Tag: Mahatma Gandhi

  • Gandhi Jayanti: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಮೋದಿ

    Gandhi Jayanti: ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ ಗೌರವ ನಮನ ಸಲ್ಲಿಸಿದ ಮೋದಿ

    ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ (Mahatma Gandhi) ಅವರ 156ನೇ ಜನ್ಮ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಗುರುವಾರ ರಾಜ್‌ಘಾಟ್‌ಗೆ ತೆರಳಿ ಗಾಂಧಿಗೆ ಗೌರವ ನಮನ ಸಲ್ಲಿಸಿದರು.

    ನಾಡಹಬ್ಬ ದಸರಾ ಜೊತೆಗೆ ಗಾಂಧಿ ಜಯಂತಿ (Gandhi Jayanti) ಬಂದಿದೆ. ಇಂದು (ಅ.2) ಮಹಾತ್ಮ ಗಾಂಧೀಜಿ ಅವರ 156ನೇ ವರ್ಷದ ಜನ್ಮ ದಿನ. ಇದನ್ನೂ ಓದಿ: ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಗಾಂಧಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, ಗಾಂಧಿ ಜಯಂತಿಯು ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವ ಬಗ್ಗೆ, ಅವರ ಆದರ್ಶಗಳು ಮಾನವ ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ಪ್ರದರ್ಶಿಸಿದರು ಎಂದು ಸ್ಮರಿಸಿದ್ದಾರೆ.

    ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಕರುಣೆಯ ಶಕ್ತಿಯನ್ನು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.

    ಇದೇ ದಿನ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನ ಕೂಡ. ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಘಾಟ್‌ನಲ್ಲಿ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ: ಅರಮನೆ ನಗರಿಯಲ್ಲಿ ದಸರಾ ವೈಭವ – ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ

    ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಸಾಧಾರಣ ರಾಜಕಾರಣಿಯಾಗಿದ್ದು, ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿತು. ಅವರು ಅನುಕರಣೀಯ ನಾಯಕತ್ವ, ಶಕ್ತಿ ಮತ್ತು ನಿರ್ಣಾಯಕ ಕ್ರಿಯೆಯ ವ್ಯಕ್ತಿತ್ವವನ್ನು ಹೊಂದಿದ್ದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಅವರ ಸ್ಪಷ್ಟ ಕರೆ ನಮ್ಮ ಜನರಲ್ಲಿ ದೇಶಭಕ್ತಿಯ ಮನೋಭಾವವನ್ನು ಹುಟ್ಟುಹಾಕಿತು. ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಅವರು ನಮ್ಮನ್ನು ಪ್ರೇರೇಪಿಸುತ್ತಲೇ ಇದ್ದಾರೆ ಎಂದು ಮೋದಿ ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  • ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ರಾಮಚಂದ್ರ ಗುಹಾಗೆ ರಾಜ್ಯ ಸರ್ಕಾರದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

    ಬೆಂಗಳೂರು: ಇತಿಹಾಸಕಾರ, ಅಂಕಣಕಾರ ಡಾ. ರಾಮಚಂದ್ರ ಗುಹಾ (Ramachandra Guha) ಅವರಿಗೆ ಕರ್ನಾಟಕ ಸರ್ಕಾರದ (Karnataka Government) 2025ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ (Mahatma Gandhi Seva Award 2024) ಲಭಿಸಿದೆ.

    ಗಾಂಧೀಜಿಯವರ (Mahatma Gandhi) ಜೀವನ ಮೌಲ್ಯಗಳನ್ನು ಸಮಾಜದಲ್ಲಿ ಹರಡಲು ಮಹತ್ತರ ಕೊಡುಗೆ ನೀಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಪ್ರದಾನ ಮಾಡುವ ಈ ಪ್ರಶಸ್ತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಪ್ರತಿ ವರ್ಷ ನೀಡಲಾಗುತ್ತದೆ.

    ಗಾಂಧೀಜಿಯವರ ತತ್ವ, ಮೌಲ್ಯ ಹಾಗೂ ಸಮಾಜಮುಖಿ ಚಿಂತನೆಗಳನ್ನು ಜನಮನಗಳಲ್ಲಿ ಬಿತ್ತುವಲ್ಲಿ ಮಹತ್ವದ ಪಾತ್ರವಹಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಡಾ. ರಾಮಚಂದ್ರ ಗುಹಾ ಅವರನ್ನು ಪ್ರಶಸ್ತಿ ಆಯ್ಕೆ ಮಾಡಿದೆ. ಇದನ್ನೂ ಓದಿ:  ಇದನ್ನೂ ಓದಿ: ಕಾಂತಾರದ ನಂತರದ What Next? – ಪ್ರಶ್ನೆಗೆ ಉತ್ತರ ನೀಡಿದ ರಿಷಭ್‌ ಶೆಟ್ಟಿ

     
    ರಾಮಚಂದ್ರ ಗುಹಾ ಪ್ರಮುಖ ಕೃತಿಗಳು:
    India After Gandhi (ಸ್ವಾತಂತ್ರ್ಯಾನಂತರ ಭಾರತದ ಇತಿಹಾಸ)
    A Corner of a Foreign Field (ಭಾರತೀಯ ಕ್ರಿಕೆಟ್‌ನ ಸಾಮಾಜಿಕ ಇತಿಹಾಸ)
    Gandhi Before India (ಮಹಾತ್ಮ ಗಾಂಧೀಜಿಯವರ ಜೀವನಚರಿತ್ರೆಯ ಮೊದಲ ಭಾಗ)
    Gandhi: The Years That Changed the World (ಜೀವನಚರಿತ್ರೆಯ ಎರಡನೇ ಭಾಗ)
    The Unquiet Woods (ತಳಸ್ಥರದ ಪರಿಸರ ಚಳವಳಿಗಳ ಅಧ್ಯಯನ)

  • ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಅಪಚಾರ – ಧ್ವಂಸಗೊಳಿಸಿ, ಭಾರತ ವಿರೋಧಿ ಬರಹದಿಂದ ವಿಕೃತಿ

    ಲಂಡನ್‌ನಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಅಪಚಾರ – ಧ್ವಂಸಗೊಳಿಸಿ, ಭಾರತ ವಿರೋಧಿ ಬರಹದಿಂದ ವಿಕೃತಿ

    – ಗಾಂಧಿ ಜಯಂತಿಗೂ ಮುನ್ನವೇ ಖಂಡನೀಯ ಕೃತ್ಯ

    ಲಂಡನ್: ಗಾಂಧಿ ಜಯಂತಿಗೂ ಮುನ್ನವೇ ಲಂಡನ್‌ನಲ್ಲಿ (London) ಕೃತ್ಯವೊಂದು ನಡೆದಿದೆ. ಮಹಾತ್ಮ ಗಾಂಧಿ (Mahatma Gandhi) ಅವರ ಪ್ರತಿಮೆಯನ್ನು ಧ್ವಂಸಗೊಳಿಸಿ, ಅದರ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳನ್ನು ಬರೆದು ವಿಕೃತಿ ಮರೆದಿದ್ದಾರೆ.

