ಬೆಂಗಳೂರು: ನಾಡಿನೆಲ್ಲೆಡೆ ಮಹಾಶಿವರಾತ್ರಿ (Mahashivratri) ಹಬ್ಬ ಈ ಹಬ್ಬದ ಪ್ರಯುಕ್ತ ಮಹಾಶಿವನ ಆರಾಧನೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ.
ಬೆಂಗಳೂರು ಹೊರವಲಯ ನೆಲಮಂಗಲ (Nelamangala) ಸಮೀಪದ ಹಾವಾರ್ಡ್ ಶಾಲೆಯಲ್ಲಿ ಶಿವರಾತ್ರಿ ಆಚರಣೆ ಮಾಡಲಾಯಿತು. ಸನಾತನ ಧರ್ಮದಲ್ಲಿ ಗೋ ಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಮಕ್ಕಳು ಚಾಲನೆ ನೀಡಿದರು.
ಮಕ್ಕಳಿಗೆ ಶಿವ ಪಾರ್ವತಿ (Shiva Parvathi) ಸೇರಿದಂತೆ ವಿವಿಧ ವೇಷ ಭೂಷಣ ಧರಿಸಿ ಮಹಾಶಿವನ ನೃತ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಆವರಣದಲ್ಲಿ ಶಿವಲಿಂಗ ಮೂರ್ತಿಯನ್ನ ಪ್ರತಿಷ್ಠಾಪಿಸಿ ವಿಶೇಷವಾಗಿ ಶಾಲೆಯ ಪ್ರತಿ ಮಕ್ಕಳಿಂದ ಹಾಲಿನ ಅಭಿಷೇಕ ಮಾಡಿಸಿ ಶಿವನ ಕೃಪೆ ಮಕ್ಕಳು ಮತ್ತು ಪೋಷಕರು ಪಾತ್ರರಾದರು. ಇದನ್ನೂ ಓದಿ: Maha Shivaratri| ನಾಗ ಸಾಧುಗಳು ಶಿವನನ್ನು ಪೂಜಿಸೋದು ಯಾಕೆ?
ಮಕ್ಕಳಿಗೆ ಇತಿಹಾಸ ಹಾಗೂ ಧರ್ಮದ, ಹಬ್ಬದ ಆಚರಣೆಗಳು ಬಗ್ಗೆ ಈ ವರ್ಷವೂ ಕೂಡ ಮಹಾ ಶಿವರಾತ್ರಿ ಆರಾಧನೆ ಮಾಡಲಾಯಿತು. ಮಕ್ಕಳು ಶಿವ ಪಾರ್ವತಿ, ಋಷಿ ಮುನಿಗಳು ವೇಷ ಧರಿಸಿ ಹಬ್ಬವನ್ನು ಸಂಭ್ರಮಿಸಿದರು.
ಬೆಂಗಳೂರು: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಜೆಪಿ ಪಾರ್ಕ್‍ನಲ್ಲಿ (Mahashivratri Celebration In JP Park Bengaluru) ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಸ್ಟಾರ್ ನಟರು, ಕಾಮಿಡಿ ಕಿಲಾಡಿಯ ಕಲಾವಿದರು, ಗಾಯಕರು, ನೃತ್ಯಗಾರರಿಂದ ಇಡೀ ರಾತ್ರಿ ಕಾರ್ಯಕ್ರಮ ನಡೆಯುತ್ತಿದೆ. ರ್ಯಾಪರ್ ಚಂದನ್ ಶೆಟ್ಟಿ ಗಾಯನ ನೆರೆದಿದ್ದವರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಅದ್ಧೂರಿ ಕಾರ್ಯಕ್ರಮಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಡಾ. ಮಂಜುನಾಥ್, ಶಾಸಕ ಮುನಿರತ್ನ, ಆರ್.ಅಶೋಕ್, ಅಶ್ವಥ್ ನಾರಾಯಣ್ ಹಾಗೂ ನಟ ದರ್ಶನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾದ್ರು.
