೆ ನಿಷೇಧಿಸಬಾರದು? ನೀವು ನವರಾತ್ರಿಯಲ್ಲಿ ಈರುಳ್ಳಿ ಅಥವಾ ಮಾಂಸವನ್ನು ತಿನ್ನದಿದ್ದರೆ ಇತರರನ್ನು ಏಕೆ ನಿಲ್ಲಿಸಬೇಕು? ಇದು ಪ್ರಜಾಪ್ರಭುತ್ವವೇ? ನಮ್ಮ ಭಾವನೆಗಳು ಮತ್ತು ಸಂವಿಧಾನದ ಬಗ್ಗೆ ಹಕ್ಕುಗಳು ಹೇಳುವುದು ಇದನ್ನೆಯೇ ಎಂದು ಎಂದು ಪ್ರಶ್ನಿಸಿದ್ದಾರೆ.