Tag: Mahatma Gandhi

  • ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು: ಸಿದ್ದರಾಮಯ್ಯ

    ಬೆಂಗಳೂರು: ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಸೆಕ್ಯುರಿಟಿ ಗಾರ್ಡ್ ಹಿಡಿದುಕೊಳ್ಳದೇ ಹೋಗಿದ್ದರೂ ಜನರೇ ಆತನನ್ನ ಸಾಯಿಸುತ್ತಿದ್ದರು. ಗೋಡ್ಸೆ ಒಬ್ಬ ಹಿಂದೂ ಮತಾಂಧ.‌ ಭಾರತ ವಿಭಜನೆ ಸಮಯದಲ್ಲಿ ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು, ಬಳಿಕ ಗಂಡಂದಿರನ್ನು ಕೊಲ್ಲುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವ್ಯಾರೂ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿ ಆಗಿರಲಿಲ್ಲ. ಅಧಿಕಾರವನ್ನು ಅನುಭವಿಸಬೇಕು ಅಂತ ಹಿರಿಯರು ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ಸ್ವಾರ್ಥಕ್ಕಾಗಿ ಸ್ವಾತಂತ್ರ್ಯ ಹೋರಾಟ ಮಾಡಲಿಲ್ಲ. ಗುಲಾಮಗಿರಿಯಿಂದ ಮುಕ್ತಿ ಸಿಗಬೇಕು ಅಂತ ಹೋರಾಟ ಮಾಡಿದರು. ಜಗತ್ತಿನ ಯಾವ ದೇಶದಲ್ಲೂ ಕೂಡ ಅಹಿಂಸಾತ್ಮಕ ಹೋರಾಟ ನಡೆದಿಲ್ಲ. ಗಾಂಧೀಜಿಯವರು ಅಹಿಂಸಾತ್ಮಕವಾಗಿ ದೀರ್ಘ ಕಾಲವಾದರು ಸ್ವಾತಂತ್ರ್ಯ ತಂದುಕೊಟ್ಟರು. ದ್ವೇಷ ಸಾಧನೆ ಮಾಡಲು ಗಾಂಧಿಯನ್ನು ಹತ್ಯೆ ಮಾಡಲಾಯ್ತು. ಹಿಂದೂ ಅಲ್ಲದೆ ಬೇರೆ ಧರ್ಮದವರು ಹತ್ಯೆ ಮಾಡಿದ್ರೆ ಅದು ಬೇರೆಯೇ ಕಥೆ ಆಗುತ್ತಿತ್ತು. ಭಾರತ ವಿಭಜನೆ ಸಮಯದಲ್ಲಿ ಲಾಹೋರ್ ಸೇರಿದಂತೆ ಅನೇಕ ಕಡೆ ಅಮಾನವೀಯ ಘಟಕಗಳು ನಡೆದಿದೆ. ಗಂಡಂದಿರನ್ನು ಕಟ್ಟಿ ಹಾಕಿ ಹೆಂಡತಿಯರನ್ನು ರೇಪ್ ಮಾಡಿದ್ರು. ಬಳಿಕ ಗಂಡಂದಿರನ್ನು ಕೊಲ್ಲುತ್ತಿದ್ದರು ಎಂದು ಹಳೆಯ ಘಟನೆಗಳನ್ನು ಮೆಲುಕು ಹಾಕಿದರು. ಇದನ್ನೂ ಓದಿ: ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

    ಗಾಂಧೀಜಿಯವರಿಗೆ ಅವ್ರೇ ಸಾಟಿ. ಸ್ವಾರ್ಥ ಇಲ್ಲದೆ ಹೋರಾಟ ಮಾಡಿದವರು ಗಾಂಧೀಜಿ. ಇದಕ್ಕಾಗಿ ತನ್ನ ಪ್ರಾಣವನ್ನೆ ಗಾಂಧೀಜಿ ಕಳೆದುಕೊಂಡರು. ಸಂಚು ಮಾಡಿ ಪ್ರಾರ್ಥನೆ ಸಮಯದಲ್ಲಿ ಗೋಡ್ಸೆ ಅಂಡ್ ಟೀಂ ಗಾಂಧಿಯವರನ್ನು ಹತ್ಯೆ ಮಾಡ್ತಾರೆ. ಗಾಂಧಿ ಕೊಲ್ಲಲು ಗೋಡ್ಸೆ ಅಂಡ್ ಟೀಂ ಪಿಸ್ತೂಲ್ ಖರೀದಿ ಮಾಡಿ ಪ್ಲಾನ್ ಮಾಡಿಕೊಂಡು ಗೋಡ್ಸೆ 3 ಗುಂಡು ಹೊಡೆದು ಹತ್ಯೆ ಮಾಡ್ತಾರೆ. ಗಾಂಧಿ ಹೇ ರಾಮ್ ಅಂತ ಬಿದ್ದು ಹೋಗ್ತಾರೆ ಎಂದು ಗಾಂಧಿಯನ್ನು ನೆನಪಿಸಿಕೊಂಡರು. ಇದನ್ನೂ ಓದಿ: ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

