Tag: Mahela Jayawardene

  • ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಆಗಿ ಮಹೇಲಾ ಜಯವರ್ಧನೆ ಮರುನೇಮಕ

    ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಭಾನುವಾರ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ (Mahela Jayawardene) ಅವರನ್ನು ಮುಖ್ಯ ಕೋಚ್ ಆಗಿ ಮರುನೇಮಕ ಮಾಡಿದೆ.

    47 ವರ್ಷ ವಯಸ್ಸಿನ ಜಯವರ್ಧನೆ ಈ ಹಿಂದೆ 2017-2022 ರವರೆಗೆ ಇದೇ ತಂಡಕ್ಕೆ ಕೋಚ್‌ ಆಗಿದ್ದರು. ಈ ಅವಧಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಮೂರು IPL ಟ್ರೋಫಿಗಳನ್ನು ಗೆದ್ದಿದೆ. 2022 ರಲ್ಲಿ ಜಯವರ್ಧನೆ ಅವರನ್ನು ಮುಖ್ಯ ತರಬೇತುದಾರನ ಸ್ಥಾನದಿಂದ MI ಫ್ರಾಂಚೈಸ್‌ಗಾಗಿ ಗ್ಲೋಬಲ್ ಹೆಡ್ ಆಫ್ ಕ್ರಿಕೆಟ್‌ಗೆ ವರ್ಗಾಯಿಸಲಾಗಿತ್ತು. ಇದನ್ನೂ ಓದಿ: ತೆಲಂಗಾಣ ಡಿಎಸ್‌ಪಿ ಆಗಿ ಅಧಿಕಾರ ವಹಿಸಿಕೊಂಡ ಸಿರಾಜ್‌ – ಪೊಲೀಸ್‌ ಡ್ರೆಸ್‌ನಲ್ಲಿ ವೇಗಿ

    ಮಹೇಲಾ ಅವರು ಮುಂಬೈ ಇಂಡಿಯನ್ಸ್‌ನ ಮುಖ್ಯ ಕೋಚ್ ಆಗಿ ಮರಳಿ ಬಂದಿರುವುದಕ್ಕೆ ನಾವು ರೋಮಾಂಚನಗೊಂಡಿದ್ದೇವೆ. ನಮ್ಮ ಜಾಗತಿಕ ತಂಡಗಳು ತಮ್ಮ ಪರಿಸರ ವ್ಯವಸ್ಥೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರಿಂದ, ಅವರನ್ನು MI ಗೆ ಮರಳಿ ಕರೆತರುವ ಅವಕಾಶ ಸಿಕ್ಕಿದೆ. ಅವರ ನಾಯಕತ್ವ, ಜ್ಞಾನ ಮತ್ತು ಆಟದ ಮೇಲಿನ ಉತ್ಸಾಹವು ಯಾವಾಗಲೂ MI ಗೆ ಪ್ರಯೋಜನವನ್ನು ನೀಡುತ್ತದೆ ಎಂದು ಫ್ರಾಂಚೈಸಿ ಮಾಲೀಕ ಆಕಾಶ್ ಅಂಬಾನಿ ಪ್ರತಿಕ್ರಿಯಿಸಿದ್ದಾರೆ.

    ಕಳೆದೆರಡು ಋತುಗಳಲ್ಲಿ ಜಯವರ್ಧನೆ ಅನುಪಸ್ಥಿತಿಯಲ್ಲಿ ಪಾತ್ರ ವಹಿಸಿದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್ ಅವರ ಸೇವೆಗಳನ್ನು ಇದೇ ವೇಳೆ ಅಂಬಾನಿ ಶ್ಲಾಘಿಸಿದ್ದಾರೆ. ಕಳೆದ ಎರಡು ಋತುಗಳಲ್ಲಿ ಮಾರ್ಕ್ ಬೌಚರ್ ಅವರು ತಂಡಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ಪರಿಣತಿ ಮತ್ತು ಸಮರ್ಪಣೆಯು ಪ್ರಮುಖವಾಗಿತ್ತು. ಈಗ MI ಕುಟುಂಬದ ಅವಿಭಾಜ್ಯ ಸದಸ್ಯರಾಗಿದ್ದಾರೆ ಎಂದು ಆಕಾಶ್‌ ಅಂಬಾನಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಐಪಿಎಲ್‌ಗಿಂತಲೂ ಟೆಸ್ಟ್‌ ಕ್ರಿಕೆಟ್‌ ಮುಖ್ಯ: ಬಿಸಿಸಿಐ ಹೊಸ ನಿಯಮದ ಕುರಿತು ಕಮ್ಮಿನ್ಸ್‌ ರಿಯಾಕ್ಷನ್‌

