Tag: Mahindra Thar

  • ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    – ಆಸ್ತಿ ಕಂಡು ಅಧಿಕಾರಿಗಳೇ ದಂಗು

    ನವದೆಹಲಿ: ಮಹೀಂದ್ರಾ ಥಾರ್‌ (Mahindra Thar), ರಾಯಲ್‌ ಎನ್‌ಫೀಲ್ಡ್‌ ಬೈಕ್‌, 1 ಕೋಟಿಗೂ ಅಧಿಕ ಮೌಲ್ಯದ ಫ್ಲಾಟ್‌ಗಳು, 2 ಐಫೋನ್‌, ರೋಲೆಕ್ಸ್‌ ವಾಚ್‌… ಇದಿಷ್ಟೂ ಯಾವುದೋ ರಿಯಲ್‌ ಎಸ್ಟೇಟ್‌ ಉದ್ಯಮಿಯ ಆಸ್ತಿಯಲ್ಲ. ಬದಲಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಓಳಗಾಗಿರುವ ಓರ್ವ ಲೇಡಿ ಕಾನ್‌ಸ್ಟೇಬಲ್‌ಗೆ (constable) ಸೇರಿದ ಆಸ್ತಿಯಾಗಿದೆ.

    ಕಳೆದ ಏಪ್ರಿಲ್‌ನಲ್ಲಿ ಮಾದಕ ದ್ರವ್ಯ ಹೊಂದಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಅಮನ್‌ದೀಪ್‌ ಕೌರ್‌ (Amandeep Kaur ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಗೆ ಆರೋಪದ ಮೇಲೆ ಪಂಜಾಬ್‌ ವಿಜಿಲೆನ್ಸ್‌ ಬ್ಯೂರೋ ಅವರನ್ನು ಸೋಮವಾರ ಬಂಧಿಸಿದೆ. ನಂತರ ಬಟಿಂಡಾ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.

    ಕಳೆದ ಏಪ್ರಿಲ್‌ನಲ್ಲಿ 17.71 ಗ್ರಾಂ ಹೆರಾಯಿನ್‌ ಸಾಗಿಸಿದ್ದಕ್ಕಾಗಿ ಕೌರ್‌ ಅವರನ್ನ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಂಧಿಸಿತ್ತು. ಬಳಿಕ ಅವರನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಆದ್ರೆ ಇದೇ ಮೇ 2ರಂದು ಬಟಿಂಡಾದ ನ್ಯಾಯಾಲಯವು ಕೌರ್‌ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

    ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿರುವ ಪಂಜಾಬ್‌ ವಿಜಿಲೆನ್ಸ್‌ (Punjab Vigilance Bureau) ಕೌರ್‌ಗೆ ಸೇರಿದ 1.35 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 2 ಫ್ಲಾಟ್‌ಗಳು, 1 ಮಹೀಂದ್ರಾ ಥಾರ್‌, 1 ರೋಲೆಕ್ಸ್‌ ವಾಚ್‌, ಮೂರು ಐಫೋನ್‌ಗಳೂ ಸೇರಿವೆ.

    ವಶಪಡಿಸಿಕೊಂಡ ಆಸ್ತಿಗಳು ಎಷ್ಟಿವೆ?
    * ವಿರಾಟ್ ಗ್ರೀನ್, ಬಟಿಂಡಾದಲ್ಲಿರುವ ಭೂಮಿ (217 ಚದರ ಗಜಗಳು): 99,00,000 ರೂ. ಮೌಲ್ಯ
    * ಡ್ರೀಮ್ ಸಿಟಿ, ಬಟಿಂಡಾದಲ್ಲಿರುವ ಭೂಮಿ (120.83 ಚದರ ಗಜಗಳು): ರೂ 18,12,000
    * ಥಾರ್ ಕಾರ್: ರೂ 14,00,000
    * ರಾಯಲ್ ಎನ್‌ಫೀಲ್ಡ್ ಬುಲೆಟ್: ರೂ 1,70,000
    * ಐಫೋನ್ 13 ಪ್ರೊ ಮ್ಯಾಕ್ಸ್: ರೂ 45,000
    * ಐಫೋನ್ ಎಸ್‌ಇ: ರೂ 9,000
    * ವಿವೋ ಫೋನ್: ರೂ 2,000
    * ಬ್ಯಾಂಕ್ ಬ್ಯಾಲೆನ್ಸ್ (ಎಸ್‌ಬಿಐ): ರೂ 1,01,588.53
    * ರೋಲೆಕ್ಸ್ ವಾಚ್: ಬೆಲೆ ತಿಳಿದಿಲ್ಲ

    ಅಮನ್‌ದೀಪ್ ಕೌರ್ 2018 ಮತ್ತು 2024ರ ನಡುವೆ ಒಟ್ಟು 1.08,37,550 ರೂ. ಆದಾಯ ಹೊಂದಿದ್ದರು. ಆದರೆ ಅವರ ಖರ್ಚು 1,39,64,802.97 ರೂ.ಗಳಾಗಿತ್ತು. ಇದು ಅವರ ಆದಾಯ ಮೂಲಕ್ಕಿಂತ 31,27,252.97 ರೂ. ಹೆಚ್ಚಾಗಿತ್ತು. ಈ ಹಿನ್ನೆಲೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗಿತ್ತು.

  • ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

    ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

    ಬಳ್ಳಾರಿ: ರಸ್ತೆಯ ಮಧ್ಯೆಯೇ ಇದ್ದಕ್ಕಿದ್ದಂತೆ ಮಹೀಂದ್ರಾ ಕಂಪನಿಯ ಥಾರ್‌ ಜೀಪ್‌ (Mahindra Thar) ಹೊತ್ತಿ ಉರಿದ ಘಟನೆ ಸಂಡೂರು (Sanduru) ತಾಲೂಕಿನ ಜೈಸಿಂಗ್‌ಪುರ ಬಳಿ ನಡೆದಿದೆ.

    ತಾಳೂರು ಗ್ರಾಮದಿಂದ ಸಂಡೂರು ಕಡೆ ಪ್ರಯಾಣಿಸುತ್ತಿದ್ದಾಗ ಜೀಪ್‌ ಇದ್ದಕ್ಕಿದ್ದಂತೆ ಆಫ್ ಅಗಿದೆ. ಚಾಲಕ ಪ್ರಯತ್ನ ಪಟ್ಟರೂ ಸ್ಟಾರ್ಟ್‌ ಆಗಿರಲಿಲ್ಲ. ಈ ವೇಳೆ ಸುಟ್ಟ ವಾಸನೆ ಬರಲಾರಂಭಿಸಿದೆ. ಇದನ್ನೂ ಓದಿ: ಸದ್ದಿಲ್ಲದೇ ಕೊಡಗಿನ 21 ಸರ್ಕಾರಿ ಶಾಲೆಗಳಿಗೆ ಬೀಗ!

    ವಾಸನೆ ಬರುತ್ತಿದ್ದಂತೆ ಚಾಲಕ ಥಾರ್‌ನಿಂದ ಹೊರಗೆ ಇಳಿದಿದ್ದಾನೆ. ಕ್ಷಣ ಮಾತ್ರದಲ್ಲಿ ಥಾರ್‌ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಥಾರ್‌ ಹೊತ್ತಿ ಉರಿಯಲು ನಿಖರ ಕಾರಣ ತಿಳಿದು ಬಂದಿಲ್ಲ. ಕೆಲವೊಮ್ಮೆ ಕಂಪನಿ ನೀಡಿದ ಬಳಿಕವೂ ಗ್ರಾಹಕರು ತಮಗೆ ಬೇಕಾದಂತೆ ವಾಹನಗಳನ್ನು ವಿನ್ಯಾಸ ಮಾಡುತ್ತಾರೆ. ಈ ರೀತಿ ಕಸ್ಟಮೈಸ್ಡ್‌ ಮಾಡಿದ ನಂತರ ವಾಹನಗಳು ಬೆಂಕಿ ತುತ್ತಾಗಿರುವ ಹಲವಾರು ಘಟನೆಗಳು ನಡೆದಿವೆ.

     

  • ಹೊಸ ಥಾರ್ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ದಾಟಿದ ಬುಕ್ಕಿಂಗ್

    ಹೊಸ ಥಾರ್ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ದಾಟಿದ ಬುಕ್ಕಿಂಗ್

    ನವದೆಹಲಿ: ‘ಹೊಸ ಥಾರ್’ ಬಿಡುಗಡೆಯಾದ ಆರು ತಿಂಗಳೊಳಗೆ 50 ಸಾವಿರ ಬುಕ್ಕಿಂಗ್ ದಾಟಿದೆ ಎಂದು ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ತಿಳಿಸಿದೆ.

    ಥಾರ್‍ನ ಬೇಡಿಕೆಯನ್ನು ಪೂರೈಸಲು ಮತ್ತು ಗ್ರಾಹಕರಿಗೆ ಕಾಯುವಿಕೆ ಅವಧಿಯನ್ನು ಕಡಿಮೆ ಮಾಡಲು ಕಂಪನಿಯು ನಾಸಿಕ್‍ನಲ್ಲಿರುವ ತನ್ನ ಘಟಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.

    2.2-ಲೀಟರ್ ಎಂ-ಹಾಕ್ ಡೀಸೆಲ್ ಎಂಜಿನ್ ಮತ್ತು 2.0-ಲೀಟರ್ ಎಂ-ಸ್ಟಾಲಿಯನ್ ಪೆಟ್ರೋಲ್ ಎಂಜಿನ್‍ನಲ್ಲಿ ಹೊಸ ಥಾರ್ ಲಭ್ಯವಿದೆ. ಎರಡು ಎಂಜಿನ್ ಮಾದರಿಗಳಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಆಯ್ಕೆಗಳನ್ನು ನೀಡಲಾಗಿದೆ.

    ಮಹೀಂದ್ರ ಥಾರ್ ಸುರಕ್ಷತೆಯಲ್ಲಿ ಗ್ಲೋಬಲ್ ಎನ್‍ಕ್ಯಾಪ್ ಟೆಸ್ಟ್‌ನಲ್ಲಿ 4 ಸ್ಟಾರ್ ರೇಟಿಂಗ್ ಪಡೆದಿದೆ. ಥಾರ್ ಪೆಟ್ರೋಲ್ ಅವತರಣಿಕೆ ರೂ 12.10 – 13.95 ಲಕ್ಷದವರೆಗೆ ಇದ್ದರೆ, ಡೀಸೆಲ್ ಅವತರಣಿಕೆ ರೂ 12.30 – 14.15 ಲಕ್ಷದವರೆಗೆ(ಎಕ್ಸ್-ಶೋರೂಂ) ಇದೆ.