    ಗಾಂಧೀಜಿ “ಆರ್ಮಿ ಆಫ್ ಪೀಸ್” ಅಂತ ಬ್ರಿಟಿಷ್ ವೈಸರಾಯ್ ಹೇಳಿದ್ರು. ಇಡೀ ವಿಶ್ವದಲ್ಲೇ ಒಬ್ಬ ವ್ಯಕ್ತಿಗೆ ಯಾರಾದ್ರು ಗೌರವ ಕೊಡುತ್ತಾರೆ ಅಂದ್ರೆ ಅದು ಗಾಂಧೀಜಿಗೆ ಮಾತ್ರ. ಗಾಂಧೀಜಿ ಬದುಕಿದ್ರೆ ಭಾರತದ ಚಿತ್ರಣ ಮತ್ತಷ್ಟು ಬದಲಾವಣೆ ಆಗುತ್ತಿತ್ತು. 79 ವರ್ಷ ಗಾಂಧೀಜಿ ಬದುಕಿದ್ರು. ಆರೋಗ್ಯ ಇತ್ತು. ಅನೇಕ ವರ್ಷ ಬದುಕುತ್ತಿದ್ದರು, ಅವ್ರಿಗೆ ವಿಲ್ ಪವರ್ ಇತ್ತು. ಗಾಂಧೀಜಿಗೆ ಯುವಕ ಒಬ್ಬ 100 ವರ್ಷ ಬದುಕಿ ಅಂತ ಪತ್ರ ಬರೆದಿದ್ದ. ಆಗ ಗಾಂಧಿ ನಾನು 125 ವರ್ಷ ಬದುಕಬೇಕು ಅಂದು ಕೊಂಡಿದ್ದೇನೆ ಅಂತ ಉತ್ತರ ಬರೆದಿದ್ದರು. ಗಾಂಧೀಜಿ ವಿಚಾರಧಾರೆ ಸ್ವಲ್ಪ ಆದರೂ ಅಳವಡಿಸಿಕೊಳ್ಳಬೇಕು. ಎಲ್ಲಾ ವಿಚಾರಧಾರೆ ಅನುಸರಿಸಲು ಸಾಧ್ಯವಿಲ್ಲ. ಈಗ ನಾವೆಲ್ಲ ಕೆಟ್ಟು ಹೋಗಿದ್ದೇವೆ. ಸ್ವಲ್ಪವಾದ್ರು ಅವರ ವಿಚಾರಧಾರೆ ಅನುಸರಿಸೋದು ನಾವು ಅವರಿಗೆ ಕೊಡುವ ಗೌರವ ಎಂದು ಅಭಿಪ್ರಾಯಪಟ್ಟರು.

  • ಗಾಂಧೀಜಿಯನ್ನು ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿವೆ: ಪಿಣರಾಯಿ ವಿಜಯನ್

    ಗಾಂಧೀಜಿಯನ್ನು ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿವೆ: ಪಿಣರಾಯಿ ವಿಜಯನ್

    ತಿರುವನಂತಪುರ: ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆ ಮಾಡಿದ ಶಕ್ತಿಗಳೇ ಇಂದಿಗೂ ಧರ್ಮದ ಹೆಸರಿನಲ್ಲಿ ಹತ್ಯೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.

    ಮಹಾತ್ಮ ಗಾಂಧೀಜಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, ಬಾಪುವನ್ನು ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿದ್ದಾರೆ. ಅವರು ಇಂದು ನಮ್ಮ ದೇಶಕ್ಕೆ ದೊಡ್ಡ ಬೆದರಿಕೆಯಾಗಿದ್ದಾರೆ. ಹುತಾತ್ಮರ ದಿನದಂದು ಕೋಮುವಾದದ ವಿರುದ್ಧ ಹೋರಾಡಲು ಮತ್ತು ಭ್ರಾತೃತ್ವವನ್ನು ಸಾರೋಣ ಎಂದು ಹೇಳಿದರು.

    ಗಾಂಧೀಜಿ ಅವರ ನೆನಪು ಹಿಂದೆಂದಿಗಿಂತಲೂ ಈಗ ಪ್ರಸ್ತುತವಾಗಿದೆ. ಹುತಾತ್ಮರ ದಿನದಂದು ಕೋಮುವಾದದ ವಿರುದ್ಧ ಹೋರಾಡಲು ಮತ್ತು ಭ್ರಾತೃತ್ವವನ್ನು ಉತ್ತೇಜಿಸಲು ಪ್ರತಿಜ್ಞೆ ಮಾಡೋಣ ಎಂದು ಟ್ವೀಟ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಸಂಪೂರ್ಣವಾಗಿ ನೋವು ಹೇಳಿಕೊಳ್ಳೋ ಸ್ಥಿತಿಯಲ್ಲಿಲ್ಲ, ಅದರೊಂದಿಗೆ ಬದುಕ್ತಿದ್ದೇವೆ: ಅಪ್ಪು ನೆನೆದ ಶಿವಣ್ಣ

    ಇಂದು ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿ. ಧೇಶಾದ್ಯಂತ ಅವರನ್ನು ಸ್ಮರಿಸುತ್ತಿದ್ದಾರೆ. ಜೊತೆಗೆ ಭಾರತದ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆಗಾಗಿ ದೇಶದಾದ್ಯಂತ ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ

  • ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

    ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ: ಡಿಕೆಶಿ

    ಬೆಂಗಳೂರು: ಈ ದೇಶದ ಇತಿಹಾಸವೇ ಕಾಂಗ್ರೆಸ್ ಇತಿಹಾಸ. ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಧ್ವಜ ಕಾಂಗ್ರೆಸ್ ಧ್ವಜ, ಅದರಲ್ಲೇ ಗಾಂಧೀಜಿಯವರ ಚರಕ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

    ಕಾಂಗ್ರೆಸ್ ಕಚೇರಿಯಲ್ಲಿ ಸರ್ವೋದಯ ದಿನಾಚರಣೆ ಆಚರಿಸಲಾಯಿತು. ಡಿಕೆ ಶಿವಕುಮಾರ್, ಸೇರಿದಂತೆ ಕಾಂಗ್ರೆಸ್ ನಾಯಕರು ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ 2 ನಿಮಿಷ ಮೌನಾಚರಣೆ ಮೂಲಕ ಮಹಾತ್ಮ ಗಾಂಧೀಜಿಯವರಿಗೆ ನಮನ ಸಲ್ಲಿಸಿದರು. ಇದನ್ನೂ ಓದಿ: ಸ್ವಪಕ್ಷೀಯ ಶಾಸಕರ ವಿರುದ್ಧ ಪ್ರತಾಪ್‍ ಸಿಂಹ ವಾಗ್ದಾಳಿ – ಮುಂದುವರಿದ ಟಾಕ್‌ವಾರ್‌

    ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಗಾಂಧಿ ತತ್ವ ಆದರ್ಶ ಸಿದ್ಧಾಂತ ಮುಂದೆ ಬೇರೆ ಯಾವ ಪ್ರೇರಣೆಯೂ ಇಲ್ಲ ಅಂತ ಇಡೀ ಪ್ರಪಂಚವೇ ಒಪ್ಪಿಕೊಂಡಿದೆ. ಹೇ ರಾಂ ಅಂತ ಗಾಂಧಿ ಕೊನೆ ಉಸಿರಲ್ಲೂ ಕೂಡ ಹೇಳಿದ್ದರು. ರಘುಪತಿ ರಾಘವ ರಾಜಾರಾಂ ಎಂಬ ಪದಗಳು ಅವರ ಕೊನೆ ಕ್ಷಣದಲ್ಲೂ ಇತ್ತು. ನಮ್ಮ ನಾಯಕರ ತ್ಯಾಗ ಬಲಿದಾನದಷ್ಟು ಬೇರೆಯವರಿಗೆ ಇತಿಹಾಸ ಇಲ್ಲ. ಗಾಂಧಿ ಕೊನೆ ಉಸಿರು ಇರುವವರೆಗೂ ಕೂಡ ದೇಶಕ್ಕೆ ಸಮಾಜಕ್ಕೆ ಮಾರ್ಗದರ್ಶನ ಮಾಡಿಕೊಂಡು ಬಂದರು. ಗಾಂಧೀಜಿ ಚರಕದ ಮೂಲ ಸಂದೇಶ ಯಾರ ಅವಲಂಬನೆ ಬೇಡ, ಸ್ವಾವಲಂಬಿಗಳಾಗೋಣ ಅನ್ನೋದು. ಮೊನ್ನೆ ತಾನೇ ನಾವು, ನಮ್ಮ ನೀರು ನಮ್ಮ ಹಕ್ಕು ಅಂತ ಪಾದಯಾತ್ರೆ ಮಾಡಿದೆವು. ಕಾಂಗ್ರೆಸ್‍ನವರಿಗೆ ಮಾತ್ರ ಇಂಥ ಪಾದಯಾತ್ರೆ ಯೋಚನೆ ಬರುವುದಕ್ಕೆ ಸಾಧ್ಯ. ನಾವು ಲಾಠಿ ಹಿಡಿದುಕೊಂಡು ಬಂದೂಕು ಹಿಡಿದುಕೊಂಡು ಹೋರಾಟಕ್ಕೆ ಹೋಗಿರಲಿಲ್ಲ. ಇದನ್ನು ಕೆಲವರು ಒಪ್ಪಿಕೊಳ್ಳೋದಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಾರತದಲ್ಲಿ ಶೇ.75 ವಯಸ್ಕರಿಗೆ ಎರಡೂ ಡೋಸ್‌ ಲಸಿಕೆ – ಪ್ರಧಾನಿ ಅಭಿನಂದನೆ

    ಬಿಜೆಪಿ ವಿವಿಧ ವಿಚಾರದಲ್ಲಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ದೇಶದಲ್ಲಿ ತಾತ್ಕಾಲಿಕ ತುರ್ತು ಪರಿಸ್ಥಿತಿ ಬಂದಿದೆ, ಇದು ಶಾಶ್ವತ ಪರಿಹಾರ ಅಲ್ಲ. ಅಧಿಕಾರ, ವೋಟು, ದರ್ಪ ಇದ್ಯಾವುದು ಶಾಶ್ವತ ಅಲ್ಲ ಅನ್ನೋದನ್ನು ರೈತರು ತಿಳಿಸಿಕೊಟ್ಟಿದ್ದಾರೆ. ನ್ಯಾಯಾಲಯಗಳು ಬೇಕಾದಷ್ಟಿವೆ, ನ್ಯಾಯಾಲಯಗಳಿಗಿಂತ ದೊಡ್ಡ ತೀರ್ಪು ನಮ್ಮ ಮನಸಾಕ್ಷಿ ಎಂದರು.

    ಕಾರ್ಯಕ್ರಮದಲ್ಲಿ ಪರಿಷತ್ ವಿಪಕ್ಷ ನಾಯಕ ಹರಿ ಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್, ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವ ಆಂಜನೇಯ ಸೇರಿ ಹಲವರು ಭಾಗಿಯಾಗಿದ್ದರು.

  • ಸರ್ವೋದಯ ದಿನ: ಜ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

    ಸರ್ವೋದಯ ದಿನ: ಜ.30ರಂದು ಪ್ರಾಣಿ ವಧೆ, ಮಾಂಸ ಮಾರಾಟ ನಿಷೇಧ

    ಬೆಂಗಳೂರು: ಸರ್ವೋದಯ ದಿನದ ಪ್ರಯುಕ್ತ ಜ.30ರಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿ ವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

    ಜ.30ರ ಭಾನುವಾರ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿ ವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ ಎಂದು ಜಂಟಿ ನಿರ್ದೇಶಕರು (ಪಶುಪಾಲನೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ

    ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನವನ್ನು ʻಸರ್ವೋದಯ ದಿನʼವನ್ನಾಗಿ ಆಚರಿಸಲಾಗುವುದು. ಗಾಂಧೀಜಿಯವರು ಶಾಂತಿ ಪ್ರಿಯರು, ಅಹಿಂಸಾವಾದಿಗಳು. ಆ ದಿನ ಎಲ್ಲೆಡೆ ಗಾಂಧೀಜಿ ಸ್ಮರಣೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ಅಂದು ಪ್ರಾಣಿ ವಧೆ, ಮಾಂಸ ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಇದನ್ನೂ ಓದಿ: ಆಳುವುದು ಬೇರೆ, ಆಡಳಿತ ಬೇರೆ ಈ ವ್ಯತ್ಯಾಸ ಇದೀಗ ಕರ್ನಾಟಕದಲ್ಲಿ ಕಾಣಬಹುದಾಗಿದೆ: ಬೊಮ್ಮಾಯಿ

  • ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

    ರಾಷ್ಟ್ರಪಿತನ ಬಗ್ಗೆ ಅವಹೇಳನಕಾರಿ ಹೇಳಿಕೆ – ಕಾಳಿಚರಣ್ ಮಹಾರಾಜ್ ಬಂಧನ

    ಮುಂಬೈ: ಮಹಾತ್ಮಾ ಗಾಂಧಿಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ಪೊಲೀಸರು ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್‌ನನ್ನು ಬಂಧಿಸಿದ್ದಾರೆ.

