Tag: Mahesh Kumathalli

  • ವೀಡಿಯೋದಲ್ಲಿ ಜಾರಕಿಹೊಳಿ ಕತ್ತಲ್ಲಿದ್ದ ಮಚ್ಚೆ ಇಲ್ಲ: ಮಹೇಶ್ ಕುಮಟಳ್ಳಿ

    ವೀಡಿಯೋದಲ್ಲಿ ಜಾರಕಿಹೊಳಿ ಕತ್ತಲ್ಲಿದ್ದ ಮಚ್ಚೆ ಇಲ್ಲ: ಮಹೇಶ್ ಕುಮಟಳ್ಳಿ

    ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋದಲ್ಲಿ ರಮೇಶ್ ಜಾರಕಿಹೊಳಿ ಕತ್ತಿನಲ್ಲಿರುವ ಮಚ್ಚೆ ಕಾಣಿಸುತ್ತಿಲ್ಲ. ಅವರ ಕತ್ತಿನಲ್ಲೊಂದು ಮಚ್ಚೆ ಇದೆ ಎಂಬುದಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿಕೆ ನೀಡಿದ್ದಾರೆ.

    ಸದಾಶಿವನಗರದಲ್ಲಿರುವ ಜಾರಕಿಹೊಳಿಯವರ ಭಾಗ್ಯಲಕ್ಷೀ ನಿವಾಸಕ್ಕೆ ಆಗಮಿಸಿದ ಮಹೇಶ್ ಕುಮಟಳ್ಳಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ಘಟನೆ ನೋಡಿದಾಗ ನಮಗೂ ಆಶ್ಚರ್ಯವಾಯಿತು. ಜಾರಕಿಹೊಳಿ ಒಬ್ಬ ದೈವ ಭಕ್ತರು. ಇವರಿಗೆ ಏನಾಗಿದೆ ಇದು ನಿಜವೇ ಅಥವಾ ಸುಳ್ಳಾ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಜಾರಕಿಹೊಳಿಯವರು ಇದು ಫೇಕ್ ವಿಡಿಯೋ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. ಆದರೂ ಆ ವಿಡಿಯೋವನ್ನು ಗಮನಿಸಿದಾಗ ಪೂರ್ವನಿಯೋಜಿತ ಕೃತ್ಯದಂತೆ ಕಂಡುಬರುತ್ತಿದೆ ಎಂದರು.

    ದೃಶ್ಯಗಳನ್ನು ಗಮನಿಸಿದರೆ ಇದೂ ಪೂರ್ವನಿಯೋಜಿತ ಕೃತ್ಯವಾಗಿ ಗೋಚರಿಸುತ್ತಿದೆ. ಮತ್ತೆ ಈ ದೃಶ್ಯವನ್ನು ಯಾರು ಚಿತ್ರಿಸಿದ್ದಾರೆ ಎಂದು ತನಿಖೆಯಾಗಬೇಕು. ಅ ವಿಡಿಯೋವನ್ನು ಗಮನಿಸಿದಾಗ ಅದು ಎಡಿಟ್ ಆಗಿರುವಂತೆ ಕಂಡು ಬರುತ್ತಿದೆ. ಇದರಿಂದ ನಮಗೆ ಮತ್ತು ಅವರ ಕುಟುಂಬದವರಿಗೆ ನೋವಾಗಿದೆ ಈ ನೋವಿಗೆ ಯಾರು ಬೆಲೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ದಾರೆ.

  • ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಬಿಜೆಪಿ ಒಳ ಜಗಳ ಬಹಿರಂಗ

    ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಬಿಜೆಪಿ ಒಳ ಜಗಳ ಬಹಿರಂಗ

    ಚಿಕ್ಕೋಡಿ: ಇಷ್ಟು ದಿನ ಒಳಗೊಳಗೇ ನಡೆಯುತ್ತಿದ್ದ ಬಿಜೆಪಿ ನಾಯಕರ ಒಳ ಜಗಳ ಈಗ ಬೀದಿಗೆ ಬಿದ್ದಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಮುಂದೆಯೇ ಜಗಳವಾಡಿಕೊಂಡಿದ್ದಾರೆ.

    ಚಿಕ್ಕೋಡಿ ಪಟ್ಟಣದ ಕೇಶವ ಸಭಾ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಡಿಸಿಎಂ ಲಕ್ಷ್ಮಣ ಸವದಿ ಅವರ ಜೊತೆ ನಮಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮುಂದೆಯೇ ಅಳಲು ತೋಡಿಕೊಂಡಿದ್ದಾರೆ.

