Tag: Mahendra Singh Dhoni

  • ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ಜಾರ್ಖಂಡ್ ವಿಧಾನಸಭಾ ಚುನಾವಣೆ ರಾಯಭಾರಿಯಾಗಿ ಲೆಜೆಂಡ್ ಕ್ರಿಕೆಟಿಗ ಎಂ.ಎಸ್ ಧೋನಿ ನೇಮಕ

    ರಾಂಚಿ: ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆ (Jharkhand Assembly Election) ರಾಯಭಾರಿಯಾಗಿ (Brand Ambassador) ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರನ್ನು (Mahendra Singh Dhoni) ಚುನಾವಣಾ ಆಯೋಗ (Election Commission) ಆಯ್ಕೆ ಮಾಡಿದೆ.

    ನ.13 ಹಾಗೂ ನ.20ರಂದು ಎರಡು ಹಂತಗಳಲ್ಲಿ ನಡೆಯಲಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ರಾಯಭಾರಿಯಾಗಿ ನೇಮಕ ಮಾಡಲಾಗಿದೆ.ಇದನ್ನೂ ಓದಿ: ರಸ್ತೆ ದಾಟುವಾಗ ಬೈಕ್ ಡಿಕ್ಕಿ – ಚಿಕಿತ್ಸೆ ಫಲಕಾರಿಯಾಗದೇ ಉಪತಹಶೀಲ್ದಾರ್ ಸಾವು

    ಜಾರ್ಖಂಡ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್‌ ಮುಖ್ಯ ಚುನಾವಣಾಧಿಕಾರಿ ಕೆ.ರವಿಕುಮಾರ್ ಮಾತನಾಡಿ, ವಿಧಾನಸಭಾ ಚುನಾವಣೆಗೆ ಧೋನಿ ತಮ್ಮ ಫೋಟೋವನ್ನು ಬಳಸಲು ಚುನಾವಣಾ ಆಯೋಗಕ್ಕೆ ಒಪ್ಪಿಗೆ ನೀಡಿದ್ದಾರೆ. ಜೊತೆಗೆ ಇನ್ಯಾವುದೇ ವಿವರ ಬೇಕಾದಲ್ಲಿ ಅವರ ಒಪ್ಪಿಗೆಯ ಮೇರೆಗೆ ತೆಗೆದುಕೊಳ್ಳಲಾಗುವುದು. SWEEP (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಶನ್ ಮತ್ತು ಎಲೆಕ್ಟೋರಲ್ ಪಾರ್ಟಿಸಿಪೇಷನ್) ಕಾರ್ಯಕ್ರಮದ ಅಡಿಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲು ಧೋನಿ ಭಾಗಿಯಾಗಲಿದ್ದಾರೆ. ವಿಶೇಷವಾಗಿ ಮತದಾರರಲ್ಲಿ ಮತ ಚಲಾಯಿಸುವಂತೆ ಪ್ರೋತ್ಸಾಹಿಸುತ್ತಾರೆ ಎಂದು ಚುನಾವಣಾ ಆಯೋಗ ಆಶಿಸುತ್ತದೆ ಎಂದರು.

    ನ.13 ರಂದು ಮೊದಲ ಹಂತದಲ್ಲಿ ಒಟ್ಟು 43 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈಗಾಗಲೇ ಶುಕ್ರವಾರ (ಅ.25ರಂದು) ನಾಮಪತ್ರ ಸಲ್ಲಿಕೆ ಪೂರ್ಣಗೊಂಡಿದೆ. ನಾಮಪತ್ರ ಸಲ್ಲಿಸಿದವರ ಪೈಕಿ ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಅವರು ಸರೈಕೆಲಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

    ಆಲ್ ಜಾರ್ಖಂಡ್ ಸ್ಟೂಡೆಂಟ್ಸ್ ಯೂನಿಯನ್ (AJSU) ಪಕ್ಷದ ಅಧ್ಯಕ್ಷ ಮತ್ತು ಜಾರ್ಖಂಡ್‌ನ ಮಾಜಿ ಉಪಮುಖ್ಯಮಂತ್ರಿ ಸುದೇಶ್ ಮಹತೋ ಅವರು ಸಿಲ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದು, ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಜೆಎಸ್‌ಯು, ಜನತಾ ದಳ (United) ಮತ್ತು ಲೋಕ ಜನಶಕ್ತಿ ಪಕ್ಷ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಲಿದೆ. ಬಿಜೆಪಿ 68, ಎಜೆಎಸ್‌ಯು 10, ಜೆಡಿಯು 2 ಮತ್ತು ಎಲ್‌ಜೆಪಿ 1 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

    ಒಟ್ಟು 81 ಸ್ಥಾನಗಳಿಗೆ ನ.13 ಮತ್ತು ನ.20 ರಂದು ಎರಡು ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ನ.23 ರಂದು ಫಲಿತಾಂಶ ಪ್ರಕಟಿಸಲಿದೆ.ಇದನ್ನೂ ಓದಿ: ಜೆಇಇ ಪರೀಕ್ಷೆ ಪಾಸಾಗದ್ದಕ್ಕೆ 7ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ – ಡೆತ್‌ನೋಟ್‌ನಲ್ಲಿ ಏನಿತ್ತು?

  • ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ಅತ್ತ ಭಾರತ-ನ್ಯೂಜಿಲೆಂಡ್ ಹೈವೋಲ್ಟೇಜ್‌‌ ಸೆಮಿಫೈನಲ್‌.. ಇತ್ತ ಪೂರ್ವಜರ ಮನೆಯಲ್ಲಿ ಪತ್ನಿ ಜೊತೆ ಧೋನಿ