ಇತ್ತ ಬೆಂಗಳೂರಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜಾ ಸಲ್ಲಿಸಲಾಗ್ತಿದೆ. ಮಲ್ಲೇಶ್ವರದ ಕಾಡುಮಲ್ಲೆಶ್ವರ ದೇವಾಲಯದಲ್ಲಿ ಶಿವರಾತ್ರಿ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದ್ರು. ಇನ್ನು, ನಗರದ ಹಲವೆಡೆ ಶಿವರಾತ್ರಿ ಪ್ರಯುಕ್ತ ಹಲವು ಕಾರ್ಯಕ್ರಮಗಳನ್ನ ಆಯೋಜಿಸಲಾಗಿದೆ. ಇದನ್ನೂ ಓದಿ: ವಿವಾದಿತ ಆಳಂದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆ ನೆರವೇರಿಸಿದ ಹಿಂದೂಗಳು
ಜೈಪುರ: ರಾಜಸ್ಥಾನದ (Rajasthan Electric Shock) ಕೋಟಾದಲ್ಲಿ ಮಹಾಶಿವರಾತ್ರಿ ಮೆರವಣಿಗೆಯಲ್ಲಿ ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ 14 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.
ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?
ಇದೊಂದು ಅತ್ಯಂತ ದುಃಖಕರ ಘಟನೆ. ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಒಬ್ಬರಿಗೆ ಶೇ.100 ರಷ್ಟು ಸುಟ್ಟ ಗಾಯಗಳಾಗಿವೆ. ಸಾಧ್ಯವಿರುವ ಎಲ್ಲ ಚಿಕಿತ್ಸೆ ನೀಡಲು ವಿಶೇಷ ತಂಡವನ್ನು ರಚಿಸಲಾಗಿದೆ. ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಹೀರಾಲಾಲ್ ನಗರ್ ತಿಳಿಸಿದ್ದಾರೆ. ಇದನ್ನೂ ಓದಿ: Shivaratri Speical – ಶಿವರಾತ್ರಿ ದಿನ ಕೇದಗೆ ಹೂ ಬಳಸಲ್ಲ ಯಾಕೆ? – ಏನಿದು ಪುರಾಣ ಕಥೆ?
ಶಿವರಾತ್ರಿ (Shivratri) ದಿನ ಹೂವುಗಳಿಗೆ ಬಹಳ ಬೇಡಿಕೆ ಇರುತ್ತದೆ. ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹೂವಿನಿಂದ (Flowers) ಶಿವನನ್ನು (Shiva) ಅಲಂಕರಿಸಲಾಗುತ್ತದೆ. ಆದರೆ ಹೂವಿನ ಅಲಂಕಾರ ಸೇವೆಯಲ್ಲಿ ಕೇದಗೆ ಹೂವಿಗೆ (Kedige Flower) ಅವಕಾಶವಿಲ್ಲ
ಹೌದು. ಶಿವರಾತ್ರಿ ದಿನ ಕೇದಗೆ ಹೂವಿನ ಬಳಕೆಗೆ ನಿಷೇಧವಿದೆ. ನಿಷೇಧ ಯಾಕೆಂದರೆ ಅದಕ್ಕೂ ಒಂದು ಪುರಾಣ ಕಥೆಯಿದೆ.
ಕಥೆ ಏನು?
ಒಂದು ದಿನ ಕ್ಷೀರಸಾಗರದಲ್ಲಿ ಲಕ್ಷ್ಮಿಯಿಂದ ವಿಷ್ಣು (Vishnu) ಕಾಲನ್ನು ಒತ್ತಿಸಿಕೊಳ್ಳುತ್ತಿದ್ದ. ಈ ಸಮಯದಲ್ಲಿ ಬ್ರಹ್ಮ (Brahma) ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ. ಸೃಷ್ಟಿಕರ್ತನಾದ ನಾನು ಬಂದರೂ ಸ್ವಾಗತ, ಗೌರವ ನೀಡದ್ದಕ್ಕೆ ಬ್ರಹ್ಮನಿಗೆ ಸಿಟ್ಟು ಬಂದು ಆಕ್ಷೇಪಿಸಿದ. ಇದಕ್ಕೆ ವಿಷ್ಣು ನನ್ನ ಹೊಕ್ಕುಳದಿಂದಲೇ ಹುಟ್ಟಿದ ನಿನಗೆ ಯಾಕೆ ನಾನು ಗೌರವ ಕೊಡಬೇಕು ಎಂದು ಮರು ಪ್ರಶ್ನೆಹಾಕಿದ.
