Tag: Mahesh Gowda

  • ಉತ್ತಮ ಸಂದೇಶದ ಮನರಂಜನಾತ್ಮಕ ಸಿನಿಮಾ ‘ಬಿಳಿಚುಕ್ಕಿ ಹಳ್ಳಿಹಕ್ಕಿ’: ಪ್ರತಾಪ್ ಸಿಂಹ ಬಣ್ಣನೆ

    ಉತ್ತಮ ಸಂದೇಶದ ಮನರಂಜನಾತ್ಮಕ ಸಿನಿಮಾ ‘ಬಿಳಿಚುಕ್ಕಿ ಹಳ್ಳಿಹಕ್ಕಿ’: ಪ್ರತಾಪ್ ಸಿಂಹ ಬಣ್ಣನೆ

    – ಹೊಸತನದ ಸಿನಿಮಾ ನೋಡಿ ಪ್ರೋತ್ಸಾಹಿಸಿ: ಪ್ರೇಕ್ಷಕರಲ್ಲಿ ಮಾಜಿ ಸಂಸದ ಮನವಿ

    ಹಿರಾ ಖ್ಯಾತಿಯ ಮಹೇಶ್ ಗೌಡ ನಿರ್ದೇಶನ, ನಿರ್ಮಾಣ ಮಾಡಿ ನಾಯಕನಾಗಿ ನಟಿಸಿರುವ ಚಿತ್ರ `ಬಿಳಿಚುಕ್ಕಿ ಹಳ್ಳಿಹಕ್ಕಿ’ (Bilichukki Hallihakki). ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಚಿತ್ರ ಈ ವಾರ ಅಂದರೆ, ಅ.24 ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಬಿಡುಗಡೆಯ ಅಂಚಿನಲ್ಲಿರುವ ಈ ಸಿನಿಮಾದ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಭಿನ್ನ ಒಳನೋಟದ ಒಂದಷ್ಟು ಮಾತುಗಳನ್ನಾಡಿದ್ದಾರೆ.

    ತೊನ್ನೆಂಬ ಸಮಸ್ಯೆಯ ಭೂಮಿಕೆಯಲ್ಲಿರುವ, ಪಕ್ಕಾ ಮನರಂಜನಾತ್ಮಕ ಗುಣ ಹೊಂದಿರುವ ಈ ಸಿನಿಮಾ ಸಾರಥಿ ಮಹೇಶ್ ಗೌಡರನ್ನು (Mahesh Gowda) ಮೆಚ್ಚಿಕೊಳ್ಳುತ್ತಲೇ, ಬಿಳಿಚುಕ್ಕಿ ಹಳ್ಳಿಹಕ್ಕಿಯನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಪ್ರತಾಪ್‌ ಸಿಂಹ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಮುರುಳಿ ಸಮ್ಮುಖದಲ್ಲಿ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಟ್ರೈಲರ್ ರಿಲೀಸ್‌

    ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಹೊಸ ಬಗೆಯ ಪ್ರಯತ್ನಗಳಾಗುತ್ತಿವೆ. ಕಾಂತಾರ ಸಿನಿಮಾ ಸೀಮಿತ ಬಜೆಟ್ಟಿನಲ್ಲಿ ತಯಾರಾಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಅದರ ಅಧ್ಯಾಯ ಒಂದು ಕೂಡಾ ದೊಡ್ಡ ಗೆಲುವು ದಾಖಲಿಸಿದೆ. ಇತ್ತೀಚೆಗೆ ತೆರೆಕಂಡಿದ್ದ ಸು ಫ್ರಂ ಸೋ ಕೂಡಾ ಗೆಲುವು ಕಂಡಿದೆ. ಈ ಗೆಲುವಿನ ಸರಣಿಯ ಭಾಗವೆಂಬಂತೆ ಇದೀಗ ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರವೂ ಬಿಡುಗಡೆಯ ಹೊಸ್ತಿಲಲ್ಲಿದೆ. ಇಂಥಾ ಹೊಸತನದ ಸಿನಿಮಾವನ್ನು ಗೆಲ್ಲಿಸಿದರೆ ಮಹೇಶ್ ಗೌಡ ಅವರ ಕಡೆಯಿಂದ ಮತ್ತೊಂದಷ್ಟು ಒಳ್ಳೆ ಸಿನಿಮಾಗಳು ರೂಪುಗೊಳ್ಳುತ್ತವೆಂದು ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