    ಮಹಾರಾಷ್ಟ್ರದ ಥಾಣೆ ನಗರದ ಪೊಲೀಸರು ಮಹಾತ್ಮ ಗಾಂಧಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಕಾಳಿಚರಣ್ ಅವರನ್ನು ಛತ್ತೀಸ್‌ಗಢದಲ್ಲಿ ಬಂಧಿಸಲಾಗಿದೆ ಎಂದು ಗುರುವಾರ ತಿಳಿಸಿದ್ದಾರೆ.

    ಕಳೆದ ವರ್ಷ ಡಿಸೆಂಬರ್ 26 ರಂದು ಛತ್ತೀಸ್‌ಗಢದ ರಾಜಧಾನಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಳಿಚರಣ್ ಮಹಾತ್ಮಾ ಗಾಂಧಿಯವರ ವಿರುದ್ಧ ಹೇಳಿಕೆಯನು ನೀಡಿದ್ದರು. ಇದನ್ನು ಹೊರತಪಡಿಸಿಯೂ ಕಾಳಿಚರಣ್ ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸಿದ್ದರು. ಇದೀಗ ಮತ್ತೆ ಪೊಲೀಸರು ಕಾಳಿಚರಣ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್‌ಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರಿಕೆ

    ಎನ್‌ಸಿಪಿ ನಾಯಕ ಹಾಗೂ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವ್ಹಾದ್ ಕಾಳಿಚರಣ್‌ರ ವಿರುದ್ಧ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ನೌಪಾದ ಪೊಲೀಸ್ ಠಾಣೆ ಎಂಟು ಸಿಬ್ಬಂದಿ ತಂಡ ರಾಯ್‌ಪುರಕ್ಕೆ ತೆರಳಿ ಕಾಳಿಚರಣ್ ಮಹಾರಾಜ್‌ನನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಮೋ ಡಿಸೋಜಾ ಸೋದರ ಮಾವ ಸಾವು – ಆತ್ಮಹತ್ಯೆ ಶಂಕೆ

  • ಗಾಂಧಿ ನಿಂದಿಸಿ, ನಾಥೂರಾಮ್ ಗೋಡ್ಸೆ ಹೊಗಳಿದ ಹಿಂದೂ ಧಾರ್ಮಿಕ ಮುಖಂಡ ಅರೆಸ್ಟ್

    ಗಾಂಧಿ ನಿಂದಿಸಿ, ನಾಥೂರಾಮ್ ಗೋಡ್ಸೆ ಹೊಗಳಿದ ಹಿಂದೂ ಧಾರ್ಮಿಕ ಮುಖಂಡ ಅರೆಸ್ಟ್

    ಭೋಪಾಲ್: ಮಹಾತ್ಮ ಗಾಂಧಿಯನ್ನು ಅವಮಾನಿಸಿ, ನಾಥೂರಾಮ್ ಗೋಡ್ಸೆಯನ್ನು ಹೊಗಳಿದ ಹಿನ್ನೆಲೆ ಮಹಾರಾಷ್ಟ್ರದ ಹಿಂದೂ ಧಾರ್ಮಿಕ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

    ಹಿಂದೂ ಧಾರ್ಮಿಕ ಮುಖಂಡ ಕಾಳಿಚರಣ್ ಮಹಾರಾಜ್ ಬಂಧಿತ ಆರೋಪಿ. ಈತ ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್ ಸಭೆಯಲ್ಲಿ ಪಾಲ್ಗೊಂಡು ವಿವಾದಾತ್ಮಕ ಭಾಷಣ ಮಾಡಿದ್ದ.

    ಭಾಷಣದಲ್ಲಿ ಏನು ಹೇಳಿದ್ದಾರೆ?
    ಮೋಹನ್‌ದಾಸ್ ಕರಮಚಂದ್ ಗಾಂಧಿಯವರು ಭಾರತ ದೇಶವನ್ನು ನಾಶಪಡಿಸಿದ್ದಾರೆ. ಅವರನ್ನು ಕೊಂದ ನಾಥೂರಾಮ್ ಗೋಡ್ಸೆಗೆ ನಮಸ್ಕಾರಗಳು. ಹಿಂದೂ ಧರ್ಮವನ್ನು ರಕ್ಷಿಸಲು ಜನರು ಒಳ್ಳೆಯ ಹಿಂದೂ ನಾಯಕನನ್ನು ಆಯ್ಕೆ ಮಾಡಬೇಕೆಂದು ಭಾಷಣದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕ್ಷೀರಭಾಗ್ಯ ಯೋಜನೆಯಡಿ ಮಕ್ಕಳಿಗೆ ನೀಡುವ ಹಾಲಿನ ಪುಡಿಗೇ ಕನ್ನ

    ಭಾಷಣದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕಾಳಿಚರಣ್ ಭಾಷಣದ ವೀಡಿಯೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಪೊಲೀಸರ ಟ್ರ‍್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು, ಕಾಳಿಚರಣ್ ಆಪ್ತ ಸಹಾಯಕರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ 10 ಗಂಟೆಗೆ ಪೊಲೀಸರ ತಂಡ ಅವರನ್ನು ಅರೆಸ್ಟ್ ಮಾಡಿದೆ. ನಂತರ ಅವರನ್ನು ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಕರೆದೊಯ್ದಿದ್ದಾರೆ. ಸಂಜೆ ವೇಳೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷ ಸಂಭ್ರಮಾಚರಣೆ ತಡೆಯಲು ಚೆನ್ನೈನಲ್ಲಿ ವಾಹನ ಸಂಚಾರ ಬ್ಯಾನ್

