Tag: mahesh kumutalli

  • `ಲೇಡಿ ಟೈಗರ್’ ಅಬ್ಬರದ ಹಿಂದಿದೆ ಟಾರ್ಗೆಟ್- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಲಕ್ಷ್ಮಿ ಪ್ಲಾನ್

    `ಲೇಡಿ ಟೈಗರ್’ ಅಬ್ಬರದ ಹಿಂದಿದೆ ಟಾರ್ಗೆಟ್- ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಲಕ್ಷ್ಮಿ ಪ್ಲಾನ್

    ವಿಜಯಪುರ: ಅಥಣಿ ಚುನಾವಣಾ ಕಹಳೆ ಬಹಳ ಜೋರಾಗಿಯೇ ಮೊಳಗಿದೆ. ಬಿಜೆಪಿಯ ಮಹೇಶ್ ಕುಮಟಳ್ಳಿ ವಿರುದ್ಧ ಲಕ್ಷ್ಮಿ ಅವಕೃಪೆ ತೋರಿದ್ದು, ಕುಮಟಳ್ಳಿಯನ್ನು ಸೋಲಿಸಿಯೇ ತೀರುತ್ತೇನೆಂದು ಶಪಥ ಮಾಡಿದ್ದಾರೆ.

    ಹೆಚ್‍ಡಿಕೆ ನೇತೃತ್ವದ ಸಮ್ಮಿಶ್ರ ಸರ್ಕಾರ ಯಾರಿಂದ ಉರುಳಿತು. ಯಾರಿಗಾಗಿ ಉರುಳಿತು ಅನ್ನೋದು ಇಡೀ ರಾಜ್ಯಕ್ಕೆ ಗೊತ್ತಿದೆ. ಬೆಳಗಾವಿ ರಾಜಕೀಯದ ಕಿಡಿಯಿಂದ ಸಮ್ಮಿಶ್ರ ಸರ್ಕಾರದ ಬುಡಕ್ಕೆ ಬೆಂಕಿ ಬಿತ್ತು. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಗುದ್ದಾಟ ಸಮ್ಮಿಶ್ರ ಸರ್ಕಾರವನ್ನೇ ಬಲಿ ಪಡೀತು.

    ಇದೇ ಕಾರಣಕ್ಕೆ ಉಪಚುನಾವಣೆಯಲ್ಲಿ ಗೋಕಾಕ್ ಉಸ್ತುವಾರಿ ಪಡೆದುಕೊಂಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಸೆಡ್ಡು ಹೊಡೆದಿದ್ದರು. ಆದರೆ ಇದು ಬಹಳ ದಿನ ನಡೆಯಲಿಲ್ಲ. ನಾಮಪತ್ರ ಸಲ್ಲಿಸುವಷ್ಟರಲ್ಲೇ ಲಕ್ಷ್ಮಿಯನ್ನ ಗೋಕಾಕ್‍ನಿಂದ ಅಥಣಿಗೆ ಶಿಫ್ಟ್ ಮಾಡಲಾಯ್ತು. ಅದಕ್ಕೆ ಏನೋ, ಲಕ್ಷ್ಮೀ ಅಥಣಿಯಲ್ಲಿ ಪ್ರಚಾರಕ್ಕೆ ಬಂದಾಗ ಬೆಳಗಾವಿ ರಾಜಕೀಯನೇ ಬೇರೆ ಅಂತ ಅಸಮಾಧಾನ ಹೊರ ಹಾಕಿದ್ದರು.

    ಅಥಣಿಗೆ ಸ್ಟಾರ್ ಪ್ರಚಾರಕಿಯಾಗಿ ಬಂದ ಲಕ್ಷ್ಮಿ ಸುಮ್ಮನಾಗಿಲ್ಲ. ಜಾರಕಿಹೊಳಿ ಮೇಲಿರುವ ಸಿಟ್ಟನ್ನು ಅಥಣಿ ಮುಖಾಂತರ ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಕುಮಟಳ್ಳಿ ಹೇಳಿ ಕೇಳಿ ರಮೇಶ್ ಜಾರಕಿಹೊಳಿ ಬಂಟ. ರಮೇಶ್ ಜಾರಕಿಹೊಳಿಗೆ ತಮ್ಮ ಗೆಲುವು ಎಷ್ಟು ಪ್ರಮುಖವೋ, ಅಷ್ಟೇ ಕುಮಟಳ್ಳಿ ಗೆಲುವು ಕೂಡ ಪ್ರಮುಖವಾಗಿದೆ. ಅದಕ್ಕೆ ಬಿಜೆಪಿ ಅಭ್ಯರ್ಥಿ ಕುಮಟಳ್ಳಿಯನ್ನ ಶತಾಯಗತಾಯ ಸೋಲಿಸಲೇಬೇಕು ಅಂತ ಶಪಥ ಮಾಡಿ ಬಿರುಸಿನ ಪ್ರಚಾರ ನಡೆಸ್ತಿದ್ದಾರೆ.

