Tag: Mahout

  • ಕಾವಾಡಿಗ ಕಲೀಲ್‍ನನ್ನು ಅಟ್ಟಾಡಿಸಿದ ಸಾಕಾನೆ ಮಣಿಕಂಠ

    ಕಾವಾಡಿಗ ಕಲೀಲ್‍ನನ್ನು ಅಟ್ಟಾಡಿಸಿದ ಸಾಕಾನೆ ಮಣಿಕಂಠ

    ಶಿವಮೊಗ್ಗ: ಸಾಕಾನೆ ಮಣಿಕಂಠ (Elephant) ಬಿಡಾರದಿಂದ ಕಾಡಿಗೆ ತೆರಳುವ ವೇಳೆ ಕಾವಾಡಿಗನನ್ನು (Kavadiga) ಅಟ್ಟಾಡಿಸಿದ ಘಟನೆ ಶಿವಮೊಗ್ಗದ (Shivamogga) ಸಕ್ರೆಬೈಲಿನ (Sakrebailu) ಆನೆ ಬಿಡಾರದಲ್ಲಿ ನಡೆದಿದೆ.

    ಶುಕ್ರವಾರ ಮಧ್ಯಾಹ್ನದ ವೇಳೆಗೆ ಮಣಿಕಂಠ ಆನೆ ಬಿಡಾರದಿಂದ ರಾಷ್ಟ್ರೀಯ ಹೆದ್ದಾರಿ ದಾಟಿ ಜಂಗಲ್ ರೆಸಾರ್ಟ್ ಮೂಲಕ ಕಾಡಿಗೆ ತೆರಳಬೇಕಿತ್ತು. ಈ ಸಂದರ್ಭದಲ್ಲಿ ಕಾವಾಡಿಗನನ್ನು ಕಂಡು ಇದ್ದಕ್ಕಿದ್ದಂತೆ ಕೋಪಗೊಂಡಿದೆ. ಮಣಿಕಂಠನ ಮೇಲೆ ಮಾವುತ ಇಮ್ರಾನ್ ಕುಳಿತಿದ್ದರು. ಕಾವಾಡಿಗ ಕಲೀಲ್ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸುತ್ತಿದ್ದರು. ರೆಸಾರ್ಟ್ ಗೇಟ್ ಬಳಿ ಕಲೀಲ್ ಬರುತ್ತಿದ್ದಂತೆ ಆತನ ಮೇಲೆ ಮಣಿಕಂಠ ದಾಳಿಗೆ ಮುಂದಾಗಿದ್ದಾನೆ. ಆನೆಯ ಮುನಿಸಿನ ಬಗ್ಗೆ ತಿಳಿದ ಕಲೀಲ್ ಬೈಕ್ ಬಿಟ್ಟು ಅಲ್ಲಿಂದಲೇ ಓಡಿ ಹೋಗಿ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಮಣಿಕಂಠ ಆನೆಯು ಕಲೀಲ್ ಅವರನ್ನು ಓಡಿಸಿಕೊಂಡು ಮತ್ತೆ ಬಿಡಾರದೊಳಗೆ ಓಡಿದೆ. ನಂತರ ಬಿಡಾರದಲ್ಲಿ ಅರಿವಳಿಕೆ ಮದ್ದು ನೀಡಲಾಯಿತು. ಆ ಬಳಿಕ ಇತರೆ ಆನೆಗಳ ಸಹಾಯದಿಂದ ಮಣಿಕಂಠನನ್ನು ನಿಯಂತ್ರಣಕ್ಕೆ ತಂದು ಕಟ್ಟಿ ಹಾಕಲಾಗಿದೆ. ಮಣಿಕಂಠ ಕಾವಡಿಗನ ಮೇಲೆ ದಾಳಿಗೆ ಮುಂದಾದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇತ್ತೀಚೆಗೆ, ಮಣಿಕಂಠ ತನ್ನ ಮಾವುತ ಹಾಗೂ ಕಾವಡಿಗರ ಮೇಲೆ ಇತರೆ ಆನೆಗಳ ಮೇಲೆ ಕೊಪಗೊಳ್ಳುತ್ತಿದೆ. ಈ ಹಿಂದೆ ಬಿಡಾರದ ತುಂಗಾ ಹಿನ್ನೀರಿನಲ್ಲಿ ಆನೆಗಳಿಗೆ ಸ್ನಾನ ಮಾಡಿಸುವಾಗ ಮಾವುತನ ಮೇಲೆ ದಾಳಿ ನಡೆಸಲು ಸಹ ಮುಂದಾಗಿತ್ತು. ಇದನ್ನೂ ಓದಿ: 21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ- ಕೊನೆಗೂ ಗಡ್ಡ ತೆಗೆಸಿಕೊಂಡ ವ್ಯಕ್ತಿ