    ಕುಮಟಳ್ಳಿ ಅವರು ಈ ರೀತಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದು, ಡಿಸಿಎಂ ಸವದಿ ಹಾಗೂ ನನ್ನ ನಡುವೆ ಹೊಂದಾಣಿಕೆ ಆಗದೆ ಇದ್ದರೂ ಅನಿವಾರ್ಯವಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಪಕ್ಷದ ವರಿಷ್ಠರು ಹೇಳಿದ ಎಲ್ಲ ಕಾರ್ಯಗಳನ್ನು ತಪ್ಪದೇ ಮಾಡುತ್ತೇನೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಆಪರೇಷನ್ ಕಮಲದ ದಿನಗಳನ್ನು ವೇದಿಕೆ ಮೇಲೆ ನೆನೆದ ಮಹೇಶ್ ಕುಮಟಳ್ಳಿ, ಆ ದಿನಗಳನ್ನು ನೆನೆಸಿಕೊಂಡರೆ ಅದೇನು ಜಾಣರು ಮಾಡುವ ಕೆಲಸವಲ್ಲ ಎಂದು ಅನ್ನಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲರನ್ನು ಅಧ್ಯಕ್ಷರೇ ಎಂದು ಕೂಗಿ ಹಳೆ ನೆನಪು ಮೆಲುಕು ಹಾಕಿದರು. ಕಾಂಗ್ರೆಸ್ ಬಿಟ್ಟು ಹೊರಗೆ ಬಂದಿರಿ ಆದರೆ ಮುಂದೆ ಏನು ಎಂದು ಜನ ಕೇಳಿದರು ಆಗ ನಾನೂ ಮುಂದೆ ಹೇಗೋ ಎನೋ ಎಂದು ಹೆದರಿದ್ದೆ. ನಂತರ ಬಿಜೆಪಿ ಸೇರಲು ನಿರ್ಧರಿಸಿದೆ. 30 ವರ್ಷ ಕಾಂಗ್ರೆಸ್ ನಲ್ಲಿ ಕೆಲಸ ಮಾಡಿದ್ದೆ, ಆದರೆ ಈಗ ಹೇಳುತ್ತಿದ್ದೇನೆ ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ ಎಂದು ಕುಮಟಳ್ಳಿ ತಮ್ಮ ಭಾಷಣದಲ್ಲಿ ಹೇಳಿದರು.

  • ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

    ಕುಮಟಳ್ಳಿ ‘ಬಾರಾ ಉಗ್ರ ಹೋರಾಟ ಉಂಟು’ ಅಂದ ಸಾಹುಕಾರ ಕೊನೆಗೆ ಸೈಲೆಂಟು..!

    ಪವಿತ್ರ ಕಡ್ತಲ
    ಸ್ಟ್ ರ‌್ಯಾಂಕ್ ಬಂದ್ರೆ ಸೈಕ್ಲು ಕೊಡಿಸ್ತೀನಿ ಅಂತಾ ಪ್ರಾಮಿಸ್ ಮಾಡಿದ ಅಪ್ಪ ಉಳಿದ ಫಸ್ಟ್ ರ‌್ಯಾಂಕ್ ಮಕ್ಕಳಿಗೆ ಮಾತ್ರ ಕೊಡ್ಸಿ ಒಬ್ಬ ಮಗನಿಗೆ ಫಸ್ಟ್ ರ‌್ಯಾಂಕ್  ಬಂದಿದ್ರೂ ಕೊಡಿಸದೇ ಹೋದ್ರೇ ಹೆಂಗಾಗುತ್ತೆ ಹೇಳಿ..! ಮಹೇಶ್ ಕುಮಟಳ್ಳಿ ಕಥೆನೂ ಥೇಟು ಹಂಗೇ ಆಯ್ತು..! ಅತ್ತರೂ, ಗೋಗರೆದ್ರೂ, ಮುನಿಸಿಕೊಂಡ್ರೂ ಕೊನೆಗೆ ಬಿಜೆಪಿಗೆ ಶಾಲಿನಲ್ಲಿ ಕಲ್ಲು ಸುತ್ತಿ ಹೊಡೆದ್ರೂ ಕುಮಟಳ್ಳಿ ಮೇಲೆ ರಾಜಾಹುಲಿ ಕರುಣೆ ತೋರಲೇ ಇಲ್ಲ.

    ಅತ್ತ ಮಿತ್ರಮಂಡಳಿಯ ಟೀಂ ನಾಯಕ ಸಾಹುಕಾರ್, “ಕೊಡ್ರೀ ಕೊಡ್ರಿ ಕುಮಟಳ್ಳಿ ಒಬ್ಬರು ಜಾಸ್ತಿ ಆಗ್ತಾರೇನ್ರಿ” ಅಂತಾ ಅರ್ಥವಾಗದ ಧ್ವನಿಯಲ್ಲಿ ಗುಟುರು ಹಾಕಿದ್ರೂ ನೋ ನೋ ಅಂತಾ ರಾಜಹುಲಿ ಹೈಕಮಾಂಡ್ ಹತ್ರ ಬೊಟ್ಟು ಮಾಡಿದ್ರು. ಇದ್ರಿಂದ ಕುಮಟಳ್ಳಿಗಿಂತ ಕೊಂಚ ಸಾಹುಕಾರ ರಮೇಶ್ ಜಾರಕಿಹೊಳಿ ಹೆಚ್ಚೇ ಮುನಿಸಿಕೊಂಡಂತೆ ಕಾಣುತ್ತಿದ್ರು. ಇದಪ್ಪ ತ್ಯಾಗ, ಎಲ್ಲರೂ ಅವ್ರವ್ರ ಪ್ರಮಾಣ ವಚನ ಸಂಭ್ರಮದಲ್ಲಿ ಖುಷಿ ಪಟ್ರೇ ಸಾಹುಕಾರ್ ಮಾತ್ರ ಬುಸುಗುಡುತ್ತಾ ಇದ್ದಿದ್ದು ನೋಡಿ `ನನಗಾಗಿ ಮಿಡಿದ ಮನ’ ಅಂತಾ ಕುಮಟಳ್ಳಿ ಕೊಂಚ ರಿಲ್ಯಾಕ್ಸ್ ಆಗಿದ್ರಂತೆ.