    ಈ ಸಿನಿಮಾದ ಕಥನವನ್ನು ಸೂಕ್ಷ್ಮವಾಗಿ ಅವಲೋಕಿಸಿದಂತಿರುವ ಪ್ರತಾಪ್ ಸಿಂಹ (Pratap Simha), ಯಾರನ್ನೇ ಆದರೂ ಅವರ ದೈಹಿಕ ನ್ಯೂನತೆಗಳು ಮತ್ತು ಕಾಯಿಲೆಗಳ ಮೂಲಕ ಮಾನಸಿಕವಾಗಿ ಕುಗ್ಗಿಸುವಂತೆ ಮಾಡೋದು ಸರಿಯಲ್ಲ. ತೊನ್ನು ಕೂಡಾ ಸಾಮಾನ್ಯವಾದೊಂದು ದೈಹಿಕ ಸಮಸ್ಯೆ. ಇಂಥ ಸಮಸ್ಯೆಗಳ ನಡುವೆಯೂ ಎದೆಗುಂದದೆ ಬದುಕಬೇಕೆಂಬ ಸಂದೇಶದೊಂದಿಗೆ, ಮನರಂಜನಾತ್ಮಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಮಹೇಶ್ ಗೌಡ ಅವರಿಗೆ ಇದರೊಂದಿಗೆ ಗೆಲುವು ಸಿಕ್ಕಲಿ. ಇಂಥಾ ಚೆಂದದ ಇನ್ನೊಂದಷ್ಟು ಪ್ರಯತ್ನಗಳನ್ನು ನಡೆಸಲು ತಾಯಿ ಚಾಮುಂಡೇಶ್ವರಿ ಅವರಿಗೆ ಶಕ್ತಿ ಕೊಡಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ʻಬಿಳಿಚುಕ್ಕಿ ಹಳ್ಳಿಹಕ್ಕಿʼಯ ಹಾಡುಗಳಿಗೆ ವ್ಯಾಪಕ ಮೆಚ್ಚುಗೆ!

    ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ವೀಣಾ ಸುಂದರ್, ರವಿ ಭಟ್, ಜಹಾಂಗೀರ್ ಮತ್ತು ಲಕ್ಷ್ಮಿ ಸಿದ್ದಯ್ಯ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಿರಣ್ ಸಿಹೆಚ್‌ಎಂ ಛಾಯಾಗ್ರಹಣ, ಮೊನಿಷ್ ಸಂಕಲನ, ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ, ಅದಿತಿ ನಾರಾಯಣ್ ಮತ್ತು ರಘು ನೃತ್ಯ ನಿರ್ದೇಶನ, ಪ್ರತಾಪ್ ಭಟ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರಕ್ಕಿದೆ. ಈಗಾಗಲೇ ಬಿಡುಗಡೆಗೊಂಡಿರುವ ಎರಡು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರ ಬೆನ್ನಲ್ಲಿಯೇ ಬಿಡುಗಡೆಗೊಂಡಿರುವ ಟ್ರೈಲರ್ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇಂಥಾ ಸಕಾರಾತ್ಮಕ ವಾತಾವರಣದಲ್ಲಿ ಬಿಳಿಚುಕ್ಕಿ ಹಳ್ಳಿಹಕ್ಕಿ ತೆರೆಗಾಣಲು ದಿನಗಣನೆ ಶುರುವಾಗಿದೆ.

  • ಅಕ್ಟೋಬರ್ 24 ರಂದು `ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ!

    ಅಕ್ಟೋಬರ್ 24 ರಂದು `ಬಿಳಿಚುಕ್ಕಿ ಹಳ್ಳಿಹಕ್ಕಿ’ ತೆರೆಗೆ!