    Live Tv
    [brid partner=56869869 player=32851 video=960834 autoplay=true]

  • ಮಾವುತನಿಂದ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ – ವೀಡಿಯೋ ವೈರಲ್

    ಮಾವುತನಿಂದ ಬಾಬ್ ಕಟ್ ಕೂದಲು ಬಾಚಿಸಿಕೊಂಡ ಆನೆ – ವೀಡಿಯೋ ವೈರಲ್

    ಚೆನ್ನೈ: ಆನೆಯೊಂದು ತನ್ನ ಬಾಬ್ ಕಟ್ ಕೂದಲನ್ನು ಮಾವುತನ ಕೈಯಲ್ಲಿ ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಜಗತ್ತಿನ ಅತ್ಯಂತ ಕ್ಯೂಟ್ ಪ್ರಾಣಿಗಳ ಲಿಸ್ಟ್ ನಲ್ಲಿ ಆನೆ ಕೂಡ ಒಂದು. ಆನೆ ತುಂಬಾ ಸೂಕ್ಷ್ಮ ಹಾಗೂ ಬುದ್ಧಿವಂತ ಪ್ರಾಣಿಯಾಗಿದೆ. ಕೆಲವು ದಿನಗಳ ಹಿಂದೆ ಆನೆ ವ್ಯಕ್ತಿಗಳಿಂದ ಬಾಳೆ ಹಣ್ಣು ಕಿತ್ತು ತಿನ್ನುವ, ಆನೆ ಡ್ಯಾನ್ಸ್ ಮಾಡುವ ಹೀಗೆ ಅನೇಕ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಆನೆಯೊಂದು ಮಾವುತನ ಕೈಯಿಂದ ತನ್ನ ಬಾಬ್ ಕಟ್ ಕೂದಲನ್ನು ಬಾಚಿಸಿಕೊಳ್ಳುತ್ತಿರುವ ಕ್ಯೂಟ್ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

    ವೀಡಿಯೋದಲ್ಲಿ ಮಾವುತ ಆನೆಯ ಕೂದಲನ್ನು ಬಾಚಣಿಗೆಯಿಂದ ಬಾಚುತ್ತಿರುವುದನ್ನು ನೋಡಬಹುದಾಗಿದೆ. ಆನೆ ತನ್ನ ಕಾಲುಗಳನ್ನು ಕೆಳಗೆ ಬಾಗಿಸಿ ಕುಳಿತುಕೊಂಡು ಮಾವುತನ ಕೈಯಲ್ಲಿ ಕೂದಲನ್ನು ಬಾಚಿಸಿಕೊಂಡಿದೆ. ಅಲ್ಲದೇ ಮಾವುತ ಕೂದಲನ್ನು ಬಾಚುತ್ತಿದ್ದರೆ ಆನೆ ಸಖತ್ ಎಂಜಾಯ್ ಮಾಡಿದೆ. ಜೊತೆಗೆ ಆನೆಯ ಹಣೆಯ ಮೇಲೆ ದೊಡ್ಡ ತಿಲಕ ಇಡಲಾಗಿದ್ದು, ಆನೆ ನೋಡಲು ಬಹಳ ಮುದ್ದಾಗಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

     