  • ಗಾಂಧಿ ಮಗ ಕುಡುಕನಾದ – ಸಿದ್ದರಾಮಯ್ಯನವರೇ, ನೀವು ಹೇಳಿದ್ದು ಯಾವ ಗಾಂಧಿ ಮಗನಿಗೆ?: ಕುಟುಕಿದ ಬಿಜೆಪಿ

    ಗಾಂಧಿ ಮಗ ಕುಡುಕನಾದ – ಸಿದ್ದರಾಮಯ್ಯನವರೇ, ನೀವು ಹೇಳಿದ್ದು ಯಾವ ಗಾಂಧಿ ಮಗನಿಗೆ?: ಕುಟುಕಿದ ಬಿಜೆಪಿ

    ಬೆಂಗಳೂರು: ಎಸ್.ಆರ್ ಬೊಮ್ಮಾಯಿ ಗುಣ ಬಸವರಾಜ ಬೊಮ್ಮಾಯಿಗೆ ಬರುತ್ತೆ ಎಂದು ಹೇಳಲಾಗದು. `ಗಾಂಧಿ ಮಗ ಕುಡುಕನಾದ’ ಎಂದು ಮೈಸೂರಿನಲ್ಲಿ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಕುರಿತು ಬಿಜೆಪಿ ಈಗ ಸಾಮಾಜಿಕ ಜಾಲತಾಣದಲ್ಲಿ ಕುಟುಕಿದೆ.

    ಸಿದ್ದರಾಮಯ್ಯಗೆ ಬಿಜೆಪಿ ಟ್ವಿಟ್ಟರ್ ಮೂಲಕ ಪ್ರಶ್ನೆ ಹಾಕಿದ್ದು, `ಸಿದ್ದರಾಮಯ್ಯನವರೇ ನೀವು ಹೇಳಿದ್ದು ಯಾವ ಗಾಂಧಿ ಮಗನ ಬಗ್ಗೆ’ `ಇಂದಿರಾ ಗಾಂಧಿ ಪುತ್ರನ ಬಗ್ಗೆಯೋ, ಸೋನಿಯಾ ಗಾಂಧಿ ಪುತ್ರನ ಬಗ್ಗೆಯೋ?’ `ನಿಮ್ಮ ಮಗ ರಾಕೇಶ್ ಸಿದ್ದರಾಮಯ್ಯ ಅತಿಯಾಗಿ ಕುಡಿಯುತ್ತಿದ್ದರು ಎಂದು ವರದಿ’ ಇದೆಲ್ಲ ಅಪ್ಪನ ಗುಣ ಎಂದು ಸಾಮಾನ್ಯೀಕರಿಸಲು ಸಾಧ್ಯವೇ ಯತೀಂದ್ರ ಸಿದ್ದರಾಮಯ್ಯಗೆ ನಿಮ್ಮ ಗುಣ ಎಷ್ಟು ಬಂದಿದೆ ಎಂದು ಬಿಜೆಪಿ ಪ್ರಶ್ನಿಸಿದೆ.

    ಇಂದು ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬಸವರಾಜ ಬೊಮ್ಮಾಯಿ ಅಪ್ಪನಿಗಿಂತ ಬುದ್ಧಿವಂತ ಆಗಬಹುದು. ದಡ್ಡರು ಸಹ ಆಗಬಹುದು. ಮಹಾತ್ಮ ಗಾಂಧಿಯವರನ್ನು ನಾವು ಮಹಾತ್ಮ ಎಂದು ಕರೆಯುತ್ತೇವೆ. ಅವರ ಮಗ ಕೆಟ್ಟ ಅಭ್ಯಾಸಗಳನ್ನು ಕಲಿತಿದ್ದರು. ಬುದ್ದಿವಂತರ ಮಕ್ಕಳು ಜಾಣರು ಆಗಬಹುದು. ದಡ್ಡರು ಆಗಬಹುದು ಎಂದು ಹೇಳಿದ್ದೇನೆ ಅಷ್ಟೇ ಎಂದು ತನ್ನ ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಸಿಎಂ ಬೊಮ್ಮಾಯಿಗೆ ತಂದೆಯ ಗುಣ ಮಗನಿಗೆ ಬರಾದು ಎಂದು ನಿನ್ನೆ ಮೈಸೂರಿನಲ್ಲಿ ನೀಡಿದ್ದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಆ ರೀತಿ ಹೇಳಿಲ್ಲ. ತಂದೆಯ ಗುಣ ಮಕ್ಕಳಿಗೆ ಬರಬೇಕೆಂದಿಲ್ಲ. ಅಪ್ಪನಿಗಿಂತ ದಡ್ಡರೂ ಆಗಬಹುದು, ಬುದ್ಧಿವಂತರೂ ಆಗಬಹುದು. ಬರುತ್ತದೆ ಅಂತಾನೂ ಹೇಳಿಲ್ಲ. ಬರುವುದಿಲ್ಲ ಅಂತಾನೂ ಹೇಳಿಲ್ಲ. ಗಾಂಧೀಜಿ ಪುತ್ರ ಹರಿದಾಸ್ ಇರಲಿಲ್ವಾ, ಅವರು ಕೆಲ ಕೆಟ್ಟ ಗುಣ ಕಲಿತಿದ್ದರು. ಆದರೆ ಗಾಂಧೀಜಿಗೆ ನಾವು ಮಹತ್ಮಾ ಎನ್ನುತ್ತೇವೆ ಎಂದು ನಿನ್ನೆಯ ಹೇಳಿಕೆಗೆ ಸ್ಪಷ್ಟನೆ ಕೊಟ್ಟರು.ಇದನ್ನೂ ಓದಿ: ಬೊಮ್ಮಾಯಿ ಸ್ವತಂತ್ರವಾಗಿ ಆಡಳಿತ ನಡೆಸೋದು ಸಾಧ್ಯನಾ?: ಸಿದ್ದರಾಮಯ್ಯ