    ಸೋಮವಾರ (ಸೆ.29) ಲಂಡನ್ ವಿಶ್ವವಿದ್ಯಾಲಯದ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿ ಧ್ಯಾನಸ್ಥ ಭಂಗಿಯಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ವಿಕೃತಿ ಮರೆದಿದ್ದಾರೆ. ಪ್ರತಿಮೆಯ ಸ್ತಂಭದ ಮೇಲೆ ಭಾರತ ವಿರೋಧಿ ಬರಹಗಳು ಕಂಡುಬಂದಿದೆ. ಈ ಕೃತ್ಯವನ್ನು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ತೀವ್ರವಾಗಿ ಖಂಡಿಸಿದ್ದು, ಪ್ರತಿಮೆಯ ಮೂಲ ಘನತೆಗಾಗಿ ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ. ಈ ಕುರಿತು ಈಗಾಗಲೇ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಎಂದು ತಿಳಿಸಿದೆ.ಇದನ್ನೂ ಓದಿ: ಪತ್ನಿ ಕೊಲೆ ಮಾಡಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಟೆಕ್ಕಿ

    ಈ ಕುರಿತು ಭಾರತೀಯ ಹೈಕಮಿಷನ್ (Indian High Commission) ಹೇಳಿಕೆ ಬಿಡುಗಡೆ ಮಾಡಿದ್ದು, ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿದ್ದು, ನಾಚಿಕೆಗೇಡಿನ ಸಂಗತಿ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಅಹಿಂಸಾ ದಿನವೆಂದು ಗೊತ್ತುಪಡಿಸಲಾದ ಮೂರು ದಿನಗಳ ಮೊದಲು ನಡೆದ ಹಿಂಸಾತ್ಮಕ ದಾಳಿಯಿದು ಎಂದು ತಿಳಿಸಿದೆ.

    ಸದ್ಯ ಈ ಕೃತ್ಯದ ವರದಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಮೆಟ್ರೋಪಾಲಿಟನ್ ಪೊಲೀಸರು ಮತ್ತು ಸ್ಥಳೀಯ ಕ್ಯಾಮ್ಡೆನ್ ಕೌನ್ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಹಾತ್ಮ ಗಾಂಧಿಯವರು ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದ್ದರು. ಅದರ ಗೌರವಾರ್ಥವಾಗಿ 1968ರಲ್ಲಿ ಇಂಡಿಯಾ ಲೀಗ್‌ನ ಬೆಂಬಲದೊಂದಿಗೆ ಮಹಾತ್ಮ ಗಾಂಧಿಯವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿತ್ತು.ಇದನ್ನೂ ಓದಿ: ಇನ್ಮುಂದೆ ಮುಂಬೈ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ – ಟ್ರಾಫಿಕ್ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್!

  • ರಷ್ಯಾ ಕಂಪನಿಯ ಬಿಯರ್‌ ಬಾಟಲ್‌ ಮೇಲೆ ಗಾಂಧೀಜಿ ಭಾವಚಿತ್ರ – ನೆಟ್ಟಿಗರ ಆಕ್ರೋಶ

    ರಷ್ಯಾ ಕಂಪನಿಯ ಬಿಯರ್‌ ಬಾಟಲ್‌ ಮೇಲೆ ಗಾಂಧೀಜಿ ಭಾವಚಿತ್ರ – ನೆಟ್ಟಿಗರ ಆಕ್ರೋಶ

    ಮಾಸ್ಕೋ: ರಷ್ಯಾದ ಕಂಪನಿಯೊಂದರ ಬಿಯರ್‌ ಬಾಟಲ್‌ಗಳ ಮೇಲೆ ಭಾರತದ ರಾಷ್ಟ್ರಪಿತ ಗಾಂಧೀಜಿ ಅವರ ಭಾವಚಿತ್ರ ಮುದ್ರಿಸಿ ಮಾರಾಟ ಮಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ.

    ಬ್ರೂವರೀಸ್‌ ಕಂಪನಿ ತಯಾರಿಸುವ ಬಿಯರ್‌ ಬಾಟಲ್‌ಗಳಲ್ಲಿ ಗಾಂಧೀಜಿ ಅವರ ಭಾವಚಿತ್ರ ಹಾಗೂ ಸಹಿ ಇರುವುದು ಕಂಡುಬಂದಿದೆ. ಬಿಯರ್‌ ಬಾಟಲ್‌ ಪ್ರದರ್ಶಿಸುವ ವೀಡಿಯೋ ಇನ್‌ಸ್ಟಗ್ರಾಮ್‌ನಲ್ಲಿ ವೈರಲ್‌ ಆಗಿದೆ. ಇದಕ್ಕೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ಈ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಗಾಂಧಿಯವರು ತಮ್ಮ ಜೀವನದುದ್ದಕ್ಕೂ ಮದ್ಯಪಾನದಿಂದ ದೂರವಿರುವುದನ್ನು ಪ್ರತಿಪಾದಿಸಿದ್ದರು. ಈಗ ಎಣ್ಣೆಗೆ ಅವರ ಫೋಟೊವನ್ನೇ ಬಳಸಿರುವುದು ಸರಿಯಲ್ಲ ಎಂದು ಅನೇಕರು ಟೀಕಿಸಿದ್ದಾರೆ.