    View this post on Instagram

     

    A post shared by FindingTemples™ (@findingtemples)

    ಈ ವೀಡಿಯೋ ಕೊಯಮತ್ತೂರಿನ ತೆಕ್ಕಂಪಟ್ಟಿ ಗ್ರಾಮದ್ದಾಗಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಹಲವಾರು ಲೈಕ್ಸ್ ಮತ್ತು ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬಂದಿದೆ. ಕೆಲವರು ಆನೆ ನೋಡಿ ಸೋ ಕ್ಯೂಟ್ ಎಂದರೆ, ಮತ್ತೆ ಕೆಲವರು ಹ್ಯಾಂಡ್‍ಸಮ್ ಬಾಯ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಸಂಸದೆ ಶೋಭಾರಿಂದ ಉಪಹಾರದ ವ್ಯವಸ್ಥೆ

    ಗಜಪಡೆ ಮಾವುತರು, ಕಾವಾಡಿಗಳ ಕುಟುಂಬಕ್ಕೆ ಸಂಸದೆ ಶೋಭಾರಿಂದ ಉಪಹಾರದ ವ್ಯವಸ್ಥೆ

    ಮೈಸೂರು: ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಅವರು ಉಪಹಾರದ ವ್ಯವಸ್ಥೆ ಮಾಡಿದ್ದಾರೆ.

    ಆಯುಧ ಪೂಜೆವಿರುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಗಜಪಡೆ ಮಾವುತರು ಹಾಗೂ ಕಾವಾಡಿಗಳ ಕುಟುಂಬ ಅರಮನೆ ಆವರಣದಲ್ಲಿಯೇ ಬೀಡು ಬಿಟ್ಟಿದ್ದಾರೆ. ಈ ವೇಳೆ ಶೋಭಾ ಅವರು ಮಾವುತರು ಹಾಗೂ ಕಾವಾಡಿಗಳಿಗೆ ಲಘು ಉಪಹಾರ ಬಡಿಸಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ಪ್ರತಿ ವರ್ಷ ಉಪಹಾರದ ವ್ಯವಸ್ಥೆ ಮಾಡುತ್ತಾರೆ. ಇಂದು ಮಾವುತರು, ಕಾವಾಡಿಗಳ ಕುಟುಂಬಕ್ಕೆ ಮಸಾಲೆ ದೋಸೆ, ಪೊಂಗಲ್, ಇಡ್ಲಿ, ವಡೆ, ಹಾಲುಬಾಯಿ, ಖಾರಾಬಾತ್ ರೆಡಿ ಮಾಡಿದ್ದಾರೆ. 40 ಕುಟುಂಬಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, 300 ಮಂದಿ ಉಪಹಾರ ಸ್ವೀಕರಿಸಲಿದ್ದಾರೆ. ಇದೇ ವೇಳೆ ಶೋಭಾ ಅವರು ಮಹಿಳೆಯರಿಗೆ ಸೀರೆ ವಿತರಿಸಿದ್ದು, ಅವರಿಗೆ ಉಸ್ತುವಾರಿ ಸಚಿವ ಸೋಮಣ್ಣ ಸಾಥ್ ನೀಡಿದ್ದಾರೆ.

    ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶೋಭಾ ಅವರು, ಪ್ರತಿ ವರ್ಷದಂತೆ ಈ ವರ್ಷವೂ ನಾನು ನನ್ನ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದ್ದೇನೆ. ಈ ಬಾರಿ ಅತ್ಯುತ್ತಮವಾಗಿ ದಸರಾ ನಡೆಸಲಾಗುತ್ತದೆ. ಯಡಿಯೂರಪ್ಪ ಅವರು ಸಿಎಂ ಆದಾಗ ಮಾವುತರನ್ನು ಸರ್ಕಾರಿ ನೌಕರರಾಗಿ ನೇಮಕ ಮಾಡಿದ್ದೇವು. ಈಗ ಮಾವುತರು ಪ್ರಮೋಶನ್ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಯಡಿಯೂರಪ್ಪ ಅವರ ಬಳಿ ಮಾತಾಡಿ ಪ್ರಮೋಶನ್ ಮತ್ತೆ ಅವರಿಗೆ ಬೇಕಾಗಿರುವ ಅಗತ್ಯ ಸೌಲಭ್ಯ ಮಾಡಿಕೊಡುವ ಕೆಲಸ ಮಾಡುತ್ತೀವಿ. ಇಂದು ಮಾವುತರು ಖುಷಿಯಾಗಿದ್ದು, ಇದನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದರು.