    ನವದೆಹಲಿ: ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಭಾರತ-ನ್ಯೂಜಿಲೆಂಡ್‌ ಹೈವೋಲ್ಟೇಜ್‌ ಸೆಮಿಫೈನಲ್‌ ಪಂದ್ಯ ವೀಕ್ಷಣೆಗೆ ಮಾಜಿ ಕ್ಯಾಪ್ಟನ್‌ ಧೋನಿ (M.S.Dhoni) ಬರುತ್ತಾರೆಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಮಾಹಿ ಅನುಪಸ್ಥಿತಿ ಅಭಿಮಾನಿಗಳ ಊಹೆಯನ್ನು ಸುಳ್ಳಾಗಿಸಿದೆ. ಇತ್ತ ಹೈವೋಲ್ಟೇಜ್‌ ಪಂದ್ಯ ನಡೆಯುತ್ತಿದ್ದರೆ, ಅತ್ತ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್‌ ಪತ್ನಿಯೊಂದಿಗೆ ತಮ್ಮ ಪೂರ್ವಜರ ಮನೆಯಲ್ಲಿ ಸಮಯ ಕಳೆದಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಬುಧವಾರ, ಭಾರತವು ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯ ಆಡಿದ್ದ ವೇಳೆ, ಅನೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಎಂ.ಎಸ್‌.ಧೋನಿಯನ್ನು ನೋಡುವ ಉತ್ಸುಕದಲ್ಲಿದ್ದರು. ಆದರೆ, ನೆಚ್ಚಿನ ಪ್ರೀತಿಯ ಕೂಲ್‌ ಕ್ಯಾಪ್ಟನ್‌ ಎಂದೇ ಖ್ಯಾತಿ ಗಳಿಸಿದ್ದ ಧೋನಿ ತನ್ನ ಪತ್ನಿಯೊಂದಿಗೆ ಉತ್ತರಾಖಂಡದ ತನ್ನ ಪೂರ್ವಜರ ಹಳ್ಳಿಗೆ ಹೋಗಿದ್ದರು. ಇದನ್ನೂ ಓದಿ: ಇನ್ಮುಂದೆ ನಿಮ್ಮ ಅದ್ಭುತ ಪ್ರತಿಭೆ ಪ್ರದರ್ಶಿಸಬಹುದು – ಬಾಬರ್‌ ಆಜಂ ಹೊಗಳಿದ ಬೆಂಗ್ಳೂರು ಮೂಲದ ರಚಿನ್‌

    ಧೋನಿ ಪತ್ನಿ ಸಾಕ್ಷಿ ಸಿಂಗ್ ಅವರು, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿರುವ ಸುಂದರವಾದ ಲ್ವಾಲಿ ಗ್ರಾಮದಲ್ಲಿ ಇಬ್ಬರೂ ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ”ಧೋನಿ ಅವರೊಂದಿಗೆ ಈವೆಂಟ್‌ಫುಲ್‌ ಡೇ! ಇಲ್ಲಿ ಅನೇಕರಿದ್ದಾರೆ ನನ್ನನ್ನು ನಂಬಿರಿ” ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಮೊದಲ ಚಿತ್ರದಲ್ಲಿ, ದಂಪತಿ ಲ್ವಾಲಿಯಲ್ಲಿ ವರ್ಣರಂಜಿತ ಮನೆಯ ಹೊಸ್ತಿಲಲ್ಲಿ ಕುಳಿತಿದ್ದಾರೆ. ಸಾಕ್ಷಿ ಅವರು ಮನೆಯನ್ನು ತೋರಿಸುವ ವೀಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.

    ನವೆಂಬರ್ 15 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಸಾಕ್ಷಿಯವರು ಈ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ಗೆ 11 ಲಕ್ಷಕ್ಕೂ ಹೆಚ್ಚು ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‌ಗಳು ಬಂದಿವೆ. ಪೋಸ್ಟ್‌ ಹಾಕಿ ಧೋನಿಯನ್ನು ತೋರಿಸಿದ್ದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ಧೋನಿ ಪತ್ನಿ ಸಾಕ್ಷಿಗೆ ಅನೇಕ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. ಉತ್ತರಾಖಂಡದ ಜನತೆಗೆ ಧೋನಿ ದಂಪತಿಗೆ ಸ್ವಾಗತ ಕೋರಿದ್ದಾರೆ. ಇದನ್ನೂ ಓದಿ: ಭಾರತ ಕ್ರಿಕೆಟ್ ತಂಡ ಫೈನಲ್ ಗೆದ್ದರೆ ಬೆತ್ತಲಾಗುವೆ ಎಂದ ನಟಿ ರೇಖಾ

     

    View this post on Instagram

     

    A post shared by Sakshi Singh (@sakshisingh_r)

    ಫ್ಯಾನ್‌ ಒಬ್ಬರು, ”ಧನ್ಯವಾದಗಳು ಸಾಕ್ಷಿ. ಧೋನಿ ಅವರು ತಮಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ ನೀವು ಅವರನ್ನು ಮತ್ತೆ ನೋಡುವಂತೆ ಮಾಡುತ್ತಿದ್ದೀರಿ” ಎಂದು ಪ್ರತಿಕ್ರಿಯಿಸಿದ್ದಾರೆ. “ಉತ್ತರಾಖಂಡಕ್ಕೆ ನಿಮಗೆ ಸ್ವಾಗತ” ಅಂತ ಮತ್ತೊಬ್ಬರು ಪೋಸ್ಟ್‌ ಹಾಕಿದ್ದಾರೆ.

    ಸೋಷಿಯಲ್‌ ಮೀಡಿಯಾದಲ್ಲಿ ಈಚೆಗೆ ಟ್ರೆಂಡಿಂಗ್‌ ಆಗಿರುವ, ”ಸೋ ಬ್ಯೂಟಿಫುಲ್‌ ಸೋ ಎಲಿಗ್ಯಾಂಟ್‌ ಜಸ್ಟ್‌ ಲುಕಿಂಗ್‌ ಲೈಕ್‌ ಎ ವಾವ್ಹ್‌..” ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ”ಇಂದು ನೀಲಿ ಬಣ್ಣದಲ್ಲಿ ಮಾಹಿ ಕಾಣೆಯಾಗಿದ್ದಾರೆ” ಭಾರತೀಯ ಖ್ಯಾತ ಆಟಗಾರನನ್ನು ಮಿಸ್‌ ಮಾಡಿಕೊಂಡಿದ್ದೇವೆ ಎಂಬಂತೆ ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಾತ್ರಿ ನಾನು ಭಾರತ – ನ್ಯೂಜಿಲೆಂಡ್‌ ಸೆಮಿಫೈನಲ್‌ ವೀಕ್ಷಿಸಿದ್ದೆ: ಮೈಕ್ರೋಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

    ಎಂ.ಎಸ್‌.ಧೋನಿ ಅವರು ಆಗಸ್ಟ್ 2020 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅತ್ಯಂತ ಪ್ರೀತಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ 16 ವರ್ಷಗಳ ಕಾಲ ಸುಪ್ರಸಿದ್ಧ ವೃತ್ತಿಜೀವನ ನಡೆಸಿದ್ದರು. ತಮ್ಮ ವೃತ್ತಿ ಬದುಕಿನಲ್ಲಿ ಅವರು ಭಾರತೀಯ ಕ್ರಿಕೆಟ್ ತಂಡವನ್ನು ಹಲವಾರು ಸಾಂಪ್ರದಾಯಿಕ ಗೆಲುವುಗಳೊಂದಿಗೆ ಮುನ್ನಡೆಸಿದ್ದರು.

  • ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಧೋನಿ ಭೇಟಿಯ ಹಿಂದೆ ರಾಮ್ ಚರಣ್ ಅಭಿಮಾನಿಗಳ ಲೆಕ್ಕಾಚಾರ

    ಭಾರತೀಯ ಖ್ಯಾತ ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಮತ್ತು ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ನಿನ್ನೆಯಷ್ಟೇ ಭೇಟಿ  (Meet)ಮಾಡಿದ್ದಾರೆ. ಇಬ್ಬರು ದಿಗ್ಗಜರ ಈ ಭೇಟಿ ಸಾಕಷ್ಟು ಕುತೂಹಲ ಮತ್ತು ಹತ್ತಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಧೋನಿ ಅವರು ನಿರ್ಮಾಪಕರಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದರಿಂದ ಭೇಟಿ ಮಹತ್ವ ಕೂಡ ಪಡೆದುಕೊಂಡಿದೆ.

    ಈಗಾಗಲೇ ಧೋನಿ ನಿರ್ಮಾಣ ಸಂಸ್ಥೆಯು ಒಂದು ಸಿನಿಮಾವನ್ನು ತಯಾರು ಮಾಡಿ, ಅದನ್ನು ಬಿಡುಗಡೆ ಕೂಡ ಮಾಡಿದೆ. ಆ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹಾಗಾಗಿ ಹಲವಾರು ಸಿನಿಮಾಗಳನ್ನು ಮಾಡುವುದಾಗಿ ಧೋನಿ ಪತ್ನಿ ಸಾಕ್ಷಿ ಘೋಷಣೆ ಮಾಡಿದ್ದರು. ಈ ಬ್ಯಾನರ್ ನಲ್ಲೇ ಧೋನಿ ಕೂಡ ನಟಿಸಬೇಕು ಎನ್ನುವ ಆಸೆಯನ್ನೂ ವ್ಯಕ್ತ ಪಡಿಸಿದ್ದರು. ಈ ನಡುವೆ ಧೋನಿ ಮತ್ತು ರಾಮ್ ಚರಣ್ ಭೇಟಿ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕುತೂಹಲ ಮೂಡಿಸುವ ‘ವೇಷ’ ಸಿನಿಮಾದ ಟ್ರೈಲರ್ ರಿಲೀಸ್

    ಮೂಲಗಳ ಪ್ರಕಾರ ಧೋನಿ ನಿರ್ಮಾಣ ಸಂಸ್ಥೆಯಲ್ಲಿ ರಾಮ್ ಚರಣ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್‍ಗಾಗಿಯೇ ವಿಶೇಷ ಕಥೆಯೊಂದನ್ನು ನಿರ್ಮಾಣ ಸಂಸ್ಥೆ ಹುಡುಕಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜೋಡಿ ಮುಂದೆ ಸಿನಿಮಾ ಮಾಡುವ ವಿಚಾರವನ್ನು ಫೋಟೋ ರಟ್ಟು ಮಾಡಿದೆ.

     

    ಧೋನಿಯನ್ನು ಭೇಟಿ ಮಾಡಿ ನಂತರ ಆ ಫೋಟೋಗಳನ್ನು ರಾಮ್ ಚರಣ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಭೇಟಿಯ ವಿಚಾರವನ್ನು ಮಾತ್ರ ಅವರು ತಿಳಿಸಿಲ್ಲ. ಹಾಗಂತ ಅಭಿಮಾನಿಗಳು ಸುಮ್ಮನೆ ಕೂತಿಲ್ಲ. ಈ ಭೇಟಿಯ ಗುಟ್ಟನ್ನು ಕೆದಕುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೆನ್ನೈ ಟೀಮ್ ಗೆದ್ದ ಖುಷಿಯಲ್ಲಿ ಸಾಕ್ಷಿ ಧೋನಿ ಜೊತೆ ವಿಘ್ನೇಶ್ ಶಿವನ್ ಪೋಸ್

    ಚೆನ್ನೈ ಟೀಮ್ ಗೆದ್ದ ಖುಷಿಯಲ್ಲಿ ಸಾಕ್ಷಿ ಧೋನಿ ಜೊತೆ ವಿಘ್ನೇಶ್ ಶಿವನ್ ಪೋಸ್

    ಕಾಲಿವುಡ್ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರು IPLನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಟೀಮ್ ಗೆದ್ದ ಖುಷಿಯಲ್ಲಿದ್ದಾರೆ. ಈ ಖುಷಿಯನ್ನು ಧೋನಿ ಪತ್ನಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಿರ್ದೇಶಕ ವಿಘ್ನೇಶ್ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Vignesh Shivan (@wikkiofficial)

    ತಮಿಳಿನ ಸಾಕಷ್ಟು ಸಿನಿಮಾಗಳಿಗೆ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿರುವ ವಿಘ್ನೇಶ್ ಶಿವನ್ ಅವರು ಸದ್ಯ ಹೊಸ ಸಿನಿಮಾ ಸ್ಕ್ರೀಪ್ಟ್‌ ಕಡೆ ಗಮನ ವಹಿಸುತ್ತಿದ್ದಾರೆ. ನಟ ಅಜಿತ್‌ಗೆ ನಿರ್ದೇಶನ ಮಾಡೋದ್ದಕ್ಕೆ ಎಲ್ಲಾ ಫೈನಲ್ ಆಗಿತ್ತು. ಕೊನೆಯ ಹಂತದಲ್ಲಿ ಕಥೆ ಬದಲಾವಣೆ ಕೇಳಿದ್ದರಿಂದ ವಿಘ್ನೇಶ್, ಅಜಿತ್ ಸಿನಿಮಾವನ್ನು ಕೈಬಿಟ್ಟರು. ಇದನ್ನೂ ಓದಿ:ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ: ನಟ ಅರ್ಜುನ್ ಗರಂ

     

    View this post on Instagram

     

    A post shared by Vignesh Shivan (@wikkiofficial)