    ಒಟ್ಟಿನಲ್ಲಿ ಲಕ್ಷ್ಮಿ ಒಂದೇ ಏಟಿನಲ್ಲಿ ರಮೇಶ್ ಮತ್ತು ಮಹೇಶ್‍ರನ್ನು ಸೋಲಿಸೋ ಮೂಲಕ ಎರಡು ಹಕ್ಕಿಯನ್ನ ಹೊಡೆಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಎಂಬುದನ್ನು ಕಾದು ನೋಡಬೇಕಾಗಿದೆ.

  • ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ಅಥಣಿ ಬೇಗುದಿ ಇಂದಾದ್ರೂ ಶಮನವಾಗುತ್ತಾ?- ಕುಮಟಳ್ಳಿ ಪರ ಪ್ರಚಾರಕ್ಕಿಳಿದ ಬಿಎಸ್‍ವೈ

    ವಿಜಯಪುರ: ಅಥಣಿ ರಣಕಣದಲ್ಲಿ ಮೇಲ್ನೋಟಕ್ಕೆ ಬಂಡಾಯದ ಬೇಗುದಿ ಮುಗಿದಿದ್ರೂ ಒಳಗೊಳಗೆ ಕುದಿಯುತ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಬೇಗುದಿ ಜಾಸ್ತಿ ಆಗುತ್ತಿದೆ. ಇದರ ಬೆನ್ನಲ್ಲೇ ಇಂದು ಬಿಎಸ್‍ವೈ ಅಥಣಿಗೆ ಆಗಮಿಸುತ್ತಿದ್ದಾರೆ.

    ಅಥಣಿಯಲ್ಲಿ ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ಘೋಷಣೆ ಆಗುತ್ತಿದ್ದಂತೆ ಎದ್ದಿರೋ ಬಂಡಾಯ ಇನ್ನೂ ತಣ್ಣಗಾಗಲಿಲ್ಲ. ಬಿಜೆಪಿ ಮುಖಂಡರು ಅಸಮಾಧಾನ, ಬಂಡಾಯ ಶಮನಕ್ಕೆ ಪ್ರಯತ್ನಿಸಿದ್ರೂ ಏನೂ ವರ್ಕೌಟ್ ಆಗಿದ್ದಂತೆ ಕಾಣುತ್ತಿಲ್ಲ. ಟಿಕೆಟ್ ಕೈ ತಪ್ಪಿರೋ ಸವದಿಗೆ ಅಸಮಾಧಾನ ಮೇಲ್ನೋಟಕ್ಕೆ ತೋರಿಸದೇ ಇದ್ದರೂ ಒಳಗೊಳಗೆ ಇನ್ನು ಜ್ವಾಲೆಯಂತೆ ಉರಿಯುತ್ತಲೆ ಇದೆ.

    ಅಥಣಿಯಲ್ಲಿ ಒಳಬೇಗುದಿ ಇನ್ನೂ ಮುಂದುವರಿದಿದ್ದು ಅದಕ್ಕಾಗಿಯೇ ಸವದಿ ಆಪ್ತರು, ಬೆಂಬಲಿಗರು ಒಂದಿಲ್ಲೊಂದು ಕ್ಯಾತೆ, ಬಂಡಾಯವನ್ನ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಾಗಾಗಿ ಸಿಎಂಗೆ ಅಥಣಿ, ಕಾಗವಾಡ, ಗೋಕಾಕೇ ದೊಡ್ಡ ಸವಾಲಾಗಿತ್ತು. ಈಗ ಸ್ವತಃ ಸಿಎಂ ಯಡಿಯೂರಪ್ಪನವರೇ ಅಖಾಡಕ್ಕೆ ಇಳಿಯುತ್ತಿದ್ದು ಇಂದಿನಿಂದ ಅಥಣಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಸಿಎಂ ಬಿಎಸ್‍ವೈ ಬಿಜೆಪಿ ಕಾರ್ಯಕರ್ತರ ಸಭೆ ಕೂಡ ನಡೆಸಲಿದ್ದಾರೆ.