    ಕುಮಟಳ್ಳಿಗೆ `ಬಾರಾ ಉಗ್ರ ಹೋರಾಟ ಮಾಡುವ, ಸಂಜೆ ಸರ್ಕಾರ ಉರುಳಿಸುವ’ ಅಂತಾ ಸರ್ಕಾರ ಉರುಳಿಸೋದ್ರಲ್ಲಿ ಹಳೆ ಅನುಭವ ಇದ್ದ ರಮೇಶ್, ನಡುರಾತ್ರಿ ಕುಮಟಳ್ಳಿ ಹೆಗ್ಲ ಮೇಲೆ ಕೈಹಾಕಿ ಭರವಸೆ ಕೊಟ್ಟಿದ್ರಂತೆ. ಆದ್ರೆ ಯಾವಾಗ ಖಾತೆ ಹಂಚಿಕೆ ಆಯ್ತೋ ಆಗ ಸಾಹುಕಾರ ಗುಟುರು ಕಡಿಮೆಯಾಗಿದೆ. ಹೋಗ್ಲಿ ಬಿಡ್ ನಮ್ಮೋರೆ ಎಲ್ಲಾ ಅಂತಾ ಕುಮಟಳ್ಳಿಗೆ ಹೇಳಿ ಫೋನ್ ಇಟ್ರಂತೆ.

    ಆಗ ಕುಮಟಳ್ಳಿಗೆ ಗೊತ್ತಾಗಿದ್ದು ಓಹೋ ಸಾಹುಕಾರನಿಗೆ ನಂಗೆ ಮಿನಿಸ್ಟ್ರುಗಿರಿ ಸಿಗದೇ ಇದ್ದಿದ್ದಕ್ಕೆ ಸಿಟ್ಟಿದ್ದಿದ್ದು ಅಲ್ಲಾ, ಅವರಿಷ್ಟದ ಖಾತೆಗೆ ಪಟ್ಟು ಹಿಡಿದು ಇನ್ನೇನು ಸಿಗಲ್ಲ ಅಂತಾ ಮುನಿಸು ತೋರಿಸಿದ್ರು. ಯಾವಾಗ ಡಿಕೆಶಿ ಖಾತೆ ಸಾಹುಕಾರಗೆ ಸಿಕ್ತು ರಮೇಶ್ ಮುಖ ಲಕ ಲಕ ಅಂತಿದೆ ಅಂತಾ ಕುಮಟಹಳ್ಳಿಗೆ ಅರ್ಥವಾಗಿದೆಯಂತೆ. ಯಾರಿಗೇಳೋಣ ನಮ್ ಪ್ರಾಬ್ಲುಂ ಅಂತಾ ಅವತ್ತು ಕೈ ಕೈ ಹಿಡಿದು ಜೊತೆಗೆ ಉಂಡು ತಿಂದು ಈಗ ಹಿಂಗೆ ನಡುನೀರಲ್ಲಿ ಕೈಕೊಟ್ರಲ್ಲಪ್ಪ ಅಂತಾ ಕುಮಟಳ್ಳಿ ಮಗುವಿನಂತೆ ಅತ್ತುಬಿಟ್ರಂತೆ. ನಿಮ್ಮ ಜೊತೆ ನಾನಿದ್ದೀನಿ ಅಂತಾ ಸೈನಿಕ, ಗೂಳಿ ಎಲ್ಲಾ ಕುಮಟಳ್ಳಿಗೆ ಕರ್ಚೀಫ್ ಕೊಟ್ರಂತೆ.

    ಲಾಸ್ಟ್ ಕಿಕ್- ಮಿತ್ರಮಂಡಳಿಯಲ್ಲಿರೋರು ಯಾವಾಗ ಬೇಕಾದ್ರೂ ಮಿತ್ರರೂ ಆಗಬಹುದು, ಶತ್ರುಗಳಾಗಬಹುದು ಸಿದ್ದಣ್ಣ ಅಂತಾ ಕುಮಟಳ್ಳಿ ಕಮಲ ಹೂವನ್ನು ದೇವರಿಗಿಟ್ಟು ಗೋವಿಂದ ಗೋವಿಂದ ಅಂದ್ರಂತೆ.

    ಕೊರೋನಾ ಟೆನ್ಶನ್ ಬಿಟ್ಹಾಕಿ…! ನಿಂಬೆಹಣ್ಣು ಇಟ್ಕಳ್ಳಿ..! ಏಲಕ್ಕಿ ಹಾರನೂ ಇರಲಿ..!
    `ಸರ್ವರೋಗಕ್ಕೂ ಸಾರಾಯಿ ಮದ್ದು’ ಅನ್ನೋ ತರ ನಮ್ ಹಾಸನದ ರೇವಣ್ಣೋರಿಗೆ ಎಲ್ಲಾ ಸಮಸ್ಯೆಗೂ ನಿಂಬೆಹಣ್ಣಿನಲ್ಲಿದೆ ಪರಿಹಾರ ಅನ್ನೋ ಗಟ್ಟಿ ನಂಬಿಕೆ. ಈಗ ಚೀನಾ ಕೊರೋನಾ ಭೀತಿಯಿಂದ ನಡುಗಿಹೋಗಿದೆ. ಭಾರತಕ್ಕೂ ಆತಂಕ ಇದೆ. ಈ ಮಧ್ಯೆ ರೇವಣ್ಣ ಕೊರೋನಾ ಕಾಯಿಲೆಗೆ ಔಷಧಿ ಕಂಡು ಹುಡುಕಿದ್ದಾರಂತೆ.

