Tag: Mahatma Gandhi

  • Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

    Independence Day | ಇತಿಹಾಸ, ಮಹತ್ವ, ನೀವು ತಿಳಿದಿರಲೇಬೇಕಾದ ಸಂಗತಿಗಳಿವು

    ಸಾಂಸ್ಕೃತಿಕ, ಸಾಹಿತ್ಯಿಕ, ಆರ್ಥಿಕವಾಗಿ ಸಂಪದ್ಭರಿತವಾಗಿದ್ದ ಭರತಖಂಡ ಜಗತ್ತಿನಲ್ಲೇ ವಿಶೇಷ ಸ್ಥಾನ ಪಡೆದಿತ್ತು. ವೇದೋಪನಿಷತ್, ರಾಮಾಯಣ-ಮಹಾಭಾರತದಂತಹ ಉತ್ಕೃಷ್ಟ ಜ್ಞಾನ ಭಂಡಾರಗಳ ಸೃಷ್ಟಿ. ಚಿನ್ನ, ಬೆಳ್ಳಿ, ವಜ್ರ ವೈಡೂರ್ಯ, ಕಲೆ-ಸಾಹಿತ್ಯ-ವಾಸ್ತುಶಿಲ್ಪ ಶ್ರೀಮಂತಿಕೆಯಿಂದ ಕೂಡಿದ ರಾಜರ ಆಡಳಿತ. ಹಿಮಾಲಯ, ಅರಣ್ಯ ಸಂಪತ್ತು, ಫಲವತ್ತಾದ ಮಣ್ಣಿನಲ್ಲಿ ಬಿತ್ತಿದ್ದೆಲ್ಲವೂ ಚಿನ್ನ. ಹೆಜ್ಜೆ ಹೆಜ್ಜೆಗೂ ಸಿಗುವ ನಾನಾ ಭಾಷೆಯ, ಭಿನ್ನ ಸಂಸ್ಕೃತಿಯ ಜಯ. ಏನುಂಟು ಏನಿಲ್ಲ.. ಇಂತಹ ಸಕಲ ಶ್ರೀಮಂತಿಕೆಯ ದೇಶ ಪರಕೀಯರ ಕಣ್ಣು ಕುಕ್ಕಿದ್ದು ಇತಿಹಾಸ ಸತ್ಯ.

    ಭರತಖಂಡದ ಸಕಲ ಸಂಪತ್ತನ್ನು ದೋಚಲು ಇತಿಹಾಸದುದ್ದಕ್ಕೂ ಪರಕೀಯರು ನಡೆಸಿದ ದಾಳಿಗಳಿಗೆ ಲೆಕ್ಕವಿಲ್ಲ. ಮೊಘಲರು, ಫ್ರೆಂಚರು, ಡಚ್ಚರು, ಪೋರ್ಚುಗೀಸರು, ಬ್ರಿಟಿಷರು.. ಹೀಗೆ ಒಬ್ಬೊಬ್ಬರಾಗಿ ದಾಳಿ ನಡೆಸಿ ಭಾರತದ ಸಂಪತ್ತನ್ನು ಲೂಟಿ ಮಾಡಿದರು. ಆದರೆ ಬ್ರಿಟಿಷರು ಮಾತ್ರ ದಶಕಗಳ ಕಾಲ ಉಳಿದು ಸಂಪತ್ತನ್ನು ದೋಚಿದರು. ಬಿಳಿಯರ ದಬ್ಬಾಳಿಕೆ, ದೌರ್ಜನ್ಯದಿಂದ ಬೇಸತ್ತಿದ್ದ ಕೋಟ್ಯಂತರ ಭಾರತೀಯರ ಸಹನೆ ಕಟ್ಟೆ ಒಮ್ಮೆಲೆ ಒಡೆದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿ ಹಾಡಿತು. ಸುಮಾರು 90 ವರ್ಷಗಳ ಬ್ರಿಟಿಷ್ (British) ಆಳ್ವಿಕೆಯ ನಂತರ ಭಾರತವು ಅಂತಿಮವಾಗಿ ಸ್ವಾತಂತ್ರ್ಯವನ್ನು ಪಡೆದಾಗ 1947, ಆಗಸ್ಟ್ 15 ಆಗಿತ್ತು. ಅಂದು ಮಧ್ಯರಾತ್ರಿ ಭಾರತ ಪರಿಪೂರ್ಣವಾಗಿ ದಾಸ್ಯದ ಸಂಕೋಲೆಯಿಂದ ಹೊರಬಂದು ಸ್ವತಂತ್ರವಾಯಿತು.

    ಭಾರತೀಯರಿಗೆ (India) ಸ್ವಾತಂತ್ರ್ಯ ಸುಲಭವಾಗಿ ದಕ್ಕಿದ್ದಲ್ಲ. ಹೋರಾಟಗಾರರು, ಕ್ರಾಂತಿಕಾರಿಗಳ ತ್ಯಾಗ-ಬಲಿದಾನದಿಂದ ನಾವಿಂದು ಭಾರತದ ಪ್ರಜೆಗಳಾಗಿದ್ದೇವೆ. ಭಾರತ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಗಣರಾಜ್ಯ ದೇಶವಾಗಿದೆ. ಆಗಸ್ಟ್ 15 ನಮಗೆ ಸ್ವಾತಂತ್ರ್ಯ ಸಿಕ್ಕ ದಿನ. ಪ್ರತಿ ವರ್ಷ ಆ ದಿನವನ್ನು ದೇಶದೆಲ್ಲೆಡೆ ಆಚರಿಸುತ್ತೇವೆ. ಈ ದಿನ, ದೇಶಕ್ಕಾಗಿ ಹೋರಾಡಿ ಮಡಿದ ಹೋರಾಟಗಾರರು, ವೀರ ಯೋಧರನ್ನು ಸ್ಮರಿಸುತ್ತೇವೆ. ನಮ್ಮ ದೇಶ, ನಮ್ಮ ತನ, ನಮ್ಮ ಸಂಸ್ಕೃತಿ ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆ ದಿನ ಮತ್ತೆ ಬಂದಿದೆ. ಸ್ವತಂತ್ರ್ಯ ಸಂಭ್ರಮದ ಹೊತ್ತಲ್ಲಿ ಸಂಗ್ರಾಮದ ಇತಿಹಾಸವನ್ನೊಮ್ಮೆ ಮೆಲುಕು ಹಾಕೋಣ. ಇದನ್ನೂ ಓದಿ: ಆ.20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ

    ಭಾರತದ ಸ್ವಾತಂತ್ರ್ಯ ಇತಿಹಾಸವೇನು?
    ಭಾರತದ ಸ್ವಾತಂತ್ರ‍್ಯ ಹೋರಾಟವು ಒಂದು ಶತಮಾನಕ್ಕೂ ಹೆಚ್ಚು ಕಾಲ ನಡೆದ ಸುದೀರ್ಘ ಪ್ರಯಾಣವಾಗಿತ್ತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 17 ನೇ ಶತಮಾನದ ಆರಂಭದಲ್ಲಿ ಕೇವಲ ವ್ಯಾಪಾರಿಗಳಾಗಿ ಭಾರತಕ್ಕೆ ಬಂದು, ನಿಧಾನವಾಗಿ ಭೂಮಿಗೆ ದಾರಿ ಮಾಡಿಕೊಂಡರು. ಭಾರತಕ್ಕೆ ಸೇರಿದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಂಡರು. ರಾಷ್ಟ್ರವನ್ನು ವಸಾಹತುವನ್ನಾಗಿ ಮಾಡಿದರು. ತದನಂತರ 19 ನೇ ಶತಮಾನದ ವೇಳೆಗೆ, ಬ್ರಿಟಿಷ್ ಕ್ರೌನ್ ಭಾರತದ ನಿಯಂತ್ರಣವನ್ನು ತೆಗೆದುಕೊಂಡಿತು. ಅದನ್ನು ನೇರ ವಸಾಹತುವನ್ನಾಗಿ ಮಾಡಿತು. ಬ್ರಿಟಿಷರ ನಿರಂತರ ದಬ್ಬಾಳಿಕೆ, ಗುಲಾಮಗಿರಿಯಿಂದ ನೊಂದಿದ್ದ ಜನ ತಿರುಗಿಬಿದ್ದರು. ಬ್ರಿಟಿಷರ ವಿರುದ್ಧ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹುಟ್ಟುಕೊಂಡಿತು.