    ವಿಘ್ನೇಶ್ ಶಿವನ್ ಅವರು ಕ್ರಿಕೆಟ್ ವಿಚಾರದಲ್ಲಿ ಸಿಕ್ಕಾಪಟ್ಟೆ ಕ್ರೇಜಿ. ಇದೀಗ ನಿನ್ನೆ (ಮೇ.29) ನಡೆದ ಮ್ಯಾಚ್‌ನಲ್ಲಿ ಗುಜರಾತ್ ಟೈಟಾನ್ ವಿರುದ್ಧ ಚೆನ್ನೈಸೂಪರ್ ಕಿಂಗ್ಸ್ ತಂಡ ಗೆದ್ದಿದ್ದಾರೆ. ವಿಘ್ನೇಶ್ ನೆಚ್ಚಿನ ಟೀಮ್ ಚೆನ್ನೈ ಗೆದ್ದಿದ್ದಕ್ಕೆ ಸಂಭ್ರಮಿಸಿದ್ದಾರೆ. ಇದೇ ಖುಷಿಯಲ್ಲಿ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ (Sakshi Dhoni) ಜೊತೆ ವಿಘ್ನೇಶ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Vignesh Shivan (@wikkiofficial)

    ಕೆಲದಿನಗಳ ಹಿಂದೆ ಪತ್ನಿ ನಯನತಾರಾ ಜೊತೆ ವಿಘ್ನೇಶ್ ಶಿವನ್ IPL ಮ್ಯಾಚ್ ವೀಕ್ಷಿಸಿದ್ದರು. ಆದರೆ ಬಾರಿ ನಯನತಾರಾ ಮಿಸ್ಸಿಂಗ್. ಸ್ನೇಹಿತರ ಜೊತೆ ವಿಘ್ನೇಶ್ ಶಿವನ್ ಕ್ರಿಕೆಟ್ ಮ್ಯಾಚ್ ನೋಡಿ ಎಂಜಾಯ್ ಮಾಡಿದ್ದಾರೆ.

  • ಸೆಟ್ಟೇರಿತು ಕೂಲ್ ಕ್ಯಾಪ್ಟನ್ ಧೋನಿ ನಿರ್ಮಾಣದ ಚೊಚ್ಚಲ ಚಿತ್ರ

    ಸೆಟ್ಟೇರಿತು ಕೂಲ್ ಕ್ಯಾಪ್ಟನ್ ಧೋನಿ ನಿರ್ಮಾಣದ ಚೊಚ್ಚಲ ಚಿತ್ರ

    ಹೇಂದ್ರ ಸಿಂಗ್ ಧೋನಿ (Mahendra Singh Dhoni) ಹಾಗೂ ಸಾಕ್ಷಿ (Sakshi) ‘ಧೋನಿ ಎಂಟರ್ಟೈನ್ಮೆಂಟ್ಸ್’ ಮೂಲಕ ಸಿನಿಮಾ ನಿರ್ಮಾಣಕ್ಕೆ ಮುಂದಾಗಿರೋದು ಗೊತ್ತೇ ಇದೆ. ಇಂದು ‘ಧೋನಿ ಎಂಟರ್ಟೈನ್ಮೆಂಟ್ಸ್’ ಮೊದಲ ತಮಿಳು ಸಿನಿಮಾ ‘ಲೆಟ್ಸ್ ಗೆಟ್ ಮ್ಯಾರೀಡ್’ (Let’s Get Married)  ಮುಹೂರ್ತ ನೆರವೇರಿದೆ. ಮುಹೂರ್ತ ಕಾರ್ಯಕ್ರಮಕ್ಕೆ ಸಾಕ್ಷಿ ಹಾಗೂ ಹಲವು ಸೆಲೆಬ್ರಿಟಿಗಳು ಭಾಗಿಯಾಗಿ ಚಿತ್ರ ತಂಡಕ್ಕೆ ಶುಭ ಹಾರೈಸಿದ್ರು.

    ‘ಲೆಟ್ಸ್ ಗೆಟ್ ಮ್ಯಾರೀಡ್’ ಚಿತ್ರಕ್ಕೆ  ರಮೇಶ್ ತಮಿಲ್ಮನಿ (Ramesh Tamilmani) ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ನಿರ್ದೇಶನದ ಮೊದಲ ಸಿನಿಮಾವಾಗಿದೆ. ನಿರ್ದೇಶನದ ಜೊತೆಗೆ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ತಾವೇ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹರೀಶ್ ಕಲ್ಯಾಣ್, ನಾದಿಯಾ ಹಾಗೂ ಇವಾನ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದು, ಖ್ಯಾತ ಕಾಮಿಡಿಯನ್ ಯೋಗಿ ಬಾಬು ಒಳಗೊಂಡ ತಾರಾಗಣವಿದೆ. ಇದನ್ನೂ ಓದಿ: ಮುನಿಸು ಮರೆತು ಮತ್ತೆ ಒಂದಾದ್ರಾ ಮೋಹಕತಾರೆ ರಮ್ಯಾ- ಜಗ್ಗೇಶ್?

    ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಬ್ಜೆಕ್ಟ್ ಒಳಗೊಂಡ ಸಿನಿಮಾವಾಗಿದ್ದು, ಸಾಕ್ಷಿ ಧೋನಿ ಚಿತ್ರದ ಕಥೆ ಹಾಗೂ ಕಾನ್ಸೆಪ್ಟ್ ಹಿಂದಿನ ಶಕ್ತಿಯಾಗಿದ್ದಾರೆ. ಮುಂದಿನ‌ ದಿನಗಳಲ್ಲಿ ಉತ್ತಮ ಕಂಟೆಂಟ್ ವುಳ್ಳ ಇನ್ನೂ ಹೆಚ್ಚಿನ ಸಿನಿಮಾಗಳನ್ನು ನಿರ್ಮಾಣ ಮಾಡಲು ನಾವು ಯೋಜನೆ ಹಾಕಿಕೊಂಡಿದ್ದೇವೆ ಎಂದು ಸಾಕ್ಷಿ ತಿಳಿಸಿದ್ದಾರೆ. ನಿರ್ದೇಶಕ ರಮೇಶ್ ತಮಿಲ್ಮನಿ ಮಾತನಾಡಿ ನಾವು ಇಂದು ಈ ಜರ್ನಿ ಆರಂಭಿಸಲು ತುಂಬಾ ಉತ್ಸುಕರಾಗಿದ್ದೇವೆ. ಮನರಂಜನಾತ್ಮಕ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ಇಡೀ ಫ್ಯಾಮಿಲಿ ಕುಳಿತು ಎಂಜಾಯ್ ಮಾಡಬಹುದು ಎಂಬ ಭರವಸೆ ನಾನು ನೀಡುತ್ತೇನೆ ಎಂದು ತಿಳಿಸಿದ್ರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಮಲ್ಟಿಸ್ಟಾರ್ ಸಿನಿಮಾಗೆ ಹಣ ಹೂಡಲಿದ್ದಾರೆ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ

    ಭಾರತದ ಕ್ರಿಕೆಟ್ ತಂಡ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಈಗಾಗಲೇ ಹಲವು ಉದ್ಯಮಗಳಲ್ಲಿ ಹಣ ಹೂಡಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದೀಗ ಸಿನಿಮಾ (Cinema) ಕ್ಷೇತ್ರಕ್ಕೂ ಅವರು ಕಾಲಿಟ್ಟಿದ್ದು, ದಕ್ಷಿಣದ ಸಿನಿಮಾಗಳತ್ತ ಒಲವು ತೋರಿದ್ದಾರೆ. ಈಗಾಗಲೇ ತಮ್ಮದೇ ಪ್ರೊಡಕ್ಷನ್ (Production) ಹೌಸ್ ಶುರು ಮಾಡಿರುವ ಧೋನಿ, ಮೊದಲು ತಮಿಳು ಚಿತ್ರಕ್ಕೆ ಹಣ ಹಾಕಲಿದ್ದಾರಂತೆ.

    ಧೋನಿ ಸಿನಿಮಾ ರಂಗಕ್ಕೆ ಬರುತ್ತಾರೆ ಎನ್ನುವುದು ಹಲವು ದಿನಗಳಿಂದ ಕೇಳಿ ಬರುತ್ತಿರುವ ಸುದ್ದಿ. ಇದೀಗ ಆ ಸುದ್ದಿ ಪಕ್ಕಾ ಆಗಿದ್ದು, ತಮ್ಮ ಚೊಚ್ಚಲು ನಿರ್ಮಾಣದ ಚಿತ್ರದಲ್ಲಿ ಇಬ್ಬರು ಸ್ಟಾರ್ ನಟರು ಇರಲಿದ್ದಾರೆ ಎಂದು ಗೊತ್ತಾಗಿದೆ. ಈಗಾಗಲೇ ದಕ್ಷಿಣದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿರುವ ಇಬ್ಬರು ಕಲಾವಿದರ ಜೊತೆ ಧೋನಿ ಮಾತನಾಡಿದ್ದು, ಅವರ ಹೆಸರನ್ನು ಮಾತ್ರ ಬಹಿರಂಗಗೊಳಿಸಿಲ್ಲ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ಈ ಹಿಂದೆ ನಯನತಾರಾ ಸಿನಿಮಾಗಾಗಿ ಧೋನಿ ಹಣ ಹೂಡಲಿದ್ದಾರೆ ಎಂದು ಹೇಳಲಾಗಿತ್ತು. ಅದೊಂದು ಮಹಿಳಾ ಪ್ರಧಾನ ಸಿನಿಮಾ ಎನ್ನುವ ಮಾಹಿತಿಯೂ ಇತ್ತು. ಆದರೆ, ಆ ಸಿನಿಮಾ ಡ್ರಾಪ್ ಆದಂತೆ ಕಾಣುತ್ತಿದೆ. ಅಥವಾ ಅದು ಗಾಸಿಪ್ ಆಗಿರಬಹುದು.  ಇದೀಗ ಪಕ್ಕಾ ಸುದ್ದಿ ಬಂದಿದ್ದು, ಮಲ್ಟಿಸ್ಟಾರ್ ಸಿನಿಮಾ ಮೂಲಕ ಧೋನಿ ನಿರ್ಮಾಪಕರಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅಧಿಕೃತವಾಗಿಯೇ ಕೆಲವು ಮಾಹಿತಿಗಳನ್ನು ಅವರು ಹಂಚಿಕೊಳ್ಳಲಿದ್ದಾರಂತೆ.

    Live Tv
    [brid partner=56869869 player=32851 video=960834 autoplay=true]

  • ಐಪಿಎಲ್‍ನಲ್ಲಿ ತವರು ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ ಅಶ್ವಿನ್

    ಐಪಿಎಲ್‍ನಲ್ಲಿ ತವರು ತಂಡದ ಪರ ಆಡುವ ಇಂಗಿತ ವ್ಯಕ್ತಪಡಿಸಿದ ಅಶ್ವಿನ್

    ಚೆನ್ನೈ: ಟೀಂ ಇಂಡಿಯಾದ ಯಶಸ್ವಿ ಸ್ಪಿನ್ನರ್ ಆರ್.ಅಶ್ವಿನ್ 15ನೇ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ನಾನು ಮತ್ತೆ ತವರು ತಂಡದ ಪರ ಆಡಲು ಇಚ್ಚಿಸುತ್ತೇನೆ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.

    ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚುಹರಿಸಿ ಬಳಿಕ ಟೀಂ ಇಂಡಿಯಾಗೆ ಪಾರ್ದಾಪಣೆ ಮಾಡಿದ ಅಶ್ವಿನ್ ಮೂಲತಃ ಚೆನ್ನೈನವರು. 2010 ರಿಂದ ಐಪಿಎಲ್‍ನ ಯಶಸ್ವಿ ತಂಡಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದ ಅಶ್ವಿನ್ ಆ ಬಳಿಕ ಹರಾಜಿನಲ್ಲಿ ಚೆನ್ನೈ ತಂಡ ಬಿಟ್ಟು ಡೆಲ್ಲಿ ತಂಡ ಸೇರಿಕೊಂಡಿದ್ದರು. ಇದೀಗ 15ನೇ ಆವೃತ್ತಿ ಐಪಿಎಲ್‍ಗೂ ಮುನ್ನ ಡೆಲ್ಲಿ ತಂಡ ಅಶ್ವಿನ್‍ರನ್ನು ಹರಾಜಿಗೆ ಬಿಟ್ಟು ಕೊಟ್ಟಿದೆ. ಇದನ್ನೂ ಓದಿ: ರವಿಶಾಸ್ತ್ರಿ ಹೇಳಿಕೆ ನನ್ನನ್ನು ಟೀಂ ಇಂಡಿಯಾದ ಬಸ್‍ನಿಂದ ತಳ್ಳಿದಂತಾಗಿತ್ತು: ಅಶ್ವಿನ್