    ಎರಡು ನಿಂಬೆಹಣ್ಣನ್ನು ಮೂಗಿನ ಹೊಳ್ಳೆಗೆ ಇಟ್ಕೊಂಡು ಆಗಾಗ ಮೂಸಿ ನೋಡಿದ್ರೆ ಸಾಕು, ಮಾಸ್ಕ್ ಗೀಸ್ಕ್ ಎಲ್ಲಾ ಹಾಕೋದೇ ಬೇಡ ನಿಂಬೆಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಐತೆ ಅಂತಾ ಹಾಸನದ ಮಂದಿಗೆಲ್ಲ ಟಾಂ ಟಾಂ ಮಾಡಿದ್ದಾರಂತೆ. ಅಲ್ಲದೇ ಚೀನಾಕ್ಕೆ ನಾನೇ ಚಪ್ಪಲಿ ಇಲ್ದ ಕಾಲಲ್ಲಿ ಹೋಗ್ ಬರ್ತೀನಿ. ಎಲ್ಡು ನಿಂಬೆಹಣ್ಣು, ಚಂದಗೆ ಪೋಣಿಸಿದ ಏಲಕ್ಕಿ ಹಾರ ಇಷ್ಟು ಹಾಕ್ಕೊಂಡ್ರೆ ಕೊರೋನಾ ಓಡ್ ಹೋಗುತ್ತೆ ಅಂತಾ ರೇವಣ್ಣ ಲುಂಗಿ ಸರಿಮಾಡ್ಕೊಂಡು ಹೇಳ್ಕೋತಾ ಓಡಾಡ್ತಿದ್ದಾರಂತೆ. ಈ ನಿಂಬೆಹಣ್ಣು ಚಮತ್ಕಾರ ಕೇಳಿದ ಹಾಸನದ ಜನ ಈವಯ್ಯ ನಿಜ ಹೇಳುತ್ತೀರೋದಾ ಅಂತಾ ಡಾಕ್ಟರ್ ಬಳಿ ಹೋಗಿ ಹೋಗಿ ರೇವಣ್ಣನ ಅವಿಷ್ಕಾರದ ಬಗ್ಗೆ ಪ್ರಶ್ನೆ ಇಡ್ತಿದ್ದಾರಂತೆ. ಡಾಕ್ಟರ್‌ಗಳು ತಲೆ ಚಚ್ಕೊಳ್ಳೋದು ಒಂದು ಬಾಕಿಯಂತೆ.

    ಲಾಸ್ಟ್ ಕಿಕ್ – ರೇವಣ್ಣ ಹೇಳ್ದಂಗೆ ಕೊರೋನಾ ಬಂದಾಗ ಮೂಗಿನ ಹೊಳ್ಳೆಗೆ ನಿಂಬೆಹಣ್ಣು ಇಟ್ಕೊಂಡ್ರೆ ಹಂಗೆ ಮೂಗಿಗೆ ಹತ್ತಿ ಇಟ್ಕೋಬೇಕಾಯ್ತದೆ ಅಂತಾ ಗುಸು ಗುಸು ಸುದ್ದಿಯಂತೆ.!

    [ಸದಾ ಸೀರಿಯಸ್ ಆಗಿರುವ ಸುದ್ದಿಗಳನ್ನು ಓದಿ, ಓದಿ ನಿಮಗೂ ಬೇಜಾರಾಗಿರುತ್ತೆ. ಸೀರಿಯಸ್ ಓದಿನ ನಡುವೆಯೂ ಸ್ವಲ್ಪ ನವಿರಾದ ಹಾಸ್ಯವೂ ಇರಲಿ ಎಂಬ ಕಾರಣಕ್ಕೆ `ಈ ನ್ಯೂಸ್ ಓದ್ಲೇಬೇಡಿ. ಇದು ತಮಾಷೆಗಾಗಿ..!’ ಅಂಕಣ.]

  • ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನ ಬೇಡ್ವೇ ಬೇಡ: ಕುಮಟಳ್ಳಿ ಕಿಡಿ

    ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನ ಬೇಡ್ವೇ ಬೇಡ: ಕುಮಟಳ್ಳಿ ಕಿಡಿ

    ಬೆಂಗಳೂರು: ನನಗೆ ಎಂಎಸ್‍ಐಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬೇಡವೇ ಬೇಡ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಅವರು ನನಗೆ ಎಂಎಸ್‍ಐಎಲ್ ನಿಗಮ ಮಂಡಳಿ ಅಧ್ಯಕ್ಷಗಿರಿ ಕೊಟ್ಟ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನ ನನಗೆ ಬೇಡ ಎಂದು ಸ್ಪಷ್ಟನೆ ನೀಡಿದ್ದಾರೆ.

    ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಿ ಉಪ ಚುನಾವಣೆಯಲ್ಲಿ ಗೆದ್ದ 11 ಜನ ಶಾಸಕರ ಪೈಕಿ 10 ಜನರಿಗೆ ಸಚಿವಸ್ಥಾನ ನೀಡಲಾಗಿದೆ. ಹೀಗಾಗಿ ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿ ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿರುವ ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನ ನೀಡಿ ಸಿಎಂ ಆದೇಶ ಹೊರಡಿಸಿದ್ದರು. ಆದರೆ ಇದರಿಂದ ಕಿಡಿಕಾರಿದ ಮಹೇಶ್ ಕುಮಟಳ್ಳಿ ಅವರು ಎಂಎಸ್‍ಐಎಲ್ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ.

    ಸಚಿವ ಸ್ಥಾನ ಕೈ ತಪ್ಪಿದರೂ, ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಿರುವುದಕ್ಕೆ ಮಹೇಶ್ ಕುಮಟಳ್ಳಿ ಹರ್ಷ ವ್ಯಕ್ತಪಡಿಸಿದ್ದರು. ಮಂತ್ರಿ ಸ್ಥಾನ ಕೊನೆ ಕ್ಷಣದಲ್ಲಿ ಕೈತಪ್ಪಿ ಕುದಿಯುತ್ತಿರುವ ಶಾಸಕ ಉಮೇಶ್ ಕತ್ತಿ, ನನಗಿಂತ ಸವದಿಗೆ ಅನುಭವ ಹೆಚ್ಚು. ಹೀಗಾಗಿ ಅವರು ಸಚಿವರಾಗಿದ್ದಾರೆ ಅಂತ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

  • ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಕುಮಟಳ್ಳಿ ಸಂತಸ

    ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಕುಮಟಳ್ಳಿ ಸಂತಸ

    ಚಿಕ್ಕೋಡಿ/ಬೆಳಗಾವಿ: ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಹಂಚಿಕೆಯಾಗಿರುವುದಕ್ಕೆ ಅಥಣಿ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ಸ್ನೇಹಿತ ಮಹೇಶ್ ಕುಮಟಳ್ಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ – ಯಾರಿಗೆ ಯಾವ ಖಾತೆ ಸಿಗಬಹುದು?

    ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಜಲಸಂಪನ್ಮೂಲ ಸಚಿವರಾಗಿರುವುದು ಸಂತಸ ತಂದಿದೆ. ಉತ್ತರ ಕರ್ನಾಟಕದವರಿಗೆ ಈ ಖಾತೆ ಸಿಕ್ಕಿದ್ದು ಮತ್ತಷ್ಟು ಖುಷಿ ತಂದಿದೆ. ಈ ಭಾಗದ ನೆನೆಗುದಿಗೆ ಬಿದ್ದಿರುವ ಹಾಗೂ ಹೊಸ ಯೋಜನೆಗಳನ್ನ ರಮೇಶ್ ಜಾರಕಿಹೊಳಿ ಅವರು ಜಾರಿಗೆ ತರುತ್ತಾರೆ ಎಂದರು.

    ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ಸಿಕ್ಕಿರುವುದರಿಂದ ಈ ಭಾಗದ ಜನರಿಗೆ ಸಾಕಷ್ಟು ಅನಕೂಲವಾಗಲಿದೆ. ಅವರಿಗೆ ಈ ಖಾತೆ ಕೊಟ್ಟಿದ್ದು ಯೋಗ್ಯವಾಗಿದೆ. ಅನೇಕ ಯೋಜನೆಗಳನ್ನ ಅವರು ಪೂರ್ಣ ಮಾಡಿಕೊಡುವ ವಿಶ್ವಾಸ ಇದೆ. ಹೀಗಾಗಿ ಅವರಿಗೆ ಈ ಸ್ಥಾನ ನೀಡಿದ್ದು ಹರ್ಷ ತಂದಿದೆ ಎಂದು ಮಹೇಶ್ ಕುಮಟಳ್ಳಿ ಹೇಳಿದ್ದಾರೆ.

  • ಮುನಿಸು ಮರೆತು ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ದೌಡು

    ಮುನಿಸು ಮರೆತು ಸಿಎಂ ನಿವಾಸಕ್ಕೆ ರಮೇಶ್ ಜಾರಕಿಹೊಳಿ ದೌಡು

    – ಕುಮಟಳ್ಳಿಯನ್ನು ಕರೆತಂದ ಜಾರಕಿಹೊಳಿ

    ಬೆಂಗಳೂರು: ಮುನಿಸು ಮರೆತು ನೂತನ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಬಂದಿದ್ದಾರೆ.

    ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್‍ವೈ ನಿವಾಸಕ್ಕೆ ಸಚಿವ ಸ್ಥಾನ ವಂಚಿತ ಮಹೇಶ್ ಕುಮಟಳ್ಳಿ ಅವರನ್ನು ಕರೆದುಕೊಂಡು ರಮೇಶ್ ಜಾರಕಿಹೊಳಿ ದಿಢೀರ್ ಭೇಟಿ ನೀಡಿದ್ದಾರೆ. ಜೊತೆಗೆ ಮಂತ್ರಿ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ಕುಮಟಳ್ಳಿಗೆ ಪ್ರಬಲ ನಿಗಮ ಮಂಡಳಿಗಾಗಿ ಕೊಡಬೇಕೆಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ.

    ನೂತನ ಸಚಿವರ ಪಟ್ಟಿಯಿಂದ ಮಿಸ್ ಆಗಿದ್ದ ಮಹೇಶ್ ಕುಮಟಳ್ಳಿ ಸಿಎಂ ಮೇಲೆ ಬೇಸರಗೊಂಡಿದ್ದರು. ಜೊತೆಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಗೈರಾಗಿದ್ದರು. ಆದರೆ ರಾತ್ರಿ ಜಾರಕಿಹೊಳಿ ಜೊತೆ ಸಿಎಂ ನಿವಾಸಕ್ಕೆ ಬಂದ ಕುಮಟಳ್ಳಿ, ಸಿಎಂ ಬಿಎಸ್‍ವೈ ಜೊತೆ ಚರ್ಚೆ ಮಾಡಿ ಪ್ರಬಲ ನಿಗಮ ಮಂಡಳಿ ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಸಿಎಂ ಬಿಎಸ್‍ವೈ ನಿವಾಸಕ್ಕೆ ಸಚಿವರಾದ ಲಕ್ಷ್ಮಣ್ ಸವದಿ, ಬೊಮ್ಮಾಯಿ, ಸೋಮಣ್ಣ ಭೇಟಿ ನೀಡಿದ್ದಾರೆ.