    ಮಹಾತ್ಮ ಗಾಂಧಿ (Mahatma Gandhi) ಭಾರತಕ್ಕೆ ಬಂದಾಗ ಚಳವಳಿಗೆ ನಿಜವಾದ ಪುಶ್ ಬಂದಿತು. ಅವರ ನಾಯಕತ್ವದಲ್ಲಿ ಅಹಿಂಸಾತ್ಮಕ ಪ್ರತಿರೋಧ ಅಥವಾ ಸತ್ಯಾಗ್ರಹದ ಪರಿಕಲ್ಪನೆಗಳು ತಿಳಿದುಬಂದವು. ಶಾಂತಿಯುತ ಪ್ರತಿಭಟನೆ ಪರಿಕಲ್ಪನೆಯ ಮೂಲಕ ಗಾಂಧಿಯವರು ಭಾರತಕ್ಕೆ ಅಸಹಕಾರ ಚಳವಳಿ, ನಾಗರಿಕ ಅಸಹಕಾರ ಚಳವಳಿ ಮತ್ತು ಕ್ವಿಟ್ ಇಂಡಿಯಾ ಚಳವಳಿಯನ್ನು ನೀಡಿದರು. ವಿಶ್ವ ಸಮರ-2 ನಿಂದ ಬ್ರಿಟಿಷರ ನಿಯಂತ್ರಣ ಭಾರತದಲ್ಲಿ ದುರ್ಬಲಗೊಂಡಿತು. ಸ್ವಾತಂತ್ರ‍್ಯದ ಬೇಡಿಕೆ ಎದುರಿಸಲಾಗದಂತಾಯಿತು. ಬ್ರಿಟಿಷರು ಅಂತಿಮವಾಗಿ ಸ್ವಾತಂತ್ರ್ಯ ನೀಡಲು ಒಪ್ಪಿಕೊಳ್ಳಲು ಕಾರಣವಾಯಿತು. ಆಗಸ್ಟ್ 15, 1947 ರಂದು, ಭಾರತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಲಾಯಿತು. ಇದು 200 ವರ್ಷಗಳ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸಿತು.

    ಸ್ವಾತಂತ್ರ್ಯ ದಿನದ ಮಹತ್ವವೇನು?
    ಹೋರಾಟ, ತ್ಯಾಗ, ಬಲಿದಾನದ ಫಲ ಈ ಸ್ವಾತಂತ್ರ್ಯ. ಬ್ರಿಟಿಷರ ದಬ್ಬಾಳಿಕೆಯ ಅಂತ್ಯ ಮತ್ತು ಸಾರ್ವಭೌಮ ರಾಷ್ಟ್ರದ ಉದಯವನ್ನು ಸೂಚಿಸುವ ದಿನ. ಸ್ವಾತಂತ್ರ‍್ಯ ದಿನವು (Independence day) ನ್ಯಾಯ, ಸಮಾನತೆ ಮತ್ತು ಸ್ವ-ನಿರ್ಣಯದ ಹಕ್ಕನ್ನು ಪ್ರತಿನಿಧಿಸುತ್ತದೆ.

    ಆಚರಣೆ ಹೇಗೆ?
    ಸ್ವಾತಂತ್ರ್ಯ ದಿನವನ್ನು ವಿವಿಧ ವಯಸ್ಸಿನ ಜನರು ವಿಭಿನ್ನವಾಗಿ ಆಚರಿಸುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ದೆಹಲಿಯ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಸಮಾರಂಭದೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ವರ್ಷ, ಭಾರತದ ಪ್ರಧಾನ ಮಂತ್ರಿ ತಿರಂಗಾವನ್ನು ಹಾರಿಸುತ್ತಾರೆ. ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಭಾಷಣದಲ್ಲಿ ಕಳೆದ ವರ್ಷದಲ್ಲಿ ದೇಶದ ಸಾಧನೆಗಳು, ಮುಂದಿರುವ ಸವಾಲುಗಳು ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ.

    ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಸ್ವಾತಂತ್ರ‍್ಯ ಚಳವಳಿಯ ವೀರರನ್ನು ಸ್ಮರಿಸಲು, ಯುವ ಪೀಳಿಗೆಯಲ್ಲಿ ಹೆಮ್ಮೆ ಮತ್ತು ದೇಶಭಕ್ತಿಯ ಭಾವವನ್ನು ಮೂಡಿಸಲು ದೇಶಭಕ್ತಿ ಗೀತೆಗಳು, ನೃತ್ಯಗಳು ಮತ್ತು ಕಿರುನಾಟಕಗಳನ್ನು ಪ್ರದರ್ಶಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಎನ್‌ಸಿಸಿ ಕೆಡೆಟ್‌ಗಳು ಪರೇಡ್‌ಗಳನ್ನು ನಡೆಸುತ್ತಾರೆ. ಮಕ್ಕಳಿಗೆ ಸಿಹಿ ಹಂಚಲಾಗುತ್ತದೆ.

    ಸ್ವಾತಂತ್ರ್ಯದ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳು.
    ಸ್ವಾತಂತ್ರ್ಯ ಮತ್ತು ವಿಭಜನೆ: ಭಾರತದ ಸ್ವಾತಂತ್ರ‍್ಯದ ಜೊತೆಗೆ ಭಾರತ (India) ಮತ್ತು ಪಾಕಿಸ್ತಾನದ (Pakistan) ವಿಭಜನೆಯ ದಿನವೂ ಆಗಿದೆ. ವಿಭಜನೆಯು ಜನರ ಸ್ಥಳಾಂತರ ಮತ್ತು ಕೋಮುಗಲಭೆಗೆ ಕಾರಣವಾಯಿತು. ಇದು ಇತಿಹಾಸದಲ್ಲಿ ದುಃಖದ ಸಂದರ್ಭವಾಗಿದೆ.

    ಮೊದಲ ಭಾಷಣ: ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ‍್ಯ ದಿನಾಚರಣೆಯ ಮುನ್ನಾದಿನದಂದು ‘ಟ್ರಿಸ್ಟ್ ವಿತ್ ಡೆಸ್ಟಿನಿ’ ಭಾಷಣ ಮಾಡಿದರು. ಮಧ್ಯರಾತ್ರಿಯ ಗಂಟೆಯ ಸದ್ದಲ್ಲಿ ಜಗತ್ತು ನಿದ್ರಿಸುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ‍್ಯಕ್ಕೆ ಎಚ್ಚರಗೊಂಡಿದೆ’ ಎಂದು ಭಾಷಣ ಮಾಡಿದ್ದರು.

    ತಿರಂಗಾ: ಪಿಂಗಲಿ ವೆಂಕಯ್ಯ ವಿನ್ಯಾಸಗೊಳಿಸಿದ ಭಾರತದ ರಾಷ್ಟ್ರಧ್ವಜವನ್ನು ಜುಲೈ 22, 1947 ರಂದು ಅಳವಡಿಸಿಕೊಳ್ಳಲಾಯಿತು. ತ್ರಿವರ್ಣವು ಭಾರತದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಧೈರ್ಯ ಮತ್ತು ತ್ಯಾಗಕ್ಕಾಗಿ ಕೇಸರಿ, ಶಾಂತಿ ಮತ್ತು ಸತ್ಯಕ್ಕಾಗಿ ಬಿಳಿ ಹಾಗೂ ನಂಬಿಕೆಗೆ ಹಸಿರು. ಮಧ್ಯದಲ್ಲಿರುವ ಅಶೋಕ ಚಕ್ರವು ನ್ಯಾಯದ ಸಂಕೇತವಾಗಿದೆ.

