Tag: Mahashivaratri

  • ಕತ್ತು ಹಿಸುಕಿ ಪತ್ನಿಯ ಕೊಲೆ – ಪತಿ ನೇಣಿಗೆ ಶರಣು

    ಕತ್ತು ಹಿಸುಕಿ ಪತ್ನಿಯ ಕೊಲೆ – ಪತಿ ನೇಣಿಗೆ ಶರಣು

    ಬೆಂಗಳೂರು: ಮಹಾಶಿವರಾತ್ರಿ (Maha Shivaratri) ದಿನದಂದೇ ಕೌಟುಂಬಿಕ ಕಲಹಕ್ಕೆ ಪತ್ನಿಯನ್ನು ಕೊಂದು, ಪತಿ ನೇಣಿಗೆ ಶರಣಾಗಿರುವ ಘಟನೆ ತಿಗಳರಪಾಳ್ಯ (Thigalarapalya) ಮುಖ್ಯ ರಸ್ತೆಯ ನ್ಯೂ ಇಂಡಿಯನ್ ಸ್ಕೂಲ್ ಬಳಿ ಘಟನೆ ನಡೆದಿದೆ.

    ಪತಿ ಸುರೇಶ್ (40), ಪತ್ನಿ ಮಮತಾ (33) ಮೃತ ದಂಪತಿ. ಪತ್ನಿಯ ಕುತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಸುರೇಶ್, ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ರಜೌರಿಯಲ್ಲಿ ಸೇನಾ ವಾಹನದ ಮೇಲೆ ದಾಳಿ – ಪಠಾಣ್‌ಕೋಟ್‌ನಲ್ಲಿ ಅಕ್ರಮ ನುಸುಳುಕೋರನ ಹತ್ಯೆ

    ಜಗಳ ಹಿನ್ನೆಲೆ ಗಂಡ ಹೆಂಡತಿ ಮಹಿಳಾ ಠಾಣೆ ಮೆಟ್ಟಿಲೇರಿದ್ದರು. ವಾರದ ಹಿಂದೆ ಇಬ್ಬರೂ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೌನ್ಸೆಲಿಂಗ್ ಅಟೆಂಡ್ ಮಾಡಿದ್ದರು.

    ಆಟೋ ಡ್ರೈವರ್‌ ಆಗಿದ್ದ ಸುರೇಶ್ ಸರಿಯಾಗಿ ಕೆಲಸ ಮಾಡದೇ, ಸಂಸಾರ ನೋಡಿಕೊಳ್ಳದ ಹಿನ್ನೆಲೆ ದಂಪತಿ ನಡುವೆ ಪ್ರತಿನಿತ್ಯ ಗಲಾಟೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡಗಿನಲ್ಲಿ ಕಳೆದ 9 ತಿಂಗಳಲ್ಲಿ 30 ಅಪ್ರಾಪ್ತೆಯರು ಗರ್ಭಿಣಿ – 14 ಬಾಲಕಿಯರಿಗೆ ಹೆರಿಗೆ!

    ಸ್ಥಳಕ್ಕೆ ಬ್ಯಾಡರಹಳ್ಳಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

  • ಪ್ರಯಾಗ್‌ರಾಜ್ ಮಹಾ ಕುಂಭಮೇಳ: ಶಿವರಾತ್ರಿ ಹಿನ್ನೆಲೆ ನಾಳೆ ಕೊನೆ ಪುಣ್ಯಸ್ನಾನ

    ಪ್ರಯಾಗ್‌ರಾಜ್ ಮಹಾ ಕುಂಭಮೇಳ: ಶಿವರಾತ್ರಿ ಹಿನ್ನೆಲೆ ನಾಳೆ ಕೊನೆ ಪುಣ್ಯಸ್ನಾನ

    – ಸಂಗಮದಲ್ಲಿ ಖಾಸಗಿ ವಾಹನಗಳಿಗೆ ನೋ ಎಂಟ್ರಿ

    ಪ್ರಯಾಗ್‌ರಾಜ್: 144 ವರ್ಷಗಳ ಬಳಿಕ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ನಾಳೆ ತೆರೆಬೀಳಲಿದೆ. ನಾಳೆ ಶಿವರಾತ್ರಿ ಹಿನ್ನೆಲೆ ಕೊನೆಯ ಪುಣ್ಯಸ್ನಾನಕ್ಕೆ ಸ್ಥಳೀಯ ಆಡಳಿತ ತಯಾರಿ ನಡೆಸುತ್ತಿದೆ.

    ಕೊನೆಯ ಪುಣ್ಯಸ್ನಾನದ ಹಿನ್ನೆಲೆ ತ್ರಿವೇಣಿ ಸಂಗಮವನ್ನು ನೋ ವೆಹಿಕಲ್ ಝೋನ್ ಎಂದು ಘೋಷಿಸಲಾಗಿದೆ. ಇಂದು ಮತ್ತು ನಾಳೆ ಖಾಸಗಿ ವಾಹನಗಳಿಗೆ ಪ್ರವೇಶ ಇರುವುದಿಲ್ಲ. ಸ್ಥಳೀಯ ಆಡಳಿತ ಮತ್ತು ವೈದ್ಯಕೀಯ ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಪ್ರವೇಶವಿರುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ. ಇದನ್ನೂ ಓದಿ: Exclusive| ಬೆಳಗಾವಿ ಕಂಡಕ್ಟರ್ ಮೇಲೆ ದಾಖಲಿಸಿದ್ದ ಪೋಕ್ಸೋ ಕೇಸ್ ಹಿಂಪಡೆದ ದೂರುದಾರೆ