    ನಪ್ರಿಯ ಅಲೆಗಳ ಭರಾಟೆಯ ನಡುವಲ್ಲಿಯೇ, ಭಿನ್ನ ಆಲಾಪದಂಥಾ ಸಿನಿಮಾಕ್ಕಾಗಿ ಧ್ಯಾನಿಸಿಸುವ ದೊಡ್ಡದೊಂದು ಪ್ರೇಕ್ಷಕ ವರ್ಗ ಕನ್ನಡದಲ್ಲಿದೆ. ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ಮಾಣ, ನಿರ್ದೇಶನ ಮಾಡಿ, ಮುಖ್ಯ ಭೂಮಿಕೆಯಲ್ಲಿ ನಟಿಸಿರುವ `ಬಿಳಿಚುಕ್ಕಿ ಹಳ್ಳಿಹಕ್ಕಿ’ ಚಿತ್ರ ಅಂಥಾ ಭಿನ್ನ ಪಥವೊಂದರ ಸುಳಿವು ಬಿಟ್ಟು ಕೊಟ್ಟಿತ್ತು. ಈಗಾಗಲೇ ಪೋಸ್ಟರ್ ಸೇರಿದಂತೆ ಒಂದಷ್ಟು ಬಗೆಯಲ್ಲಿ ಗಮನ ಸೆಳೆದಿರುವ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಪೋಸ್ಟರ್ ಒಂದರ ಮೂಲಕ ಚಿತ್ರತಂಡ ಘೋಷಿಸಿದೆ. ಬಿಳಿಚುಕ್ಕಿ ಹಳ್ಳಿಹಕ್ಕಿ (Bili Chukki Halli Hakki) ಚಿತ್ರ ಇದೇ ಅಕ್ಟೋಬರ್ 24 ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

    ನಿರ್ದೇಶಕರು ಈವರೆಗೆ ಹೇಳಿಕೊಂಡಿರುವ ಒಂದಷ್ಟು ಅಂಶಗಳನ್ನಾಧರಿಸಿ ಹೇಳೋದಾದರೆ, ಇದು ಭಿನ್ನ ಬಗೆಯ ಸಿನಿಮಾ. ನಮ್ಮ ಸುತ್ತಮುತ್ತಲೇ ವಿಟಿಲಿಗೋ ಅಂದರೆ ತೊನ್ನು ಎಂಬ ಚರ್ಮ ಬಾಧೆ ಅನೇಕರನ್ನು ಆವರಿಸಿಕೊಂಡಿರುತ್ತೆ. ಅಂಥಾದ್ದೊಂದು ಕಾಯಿಲೆಯಲ್ಲದ ಕಾಯಿಲೆಯ ಭೂಮಿಕೆಯ ಮೇಲೆ ತಯಾರಾಗಿರುವ ಮೊಟ್ಟ ಮೊದಲ ಸಿನಿಮಾ ಎಂಬ ಹೆಗ್ಗಳಿಕೆ ಬಿಳಿಚುಕ್ಕಿ ಹಳ್ಳಿಹಕ್ಕಿಯದ್ದು. ಹೊರ ಜಗತ್ತಿನ ಪಾಲಿಗೆ ತೊನ್ನು ಅನ್ನೋದೊಂದು ಚರ್ಮ ವ್ಯಾಧಿ. ಆದರೆ, ಅದರ ಸುತ್ತ ಹಬ್ಬಿಕೊಂಡಿರುವ ಚಿತ್ರವಿಚಿತ್ರ ನಂಬಿಕೆಗಳದ್ದೇ ದೊಡ್ಡ ಕಥೆಯಿದೆ. ಅಂಥಾ ಬಾಧೆಗೀಡಾದ ಜೀವವೊಂದರ ಮನೋವ್ಯಾಕುಲವನ್ನು ಸುಲಭಕ್ಕೆ ಅಂದಾಜಿಸಲಾಗದ ಕಥಾ ಹಂದರದೊಂದಿಗೆ ಮಹೇಶ್ ಅವರು ಕಟ್ಟಿಕೊಟ್ಟಿದ್ದಾರಂತೆ. ಇದನ್ನೂ ಓದಿ: ರೋಷನ್ ಕೋಟಿ ಕೋಟಿ ಒಡೆಯ ಎಂದವರಿಗೆ ಅನುಶ್ರೀ ಕ್ಲ್ಯಾರಿಟಿ ಏನು?