    ಎಚ್ಚರಿಕೆ ಮತ್ತು ಭದ್ರತೆ: ಸ್ವಾತಂತ್ರ್ಯ ದಿನದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು, ದೇಶದಾದ್ಯಂತ ವಿಶೇಷವಾಗಿ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗುತ್ತದೆ. ಪ್ರಧಾನಮಂತ್ರಿ ಧ್ವಜಾರೋಹಣ ಮಾಡುವ ಕೆಂಪು ಕೋಟೆಗೆ ಬಿಗಿ ಭದ್ರತೆ ಒದಗಿಸಲಾಗುತ್ತದೆ.

    ಹೋರಾಟ: ಆಗಸ್ಟ್ 15, 1947ರಲ್ಲಿ ಬ್ರಿಟಿಷರ ಆಳ್ವಿಕೆ ಅಂತ್ಯಗೊಂಡರೂ, ಏಕೀಕೃತ ಮತ್ತು ಶಾಂತಿಯುತ ರಾಷ್ಟ್ರಕ್ಕಾಗಿ ಹೋರಾಟವು ಹೆಚ್ಚು ಕಾಲ ಮುಂದುವರೆಯಿತು. ಒಂದೆಡೆ ಸ್ವಾತಂತ್ರ್ಯ ಹಾಗೂ ಮತ್ತೊಂದೆಡೆ ವಿಭಜನೆಯಿಂದಾಗಿ ಹಿಂಸಾಚಾರ, ಕೋಮು ಗಲಭೆಗಳು ಮತ್ತು ಜೀವಹಾನಿಗಳು ಸಂಭವಿಸಿದವು. ಒಂದು ಕಾಲದಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಜನರು ಕೆಲವೇ ಗಂಟೆಗಳಲ್ಲಿ ಬದ್ಧ ವೈರಿಗಳಾದರು.

    ಸ್ವಾತಂತ್ರ್ಯ ಹೋರಾಟಗಾರರು: ಸ್ವಾತಂತ್ರ‍್ಯ ದಿನಾಚರಣೆಯು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಸಂಯೋಜಿತ ಕೊಡುಗೆಯಾಗಿದೆ. ಲಾಲ್ ಲಜಪತ್ ರಾಯ್ ಅವರಿಂದ ಹಿಡಿದು ಮಹಾತ್ಮ ಗಾಂಧಿಯವರೆಗೆ.. ಸುಭಾಷ್ ಚಂದ್ರ ಬೋಸ್‌ರಿಂದ ಹಿಡಿದು ಭಗತ್ ಸಿಂಗ್ ವರೆಗೆ.. ಪ್ರತಿಯೊಬ್ಬರೂ ಭಾರತವನ್ನು ಸೆರೆಯಿಂದ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸುಭಾಸ್ ಚಂದ್ರ ಬೋಸ್ ಅವರು ಸ್ವಾತಂತ್ರ್ಯಕ್ಕಾಗಿ ಉಗ್ರಗಾಮಿ ಧೋರಣೆ ಅನುಸರಿಸಿದರು. ಮಹಾತ್ಮ ಗಾಂಧಿಯವರು ಅಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರಿಗೆ ಪ್ರತಿರೋಧವೊಡ್ಡಿದರು. ಇಬ್ಬರದೂ ಭಿನ್ನ ಹೋರಾಟವಾದರೂ ಅಂತಿಮವಾಗಿ ಭಾರತದ ಸ್ವಾತಂತ್ರ್ಯಕ್ಕೆ ಕಾರಣವಾಯಿತು.

    ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು: ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೊಡುಗೆಯೂ ಇದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಯಿಂದ ಸರೋಜಿನಿ ನಾಯ್ಡುವರೆಗೆ ಅಸಂಖ್ಯ ಮಹಿಳೆಯರು ಭಾರತ ಮಾತೆಯ ಸ್ವಾತಂತ್ರ್ಯಕ್ಕಾಗಿ ಮುಂಚೂಣಿಯಲ್ಲಿದ್ದರು ಎಂಬುದನ್ನು ಯಾರೂ ಮರೆಯಬಾರದು.

  • ರಾಗಾ ಒಬ್ಬ ಮಹಾನ್‌ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿ

    ರಾಗಾ ಒಬ್ಬ ಮಹಾನ್‌ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿ

    ನವದೆಹಲಿ: ಲೋಕಸಭಾ ಚುನಾವಣೆ 2024 (Loksabha Elections 2024) ಈಗ ನಿಧಾನವಾಗಿ ಅಂತ್ಯದತ್ತ ಸಾಗುತ್ತಿದೆ. 20 ಮೇ 2024 ರವರೆಗೆ 5 ಹಂತದ ಚುನಾವಣೆಗಳಿಗೆ ಮತದಾನ ಪೂರ್ಣಗೊಂಡಿದೆ. ಒಂದೆಡೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟವು ನಿರಂತರವಾಗಿ 400ಕ್ಕೂ ಹೆಚ್ಚು ಸೀಟುಗಳನ್ನು ಪಡೆಯುತ್ತಿದೆ ಎಂದು ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ (Congress) ಮತ್ತು I.N.D.I.A ಒಕ್ಕೂಟ ಈ ಬಾರಿ ತಾವು ಗೆಲುವು ಸಾಧಿಸುತ್ತೇವೆ ಎಂದು ಹೇಳಿಕೊಳ್ಳುತ್ತಿವೆ. ಈ ನಡುವೆ ಇದೀಗ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ (Pramod Krishnam) ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ರಾಹುಲ್ ಗಾಂಧಿ (Rahul Gandhi) ಮಹಾನ್ ವ್ಯಕ್ತಿಯಾಗಿದ್ದು, ಅವರು ಏನು ಬೇಕಾದರೂ ಹೇಳಬಲ್ಲರು. ರಾಹುಲ್ ಗಾಂಧಿ ಅವರಿಗೆ ದೊಡ್ಡ ನಮಸ್ಕಾರ. ಮಹಾತ್ಮಾ ಗಾಂಧೀಜಿಯವರು ಕಾಂಗ್ರೆಸ್ ನಿರ್ಮೂಲನೆ ಮಾಡಬೇಕು ಎಂದು ಕನಸು ಕಂಡಿದ್ದರು. ಬಿಜೆಪಿಯಿಂದಲೂ ಆ ಕೆಲಸ ಮಾಡಲಾಗಲಿಲ್ಲ. ಆದರೆ ಆ ಕೆಲಸವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: General Elections 2024: ಕಣದಲ್ಲಿರೋ 1,600 ಕ್ಕೂ ಹೆಚ್ಚು ಅಭ್ಯರ್ಥಿಗಳಿಗಿದೆ ಕ್ರಿಮಿನಲ್ ಹಿನ್ನೆಲೆ- ವರದಿ

    ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಇದು ನನಗೆ ಮಾತ್ರವಲ್ಲ ದೇಶಾದ್ಯಂತ ಇರುವ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ತಿಳಿದಿದೆ. ಜೂನ್ 4ರ ನಂತರ ಇಲ್ಲಿಯವರೆಗೂ ಅತಿ ಕಡಿಮೆ ಸ್ಥಾನಗಳನ್ನು ಗೆದ್ದ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಲಿದೆ ಎಂದು ಪ್ರಮೋದ್ ಕೃಷ್ಣಂ ಭವಿಷ್ಯ ನುಡಿದಿದ್ದಾರೆ.