    ಈವರೆಗೂ 63 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡಿದ್ದು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದಾರೆ. ವಿಶ್ವವಿಖ್ಯಾತ ಮಹಾ ಕುಂಭಮೇಳ ಫೆ.26 ರಂದು ಅಂತ್ಯಗೊಳ್ಳಲಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್ – ಇಂದು ಕೋರ್ಟ್‌ಗೆ ಹಾಜರಾಗಲಿರುವ ದರ್ಶನ್ & ಗ್ಯಾಂಗ್

  • ಮಹಾಶಿವರಾತ್ರಿಗೆ ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಮಹಾಶಿವರಾತ್ರಿಗೆ ‘ಕಣ್ಣಪ್ಪ’ ಚಿತ್ರದ ಫಸ್ಟ್ ಲುಕ್ ರಿಲೀಸ್

    ಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ‘ಕಣ್ಣಪ್ಪ (Kannappa); ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಸಿನಿಮಾ ಘೋಷಣೆ ಆದಾಗಿನಿಂದ ಒಂದಲ್ಲ ಒಂದು ರೀತಿ ಸದ್ದು ಮಾಡುತ್ತಲೇ ಇದೆ. ವಿಷ್ಣು ಮಂಚು ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಬಹುತಾರಾಗಣವೂ ಚಿತ್ರದ ಹೈಲೈಟ್. ಮುಕೇಶ್‍ ಕುಮಾರ್ ಸಿಂಗ್‍ ನಿರ್ದೇಶನದ ‘ಕಣ್ಣಪ್ಪ’ ಸಿನಿಮಾದ ಫಸ್ಟ್‌ ಲುಕ್‌ (First Look) ಈಗಾಗಲೇ ಕುತೂಹಲ ಮೂಡಿಸಿತ್ತು. ಈಗ ಮಹಾಶಿವರಾತ್ರಿ (Mahashivaratri) ಹಬ್ಬದ ಪ್ರಯುಕ್ತ ಮತ್ತೊಂದು ಹೊಸ ಲುಕ್‌ ಹೊರತಂದಿದೆ ಚಿತ್ರತಂಡ.

    ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ತಮ್ಮ ಲುಕ್‌ ಮೂಲಕವೇ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚು ಹರಿಸಿದ್ದಾರೆ. ಬೆರಗುಗೊಳಿಸುವ ದೃಶ್ಯದಲ್ಲಿ, ಬಿಲ್ಲು ಮತ್ತು ಬಾಣದೊಂದಿಗೆ ಕಣ್ಣಪ್ಪನಾಗಿ ವಿಷ್ಣು ಮಂಚು  (Vishnu Manchu)ಎದುರಾಗಿದ್ದಾರೆ. ಜಲಪಾತದಿಂದ ಹೊರಹೊಮ್ಮುತ್ತ, ಇಟ್ಟ ಗುರಿಯತ್ತ ಬಾಣ ನೆಟ್ಟಿದ್ದಾನೆ ಕಣ್ಣಪ್ಪ. ಭಕ್ತಿಪ್ರಧಾನದ ಜತೆಗೆ ಆಕ್ಷನ್- ಪ್ಯಾಕ್ಡ್ ಸೀಕ್ವೆನ್ಸ್‌ಗಳೂ ಚಿತ್ರದಲ್ಲಿ ಭರ್ಜರಿಯಾಗಿ ಇರಲಿದೆ ಎಂಬುದನ್ನು ಸದ್ಯದ ಕಿರು ಝಲಕ್‌ನಲ್ಲಿ ಕಾಣಬಹುದಾಗಿದೆ.

    24 ಫ್ರೇಮ್ಸ್‌ ಫ್ಯಾಕ್ಟರಿ ಮತ್ತು AVA ಎಂಟರ್‌ಟೈನ್‌ಮೆಂಟ್‌ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ. ಬಿಗ್‌ ಬಜೆಟ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಬಹುತೇಕ ವಿದೇಶದಲ್ಲಿಯೇ ಶೂಟಿಂಗ್‌ ಮಾಡಿಕೊಳ್ಳುತ್ತಿದೆ. ನ್ಯೂಜಿಲೆಂಡ್‌ನ ಸುಂದರ ವಾತಾವರಣದಲ್ಲಿ ಭರ್ಜರಿಯಾಗಿಯೇ ಈ ಚಿತ್ರದ ಎರಡನೇ ಶೆಡ್ಯೂಲ್‌ ಚಿತ್ರೀಕರಣ ನಡೆಯುತ್ತಿದೆ. ಈ ಶೂಟಿಂಗ್‌ಲ್ಲಿ 600 ಮಂದಿ ಭಾಗವಹಿಸಿದ್ದು ವಿಶೇಷ. ಈಗ ಇದೇ ಕಣ್ಣಪ್ಪ ತಂಡದಿಂದ ಶಿವರಾತ್ರಿಗೆ ಬಿಗ್‌ ಸರ್ಪ್ರೈಸ್‌ ಹೊರಬಂದಿದೆ.