    ಮದ್ಯಪಾನಕ್ಕೆ ಸಂಬಂಧಿಸಿದಂತೆ ಗಾಂಧಿಯವರ ಚಿತ್ರವನ್ನು ಬಳಸುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಇಸ್ರೇಲ್‌ನ 71 ನೇ ಸ್ವಾತಂತ್ರ್ಯ ದಿನಾಚರಣೆಯ ನೆನಪಿಗಾಗಿ ಇಸ್ರೇಲಿ ಕಂಪನಿಯೊಂದು ತನ್ನ ಮದ್ಯದ ಬಾಟಲಿಗಳ ಮೇಲೆ ಮಹಾತ್ಮ ಗಾಂಧಿಯವರ ಚಿತ್ರವನ್ನು ಹಾಕುವ ಮೂಲಕ ವಿವಾದ ಹುಟ್ಟುಹಾಕಿತ್ತು. ಭಾರೀ ವಿರೋಧದ ಬಳಿಕ ಭಾರತ ಸರ್ಕಾರಕ್ಕೆ ಕ್ಷಮೆಯಾಚಿಸಿತು.

  • ಬಿಜೆಪಿ ಕಾಲದಲ್ಲಿ ಅತ್ಯಾಚಾರ ಆಗಿಲ್ವಾ?: ಸಿದ್ದರಾಮಯ್ಯ

    ಬಿಜೆಪಿ ಕಾಲದಲ್ಲಿ ಅತ್ಯಾಚಾರ ಆಗಿಲ್ವಾ?: ಸಿದ್ದರಾಮಯ್ಯ

    – ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಹೋರಾಟ ಮಾಡಬೇಕು
    – ಅಂಬೇಡ್ಕರ್, ಬಾಪೂಜಿ ಆರ್‌ಎಸ್‌ಎಸ್ ವಿರೋಧಿಸುತ್ತಿದ್ದರು

    ಬೆಳಗಾವಿ: ಬಿಜೆಪಿ (BJP) ಕಾಲದಲ್ಲಿ ಯಾವುದೇ ಅತ್ಯಾಚಾರ ಆಗಿಲ್ವಾ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.

    ಬೆಂಗಳೂರಿನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವರ ಕಾಲದಲ್ಲಿ ಅತ್ಯಾಚಾರ ಆಗಿಲ್ವಾ? ಈ ರೀತಿ ಆಗಬಾರದು. ಮಹಿಳೆಯರಿಗೆ ರಕ್ಷಣೆ ಸಿಗಬೇಕು. ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು ಇಂಥ ಕೆಲಸ ಮಾಡುತ್ತವೆ. ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು. ಇದನ್ನೂ ಓದಿ: ಭೂ ಕಬಳಿಸುತ್ತಾ ಬರುತ್ತಿದೆ ಸಮುದ್ರ; ಕಡಲಿನ ಮುಂದೆ ತಾಪಃಹಾರ ಮಂತ್ರ ಪಠಣಕ್ಕೆ ವೇದಿಕೆ ಸಜ್ಜು

    ಇನ್ನು ಬೆಳಗಾವಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್‌ಎಸ್‌ಎಸ್ (RSS) ಸಿದ್ಧಾಂತದ ವಿರುದ್ಧ ಹೋರಾಟ ಮಾಡುವ ಕರ್ತವ್ಯ ಪ್ರತಿಯೊಂದು ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ. ಆರ್‌ಎಸ್‌ಎಸ್ ಸಿದ್ಧಾಂತವೇ ಬಿಜೆಪಿ ಸಿದ್ಧಾಂತ. ಆರ್‌ಎಸ್‌ಎಸ್ ಕೈಗೊಂಬೆಯಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಒಡಕು ಮತ್ತು ತಾರತಮ್ಯ ಮಾಡುವುದುನ್ನು ಬಿಜೆಪಿ ವ್ಯವಸ್ಥಿತವಾಗಿ ಮಾಡುತ್ತಿದೆ. ಆರ್‌ಎಸ್‌ಎಸ್‌ ಅನ್ನು ಅಂಬೇಡ್ಕರ್, ಬಾಪೂಜಿ, ವಿರೋಧ ಮಾಡುತ್ತಿದ್ದರು. ನಮ್ಮ ದೇಶ ಬಹುತ್ವದ ದೇಶ. ಅನೇಕ ಜಾತಿ, ಧರ್ಮ, ಸಂಸ್ಕೃತಿಗಳಿವೆ. ಎಲ್ಲರನ್ನೂ ಮನುಷ್ಯರಾಗಿ ಕಾಣುವುದು ಅವಶ್ಯ. ಬಿಜೆಪಿ ಅಂಬೇಡ್ಕರ್, ಬಾಪು, ಸಂವಿಧಾನವನ್ನು ವಿರೋಧ ಮಾಡುತ್ತದೆ. ಹೀಗಾಗಿ ಈ ಸಮಾವೇಶ ಆಯೋಜನೆ ಮಾಡಲಾಗಿದೆ. ಸಂವಿಧಾನ, ಬಾಪು, ಅಂಬೇಡ್ಕರ್ ತತ್ವಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಂಡು ಹೋಗಲು ಈ ಸಮಾವೇಶ ಎಂದು ತಿಳಿಸಿದರು. ಇದನ್ನೂ ಓದಿ: ಹಾವೇರಿ| ಟ್ರ‍್ಯಾಕ್ಟರ್‌ಗೆ ಲಾರಿ ಡಿಕ್ಕಿ – ರಸ್ತೆಗೆ ಬಿದ್ದ ಕ್ರೂಡ್ ಆಯಿಲ್ ತುಂಬಿಕೊಳ್ಳಲು ಮುಗಿಬಿದ್ದ ಜನ