  • ಸಚಿವ ಸಂಪುಟದಲ್ಲಿ ಕುಮಟಳ್ಳಿ ಸೇರಿಸಿಕೊಂಡಿದ್ರೆ ಇನ್ನಷ್ಟು ಗೌರವ ಬರ್ತಿತ್ತು: ನೆಹರು ಓಲೇಕಾರ

    ಸಚಿವ ಸಂಪುಟದಲ್ಲಿ ಕುಮಟಳ್ಳಿ ಸೇರಿಸಿಕೊಂಡಿದ್ರೆ ಇನ್ನಷ್ಟು ಗೌರವ ಬರ್ತಿತ್ತು: ನೆಹರು ಓಲೇಕಾರ

    ಹಾವೇರಿ: ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು ಎಂದು ಹಾವೇರಿ ಶಾಸಕ ನೆಹರು ಓಲೇಕಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಗುರುವಾರ ಸಚಿವ ಸಂಪುಟದ ವಿಸ್ತರಣೆಯಲ್ಲಿ ಮಹೇಶ್ ಕುಮಟಳ್ಳಿ ಅವರನ್ನ ಸೇರಿಸಿಕೊಂಡಿದ್ದರೆ ಇನ್ನಷ್ಟು ಗೌರವ ಬರುತ್ತಿತ್ತು. ಅವರನ್ನ ಯಾಕೆ ಕೈಬಿಟ್ಟಿದ್ದಾರೋ ಗೊತ್ತಿಲ್ಲ. ಯಾರಿಂದ ಸರ್ಕಾರ ಬಂದಿದೆಯೋ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಅದು ಒಳ್ಳೆಯದು. ಉತ್ತಮ ಕೆಲಸ ಮಾಡಲು ಹಾರೈಕೆ ಮಾಡಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಉತ್ತಮ ಹೆಸರು ಬರುವಂತೆ ಕೆಲಸ ಮಾಡಿ. ಹತ್ತು ಜನ ಸಚಿವರಿಗೂ ಶುಭ ಹಾರೈಸಿದ್ದೇವೆ ಎಂದು ನೆಹರು ಓಲೇಕಾರ ಹೇಳಿದರು.

    ನಾನು ಸಿಎಂ ಯಡಿಯೂರಪ್ಪ ಅವರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧ. ನಾವು ಮನವಿ ಮಾಡಿದ್ದೇವೆ, ಅವರು ಮುಂದೆ ನಮಗೆ ಅವಕಾಶ ಕೊಡುತ್ತೇನೆ ಎಂದಿದ್ದಾರೆ. ನಿಗಮ ಮಂಡಳಿ ಕೊಡುತ್ತಾರೋ ಅಥವಾ ಸಚಿವ ಸ್ಥಾನ ಕೊಡುತ್ತಾರೋ ಅದು ಸಿಎಂಗೆ ಬಿಟ್ಟಿದ್ದು ಎಂದರು.

  • ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಯೋಗೇಶ್ವರ್, ವಿಶ್ವನಾಥ್‍ಗೆ ಮಂತ್ರಿ ಸ್ಥಾನ ಕೊಡಿ- ಕುಮಟಳ್ಳಿ ಹೊಸ ಡಿಮ್ಯಾಂಡ್

    ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸರಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಆಗಿರೋ ಶಾಸಕ ಮಹೇಶ್ ಕುಮಟಳ್ಳಿ ಸಿಎಂಗೆ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಕೊಡದೆ ಇದ್ದರೂ ಪರವಾಗಿಲ್ಲ. ಸಿ.ಪಿ ಯೋಗೇಶ್ವರ್ ಹಾಗೂ ವಿಶ್ವನಾಥ್‍ಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.

    ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಈ ಸರ್ಕಾರ ಬರಲು 17 ಜನರು ಕಾರಣ. ಅದರಲ್ಲಿ ಎರಡನೇ ರನ್ನರ್ ಅಪ್ ನಾನೇ. ನನಗೆ ಸ್ಥಾನ ಕೊಡದೆ ಇದ್ದರೆ ಅನ್ಯಾಯ ಆಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ನನಗೆ ಸ್ಥಾನ ಕೊಡದೆ ಹೋದರೂ ಪರವಾಗಿಲ್ಲ ಸಿ.ಪಿ ಯೋಗೇಶ್ವರ್, ವಿಶ್ವನಾಥ್‍ಗೆ ಸ್ಥಾನ ಕೊಡಿ ಎಂದು ಸಿಎಂ ಯಡಿಯೂರಪ್ಪಗೆ ಡಿಮ್ಯಾಂಡ್ ಮಾಡಿದ್ದಾರೆ.

    ಯೋಗೇಶ್ವರ್ ಬಿಜೆಪಿ ಸರ್ಕಾರ ಬರಲು ಕಾಣಿಕೆ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳುವಾಗ ನಮ್ಮ ಜೊತೆ ಇದ್ದವರು ಯೋಗೇಶ್ವರ್. ಬಿಜೆಪಿಗೆ ಅವರ ಕೊಡುಗೆ ಇದೆ. ಈ ಸರ್ಕಾರಕ್ಕೂ ಅವರ ಕೊಡುಗೆ ಇದೆ. ಹೀಗಾಗಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಬೇಕು. ಅದೇ ರೀತಿ ಈ ಸರ್ಕಾರಕ್ಕೆ ವಿಶ್ವನಾಥ್ ಕೊಡುಗೆ ಇದೆ. ಸೋತರು ಅಂತ ಅವರನ್ನು ಕೈ ಬಿಡಬೇಡಿ. ಅವರಿಗೂ ಮಂತ್ರಿ ಸ್ಥಾನ ಕೊಡಿ ಎಂದು ಒತ್ತಾಯ ಮಾಡಿದರು.

    ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಟಳ್ಳಿ, ನನಗೆ ಸಿಎಂ ಸಚಿವ ಸ್ಥಾನ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಸಿಎಂ ಯಡಿಯೂರಪ್ಪ ಯಾವತ್ತು ಕೊಟ್ಟ ಮಾತು ತಪ್ಪಿಲ್ಲ. ಗೆದ್ದ 11 ಜನರ ಪೈಕಿ ನನಗೆ ಯಾಕೆ ಕೊಡಲ್ಲ ಅಂತ ಸುದ್ದಿ ಬರುತ್ತಿದಿಯೋ ನನಗೆ ಗೊತ್ತಿಲ್ಲ. ಸಿಎಂ ಮಾತು ಕೊಟ್ಟಿದ್ದರು. ಹೀಗಾಗಿ ನಾನು ಮಂತ್ರಿ ಆಗುತ್ತೀನಿ ಎಂಬ ವಿಶ್ವಾದ ಇದೆ. ಮಂತ್ರಿ ಮಾಡುತ್ತಾರೆ ಅಂತ ನಂಬಿಕೆ ಇದೆ. ಒಂದು ವೇಳೆ ನನ್ನ ಹೆಸರು ಬಿಟ್ಟರೆ ನನಗೆ ಅನ್ಯಾಯವಾಗುತ್ತೆ. ಆದರೂ ಸಿಎಂ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ. ಕೊನೆ ಘಳಿಗೆಯಲ್ಲಿ ಸ್ಥಾನ ತಪ್ಪಿದರು ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೀನಿ ಎಂದು ತಿಳಿಸಿದರು.

