Tag: mahathma gandhi

  • ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

    ಗಾಂಧಿ ಭಾವಚಿತ್ರಕ್ಕೆ ಹಾನಿ – ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿ 4 ಮಂದಿ ಅರೆಸ್ಟ್‌

    ತಿರುವನಂತಪುರಂ: ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಹಾನಿ ಮಾಡಿದ ಆರೋಪದ ಮೇಲೆ ರಾಹುಲ್‌ ಗಾಂಧಿ ಕಚೇರಿ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಜೂನ್ 24 ರಂದು ಸಿಪಿಎಂ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಸದಸ್ಯರು ವಯನಾಡಿನ ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಕಚೇರಿಯನ್ನು ಧ್ವಂಸಗೊಳಿಸಿದಾಗ ಈ ಘಟನೆ ಸಂಭವಿಸಿತ್ತು. ಗಲಭೆ ವೇಳೆ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ಕಚೇರಿಯ ಗೋಡೆಯಿಂದ ಕೆಳಗೆ ಎಳೆದಿರುವುದು ಕಂಡುಬಂದಿದೆ. ಅತ್ತ ಎಸ್‌ಎಫ್‌ಐ ವ್ಯಕ್ತಿಗಳು ಭಾವಚಿತ್ರಕ್ಕೆ ಹಾನಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಇತ್ತ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸಿಪಿಎಂ ಆರೋಪ ಮಾಡುತ್ತಿದೆ. ಇದನ್ನೂ ಓದಿ: Liquor Policy Scam – ಸಿಸೋಡಿಯಾ ಮೇಲೆ ಸಿಬಿಐ ದಾಳಿ ಮಾಡಿದ್ದು ಯಾಕೆ?

    ಬಂಧಿತ ಕಾಂಗ್ರೆಸ್ ಸದಸ್ಯರನ್ನು ವಿ.ನೌಶಾದ್, ಕೆ.ಎ.ಮುಜೀಬ್, ಎಸ್.ಆರ್.ರಾಹುಲ್ ಮತ್ತು ಕೆ.ಆರ್.ರತೀಶ್ ಕುಮಾರ್ ಎಂದು ಗುರುತಿಸಲಾಗಿದೆ. ಕುಮಾರ್ ಎಂಬಾತ ರಾಹುಲ್ ಗಾಂಧಿ ಕಚೇರಿಯ ಸಹಾಯಕ. ಈ ಬಂಧನ ರಾಜಕೀಯ ಪ್ರೇರಿತ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

    ಅಂದು ಮಧ್ಯಾಹ್ನ 3:54 ರ ಸುಮಾರಿಗೆ ಸಂಸದರ ಕಚೇರಿಗೆ ನುಗ್ಗಿದ್ದ ಎಲ್ಲಾ ಎಸ್‌ಎಫ್‌ಐ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪೊಲೀಸ್ ಛಾಯಾಗ್ರಾಹಕರೊಬ್ಬರು ಅಪರಾಧ ನಡೆದ ಸ್ಥಳದ ಫೋಟೋಗಳನ್ನು ಕ್ಲಿಕ್ಕಿಸಿದ್ದ ಸಂದರ್ಭದಲ್ಲಿ ಗೋಡೆಯ ಮೇಲೆ ಗಾಂಧಿ ಭಾವಚಿತ್ರವು ಹಾಗೇ ಇತ್ತು. ಎಸ್‌ಎಫ್‌ಐ ಕಾರ್ಯಕರ್ತರನ್ನು ವಶಕ್ಕೆ ಪಡೆದ ನಂತರ, ಕಾಂಗ್ರೆಸ್ ಕಾರ್ಯಕರ್ತರು ಕಚೇರಿಯೊಳಗೆಯೇ ಇದ್ದರು. ಸಂಜೆಯ ನಂತರ ಪೊಲೀಸ್ ಛಾಯಾಗ್ರಾಹಕ ಮತ್ತೆ ಅಪರಾಧದ ದೃಶ್ಯದ ಫೋಟೋಗಳನ್ನು ತೆಗೆದುಕೊಂಡಾಗ, ಭಾವಚಿತ್ರವು ಹಾನಿಗೊಳಗಾದ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರ ಹೇಳಿಕೆಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಜುಲೈ 2 ರಂದು ವಿಧಾನಸಭೆಗೆ ತಿಳಿಸಿದ್ದರು. ಇದನ್ನೂ ಓದಿ: ಸಿಬಿಐ ದಾಳಿ ಬೆನ್ನಲ್ಲೇ ಹೊಸ ಮಿಸ್ಡ್‌ಕಾಲ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್