    ಮುಂಬೈ ಇಂಡಿಯನ್ಸ್‌, ಐಪಿಎಲ್‌ 2023 ರಲ್ಲಿ ಪ್ಲೇಆಫ್‌ಗೆ ತಲುಪಿತ್ತು. 2024 ರ ಋತುವಿನಲ್ಲಿ ಬೌಚರ್ ಕೋಚ್‌ ಆಗಿದ್ದಾಗ, 10 ನೇ ಸ್ಥಾನಕ್ಕೆ ಕುಸಿದಿತ್ತು. ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು. 2013 ರಿಂದ 2023 ರವರೆಗೆ MI ಅನ್ನು ಮುನ್ನಡೆಸಿದ್ದ ರೋಹಿತ್‌ ಶರ್ಮಾ, ತಂಡಕ್ಕೆ ಐದು ಟ್ರೋಫಿಗಳನ್ನು ತಂದುಕೊಟ್ಟಿದ್ದರು.

  • ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಪಾಂಡ್ಯ ನಾಯಕತ್ವ ವರವೋ ಶಾಪವೋ – ಕ್ಯಾಪ್ಟನ್‌ ಆದ ಒಂದೇ ಗಂಟೆಯಲ್ಲಿ 4 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ಮುಂಬೈ

    ಮುಂಬೈ: ಅಚ್ಚರಿ ಬೆಳವಣಿಯಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ಫ್ರಾಂಚೈಸಿಯು 2024ರ ಐಪಿಎಲ್‌ ಆವೃತ್ತಿಗೆ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಿಸಿದೆ. ಪಾಂಡ್ಯ ಅವರನ್ನು ಹೊಸ ನಾಯಕ ಎಂದು ಘೋಷಿಸಿದ 1 ಗಂಟೆಯೊಳಗೆ ಮುಂಬೈ ಇಂಡಿಯನ್ಸ್ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ 4,00,000 ಫಾಲೋವರ್ಸ್‌ (Followers) ಕಳೆದುಕೊಂಡಿದೆ.

    ರೋಹಿತ್‌ ಶರ್ಮಾ (Rohit Sharma) ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ವಿಷಯ ತಿಳಿಯುತ್ತಿದ್ದಂತೆ ನಿರಾಸೆ ಹೊಂದಿದ ಅಭಿಮಾನಿಗಳು ಮುಂಬೈ ಫ್ರಾಂಚೈಸಿಗೆ ಗುಡ್‌ಬೈ ಹೇಳಿದ್ದಾರೆ. ಇದನ್ನೂ ಓದಿ: ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಆಡುತ್ತಿರುವ ರೋಹಿತ್‌ ಶರ್ಮಾ 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ತಂಡವನ್ನು ಚಾಂಪಿಯನ್‌ ಪಟ್ಟಕ್ಕೆ ಕೊಂಡೊಯ್ದಿದ್ದರು. ಪ್ರಸಕ್ತ ವರ್ಷದ ಐಪಿಎಲ್‌ ಆವೃತ್ತಿಯಲ್ಲೂ ಪ್ಲೇ ಆಫ್‌ ತಲುಪಿತ್ತು. ಇದನ್ನೂ ಓದಿ: ಸೂರ್ಯ ಬೆಂಕಿ ಆಟ, ಕುಲ್ದೀಪ್‌ ಮಾರಕ ಬೌಲಿಂಗ್‌ಗೆ ಆಫ್ರಿಕಾ ಬರ್ನ್‌ – ಸರಣಿ 1-1 ರಲ್ಲಿ ಸಮ