    ಈ ಹಿಂದೆ ಮಹಿರಾ ಎಂಬ ಸಿನಿಮಾ ನಿರ್ದೇಶನ ಮಾಡುವ ಮೂಲಕ ಗಮನ ಸೆಳೆದಿದ್ದವರು ಮಹೇಶ್ ಗೌಡ (Mahesh Gowda). ಒಂದಷ್ಟು ಸಮಯದ ಸಿದ್ಧತೆಗಳ ನಂತರ ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ (Kaajal Kunder) ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ. ಇಂಥಾದ್ದೊಂದು ವಿಶಿಷ್ಟವಾದ ಕಥೆಯನ್ನು ಪಕ್ಕಾ ಕಮರ್ಶಿಯಲ್ ಧಾಟಿಯಲ್ಲಿ, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಕಟ್ಟಿಕೊಡಲಾಗಿದೆಯಂತೆ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ತಾರಾಗಣದ ಬೆರಗುಗಳೂ ಸೇರಿದಂತೆ, ಈ ಸಿನಿಮಾ ಬಗೆಗಿನ ಇನ್ನಷ್ಟು ವಿವರಗಳು ಹಂತ ಹಂತವಾಗಿ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

  • ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ

    ವರಮಹಾಲಕ್ಷ್ಮಿ ಹಬ್ಬದಂದು ವೈಷ್ಣವಿ ಗೌಡ ಫ್ಯಾನ್ಸ್‌ಗೆ ಸಿಹಿಸುದ್ದಿ

    ಬಿಗ್ ಬಾಸ್ (Bigg Boss Kannada) ಖ್ಯಾತಿಯ ವೈಷ್ಣವಿ ಗೌಡ (Vaishnavi Gowda) ಇದೀಗ ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ (Bili Chukki Halli Hakki) ಕಥೆ ಹೇಳೋದಕ್ಕೆ ಸಜ್ಜಾಗಿದ್ದಾರೆ. ಸದ್ಯ ಸೀತಾರಾಮ ಸೀರಿಯಲ್ ಮೂಲಕ ಮೋಡಿ ಮಾಡಿರೋ ಡಿಂಪಲ್ ಚೆಲುವೆ ವೈಷ್ಣವಿ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ‘ಮಹಿರ’ (Mahira) ಖ್ಯಾತಿಯ ನಿರ್ದೇಶಕ ಮಹೇಶ್ ಗೌಡ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇದನ್ನೂ ಓದಿ:ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೇ… : ಪ್ರಕಾಶ್‌ ರಾಜ್‌ ಮತ್ತೊಂದು ಟ್ವೀಟ್‌

    ‘ಮಹಿರ’ ಸಿನಿಮಾ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಗಮನ ಸೆಳೆದವರು ಮಹೇಶ್ ಗೌಡ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಮಾಡಿ ಪ್ರೇಕ್ಷಕರನ್ನ ರಂಜಿಸಿದ್ದ ಮಹೇಶ್ ಈ ಬಾರಿ ವಿಭಿನ್ನ ಬಗೆಯ ಕಥಾಹಂದರದೊಂದಿಗೆ ಪ್ರತ್ಯಕ್ಷರಾಗಿದ್ದಾರೆ. ತೊನ್ನು (ವಿಟಿಲಿಗೋ) ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಎಂಬ ಚಿತ್ರ ನಿರ್ದೇಶಿಸಿ, ನಟಿಸುತ್ತಿದ್ದಾರೆ. ಈ ಸಿನಿಮಾದ ಮುಹೂರ್ತ ಸಮಾರಂಭ ಬೆಂಗಳೂರಿನ ಸಿದ್ದಿ ವಿನಾಯಕ ದೇಗುಲದಲ್ಲಿ ನೆರವೇರಿದೆ. ಇದನ್ನೂ ಓದಿ:ಹಾಸ್ಯ ಅರ್ಥವಾಗದ ಹಾಸ್ಯಾಸ್ಪದರೇ… : ಪ್ರಕಾಶ್‌ ರಾಜ್‌ ಮತ್ತೊಂದು ಟ್ವೀಟ್‌