    ಟಾಲಿವುಡ್‌ನಲ್ಲಿ ನಟ ವಿಷ್ಣು ಮಂಚು ಅಭಿನಯದ ‘ಕಣ್ಣಪ್ಪ; ದಿ ಗ್ರೇಟ್‍ ಎಪಿಕ್ ಇಂಡಿಯನ್‍ ಟೇಲ್‍’ ಕುರಿತು ಈಗಾಗಲೇ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ ತಾರಾಗಣದ ವಿಚಾರವಾಗಿಯೂ ಈ ಸಿನಿಮಾ ಸದ್ದು ಮಾಡುತ್ತಿದೆ. ಸದ್ಯ ಟಾಲಿವುಡ್‌ನ ಪ್ಯಾನ್‍ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‍ ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್‍ ಲಾಲ್‍ ಮತ್ತು ಸ್ಯಾಂಡಲ್‌ವುಡ್‌ನ ಶಿವರಾಜಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜತೆಗೆ ಮೋಹನ್‌ ಬಾಬು, ಶರತ್‌ ಕುಮಾರ್‌, ಬ್ರಹ್ಮಾನಂದಂ ಸಹ ಈ ಸಿನಿಮಾದಲ್ಲಿರಲಿದ್ದಾರೆ.

    ಈ ಸಿನಿಮಾ ಮೂಡಿಬರುತ್ತಿರುವ ರೀತಿಗೆ ಸ್ವತಃ ವಿಷ್ಣು ಮಂಚು ಥ್ರಿಲ್‌ ಆಗಿದ್ದಾರೆ. “ಕಣ್ಣಪ್ಪ ಸಿನಿಮಾ ಚಿತ್ರೀಕರಣ ಕೆಲಸಗಳು ಸಮರೋಪಾದಿಯಲ್ಲಿ ನಡೆಯುತ್ತಿದೆ. ಒಳ್ಳೆಯ ತಂಡದ ಜತೆಗೆ ನಿರೀಕ್ಷೆಗೂ ಮೀರಿ ಚಿತ್ರ ಮೂಡಿಬರುತ್ತಿರುವುದು ಖುಷಿ ನೀಡಿದೆ. ಕಣ್ಣಪ್ಪ ಇಲ್ಲಿ ಒಬ್ಬ ಶಿವನ ಭಕ್ತನಾಗಿ ಮಾತ್ರವಲ್ಲ, ಒಬ್ಬ ಯೋಧನಂತೆಯೂ ಕಾಣಿಸಲಿದ್ದಾನೆ. ಈ ಚಿತ್ರದ ಝಲಕ್‌ ಹೇಗಿರಲಿದೆ ಎಂಬುದನ್ನು ನಿಮ್ಮ ಮುಂದಿಡಲು ತುಂಬ ಉತ್ಸುಕನಾಗಿದ್ದೇನೆ” ಎಂದಿದ್ದಾರೆ ವಿಷ್ಣು ಮಂಚು.

  • ‘ಅವನು’ ಬರುತ್ತಿದ್ದಾನೆ, ಮಹಾಶಿವರಾತ್ರಿಗೆ ಎಂಟ್ರಿ ಕೊಡುತ್ತಿದ್ದಾನೆ: ಕುತೂಹಲ ಮೂಡಿಸಿದ ಕರಾವಳಿ

    ‘ಅವನು’ ಬರುತ್ತಿದ್ದಾನೆ, ಮಹಾಶಿವರಾತ್ರಿಗೆ ಎಂಟ್ರಿ ಕೊಡುತ್ತಿದ್ದಾನೆ: ಕುತೂಹಲ ಮೂಡಿಸಿದ ಕರಾವಳಿ

    ಸ್ಟ್ ಲುಕ್ ಮತ್ತು ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ ಕರಾವಳಿ ಸಿನಿಮಾ ಟೀಮ್ ಮಹಾಶಿವರಾತ್ರಿಗೆ (Mahashivaratri) ಮತ್ತೊಂದು ಉಡುಗೊರೆ ನೀಡಲು ರೆಡಿಯಾಗಿದೆ. ಅವನು ಬರುತ್ತಿದ್ದಾನೆ, ಮಹಾಶಿವರಾತ್ರಿಗೆ ಎಂಟ್ರಿ ಕೊಡುತ್ತಿದ್ದಾನೆ ಎಂದು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಯಾರು ಬರುತ್ತಿದ್ದಾರೆ? ಯಾವುದದು ಎಂಟ್ರಿ ಎನ್ನುವುದನ್ನು ತಿಳಿದುಕೊಳ್ಳಲು ನಾಳೆಯವರೆಗೂ ಕಾಯಲೇಬೇಕು.

    ಗುರುದತ್ ಗಾಣಿಗ (Gurudutt Ganiga) ನಿರ್ದೇಶದ ಪ್ರಜ್ವಲ್ ದೇವರಾಜ್ (Prajwal Devaraj) ನಟನೆಯ ‘ಕರಾವಳಿ’ ಸಿನಿಮಾ ನಾನಾ ಕಾರಣಗಳಿಂದಾಗಿ ನಿರೀಕ್ಷೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಮೊನ್ನೆಯಷ್ಟೇ ಸಿನಿಮಾದಿಂದ ನಾಯಕಿ ಯಾರು ಎನ್ನುವ ಮಾಹಿತಿ ಬಹಿರಂಗವಾಗಿತ್ತು. ಕರಾವಳಿಗೆ ನಾಯಕಿ ಯಾರಾಗಲಿದ್ದಾರೆ? ಕನ್ನಡದವರಾ ಅಥವಾ ಪರಭಾಷೆಯ ನಟಿನಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಅದಕ್ಕೂ ತೆರೆ ಎಳೆದಿದ್ದಾರೆ.