    ರಾಜ್ಯ ಸರ್ಕಾರದ ಎರಡು ವರ್ಷಗಳ ವೈಫಲ್ಯಗಳ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಬಿಎಸ್‍ವೈ ಎರಡು ವರ್ಷ ಪೂರೈಸಿ ರಾಜೀನಾಮೆ ನೀಡಿದ್ದಾರೆ. ನೂತನವಾಗಿ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರಿಗೆ ಅಭಿನಂದನೆ, ಶುಭವಾಗಲಿ ಎಂದು ಹಾರೈಸುತ್ತೇನೆ. ಬಿಜೆಪಿ ಸರ್ಕಾರ ಹೇಗೆ ಅಸ್ತಿತ್ವಕ್ಕೆ ಬಂತು ಎಲ್ಲರಿಗೂ ಗೊತ್ತು. ಶಾಸಕರ ಖರೀದಿಸಿ ವಾಮಮಾರ್ಗದಲ್ಲಿ ರಚಿಸಿದ ಸರ್ಕಾರ. ಹಾಗಾಗಿ ಇದು ಅನೈತಿಕ ಸರ್ಕಾರ. ಎರಡು ವರ್ಷ ದುರಾಡಳಿತ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಮಾಡದೇ ಇರುವುದೇ ಇವರ ಸಾಧನೆ. ಭ್ರಷ್ಟಾಚಾರ ತಾರಕಕ್ಕೇರಿದ್ದಕ್ಕೆ ಉದಾಹರಣೆ, ಮಕ್ಕಳಿಗೆ ನೀಡುವ ಹಣವನ್ನೂ ಲೂಟಿ ಹೊಡೆದಿದ್ದಾರೆ. ಕೋವಿಡ್ ಸಾಮಗ್ರಿಗಳಲ್ಲಿ ದುಡ್ಡು ಹೊಡೆದಿದ್ದಾರೆ. ಕೋವಿಡ್ ನಿರ್ವಹಣೆಯಲ್ಲಿ ದೊಡ್ಡ ವೈಫಲ್ಯ. ಅದರಿಂದಾಗಿ ಸಹಸ್ರಾರು ಅಮಾಯಕರು ಬಲಿಯಾದರು. ಇದಕ್ಕೆ ಸರ್ಕಾರವೇ ನೇರ ಹೊಣೆ. ವಾಸ್ತವ ಬಚ್ಚಿಟ್ಟು ಸುಳ್ಳು ಹೇಳಿಕೊಂಡು ತಿರುಗಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ರಾಜ್ಯದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಈ ಹಂತಕ್ಕೆ ತಂದು ನಿಲ್ಲಿಸಿದ್ದೇ ಬಿಎಸ್‍ವೈ ಸಾಧನೆ. 5 ವರ್ಷದಲ್ಲಿ ನಾವು ವಿತ್ತೀಯ ಮಿತಿಯಲ್ಲಿ 1.25 ಲಕ್ಷ ಕೋಟಿ ಸಾಲ ಮಾಡಲಾಗಿದೆ. ಬಿಎಸ್‍ವೈ ಎರಡೇ ವರ್ಷದಲ್ಲಿ 1.43ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಅದು ವಿತ್ತೀಯಮಿತಿ ಮೀರಿ ಮಾಡಿದ್ದಾರೆ. ರಾಜ್ಯದ ಜಿಎಸ್‍ಟಿ ಪಾಲು ನೀಡದೇ ನಿರ್ಲಕ್ಷವಹಿಸಲಾಗಿದ್ದು, ಸುಮಾರು 5,500 ಕೋಟಿ ರೂಪಾಯಿ ರಾಜ್ಯದ ಪಾಲು ಕೊಡದೇ ಕೇಂದ್ರ ಸರ್ಕಾರದಿಂದ ಮೋಸವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯವನ್ನು ಪ್ರತಿನಿಧಿಸುತ್ತ ಇದ್ದರೂ ಉಡಾಫೆ ಧೋರಣೆ ತೋರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಡಬಲ್ ಇಂಜಿನ್ ಸರ್ಕಾರದಲ್ಲಿ ಎಲ್ಲಿ ಸ್ವರ್ಗ ಸೃಷ್ಠಿ ಆಯ್ತು. ಯಡಿಯೂರಪ್ಪ ಎಂದಾದರೂ ಬಾಯಿ ಬಿಟ್ಟು ಮಾತನಾಡಿದ್ದಾರ? ಬಸವರಾಜ್ ಬೊಮ್ಮಾಯಿ ಅವರು ಜಿಎಸ್‍ಟಿ ಕೌನ್ಸಿಲ್ ಗೆ ಹೋಗ್ತಾ ಇದ್ರು ಅವರಿಗೂ ಗೊತ್ತು. ಏಕೆ ಆಗ ಬಾಕಿ ಕೇಳಿಲ್ಲ? ಬೊಮ್ಮಾಯಿ ನೀವು ಸ್ನೇಹಿತರು ಎಂಬ ವಿಚಾರ ಅದರಲ್ಲಿ ಏನು ಅನುಮಾನ ಇಲ್ಲ. ನಾನು ಬೊಮ್ಮಾಯಿ ಅವರು ಚನ್ನಾಗಿದ್ದೇವೆ. ಆದರೆ ಈ ಬೊಮ್ಮಾಯಿ ಅಲ್ಲ. ನಾವು ರಾಜಕೀಯ ಕಣ್ಣಲ್ಲಿ ನೋಡುವವರು. ಅವರು ಹೋಗಿ ಕೋಮುವಾದಿ ಪಾರ್ಟಿ ಸೇರಿಕೊಂಡರು ಬಳಿಕ ನಮ್ಮ ರಾಜಕೀಯ ಸಂಬಂಧ ಕಡಿದು ಹೋಯ್ತು. ಮನುಷ್ಯ ಸಂಬಂಧದಲ್ಲಿ ಪ್ರೀತಿ ಸಹಜವಾಗಿಯೇ ಇರುತ್ತೆ ಅಷ್ಟೇ ಎಂದರು.

