Tag: Mahesh Bhatt

  • ದೊಡ್ಮನೆಗೆ ಎಂಟ್ರಿ ಕೊಟ್ಟು ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ

    ದೊಡ್ಮನೆಗೆ ಎಂಟ್ರಿ ಕೊಟ್ಟು ಮಹಿಳಾ ಸ್ಪರ್ಧಿಗೆ ಕಿಸ್ ಮಾಡಿದ ಆಲಿಯಾ ತಂದೆ

    ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ (Mahesh Bhatt) ಅವರು ಸದಾ ಒಂದಲ್ಲಾ ಒಂದು ವಿವಾದ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಕೆರಿಯರ್ ಶುರುವಿನಿಂದಲೂ ವಿವಾದ ಜೊತೆಗೆಯೇ ಹೈಲೆಟ್ ಆಗಿದ್ದಾರೆ. ಈ ಹಿಂದೆ ಸುಶಾಂತ್ ಸಿಂಗ್ ಸಾಯಲು ಪರೋಕ್ಷವಾಗಿ ಮಹೇಶ್ ಭಟ್ ಅವರೇ ಕಾರಣ, ರಿಯಾಗೆ (Riya) ಡೀಲ್ ಕೊಟ್ಟಿದ್ದೇ ಇವರು ಅಂತೆಲ್ಲಾ ಸುದ್ದಿಯಾಗಿತ್ತು. ಈಗ ಒಟಿಟಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಇಲ್ಲಿ ಪುತ್ರಿ ಪೂಜಾ ಭಟ್ ಅವರನ್ನ ಮಾತನಾಡಿಸುವ ಬದಲು ಬೇರೇ ಸ್ಪರ್ಧಿಯ ಕೈ ಹಿಡಿದಿರೋದು ಹಲವು ಟೀಕೆಗೆ ದಾರಿ ಮಾಡಿ ಕೊಟ್ಟಿದೆ.

    ಮಹೇಶ್ ಭಟ್ ಪುತ್ರಿಯರಾದ ಪೂಜಾ ಭಟ್- ಆಲಿಯಾ ಭಟ್ (Alia Bhatt) ಬಾಲಿವುಡ್‌ನಲ್ಲಿ (Bollywood) ತಮ್ಮದೇ ಶೈಲಿಯಲ್ಲಿ ಸದ್ದು ಮಾಡ್ತಿದ್ದಾರೆ. ಆಲಿಯಾ ಭಟ್ ಟಾಪ್ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಮದುವೆಯಾದ್ಮೇಲೆಯೂ ನಾಯಕಿಯಾಗಿ ಛಾಪೂ ಮೂಡಿಸುತ್ತಿದ್ದಾರೆ. ಪೂಜಾ ಭಟ್ ಸದ್ಯ ಬಿಗ್ ಬಾಸ್ ಓಟಿಟಿ 2ನಲ್ಲಿ (Bigg Boss Ott 2) ಸ್ಪರ್ಧಿಯಾಗಿ ಮಿಂಚ್ತಿದ್ದಾರೆ. ಅಲ್ಲಿ ತನ್ನ ಖಾಸಗಿ ಜೀವನದ ಬಗ್ಗೆ ಡಿವೋರ್ಸ್ ಕುರಿತು ನಟಿ ಮನಬಿಚ್ಚಿ ಮಾತನಾಡಿದ್ದರು.

    ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ ಆರಂಭ ಆಗಿ ಹಲವು ವಾರ ಕಳೆದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆದ ಲಿಪ್ ಲಾಕ್ ದೃಶ್ಯದ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ತೆರಳಿ ಮನಿಶಾ ರಾಣಿ (Manisha Rani) ಕೈ ಅನ್ನು ಹಿಡಿದುಕೊಂಡು ಕುಳಿತಿದ್ದಾರೆ. ಬಳಿಕ ಅವರ ಕೈಗೆ ಮುತ್ತಿಟ್ಟಿದ್ದಾರೆ. ಅನೇಕರು ಈ ಬಗ್ಗೆ ತಕರಾರು ತೆಗೆದಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ

    ಈ ವಾರ ಫ್ಯಾಮಿಲಿ ವೀಕ್ ನಡೆಯುತ್ತಿದೆ. ಈ ಕಾರಣಕ್ಕೆ ಒಳಗಿರುವ ಸ್ಪರ್ಧಿಗಳ ಮನೆ ಮಂದಿ ದೊಡ್ಮನೆ ಪ್ರವೇಶಿಸುತ್ತಿದ್ದಾರೆ. ಮಹೇಶ್ ಭಟ್ ಮಗಳು ಪೂಜಾ ಭಟ್ ಕೂಡ ಬಿಗ್ ಬಾಸ್ ಮನೆ ಒಳಗೆ ಇದ್ದಾರೆ. ಹೀಗಾಗಿ, ಮಹೇಶ್ ಭಟ್ ಅವರು ದೊಡ್ಮನೆ ಒಳಗೆ ಬಂದಿದ್ದರು. ಅವರು ಮಗಳ ಜೊತೆ ಮಾತುಕತೆ ನಡೆಸುವ ಬದಲು ಸ್ಪರ್ಧಿ ಮನಿಶಾ ರಾಣಿ ಕೈ ಹಿಡಿದು ಕುಳಿತಿದ್ದಾರೆ.

    ಇದನ್ನು ಅನೇಕರು ಟೀಕೆ ಮಾಡಿದ್ದಾರೆ. ಮಹೇಶ್ ಭಟ್ ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹಲವರು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಮಹೇಶ್ ಅವರು ಮನಿಶಾ ರಾಣಿ ಮಗಳ ಸಮಾನರು. ಆ ರೀತಿಯಲ್ಲೇ ಮಹೇಶ್ ಭಟ್ ಅವರು ನೋಡಿರಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಂ ಮಹಿಳೆಯನ್ನು ಮದುವೆ ಆಗಲು ನಿರ್ದೇಶಕ ಮಹೇಶ್ ಭಟ್ ಮತಾಂತರಗೊಂಡಿದ್ದಾರೆ ಎಂದು ಕಂಗನಾ ಆರೋಪ

    ಮುಸ್ಲಿಂ ಮಹಿಳೆಯನ್ನು ಮದುವೆ ಆಗಲು ನಿರ್ದೇಶಕ ಮಹೇಶ್ ಭಟ್ ಮತಾಂತರಗೊಂಡಿದ್ದಾರೆ ಎಂದು ಕಂಗನಾ ಆರೋಪ

    ಬಾಲಿವುಡ್ ಖ್ಯಾತ ನಿರ್ದೇಶಕ ಮಹೇಶ್ ಭಟ್ ವಿರುದ್ಧ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೆ ಗುಡುಗಿದ್ದಾರೆ. ಹಿರಿಯ ನಿರ್ದೇಶಕರ ಮೇಲೆ ನಿರಂತರವಾಗಿ ಆರೋಪ ಮಾಡುತ್ತಲೇ ಬಂದಿರುವ ರಣಾವತ್, ಈ ಬಾರಿ ಮತಾಂತರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಮಹೇಶ್ ಭಟ್ ಅವರು ತಮ್ಮ ಎರಡನೇ ಪತ್ನಿ ಸೋನಿ ರಜ್ದಾನ್ ಮದುವೆಯಾಗಲು ಅವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಅವರು ಅಸ್ಲಂ ಎಂದೂ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದಿದ್ದಾರೆ.

    ಮಹೇಶ್ ಭಟ್ ಅವರ ಹಳೆ ವಿಡಿಯೋವೊಂದನ್ನು ಶೇರ್ ಮಾಡಿರುವ ಕಂಗನಾ ರಣಾವತ್, ತಮ್ಮ ಮೂಲ ಹೆಸರನ್ನು ಬಚ್ಚಿಟ್ಟಿದ್ದು ಯಾಕೆ? ಅಸ್ಲಂ ಎಂದು ಯಾಕೆ ಕರೆದುಕೊಳ್ಳುತ್ತಿಲ್ಲ. ಮತಾಂತರಗೊಂಡಿರುವ ಧರ್ಮವನ್ನು ಹೀಗೆ ಅವಮಾನಿಸಬಾರದು ಎಂದೂ ಅವರು ಹೇಳಿದ್ದಾರೆ. ಕೂಡಲೇ ತಮ್ಮ ನಿಜ ಹೆಸರನ್ನು ಜನರ ಮುಂದೆ ಇಡಲಿ ಎಂದಿದ್ದಾರೆ ಕಂಗನಾ. ಇದನ್ನೂ ಓದಿ:ವಿಜಯ್ ಸೇತುಪತಿ ಅಭಿಮಾನಿಗಳಿಗೆ ಡಬಲ್ ಧಮಾಕಾ: ‘ವಿಡುದಲೈ’ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್