    ಇನ್ನೂ 2022ರಲ್ಲಿ ಗುಜರಾತ್ ಟೈಟಾನ್ಸ್ (Gujarat Taitans) ತಂಡ ಸೇರಿದ್ದ ಹಾರ್ದಿಕ್ ಪಾಂಡ್ಯ ನಾಯಕನಾಗಿ ತಂಡದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 2023ರ ಐಪಿಎಲ್‌ ಫೈನಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸೋತು ರನ್ನರ್ ಅಪ್ ಪ್ರಶಸ್ತಿ ತಂದುಕೊಟ್ಟಿದ್ದರು. ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿರುವ ಪಾಂಡ್ಯ 5 ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 10 ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.

    ಹಾರ್ದಿಕ್ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್ ಮುಖ್ಯಸ್ಥ ಮಹೇಲಾ ಜಯವರ್ಧನೆ ಶ್ಲಾಘಿಸಿದ್ದಾರೆ. ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರೋಹಿತ್, ಮ್ಯಾಕ್ಸಿ ವಿಶ್ವದಾಖಲೆ ಸರಿಗಟ್ಟಿದ ಸೂರ್ಯ – ವಿಶ್ವದ ನಂ.1 ಬ್ಯಾಟರ್‌ನ ಮತ್ತೊಂದು ಸಾಧನೆ

    ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಧೋನಿಯ ನಂ.7 ಜೆರ್ಸಿಗೆ ನಿವೃತ್ತಿ; ಶರ್ಟ್‌ ಆಯ್ಕೆ ಮಾಡದಂತೆ ಆಟಗಾರರಿಗೆ BCCI ಸೂಚನೆ

  • ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    ಅಚ್ಚರಿ ಬೆಳವಣಿಗೆಯಲ್ಲಿ ಮುಂಬೈ ಸಾರಥಿಯಾದ ಪಾಂಡ್ಯ – ಹಿಟ್‌ಮ್ಯಾನ್‌ ಸ್ಥಾನ ಏನು?

    ಮುಂಬೈ: ಅಚ್ಚರಿಯ ಬೆಳವಣಿಗೆಯಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ 2024ರ ಆವೃತ್ತಿಗೆ ಮತ್ತೆ ಮುಂಬೈ ತಂಡಕ್ಕೆ ಕಂಬ್ಯಾಕ್‌ ಮಾಡಿರುವ ಹಾರ್ದಿಕ್‌ ಪಾಂಡ್ಯ (Hardik Pandya) ಅವರನ್ನು ನಾಯಕನನ್ನಾಗಿ ನೇಮಿಸಿದೆ.

    ಈ ಬಗೆಗಿನ ಮಾಹಿತಿಯನ್ನು ಮುಂಬೈ ಇಂಡಿಯನ್ಸ್‌ ಫ್ರಾಂಚೈಸಿಯು (Mumbai Indians) ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ. ರೋಹಿತ್ ಶರ್ಮಾ (Rohit Sharma) ಅವರ 10 ವರ್ಷಗಳ ನಾಯಕತ್ವದ ನಂತರ ಹಾರ್ದಿಕ್​ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಟೆಕ್ವಾಂಡೋ: ರಾಷ್ಟ್ರಮಟ್ಟಕ್ಕೆ ಕಾಸರಗೋಡಿನ ಗಣ್ಯ – ಕೇರಳದಲ್ಲಿ ಅಗ್ರʻಗಣ್ಯʼಚಿನ್ನದ ಪದಕ..!