    ಈ ಹಿಂದೆ ಪ್ರವಾಹ ಬಂದು ನಷ್ಟಕ್ಕೊಳಗಾದವರಿಗೆ ಬಿಜೆಪಿ ಸರ್ಕಾರ ಸರಿಯಾಗಿ ಪರಿಹಾರ ಕೊಟ್ಟಿಲ್ಲ. ಹಾನಿಗೊಳಗಾದ ಮನೆ ನಿರ್ಮಿಸಲು ಸಹಾಯ ಮಾಡಿಲ್ಲ. ಪ್ರವಾಹ ಪೀಡಿದ ಜನರಿಗೆ ಇವರಿಂದ ಸಹಾಯ ನಿರೀಕ್ಷಿಸಲು ಸಾಧ್ಯವಿಲ್ಲ. ಆಗಸ್ಟ್ 1 ರಂದು ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಅಸೆಂಬ್ಲಿ ಕರೆಯಿರಿ ಎಂದು ಮಾಡಿದ ಒತ್ತಾಯ ಅರಣ್ಯರೋದನವಾಗಿದೆ. ಸಮಸ್ಯೆ ಚರ್ಚಿಸಲು ಅಧಿವೇಶನ ಕರೆಯಲು ಸರ್ಕಾರ ಸಿದ್ಧವಿಲ್ಲ. ಈಗಲೂ ನಮ್ಮ ಒತ್ತಾಯ ಮುಂದುವರಿದಿದೆ. ಯಡಿಯೂರಪ್ಪ ಸರ್ಕಾರ ಮುಂದುವರಿದರೆ ಹೀನಾಯವಾಗಿ ಸೋಲುತ್ತದೆ ಎಂದು ಮೋದಿ ಯಡಿಯೂರಪ್ಪನ ಬದಲಾಯಿಸಿದರು. ಕೆಟ್ಟು ಹೆಸರು ಬರುತ್ತಿದೆ. ಮುಂದೆ ಅಧಿಕಾರಕ್ಕೆ ಬರೋಲ್ಲ ಎಂದು ಬದಲಾಯಿಸಿದರು. ಆದರೆ ಅದರಿಂದ ಏನು ಪ್ರಯೋಜನ ಆಗುವುದಿಲ್ಲ. ಯಾಕೆಂದರೆ ಬೊಮ್ಮಾಯಿಯನ್ನು ಯಡಿಯೂರಪ್ಪನೇ ಮಾಡಿದ್ದು, ಅವರು ಯಡಿಯೂರಪ್ಪನ ಆಬ್ಲಿಗೇಷನ್ ಅಲ್ಲಿ ಇರಬೇಕಾಗುತ್ತೆ. ಯಡಿಯೂರಪ್ಪನ ಮರ್ಜಿಯಲ್ಲಿ ಇರಬೇಕಾಗುತ್ತೆ ಅವರನ್ನು ಶಾಡೋ ಸಿಎಂ ಎಂದು ಹೇಳಲ್ಲ ಮರ್ಜಿಯಲ್ಲಿ ಇರಬೇಕಾಗುತ್ತೆ. ಆದರು ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡಲಿ. ವಿಳಂಬ ಮಾಡುವುದು ಸರಿಯಲ್ಲ. ರಾಜ್ಯದಲ್ಲಿನ ಪ್ರವಾಹ, ಕೋವಿಡ್ ನಿಯಂತ್ರಣ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

  • ಮಂಜುಗಡ್ಡೆಯಲ್ಲಿ ಗಾಂಧಿ ಪ್ರತಿಮೆ ತಯಾರಿಸಿ ವಿಶೇಷ ಗೌರವ

    ಮಂಜುಗಡ್ಡೆಯಲ್ಲಿ ಗಾಂಧಿ ಪ್ರತಿಮೆ ತಯಾರಿಸಿ ವಿಶೇಷ ಗೌರವ

    ಒಟ್ಟಾವಾ: ಮಂಜುಗಡ್ಡೆಯಲ್ಲಿ ಗಾಂಧೀಜಿ ಪ್ರತಿಮೆಯನ್ನು ಮಾಡಿ ಕೆನಡಾದ ಹೋಟೆಲ್‍ವೊಂದು ವಿಭಿನ್ನವಾಗಿ ಗೌರವವನ್ನು ಸಲ್ಲಿಸಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಕೆನಡಾದ ಹೋಟೆಲ್ ಡಿ ಗ್ಲೇಸ್‍ನಲ್ಲಿ ಐಸ್ ನಿಂದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಮಾಡಿದೆ. ಕ್ವೆಬೆಕ್ ಸಿಟಿಯಲ್ಲಿರುವ ಹೋಟೆಲ್ ಮುಂಭಾಗದಲ್ಲಿ ಗಾಂಧೀಜಿ ಪ್ರತಿಮೆ ಇಡಲಾಗಿದೆ. ಬರೋಬ್ಬರಿ 7 ಅಡಿ ಎತ್ತರವಿದೆ. ಪ್ರತಿಮೆಯ ಕೆಳಭಾಗದಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಕುರಿತಾಗಿ ಬರೆಯಲಾಗಿದೆ.

    ಈ ಒಂದು ಸುಂದರವಾದ ಪ್ರತಿಮೆಯನ್ನು ಮಾರ್ಕ್ ಲೆಪೈರೆ ತಯಾರಿಸಿದ್ದಾರೆ. ಮಂಜುಗೆಡ್ಡೆ 9 ತುಂಡುಗಳನ್ನು ತೆಗೆದುಕೊಂಡು ಕೇವಲ 5 ಗಂಟೆಯಲ್ಲಿ ಪ್ರತಿಮೆಯನ್ನು ಮಾಡಲಾಗಿದೆ. ಗಾಂಧಿ ಪ್ರತಿಮೆಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಲ್ಲಿವೆ.