  • ಕುಮಟಳ್ಳಿ ಪರ ಬ್ಯಾಟ್ ಬೀಸಿದ ಡಿಸಿಎಂ ಸವದಿ

    ಕುಮಟಳ್ಳಿ ಪರ ಬ್ಯಾಟ್ ಬೀಸಿದ ಡಿಸಿಎಂ ಸವದಿ

    ಬೆಳಗಾವಿ: ಮುಖ್ಯಮಂತ್ರಿಗೆ ಇರೋ ಪರಮಾಧಿಕಾರವನ್ನು ಯಾರೂ ಪ್ರಶ್ನೆ ಮಾಡೋಕೆ ಆಗಲ್ಲ. ಅವರಿಗಿರೋ ಅಧಿಕಾರ ಬಳಸಿ ಸಂಪುಟಕ್ಕೆ ಯಾರನ್ನು ಸೇರಿಸಬೇಕು ಮತ್ತು ಯಾರನ್ನು ಮುಂದುವರಿಸಬೇಕೆಂಬ ತೀರ್ಮಾನ ಮಾಡುತ್ತಾರೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿಗೆ ಸಚಿವ ಸ್ಥಾನ ಕೈ ತಪ್ಪುವ ವಿಚಾರ ಎಲ್ಲವೂ ಊಹಾಪೋಹ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಈಗಾಗಲೇ ಸಿಎಂ ಬಿಎಸ್‍ವೈ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಫೆ.3 ಅಥವಾ ಫೆ.4 ರಂದು ಮಂತ್ರಿಮಂಡಲ ವಿಸ್ತರಣೆ ಆಗುತ್ತದೆ. ಆಗಲೇ ಈ ಬಗ್ಗೆ ಸ್ಪಷ್ಟನೆ ಸಿಗೋಕೆ ಸಾಧ್ಯ. ಸಿಎಂ ಪಕ್ಷದ ರಾಷ್ಟ್ರೀಯ ವರಿಷ್ಠರ ಜೊತೆ ಚರ್ಚೆ ಮಾಡಿದ್ದಾರೆ. ಅವರಿಗೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು. ಇದನ್ನೂ ಓದಿ: ಬಿಎಸ್‍ವೈ ಕೊಟ್ಟ ಮಾತು ತಪ್ಪಲ್ಲ, ನಾನು ಮಂತ್ರಿ ಆಗೇ ಆಗ್ತೀನಿ: ಕುಮಟಳ್ಳಿ

    ಇದೇ ವೇಳೆ ವಿಧಾನ ಪರಿಷತ್‍ಗೆ ನಾಮಪತ್ರ ಸಲ್ಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಕ್ಷದ ಸೂಚನೆ ಬಂದ ಮೇಲೆ ವಿಧಾನ ಪರಿಷತ್‍ಗೆ ನಾಮಿನೇಷನ್ ಸಲ್ಲಿಸುತ್ತೇನೆ. ಯಾರೂ ಸಹ ನನ್ನ ಸಂಪರ್ಕಿಸಿಲ್ಲ. ಭಾನುವಾರ ಧಾರವಾಡ ಪ್ರವಾಸದಲ್ಲಿದ್ದೇನೆ. ಫೆ.3 ರಂದು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅಲ್ಲಿ ಹೋದ ಮೇಲೆ ಸಿಎಂ, ಪಕ್ಷದ ಅಧ್ಯಕ್ಷರ ಭೇಟಿಯಾಗುತ್ತೇನೆ. ಅವರೇನು ಸೂಚನೆ ಕೊಡುತ್ತಾರೆ. ಅದರ ಮೇಲೆ ನಿರ್ಣಯ ಕೈಗೊಳ್ಳುವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಸೋಲಿಸಿದ್ದು ಬಿಜೆಪಿ, ನಾನ್ಯಾರ ಹಂಗಿನಲ್ಲೂ ಇಲ್ಲ: ಎಂಟಿಬಿ

  • ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸೂರ್ಯ-ಚಂದ್ರರಷ್ಟೇ ಸತ್ಯ: ಸವದಿ

    ಬೆಳಗಾವಿ: ಸೂರ್ಯ-ಚಂದ್ರ ಹುಟ್ಟುವುದು ಎಷ್ಟು ಸತ್ಯವೊ ಅಥಣಿ, ಕಾಗವಾಡ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದು ಕೂಡ ಅಷ್ಟೇ ಸತ್ಯ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

    ಅಥಣಿಯಲ್ಲಿ ಮಾತನಾಡಿದ ಡಿಸಿಎಂ, ಉಪ ಚುನಾವಣೆಯಲ್ಲಿ ಅಥಣಿ ಕ್ಷೇತ್ರದಿಂದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಗೆಲುವು ಖಚಿತ. ನಮ್ಮ ಕಾರ್ಯಕರ್ತರಲ್ಲಿ ಸ್ವಲ್ಪಮಟ್ಟಿಗೆ ಗೊಂದಲ ಇರುವುದು ಸತ್ಯ. ಅದನ್ನು ಮೂರು ದಿನಗಳಲ್ಲಿ ಸರಿ ಮಾಡುತ್ತೇನೆ. ಹೊಸ ಸೋಸೆ ಮನೆಗೆ ಬಂದಾಗ ಪ್ರಾರಂಭದಲ್ಲಿ ವ್ಯತ್ಯಾಸ ಇದ್ದೆ ಇರುತ್ತೆ. ಇದನ್ನ ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ತಿಳಿಸಿದರು.