    ಇದೇ ವೇಳೆ ನೆರೆ ಪರಿಹಾರಕ್ಕೆ ಕಡಿಮೆ ಹಣ ನೀಡಿದ್ದಾರೆ ಎಂಬ ಟೀಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಟೀಕೆಗಳಿಗೆ ಉತ್ತರ ಕೊಡುವುದಿಲ್ಲ. ಯಾರು ಬೇಕಾದರೂ ಟೀಕೆ ಮಾಡಬಹುದು. ಆದರೆ ನಾವು ನಮ್ಮ ಕೆಲಸ ಮಾಡುತ್ತೀವೆ. ಒಂದೆರೆಡು ತಿಂಗಳಿನಲ್ಲಿ ಮನೆ ಕಟ್ಟಲು ಆಗುವುದಿಲ್ಲ. ಹಂತ ಹಂತವಾಗಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತೆ. ಈ ಬಗ್ಗೆ ಯಾರು ಆತಂಕ ಪಡುವ ಅಗತ್ಯ ಇಲ್ಲ. ಏಕೆಂದರೆ ನಾವು ಎಲ್ಲರಿಗೂ ಮನೆ ಕಟ್ಟಿಕೊಡುತ್ತೇವೆ. ಸೇತುವೆ ಸೇರಿದಂತೆ ಅಗತ್ಯ ಮೂಲ ಭೂತ ಸೌಕರ್ಯಗಳನ್ನು ನಾವು ನೀಡುತ್ತೇವೆ. ಸರ್ಕಾರ ಜನರ ಪರವಾಗಿ ಇದ್ದೇ ಇರುತ್ತೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರ ಜೊತೆ ಸದಾ ಇರುತ್ತೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

  • ಮೈಸೂರು ಅರಮನೆಯಲ್ಲಿರುವ ಆನೆಯ ಮಾವುತ ಸಾವು

    ಮೈಸೂರು ಅರಮನೆಯಲ್ಲಿರುವ ಆನೆಯ ಮಾವುತ ಸಾವು

    ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿರುವ ಆನೆಯ ಮಾವುತ ಮೃತಪಟ್ಟಿದ್ದಾರೆ.

    ಕಾಳಪ್ಪ (52) ಮೃತಪಟ್ಟ ಮಾವುತ. ಕಾಳಪ್ಪ ಎಚ್.ಡಿ. ಕೋಟೆ ತಾಲೂಕಿನ ಬಳ್ಳೆ ಹಾಡಿಯ ನಿವಾಸಿಯಾಗಿದ್ದು, ಅರಮನೆಯ ರೂಬಿ ಎಂಬ ಆನೆಯನ್ನು ನೋಡಿಕೊಳ್ಳುತ್ತಿದ್ದರು.

    ಕಾಳಪ್ಪ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯ ಇದ್ದರೂ ಸಹ ಆನೆಯನ್ನು ಮುನ್ನಡೆಸಲು ಕಾಳಪ್ಪ ಬಂದಿದ್ದರು. ಆನೆ ಮುನ್ನಡೆಸುವಾಗಲೇ ಮೇಲ್ಭಾಗದಿಂದ ಕೆಳಕ್ಕೆ ಬಿದ್ದು ಕಾಳಪ್ಪ ಮೃತಪಟ್ಟಿದ್ದಾರೆ.