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡುವ ವೇಳೆ ಐಪಿಎಲ್‍ನಲ್ಲಿ ಯಾವ ತಂಡದ ಪರ ಆಡಲು ಬಯಸುತ್ತೀರಿ ಎಂದು ಅಶ್ವಿನ್‍ಗೆ ಪ್ರಶ್ನೆ ಕೇಳಲಾಗಿದೆ ಈ ವೇಳೆ ಅಶ್ವಿನ್, ನನಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವುದು ತುಂಬಾ ಇಷ್ಟ. ಅದು ನನಗೆ ಶಾಲೆ ಇದ್ದಂತೆ ಎಲ್‍ಕೆಜಿ, ಯುಕೆಜಿ, ಪ್ರಾಥಮಿಕ ಶಿಕ್ಷಣವನ್ನು ಸಿಎಸ್‍ಕೆ ಪರ ಪಡೆದುಕೊಂಡಿದ್ದೇನೆ. ಆ ಬಳಿಕ ಬೇರೆ ಶಾಲೆಗೆ ಹೋಗಿದ್ದೆ. ಇದೀಗ ಮತ್ತೆ ಮನೆಯಂಗಳದ ಶಾಲೆಯಂತಿರುವ ಸಿಎಸ್‍ಕೆ ಪರ ಆಡಲು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಉತ್ತಮ ಆಯ್ಕೆ: ಎಂಎಸ್‌ಕೆ ಪ್ರಸಾದ್

    ಸಿಎಸ್‍ಕೆ ಪರ ಆಡುವುದಲ್ಲದೆ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆಯು ಮಾತನಾಡಿದ್ದು, ನಾನು ಧೋನಿಯ ಮಾತನ್ನು ಇಷ್ಟಪಡುತ್ತೇನೆ, ಅವರು ಯಾವತ್ತು ಹೇಳುತ್ತಿರುತ್ತಾರೆ ನಾವು ಆಡುವ ಸನ್ನಿವೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು, ಯಾವುದೇ ಅಂಜಿಕೆ ಇರಬಾರದು. ಪ್ರತಿಕ್ರಿಯೆ ಸ್ಪಷ್ಟವಾಗಿರಬೇಕು ಎಂದಿದ್ದರು ಎಂದು ಧೋನಿಯೊಂದಿಗೆ ಮತ್ತೊಮ್ಮೆ ಕಾಣಿಸಿಕೊಳ್ಳುವ ಆಸೆ ಹೇಳಿಕೊಂಡಿದ್ದಾರೆ.

    2009 ರಿಂದ 2015ರ ವರಗೆ ಸಿಎಸ್‍ಕೆ ಪರ ಆಡಿದ ಅಶ್ವಿನ್ ಐಪಿಎಲ್ ಮತ್ತು ಚಾಂಪಿಯನ್ಸ್ ಲೀಗ್ ಸಹಿತ ಒಟ್ಟು 120 ಪಂದ್ಯಗಳಿಂದ 120 ವಿಕೆಟ್ ಪಡೆದಿದ್ದಾರೆ. ಇದೀಗ ಅಶ್ವಿನ್ ಸಿಎಸ್‍ಕೆ ಪರ ಮತ್ತೊಮ್ಮೆ ಘರ್ಜಿಸಬೇಕೆಂದಿರುವುದನ್ನು ಕೇಳಿರುವ ಸಿಎಸ್‍ಕೆ ಫ್ರಾಂಚೈಸಿ ಹರಾಜಿನಲ್ಲಿ ಅಶ್ವಿನ್‍ಗೆ ಮಣೆಹಾಕುವುದೇ ಎಂಬ ಕುತೂಹಲ ಮನೆಮಾಡಿದೆ. ಇದನ್ನೂ ಓದಿ: ಐಪಿಎಲ್ 2022 – ಯಾರು ಯಾವ ತಂಡಕ್ಕೆ ನಾಯಕ? – ಇಲ್ಲಿದೆ ಪೂರ್ಣ ವಿವರ

  • ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

    ರೋಹಿತ್ ಶರ್ಮಾಗೆ ಕ್ಯಾಪ್ಟನ್ಸಿ ಜೊತೆಗೆ ಮಹತ್ವದ ಜವಾಬ್ದಾರಿ ಹೊರಿಸಿದ ಬಿಸಿಸಿಐ

    ಮುಂಬೈ: ಟೀಂ ಇಂಡಿಯಾದ ನಿಗದಿತ ಓವರ್‌ಗಳ ತಂಡದ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ರೋಹಿತ್ ಶರ್ಮಾರಿಗೆ ನಾಯಕತ್ವ ಹೊರಿಸಿದೆ. ನಾಯಕತ್ವದ ಜೊತೆಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ಬಿಸಿಸಿಐ ರೋಹಿತ್‍ಗೆ ನೀಡಿದೆ.

    ಟೀಂ ಇಂಡಿಯಾದ ಮೂರು ಮಾದರಿ ಕ್ರಿಕೆಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ನಿರ್ವಾಹಿಸುತ್ತಿದ್ದರು ಟಿ20 ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವವನ್ನು ವಿರಾಟ್ ತ್ಯಜಿಸಿದ್ದರು. ಬಳಿಕ ಇದೀಗ ಬಿಸಿಸಿಐ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸಿ ಟೆಸ್ಟ್ ತಂಡದ ನಾಯಕತ್ವದಲ್ಲಿ ಮಾತ್ರ ಮುಂದುವರಿಸಿದೆ. ಅಲ್ಲದೇ ಟಿ20 ಮತ್ತು ಏಕದಿನ ತಂಡದ ನಾಯಕರನ್ನಾಗಿ ರೋಹಿತ್ ಶರ್ಮಾರನ್ನು ನೇಮಿಸಿದೆ. ರೋಹಿತ್ ಶರ್ಮಾರನ್ನು ನಾಯಕನನ್ನಾಗಿ ನೇಮಿಸುವ ಜೊತೆಗೆ ಒಂದು ಟಾಸ್ಕ್ ಕೂಡ ಬಿಸಿಸಿಐ ರೋಹಿತ್‍ಗೆ ನೀಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಇವರು ಯಾರೆಂದು ಗುರುತಿಸಿ- ಹಳೇ ಫೋಟೋ ಹಂಚಿಕೊಂಡು ಹರ್ಭಜನ್ ಪ್ರಶ್ನೆ