    ಕಂಗನಾ ಈ ರೀತಿಯಾಗಿ ಮಹೇಶ್ ಭಟ್ ಬಗ್ಗೆ ಬರೆದುಕೊಳ್ಳುತ್ತಿದ್ದಂತೆಯೇ ಅನೇಕರು ನಟಿಯ ಮಾತಿನ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಇದನ್ನು ನಿಜವೆಂದು ಸಾಬೀತು ಪಡಿಸಿ ಎಂದೂ ಕೇಳಿದ್ದಾರೆ. ಪದೇ ಪದೇ ಮಹೇಶ್ ಭಟ್ ಬಗ್ಗೆ ಮಾತನಾಡುತ್ತಿರುವುದಕ್ಕೂ ಕೆಲವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಕಂಗನಾ ಮತ್ತು ಭಟ್ ನಡುವಿನ ಮುಸುಕಿನ ಗುದ್ದಾಟ ಹಲವು ವರ್ಷಗಳಿಂದ ನಡೆಯುತ್ತಿದ್ದು, ಸದ್ಯಕ್ಕೆ ಅದು ನಿಲ್ಲುವಂತೆ ಕಾಣುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

  • ರಿಯಾಗೆ ನಾನೆಂದೂ ಸುಶಾಂತ್‍ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್

    ರಿಯಾಗೆ ನಾನೆಂದೂ ಸುಶಾಂತ್‍ನನ್ನು ಬಿಟ್ಟು ಬರೋಕೆ ಹೇಳಿರಲಿಲ್ಲ: ಮಹೇಶ್ ಭಟ್

    – ನಾನು ಸುಶಾಂತ್‍ನನ್ನು ಭೇಟಿ ಮಾಡಿದ್ದೇ ಎರಡು ಬಾರಿ
    – ನಾನು ಸ್ವಜನಪಕ್ಷಪಾತವನ್ನು ಬೆಂಬಲಿಸುವುದಿಲ್ಲ

    ಮುಂಬೈ: ನಟಿ ರಿಯಾ ಚಕ್ರವರ್ತಿಗೆ ನಾನು ಮೃತ ನಟ ಸುಶಾಂತ್ ಸಿಂಗ್ ರಜಪೂತ್‍ನನ್ನು ಬಿಟ್ಟು ಬಾ ಎಂದು ಹೇಳಿಲ್ಲ ಎಂದು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಹೇಳಿದ್ದಾರೆ.

    ಸುಶಾಂತ್ ಆಹ್ಮಹತ್ಯೆ ಮಾಡಿಕೊಂಡು ಒಂದು ತಿಂಗಳು ಆಗಿದ್ದು, ಅವರ ಸಾವಿನ ಸುತ್ತ ಹಲವು ಅನುಮಾನ ಪ್ರಶ್ನೆ ಎದ್ದಿದೆ. ನಿನ್ನೆ ಸುಶಾಂತ್ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಈಗ ಮುಂಬೈ ಪೊಲೀಸರು ಮಹೇಶ್ ಭಟ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದು, ನಾನು ಸುಶಾಂತ್‍ನನ್ನು ಕೇವಲ ಎರಡು ಬಾರಿಯಷ್ಟೇ ಭೇಟಿ ಮಾಡಿದ್ದೇನೆ ಎಂದು ಮಹೇಶ್ ಭಟ್ ಹೇಳಿದ್ದಾರೆ.