ಆರಂಭದಲ್ಲಿ ತೆಗಳಿಕೆಯಿಂದ ಆರಂಭವಾದ ಮಾತು ನಂತರ ನಮ್ಮಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಿಚಾರಕ್ಕೆ ತಿರುಗಿತು. ಸೃಷ್ಟಿ ಮತ್ತು ಸ್ಥಿತಿಯ ಜವಾಬ್ದಾರಿ ಹೊತ್ತ ಇಬ್ಬರು ನಿರಂತರವಾಗಿ ವಾದ ಮಾಡುತ್ತಿದ್ದರೆ ವ್ಯವಸ್ಥೆ ಅಸ್ತವ್ಯಸ್ತವಾಗಬಹುದು ಎಂಬದುನ್ನು ಅರಿತ ದೇವತೆಗಳು ಇಬ್ಬರನ್ನೂ ಸಮಾಧಾನ ಮಾಡಲು ಮುಂದಾಗುತ್ತಾರೆ. ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!
ದೇವತೆಗಳ ಸಮಾಧಾನಕ್ಕೆ ಇಬ್ಬರು ಬಗ್ಗದೇ ವಾಗ್ವಾದ ಮುಂದುವರಿಸುತ್ತಲೇ ಇದ್ದರು. ಕೊನೆಗೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ವಾದವನ್ನು ನಿಲ್ಲಿಸುವ ಏಕೈಕ ಶಕ್ತಿ ಇರುವುದು ಶಿವನಿಗೆ ಮಾತ್ರ ಎಂದು ಭಾವಿಸಿ ದೇವತೆಗಳು ಲಯ ಕರ್ತೃನ ಮುಂದೆ ಹೋಗಿ ಮೊರೆ ಇಡುತ್ತಾರೆ.
ದೇವತೆಗಳ ಪ್ರಾರ್ಥನೆಯನ್ನು ಒಪ್ಪಿಕೊಂಡರೂ ಇಬ್ಬರ ಜಗಳ ನಿಲ್ಲಿಸುವುದು ಹೇಗೆ ಎಂದು ಶಿವ ಆಲೋಚಿಸತೊಡಗಿದ. ಕೊನೆಗೆ ವಿಷ್ಣು ಮತ್ತು ಬ್ರಹ್ಮನ ಮಧ್ಯೆ ಕಣ್ಣುಕೋರೈಸುವ ಜ್ಯೋತಿಸ್ತಂಭವಾಗಿ ನಿಂತುಬಿಟ್ಟ. ನಂತರ ಇಬ್ಬರನ್ನು ಉದ್ದೇಶಿಸಿ, ನೀವಿಬ್ಬರೂ ವಾದ ಮಾಡುತ್ತಲೇ ಇದ್ದರೆ ಯಾರು ಶ್ರೇಷ್ಠ ಎನ್ನುವುದು ತಿಳಿಯಲು ಸಾಧ್ಯವಿಲ್ಲ. ಮೂರನೇ ವ್ಯಕ್ತಿ ಮಾತ್ರ ತೀರ್ಪು ನೀಡಲು ಸಾಧ್ಯ. ಹೀಗಾಗಿ ನಿಮಗೆ ನಾನೊಂದು ಪರೀಕ್ಷೆ ಕೊಡುತ್ತೇನೆ. ಈ ಪರೀಕ್ಷೆಯಲ್ಲಿ ಯಾರು ಯಶಸ್ವಿಯಾಗುತ್ತಾರೋ ಅವರು ಶ್ರೇಷ್ಠ ಎಂದು ಹೇಳುತ್ತಾನೆ. ಈ ಪರೀಕ್ಷೆಯನ್ನು ಸ್ವೀಕರಿಸುವುದಾಗಿ ಇಬ್ಬರು ಒಪ್ಪಿಕೊಳ್ಳುತ್ತಾರೆ. ಇದನ್ನೂ ಓದಿ: ಮಹಾಶಿವರಾತ್ರಿಯಲ್ಲಿ ಜಾಗರಣೆಗಿರುವ ಮಹತ್ವವೇನು?