  • ಸಾಯುವ ಮುನ್ನ ʻಹೇ ರಾಮ್‌ʼ ಎಂದಿದ್ದ ಮಹಾತ್ಮ ಗಾಂಧಿ ಆದರ್ಶವನ್ನೇ ಕಾಂಗ್ರೆಸ್‌ ಅನುಸರಿಸುತ್ತದೆ: ಪ್ರಿಯಾಂಕಾ ಗಾಂಧಿ

    ಸಾಯುವ ಮುನ್ನ ʻಹೇ ರಾಮ್‌ʼ ಎಂದಿದ್ದ ಮಹಾತ್ಮ ಗಾಂಧಿ ಆದರ್ಶವನ್ನೇ ಕಾಂಗ್ರೆಸ್‌ ಅನುಸರಿಸುತ್ತದೆ: ಪ್ರಿಯಾಂಕಾ ಗಾಂಧಿ

    – ಮೋದಿ ವಿರುದ್ಧ ಕೈ ನಾಯಕಿ ಮತ್ತೆ ಕಿಡಿ

    ಲಕ್ನೋ: ಸಾಯುವ ಮೊದಲು ʻಹೇ ರಾಮ್ʼ ಎಂದು ಘೋಷಣೆ ಕೂಗಿದ ಮಹಾತ್ಮ ಗಾಂಧಿಯವರ ಆದರ್ಶವನ್ನು ಕಾಂಗ್ರೆಸ್‌ ಅನುಸರಿಸುತ್ತದೆ. ಆದ್ರೆ ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ತಿರಸ್ಕರಿಸಿದ ಕಾರಣಕ್ಕೆ ಮೋದಿ (PM Modi) ಕಾಂಗ್ರೆಸ್‌ ಅನ್ನು ಧರ್ಮ ವಿರೋಧಿ ಎಂದು ಆರೋಪಿಸುವುದು ತಪ್ಪು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi) ಅಸಮಾಧಾನ ಹೊರಹಾಕಿದ್ದಾರೆ

    ರಾಯ್‌ಬರೇಲಿ ಕ್ಷೇತ್ರದ ʻಚೌಡಾ ಮಿಲ್ ವೃತ್ತದಲ್ಲಿʼ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಯುವ ಮುನ್ನ ʻಹೇ ರಾಮ್‌ʼ ಘೋಷಣೆ ಕೂಗಿದ ಮಹಾತ್ಮ ಗಾಂಧಿ (Mahatma Gandhi) ಅವರ ಆದರ್ಶವನ್ನು ಕಾಂಗ್ರೆಸ್‌ ಪಕ್ಷವು ಪಾಲಿಸುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಭೇಟಿ ಬಳಿಕ ಬದಲಾಯ್ತು ಕ್ಷೌರದಂಗಡಿ ಲಕ್‌ – ಅಂಗಡಿಗೆ ಗ್ರಾಹಕರ ದಂಡು

    ಹಿಂದೂ ಧರ್ಮದ (Hindu Religion) ಚಾಂಪಿಯನ್‌, ಗೋ ರಕ್ಷಕರು ಎಂದು ಬಿಜೆಪಿ ಹೇಳಿಕೊಳ್ಳುತ್ತದೆ. ಆದ್ರೆ ತಮ್ಮದೇ ಪಕ್ಷ ಆಡಳಿತದಲ್ಲಿರುವ ಉತ್ತರ ಪ್ರದೇಶದಲ್ಲಿ ಗೋಶಾಲೆಗಳ ಸ್ಥಿತಿ ದಯನೀಯವಾಗಿದೆ. ಗೋ ಶಾಲೆಗಳಲ್ಲಿ (Cowsheds) ಸತ್ತಿರುವ ಹಸುಗಳ ಮಾಂಸವನ್ನು ನಾಯಿಗಳು ತಿನ್ನುತ್ತಿವೆ. ಅಷ್ಟೊಂದು ದಯನೀಯ ಸ್ಥಿತಿ ತಲುಪಿದೆ. ಆದ್ರೆ ಕಾಂಗ್ರೆಸ್‌ ಆಡಳಿತದಲ್ಲಿರುವ ಛತ್ತೀಸ್‌ಗಢದಲ್ಲಿ ಗೋಶಾಲೆಗಳ ಸ್ಥಿತಿ ಸುಧಾರಣೆಯಾಗಿದೆ. ಗೋಶಾಲೆಗಳನ್ನು ನಡೆಸುತ್ತಿರುವ ಸ್ವಸಹಾಯ ಗುಂಪುಗಳಿಗೂ ಅನುಕೂಲವೇ ಆಗಿದೆ ಎಂದು ತಿಳಿಸಿದ್ದಾರೆ.

    ಇನ್ನೂ ರಾಹುಲ್‌ ಗಾಂಧಿ ಪರ ಪ್ರಚಾರ ನಡೆಸಿದ ಪ್ರಿಯಾಂಕಾ ಗಾಂಧಿ, ಕಾಂಗ್ರೆಸ್‌ ಗ್ಯಾರಂಟಿಗಳ ಬಗ್ಗೆ ಪ್ರಸ್ತಾಪಿಸಿದರು. ಇಂಡಿಯಾ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ. ಉತ್ತರ ಪ್ರದೇಶದಲ್ಲಿ ಪದೇ ಪದೇ ಆಗುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆಗೆ ಬ್ರೇಕ್‌ ಹಾಕಲಿದೆ. ಅಗ್ನಿವೀರ್‌ ಯೋಜನೆಯನ್ನು ರದ್ದುಗೊಳಿಸಲಿದೆ. ಮುಖ್ಯವಾಗಿ ಸಣ್ಣ ಉದ್ಯಮಿಗಳ ಸಹಾಯಕ್ಕಾಗಿ 5,000 ಕೋಟಿ ರೂ. ನಿಧಿಯನ್ನು ರಚಿಸಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪೆನ್‌ಡ್ರೈವ್ ಪ್ರಕರಣದಲ್ಲಿ ಅವರ ಕುಟುಂಬದವರೇ ಶಾಸಕ, ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಡಲಿ: ಪ್ರಿಯಾಂಕ್ ಖರ್ಗೆ

  • ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

    ಮಹಾತ್ಮ ಗಾಂಧಿ ‘ಮಹಾಪುರುಷ’, ಪ್ರಧಾನಿ ಮೋದಿ ‘ಯುಗಪುರುಷ’: ಉಪ ರಾಷ್ಟ್ರಪತಿ ಬಣ್ಣನೆ

    ಮುಂಬೈ: ಕಳೆದ ಶತಮಾನದ ‘ಮಹಾಪುರುಷ’ ಮಹಾತ್ಮ ಗಾಂಧಿ, ಈ ಶತಮಾನದ ‘ಯುಗಪುರುಷ’ ಪ್ರಧಾನಿ ನರೇಂದ್ರ ಮೋದಿ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಬಣ್ಣಿಸಿದ್ದಾರೆ.

    ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

    ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಕಳೆದ ಶತಮಾನದ ಮಹಾಪುರುಷ ಮಹಾತ್ಮಾ ಗಾಂಧಿ. ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಹಾಡಿ ಹೊಗಳಿದ್ದಾರೆ.

    1867 ರಲ್ಲಿ ಗುಜರಾತ್‌ನಲ್ಲಿ ರಾಜ್‌ಚಂದ್ರಜಿ ಜನಿಸಿದರು. 1901 ರಲ್ಲಿ ನಿಧನರಾದರು. ಜೈನ ಧರ್ಮದ ಬೋಧನೆಗಳು ಮತ್ತು ಮಹಾತ್ಮ ಗಾಂಧಿಯವರಿಗೆ ಅವರ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಎಂದು ಧನಕರ್‌ ಸ್ಮರಿಸಿದ್ದಾರೆ.