    ನಟಿ ಸಂಪದಾ (Sampada) ಕರಾವಳಿ ಸಿನಿಮಾಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಮಿಂಚಿದ್ದ ಸಂಪದಾ ಇದೀಗ ಪ್ಜಜ್ವಲ್‌ಗೆ ನಾಯಕಿಯಾಗುವ ಮೂಲಕ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆ ಬಳಿಕ ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳದ ಸಂಪದಾ ಇದೀಗ ಬಹುನಿರೀಕ್ಷೆಯ ಸಿನಿಮಾಗೆ ನಾಯಕಿಯಾಗಿ ಪದಾರ್ಪಣೆ ಮಾಡಿದ್ದಾರೆ. ಅಂದಹಾಗೆ ಸಂಪದಾಗೆ ಇದು  ಮೊದಲ ಸಿನಿಮಾವಲ್ಲ. ಈಗಾಗಲೇ ನಿಖಿಲ್ ಕುಮಾರ್ ನಟನೆಯ ರೈಡರ್ ಸಿನಿಮಾದಲ್ಲಿ ಸಂಪದಾ ನಟಿಸಿದ್ದರು. ಇದೀಗ ಕರಾವಳಿ ಕಥೆ ಕೇಳಿ ಇಂಪ್ರೆಸ್ ಆದ ಸಂಪದಾ ಪ್ರಜ್ವಲ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ನಲ್ಲಿ ಸಂಪದಾ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ  ಟೈಟಲ್ ಹೇಳುವ ಹಾಗೆ ಇದು ಪಕ್ಕಾ ಕರಾವಳಿ ಭಾಗದ  ಸಿನಿಮಾ. ಸಂಪೂರ್ಣ ಬ್ಯಾಕ್ ಡ್ರಾಪ್ ಕರಾವಳಿ ಭಾಗದ್ದೆ ಆಗಿರಲಿದೆ. ಸಂಪದಾ ಕೂಡ ಕರಾವಳಿ ಹುಡುಗಿಯಾಗಿ ಮಿಂಚಲಿದ್ದಾರೆ.

     

    ಕರಾವಳಿ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಜ್ವಲ್ ನಟನೆಯ 40ನೇ ಸಿನಿಮಾ ಇದಾಗಿದೆ. ಡೈನಾಮಿಕ್ ಪ್ರಿನ್ಸ್ ಈ ಸಿನಿಮಾದಲ್ಲಿ ಇದುವರೆಗೂ ಕಾಣಿಸಿಕೊಳ್ಳದೆ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಸದ್ಯ ಫಸ್ಟ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ  ಕರಾವಳಿ ಸಂಪೂರ್ಣ ಚಿತ್ರೀಕಣ ಮಂಗಳೂರು ಸುತ್ತಮುತ್ತ ನಡೆಯಲಿದೆ.

  • ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    ಕಲಬುರಗಿಯ ದರ್ಗಾ ಆವರಣದಲ್ಲಿ ಹಿಂದೂಗಳಿಂದ ಶಿವರಾತ್ರಿ, ಮುಸ್ಲಿಮರಿಂದ ಉರುಸ್ ಆಚರಣೆ

    – ಫೆಬ್ರವರಿ 18, 19ರಂದು ನಿಷೇಧಾಜ್ಞೆ ಜಾರಿ
    – ಅಹಿತಕರ ಘಟನೆ ತಡೆಗೆ ಸಿಟಿಟಿವಿ, ಡ್ರೋನ್ ಕಣ್ಗಾವಲು

    ಕಲಬುರಗಿ: ಇಲ್ಲಿನ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿ (Dargah) ಸ್ಥಾಪನೆಯಾಗಿರುವ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ.

    ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ವಿಚಾರವಾಗಿ ವಕ್ಫ್ ಟ್ರಿಬುನಲ್ (Karnataka Wakf Tribunal) ಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ದರ್ಗಾ ಸಮಿತಿಗೆ ಸೋಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಪೊಲೀಸ್ ಮುಖ್ಯಸ್ಥರ ಕಚೇರಿಗೆ ನುಗ್ಗಿದ ಉಗ್ರರು – ಗುಂಡಿನ ದಾಳಿ

    ಶಿವರಾತ್ರಿ (MahaShivaratri) ದಿನದಂದೇ ದರ್ಗಾದಲ್ಲಿ ಉರುಸ್ ಕೂಡ ನಡೆಯಬೇಕಿತ್ತು. ಈ ಹಿನ್ನೆಲೆ ಬೆಳಗ್ಗೆ ಮುಸ್ಲಿಮರು, ಮಧ್ಯಾಹ್ನ 2 ಗಂಟೆ ನಂತರ ಹಿಂದೂಗಳು ಪೂಜೆ ನೆರವೇರಿಸುವಂತೆ ಕಳೆದ 4 ದಿನಗಳ ಹಿಂದೆ ಕಲಬುರಗಿ ವಕ್ಫ್ ಟ್ರಿಬುನಲ್ ಕೋರ್ಟ್ ಆದೇಶಿಸಿತ್ತು. ಆದರೆ ದರ್ಗಾ ಸಮಿತಿ ಇದನ್ನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: ಕಾಡ್ಗಿಚ್ಚಿಗೆ ಸಿಲುಕಿ ಬೆಂದು ಹೋಗಿದ್ದ ಫಾರೆಸ್ಟ್ ಗಾರ್ಡ್ ಸಾವು

    KALABURAGI DARGA 3

    ನ್ಯಾಯಮೂರ್ತಿ ಜೆ.ಎಮ್ ಖಾಜಿ ನೇತೃತ್ವದ ಏಕಸದಸ್ಯ ಪೀಠವು ಟ್ರಿಬುನಲ್ ಕೋರ್ಟ್ ಆದೇಶ ಪಾಲಿಸುವಂತೆ ಆಳಂದ ಲಾಡ್ಲೇ ಮಶಾಕ್ ದರ್ಗಾ ಸಮಿತಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿವಾದಿತ ದರ್ಗಾ ಆವರಣದಲ್ಲಿ ಮುಸ್ಲಿಮರು ಶನಿವಾರ (ಫೆ.18) ಬೆಳಗ್ಗೆ 8 ರಿಂದ ಮಧ್ಯಾಹ್ನ 2ರ ವರೆಗೆ ಉರುಸ್ ಆಚರಿಸಲಿದ್ದಾರೆ. ನಂತರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆವರೆಗೆ ಹಿಂದೂಗಳು ದರ್ಗಾ ಆವರಣದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಿದ್ದಾರೆ.

    ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ನೇತೃತ್ವದಲ್ಲಿ ಶ್ರೀರಾಮಸೇನೆ (Sri Ram Sena) ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕರಾದ ಬಸವರಾಜ್ ಮತ್ತಿಮೂಡ್, ರಾಜಕುಮಾರ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೆದಾರ್ ಸೇರಿ ಪೂಜೆ ಸಲ್ಲಿಸಲಿದ್ದಾರೆ.

    KALABURAGI DARGA 5

    ನಿಷೇಧಾಜ್ಷೆ ಜಾರಿ: ಶನಿವಾರ ಮತ್ತು ಭಾನುವಾರ ಮಧ್ಯರಾತ್ರಿ ವರೆಗೆ ಆಳಂದ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಒಬ್ಬರು ಎಸ್ಪಿ, 9 ಡಿವೈಎಸ್ಪಿ, 73 ಪಿಎಸ್‌ಐ, 26 ಸಿಪಿಐ, 90 ಎಎಸ್‌ಐ, 11 ಕೆಎಸ್‌ಆರ್‌ಪಿ ತುಕಡಿ, 4 ಕ್ವಿಕ್ ರೆಸ್ಪಾನ್ಸ್ ಟೀಂ, 5 ಡಿಎಆರ್ ತುಕಡಿ ಸೇರಿದಂತೆ ಸಾವಿರಕ್ಕೂ ಅಧಿಕ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅಲ್ಲದೇ ದರ್ಗಾ ಸುತ್ತ ಅತ್ಯಾಧುನಿಕ ಸಿಸಿ ಕ್ಯಾಮೆರಾ, 10 ಡ್ರೋನ್ ಕ್ಯಾಮೆರಾಗಳ ಮೂಲಕ ಚಲನವಲನ ವೀಕ್ಷಣೆ ಮಾಡಲಾಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪೂಜೆ ವೇಳೆ ವಿನಯ್ ಗುರೂಜಿ ದತ್ತಾಶ್ರಮದಲ್ಲಿ ಪವಾಡ- ಉಘೇ.. ಶಂಕರ ಅಂದ್ರು ಭಕ್ತರು

    ಪೂಜೆ ವೇಳೆ ವಿನಯ್ ಗುರೂಜಿ ದತ್ತಾಶ್ರಮದಲ್ಲಿ ಪವಾಡ- ಉಘೇ.. ಶಂಕರ ಅಂದ್ರು ಭಕ್ತರು

    ಚಿಕ್ಕಮಗಳೂರು: ಶಿವರಾತ್ರಿಯಂದು ಮಹಾಮಂಗಳಾರತಿ ವೇಳೆ ಸೃಷ್ಠಿಕರ್ತ ಶಿವ, ಶಿರದ ಮೇಲೆ ಒಂದೂ ಹೂವನ್ನಿಟ್ಟುಕೊಳ್ಳದೆ ಮುಡಿಸಿದ್ದ ಎಲ್ಲಾ ಹೂವುಗಳನ್ನ ಪ್ರಸಾದದ ರೂಪದಲ್ಲಿ ಚೆಲ್ಲಿರುವ ಅಪರೂಪ ಹಾಗೂ ಪವಾಡ ಸದೃಶ್ಯದ ಘಟನೆಗೆ ವಿನಯ್ ಗುರೂಜಿ ದತ್ತಾಶ್ರಮ ಸಾಕ್ಷಿಯಾಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದಲ್ಲಿ,  ವಿನಯ್ ಗುರೂಜಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಆಚರಣೆಗೆ ಮುಂದಾಗಿದ್ದಾರೆ. ಈ ವೇಳೆ ಶಿವನಿಗೆ ವಿಶೇಷ ಅಲಂಕಾರ ಮಾಡಿ ವಿನಯ್ ಗೂರೂಜಿ ಪೂಜೆ ಮಾಡುವ ವೇಳೆ ಶಿವನಿಗೆ ಮುಡಿಸಿದ್ದ ಎಲ್ಲಾ ಹೂವಗಳು ಕೆಳಗೆ ಬಿದ್ದಿವೆ.

