Tag: mahathi vaishnavi bhat

  • 625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    625ಕ್ಕೆ 619 ಅಂಕಗಳನ್ನು ಗಳಿಸಿದ `ಗಟ್ಟಿಮೇಳ’ ಖ್ಯಾತಿಯ ಮಹತಿ ಭಟ್

    `ಡ್ರಾಮಾ ಜ್ಯೂನಿಯರ್ಸ್’ ಮತ್ತು ಗಟ್ಟಿಮೇಳ ಸೀರಿಯಲ್ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿನಲ್ಲಿ ಶೇ.99 ಅಂಕ ಪಡೆದು ಪಾಸ್ ಆಗಿದ್ದಾರೆ. ಈ ಕುರಿತಯ ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿರುವ `ಗಟ್ಟಿಮೇಳ’ ಸೀರಿಯಲ್ ಜತೆ ಶಿಕ್ಷಣವನ್ನ ಕೂಡ ನಿಭಾಯಿಸುತ್ತಾ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ ಬರೋಬ್ಬರಿ 619 ಮಾರ್ಕ್ಸ್ಗಳನ್ನು ನಟಿ ಮಹತಿ ಗಳಿಸಿದ್ದಾರೆ. ಈ ಮೂಲಕ ಅವರ ಫಲಿತಾಂಶ ಶೇ.99.04 ಆಗಿದೆ. ಇದು ಅವರಿಗೆ ಅವರ ಕುಟುಂಬಕ್ಕೆ ಖುಷಿ ನೀಡಿದೆ.

    ಗಟ್ಟಿಮೇಳ ನಟಿ ಮಹತಿ ಯಾವ ವಿಷಯಕ್ಕೆ ಎಷ್ಟು ಅಂಕ ಬಂದಿದೆ ಎಂಬ ವಿವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕನ್ನಡದಲ್ಲಿ 124, ಇಂಗ್ಲೀಷ್‌ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ರಾಜ್ಯಾದ್ಯಂತ 7ನೇ ಸ್ಥಾನ ಪಡೆದಿದ್ದಾರೆ. ಧಾರಾವಾಹಿ ಶೂಟಿಂಗ್ ಮಧ್ಯೆ ಉತ್ತಮ ಅಂಕ ಪಡೆದಿರೋದಕ್ಕೆ ಮಹತಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಗುಡ್ ನ್ಯೂಸ್: ಹೊಸ ಚಿತ್ರ ಘೋಷಣೆ ಮಾಡಿದ ಪ್ರಶಾಂತ್‌ನೀಲ್-ತಾರಕ್

    ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಹತಿ, ನೀವು ಇಲ್ಲದೇ ಇದು ಅಸಾಧ್ಯ ಎಂದು ತಮ್ಮ ಕುಟುಂಬ ಮತ್ತು ಶಿಕ್ಷಕರಿಗೆ ಹಾಗೆಯೇ `ಗಟ್ಟಿಮೇಳ’ ತಂಡಕ್ಕೂ ಮಹತಿ ಅಭಿನಂದನೆ ತಿಳಿಸಿದ್ದಾರೆ. ಅಭಿಮಾನಿಗಳ ಹಾರೈಕೆಗೂ ಧನ್ಯವಾದ ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.