    ಇಬ್ಬರು ಮಹಾನ್ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ. ಅವರು ಶ್ರೀಮದ್ ರಾಜ್‌ಚಂದ್ರಜಿ ಅವರನ್ನು ಗೌರವದಿಂದ ಪ್ರತಿಬಿಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

    ಈ ರಾಷ್ಟ್ರದ ಬೆಳವಣಿಗೆಯನ್ನು ವಿರೋಧಿಸುವ ಶಕ್ತಿಗಳು, ಈ ದೇಶದ ಉದಯವನ್ನು ಅರಗಿಸಿಕೊಳ್ಳದ ಶಕ್ತಿಗಳು ಒಂದಾಗುತ್ತಿವೆ. ದೇಶದಲ್ಲಿ ಏನಾದರೂ ಒಳ್ಳೆಯ ಘಟನೆಗಳು ನಡೆದಾಗ, ಅವರು ವಿಭಿನ್ನ ಕ್ರಮಕ್ಕೆ ಬರುತ್ತಾರೆ. ಇದು ಸಂಭವಿಸಬಾರದು ಎಂದು ಹೇಳಿಕೆ ನೀಡಿದ್ದಾರೆ.

    ಅಪಾಯ ತುಂಬಾ ದೊಡ್ಡದು. ನೀವು (ನಮ್ಮ) ಸುತ್ತಲೂ ನೋಡುವ ದೇಶಗಳು, ಅವರ ಇತಿಹಾಸಗಳು 300-500 ಅಥವಾ 700 ವರ್ಷಗಳಷ್ಟು ಹಳೆಯವು. (ಆದರೆ) ನಮ್ಮ ಇತಿಹಾಸವು 5,000 ವರ್ಷಗಳಷ್ಟು ಹಳೆಯದು ಎಂದಿದ್ದಾರೆ.

  • G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    G20 Summit: ವಿಶ್ವ ನಾಯಕರಿಂದ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಪುಷ್ಪ ನಮನ

    ನವದೆಹಲಿ: ಜಿ20 (G20) ಶೃಂಗಸಭೆಯ ಎರಡನೇ ದಿನವಾದ ಇಂದು (ಭಾನುವಾರ) ಜಾಗತಿಕ ನಾಯಕರು ನವದೆಹಲಿಯ ರಾಜ್‌ಘಾಟ್‌ನಲ್ಲಿರುವ (Rajghat) ಮಹಾತ್ಮ ಗಾಂಧಿ (Mahatma Gandhi) ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದಾರೆ.

    ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವ ಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಮತ್ತು ಇತರ ನಾಯಕರು ಮತ್ತು ಪ್ರತಿನಿಧಿಗಳು ಮಹಾತ್ಮ ಗಾಂಧಿ ಅವರ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: G20 Summit: ಮೊದಲ ದಿನದ ಅಧಿವೇಶನಗಳು ಯಶಸ್ವಿ – ಇಂದಿನ ಕಾರ್ಯಕ್ರಮಗಳೇನು?

    ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಜಿ20 ನಾಯಕರನ್ನು ಬರಮಾಡಿಕೊಂಡರು. ಬಳಿಕ ಬಾಪು ಕುಟಿಯ ಬಗ್ಗೆ ಪ್ರಧಾನಿ ಮಾಹಿತಿ ಹಂಚಿಕೊಂಡಿದ್ದಾರೆ. ಬಾಪು ಕುಟಿಯು ಮಹಾರಾಷ್ಟ್ರದ ವಾರ್ಧಾ ಬಳಿ ಇದೆ. ಇದು 1936 ರಿಂದ 1948ರ ಅವರ ಮರಣದವರೆಗೂ ಮಹಾತ್ಮ ಗಾಂಧಿಯವರ ನಿವಾಸವಾಗಿತ್ತು ಎಂದು ತಿಳಿಸಿದ್ದಾರೆ.

    ಮಹಾತ್ಮ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದ ಬಳಿಕ ನಾಯಕರು ಲೀಡರ್ಸ್ ಲಾಂಜ್‌ನಲ್ಲಿ ಶಾಂತಿ ಗೋಡೆಗೆ ಸಹಿ ಹಾಕಿದ್ದಾರೆ.

    ಈ ಬಗ್ಗೆ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ, ಜಿ20 ಕುಟುಂಬ ಶಾಂತಿ, ಸೇವೆ, ಸಹಾನುಭೂತಿ ಮತ್ತು ಅಹಿಂಸೆಯ ದಾರಿದೀಪವಾದ ಗಾಂಧಿಗೆ ನಮನ ಸಲ್ಲಿಸಿತು. ಗಾಂಧೀಜಿಯವರ ಕಾಲಾತೀತ ಆದರ್ಶಗಳು, ಸಾಮರಸ್ಯ, ಅಂತರ್ಗತ ಮತ್ತು ಸಮೃದ್ಧ ಜಾಗತಿಕ ಭವಿಷ್ಯಕ್ಕಾಗಿ ನಮ್ಮ ಸಾಮೂಹಿಕ ದೃಷ್ಟಿಗೆ ಮಾರ್ಗದರ್ಶನ ನೀಡುತ್ತವೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ-ಮಧ್ಯಪ್ರಾಚ್ಯ-ಯುರೋಪ್ ನಡುವೆ ಮೆಗಾ ಕಾರಿಡಾರ್; ಜಿ20 ಶೃಂಗಸಭೆಯಲ್ಲಿ ಬಿಗ್ ಡೀಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಳೆಹೊನ್ನೂರು ಗಾಂಧಿ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ- ಸ್ಥಳೀಯರ ಪ್ರತಿಭಟನೆ

    ಹೊಳೆಹೊನ್ನೂರು ಗಾಂಧಿ ಸರ್ಕಲ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ- ಸ್ಥಳೀಯರ ಪ್ರತಿಭಟನೆ

    ಶಿವಮೊಗ್ಗ: ಮಹಾತ್ಮ ಗಾಂಧಿ (Mahatma Gandhi) ಪ್ರತಿಮೆಯನ್ನು (Statue) ಕೆಡವಿ ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಹೊಳೆಹೊನ್ನೂರಿನಲ್ಲಿ (Holehonnur) ನಡೆದಿದೆ.

    ಹೊಳೆಹೊನ್ನೂರಿನ ಸರ್ಕಲ್‌ನಲ್ಲಿ ಸುಮಾರು 18 ವರ್ಷಗಳ ಹಿಂದೆ ಈ ಗಾಂಧಿ ಪ್ರತಿಮೆ ನಿರ್ಮಿಸಲಾಗಿತ್ತು. ಪ್ರತಿಮೆ ಸುತ್ತ ಮಂಟಪ ನಿರ್ಮಿಸಿ, ವಿಶೇಷವಾದ ಗೌರವವನ್ನು ನೀಡಲಾಗುತ್ತಿತ್ತು. ಮಧ್ಯರಾತ್ರಿ ಬೈಕ್‌ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಗಾಂಧೀಜಿಯವರ ಪ್ರತಿಮೆಯನ್ನು ಕೆಡವಿದ್ದಾರೆ. ಮೂರ್ತಿಯನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲದೆ, ಅದನ್ನು ಬೀಳಿಸಿ ಪುಡಿ ಮಾಡಿದ್ದಾರೆ. ಇದನ್ನೂ ಓದಿ: ಗೊಲ್ಲರದೊಡ್ಡಿ ಅಪಘಾತ ಪ್ರಕರಣ – ರಸ್ತೆಗೆ ಹಂಪ್ ಹಾಕುವಂತೆ ಮಗು ಶವ ಇಟ್ಟು ಪ್ರತಿಭಟನೆ