    ನನಗೆ ಯಾವುದೆ ರೀತಿಯ ಮುನಿಸಿಲ್ಲ. ಹಾಗೊಂದು ವೇಳೆ ಮುನಿಸಿದ್ದರೆ ಇಲ್ಲಿಗೆ ಬರುತ್ತಿರಲಿಲ್ಲ. ನಾನು ಯಾವಾಗಲೂ ನೇರ ಮತ್ತು ಸ್ಪಷ್ಟ ಇದ್ದೇನೆ. ಬಿಜೆಪಿಯ ಯಾವುದೇ ಕಾರ್ಯಕರ್ತರು ಪಕ್ಷದ ಹುದ್ದೆ ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಿಲ್ಲ. ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ. ನೂರಕ್ಕೆ ನೂರರಷ್ಟು ನಾವೇ ಮತ ಹಾಕಿಸಿ ಮಹೇಶ್ ಕುಮಟಳ್ಳಿ ಅವರನ್ನು ಗೆಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

    ಇದಕ್ಕೂ ಮುನ್ನ ಅಥಣಿ ಮತಕ್ಷೇತ್ರದ ಚುನಾವಣೆ ಹಿನ್ನೆಲೆ ಪಟ್ಟಣದ ಆರ್.ಎಸ್.ಎಚ್ ಕುಲಕರ್ಣಿ ಸಭಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಆದರೆ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗ ಬೇಕಿದ್ದ ಸಭೆ ಬರೋಬ್ಬರಿ 3 ಗಂಟೆ ತಡವಾಗಿ ಪ್ರಾರಂಭವಾಯಿತು. ಲಕ್ಷ್ಮಣ ಸವದಿ ಕಾರ್ಯಕ್ರಮಕ್ಕೆ ಬರುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಭಾರೀ ಗೊಂದಲ ಮೂಡಿಸಿತ್ತು. ಈ ಮಧ್ಯೆ ಸಭೆಗೆ ಹೋಗದಂತೆ ಲಕ್ಷ್ಮಣ ಸವದಿ ಅವರನ್ನು ಅಭಿಮಾನಿಗಳು, ಕೆಲ ಬಿಜೆಪಿ ಕಾರ್ಯಕರ್ತರು ತಡೆದರು. ನಂತರ ಮಾಜಿ ಸಿಎಂ ಜಗದೀಶ ಶೆಟ್ಟರ್, ಕುಡಚಿ ಶಾಸಕ ಪಿ.ರಾಜು, ಮಹೇಶ ಕುಮಟಳ್ಳಿ ಸೇರಿದಂತೆ ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರ ಮನೆಗೆ ತೆರಳಿ ಸಭೆಗೆ ಕರೆತರಲು ತೆರಳಿದ್ದರು. ಆಗ ಡಿಸಿಎಂ ಮನೆ ಮುಂದೆ ಹೈಡ್ರಾಮಾನೇ ನಡೆಯಿತು.

    ಜಗದೀಶ್ ಶೆಟ್ಟರ್ ಕಾರಿಗೆ ಲಕ್ಷ್ಮಣ ಸವದಿ ಅಭಿಮಾನಿಗಳು ಅಡ್ಡಬಿದ್ದು ತಡೆದರು. ಅಲ್ಲದೆ ಜಗದೀಶ್ ಶೆಟ್ಟರ್ ಅವರನ್ನ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಕುಡಚಿ ಶಾಸಕ ರಾಜು ಅವರಿಗೂ ಸವದಿ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡರು. ನಂತರ ಹರಸಾಹಸ ಪಟ್ಟು ಬಿಜೆಪಿ ನಾಯಕರು ಲಕ್ಷ್ಮಣ ಸವದಿ ಅವರನ್ನ ಸಭೆಗೆ ಕರೆದುಕೊಂಡು ಬಂದರು. ಆದರೆ ಅಲ್ಲೂ ಕೂಡ ಸವದಿ ಅಭಿಮಾನಿಗಳು ಯಾರನ್ನು ಕೇಳಿ ಸಭೆ ಕರೆದಿದ್ದೀರಿ ಎಂದು ಗಲಾಟೆ ಮಾಡಿದರು.ನಂತರ ಲಕ್ಷ್ಮಣ ಸವದಿ ಖುದ್ದಾಗಿ ಬಂದು ಅಭಿಮಾನಿಗಳಿಗೆ ಕೈ ಮುಗಿದು, ಕಾಲು ಬಿದ್ದು ಗಲಾಟೆ ಮಾಡದೆ ಇಲ್ಲಿಂದ ತೆರಳಿ ಎಂದು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿದ್ದ ಲಕ್ಷ್ಮಣ ಸವದಿ ಅವರು ಅಭಿಮಾನಿಗಳು ಜಗದೀಶ್ ಶೆಟ್ಟರ್, ಮಹೇಶ್ ಕುಮಠಳ್ಳಿ ಭಾಷಣದ ವೇಳೆ ತಮ್ಮ ನಾಯಕನ ಪರ ಜೈಕಾರ ಹಾಕಿ ಭಾಷಣಕ್ಕೆ ಅಡ್ಡಿ ಪಡಿಸಿದರು.

    https://www.youtube.com/watch?v=fk_vASHUtJU