    ಶಿವ ಶಿರದ ಮೇಲೆ ಒಂದೇ ಒಂದು ಹೂವನ್ನೂ ಇಟ್ಟುಕೊಳ್ಳದೆ ಎಲ್ಲಾ ಹೂವುಗಳನ್ನ ಚೆಲ್ಲಿದ್ದಾನೆ. ಈ ದೃಶ್ಯವನ್ನ ಕಣ್ಣಾರೆ ಕಂಡ ಭಕ್ತ ಸಮೂಹ ಉಘೇ ಶಂಕರ ಅಂತ ಕೈಮುಗಿದಿದ್ದಾರೆ. ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ 24 ಗಂಟೆಗಳ ಕಾಲ ನಿರಂತರ ಶಿವರಾತ್ರಿ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ ಶಿವರಾತ್ರಿ ಆಚರಣೆಗೆ ಆಶ್ರದಮದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ ಆರು ಗಂಟೆಯಿಂದ ನಾಳೆ ಬೆಳಗ್ಗೆ ಆರು ಗಂಟೆವರೆಗೆ ನಿರಂತರ ಪೂಜಾ ಕೈಂಕರ್ಯ, ಹೋಮ-ಹವನ ನಡೆಯಲಿದೆ. ಇದನ್ನೂ ಓದಿ: ಅನ್ನ, ನೀರು, ಮೊಬೈಲ್ ಚಾರ್ಜಿಂಗ್ ಮಾಡಲಾಗದೆ ವಿದ್ಯಾರ್ಥಿಗಳ ಪರದಾಟ

    24 ಗಂಟೆಗಳ ಕಾಲ ನಿರಂತರ ವಿಶೇಷ ಲಿಂಗ ಪೂಜೆ ಜೊತೆಗೆ ರುದ್ರಾಭಿಷೇಕ ಕೂಡ ನಡೆಯಲಿದೆ. ಜೊತೆಗೆ ಐದು ಯಾಮ ಪೂಜೆ ಕೂಡ ನಡೆಯಲಿದೆ. ಇಡೀ ರಾತ್ರಿ ಭಕ್ತ ಸಂಗೀತ, ಭಜನೆ ನಡೆಯಲಿದ್ದು, ಅವಧೂತ ವಿನಯ್ ಗುರೂಜಿ ಅವರಿಂದ ಪ್ರವಚನ ಆಶ್ರಮದ ಆವರಣದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಈಗಾಗಲೇ ಆಶ್ರದಲ್ಲಿರುವ ದೇವತೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಆಶ್ರಮದ ಆವರಣದಲ್ಲಿರುವ ನೀಲಕಂಠನಿಗೂ ವಿಶೇಷವಾದ ಅಲಂಕಾರ ಮಾಡಿದ್ದಾರೆ. ಶಿವರಾತ್ರಿ ಅಂಗವಾಗಿ ಆಶ್ರಮದ ಆವರಣದಲ್ಲಿ ಕೃತಕ ಲಿಂಗನನ್ನೂ ಕೂಡ ನಿರ್ಮಿಸಿ ವಿಶೇಷ ಅಲಂಕಾರಗೈದು ಪೂಜೆ ನಡೆಸುತ್ತಿದ್ದಾರೆ.

  • ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ

    ರಾಯಚೂರು: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ಸಂಭ್ರಮ ಜೋರಾಗಿದೆ. ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ಎಲ್ಲ ಭಕ್ತರು ಸಂಭ್ರಮದಲ್ಲಿದ್ದಾರೆ.

    ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥಸ್ವಾಮಿ ವಿಶೇಷ ಪೂಜೆ ನೆರವೇರಿಸುತ್ತಿದ್ದು, ರುದ್ರದೇವರಿಗೆ ಮಹಾರುದ್ರಾಭಿಷೇಕ ನಡೆಯಿತು. ಮಠದ ಪಂಡಿತರು, ಸಂಸ್ಕೃತ ಪಾಠಶಾಲೆ ವಿದ್ಯಾರ್ಥಿಗಳಿಂದ ಮಂತ್ರಪಠಣ ನಡೆಯಿತು. ಮಹಾಶಿವರಾತ್ರಿ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಮಠಕ್ಕೆ ಬರುತ್ತಿದ್ದಾರೆ. ಇದನ್ನೂ ಓದಿ: ಇಂದು ಮಹಾಶಿವರಾತ್ರಿ – ಆದಿ ಅಂತ್ಯವಿಲ್ಲದ ಶಿವನ ಆರಾಧಕರಿಗೆ ಇಂದು ಹಬ್ಬ

    ಮಹಾಶಿವರಾತ್ರಿ ಹಿನ್ನೆಲೆ ರಾಯಚೂರಿನ ಈಶ್ವರ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬೆಳಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ. ನಗರದ ಐತಿಹಾಸಿಕ ಚಂದ್ರಮೌಳೇಶ್ವರ ದೇವಾಲಯ, ರಾಮಲಿಂಗೇಶ್ವರ ದೇವಾಲಯ, ನಂದೀಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಅಲ್ಲದೆ ಭಕ್ತರ ಸಂಖ್ಯೆಯೂ ಸಹ ಹೆಚ್ಚಾಗಿದೆ.

    ಮಹಾಪಂಚಾಮೃತ ಅಭೀಷೇಕ ಸೇರಿದಂತೆ ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಪೂಜೆಗಳು ನಡೆಯುತ್ತವೆ. ಮಹಾಶಿವರಾತ್ರಿ ಹಿನ್ನೆಲೆ ರಾತ್ರಿ ಜಾಗರಣೆಗೂ ದೇವಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

  • ಬೆಲ್ಲವನ್ನು ಬಳಸಿ ಮಾಡಿ ಗಸಗಸೆ ಪಾಯಸ

    ಬೆಲ್ಲವನ್ನು ಬಳಸಿ ಮಾಡಿ ಗಸಗಸೆ ಪಾಯಸ

    ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.  ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ.  ಈ ಹಬ್ಬದ ದಿನ ಸಿಹಿ ಅಡುಗೆಯನ್ನು ಮಾಡಬೇಕು ಎಂದು ನೀವೆನಾದ್ರೂ ಪ್ಲ್ಯಾನ್‌ ಮಾಡಿದ್ದರೆ, ಗಸಗಸೆ ಪಾಯಸವನ್ನು ಮಾಡಿ ಸವಿಯಿರಿ. ಬೆಲ್ಲವನ್ನು ಬಳಸಿಕೊಂಡು ಅತ್ಯಂತ ಸರಳವಾಗಿ ಈ ಪಾಯಸವನ್ನು  ಮಾಡುವ ವಿಧಾನ ಈ ಕೆಳಗಿನಂತಿದೆ.