    ದುಷ್ಕರ್ಮಿಗಳ ಈ ದುಷ್ಕೃತ್ಯ ಸಿಸಿ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಲೇ ಪ್ರತಿಮೆ ಬಳಿಯಲ್ಲಿ ನೂರಾರು ಮಂದಿ ಜಮಾಯಿಸಿ, ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗು ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಿಡಿಗೇಡಿಗಳ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಓವರ್‌ಟೇಕ್ ಅವಾಂತರದಿಂದ ಬೈಕ್‍ಗೆ ಟ್ರಕ್ ಡಿಕ್ಕಿ – ಇಬ್ಬರ ದುರ್ಮರಣ

    ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಗಾಂಧಿ ಪ್ರತಿಮೆ ಧ್ವಂಸಗೊಳಿಸಿರುವ ದೇಶ ವಿರೋಧಿ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ನೆಲದ ಸ್ವಾತಂತ್ರ‍್ಯ ಚಳುವಳಿಯ ಹಿನ್ನೆಲೆ, ಸಂವಿಧಾನ ಮತ್ತು ಕಾನೂನಿನ ಬಗ್ಗೆ ಗೌರವ ಇಲ್ಲದವರು ಮಾತ್ರ ಇಂತಹ ಹೀನ ಕೃತ್ಯ ಎಸಗಲು ಸಾಧ್ಯ. ಈ ಕೃತ್ಯದ ಹಿಂದೆ ಯಾರೇ ಇರಲಿ, ಅವರನ್ನು ಹಿಡಿದು ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುತ್ತೇವೆ. ಯಾರೊಬ್ಬರೂ ಈ ಬಗ್ಗೆ ಉದ್ವೇಗಕ್ಕೆ ಒಳಗಾಗಬಾರದು. ಕಾನೂನು ಕೈಗೆತ್ತಿಕೊಳ್ಳದೇ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಸಿಎಂ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕಲ್ಲು, ಚೂರಿ ಹಿಡಿದು ನಡುರಸ್ತೆಯಲ್ಲಿ ದಾಂಧಲೆ – ಸಿನಿಮೀಯ ಶೈಲಿಯಲ್ಲಿ ಲಾಕ್ ಮಾಡಿದ ಪೊಲೀಸರು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಾತ್ಮ ಗಾಂಧಿ ಮೊಮ್ಮಗ ನಿಧನ

    ಮಹಾತ್ಮ ಗಾಂಧಿ ಮೊಮ್ಮಗ ನಿಧನ

    ಮುಂಬೈ: ಮಹಾತ್ಮ ಗಾಂಧಿಯವರ (Mahatma Gandhi) ಮೊಮ್ಮಗ ಅರುಣ್ ಗಾಂಧಿ (Arun Gandhi) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ (Maharashtra) ಕೊಲ್ಲಾಪುರದಲ್ಲಿ ನಿಧನರಾದರು.

    ಲೇಖಕ ಹಾಗೂ ಸಾಮಾಜಿಕ ರಾಜಕೀಯ ಹೋರಾಟಗಾರರಾದ ಅರುಣ್ ಗಾಂಧಿ (89) ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಮಂಗಳವಾರ ಮೃತಪಟ್ಟಿದ್ದು, ಅಂತ್ಯಕ್ರಿಯೆಯನ್ನು ಕೊಲ್ಲಾಪುರದಲ್ಲಿ ನಡೆಸಲಾಯಿತು ಎಂದು ಅವರ ಪುತ್ರ ತುಷಾರ್ ಗಾಂಧಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    1934ರಂದು ದಕ್ಷಿಣ ಆಫ್ರಿಕಾದ ಡರ್ಬನ್‍ನಲ್ಲಿ ಮಣಿಲಾಲ್ ಗಾಂಧಿ ಹಾಗೂ ಸುಶೀಲಾ ಮಶ್ರುವಾಲಾ ದಂಪತಿಗೆ ಜನಿಸಿದ ಅರುಣ್ ಗಾಂಧಿ ಅವರು ಹೋರಾಟಗಾರರಾಗಿ ತಮ್ಮ ತಾತ ಅಂದರೇ ಮಹಾತ್ಮ ಗಾಂಧಿ ಅವರ ಹೆಜ್ಜೆಯನ್ನೇ ಅನುಸರಿಸುತ್ತಿದ್ದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

  • ಮೋದಿ ವಿರುದ್ಧ ವಿವಾದಿತ ಹೇಳಿಕೆ – ಸತ್ಯವೇ ನನ್ನ ದೇವರು ಎಂದ ರಾಹುಲ್

    ಮೋದಿ ವಿರುದ್ಧ ವಿವಾದಿತ ಹೇಳಿಕೆ – ಸತ್ಯವೇ ನನ್ನ ದೇವರು ಎಂದ ರಾಹುಲ್

    ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಿವಾದಿತ ಹೇಳಿಕೆ ನೀಡಿರುವ ಹಿನ್ನೆಲೆ ಕೋರ್ಟ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಗಾ ಸತ್ಯವೇ ನನ್ನ ದೇವರು ಎನ್ನುತ್ತ ಮಹಾತ್ಮ ಗಾಂಧೀಜಿಯವರ ಸಾಲುಗಳನ್ನು ನೆನಪಿಸಿಕೊಂಡಿದ್ದಾರೆ.

    ನನ್ನ ಧರ್ಮ ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು. ಅದನ್ನು ಪಡೆಯುವ ಸಾಧನ ಅಹಿಂಸೆ ಎಂಬ ಬಾಪೂಜಿಯವರ ಸಾಲನ್ನು ರಾಹುಲ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

    2019ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಗುರುವಾರ ಬೆಳಗ್ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು ಸೂರತ್ ಕೋರ್ಟ್ 30 ದಿನಗಳ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

    ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಿರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ಆಧಾರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು.

    ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ರಾಹುಲ್ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು. ತೀರ್ಪು ಪ್ರಕಟವಾಗುವ ಮೊದಲೇ ರಾಹುಲ್ ಗಾಂಧಿ ಕೋರ್ಟ್‌ಗೆ ಹಾಜರಾಗಿದ್ದರು. ಇದನ್ನೂ ಓದಿ: ರಾಹುಲ್‌ಗೆ ಬಿಗ್‌ ರಿಲೀಫ್‌ – 30 ದಿನಗಳ ಜಾಮೀನು ಮಂಜೂರು

  • ಪಾಕ್ ಇತಿಹಾಸ ಪುಸ್ತಕಗಳಲ್ಲಿ ಭಾರತ, ಹಿಂದೂ ವಿರೋಧಿ ನಿಲುವು – ಪಠ್ಯದಲ್ಲಿ ಗಾಂಧಿ ಹಿಂದೂ ನಾಯಕ ಎಂದು ಪರಿಚಯ

    ನವದೆಹಲಿ: ಪಾಕಿಸ್ತಾನದ (Pakistan) ಶಾಲೆಗಳಲ್ಲಿನ 8 ಮತ್ತು 9 ನೇ ತರಗತಿಯ ಇತಿಹಾಸ ಪಠ್ಯಪುಸ್ತಕಗಳಲ್ಲಿ ಭಾರತ (India) ವಿರೋಧಿ ಹಾಗೂ ಹಿಂದೂ ವಿರೋಧಿ ವಿಷಯಗಳು ತುಂಬಿವೆ ಎಂದು ವರದಿಯಾಗಿದೆ.

    ತನ್ನ ರಾಷ್ಟ್ರೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಿರುವ ಪಠ್ಯಪುಸ್ತಕಗಳಲ್ಲಿ ಭಾರತದ ವಿರುದ್ಧ ತಪ್ಪು ಮಾಹಿತಿಗಳನ್ನು ಮಕ್ಕಳಿಗೆ ಕಲಿಸುತ್ತಿದೆ ಎಂದು ತಿಳಿದು ಬಂದಿದೆ.