ಈಗಲೇ ನೀವಿಬ್ಬರೂ ಈ ಕಂಬದ ತುದಿಗಳು ಎಲ್ಲಿದೆ ಎಂದು ಪತ್ತೆ ಹಚ್ಚಿಕೊಂಡು ಬನ್ನಿ. ಯಾರು ಮೊದಲು ಪತ್ತೆ ಮಾಡುತ್ತಾರೋ ಅವರೇ ಶ್ರೇಷ್ಠರು ಎಂದು ಶಿವ ಹೇಳುತ್ತಾನೆ. ಕೂಡಲೇ ಬ್ರಹ್ಮ ಹಂಸರೂಪವನ್ನು ಧರಿಸಿ ಕಂಬದ ಮೇಲ್ತುದಿಯನ್ನು ಹುಡುಕಲು ಹೊರಟರೆ ವಿಷ್ಣು ಹಂದಿಯ ರೂಪ ಧರಿಸಿ ಕೆಳಭಾಗವನ್ನು ತಲುಪಲು ಹೋಗುತ್ತಾನೆ. ಬಹಳ ದೂರದವರೆಗೂ ಹೋದರೂ ತುದಿ ಸಿಗದ ಕಾರಣ ವಿಷ್ಣು ಮರಳಿ ಬರುತ್ತಾನೆ.
ಬ್ರಹ್ಮ ಮೇಲಕ್ಕೆ ಹೋಗುತ್ತಿದ್ದಂತೆ ಗಾಳಿಯಲ್ಲಿ ಹಾರಿಕೊಂಡು ಒಂದು ಕೇದಗೆ ಹೂ ಬರುತ್ತಿರುತ್ತದೆ. ಈ ವೇಳೆ, ನೀನು ಎಲ್ಲಿಂದ ಬಂದೆ ಎಂದು ಬ್ರಹ್ಮ ಕೇಳಿದಾಗ ನಾನು ಶಿವನ ತುತ್ತ ತುದಿಯಿಂದ ಜಾರಿ ಬೀಳುತ್ತಿದ್ದೇನೆ ಎಂದು ಹೇಳಿತು. ಬ್ರಹ್ಮನಿಗೆ ಸಂತೋಷವಾಗಿ ಕೇದಗೆ ಹೂವನ್ನು ಹಿಡಿದುಕೊಂಡು ಶಿವನಿದ್ದಲ್ಲಿಗೆ ಮರಳಿದ. ಗೆಲುವಿನ ಹುಮ್ಮಸ್ಸಿನಲ್ಲಿ ಬ್ರಹ್ಮ, ನಾನು ಮೇಲ್ತುದಿಯನ್ನು ನೋಡಿದ್ದೇನೆ. ಇದಕ್ಕೆ ಈ ಕೇದಗೆ ಹೂವೇ ಸಾಕ್ಷಿ ಎಂದ.
ಸುಳ್ಳು ಹೇಳಿದ್ದನ್ನು ಕಂಡು ಸಿಟ್ಟಾದ ಶಿವ, ಇನ್ನು ಮುಂದೆ ನಿನ್ನನ್ನು ಯಾರೂ ಪೂಜೆಸಬಾರದು ಎಂದು ಬ್ರಹ್ಮನಿಗೆ ಶಾಪ ನೀಡಿದ. ಜೊತೆಗೆ ಸುಳ್ಳು ಸಾಕ್ಷಿ ಹೇಳಿದ್ದಕ್ಕೆ ಯಾರದೇ ಪೂಜೆಯಲ್ಲೂ ನಿನ್ನನ್ನು ಸೇರಿಸಬಾರದು ಎಂಬುದಾಗಿ ಶಪಿಸಿದ. ತನ್ನ ತಪ್ಪಿನ ಅರಿವಾದಂತೆ ಕೇದಗೆ ಅಂಗಲಾಚಿ ಬೇಡಿದ್ದರಿಂದ ಶಿವ, ನನ್ನ ಪೂಜೆಗೆ ನೀನು ಅರ್ಹನಲ್ಲ. ಆದರೆ ನನ್ನ ಆಭರಣ ಸರ್ಪರಾಜ ವಾಸುಕಿಯ ಪೂಜೆ ಅಂದರೆ ನಾಗನ ಪೂಜೆ ನೀನು ಅರ್ಹ ಎಂದು ಹೇಳಿ ಶಾಪದ ತೀವ್ರತೆಯನ್ನು ತಗ್ಗಿಸಿದ.