    2022ರಲ್ಲಿ ಗುಜರಾತ್‌ ಟೈಟಾನ್ಸ್‌ ತಂಡ ಸೇರಿದ್ದ ಹಾರ್ದಿಕ್‌ ಪಾಂಡ್ಯ ನಾಯಕನಾಗಿ ತಂಡದ ಚೊಚ್ಚಲ ಆವೃತ್ತಿಯಲ್ಲೇ ಪ್ರಶಸ್ತಿ ಗೆಲ್ಲುವಂತೆ ಮಾಡಿದ್ದರು. 2023ರ ಐಪಿಎಲ್‌ನಲ್ಲಿ ರನ್ನರ್‌ ಅಪ್‌ ಪ್ರಶಸ್ತಿ ತಂದುಕೊಟ್ಟಿದ್ದರು. ಎರಡು ವರ್ಷಗಳ ನಂತರ ಮುಂಬೈ ಇಂಡಿಯನ್ಸ್​ ತಂಡಕ್ಕೆ ಮರಳಿರುವ ಇದೀಗ 5 ಬಾರಿ ಚಾಂಪಿಯನ್‌ ಆಗಿರುವ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನಡೆಸಲು ತಯಾರಿ ಶುರು ಮಾಡಿದ್ದಾರೆ. ಫ್ರಾಂಚೈಸಿಯನ್ನು 10 ವರ್ಷ ತಂಡವನ್ನು ಮುನ್ನಡೆಸಿದ ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅವರು ನಾಯಕತ್ವದ ಹೊರತಾಗಿಯೂ ತಂಡದಲ್ಲಿ ಮುಂದುವರಿಯುವರೇ ಎಂದು ಕಾದು ನೋಡಬೇಕಾಗಿದೆ.

    ಹಾರ್ದಿಕ್‌ ಪಾಂಡ್ಯ ಆಯ್ಕೆಯನ್ನು ಫ್ರಾಂಚೈಸಿಯ ಗ್ಲೋಬಲ್‌ ಮುಖ್ಯಸ್ಥ ಮಹೇಲಾ ಜಯವರ್ಧನೆ (Mahela Jayawardene) ಶ್ಲಾಘಿಸಿದ್ದಾರೆ. ಇದು ಪರಂಪರೆ ನಿರ್ಮಿಸುವ ಭಾಗವಾಗಿದೆ ಮತ್ತು ಭವಿಷ್ಯದ ನಿರ್ಧಾರವಾಗಿದೆ. ಈ ತತ್ವಕ್ಕೆ ಅನುಗುಣವಾಗಿ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: RCB ಖರೀದಿಸಿದ ದುಬಾರಿ ಆಟಗಾರನಿಗೆ ದೀರ್ಘಕಾಲದ ಕಿಡ್ನಿ ಕಾಯಿಲೆ – ಸತ್ಯ ಬಹಿರಂಗಪಡಿಸಿದ ಗ್ರೀನ್‌

    ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವಕ್ಕಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ. 2013 ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಅವರ ಅಧಿಕಾರಾವಧಿ ಅಸಮಾನ್ಯವಾಗಿದೆ. ಅವರ ನಾಯಕತ್ವವು ತಂಡಕ್ಕೆ ಸಾಟಿಯಿಲ್ಲದ ಯಶಸ್ಸನ್ನು ತಂದುಕೊಟ್ಟಿದೆ ಮಾತ್ರವಲ್ಲ, ಐಪಿಎಲ್ ಇತಿಹಾಸದಲ್ಲಿ ಅತ್ಯುತ್ತಮ ನಾಯಕರಲ್ಲಿ ಒಬ್ಬರಾಗಿ ಅವರ ಸ್ಥಾನವನ್ನು ಭದ್ರಪಡಿಸಿದೆ ಎಂದು ಹೇಳಿದ್ದಾರೆ.

    ರೋಹಿತ್‌ ಶರ್ಮಾ ಅವರ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 2013, 2015, 2017, 2019 ಹಾಗೂ 2020ರ ಆವೃತ್ತಿಗಳಲ್ಲಿ ಮುಂಬೈ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2024ರ ಆವೃತ್ತಿಯಲ್ಲಿ ಪಾಂಡ್ಯ ನಾಯಕತ್ವದಲ್ಲಿ ಟ್ರೋಫಿ ಗೆಲ್ಲುವ ವಿಶ್ವಾಸ ಹೊಂದಿದೆ. ಇದನ್ನೂ ಓದಿ: ಮತ್ತೆ ಅದೇ ತಪ್ಪು – DRS ತೆಗೆದುಕೊಳ್ಳದೇ ಹರಿಣರ ಎದುರು ಮಕ್ಕರ್‌ ಆದ ಗಿಲ್‌!

  • ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದ ಹಿಟ್‍ಮ್ಯಾನ್

    ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದ ಹಿಟ್‍ಮ್ಯಾನ್

    ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟದಲ್ಲಿ ಸ್ಫೋಟಕ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಕೇವಲ 35 ಎಸೆತಗಳಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ಹಿಟ್‍ಮ್ಯಾನ್ ಸತತ 30ನೇ ಪಂದ್ಯದಲ್ಲಿ ಎರಡಂಕಿ ರನ್ ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಸತತ 29 ಪಂದ್ಯಗಳಲ್ಲಿ ಎರಡಂಕಿ ರನ್ ಗಳಿಸಿದ್ದ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ (Mahela Jayawardene) ಅವರ ದಾಖಲೆಯನ್ನ ಮುರಿದಿದ್ದಾರೆ. ಇಂಗ್ಲೆಂಡ್ ಬ್ಯಾಟ್ಸ್‍ಮ್ಯಾನ್ ಲೆನ್ ಹಟ್ಟನ್ ಮತ್ತು ವೆಸ್ಟ್ ಇಂಡೀಸ್‍ನ ರೋಹನ್ ಕನ್ಹೈ 25 ಬಾರಿ, ಎ.ಬಿ.ಡಿ ವಿಲಿಯರ್ಸ್ 24 ಬಾರಿ ಎರಡಂಕಿ ರನ್ ಕಲೆಹಾಕಿದ ಸಾಧನೆ ಮಾಡಿ ನಂತರದ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    ಕಳೆದ 30 ಟೆಸ್ಟ್ ಇನ್ನಿಂಗ್ಸ್‍ಗಳಲ್ಲಿ ರೋಹಿತ್ ಶರ್ಮಾ ಕ್ರಮವಾಗಿ 12, 161, 26, 66, 25*, 49, 34, 30, 36, 12*, 83, 21, 19, 59, 11, 127, 29, 31, 24, 24, 24, 24, 24 5, 15, 43, 103, 80 ಬಾರಿಸಿದ್ದು, ವಿಂಡೀಸ್ ವಿರುದ್ಧ ಭಾನುವಾರ 4ನೇ ದಿನದಾಟದಲ್ಲಿ ಕೇವಲ 35 ಎಸೆತಗಳಲ್ಲಿ 50 ರನ್ ಚಚ್ಚಿದ್ದಾರೆ. ಅಲ್ಲದೇ ಒಟ್ಟು 44 ಎಸೆತಗಳನ್ನ ಎದುರಿಸಿ 57 ರನ್ ದಾಖಲಿಸಿದ್ದಾರೆ.