    ನ್ಯಾಷನಲ್ ಬುಕ್ ಫೌಂಡೇಶನ್ 8 ಮತ್ತು 9 ನೇ ತರಗತಿಯ ಪಠ್ಯಪುಸ್ತಕಗಳನ್ನು ಪ್ರಕಟಿಸಿದೆ. ಪುಸ್ತಕದಲ್ಲಿ ಬ್ರಿಟಿಷರ (British) ಕಾಲದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) ರಚನೆಗೆ ಅನೇಕ ಭಾರತೀಯರು ಕೈ ಜೋಡಿಸಿದರು. ಧರ್ಮದಲ್ಲಿ ಸಂಪೂರ್ಣವಾಗಿ ಹಿಂದೂವಾಗಿದ್ದರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಇಡೀ ಭಾರತದ ಧ್ವನಿಗಿಂತ ಹೆಚ್ಚು ಹಿಂದೂ ಧ್ವನಿಯ ರಾಜಕೀಯ ಪಕ್ಷವಾಯಿತು ಎಂದು ಉಲ್ಲೇಖಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ವಿಚಿತ್ರವಾದ ಎಲೆಕ್ಟ್ರಾನಿಕ್ ಬಲೂನು ಪತ್ತೆ – ಆತಂಕದಲ್ಲಿ ಜನ

    ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟವನ್ನು ಮುನ್ನಡೆಸಿದ ಮಹಾತ್ಮ ಗಾಂಧಿ (Mahatma Gandhi)ಅವರನ್ನು ಕೇವಲ “ಹಿಂದೂ ನಾಯಕ” ಎಂದು ಪುಸ್ತಕದಲ್ಲಿ ಪರಿಚಯಿಸಲಾಗಿದೆ. ಪಠ್ಯ ಪುಸ್ತಕದಲ್ಲಿ “ಮುಸ್ಲಿಮರನ್ನು ಕಡೆಗಣಿಸುವ” ಆರೋಪವನ್ನು ಹೊರಿಸಲಾಗಿದೆ. ಗಾಂಧಿ ಮತ್ತು ಅವರ ಯುವ ಬೆಂಬಲಿಗರು ಕಾಂಗ್ರೆಸ್‍ನ ಉಸ್ತುವಾರಿಯನ್ನು ವಹಿಸಿಕೊಂಡರು. ಮುಸ್ಲಿಂ ಹಕ್ಕುಗಳನ್ನು ಕಡೆಗಣಿಸಿ ದ್ವೇಷ, ಅಸೂಯೆ ಮತ್ತು ಸಂಕುಚಿತ ಮನೋಭಾವವನ್ನು ಸೃಷ್ಟಿಸಿದರು ಎಂದು ಪಠ್ಯದಲ್ಲಿ ಉಲ್ಲೇಖಿಸಲಾಗಿದೆ.

    ಮುಸ್ಲಿಂ (Muslim) ಹಕ್ಕುಗಳ ಹೋರಾಟದಲ್ಲಿ ಹಿಂದೂಗಳನ್ನು (Hindu) ನಂಬಲು ಸಾಧ್ಯವಾಗದಿರುವ ಬಗ್ಗೆ ಪುಸ್ತಕದಲ್ಲಿ ಹಲವಾರು ನಿದರ್ಶನಗಳಿವೆ. ಬಂಗಾಳದ ವಿಭಜನೆಯು ಮುಸ್ಲಿಮರಿಗೆ ಆ ಅರಿವನ್ನು ತಂದಿತು. ಹಿಂದೂ ಬಹುಸಂಖ್ಯಾತರಿಂದ ಯಾವುದೇ ನ್ಯಾಯೋಚಿತ ಮಾರ್ಗವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ ನಮ್ಮ ಹಿತಾಸಕ್ತಿಗಳನ್ನು ಕಾಪಾಡಲು ಮುಸ್ಲಿಂ ನಾಯಕರು ತಮ್ಮ ಸಮುದಾಯಕ್ಕೆ ಪ್ರತ್ಯೇಕ ಮತದಾನ ಯೋಜನೆಯನ್ನು ರೂಪಿಸಿದರು ಎಂದು ಹೇಳಲಾಗಿದೆ.

    ಮುಸ್ಲಿಮರು ಹಿಂದೂಗಳನ್ನು ಅಥವಾ ಬ್ರಿಟಿಷರನ್ನು ನಂಬಲು ಸಾಧ್ಯವಿಲ್ಲ. ಇದು ಅರಿವಾದ ಬಳಿಕ ಖಿಲಾಫತ್ ಚಳುವಳಿಯು (Khilafat Movement) ಭಾರತದ ಮುಸ್ಲಿಮರಿಗೆ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ತಂದಿತು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಂಡಿತು. ಆದರೆ ವಿಭಜನೆಯ ಪ್ರಶ್ನೆಯಲ್ಲಿ ಅದು ಮತೀಯ ಹಿಂದೂ ಸಂಘಟನೆಯಂತೆ ವರ್ತಿಸಿತು ಎಂದು ಬರೆಯಲಾಗಿದೆ.

    ಪಾಕಿಸ್ತಾನದ ಹುಟ್ಟಿನ ಬಗ್ಗೆ ಮಾತನಾಡುವ ಪ್ರತಿಯೊಂದು ಅಧ್ಯಾಯದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಬಹುಪಾಲು ಭಾಗವಾಗಿದ್ದ ಮುಸ್ಲಿಮರನ್ನು ಹಿಂದೂಗಳಿಂದ ಪ್ರತ್ಯೇಕ ಭಾಗವಾಗಿ ಉಲ್ಲೇಖಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

    ಮುಖ್ಯವಾಗಿ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವಿಕೆ ಕೂಡ “ಮುಸ್ಲಿಂ ರಾಷ್ಟ್ರೀಯತೆ” ಸಲುವಾಗಿ ಎಂದು ಪದೇ ಪದೇ ಪುಸ್ತಕದಲ್ಲಿ ಒತ್ತಿ ಹೇಳಲಾಗಿದೆ. ಪ್ರಶ್ನೋತ್ತರ ವಿಭಾಗದಲ್ಲಿಯೂ ಸಹ ಪುಸ್ತಕವು ವಿದ್ಯಾರ್ಥಿಗಳಿಗೆ “ಭಾರತದಲ್ಲಿ ಮುಸ್ಲಿಂ ರಾಷ್ಟ್ರೀಯತೆಯ ಕಾರಣವನ್ನು ಬೆಂಬಲಿಸಲು ಅಧ್ಯಾಯದಲ್ಲಿ ಉಲ್ಲೇಖಿಸಲಾದ ಎಲ್ಲಾ ನಾಯಕರು ನಿರ್ವಹಿಸಿದ ಪಾತ್ರವನ್ನು ಚರ್ಚಿಸಲು” ಹೇಳಲಾಗಿದೆ.