    ರೋಹಿತ್ ಶರ್ಮಾ ಏಕದಿನ ತಂಡದ ನಾಯಕತ್ವದ ಜೊತೆಗೆ ಭವಿಷ್ಯದ ಟೀಂ ಇಂಡಿಯಾ ನಾಯಕನನ್ನು ಬೆಳೆಸುವ ಜವಾಬ್ದಾರಿ ಕೂಡ ನೀಡಲಾಗಿದೆ ಎಂದು ವರದಿಯಾಗಿದೆ. ರೋಹಿತ್ ಶರ್ಮಾರಿಗೆ ಇದೀಗ 34 ವರ್ಷ ವಯಸ್ಸು ಇವರ ಬಳಿಕ ತಂಡದ ನಾಯಕತ್ವವನ್ನು ನಿರ್ವಹಿಸಲು ಸಮರ್ಥ ಆಟಗಾರನನ್ನು ಈಗಿನಿಂದಲೇ ಬೆಳೆಸಬೇಕೆಂದು ಬಿಸಿಸಿಐ ರೋಹಿತ್‍ಗೆ ಸೂಚಿಸಿದೆ. ಮುಂದಿನ ನಾಯಕರ ಪಟ್ಟಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್, ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಹೆಸರು ಮುಂಚೂಣಿಯಲ್ಲಿದೆ. ಇದನ್ನೂ ಓದಿ: ರೋಹಿತ್ ಟೀಂ ಇಂಡಿಯಾದ ನಾಯಕರಾದ ಬಳಿಕ ಸಿಗುತ್ತಿರುವ ವೇತನ ಎಷ್ಟು ಗೊತ್ತಾ?

    ಕೆ.ಎಲ್ ರಾಹುಲ್‍ಗೆ ಇದೀಗ 29 ವರ್ಷ ವಯಸ್ಸು ಇವರೊಂದಿಗೆ ಇವರಿಗಿಂತ ಕಡಿಮೆ ವಯಸ್ಸಿನ ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ಬಿಸಿಸಿಐ ಹೆಚ್ಚಿನ ಒಲವು ಹೊಂದಿದ್ದು ಇವರನ್ನು ಮುಂದಿನ ನಾಯಕರನ್ನಾಗಿ ಬೆಳೆಸುವ ಜವಾಬ್ದಾರಿಯನ್ನು ರೋಹಿತ್‍ಗೆ ಬಿಸಿಸಿಐ ಹೊರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ನಾಯಕತ್ವದಿಂದ ಕೆಳಗಿಳಿಸಿ ಕೊಹ್ಲಿಗೆ ಧನ್ಯವಾದ ತಿಳಿಸಿದ ಬಿಸಿಸಿಐ

    ಈ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾದಲ್ಲಿ ನಾಯಕನಾಗಿ ಇರುವಾಗಲೇ ತಮಗೆ ಉತ್ತರಾಧಿಕಾರಿಯಾಗಿ ವಿರಾಟ್ ಕೊಹ್ಲಿಯನ್ನು ಬೆಳೆಸಿದ್ದರು. ಇದೀಗ ರೋಹಿತ್ ಕೂಡ ಮಾಹಿಯಂತೆ ಇನ್ನೋರ್ವ ನಾಯಕನನ್ನು ಬೆಳೆಸುವ ಮಹತ್ವದ ಹೊಣೆಹೊತ್ತಿದ್ದಾರೆ. ಇದನ್ನು ಯಾವರೀತಿ ನಿರ್ವಹಿಸುತ್ತಾರೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ.

  • ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ

    ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಚ್ಚರಿಯ ನುಡಿಗಳನ್ನು ಆಡಿದ್ದಾರೆ. ಧೋನಿ ಬಗ್ಗೆ ವಿರಾಟ್ ಈ ರೀತಿ ಹೇಳುತ್ತಿದ್ದಂತೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಕೊಹ್ಲಿಗೆ, ಅಭಿಮಾನಿಯೊಬ್ಬರು ಧೋನಿ ಮತ್ತು ನಿಮ್ಮ ನಡುವಿನ ಬಾಂಧವ್ಯವನ್ನು ಎರಡು ಪದಗಳಲ್ಲಿ ಹೇಳಿ ಎಂದು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರಿಸಿ ಕೊಹ್ಲಿ, ಧೋನಿ ಎಂದರೆ ನಂಬಿಕೆ ಮತ್ತು ಗೌರವ ಎಂದಿದ್ದಾರೆ. ಹೀಗೆ ಧೋನಿ ಬಗ್ಗೆ ವಿರಾಟ್ ಹೇಳುತ್ತಿದ್ದಂತೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ. ಇದನ್ನೂ ಓದಿ: ರೆಟ್ರೋ ಶೈಲಿಯ ಜೆರ್ಸಿಯಲ್ಲಿ ಮಿಂಚುತ್ತಿದ್ದಾರೆ ಟೀಂ ಇಂಡಿಯಾ ಆಟಗಾರರು

    ಬಳಿಕ ಅಭಿಮಾನಿಗಳು ನೀವು ಆರ್​ಸಿಬಿ ತಂಡದಲ್ಲಿ ಒಬ್ಬ ಅತ್ಯುತ್ತಮ ಆಟಗಾರ, ಒಬ್ಬ ಬುದ್ಧಿವಂತ ಆಟಗಾರ ಮತ್ತು ಒಬ್ಬ ನಾಚಿಕೆ ಸ್ವಭಾವದ ಆಟಗಾರರನ್ನು ಗುರುತಿಸಬೇಕು ಎಂದಿದ್ದಾರೆ ಇದಕ್ಕೆ ಕೊಹ್ಲಿ, ಅತ್ಯುತ್ತಮ ಆಟಗಾರ ಚಹಲ್, ಬುದ್ಧಿವಂತ ಆಟಗಾರ ಎಬಿಡಿ, ನಾಚಿಕೆ ಸ್ವಭಾವದ ಆಟಗಾರ ಕೈಲ್ ಜೇಮಿಸನ್ ಎಂದು ಉತ್ತರಿದ್ದಾರೆ. ಇದನ್ನೂ ಓದಿ: ಧೋನಿ, ಕೊಹ್ಲಿಯ ಬಗ್ಗೆ ಒಂದೇ ಪದದಲ್ಲಿ ಉತ್ತರಿಸಿದ ಸೂರ್ಯಕುಮಾರ್ ಯಾದವ್