    ನಿರ್ದೇಶಕ ಮಹೇಶ್ ಗೌಡ (Mahesh Gowda) ತಮ್ಮಲ್ಲಿರುವ ವಿಟಿಲಿಗೋ ಸಮಸ್ಯೆಗೆ ಕಾಮಿಡಿ ಹಾಗೂ ರೊಮ್ಯಾಂಟಿಕ್ ಟಚ್ ಕೊಟ್ಟು ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಕಥೆ ರೂಪಿಸಿದ್ದಾರೆ. ಹೊನ್ನುಡಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ. ‘ಬಿಳಿ ಚುಕ್ಕಿ ಹಳ್ಳಿ ಹಕ್ಕಿ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಶಿವ ಎಂಬ ಪಾತ್ರಕ್ಕೆ ಮಹೇಶ್ ಗೌಡ ನಾಯಕನಾಗಿ ಜೀವ ತುಂಬಿದ್ದಾರೆ.  ಮಹೇಶ್‌ಗೆ ಜೋಡಿಯಾಗಿ ನಟಿ ವೈಷ್ಣವಿ, ಹಳ್ಳಿ ಹುಡುಗಿಯಾಗಿ ಕವಿತಾ ಪಾತ್ರದಲ್ಲಿ ನಟಿಸಿದ್ದಾರೆ.

    ಶಿವನ ಸಮಸ್ಯೆ ಗೊತ್ತಿದ್ರು ಬಾಳ ಸಂಗಾತಿಯಾಗಿ ಕವಿತಾ ಬರುತ್ತಾಳೆ. ಸಮಸ್ಯೆ ಗೊತ್ತಿದ್ರು ಕವಿತಾ ತನ್ನನ್ನ ಯಾಕೆ ಮದುವೆ ಆಗಿದ್ದಾಳೆ ಅನ್ನೋ ಗೊಂದಲದಲ್ಲಿರೋ ನಾಯಕನ ಕಥೆ. ಈ ಗೊಂದಲದ ಮಧ್ಯೆಯೇ ಸಾಗುವ ಒಂದು ಮುದ್ದಾದ ಲವ್ ಸ್ಟೋರಿ ಬಿಳಿ ಚುಕ್ಕಿ ಹಳ್ಳಿ ಹಕ್ಕಿ. ವರಮಹಾಲಕ್ಷ್ಮಿ ಆಶೀರ್ವಾದದೊಂದಿಗೆ ಇಂದಿನಿಂದ ಚಿತ್ರತಂಡ ಶೂಟಿಂಗ್ ಶುರು ಮಾಡಿದೆ. ಕಿರಣ್ ಸಿಎಚ್‌ಎಂ ಕ್ಯಾಮೆರಾ, ರಿಯೋ ಆಂಟೋನಿ ಸಂಗೀತ ಸಿನಿಮಾಕ್ಕಿದೆ. ಕೊಪ್ಪ, ಶೃಂಗೇರಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕಾಗಿ ಹಾಡಿದ ಚಂದನ್ ಹಾಗೂ ಮಂಗ್ಲಿ

    ಗಣೇಶ್ ನಟನೆಯ ‘ತ್ರಿಬಲ್ ರೈಡಿಂಗ್’ ಚಿತ್ರಕ್ಕಾಗಿ ಹಾಡಿದ ಚಂದನ್ ಹಾಗೂ ಮಂಗ್ಲಿ

    ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ತ್ರಿಬಲ್ ರೈಡಿಂಗ್” (Triple Riding) ಚಿತ್ರದ “ಯಟ್ಟಾ ಯಟ್ಟಾ” ಎಂಬ ಹಾಡು ಇತ್ತೀಚಿಗೆ ಬಿಡುಗಡೆಯಾಗಿ ಜನಪ್ರಿಯವಾಗಿದೆ. ಚಂದನ್ ಶೆಟ್ಟಿ ಈ ಹಾಡನ್ನು ಬರೆದಿದ್ದಾರೆ. ಚಂದನ್ ಶೆಟ್ಟಿ (Chandan Shetty) ಹಾಗೂ ಮಂಗ್ಲಿ(Mangli) ಹಾಡಿದ್ದಾರೆ. ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.  ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನಡೆಯಿತು.