    ಆನೆಯನ್ನು ಮುನ್ನಡೆಸುವಾಗ ಕಾಳಪ್ಪ ತಲೆ ತಿರುಗಿ ಕೆಳಗೆ ಬಿದ್ದಿದ್ದಾರೆ. ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿ ಕಾಳಪ್ಪ ಮೃತಪಟ್ಟಿದ್ದಾರೆ. ಕಾಳಪ್ಪ ಕಳೆದ 20 ವರ್ಷಗಳಿಂದ ಆನೆ ಮಾವುತನಾಗಿ ಸೇವೆ ಸಲ್ಲಿಸಿದ್ದಾರೆ.

    ಸದ್ಯ ಅವರ ಮೃತದೇಹ ಕೆ.ಆರ್. ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

  • ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ತಾಯಿಯಿಂದ ಬೇರ್ಪಟ್ಟ ಆನೆಮರಿಗೆ ಕೊನೆಗೂ ಸಿಕ್ತು ಆಶ್ರಯ

    ಕೊಡಗು: ತಾಯಿಯಿಂದ ಬೇರ್ಪಟ್ಟು ಅಡವಿಯ ಮಡಿಲಲ್ಲಿ ಒಂಟಿಯಾಗಿದ್ದ ಮುದ್ದಾದ ಮರಿಯಾನೆಗೆ ಕೊನೆಗೂ ಆಶ್ರಯ ಸಿಕ್ಕಿದೆ. ಅನಾಥವಾಗಿದ್ದ ಮರಿಯಾನೆಯನ್ನು ನಾಗರಹೊಳೆಯ ಅರಣ್ಯಾಧಿಕಾರಿಗಳು ಹಿಡಿದು ಕೊಡಗಿನ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ನೀಡಿದ್ದಾರೆ. ಮುದ್ದಾದ ಮರಿಯಾನೆಯನ್ನು ಮಾವುತರು ಪಾಲನೆ ಪೋಷಣೆ ಮಾಡುತ್ತಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮೇಟಿಕೊಪ್ಪೆ ವನ್ಯಜೀವಿ ವಲಯದಲ್ಲಿ 20 ದಿನದ ಆನೆ ಮರಿಯೊಂದು ತಾಯಿಯಿಂದ ಬೇರ್ಪಟ್ಟು ಅನಾಥವಾಗಿ ಅಲೆದಾಡುತ್ತಿತ್ತು. ಸದ್ಯ ಮರಿ ಆನೆ ತಿತಿಮತಿಯ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮಾವುತ ಶಿವು ಎಂಬವರ ಆರೈಕೆಯಲ್ಲಿದೆ. ದಿನಕ್ಕೆ 10 ಲೀಟರ್ ಹಾಲನ್ನು ನಿಪ್ಪಲ್ ಮೂಲಕ ಆನೆ ಮರಿಗೆ ನೀಡಲಾಗುತ್ತಿದೆ. ಮತ್ತಿಗೋಡು ಶಿಬಿರದ ಸಿಬ್ಬಂದಿ ಹಾಗೂ ಪಶುವೈದ್ಯರು ಮರಿಯಾನೆಯ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ. ಇದೀಗ ಮರಿಯಾನೆಗೆ 1.5 ತಿಂಗಳಾಗಿದೆ.

    ಒಟ್ಟಾರೆ ತಾಯಿಯಿಂದ ದೂರಾಗಿ, ತಾಯಿ ಪ್ರೀತಿ ಮರಿಚಿಕೆಯಾದ ಮುದ್ದಾದ ಆನೆಮರಿಗೆ ಮತ್ತಿಗೋಡು ಸಾಕಾನೆ ಶಿಬಿರದ ಅರಣ್ಯ ಇಲಾಖೆ ಸಿಬ್ಬಂದಿಯ ಪ್ರೀತಿ ಸಿಕ್ಕಿದೆ. ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಮರಿಯಾನೆ ತುಂಟಾಟವಾಡುತ್ತಾ ಶಿಬಿರದಲ್ಲಿ ಕಾಲ ಕಳೆಯುತ್ತಿದೆ.