    ಇದಾದ ಬಳಿಕ ಒಂದು ವೇಳೆ ಹಿಂದೆಯೇ ಬಂದಿದ್ದರೆ ಬೌಲರ್‍ ಗಳ ಪೈಕಿ ಯಾರು ನಿಮಗೆ ತೊಂದರೆ ಕೊಡುತ್ತಿದ್ದರು ಎಂಬ ಪ್ರಶ್ನೆಗೆ ಪಾಕಿಸ್ತಾನ ತಂಡದ ವೇಗದ ಬೌಲರ್ ವಾಸಿಮ್ ಅಕ್ರಮ್‍ಗೆ ಎಂದಿದ್ದಾರೆ. ನಿಮಗೆ ಕನ್ನಡ ಮಾತನಾಡಲು ಮತ್ತು ಅರ್ಥವಾಗುತ್ತದೆಯೇ ಎಂದು ಕೇಳಿದಾಗ ಸ್ವಲ್ಪ ಸ್ವಲ್ಪ ಮಾತನಾಡುತ್ತೇನೆ. ಆದರೆ ಅರ್ಥವಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಐಪಿಎಲ್ ದ್ವಿತೀಯಾರ್ಧದಲ್ಲಿ ಧೋನಿ ಬ್ಯಾಟ್‍ನಿಂದ ರನ್ ಮಳೆ ಸುರಿಯಲಿದೆ: ದೀಪಕ್ ಚಹರ್

    ಈ ಮೂಲಕ ವಿರಾಟ್ ಕೊಹ್ಲಿ ಅಭಿಮಾನಿಗಳ ಪ್ರಶ್ನೆಗೆ ಸ್ಮಾರ್ಟ್ ಆಗಿ ಉತ್ತರಿಸುವ ಮೂಲಕ ಸಮಯ ಕಳೆದಿದ್ದಾರೆ. ಅಭಿಮಾನಿಗಳು ಕೂಡ ವಿರಾಟ್ ಉತ್ತರ ನೋಡಿ ಖುಷಿ ಪಟ್ಟಿದ್ದಾರೆ.

  • ಮೊದಲ ಪಂದ್ಯದಲ್ಲೇ  ಧೋನಿಗೆ 12 ಲಕ್ಷ ರೂ ದಂಡ

    ಮೊದಲ ಪಂದ್ಯದಲ್ಲೇ ಧೋನಿಗೆ 12 ಲಕ್ಷ ರೂ ದಂಡ

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರಿಗೆ 14ನೇ ಆವೃತ್ತಿಯ ಐಪಿಎಲ್‍ನ ತನ್ನ ಮೊದಲ ಪಂದ್ಯದಲ್ಲೇ 12 ಲಕ್ಷ ರೂಪಾಯಿ ದಂಡ ಬಿದ್ದಿದೆ.

    ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಇಳಿದ ಚೆನ್ನೈ ತಂಡ ನಿಗದಿತ ಓವರ್‍ ಗಳಲ್ಲಿ 7 ವಿಕೆಟ್ ಕಳೆದುಕೊಂಡು 188 ರನ್ ಗಳಿಸಿತ್ತು. ಚೆನ್ನೈ ನೀಡಿದ 189 ರನ್ ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 18.4 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು 190ರನ್ ಬಾರಿಸಿ ಗೆಲುವಿನ ನಗೆ ಬೀರಿತು.

    ಪಂದ್ಯ ಮುಗಿದ ಬಳಿಕ ಪಂದ್ಯ ಸೋತ ಚೆನ್ನೈ ತಂಡದ ನಾಯಕನಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಓವರ್ ಎಸೆಯಲು ವಿಫಲವಾದ ಕಾರಣ ಧೋನಿಗೆ ಐಪಿಎಲ್‍ನ ನೀತಿ ಸಂಹಿತೆ 12 ಲಕ್ಷ ರೂಪಾಯಿ ದಂಡ ವಿಧಿಸಿದೆ.

    ಕನಿಷ್ಠ-ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‍ನ ನೀತಿ ಸಂಹಿತೆ ಅಡಿಯಲ್ಲಿ ಚೆನ್ನೈ ತಂಡದ ನಾಯಕ ಧೋನಿ ಅವರಿಗೆ 12 ಲಕ್ಷ ರೂಪಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

    ನಿಯಮದ ಪ್ರಕಾರ ಎರಡು ತಂಡಗಳು ಒಂದು ಇನ್ನಿಂಗ್ಸ್ ನ್ನು 90 ನಿಮಿಷಗಳಲ್ಲಿ ಮುಗಿಸಬೇಕು ಇದರಲ್ಲಿ 2 ಟೈಮ್ ಔಟ್ ಕೂಡ ಕೂಡಿರುತ್ತದೆ. ಆದರೆ ಕಳೆದ ಪಂದ್ಯದಲ್ಲಿ ಮೈದಾನದಲ್ಲಿ ಮಂಜು ಇದ್ದ ಕಾರಣ ನಿಗದಿತ ಸಮಯದಲ್ಲಿ ಓವರ್ ಗಳನ್ನು ಎಸೆಯಲು ಸಾಧ್ಯವಾಗದ ಕಾರಣ ಸಿಎಸ್‍ಕೆ ತಂಡದ ನಾಯಕ ಧೋನಿಗೆ ದಂಡ ವಿಧಿಸಲಾಗಿದೆ.

    ಮೊದಲ ಬಾರಿ ಈ ಅಪರಾಧ ತಂಡದಿಂದ ಕಂಡುಬಂದ ಕಾರಣ ಕೇವಲ ದಂಡ ಪ್ರಯೋಗ ಮಾಡಲಾಗಿದೆ. ಮುಂದಿನ ಪಂದ್ಯಗಳಲ್ಲಿ ಇದೇ ತಪ್ಪು ಮರುಕಳಿಸಿದರೆ ಒಂದು ಅಥವಾ ಎರಡು ಪಂದ್ಯಗಳಿಂದ ನಾಯಕನನ್ನು ಅಮಾನತುಗೊಳಿಸುವ ಶಿಕ್ಷೆ ಅನುಭವಿಸಬೇಕಾಗುತ್ತದೆ.