    ಬಿಜೆಪಿ ಸಂವಿಧಾನ, ಅಂಬೇಡ್ಕರ್ ಬಗ್ಗೆ ಬಹಳಷ್ಟು ಪ್ರೀತಿ ತೋರುತ್ತಿದ್ದಾರೆ. ಆದರೆ ಬಿಜೆಪಿ ಯಾವತ್ತೂ ಅಂಬೇಡ್ಕರ್ ಮತ್ತು ವಿಚಾರಗಳಿಗೆ ವಿರುದ್ಧ. ಬಾಪು ಮತ್ತು ಅಂಬೇಡ್ಕರ್ ವಿಚಾರ ರಕ್ಷಣೆ ಮಾಡಬೇಕು, ಸಂವಿಧಾನ ರಕ್ಷಣೆ ಮಾಡಬೇಕು. ಸಂವಿಧಾನ ಜಾರಿಗೆ ಬಂದಾಗ ಬಿಜೆಪಿ ವಿರೋಧ ಮಾಡಿದೆ. ಬಾಪು, ಅಂಬೇಡ್ಕರ್ ಪ್ರತಿಕೃತಿ ದಹನ ಮಾಡಿದವರು ಬಿಜೆಪಿಯವರು. ಸಂವಿಧಾನ ಜಾರಿ ಮಾಡೋದೆ ನಮ್ಮ ಸಿದ್ಧಾಂತ. ಸಂವಿಧಾನವೇ ನಮ್ಮ ಸಿದ್ಧಾಂತ ಎಂದರು. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

    ನಮ್ಮ ಅಧಿಕಾರ ಅವಧಿಯಲ್ಲಿ ಬಡವರಿಗೆ, ಎಲ್ಲಾ ಧರ್ಮ, ಜಾತಿಯವರಿಗೆ ಬಲ ನೀಡುವ ಕಾರ್ಯಕ್ರಮ ನೀಡಿದ್ದೇವೆ. ಈಗ 56,000 ಕೋಟಿ ರೂಪಾಯಿಗಳಲ್ಲಿ ಐದು ಗ್ಯಾರಂಟಿ ನೀಡಿದ್ದೇವೆ. ಇದರ ಜೊತೆಗೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಕಾಂಗ್ರೆಸ್ ಮಾತ್ರ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತದೆ. ನಾವು ಯಾರನ್ನೂ ದ್ವೇಷ ಮಾಡಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತ ಜನರ ಮನಸ್ಥಿತಿ ಛಿಧ್ರಛಿದ್ರ ಮಾಡುತ್ತದೆ. ಜನರನ್ನು ಹೊಡೆದಾಡುವಂತೆ ಮಾಡುತ್ತದೆ. ಪ್ರಜಾಪ್ರಭುತ್ವದಲ್ಲಿ ಬಿಜೆಪಿಗೆ ನಂಬಿಕೆ ಇಲ್ಲ. ಇಂತಹ ಬಿಜೆಪಿಯನ್ನು ನಾವು ಸೋಲಿಸಬೇಕು. ನಮ್ಮ ಸಿದ್ಧಾಂತ ಗೆದ್ದರೆ ಸಮಾಜದಲ್ಲಿ ಸಮಾನತೆ ಉಳಿಯುತ್ತದೆ. ಆಗ ಮಾತ್ರ ಸಮ ಸಮಾಜ ಕಟ್ಟಬಹುದು ಎಂದು ನುಡಿದರು. ಇದನ್ನೂ ಓದಿ: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿ – ಯದುವೀರ್ ಒಡೆಯರ್ ಬಾಗಿನ ಅರ್ಪಣೆ

  • ದಿನೇಶ್ ಗುಂಡೂರಾವ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ, ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?- ಸಿ.ಟಿ.ರವಿ

    ದಿನೇಶ್ ಗುಂಡೂರಾವ್ ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ, ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ?- ಸಿ.ಟಿ.ರವಿ


    ಬೆಂಗಳೂರು: ದಿನೇಶ್ ಗುಂಡೂರಾವ್ (Dinesh Gundurao) ಅವರು ಗೋಹತ್ಯೆಗೆ ಬೆಂಬಲ ನೀಡುತ್ತಿದ್ದಾರೋ? ಗೋಮಾಂಸ ತಿನ್ನೋದನ್ನ ಸಮರ್ಥನೆ ಮಾಡ್ತಿದ್ದಾರೋ? ಅವರು ಯಾವುದನ್ನು ಉತ್ತೇಜನ ಮಾಡುವುದಕ್ಕೆ ಹೊರಟಿದ್ದಾರೆ. ಏನಾದ್ರು ಹೊಸ ದಂಧೆ ಶುರು ಮಾಡುವುದಕ್ಕೆ ಹೊರಟಿದ್ದಾರಾ? ದಂಧೆ ಶುರು ಮಾಡುವುದಕ್ಕೆ ಸಹಕಾರ ಸಿಗಲಿ ಎಂದು ಮಾತಾಡ್ತಿದ್ದಾರಾ? ಎಂದು ಬಿಜೆಪಿ ನಾಯಕ ಸಿಟಿ ರವಿ (C T Ravi) ಕಿಡಿಕಾರಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿ ಮಾತನಾಡಿದ ಅವರು, ಸಾವರ್ಕರ್ ದನದ ಮಾಂಸ ತಿನ್ನುತ್ತಿದ್ದರು ಎಂಬ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ನಾನು ಅವರ ಹೇಳಿಕೆ ಗಮನಿಸಿದ್ದೇನೆ. ಮೂಲಭೂತ ವಾದ, ರಾಷ್ಟ್ರವಾದದ ನಡುವೆ ಅಗಾಧವಾದ ಅಂತರ ಇದೆ. ಮೂಲಭೂತ ವಾದ ದೇಶ ಒಡೆಯಿತು. ಅಖಂಡ ಭಾರತದ ವಿಭಜನೆಗೆ ಕಾರಣವಾಯ್ತು. ಪಾಕಿಸ್ತಾನ ರಚನೆಗೆ ಕಾರಣವಾಯ್ತು. ಲಕ್ಷಾಂತರ ಜನರ ಮಾರಣ ಹೋಮಕ್ಕೆ ಕಾರಣವಾಯ್ತು. ರಾಷ್ಟ್ರವಾದ ದೇಶಭಕ್ತಿಯಿಂದ ಕೂಡಿರೋದು. ರಾಷ್ಟ್ರವಾದದಿಂದ ದೇಶ ಉಳಿಸಬಹುದು. ಮೂಲಭೂತ ವಾದದಿಂದ ಪಾಕಿಸ್ತಾನ ನಿರ್ಮಾಣ ಆಗುತ್ತದೆ. ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಮೂಲಭೂತ ವಾದವನ್ನು ಸಮರ್ಥನೆ ಮಾಡ್ತಿದೆಯೋ? ಅಥವಾ ರಾಷ್ಟ್ರೀಯ ವಾದವನ್ನೋ? ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಮಾಡೋದು ನಿಮ್ಮ ಉದ್ದೇಶನಾ? ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗ ದಸರಾಗೆ ವೈಭವದ ಚಾಲನೆ