    ಕುಮಟಳ್ಳಿಗೆ ಟಿಕೆಟ್ ಘೋಷಣೆ ಆದ ಮೇಲೆ ಇದೇ ಮೊದಲ ಬಾರಿಗೆ ಅಥಣಿಗೆ ಸಿಎಂ ಆಗಮಿಸುತ್ತಿದ್ದಾರೆ. ಈ ವೇಳೆ ಬಿಎಸ್‍ವೈ ಮುಂದೆ ಮತ್ತೆ ಸವದಿ ಬೆಂಬಲಿಗರು ಅಸಮಾಧಾನ ಹೊರಹಾಕೋ ಸಾಧ್ಯತೆ ಇದೆ. ಒಂದೆಡೆ ಸಿಎಂ ಬಿಎಸ್‍ವೈ ಸ್ವಾಗತಕ್ಕೆ ಮಹೇಶ್ ಕುಮಟಳ್ಳಿ ಹಾಗೂ ಟೀಮ್ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಎಸ್‍ವೈಗೆ ಬಿಸಿ ತಟ್ಟಿಸಲು ಸವದಿ ಅಭಿಮಾನಿಗಳು ರೆಡಿ ಆಗಿರೋ ಮಾತುಗಳು ಕೇಳಿಬರುತ್ತಿದೆ.

    ಇದರ ನಡುವೆ ತನಗೆ ಯಾವುದೇ ಅಸಮಾಧಾನ ಇಲ್ಲ. ಆದರೆ ಕಾರ್ಯಕರ್ತರಲ್ಲಿ ಸ್ವಲ್ಪ ಗೊಂದಲ ಇದೆ. ಅದನ್ನು ಸರಿ ಪಡಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಹೋಗುತ್ತಿದ್ದೇವೆ ಅಂತ ಸವದಿ ಹೇಳಿದ್ದಾರೆ.

    ಒಟ್ಟಿನಲ್ಲಿ ಇಂದು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯೋ ಬಿಜೆಪಿ ಸಭೆ ಎಲ್ಲರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಅಲ್ಲದೆ ಈ ಎಲ್ಲಾ ಅಸಮಾಧಾನಗಳಿಗೆ ಸಿಎಂ ಹೇಗೆ ಇತಿಶ್ರೀ ಹಾಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.

  • ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ

    ಸವದಿ ನಿಂದನೆಗೆ ಕಣ್ಣೀರಿಟ್ಟ ಅನರ್ಹ ಶಾಸಕ ಕುಮುಟಳ್ಳಿ

    ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯವರು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಬಂಧ ಅಥಣಿ ಅನರ್ಹ ಶಾಸಕ ಮಹೇಶ್ ಕುಮುಟಳ್ಳಿ ಕಣ್ಣೀರು ಹಾಕಿದ್ದಾರೆ.

    ಡಿಸಿಎಂ ಹೇಳಿಕೆ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಕುಮುಟಳ್ಳಿ, ನನಗೆ ಯಾರೇ ವಿಷ ನೀಡಿದರೂ ಅಮೃತ ಆಗಲಿ. ಅವರು ಹಾಗೆ ಮಾತನಾಡಬಾರದಿತ್ತು, ಆದರೆ ಮಾತನಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರ ತಡವಾಗಿ ನನ್ನ ಗಮನಕ್ಕೆ ಬಂದಿದೆ. ಅವರು ಆ ರೀತಿ ಮಾತಾಡಬಾರದಾಗಿತ್ತು. ನನಗೆ ಯಾರೇ ವಿಷ ನೀಡಿದರೂ ಅದು ಅಮೃತವಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಅವರು ಯಾವ ಅರ್ಥದಲ್ಲಿ ಮಾತನಾಡಿದ್ದಾರೆ ಎಂದು ನನಗೆ ಅರ್ಥವಾಗಿಲ್ಲ. ಈಗಾಗಲೇ ವಿಡಿಯೋ ವೈರಲ್ ಆಗಿದೆ. ಹೀಗಾಗಿ ಈ ವಿಷಯವನ್ನ ಯಾರ ಗಮನಕ್ಕೂ ತರುವುದಿಲ್ಲ ಎಂದು ಹೇಳಿದ್ದಾರೆ.

    ಸವದಿ ಹೇಳಿದ್ದೇನು?:
    ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದರು. ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ತಮ್ಮ ಬೆಂಬಲಿಗನ ಜೊತೆ ಮೊಬೈಲ್‍ನಲ್ಲಿ ಮಾತನಾಡುತ್ತಾ, ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದು ಹೇಳುವ ಮೂಲಕ ನಿಂದಿಸಿದ್ದರು.