    ಗಲಭೆಯ ನಂತರ ಕಚೇರಿಗೆ ಪ್ರವೇಶಿಸಿದ ಕಾಂಗ್ರೆಸ್ ಕಾರ್ಯಕರ್ತರು ಭಾವಚಿತ್ರವನ್ನು ನೆಲದ ಮೇಲೆ ಎಸೆದರು ಎಂದು ಸಿಪಿಎಂ ಆರೋಪಿಸಿದೆ. ಆದರೆ ಕಾಂಗ್ರೆಸ್‌ ಸಿಪಿಎಂ ಮೇಲೆ ಆರೋಪ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಗಾಂಧೀಜಿಗೆ ಒಬ್ಬ ಹಿಂದುತ್ವವಾದಿ ಗುಂಡು ಹಾರಿಸಿ ಕೊಂದ: ರಾಹುಲ್‌ ಗಾಂಧಿ

    ಗಾಂಧೀಜಿಗೆ ಒಬ್ಬ ಹಿಂದುತ್ವವಾದಿ ಗುಂಡು ಹಾರಿಸಿ ಕೊಂದ: ರಾಹುಲ್‌ ಗಾಂಧಿ

    ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಪುಣ್ಯತಿಥಿಯಂದು ಎಲ್ಲೆಡೆ ಅವರನ್ನು ಸ್ಮರಿಸಲಾಗುತ್ತಿದೆ. ಗಾಂಧೀಜಿಯನ್ನು ಸ್ಮರಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ ಎಂದು ಹೇಳಿದ್ದಾರೆ.

    ಒಬ್ಬ ಹಿಂದುತ್ವವಾದಿ ಗಾಂಧೀಜಿಗೆ ಗುಂಡು ಹಾರಿಸಿದ. ಗಾಂಧೀಜಿ ಇನ್ನಿಲ್ಲ ಎಂದು ಹಿಂದುತ್ವವಾದಿಗಳೆಲ್ಲ ಭಾವಿಸಿದ್ದಾರೆ. ಎಲ್ಲಿ ಸತ್ಯವಿದೆಯೋ ಅಲ್ಲಿ ಬಾಪು ಇನ್ನೂ ಜೀವಂತ ಎಂದು ಸ್ಮರಿಸಿ ಹಿಂದಿಯಲ್ಲಿ ಟ್ವೀಟ್‌ ಮಾಡಿ ರಾಹುಲ್‌ ಗಾಂಧಿ ಸ್ಮರಿಸಿದ್ದಾರೆ. ಇದನ್ನೂ ಓದಿ: ಗಾಂಧಿ ಕೊಂದ ಶಕ್ತಿಗಳೇ ಇಂದು ಧರ್ಮದ ಹೆಸರಲ್ಲಿ ಹತ್ಯೆ ಮಾಡುತ್ತಿದೆ: ಪಿಣರಾಯಿ ವಿಜಯನ್

    ನಾನು ಹತಾಶೆಗೊಂಡಾಗ, ಇತಿಹಾಸದುದ್ದಕ್ಕೂ ಸತ್ಯ ಮತ್ತು ಪ್ರೀತಿಯ ಮಾರ್ಗ ಯಾವಾಗಲೂ ಗೆದ್ದಿದೆ ಎಂದು ನೆನಪಿಸಿಕೊಳ್ಳುತ್ತೇನೆ. ನಿರಂಕುಶಾಧಿಕಾರಿಗಳು ಮತ್ತು ಕೊಲೆಗಾರರೂ ಇಲ್ಲಿದ್ದಾರೆ. ಕೆಲ ಕಾಲವಷ್ಟೇ ಅವರು ಅಜೇಯರಾಗಿ ಕಾಣಬಹುದು. ಆದರೆ ಕೊನೆಯಲ್ಲಿ ಅವರಿಗೆ ಬೀಳಲೇಬೇಕು. ಇದನ್ನು ಯೋಚಿಸಿ ಎಂದು ಟ್ವೀಟ್‌ ಮಾಡಿದ್ದಾರೆ.

    ಜ.30ರಂದು ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ. ಇಂದು ಬೆಳಿಗ್ಗೆ ಗಾಂಧೀಜಿಯವರ ಸಮಾಧಿ ಸ್ಥಳಕ್ಕೆ ತೆರಳಿ ರಾಹುಲ್‌ ಗಾಂಧಿ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಬಾಪು ಆದರ್ಶಗಳನ್ನು ಮತ್ತಷ್ಟು ಜನಪ್ರಿಯಗೊಳಿಸುತ್ತೇವೆ: ಮೋದಿ