    ಗಾಂಧೀಜಿ (Mahatma Gandhi) ಗೋಹತ್ಯೆ ಪರ ಇದ್ರಾ? ವಿರೋಧ ಇದ್ರಾ? ಗಾಂಧಿ ಒಂದು ದಿನ ಅಧಿಕಾರ ಸಿಕ್ಕರೆ ಸಂಪೂರ್ಣ ಗೋಹತ್ಯೆ ನಿಷೇಧ ಮಾಡ್ತೀನಿ ಎಂದು ಹೇಳಿದ್ರು. ಹಾಗಾದರೆ ದಿನೇಶ್ ಗುಂಡೂರಾವ್ ಮತ್ತು ಪಾರ್ಟಿ ಗಾಂಧಿ ವಿಚಾರಧಾರೆ ಪರವೋ? ವಿರುದ್ದವೋ? ಗಾಂಧಿ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಎರಡನ್ನೂ ಸಮರ್ಥನೆ ಮಾಡುವುದಿಲ್ಲ. ಜಿನ್ನಾ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆ ಭಾರತದ ವಿಭಜನೆಯನ್ನು ಸಮರ್ಥನೆ ಮಾಡುತ್ತಾರೆ. ದಿನೇಶ್ ಗುಂಡೂರಾವ್ ಜಿನ್ನಾ ವಿಚಾರಧಾರೆ ಪರವೋ? ಗಾಂಧಿ ವಿಚಾರಧಾರೆ ಪರವೋ? ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಸಿಎಂ ಕೇಸ್‌ನಲ್ಲಿ ಅವರೇ ಜಡ್ಜ್, ಅವರೇ ಲಾಯರ್- ಸಿ.ಟಿ ರವಿ

    ನಾಗರೀಕ ಸಮಾಜಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆಗೆ ಸಾವರ್ಕರ್ ವಿಚಾರಧಾರೆ ಮಾತ್ರ ರಾಷ್ಟ್ರ ಉಳಿಸೋದು. ಸಮಾಜದ ನಡುವೆ ಮೌಲ್ಯಗಳು ಇರಬೇಕು. ಸಮಾಜದ ಒಳಗೆ ಅಹಿಂಸೆಬೇಕು ಅದಕ್ಕೆ ಗಾಂಧಿ ಬೇಕು. ರಾಷ್ಟ್ರದ ರಕ್ಷಣೆ ಅಹಿಂಸೆಯಿಂದ ಸಾಧ್ಯವಾಗುವ ಹಾಗಿದ್ದರೆ ಭಾರತ ದೊಡ್ಡ ಸೈನ್ಯ ಕಟ್ಟೋ ಅವಶ್ಯಕತೆ ಇರಲಿಲ್ಲ. ಪರಮಾಣು ಬಾಂಬ್, ಕ್ಷಿಪಣಿ ಇಟ್ಟುಕೊಳ್ಳೋ ಅವಶ್ಯಕತೆ ಇರಲಿಲ್ಲ. ಎಕೆ47 ಅವಶ್ಯಕತೆ ಇರಲಿಲ್ಲ. ಸೈನ್ಯ ಸಮರ್ಥವಾಗಿ ಇರಲಿಲ್ಲ ಅಂದಿದ್ದರೆ 1948ರಲ್ಲೇ ಭಾರತವನ್ನು ಪಾಕಿಸ್ತಾನ ಮುಗಿಸುತ್ತಿತ್ತು. ಭಾರತ ಬಲವಾಗಬೇಕು ಎಂದು ಕನಸು ಕಂಡವರು ಸಾವರ್ಕರ್. ಸಾವರ್ಕರ್ ವಿಚಾರಧಾರೆ ಭಾರತೀಯತೆ ಬಲಗೊಳಿಸೋದು ಆಗಿತ್ತು. ಜಿನ್ನಾನಿಗೆ ಅವನಿಗೆ ಕೇಳಿದ್ದು ಕೊಡೋದು ಸಾವರ್ಕರ್ ವಿಚಾರಧಾರೆ ಆಗಿರಲಿಲ್ಲ. ದುರ್ದೈವದ ಸಂಗತಿ ಅಂದರೆ ಗಾಂಧಿ ಬದುಕಿರುವಾಗಲೇ ಭಾರತ ವಿಭಜನೆ ಆಯಿತು. ಭಾರತ ವಿಭಜನೆಯನ್ನ ಗಾಂಧಿ ವಿಚಾರಧಾರೆ ತಡೆಯಲು ಆಗಲಿಲ್ಲ ಅನ್ನೋದು ವಾಸ್ತವಿಕ ಸತ್ಯ ಎಂದು ಹೇಳಿದರು. ಇದನ್ನೂ ಓದಿ: 160 ಎಕರೆ ಪ್ರದೇಶದಲ್ಲಿ ಮೈಸೂರು ಫಿಲಂ ಸಿಟಿ ನಿರ್ಮಾಣ: ಸಿದ್ದರಾಮಯ್ಯ

  • ಬ್ರಾಹ್ಮಣ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು: ದಿನೇಶ್ ಗುಂಡೂರಾವ್

    ಬ್ರಾಹ್ಮಣ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು: ದಿನೇಶ್ ಗುಂಡೂರಾವ್

    – ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ವಾದ ಅಲ್ಲ

    ಬೆಂಗಳೂರು: ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ಅವರ ವಾದ ಅಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao)  ಹೇಳಿದ್ದಾರೆ.

    ನಗರದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಜಾಗೃತ ಕರ್ನಾಟಕ ಮತ್ತು ಅಹರ್ನಿಶಿ ಪ್ರಕಾಶನ ಅವರು ಆಯೋಜಿಸಿದ್ದ ‘ಗಾಂಧೀಜಿಯ ಹಂತಕ’ ಪುಸ್ತಕ ಬಿಡುಗಡೆ, ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇದನ್ನೂ ಓದಿ: ವಾರದಲ್ಲಿ ಸಿಎಂ ರಾಜೀನಾಮೆ ಕೊಡ್ತಾರೆ, ಸರ್ಕಾರ ಉರುಳುತ್ತೆ: ಛಲವಾದಿ

    ಸಾವರ್ಕರ್ ಮೂಲಭೂತವಾದಿಯಾಗಿದ್ದರು ಎನ್ನುವುದರಲ್ಲಿ ಸಂಶಯವಿಲ್ಲ. ಮೂಲಭೂತವಾದ ನಮ್ಮ ಭಾರತ ದೇಶದ ಸಂಸ್ಕೃತಿಯಲ್ಲ. ಇದು ಯುರೋಪ್‌ನಿಂದ ಬಂದಿರುವಂತದ್ದು. ಸಾವರ್ಕರ್ ಯೂರೋಪ್‌ನಿಂದ ಸಾಕಷ್ಟು ಪ್ರಭಾವ ಹೊಂದಿದ್ದರು. ಜೊತೆಗೆ ಬ್ರಾಹ್ಮಣ ಸಮಾಜದ ಸಾವರ್ಕರ್ ಅವರು ಮಾಂಸ ಸೇವಿಸುತ್ತಿದ್ದರು. ಮಾಂಸಹಾರ ಸೇವನೆಯನ್ನು ಅವರು ಬಹಿರಂಗವಾಗಿ ಸಮರ್ಥಿಸುತ್ತಿದ್ದರು. ಆದರೆ ಗಾಂಧೀಜಿಯವರು ಸಸ್ಯಾಹಾರಿ. ನಮ್ಮ ಸಂಸ್ಕೃತಿ, ಸಂಪ್ರದಾಯಗಳ ಮೇಲೆ ಗಾಂಧೀಜಿಯವರಿಗೆ ಅಪಾರವಾದ ನಂಬಿಕೆ ಇತ್ತು ಎಂದರು.

     

    ದೇಶದಲ್ಲಿ ದೇಶದಲ್ಲಿ ಗಾಂಧೀವಾದ ಗೆಲ್ಲಬೇಕೇ ಹೊರತು ಸಾವರ್ಕರ್ ವಾದ ಅಲ್ಲ. ಯಾಕೆಂದರೆ ಸಾವರ್ಕರ್ ರಾಷ್ಟ್ರೀಯವಾದಿ ಆಗಿದ್ದರೂ, ಅವರ ಮೂಲಭೂತವಾದ ದೇಶಕ್ಕೆ ವಿರುದ್ಧವಾಗಿದೆ. ಮತ್ತು ಗಾಂಧೀಜಿಯವರ ಹತ್ಯೆ ಮಾಡಿದ ಗೋಡ್ಸೆ, ಸಾವರ್ಕರ್ ವಾದದಿಂದ ಪ್ರಭಾವಿತರಾಗಿದ್ದರು. ಸಾವರ್ಕರ್ ಅವರಲ್ಲಿದ್ದ ಚಿಂತನೆಗಳು, ರಾಷ್ಟ್ರೀಯವಾದಿ ಚಿಂತನೆಗಳ ರೀತಿ ಕಂಡರೂ ಪ್ರಜಾಪ್ರಭುತ್ವದ ಪರವಾದ ವ್ಯಕ್ತಿತ್ವ ಅವರದ್ದಲ್ಲ ಎಂದು ಹೇಳಿದರು.

    ಮೂಲಭೂತವಾದದ ವಿರುದ್ಧದ ಹೋರಾಟದಲ್ಲಿ ಈ ಅಂಶವನ್ನು ಅರಿತು ನಾವು ಮುಂದೆ ಸಾಗಬೇಕಿದೆ. “ಗಾಂಧೀಜಿಯ ಹಂತಕ ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ” ಪುಸ್ತಕ ಗಾಂಧೀಜಿಯವರ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚಲ್ಲಿದೆ. ಯಾರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸದೇ, ವಿವರಗಳನ್ನ ಮಾತ್ರ ನೀಡಿರುವುದು ಪುಸ್ತಕದ ವಿಶೇಷ ಎಂದು ತಿಳಿಸಿದರು.ಇದನ್ನೂ ಓದಿ: ಕೆಂದ್ರದಿಂದ ತರೋದನ್ನು ರಾಜ್ಯಕ್ಕೆ ತನ್ನಿ, ರಾಜೀನಾಮೆ ಕೇಳುತ್ತಾ ಕೂತರೆ ಹೇಗೆ – ಹೆಚ್‌ಡಿಕೆ ವಿರುದ್ಧವೇ ಜಿಟಿಡಿ ಕಿಡಿ

  • ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ: ಮೋದಿ

    ನವದೆಹಲಿ: ಸತತ ಪ್ರಯತ್ನದಿಂದ ಮಾತ್ರ ಭಾರತವನ್ನು ಸ್ವಚ್ಛಗೊಳಿಸಲು ಸಾಧ್ಯ. ಅದಕ್ಕಾಗಿ ಸ್ವಚ್ಛ ಭಾರತ್ ಮಿಷನ್‍ನ್ನು (Swachh Bharat Campaign) ಬಲಪಡಿಸುವುದನ್ನು ಮುಂದುವರಿಸಿ ಎಂದು ಜನರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾರೆ.

