Tag: Mahesh Jethmalani

  • ಚೀನಾ ಓಲೈಸಲು ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಮಹೇಶ್‌ ಜೇಠ್ಮಾಲನಿ

    ಚೀನಾ ಓಲೈಸಲು ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಮಹೇಶ್‌ ಜೇಠ್ಮಾಲನಿ

    ನವದೆಹಲಿ: ಚೀನಾವನ್ನು ಓಲೈಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿರುದ್ಧ ಬಿಬಿಸಿ (BBC) ದುರುದ್ದೇಶಪೂರಿತ ಸಾಕ್ಷ್ಯಚಿತ್ರ ತಯಾರಿಸಿದೆ ಎಂದು ಬಿಜೆಪಿ ಹಿರಿಯ ಸಂಸದ, ವಕೀಲ ಮಹೇಶ್‌ ಜೇಠ್ಮಾಲನಿ (Mahesh Jethmalani) ಗಂಭೀರ ಆರೋಪ ಮಾಡಿದ್ದಾರೆ.

    ಈ ಸಂಬಂಧ ಟ್ವಿಟ್ಟರ್‌ನಲ್ಲಿ ಚೀನಾದ (China) ಟೆಲಿಕಾಂ ಕಂಪನಿ ಹವಾವೇಯಿಂದ (Huawei) ಬಿಬಿಸಿ ಹಣವನ್ನು ಪಡೆದುಕೊಳ್ಳುತ್ತಿರುವ ಲಿಂಕ್‌ ಸೇರಿಸಿ ಟ್ವೀಟ್‌ ಮಾಡಿದ್ದಾರೆ. ಇದನ್ನೂ ಓದಿ: ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ರಷ್ಯಾ ಆಕ್ರೋಶ

    ಬಿಬಿಸಿ ಯಾಕೆ ಭಾರತ ವಿರೋಧಿಯಾಗಿದೆ? ಯಾಕೆಂದರೆ ಚೀನಾದ ಸರ್ಕಾರಕ್ಕೆ ಸಂಬಂಧಿಸಿದ ಹುವಾವೇ ಕಂಪನಿಯಿಂದ ಹಣ ಪಡೆದುಕೊಳ್ಳುತ್ತಿದೆ. ಬಿಬಿಸಿ ಈಗ ಚೀನಾ ಓಲೈಕೆಯಲ್ಲಿ ತೊಡಗಿದೆ. ಇದರೊಂದಿಗೆ ಬಿಬಿಸಿಗೆ ಅಪ್ತರಾದ ಕಾಮ್ರೆಡ್‌ ಜೈರಾಂ (ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌) ಅವರ ಕಾರ್ಯಸೂಚಿಯನ್ನು ಪ್ರಚಾರ ಮಾಡುತ್ತಿದೆ. ಇದು ಸರಳವಾದ ನಗದುಪ್ರಚಾರದ ಒಪ್ಪಂದವಾಗಿದ್ದು, ಬಿಬಿಸಿ ಮಾರಾಟಕ್ಕಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ.

    ತಮ್ಮ ಈ ಆರೋಪಕ್ಕೆ ಸಾಕ್ಷ್ಯ ನೀಡಲು 2022ರ ಆಗಸ್ಟ್‌ನಲ್ಲಿ ಬ್ರಿಟನ್ ನಿಯತಕಾಲಿಕೆ ‘ದಿ ಸೆಕ್ಟೇಟರ್’ ಪ್ರಕಟಿಸಿದ ಅಂಕಣದ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ. ಈ ಅಂಕಣದಲ್ಲಿ ಅಮೆರಿಕ ನಿರ್ಬಂಧಿಸಿದ ಹುವಾವೇ ಕಂಪನಿಯಿಂದ ಬಿಬಿಸಿ ಈಗಲೂ ಹಣ ಪಡೆಯುತ್ತಿದೆ ಎಂದು ಬರೆಯಲಾಗಿದೆ.

    ಮತ್ತೊಂದು ಟ್ವೀಟ್‌ನಲ್ಲಿ ಜೇಠ್ಮಾಲನಿ, 2021ರವರೆಗೆ ಜಮ್ಮು ಕಾಶ್ಮೀರ ಭಾರತದ ಭಾಗವಾಗಿಲ್ಲ ಎಂದು ತೋರಿಸುವ ನಕ್ಷೆಯನ್ನು ಪ್ರಕಟಿಸಿತ್ತು. ನಂತರ ಭಾರತ ಸರ್ಕಾರದ ಕ್ಷಮೆಯಾಚಿಸಿ ನಕ್ಷೆ ಸರಿ ಮಾಡಿತ್ತು. ಬಿಬಿಸಿ ಭಾರತದ ವಿರುದ್ಧ ತಪ್ಪು ಮಾಹಿತಿ ಹರಡುವ ಸುದೀರ್ಘ ಇತಿಹಾಸ ಹೊಂದಿದೆ. ಮೋದಿ ವಿರುದ್ಧದ ಸಾಕ್ಷ್ಯಚಿತ್ರವು ಈ ದುರುದ್ದೇಶಪೂರಿತ ಪ್ರವೃತ್ತಿಯ ಮುಂದುವರಿದ ಭಾಗವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k