    2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‍ನಲ್ಲಿ 255 ರನ್‍ಗಳಿಗೆ ವೆಸ್ಟ್ ಇಂಡೀಸ್ ಸರ್ವಪತನ ಕಂಡಿತು. ಬಳಿಕ 4ನೇ ದಿನದಲ್ಲಿ ತನ್ನ 2ನೇ ಇನ್ನಿಂಗ್ಸ್ ಸರದಿ ಆರಂಭಿಸಿದ ಟೀಂ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಫೋಟಕ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್ ಜೊತೆಯಾಟಕ್ಕೆ 11.5 ಓವರ್‍ಗಳಲ್ಲಿ 95 ರನ್ ಬಾರಿಸಿತ್ತು. ಯಶಸ್ವಿ 30 ಎಸೆತಗಳಲ್ಲಿ 35 ರನ್ ಗಳಿಸಿದರೆ, ರೋಹಿತ್ ಶರ್ಮಾ 44 ಎಸೆತಗಳಲ್ಲಿ 57 ರನ್ ಗಳಿಸಿದರು. ನಂತರ 4ನೇ ಕ್ರಮಾಂಕದಲ್ಲಿ ಕ್ರೀಸ್‍ಗಿಳಿಸ ಇಶಾನ್ ಕಿಶನ್ ಸಹ 34 ಎಸೆತಗಳಲ್ಲಿ ಸ್ಫೋಟಕ 52 ರನ್ ಬಾರಿಸುವ ಮೂಲಕ 2ನೇ ಇನ್ನಿಂಗ್ಸ್‍ನ 4ನೇ ದಿನದ ಅಂತ್ಯಕ್ಕೆ 181 ರನ್ ಗಳಿಸಿ ವಿಂಡೀಸ್‍ಗೆ 365 ರನ್‍ಗಳ ಗುರಿ ನೀಡಿತು. ಇದನ್ನೂ ಓದಿ: ಭಾರತದ ವಿರುದ್ಧ ಮೋಸದಾಟವಾಡಿತಾ ಪಾಕ್‌? ಕಂಡೂ ಕಾಣದಂತಿದ್ರಾ ಅಂಪೈರ್‌? – ಏಷ್ಯಾಕಪ್‌ ಸೋಲಿನ ಬಳಿಕ ಮತ್ತೆ ವಿವಾದ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

    T20 ವಿಶ್ವಕಪ್‍ನಲ್ಲಿ ಕೊಹ್ಲಿ ಕಿಂಗ್ – ನೂತನ ವಿಶ್ವದಾಖಲೆ

    ಪರ್ತ್: ಟೀಂ ಇಂಡಿಯಾದ ಬ್ಯಾಟ್ಸ್‌ಮ್ಯಾನ್‌ ವಿರಾಟ್ ಕೊಹ್ಲಿ (Virat Kohli) ಟಿ20 ವಿಶ್ವಕಪ್‍ನಲ್ಲಿ (T20 World Cup) ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ನೂತನ ದಾಖಲೆ ಬರೆದಿದ್ದಾರೆ.

    ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‍ನಲ್ಲಿ ಭಾರತದ ಪರ 1,000 ರನ್ ಸಿಡಿಸಿದ ಮೊದಲ ಬ್ಯಾಟ್ಸ್‌ಮ್ಯಾನ್‌ ಎಂಬ ದಾಖಲೆಯ ಒಡೆಯನಾಗಿದ್ದ ಕೊಹ್ಲಿ, ಬಾಂಗ್ಲಾದೇಶ (Bangladesh) ವಿರುದ್ಧದ ಪಂದ್ಯದಲ್ಲಿ 15 ರನ್ ಬಾರಿಸುತ್ತಿದ್ದಂತೆ ಟಿ20 ವಿಶ್ವಕಪ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಟಿ20 ವಿಶ್ವಕಪ್‍ನಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನೆ (Mahela Jayawardene) 1,016 ರನ್ ಬಾರಿಸಿ ಬರೆದಿದ್ದ ದಾಖಲೆಯನ್ನು ಕೊಹ್ಲಿ ಮುರಿದು ನೂತನ ದಾಖಲೆಯ ಒಡೆಯನಾಗಿದ್ದಾರೆ. ಇದನ್ನೂ ಓದಿ: ಬಾಂಗ್ಲಾಗೆ 185 ರನ್‍ಗಳ ಬೃಹತ್ ಟಾರ್ಗೆಟ್ ನೀಡಿದ ಭಾರತ