    ಮಂಜುಗಡ್ಡೆಯಲ್ಲಿ ಮಾಡಲಾಗಿರುವ ಗಾಂಧಿ ಪ್ರತಿಮೆಯ ಫೋಟೋಗಳನ್ನು ಟೊರೆಂಟೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

  • ರಾಜ್ ಘಾಟ್‍ಗೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

    ರಾಜ್ ಘಾಟ್‍ಗೆ ತೆರಳಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

    ನವದೆಹಲಿ: ಮಹಾತ್ಮಾ ಗಾಂಧಿ ಪುಣ್ಯ ತಿಥಿಯನ್ನು ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಸಹ ರಾಜ್ ಘಾಟ್‍ಗೆ ತೆರಳಿ ಹುತಾತ್ಮ ದಿನವನ್ನು ಆಚರಿಸಿದ್ದು, ಮಹಾತ್ಮಾ ಗಾಂಧಿಯವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದ್ದಾರೆ.

    ರಾಜ್‍ಘಾಟ್‍ಗೆ ತರಳಿ ಮಹಾತ್ಮ ಗಾಂಧಿ ಅವರ ಸಮಾಧಿಗೆ ನಮನ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ಆಚರಿಸಿದ್ದಾರೆ. ಅಲ್ಲದೆ ದೇಶವಾಸಿಗಳಿಗೂ ಆಚರಿಸುವಂತೆ ಕರೆ ನೀಡಿದ್ದಾರೆ. ಈ ವೇಳೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಹ ಸಾಥ್ ನೀಡಿದ್ದಾರೆ. ಮೌನಾಚರಣೆ ಬಳಿಕ ಸರ್ವಧರ್ಮ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

    ಮಹಾತ್ಮ ಗಾಂಧಿಯವರನ್ನು ಜನವರಿ 30, 1948ರಂದು ರಾಥುರಾಮ್ ಗೋಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಅವರ ಮರಣ ದಿನವನ್ನು ಹುತಾತ್ಮ ದಿನವೆಂದು ಆಚರಿಸಲಾಗುತ್ತದೆ.

    ಈ ಕುರಿತು ಟ್ವೀಟ್ ಸಹ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಅವರ ಪುಣ್ಯ ತಿಥಿಯಂದು ಶ್ರೇಷ್ಠ ಬಾಪು ಅವರಿಗೆ ಗೌರವ ನಮನಗಳು. ಅವರ ಆದರ್ಶಗಳು ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಲೇ ಇರುತ್ತವೆ. ಹುತಾತ್ಮರ ದಿನದಂದು ಭಾರತದ ಭಾರತದ ಸ್ವಾತಂತ್ರ್ಯ ಹಾಗೂ ಪ್ರತಿಯೊಬ್ಬ ಭಾರತೀಯರ ಯೋಗಕ್ಷೇಮಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಎಲ್ಲ ಮಹಾನ್ ಮಹಿಳೆಯರು ಹಾಗೂ ಪುರುಷರ ವೀರರ ತ್ಯಾಗವನ್ನು ನಾವು ಸದಾ ನೆನಪಿಸಿಕೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

  • ಹುತಾತ್ಮ ದಿನಾಚರಣೆ – ಶನಿವಾರ ಬೆಳಗ್ಗೆ ಎರಡು ನಿಮಿಷ ಮೌನಾಚರಣೆ

    ಹುತಾತ್ಮ ದಿನಾಚರಣೆ – ಶನಿವಾರ ಬೆಳಗ್ಗೆ ಎರಡು ನಿಮಿಷ ಮೌನಾಚರಣೆ

    – ಕೇಂದ್ರ ಗೃಹ ಸಚಿವಾಲಯದಿಂದ ದೇಶವಾಸಿಗಳಿಗೆ ಕರೆ

    ನವದೆಹಲಿ: ಮಹಾತ್ಮಾ ಗಾಂಧಿ ಹುತಾತ್ಮವಾದ ದಿನವಾದ ಜ.30 ರಂದು ಪ್ರತಿ ವರ್ಷ ಹುತಾತ್ಮ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾಗಿ ಶನಿವಾರ ಎರಡು ನಿಮಿಷ ಮೌನವ್ರತ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ನಾಳೆ ಹುತಾತ್ಮ ಯೋಧರ ಸಂಸ್ಮರಣಾ ದಿನೋತ್ಸವ ಹಿನ್ನೆಲೆ 2 ನಿಮಿಷ ಮೌನದ ಮೂಲಕ ಶ್ರದ್ಧಾಂಜಲಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯದಿಂದ ದೇಶವಾಸಿಗಳಿಗೆ ಕರೆ ನೀಡಿದೆ.

    ನಾಳೆ ಬೆಳಗ್ಗೆ 11 ಗಂಟೆಗೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ 2 ನಿಮಿಷಗಳ ಕಾಲ ಮೌನಾಚರಣೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಸೂಚನೆ ನೀಡಿದೆ.

    ವಿದ್ಯಾಸಂಸ್ಥೆ, ಸರ್ಕಾರಿ ಕಚೇರಿ, ಖಾಸಗಿ ಕಚೇರಿ ಎಲ್ಲೆಡೆ ಈ ಆದೇಶ ಜಾರಿಯಾಗಬೇಕು. ಮೌನಾಚರಣೆ ಮುಗಿಯುವ ಹೊತ್ತಲ್ಲಿ ಸೈರನ್ ಮೊಳಗಿಸಬೇಕು. ಮೌನಾಚರಣೆ ಆರಂಭ ಮತ್ತು ಅಂತ್ಯದ ವೇಳೆಗೆ ಸೈರನ್ ಮೊಳಗಿಸಬೇಕು ಎಂದು ಸೂಚಿಸಿದೆ.