    ನಾನು “ಮುಂಗಾರು‌ ಮಳೆ” ಸಮಯದಿಂದ ಗಣೇಶ್ (Ganesh) ಅವರನ್ನು ಬಲ್ಲೆ. ಆಗಿನಿಂದಲೂ ನನಗೆ ಅವರಿಗೊಂದು ಸಿನಿಮಾ ಮಾಡುವ ಆಸೆ. ಕಾಲ ಈಗ ಕೂಡಿ ಬಂದಿದೆ. “ತ್ರಿಬಲ್ ರೈಡಿಂಗ್” ಸ್ವಮೇಕ್ ಚಿತ್ರ. ಆಕ್ಷನ್, ಥ್ರಿಲ್ಲರ್, ಕಾಮಿಡಿ, ಸ್ವಲ್ಪ ಸೆಂಟಿಮೆಂಟ್ ಹಾಗೂ ಸಸ್ಪೆನ್ಸ್ ಎಲ್ಲವೂ ಇದೆ. ನಾಲ್ಕು  ಹಾಡುಗಳಿದೆ‌. ಆದರಲ್ಲಿ ಒಂದು ಹಾಡು ಇಂದು ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು (Song) ಒಂದಕ್ಕಿಂತ ಒಂದು ಚೆನ್ನಾಗಿದೆ. ಸಾಯಿಕಾರ್ತಿಕ್ ಈ ಸಂಗೀತ ನಿರ್ದೇಶಕರು. ಇಂದು ಬಿಡುಗಡೆಯಾಗಿರುವ ಈ ಹಾಡನ್ನು ಚಂದನ್ ಶೆಟ್ಟಿ ಹಾಗೂ ಮಂಗ್ಲಿ ಸುಮಧುರವಾಗಿ ಹಾಡಿದ್ದಾರೆ. ಅಂದುಕೊಂಡ ಹಾಗೆ ಸಿನಿಮಾ‌ ಮಾಡಿದ್ದೇವೆ. ಅದಕ್ಕೆ ಕಾರಣರಾದ ನಿರ್ಮಾಪಕ ರಾಮ್ ಗೋಪಾಲ್ ಅವರಿಗೆ ಧನ್ಯವಾದ. ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು ನಿರ್ದೇಶಕ ಮಹೇಶ್ ಗೌಡ.

    ನಿರ್ದೇಶಕ ಮಹೇಶ್ (Mahesh Gowda) ನನಗೆ “ಮುಂಗಾರು ಮಳೆ” ಯಿಂದ ಪರಿಚಯ. ಆ ಚಿತ್ರಕ್ಕೆ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಆಗಲೇ ನನಗೆ ಒಂದು ಕಥೆ ಮಾಡುತ್ತೀನಿ ಎಂದಿದ್ದರು‌. ಹದಿನಾಲ್ಕು ವರ್ಷಗಳ ನಂತರ ಕಥೆ ಮಾಡಿಕೊಂಡು ಬಂದರು. ಒಳ್ಳೆಯ ಪಾತ್ರ ಕೊಟ್ಟಿರುವುದಕ್ಕೆ ಧನ್ಯವಾದ. ಮೊದಲ ಬಾರಿ ನಿರ್ಮಾಣ ಮಾಡಿರುವ ರಾಮ್ ಗೋಪಾಲ್ ಅವರಿಗೆ ಒಳ್ಳೆಯದಾಗಲಿ. ಚಿತ್ರದ ಆರಂಭದಿಂದ ಕೊನೆಯವರೆಗೂ ಸಾಕಷ್ಟು ಟ್ವಿಸ್ಟು, ಟರ್ನ್ ಗಳಿರುತ್ತವೆ. ಇದೊಂದು ಪಕ್ಕಾ ಕಾಮಿಡಿ ಚಿತ್ರ. ಅದರಲ್ಲೂ ಚಿತ್ರದ ಕೊನೆಯ ಇಪ್ಪತ್ತು ನಿಮಿಷ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. “ತ್ರಿಬಲ್ ರೈಡಿಂಗ್” ಹೋದರೆ ಏನೆಲ್ಲಾ ತೊಂದರೆ ಆಗಬಹುದು ಎನ್ನುವುದನ್ನ ಇದರಲ್ಲಿ ನೋಡಬಹುದು.  ಈ ಚಿತ್ರದಲ್ಲಿ ಮೂವರು ನಾಯಕಿಯರು. ಅದಿತಿ ಪ್ರಭುದೇವ,  ಮೇಘ ಶೆಟ್ಟಿ ಹಾಗೂ ರಚನಾ ಇಂದರ್. ಎಲ್ಲರ ಅಭಿನಯ ತುಂಬಾ ಚೆನ್ನಾಗಿದೆ. ನೋಡಿ ಹರಸಿ ಎಂದರು ಗೋಲ್ಡನ್ ಸ್ಟಾರ್ ಗಣೇಶ್.