    ಟಿ20 ವಿಶ್ವಕಪ್‍ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಬರೆದಿದ್ದ ಮಹೇಲ ಜಯವರ್ಧನೆ 31 ಇನ್ನಿಂಗ್ಸ್‌ಗಳಿಂದ 1,016 ರನ್ ಬಾರಿಸಿದ್ದರು. ಈ ದಾಖಲೆಯನ್ನು ಕೊಹ್ಲಿ 23 ಇನ್ನಿಂಗ್ಸ್‌ಗಳಿಂದ 1,017 ರನ್ ಬಾರಿಸಿ ಮುರಿದರು. ಇದಲ್ಲದೆ ಈ ಬಾರಿಯ ಟಿ20 ವಿಶ್ವಕಪ್‍ನಲ್ಲಿ ಕ್ರಮವಾಗಿ 84, 62, 12, 64 ರನ್ ಬಾರಿಸಿ ಒಟ್ಟು 220 ರನ್ ಚಚ್ಚಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‍ನಲ್ಲಿ ಒಟ್ಟು 3,932 ರನ್ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಇದನ್ನೂ ಓದಿ: ರಾಹುಲ್ ಅರ್ಧ ಶತಕದ ಅಬ್ಬರ – ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಕೊಟ್ಟ ಕನ್ನಡಿಗ

    ಕೊಹ್ಲಿ ಈವರೆಗೆ ಆಡಿರುವ 25 ಟಿ20 ವಿಶ್ವಕಪ್ ಪಂದ್ಯದಲ್ಲಿ ಒಟ್ಟು 1,065 ರನ್ ಕಲೆಹಾಕಿದ್ದಾರೆ. ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೇವಲ 12 ರನ್ ಗಳಿಸಿ ಔಟ್ ಆದರೂ ಕೊಹ್ಲಿ 11 ರನ್ ಸಿಡಿಸಿದ ವೇಳೆ ಟಿ20 ವಿಶ್ವಕಪ್‍ನಲ್ಲಿ ಸಾವಿರ ರನ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮ್ಯಾನ್‌, ವಿಶ್ವದ ಎರಡನೇ ಬ್ಯಾಟ್ಸ್‌ಮ್ಯಾನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಮರು ಪಂದ್ಯದಲ್ಲೇ ವಿಶ್ವದ ಮೊದಲ ಬ್ಯಾಟ್ಸ್‌ಮ್ಯಾನ್‌ ಎನಿಸಿಕೊಂಡಿದ್ದಾರೆ.

    ಪಂದ್ಯದಲ್ಲಿ ಕೊಹ್ಲಿ ಅಜೇಯ 64 ರನ್ (44 ಎಸೆತ, 8 ಬೌಂಡರಿ, 1 ಸಿಕ್ಸ್) ಸಿಡಿಸಿ ಮಿಂಚಿದರು. ಕೆ.ಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯ ಅರ್ಧಶತಕದ ನೆರವಿನಿಂದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 184 ರನ್ ಪೇರಿಸಿತು.

    Live Tv
    [brid partner=56869869 player=32851 video=960834 autoplay=true]

  • 2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    2011ರ ವಿಶ್ವಕಪ್ ಫೈನಲ್ ಫಿಕ್ಸಿಂಗ್ ಆರೋಪ- ಶ್ರೀಲಂಕಾ ಮಾಜಿ ಸಚಿವರ ಸಮರ್ಥನೆ

    – ಸಂಗಕ್ಕಾರ, ಮಹೇಲಾ ಜಯವರ್ಧನೆ ತಿರುಗೇಟು

    ಕೊಲಂಬೊ: ಭಾರತ ಹಾಗೂ ಶ್ರೀಲಂಕಾ ನಡುವೆ ನಡೆದಿದ್ದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಮೇಲಿನ ಫಿಕ್ಸಿಂಗ್ ಆರೋಪ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳುತಗಾಮೆಗೆ ತಮ್ಮ ಹೇಳಿಕೆಗಳ ಕುರಿತು ಸ್ಪಷ್ಟನೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

    ಫಿಕ್ಸಿಂಗ್ ಆರೋಪದಲ್ಲಿ ನಾನು ಯಾವುದೇ ಆಟಗಾರರ ಹೆಸರನ್ನು ಉಲ್ಲೇಖ ಮಾಡಿಲ್ಲ. ಆದರೆ ಮಾಜಿ ಆಟಗಾರರಾದ ಸಂಗಕ್ಕಾರ, ಜಯವರ್ಧನೆ ಅವರು ಏಕೆ ಇಷ್ಟು ತೀಷ್ಣವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ ಎಂದು ಮಹಿಂದಾನಂದ ಪ್ರಶ್ನಿಸಿದ್ದಾರೆ.