    ಬೇಕಾಗುವ ಸಾಮಗ್ರಿಗಳು:
    * ಗೋಡಂಬಿ-ಸ್ವಲ್ಪ
    * ಬಾದಾಮಿ-ಸ್ವಲ್ಪ
    * ಕಪ್ ತೆಂಗಿನಕಾಯಿ- 1ಕಪ್‌
    * ಕಪ್ ಬೆಲ್ಲ-   1ಕಪ್‌
    * ಏಲಕ್ಕಿ ಪುಡಿ- ಸ್ವಲ್ಪ
    * ಗಸಗಸೆ- 2ಕಪ್‌
    * ತುಪ್ಪ- ಅರ್ಧ ಕಪ್‌
    * ಒಣದ್ರಾಕ್ಷಿ- ಸ್ವಲ್ಪ

    ಮಾಡುವ ವಿಧಾನ:
    * ಬಾಣಲೆಯಲ್ಲಿ ಗಸಗಸೆ, ಗೋಡಂಬಿ, ಬಾದಾಮಿ, ಗಸಗಸೆ ತುಪ್ಪವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು.
    * ಹುರಿದ ಪದಾರ್ಥಗಳು, ತೆಂಗಿನಕಾಯಿ ತುರಿ ಸ್ವಲ್ಪ ನೀರನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಬೇಕು. ಇದನ್ನೂ ಓದಿ:  ರವಾ ಬರ್ಫಿ ಮಾಡಿ ಸಖತ್ ಟೇಸ್ಟ್ ಆಗಿರುತ್ತೆ ಒಮ್ಮೆ ಟ್ರೈ ಮಾಡಿ

    * ಒಂದು ಪಾತ್ರೆಯಲ್ಲಿ ಸ್ವಲ್ಪ ತುಪ್ಪ, ಬೆಲ್ಲವನ್ನು ಕರಗಿಸಿಕೊಳ್ಳಬೇಕು. ಇದನ್ನೂ ಓದಿ: ಸೂಪರ್ ಕೂಲ್ ದ್ರಾಕ್ಷಿ ಹಣ್ಣಿನ ಲಸ್ಸಿ ಮಾಡುವ ಸರಳ ವಿಧಾನ ನಿಮಗಾಗಿ


    * ನಂತರ ಈ ಪಾತ್ರೆಗೆ ತಯಾರಾದ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬೇಕಾದಲ್ಲಿ ಸ್ವಲ್ಪ ನೀರನ್ನು ಸೇರಿಸಿಕೊಳ್ಳಿ ಇದನ್ನೂ ಓದಿ:  ಸ್ಪೆಷಲ್ ಹೀರೆಕಾಯಿ ದೋಸೆ ಮಾರ್ನಿಂಗ್ ತಿಂಡಿಗೆ ಮಾಡಿ

    * ನಂತರ ಇನ್ನೊಂದು ಬಾಣಲೆಗೆ ತುಪ್ಪ, ಗೋಡಂಬಿ, ಒಣದ್ರಾಕ್ಷಿಯನ್ನು ಚಿನ್ನದ ಕಂದು ಬಣ್ಣ ಬರುವವರೆಗೆ ಹುರಿಯಿರಿದುಕೊಳ್ಳಬೇಕು. ಇದನ್ನೂ ಓದಿ:  ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

    * ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಖೀರ್ ಮೇಲೆ ಸುರಿದು, ಏಲಕ್ಕಿ ಪುಡಿಯನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ
    ಗಸಗಸೆ ಪಾಯಸ ಆನಂದಿಸಲು ಸಿದ್ಧವಾಗುತ್ತದೆ.

  • ಮಹಾಶಿವರಾತ್ರಿ  ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

    ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

    ಇಂದು ಮಹಾಶಿವರಾತ್ರಿ ಹಬ್ಬವನ್ನು ಭಾರತಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.  ಸೋಮವಾರ ಶಿವನಿಗೆ ಬಹಳ ಇಷ್ಟವಾದ ದಿನ. ಆದರೆ ಈ ಬಾರಿ ಹಬ್ಬ ಮಂಗಳವಾರ ಬಂದಿದೆ.

    ಶಿವನ ಪೂಜೆ ಮಾಡುವುದು ಹೇಗೆ:
    ಮಹಾಶಿವರಾತ್ರಿ ದಿನ ಹಸುವಿನ ತುಪ್ಪದ ಜೊತೆ ಕರ್ಪೂರವನ್ನು ಬೆರೆಸಿ ಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಈ ದಿನ ರುದ್ರಾಕ್ಷಿಯ ಮಾಲೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಹಸಿ ಹಾಲಿನಲ್ಲಿ ಗಂಗಾ ಜಲವನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ನಂತರ ಚಂದನ, ಹೂ, ದೀಪ ಹಾಗೂ ಧೂಪ ಹಚ್ಚಿ ಪೂಜೆ ಮಾಡಬೇಕು.