    ಸದ್ಯ ಸವದಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಬಿಎಸ್‍ವೈ ಅವರನ್ನು ಸಿಎಂ ಮಾಡಿದ್ದ ಅನರ್ಹ ಶಾಸಕನಿಗೆ ದರಿದ್ರ ಪಟ್ಟ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

  • ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಅನರ್ಹಗೊಂಡ ಶಾಸಕರು ಮತ್ತೆ ಎಲೆಕ್ಷನ್‍ಗೆ ನಿಲ್ಲುವಂತಿಲ್ಲ- ಸ್ಪೀಕರ್ ಸ್ಪಷ್ಟನೆ

    ಬೆಂಗಳೂರು: ಈಗಾಗಲೇ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್. ಶಂಕರ್ ಬೈ ಎಲೆಕ್ಷನ್ ಗೆ ನಿಲ್ಲುವಂತಿಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ಕಾಗಿ ತಿಳಿಸಿದ್ದಾರೆ.

    ತಮಿಳು ಸುದ್ದಿವಾಹಿನಿಯೊಂದರ ಜೊತೆಗೆ ಮಾತನಾಡಿದ ಸ್ಪೀಕರ್, ಈ ಮೂವರು ಶಾಸಕರು ವಿಧಾನಸಭೆ ಅವಧಿ ಮುಗಿಯೋವರೆಗೆ ಅಂದರೆ 2023ರ ಮೇ ತಿಂಗಳವರೆಗೆ ಉಪಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾಗಿ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂಬ ಚುನಾವಣಾ ಆಯೋಗದ ಅಭಿಪ್ರಾಯ ತಪ್ಪು ಎಂದು ಹೇಳಿದ್ದಾರೆ.

    ತಪ್ಪು ಮಾಡಿ ರಾಜೀನಾಮೆ ಕೊಟ್ಟು ಬಚಾವ್ ಆಗಲು ಸಾಧ್ಯವಿಲ್ಲ. ನೀವು ತಪ್ಪು ಮಾಡಿದ್ದೀರಿ. ನಾನು ರಾಜೀನಾಮೆ ಅಂಗೀಕರಿಸಲ್ಲ. ಪ್ರತಿಯೊಂದು ರಾಜೀನಾಮೆಯೂ ಬೇರೆ ಬೇರೆ ಪ್ರಕರಣವಾಗಿದೆ. ಹೀಗಾಗಿ ಪ್ರತಿಯೊಬ್ಬ ಶಾಸಕರ ರಾಜೀನಾಮೆ ಬಗ್ಗೆಯೂ ಅಧ್ಯಯನ ಮಾಡುತ್ತಿದ್ದೇನೆ. ಇನ್ನು ನಾಲ್ಕೈದು ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

    ಆದರೆ ಇದೀಗ ಅನರ್ಹಗೊಂಡ ಮೂವರು ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ ಹಾಗೂ ಆರ್ ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ಜಯ ಸಿಗುತ್ತದೆ ಎಂದು ಅತೃಪ್ತ ಶಾಸಕರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ವಿಶ್ವಾಸ ವ್ಯಕ್ತಪಡಿಸಿದ್ದರು. ಜೊತೆಗೆ ನಮ್ಮ ರಾಜೀನಾಮೆ ಅಂಗೀಕರಿಸದೆ, ನಮ್ಮನ್ನೂ ಅನರ್ಹಗೊಳಿಸಿದರೆ, ನಾವೂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದ್ದರು.

    ತಮಿಳುನಾಡಿನಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಲ್ಲಿ ಶಾಸಕರು ರಾಜೀನಾಮೆ ಕೊಟ್ಟ 6 ತಿಂಗಳೊಳಗೆ ಅಂದರೆ ಆ ಸಮಯದಲ್ಲಿ ವಿಧಾನಸಭಾ ಅವಧಿ ಕೂಡ ಮುಕ್ತಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅನರ್ಹಗೊಂಡವರು ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಇಲ್ಲಿ ಈ ವಿಧಾನಸಭೆ ಅವಧಿ ಮುಗಿಯಲು ಇನ್ನೂ 3 ವರ್ಷ 10 ತಿಂಗಳು ಇರುವುದರಿಂದ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಸ್ಪೀಕರ್ ಹೇಳುತ್ತಿದ್ದಾರೆ.