    ಸರ್ಕಸ್ ಆರಂಭವಾಗಿದೆ ಎಂದು ಜಯವರ್ಧನೆ ಹೇಳುತ್ತಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಏಕೆ ಇದಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುವುದು ತಿಳಿಯುತ್ತಿಲ್ಲ. ಅಲ್ಲದೇ ಫಿಕ್ಸಿಂಗ್ ಕುರಿತ ಆರೋಪ ಕೇಳಿ ಬರುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗಾ ಕೂಡ ಬಹಿರಂಗವಾಗಿಯೇ ಫಿಕ್ಸಿಂಗ್ ಕುರಿತು ಹೇಳಿದ್ದರು ಎಂದು ಮಹಿಂದಾನಂದ ಹೇಳಿದ್ದಾರೆ.

    ಇತ್ತ ಮಹಿಂದಾನಂದ ಹೇಳಿಕೆಗಳ ಕುರಿತು ಮತ್ತೊಮ್ಮೆ ಪ್ರತಿಕ್ರಿಯೆ ನೀಡಿ ಅಸಮಾಧಾನ ಹೊರ ಹಾಕಿರುವ ಜಯವರ್ಧನೆ, ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸ್ ಮಾಡುವುದು ಅಷ್ಟು ಸುಲಭದ ವಿಚಾರವಲ್ಲ. ಆದರೆ ಪಂದ್ಯದ ಆಡುವ 12ರ ಬಳಗದಲ್ಲಿರೋ ಆಟಗಾರರು ಫಿಕ್ಸಿಂಗ್‍ನಲ್ಲಿ ಭಾಗಿಯಾಗದೆ ಹೇಗೆ ಫಿಕ್ಸಿಂಗ್ ನಡೆಸುತ್ತಾರೆ ಎಂಬುವುದೇ ತಿಳಿಯುತ್ತಿಲ್ಲ. ವಿಶ್ವಕಪ್ ಟೂರ್ನಿ ನಡೆದ 9 ವರ್ಷಗಳ ಬಳಿಕ ಈಗ ಆದರೂ ನಮಗೆ ಜ್ಞಾನೋದಾಯ ಕಲ್ಪಿಸಿ ಎಂದು ಆರೋಪಗಳಿಗೆ ತಿರುಗೇಟು ನೀಡಿದ್ದರು. ಮುಂಬೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅಂದು ತಂಡದಲ್ಲಿದ್ದ ಜಯವರ್ಧನೆ ಶತಕ (103 ರನ್) ಸಿಡಿಸಿದ್ದರು.

    ಇತ್ತ ಮಾಜಿ ಕ್ರೀಡಾ ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀಲಂಕಾ ಸರ್ಕಾರ ಆರೋಪಗಳ ಕುರಿತು ತನಿಗೆ ಆದೇಶಿಸಿತ್ತು. ಫಿಕ್ಸಿಂಗ್‍ನಲ್ಲಿ ಆಟಗಾರ ಆಟಗಾರರ ಪಾತ್ರವಿಲ್ಲ. ಆದರೆ ಕೆಲ ಪಾರ್ಟಿಗಳು ಈ ಫಿಕ್ಸಿಂಗ್‍ನಲ್ಲಿ ಭಾಗಿಯಾಗಿವೆ ಎಂದು ಮಹಿಂದಾನಂದ ಮಾಡಿದ್ದ ಆರೋಪಗಳ ಸತ್ಯಾಸತ್ಯತೆ ಅರಿಯಲು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಸಿದೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಬೀಸಿ 275 ರನ್ ಗುರಿ ನೀಡಿತ್ತು. ಸವಾಲಿನ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ ಗೌತಮ್ ಗಂಭಿರ್ 97 ರನ್, ಧೋನಿ 91 ರನ್‍ಗಳ ಬ್ಯಾಟಿಂಗ್ ನೆರವಿನಿಂದ ಭಾರತ ಗೆಲುವು ಪಡೆದಿತ್ತು.