Tag: Mahesh Bhat

  • ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂದಿನ ವರ್ಷ ಶುರುವಾಗುತ್ತಾ ಸಡಕ್-2?

    ಮುಂಬೈ: 90ರ ದಶಕದಲ್ಲಿ ತೆರೆ ಕಂಡಿದ್ದ ಸಂಜಯ್ ದತ್ ನಾಯಕನಾಗಿದ್ದ ಸಡಕ್ ಚಿತ್ರ ಬಾಲಿವುಡ್‍ನ ಹಿಟ್ ಚಿತ್ರವಾಗಿ ದಾಖಲಾಗಿತ್ತು. ಕಥೆಯಿಂದ ಮೊದಲ್ಗೊಂಡು ಹಾಡಿನವರೆಗೆ ಎಲ್ಲವೂ ಜನಮನ ಸೆಳೆದಿತ್ತು. ಈ ಚಿತ್ರದಿಂದಲೇ ಸಂಜಯ್ ದತ್ ನಾಯಕನಾಗಿ ಬಾಲಿವುಡ್‍ನಲ್ಲಿ ಮತ್ತಷ್ಟು ಬೇಡಿಕೆ ಗಳಿಸಿಕೊಂಡಿದ್ದೀಗ ಇತಿಹಾಸ.

    ಇದೀಗ ಸಡಕ್ 2 ಚಿತ್ರ ಕಾರ್ಯಾರಂಭ ಮಾಡುವ ಬಗ್ಗೆ ಬಾಲಿವುಡ್ ತುಂಬಾ ಗುಲ್ಲೆದ್ದಿದೆ. ಇದು ನಿರ್ದೇಶಕ ಮಹೇಶ್ ಭಟ್ ಮತ್ತು ಮುಖೇಶ್ ಭಟ್ ಅವರುಗಳ ಕನಸಿನ ಪ್ರಾಜೆಕ್ಟ್. ಕಳೆದ ವರ್ಷವೇ ಈ ಚಿತ್ರದ ಬಗ್ಗೆ ಇವರಿಬ್ಬರೂ ಹೇಳಿಕೊಂಡಿದ್ದರು. ಆದರೆ ವರ್ಷಗಳ ಕಾಲ ಇದಕ್ಕಾಗಿ ತಯಾರಿ ನಡೆಸಿ ಬೇರೆ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿದ್ದ ಭಟ್ ಬ್ರದರ್ಸ್ ಇದೀಗ ತಮ್ಮ ಕನಸಿನ ಸಡಕ್ ವಿಚಾರವಾಗಿ ಕಾರ್ಯಾರಂಭ ಮಾಡಿದಂತಿದೆ!

    ಸಡಕ್ 2 ಚಿತ್ರವನ್ನು 2019ರ ಆರಂಭದಲ್ಲಿಯೇ ಆರಂಭಿಸಲು ಭಟ್ ಬ್ರದರ್ಸ್ ನಿರ್ಧರಿಸಿದ್ದಾರೆ. ಆ ಸಮಯದಲ್ಲಿ ಸಮಯ ಹೊಂದಿಸುವ ಭರವಸೆ ಸಂಜಯ್ ದತ್ ಕಡೆಯಿಂದಲೂ ಸಿಕ್ಕಿದೆ. ತೊಂಭತ್ತರ ದಶಕದಲ್ಲಿ ಸಡಕ್ ಚಿತ್ರ ಸೃಷ್ಟಿಸಿದಂಥಾದ್ದೇ ದಾಖಲೆಯನ್ನು ಮತ್ತೊಮ್ಮೆ ಸೃಷ್ಟಿಸುವ ಸಲುವಾಗಿ ಭಟ್ ಬ್ರದರ್ಸ್ ಅಣಿಯಾಗಲಾರಂಭಿಸಿದ್ದಾರೆ.

    ಮಹೇಶ್ ಭಟ್ ಅವರ ಹೋಂ ಬ್ಯಾನರಿನಲ್ಲಿಯೇ ಈ ಚಿತ್ರ ತಯಾರಾಗಲಿದೆಯಂತೆ. ಈ ಚಿತ್ರದಲ್ಲಿ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ನಟಿಸೋದು ಪಕ್ಕಾ. ಅದ್ಯಾವ ಚಿತ್ರವೇ ಇದ್ದರೂ ಆಲಿಯಾ ತನ್ನ ಹೋಂ ಬ್ಯಾನರಿನ ಈ ಚಿತ್ರದಲ್ಲಿ ನಟಿಸಲು ತಯಾರಾಗಿದ್ದಾಳಂತೆ!.

  • ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ: ಆಕ್ರೋಶ ಹೊರ ಹಾಕಿದ ಬಾಲಿವುಡ್ ಗಣ್ಯರು

    ಮುಂಬೈ: ಮಂಗಳವಾರ ರಾತ್ರಿ ಮನೆಯ ಬಾಗಿಲು ತೆಗೆಯುತ್ತಿದ್ದಾಗ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಿದ್ದ ಘಟನೆ ಇಡೀ ದೇಶ ಬೆಚ್ಚಿಬೀಳುವಂತೆ ಆಗಿದೆ. ಇದಕ್ಕೆ ಬಾಲಿವುಡ್ ಮಂದಿ ಪ್ರತಿಕ್ರಿಯಿಸಿ ಟ್ವಿಟ್ಟರ್ ನಲ್ಲಿ ಖಂಡಿಸಿ ಕಂಬನಿ ಮಿಡಿದಿದ್ದಾರೆ.

    ಬಾಲಿವುಡ್ ನ ಸೋನಮ್ ಕಪೂರ್, ಫರಾನ್ ಅಕ್ತರ್, ಶಬಾನಾ ಅಜ್ಮಿ, ಶೇಖರ್ ಕಪೂರ್, ಮಹೇಶ್ ಭಟ್ ಹಾಗೂ ವಿಶಾಲ್ ದದ್ಲಾನಿ ಟ್ವಿಟ್ಟರ್ ನಲ್ಲಿ ಹತ್ಯೆಯನ್ನು ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ಹೆಸರಲ್ಲಿ ಈ ಘಟನೆಗಳನ್ನು ನಡೆಸುತ್ತಿದ್ದಾರೆ. ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಸಾವಿಗೆ ನ್ಯಾಯ ಸಿಗಲಿ ಎಂದು ಬಾಲಿವುಡ್ ಪ್ರತಿಕ್ರಿಸಿದ್ದಾರೆ.

    ಗೌರಿ ಲಂಕೇಶ್ ಹತ್ಯೆಯ ಕುರಿತು ಕೆಲವು ಟ್ವೀಟ್ ಗಳು ಇಲ್ಲಿವೆ