    ಮಹಾತ್ಮ ಗಾಂಧಿಯವರ (Mahatma Gandhi) 155ನೇ ಜಯಂತಿಯ (Gandhiji Birth Anniversary) ಅಂಗವಾಗಿ ದೆಹಲಿಯ ಗಾಂಧಿ ಸ್ಮಾರಕಕ್ಕೆ ಅವರು ಗೌರವ ಸಲ್ಲಿಸಿದರು. ಬಳಿಕ ಅವರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, 2014 ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಸ್ವಚ್ಛತಾ ಅಭಿಯಾನವಾದ ಸ್ವಚ್ಛ ಭಾರತ್ ಮಿಷನ್‍ನ 10 ವರ್ಷಗಳನ್ನ ಪೂರೈಸಿದೆ. ಈ ಮಹತ್ವದ ದಿನವನ್ನು ಆಚರಿಸಲು ಶಾಲಾ ಮಕ್ಕಳೊಂದಿಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದೇನೆ. ನಾಗರಿಕರು ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: HMT ಕ್ಯಾಂಪಸ್‌ನಲ್ಲಿ ಪೌರ ಕಾರ್ಮಿಕರೊಂದಿಗೆ ಕಸ ಗುಡಿಸಿದ ಎಚ್‌ಡಿಕೆ

    ಸ್ವಚ್ಛ ಭಾರತವು ಪ್ರಪಂಚದ ಅತ್ಯಂತ ದೊಡ್ಡ ಮತ್ತು ಜನರ ಅತ್ಯಂತ ಯಶಸ್ವಿ ಸಂಕಲ್ಪವಾಗಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಜನರು ವಹಿಸಿದ್ದಾರೆ. ಸ್ವಚ್ಛ ಭಾರತ ಅಭಿಯಾನವು ಕೇವಲ ಸ್ವಚ್ಛತಾ ಆಂದೋಲನವಲ್ಲ. ಇದು ಈಗ ಸಮೃದ್ಧಿಯ ಹೊಸ ಹಾದಿಯಾಗುತ್ತಿದೆ ಎಂದಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನಖರ್ ರಾಜ್‍ಘಾಟ್‍ನಲ್ಲಿ ಗಾಂಧಿ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಹೈಪರ್‌ಸಾನಿಕ್‌ ಕ್ಷಿಪಣಿ ಪ್ರಯೋಗಿಸಿದ ಇರಾನ್‌

  • ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ನಕಲಿ ನೋಟು ಕೇಸ್‌ನಲ್ಲಿ ಗುಜರಾತ್‌ ಪೊಲೀಸರಿಗೆ ಶಾಕ್‌ – ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಇತ್ತು ಬಾಲಿವುಡ್‌ ನಟನ ಫೋಟೋ

    ಗಾಂಧೀನಗರ: ನಕಲಿ ನೋಟುಗಳ (Fake Notes) ಪ್ರಕರಣ ಬೇಧಿಸಿದ ಗುಜರಾತ್‌ ಪೊಲೀಸರು ಶಾಕ್‌ ಆಗಿದ್ದಾರೆ. 500 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಗಾಂಧೀಜಿ ಬದಲಿಗೆ ಬಾಲಿವುಡ್‌ ನಟ ಅನುಪಮ್‌ ಖೇರ್‌ (Anupam Kher) ಅವರ ಚಿತ್ರ ಬಳಸಿರುವುದು ಕಂಡುಬಂದಿದೆ.

    ಸುಮಾರು 1.6 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನೋಟುಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬದಲಿಗೆ ‘ರಿಸೋಲ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಪದ ಬಳಕೆ ಮಾಡಲಾಗಿದೆ. ಇದೀಗ ನೋಟಿನ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ದೇಶಿ ಹಸುಗಳನ್ನು ‘ರಾಜ್ಯಮಾತಾ’ ಎಂದು ಘೋಷಿಸಿದ ಮಹಾರಾಷ್ಟ್ರ ಸರ್ಕಾರ

    ಅಹಮದಾಬಾದ್‌ನ ವ್ಯಾಪಾರಿಯೊಬ್ಬರು ನಕಲಿ ನೋಟುಗನ್ನು ಬಳಸಿ ವಂಚಿಸಿರುವ ಸಂಬಂಧ ವೈರಲ್‌ ಆಗಿರುವ ವೀಡಿಯೋವನ್ನು ಟ್ಯಾಗ್‌ ಮಾಡಿ ಅನುಪಮ್‌ ಖೇರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. 500 ರೂ. ನೋಟುಗಳಲ್ಲಿ ಗಾಂಧೀಜಿಯವರ ಫೋಟೋ ಬದಲಿಗೆ ನನ್ನ ಫೋಟೋ ಎಂದು ನಟ ಶೀರ್ಷಿಕೆ ನೀಡಿದ್ದಾರೆ.

    ಸೆ.24 ರಂದು ನವರಂಗಪುರ ಪೊಲೀಸ್ ಠಾಣೆಯಲ್ಲಿ ಬುಲಿಯನ್ ವ್ಯಾಪಾರಿ ಮೆಹುಲ್ ಠಕ್ಕರ್ ದೂರು ದಾಖಲಿಸಿದ್ದರು. 1.6 ಕೋಟಿ ರೂ. ಮೌಲ್ಯದ 2,100 ಗ್ರಾಂ ಚಿನ್ನವನ್ನು ಒಳಗೊಂಡ ಡೀಲ್‌ಗಾಗಿ ಶಂಕಿತರು ತಮ್ಮ ಉದ್ಯೋಗಿಯೊಬ್ಬರನ್ನು ಸಂಪರ್ಕಿಸಿದ್ದರು. ಉಳಿದ 30 ಲಕ್ಷವನ್ನು ಮರುದಿನ ಪಾವತಿಸುವುದಾಗಿ ಭರವಸೆ ನೀಡಿ, 1.3 ಕೋಟಿ ನಗದು ನೀಡಿದ್ದಾರೆ. ಆದರೆ, ಚಿನ್ನವನ್ನು ಹಸ್ತಾಂತರಿಸಿದ ನಂತರ ಅವರು ಎಸ್ಕೇಪ್‌ ಆದರು. ಎಲ್ಲಾ ನೋಟುಗಳನ್ನು ಗಮನಿಸಿದಾಗ ನಕಲಿ ಎಂದು ತಿಳಿಯಿತು.

    ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: MUDA Scam Case: ಸಿಎಂ ಸಿದ್ದರಾಮಯ್ಯ ವಿರುದ್ಧ ಇಸಿಐಆರ್ ದಾಖಲಿಸಿದ ED

  • ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್ಯ

    ಬಲಪಂಥೀಯರೇ ಗಾಂಧಿಯನ್ನ ಕೊಂದು ಹಾಕಿರೋದು: ಸಿಎಂ ಸಿದ್ದರಾಮಯ್ಯ

    – ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ

    ಬೆಂಗಳೂರು: ಬಲಪಂಥೀಯರೇ ಗಾಂಧಿಯನ್ನು (Mahatma Gandhi) ಕೊಂದು ಹಾಕಿರೋದು. ಗಾಂಧಿ ಕೊಂದ ಗೋಡ್ಸೆಯನ್ನು ಪೂಜೆ ಮಾಡ್ತಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬೇಸರ ವ್ಯಕ್ತಪಡಿಸಿದರು.