    9 ನೇ ತರಗತಿಯ ಅಧ್ಯಾಯಗಳಲ್ಲಿ ನ್ಯಾಷನಲ್ ಕಾಂಗ್ರೆಸ್ ಉರ್ದುವನ್ನು ಹಿಂದಿಗೆ ಬದಲಿಸಲು ಕ್ರಮ ಕೈಗೊಂಡಿತು. ಮತ್ತು ಅಧಿಕೃತ ಗೀತೆಯಾಗಿ `ಒಂದೇ ಮಾತರಂ’ ಅನ್ನು ಪರಿಚಯಿಸಲು ಪ್ರಯತ್ನಿಸಿತು. ಈ ಹಾಡು ಮುಸ್ಲಿಂ ವಿರೋಧಿ ಹಿನ್ನೆಲೆಯನ್ನು ಹೊಂದಿತ್ತು ಮತ್ತು ದ್ವೇಷವನ್ನು ಕೆರಳಿಸಿತು. ಪಾಕಿಸ್ತಾನದಲ್ಲಿ ವಿಭಜನೆಯ ನಂತರ ಹಿಂದೂಗಳು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಗುಣಮಟ್ಟದ ಆಹಾರ ನೀಡಲಾಯಿತು. ಭಾರತದ ಸರ್ಕಾರ ಸಾಮೂಹಿಕ ಹಿಂಸಾಚಾರವನ್ನು ನಡೆಸಿತು. ನೀರಾವರಿ ವಿಚಾರದಲ್ಲೂ ಪಾಕ್ ಗೆ ಭಾರತದಿಂದ ಅನ್ಯಾಯವಾಗಿದೆ ಎಂದು ಪಠ್ಯದಲ್ಲಿ ತಿಳಿಸಿದೆ. ಇದನ್ನೂ ಓದಿ: 1,487 ಗ್ರಾಂ ಚಿನ್ನ ಸಾಗಾಟ ಮಾಡ್ತಿದ್ದ ಏರ್ ಇಂಡಿಯಾ ಸಿಬ್ಬಂದಿ ಅರೆಸ್ಟ್

  • ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪುಂಸಕ- ಹೆಚ್‍ಡಿಕೆ ವಿರುದ್ಧ ಸಿಟಿ ರವಿ ವಾಗ್ದಾಳಿ

    ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪುಂಸಕ- ಹೆಚ್‍ಡಿಕೆ ವಿರುದ್ಧ ಸಿಟಿ ರವಿ ವಾಗ್ದಾಳಿ

    ನವದೆಹಲಿ: ಗಾಂಧಿಯನ್ನು ಹತ್ಯೆ ಮಾಡಿದ್ದು ಬ್ರಾಹ್ಮಣ ಸಮುದಾಯದ ನಾಥೂರಾಮ್ ಗೂಡ್ಸೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಮಹಾತ್ಮ ಗಾಂಧಿ ಮೇಲೆ ಜನರು ನಂಬಿಕೆ ಇಟ್ಟಿದ್ದರು, ಆದರೂ ದೇಶ ವಿಭಜನೆಯಾಯಿತು. ಟಿಪ್ಪು ಸುಲ್ತಾನ್ (Tippu Sultan) ಜಾತಿ ಉಲ್ಲೇಖಿಸಿ ಅವನು ಮಾಡಿದ ಮಾರಣಹೋಮದ ಬಗ್ಗೆ ಅವರು ಮಾತನಾಡುತ್ತಾರಾ? ಸತ್ಯವನ್ನು ಹೇಳಲು ಧೈರ್ಯ ಇಲ್ಲದವನು ರಾಜಕೀಯ ನಪಂಸಕ ಎಂದು ಸಿ.ಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಸರ್ವಾಂತರ್ಯಾಮಿ, ಸರ್ವಜ್ಞರಾಗಿದ್ದಾರೆ ಅವರಿಗೆ ಎಲ್ಲವೂ ಗೊತ್ತಿದೆ. ಈಗ ಯಾವುದರ ಬಗ್ಗೆ ಚರ್ಚೆಯಾಗಬೇಕು? ಜಾತಿಯ ಬಗ್ಗೆ ಚರ್ಚೆಯಾಗಬೇಕೊ ಅಥವಾ ಅಭಿವೃದ್ಧಿ ಬಗ್ಗೆಯೂ ದೇವೇಗೌಡ (HD Devegowda) ರು ಮೊದಲ ಬಾರಿ ಮಂತ್ರಿಯಾಗಿದ್ದು, ರಾಮಕೃಷ್ಣ ಹೆಗಡೆ ಕಾಲದಲ್ಲಿ ರಾಮಕೃಷ್ಣ ಹೆಗಡೆ ಯಾವ ಜಾತಿ? ಜಾತಿ ರಾಜಕಾರಣ ಮಾಡುವವರು ಜಾತ್ಯತೀತರು ಹಿಂದುತ್ವ, ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡವರು ಕೋಮುವಾದಿಗಳ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹಸಿವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ: ಜಮೀರ್

    ಕೆಆರ್‍ಎಸ್‍ (KRS Dam) ಗೆ ಹಾರಿ ಶಿಕ್ಷಕ ಆತ್ಮಹತ್ಯೆ ಆರೋಪದ ಬಗ್ಗೆ ಮಾತನಾಡಿ, ಯಾರೋ ಎಲ್ಲೂ ಹೋಗಿ ಸತ್ತರೆ ಯಾರು ಜವಬ್ದಾರಿ? ಹೊಳೆನರಿಸಿಪುರದಲ್ಲಿ ರೈಲ್ವೆ ಟ್ರ್ಯಾಕ್‍ಗೆ ಬಿದ್ದು ಇಬ್ಬರು ಸತ್ತರೆ ಅದಕ್ಕೆ ಹೊಣೆ ಯಾರು? ಸತ್ಯಹರಿಶ್ಚಂದ್ರ ಥರ ಇರೋರು ಬೇರೆಯವರ ಮೇಲೆ ಆರೋಪ ಮಾಡಬಹುದು. ಜಂತಕಲ್ ಮೈನಿಂಗ್ ಕೇಸ್ (Janthakal mining case) ಯಾರ ಮೇಲೆ ಇದೆ ಯಾರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ನಾನು ಜಾಮೀನಿನ ಮೇಲೆ ಆಚೆ ಇಲ್ಲ ಇಂದು ತಿರುಗೇಟು ನೀಡಿದರು. ಹೆಚ್‍ಡಿಕೆಗೆ ಪುರೋಹಿತರು ಅಡ್ಡಗಟ್ಟಿದ ವಿಚಾರವಾಗಿ ಮಾತನಾಡಿ ಆಕ್ಷನ್ ಗೆ ರಿಯಾಕ್ಷನ್ ಇರುತ್ತೆ ಎಂದರು.

    ಬಿಜೆಪಿಯಲ್ಲಿ ಯಡಿಯೂರಪ್ಪ (BS Yediyurappa) ಕಡೆಗಣನೆ ಹೆಚ್‍ಡಿಕೆ ಆರೋಪದ ಬಗ್ಗೆ ಮಾತನಾಡಿ, ಯಡಿಯೂರಪ್ಪ ಜೊತೆ ಯಾವಾಗಲೂ ಕುಮಾರಸ್ವಾಮಿ ನಿಂತಿಲ್ಲ, ಅವರ ಜೊತೆ ನಿಂತಿದ್ದರೆ ಅವರ ಬಗ್ಗೆ ಮಾತನಾಡಲು ನೈತಿಕತೆ ಇರುತ್ತಿತ್ತು. ಸಿಂಪತಿಗೂ ಕೂಡ ಸರಕಾರ ಮಾಡಲು ಬಿಡಲಿಲ್ಲ ಕಾಂಗ್ರೆಸ್ (Congress) ನವರ ಜೊತೆ ಸೇರಿ ಸಿಎಂ ಆದವರು ಹೆಚ್‍ಡಿಕೆ, ಬಿಎಸ್ ವೈ ಆನಂದದಿಂದ ಪಕ್ಷದಲ್ಲಿ ಇದ್ದಾರೆ ಅವರು ಆನಂದದಿಂದ ಇರೋದನ್ನು ನೋಡಿ ಇವರಿಗೆ ಸಂಕಟ ಅವರು ಬೆಳಸಿದ ಪಕ್ಷ ಬಿಜೆಪಿ, ಬಿಜೆಪಿಯಿಂದ ಬೆಳೆದ ನಾಯಕ ಬಿಎಸ್‍ವೈ ಎಂದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k