    ನಾನು ಸ್ವಜನಪಕ್ಷಪಾತವನ್ನು ಬೆಂಬಲಿಸುವುದಿಲ್ಲ. ಬಹಳಷ್ಟು ಹೊಸಬರಿಗೆ ನನ್ನ ಸಿನಿಮಾನದಲ್ಲಿ ಚಾನ್ಸ್ ಕೊಟ್ಟಿದ್ದೇನೆ. 2018ರಲ್ಲಿ ಮತ್ತು ಇತ್ತೀಚೆಗೆ 2020ರಲ್ಲಿ ಎರಡೇ ಬಾರಿ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿ ಮಾಡಿದ್ದೇನೆ. ಜೊತೆಗೆ ನಟಿ ರಿಯಾ ಚಕ್ರವರ್ತಿಗೆ ನೀನು ಸುಶಾಂತ್ ಸಿಂಗ್ ರಜಪೂತ್ ಅವರನ್ನು ಬಿಟ್ಟು ಬಾ ಎಂದು ಹೇಳಿಲ್ಲ. ಸುಮ್ಮನೇ ನನ್ನ ಮೇಲೆ ಗೂಬೆ ಕುರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾರೆ. ಇದನ್ನೂ ಓದಿ: ಸುಶಾಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸ್ತಿದ್ದ ರಿಯಾ

    ಈ ಹಿಂದೆ ಮಾತನಾಡಿದ್ದ ಮಹಾರಾಷ್ಟ್ರದ ಗೃಹಮಂತ್ರಿ ಅನಿಲ್ ದೇಶ್‍ಮುಖ್, ನಾವು ಸುಶಾಂತ್ ಸಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸುವುದಿಲ್ಲ. ನಾವೇ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು. ಜೊತೆಗೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹರ್‌ ಮ್ಯಾನೇಜರ್ ಅವರನ್ನು ಕರೆಸಿ ವಿಚಾರಣೆ ಮಾಡುತ್ತೇವೆ. ಅವಶ್ಯಕತೆ ಬಿದ್ದರೆ ಕರಣ್ ಜೋಹರ್ ಅವರನ್ನು ಠಾಣೆಗೆ ಕರೆಸಿ ತನಿಖೆ ಮಾಡುತ್ತೇವೆ ಎಂದು ಹೇಳಿದ್ದರು.

    ಸುಶಾಂತ್ ಸಿಂಗ್ ರಜಪೂತ್ ಕಳೆದ ಜೂನ್ 14ರಂದು ಮುಂಬೈನ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಅವರ ಸಾವಿನ ಸುತ್ತ ಹಲವಾರು ಅನುಮಾನಗಳು ಮೂಡಿದ್ದವು. ಈಗ ಸುಶಾಂತ್ ಸಾವನ್ನಪ್ಪಿ ಒಂದು ತಿಂಗಳ ನಂತರ ಅವರ ತಂದೆ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ನೀಡಿದ್ದಾರೆ. ಜೊತೆಗೆ ಪಾಟ್ನಾ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ರಿಯಾ ತನ್ನ ಮಗನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ರಿಯಾ ನನ್ನ ಮಗನಿಗೆ ಓವರ್ ಡೋಸ್ ಮಾತ್ರೆ ಕೊಟ್ಟಿದ್ದಾಳೆ: ಸುಶಾಂತ್ ತಂದೆ ಗಂಭೀರ ಆರೋಪ

    ಈಗಾಗಲೇ ನಟಿ ರಿಯಾ ಚಕ್ರವರ್ತಿಯವರನ್ನು ಮುಂಬೈ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರು ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದಾರೆ. ಬಾಲಿವುಡ್ ಮೂವಿ ಮಾಫಿಯಾ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ನಟಿ ಕಂಗನಾ ರಣಾವತ್ ಅವರು ಆರೋಪಿಸಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಅವರಿಗೂ ಸಮನ್ಸ್ ನೀಡಿದ್ದು, ಅವರನ್ನು ಕೂಡ ವಿಚಾರಣೆ ಮಾಡಲಾಗುತ್ತದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

  • ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್‌ ಮ್ಯಾನೇಜರ್‌ಗೆ ಸಮನ್ಸ್

    ಸುಶಾಂತ್ ಪ್ರಕರಣ – ಮಹೇಶ್ ಭಟ್, ಕರಣ್ ಜೋಹರ್‌ ಮ್ಯಾನೇಜರ್‌ಗೆ ಸಮನ್ಸ್

    ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಮಹೇಶ್ ಭಟ್ ಮತ್ತು ಕರಣ್ ಜೋಹರ್‌ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ.

    ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯಲ್ಲಿ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಮತ್ತು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಹೇಳಿದ್ದಾರೆ. ಇತ್ತೀಚೆಗೆ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಮತ್ತು ನಟಿ ಕಂಗನಾ ರಣಾವತ್‍ಗೂ ಕೂಡ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಅನಿಲ್ ದೇಶ್ಮುಖ್, ನಾಳೆ ಮಹೇಶ್ ಭಟ್ ಅವರನ್ನು ವಿಚಾರಣೆಗೆ ಕರೆಯಲಾಗುವುದು ಮತ್ತು ನಂತರ ನಾವು ಕರಣ್ ಜೋಹರ್ ಅವರ ವ್ಯವಸ್ಥಾಪಕರನ್ನು ಸಹ ಕರೆಯುತ್ತೇವೆ. ಅಗತ್ಯವಿದ್ದರೆ ಕರಣ್ ಜೋಹರ್ ಅವರನ್ನು ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ವಿಚಾರಣೆಗೆ ಕರೆಯಬಹುದು. ಜೊತೆಗೆ ಧರ್ಮ ಪ್ರೊಡಕ್ಷನ್ಸ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಪೂರ್ವಾ ಮೆಹ್ತಾ ಅವರನ್ನು ವಿಚಾರಣೆ ಮಾಡಬಹುದು ಎಂದು ಹೇಳಿದ್ದಾರೆ.

    ಇತ್ತೀಚೆಗೆ ಸುಶಾಂತ್ ಸಿಂಗ್ ಅವರ ಪ್ರೇಯಸಿ ರಿಯಾ ಚಕ್ರವರ್ತಿ, ಸುಶಾಂತ್ ಅವರ ಆಹ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನೀಡಬೇಕು. ಈ ಪ್ರಕರಣ ಯಾವುದೇ ಲೋಪದೋಷವಿಲ್ಲದೇ ತನಿಖೆ ಆಗಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಈ ವಿಚಾರವಾಗಿ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್, ಸುಶಾಂತ್ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ನಮ್ಮ ಮುಂಬೈ ಪೊಲೀಸರೇ ತನಿಖೆ ಮಾಡುತ್ತಾರೆ ಎಂದು ಹೇಳಿದ್ದರು.

    ಸುಶಾಂತ್ ಸಿಂಗ್ ಅವರ ಆತ್ಮಹತ್ಯೆ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು. ಸುಶಾಂತ್ ಬಾಲಿವುಡ್‍ನಲ್ಲಿರುವ ಸ್ವಜನಪಕ್ಷಪಾತಕ್ಕೆ ಬಲಿಯಾಗಿದ್ದರೆ ಎಂದು ನೆಟ್ಟಿಗರು ಕೆಲ ಸ್ಟಾರ್ ಗಳನ್ನು ಮತ್ತು ಸ್ಟಾರ್ ಮಕ್ಕಳನ್ನು ಟ್ರೋಲ್ ಮಾಡಿದ್ದರು. ಇದರ ಜೊತೆಗೆ ನಟಿ ಕಂಗನಾ ರಣಾವತ್ ಕೂಡ ಬಾಲಿವುಡ್‍ನಲ್ಲಿರುವ ಮೂವಿ ಮಾಫಿಯಾಗೆ ಸುಶಾಂತ್ ಸಿಂಗ್ ಬಲಿಯಾಗಿದ್ದಾರೆ. ಬಾಲಿವುಡ್ ಸುಶಾಂತ್ ಅವರನ್ನು ಪ್ಲಾನ್ ಮಾಡಿ ಮರ್ಡರ್ ಮಾಡಿದೆ ಎಂದು ಆರೋಪಿಸಿದ್ದರು. ಇದಾದ ನಂತರ ಮುಂಬೈ ಪೊಲೀಸರು ಕಂಗನಾಗೂ ಸಮನ್ಸ್ ನೀಡಿದ್ದರು.

    ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಅವರು ತಮ್ಮ ಮುಂಬೈ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಆತ್ಮಹತ್ಯೆ ನಂತರ ಅವರ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ನಡುವೆ ನಟಿ ಕಂಗನಾ ರಣಾವತ್ ಅವರು ಸುಶಾಂತ್ ಅವರದ್ದು ಆತ್ಮಹತ್ಯೆಯಲ್ಲ, ಅದೊಂದು ಯೋಜಿತ ಕೊಲೆ ಎಂದು ಆರೋಪ ಮಾಡಿದ್ದರು.