ಈ ಕಥೆಯಂತೆ ದೇಶದೆಲ್ಲೆಡೆ ತ್ರಿಮೂರ್ತಿಗಳ ಪೈಕಿ ಶಿವ ಮತ್ತು ವಿಷ್ಣುವಿಗೆ ದೇವಸ್ಥಾನವಿದೆ ಬ್ರಹ್ಮನಿಗೆ ಇಲ್ಲ. ಇದರೊಂದಿಗೆ ನಾಗರ ಪಂಚಮಿಯಂದು ಕೇದಗೆ ಬಹಳ ಮುಖ್ಯ. ಬಹಳಷ್ಟು ಕಡೆ ಪ್ರಸಾದ ರೂಪದಲ್ಲಿ ಕೇದಗೆಯನ್ನೇ ನೀಡಲಾಗುತ್ತದೆ.
ಚಿಕ್ಕಬಳ್ಳಾಪುರ: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಇಂದು ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದಲ್ಲಿರುವ ಐತಿಹಾಸಿಕ ಪುರಾಣ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಶಿವೋತ್ಸವ ಕಾರ್ಯಕ್ರಮ ವಿಜ್ರಂಭಣೆಯಿಂದ ಆರಂಭವಾಗಿದೆ.
ಕ್ಷೇತ್ರದ ಶಾಸಕ, ಸಚಿವ ಡಾ.ಕೆ ಸುಧಾಕರ್ ಫೌಂಡೇಶನ್ ವತಿಯಿಂದ ಇದೇ ಪ್ರಪ್ರಥಮ ಬಾರಿಗೆ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ನಂದಿ ಶಿವೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಶಿವೋತ್ಸವಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಿರಿಗೆರೆ ಶಿವಾಚಾರ್ಯ ಶ್ರೀಗಳು ಹಾಗೂ ಸದ್ಗುರು ಮಧುಸೂದನಸಾಯಿ ಶಂಖ ಊದುವ ಮೂಲಕ ಚಾಲನೆ ನೀಡಿದರು. ಇದನ್ನೂ ಓದಿ: ಗೋಕರ್ಣ, ಮುರುಡೇಶ್ವರದಲ್ಲಿ ವಿಜ್ರಂಭಣೆಯ ಶಿವರಾತ್ರಿ ಆಚರಣೆ
ಶಿವಲಿಂಗಕ್ಕೆ ಅಭಿಷೇಕ ಮಾಡುವ ಮೂಲಕ ಶಿವೋತ್ಸವ ಕಾರ್ಯಕ್ರಮ ಅರಂಭವಾಯಿತು. ಶಿವರಾತ್ರಿ ಜಾಗರಣೆ ಪ್ರಯುಕ್ತ ವೇದಿಕೆ ಕಾರ್ಯಕ್ರಮದ ನಂತರ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುಲಿವೆ. ಈ ನಂದಿ ಶಿವೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಹಾಡುಗಾರರಾದ ಅನನ್ಯ ಭಟ್, ರಘು ದೀಕ್ಷಿತ್, ವಿಜಯ್ ಪ್ರಕಾಶ್, ಭರತನಾಟ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ, ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ತಮ್ಮ ಕಲಾ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ ನಗೆ ಹಬ್ಬ ಕಾರ್ಯಕ್ರಮ ಸಹ ಆಯೋಜನೆ ಮಾಡಲಾಗಿದ್ದು ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಲೇಸರ್ ಶೋ ಹಾಗೂ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ
ವೈಭವದ ಶಿವೋತ್ಸವದ ಅಂಗವಾಗಿ ಇಡೀ ದೇವಾಲಯಕ್ಕೆ ಹೂವಿನ ಅಲಂಕಾರ ಮಾಡಲಾಗಿದ್ದು, ನಾಳೆ ನಂದಿ ಶ್ರೀ ಭೋಗನಂದಿಶ್ವರನ ಜೋಡಿ ಬ್ರಹ್ಮ ರಥೋತ್ಸವ ನೆರವೇರಲಿದೆ. ಶಿವರಾತ್ರಿ ಹಿನ್ನೆಲೆ ಈಗಾಗಲೇ ಸಾವಿರಾರು ಮಂದಿ ಭಕ್ತರು ನಂದಿ ಗ್ರಾಮದ ಭೋಗನಂದೀಶ್ವರನ ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ಹಾಗೂ ಭಟ್ಕಳ ತಾಲೂಕಿನ ಮುರುಡೇಶ್ವರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಭಕ್ತರು ಶಿವರಾತ್ರಿ ಉತ್ಸವದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸಿ ಶಿವನ ದರ್ಶನ ಪಡೆದರು.
ಗೋಕರ್ಣದಲ್ಲಿ ಆತ್ಮಲಿಂಗ ಅಭಿಷೇಕಕ್ಕೆ ಮಾತ್ರ ಅವಕಾಶ:
ಗೋಕರ್ಣದಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಸೇರಿದ್ದ ಭಕ್ತರು, ಸಮುದ್ರ, ಕೋಟಿತೀರ್ಥದಲ್ಲಿ ಸ್ನಾನ ಮಾಡಿ ಮಹಾಬಲೇಶ್ವರ ದೇವರ ಸನ್ನಿಧಿಯಲ್ಲಿ ಸಾಲುಗಟ್ಟಿ ನಿಂತ ಭಕ್ತರು ಮಹಾಗಣಪತಿ ಮತ್ತು ಮಹಾಬಲೇಶ್ವರನಿಗೆ ಪೂಜೆ ಅರ್ಪಿಸಿದರು. ಸ್ಥಳೀಯರು ಬೆಳಗ್ಗೆ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಕೋವಿಡ್ ನಿಯಮ ಸಡಿಲಿಸಿದ ಕಾರಣ ಮಹಾರಾಷ್ಟ್ರ ಮತ್ತು ಗೋವಾದಿಂದ ಹೆಚ್ಚಿನ ಭಕ್ತರು ಇಂದು ಆಗಮಿಸಿದ್ದರು. ಇದನ್ನೂ ಓದಿ: ಶಿವರಾತ್ರಿ ಪ್ರಯುಕ್ತ ಜೆಪಿ ಪಾರ್ಕ್‌ನಲ್ಲಿ ಅಹೋರಾತ್ರಿ ಕಾರ್ಯಕ್ರಮ – 1 ಸಾವಿರ ಸಾಧಕರಿಗೆ ಸನ್ಮಾನ
ಮಹಾಬಲೇಶ್ವರ ದೇವಸ್ಥಾನದಲ್ಲಿ ಆತ್ಮಲಿಂಗಕ್ಕೆ ಮೇಲಿನಿಂದ ಅಭಿಷೇಕ ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿತ್ತು. ಸ್ಪರ್ಶಿಸಿ ನಮಸ್ಕರಿಸಲು ಆಗದ ಕಾರಣ ಭಕ್ತರು ಅಸಮಾಧಾನ ವ್ಯಕ್ತಪಡಿಸಿದರು. ಪಾಣಪೀಠಕ್ಕೆ ಕಾಲು ತಗುಲಬಾರದು