    ನನ್ನದು ಈ ಚಿತ್ರದಲ್ಲಿ ಡಾಕ್ಟರ್ ಪಾತ್ರ. ಗಣೇಶ್ ಸರ್ ಜೊತೆ ನನ್ನ ಮೊದಲ ಸಿನಿಮಾ. ಹಾಡು ಹಾಗೂ ಸಿನಿಮಾ ಎರಡು ಚೆನ್ನಾಗಿದೆ ಎಂದು ಮೇಘ ಶೆಟ್ಟಿ ತಿಳಿಸಿದರು. “ಲವ್ ಮಾಕ್ಟೇಲ್” ನಂತರ ನಾನು‌ ಒಪ್ಪಿಕೊಂಡ ಚಿತ್ರ ಇದು. ಹಠಮಾರಿ ಹೆಣ್ಣಿನ ಪಾತ್ರ ನನ್ನದು. ಏನಾದರೂ ಬೇಕೆಂದರೆ ಅದು ಬೇಕು ಎಂದು ಪಡೆದುಕೊಳ್ಳುತ್ತೇನೆ. ಒಳ್ಳೆಯ ಪಾತ್ರ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು ರಚನಾ ಇಂದರ್. ಇದನ್ನೂ ಓದಿ:ಮಸ್ತಾಗಿದೆ `ಕಬ್ಜ’ ಟೀಸರ್: ಹೇಗಿದೆ ಗೊತ್ತಾ ಉಪೇಂದ್ರ- ಸುದೀಪ್ ಜುಗಲ್‌ಬಂದಿ

    ಗಣೇಶ್ ಸರ್ ಗೆ ಈ ಹಿಂದೆ ಎರಡು ಹಾಡು ಹಾಡಿದೆ. ಇದು ಮೂರನೇ ಹಾಡು. ಸಾಯಿಕಾರ್ತಿಕ್ ತುಂಬಾ ಚೆನ್ನಾಗಿ ಸಂಗೀತ ನೀಡಿದ್ದಾರೆ. ಹಾಡು ಹಾಗೂ ಸಿನಿಮಾ ಎರಡೂ ಹಿಟ್ ಆಗಲಿ ಎಂದು ಚಂದನ್ ಶೆಟ್ಟಿ ಹಾರೈಸಿದರು. ಇದು ನನ್ನ ಮೊದಲ ನಿರ್ಮಾಣದ ಚಿತ್ರ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ರಾಮ್ ಗೋಪಾಲ್ ವೈ.ಎಂ. ಹಾಡುಗಳ ಹಾಗೂ ಹಾಡಿರುವವರ ಬಗ್ಗೆ ಸಂಗೀತ ನಿರ್ದೇಶಕ  ಸಾಯಿಕಾರ್ತಿಕ್ ಮಾತನಾಡಿದರು. ಚಿತ್ರತಂಡದ ಅನೇಕ ಸದಸ್ಯರು ತಮ್ಮ ಅನುಭವ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]