    ’21ನೇ ಶತಮಾನಕ್ಕೆ ಮಹಾತ್ಮ ಗಾಂಧೀಜಿ’ ವಿಚಾರ ಕುರಿತ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ವಿಚಾರಗಳು, ಸಮಾಜಕ್ಕೆ ನೀಡಿದ ಮಾರ್ಗದರ್ಶನಗಳು ಪ್ರಸ್ತುತತೆ 19-20ನೇ ಶತಮಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಇಂದಿಗೂ ಅದು ಪ್ರಸ್ತುತ. ಗಾಂಧಿಯನ್ನ ಮರೆತರೆ ಇಡೀ ಸಮಾಜವನ್ನೇ ಮರೆತ ಹಾಗೆ, ವಿಶ್ವವನ್ನ ಮರೆತ ಹಾಗೆ. ಗಾಂಧಿ ವಿಚಾರ ಮೆಲುಕು ಹಾಕಬೇಕು. ಆ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುವುದು ಅವಶ್ಯಕ ಎಂದು ತಿಳಿಸಿದರು. ಇದನ್ನೂ ಓದಿ: MUDA Scam | ಪ್ರಾಸಿಕ್ಯೂಷನ್ ಸಮರದಲ್ಲಿ ಸೈಲೆಂಟ್ ಅಸ್ತ್ರ ಪ್ರಯೋಗಿಸಿದ ರಾಹುಲ್‌ ಗಾಂಧಿ!

    ಕೋಮು ಸಂಘರ್ಷ ಶುರು ಆಗಿದೆ, ಇದು ಇರಬಾರದು. ಹುಟ್ಟುವಾಗ ಎಲ್ಲ ವಿಶ್ವಮಾನವ, ಬೆಳೆಯುತ್ತ ಅಲ್ಪ ಮಾನವರಾಗುತ್ತಾರೆ ಅಂತಾ ಕುವೆಂಪು ಹೇಳಿದ್ದಾರೆ. ವಿಶ್ವ ಮಾನವ ಆಗೋದು ಕಷ್ಟ. ಆ ದಾರಿಯಲ್ಲಿ ಬೆಳೆಯೋದು ಕಷ್ಟ ಆಗಲ್ಲ. ಅಸಹನೆ ಬೆಳೆಸಿಕೊಳ್ಳುವುದು ಇರಬಾರದು. ಹೊಂದಾಣಿಕೆ, ಸೌಹಾರ್ದತೆಯಿಂದ ಬಾಳಬೇಕು ಎಂದರು.

    ಮನುಷ್ಯನ ಸ್ವಯಂಕೃತ ಅಪಮಾನದಿಂದ ಜಾಗತಿಕ ತಾಪಮಾನ ಜಾಸ್ತಿ ಆಗ್ತಿದೆ. ನಮ್ಮ ಅವಶ್ಯಕತೆಗಳನ್ನು ಪ್ರಕೃತಿ ಈಡೇರಿಸುತ್ತದೆ. ನಮ್ಮ ದುರಾಸೆಗಳನ್ನ ಪೂರೈಸಲು‌ ಸಾಧ್ಯವಿಲ್ಲ. ಮನುಷ್ಯನ ದುರಾಸೆಯಿಂದ ಪ್ರಕೃತಿ ಹಾಳಾಗುತ್ತಿದೆ ಎಂದು ಈ ವೇಳೆ ಕೇರಳ, ಶಿರೂರು ಘಟನೆಯನ್ನೂ ಮೆಲುಕು ಹಾಕಿದರು. ಇದನ್ನೂ ಓದಿ: Karkala | ಮದ್ಯದಲ್ಲಿ ಮಾದಕ ವಸ್ತು ನೀಡಿ ಅತ್ಯಾಚಾರ – ಗ್ಯಾಂಗ್‌ರೇಪ್‌ ಶಂಕೆ?

    ಜಾಗತಿಕ ತಾಪಮಾನ ಹೆಚ್ಚಾಗುತ್ತದೆ. ಭೂಮಿ ವೇಗವಾಗಿ ಬಿಸಿಯಾಗುತ್ತದೆ. ಆಗ ಬರ, ಪ್ರವಾಹ ಜಾಸ್ತಿಯಾಗುತ್ತದೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಬರಗಾಲ ಅಂತಾ ಕೆಲವರು ಮೌಢ್ಯವನ್ನ ನಂಬುವವರು ಟೀಕೆ ಮಾಡಿದರು. ಮೌಢ್ಯವನ್ನ ಬಿತ್ತುವ ಪ್ರಯತ್ನ ಮಾಡ್ತಿದ್ದಾರೆ. ಸಿದ್ದರಾಮಯ್ಯ ಕಾಲು ಗುಣದಿಂದ ಬರ ಅಂದ್ರು. ಸಾರ್ವಜನಿಕ ಜೀವನದಲ್ಲಿದ್ದವರು ಹೇಳುವ ಮಾತಿದು. ಪ್ರಕೃತಿ ವಿಕೋಪ ಆದ್ರೆ ಯಾರೋ ವ್ಯಕ್ತಿ ಜವಾಬ್ದಾರರು ಅನ್ನೋದು ಕುಟಿಲ ಪ್ರಯತ್ನ. ವೈಜ್ಞಾನಿಕ, ವೈಚಾರಿತೆಯಿಂದ ಯೋಚನೆ ಮಾಡ್ಬೇಕು. ವಿದ್ಯಾವಂತರೇ ಮೌಢ್ಯಗಳನ್ನ ಆಚರಣೆ ಮಾಡುವವರಿದ್ದಾರೆ. ಬುದ್ಧನ ಕಾಲದಲ್ಲೇ ಕರ್ಮ ಸಿದ್ಧಾಂತವನ್ನು ತಿರಸ್ಕಾರ ಮಾಡಿದ್ರು ಎಂದು ಬೇಸರಿಸಿದರು.