ಎಂದು ಸುತ್ತಲೂ ಪರದೆ ಅಳವಡಿಸಲಾಗಿತ್ತು. ಸ್ವಲ್ಪ ಎತ್ತರಿಸಿದ್ದ ಕಾರಣ ಕೈಯಿಂದ ಆತ್ಮಲಿಂಗ ಮುಟ್ಟಲು ಭಕ್ತರಿಗೆ ಸಾಧ್ಯವಾಗಲಿಲ್ಲ. ಭಕ್ತರಿಗೆ ವಿಶೇಷ ಪೂಜೆಗೂ ಅವಕಾಶ ನಿರಾಕರಿಸಲಾಗಿತ್ತು. ಕೇವಲ ನೀರು, ಬಿಲ್ವಪತ್ರೆ, ಹಾಲು ಎರೆಯಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ಮುರುಡೇಶ್ವರದಲ್ಲಿ ಜಾತ್ರೆಯಂತೆ ಸೇರಿದ ಭಕ್ತರು:
ಧಾರ್ಮಿಕ ಕ್ಷೇತ್ರದ ಜೊತೆ ಪ್ರವಾಸಿ ಸ್ಥಳವೂ ಆಗಿರುವ ಮುರುಡೇಶ್ವರದಲ್ಲಿ ಸಾವಿರಾರು ಜನರು ಶಿವನ ದರ್ಶನ ಪಡೆದು ಪುನೀತರಾದರು. ರಾಜ್ಯ ಮತ್ತು ಹೊರ ರಾಜ್ಯದಿಂದ ಆಗಮಿಸಿದ್ದ ಸಾವಿರಾರು ಭಕ್ತರು ಮುರುಡೇಶ್ವರದ ಸಮುದ್ರದಲ್ಲಿ ಪವಿತ್ರ ಸ್ನಾನ ಮಾಡಿ ಶಿವನ ದರ್ಶನ ಪಡೆದರು. ಮುರುಡೇಶ್ವರದಲ್ಲಿ ಈ ಬಾರಿ ಪೂಜೆ ಹಾಗೂ ದರ್ಶನಕ್ಕೆ ಸಂಪೂರ್ಣ ಅವಕಾಶ ಮಾಡಿಕೊಡಲಾಗಿದ್ದು ರಾತ್ರಿ ಕೂಡ ವಿಶೇಷ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?
ಮಂಡ್ಯ: ಶಿವರಾತ್ರಿ ಹಬ್ಬದ ಜಾಗರಣೆ ರಾತ್ರಿ ಚಾಕುವಿನಿಂದ ಚುಚ್ಚಿ ಜೋಡಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಹದೇಶ್ವರಪುರ ಗ್ರಾಮದಲ್ಲಿ ನಡೆದಿದೆ.
ಕೋಳಿ ಸುರೇಶ್ ಹಾಗೂ ನಾಗರಾಜು ಕೊಲೆಯಾದ ದುರ್ದೈವಿಗಳು. ಕೋಳಿ ಸುರೇಶ್ ಹಾಗೂ ನಾಗರಾಜು ಮಹದೇಶ್ವರಪುರ ಗ್ರಾಮದವರಾಗಿದ್ದು, ಅದೇ ಗ್ರಾಮದ ರೌಡಿಶೀಟರ್ ಕೃಷ್ಣ, ಸುರೇಶ್ ಹಾಗೂ ಸಹಚರರು ಈ ಕೃತ್ಯ ಎಸಗಿದ್ದಾರೆ.
ಪೊಲೀಸರು ಈಗಾಗಲೇ ಕೃಷ್ಣನನ್ನು ವಶಕ್ಕೆ ಪಡೆದುಕೊಂಡಿದ್ದು, ಕೊಲೆಗೆ ಪ್ರೇಮ ಪ್ರಕರಣ ಹಾಗೂ ಹಣಕಾಸು ವ್ಯವಹಾರವೇ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆಯಾದ ಕೋಳಿ ಸುರೇಶ್ ಮೈಸೂರಿನಲ್ಲಿ ಆಟೋ ಓಡಿಸುತ್ತಿದ್ದರು. ಇತ್ತ ನಾಗರಾಜು ಜೆಸಿಬಿ ಯಂತ್ರ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು.
ಈ ಬಗ್ಗೆ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.