    ವ್ರತದ ಮಹತ್ವ:
    ಮಹಾಶಿವರಾತ್ರಿ ಹಬ್ಬದಂದು ವ್ರತ ಮಾಡುವುದರಿಂದ ಪಾಪ ದೂರ ಆಗುತ್ತದೆ ಹಾಗೂ ಆತ್ಮ ಶುದ್ಧ ಆಗುತ್ತದೆ. ಎಲ್ಲೆಲ್ಲಿ ಶಿವಲಿಂಗವನ್ನು ಸ್ಥಾಪಿಸಲಾಗುತ್ತದೋ ಅಲ್ಲಿ ಶಿವ ಖಂಡಿತವಾಗಿಯೂ ಇರುತ್ತಾನೆ ಎಂಬುದು ಜನರ ನಂಬಿಕೆ. ಮಹಾಶಿವರಾತ್ರಿ ಇಡೀ ದಿನ ಶ್ರದ್ಧೆಯಿಂದ ವ್ರತ ಮಾಡಿದರೆ, ಶಿವ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ ಎನ್ನುವ ನಂಬಿಕೆಯಿದೆ. ಮಹಾಶಿವರಾತ್ರಿ ದಿನ ಮಾಡುವ ವ್ರತ ಪ್ರಭಾವಶಾಲಿ ಎಂದು ಹಿರಿಯರು ಹೇಳುತ್ತಾರೆ.

    ಶಿವನನ್ನು ಪ್ರಸನ್ನಗೊಳಿಸಲು ಮಹಾಶಿವರಾತ್ರಿ ಇಡೀ ದಿನ ಜನರು ಉಪವಾಸವಿರುತ್ತಾರೆ. ಕೆಲವರು ಇಡೀ ದಿನ ಅನ್ನ ಹಾಗೂ ನೀರು ಸೇವಿಸದೇ ಉಪವಾಸ ಮಾಡಿದರೆ, ಮತ್ತೆ ಕೆಲವರು ಹಣ್ಣು, ಡ್ರೈ ಫ್ರೂಟ್ಸ್ ಮಾತ್ರ ಸೇವಿಸುತ್ತಾರೆ.

  • ಮಹಾ ಶಿವರಾತ್ರಿಗೆ ಗೋಕರ್ಣ ಮಹಾಬಲೇಶ್ವರ ಸನ್ನಿಧಿಯಲ್ಲಿ ಹೇಗಿದೆ ಸಿದ್ಧತೆ?

    ಮಹಾ ಶಿವರಾತ್ರಿಗೆ ಗೋಕರ್ಣ ಮಹಾಬಲೇಶ್ವರ ಸನ್ನಿಧಿಯಲ್ಲಿ ಹೇಗಿದೆ ಸಿದ್ಧತೆ?

    ಕಾರವಾರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮಹಾಬಲೇಶ್ವರ ಸನ್ನಿಧಿಯಲ್ಲಿ ಗುರುವಾರ ನಡೆಯುವ ಶಿವರಾತ್ರಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ವಿಶೇಷ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.

    ಕೋವಿಡ್ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ದೇವರ ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರಬೇಕಿದೆ. ಜೊತೆಗೆ ಕಡ್ಡಾಯವಾಗಿ ಪುರುಷರಿಗೆ ಹಾಗೂ ಮಹಿಳೆಯರಿಗೆ ವಸ್ತ್ರ ಸಂಹಿತೆ ಜಾರಿಯಿದ್ದು, ಪುರುಷರು ಕಡ್ಡಾಯವಾಗಿ ಪಂಚೆ, ಶಲ್ಯವನ್ನು ಧರಿಸಬೇಕಿದೆ. ಇನ್ನು ಮಹಿಳೆಯರು ಷಾಟ್ರ್ಸ್, ಟೀ ಶರ್ಟ್ ಧರಿಸಿ ದೇವಸ್ಥಾನ ಪ್ರವೇಶಿಸುವಂತಿಲ್ಲ.

    ದೇವಸ್ಥಾನದ ಗರ್ಭಗುಡಿಯು ಮುಂಜಾನೆ 3 ಘಂಟೆಗೆ ತೆರೆಯಲಿದೆ. ಆತ್ಮಲಿಂಗಕ್ಕೆ ವಿಶೇಷ ಪೂಜೆ ನಂತರ ಸಾರ್ವಜನಿಕರಿಗೆ ಪ್ರವೇಶ ವ್ಯವಸ್ಥೆ ಮಾಡಲಾಗಿದೆ.

    ವಿಶೇಷ ಪೂಜೆಗಳು:
    ನವಧಾನ್ಯ ವಿಶೇಷ ಪೂಜೆ, ಗಣೇಶ ಪೂಜೆ, ಧ್ವಜಾರೋಹಣ, ಮೃತಿಕಾಹರಣೋತ್ಸವ ಭೂತಬಲಿ, ಸ್ಥಾನ ಶುದ್ಧ್ಯಾದಿ ಹವನಾನುಷ್ಠಾನ, ಗಜವಾಹನಯಂತ್ರೋತ್ಸವ ಭೂತಬಲಿ, ಕಲಾಶಕ್ತ್ಯಾದಿ ಹವನ, ಹಂಸವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಸಿಂಹವಾಹನ ಯಂತ್ರೋತ್ಸವ, ಪುಷ್ಪರಥೋತ್ಸವ ಭೂತಬಲಿ, ಪುಷ್ಪರತೋತ್ಸವ ಶಿವಯೋಗದ ಮಹಾಪರ್ವ ಮಹಾಕುಂಭಾಭಿಷೇಕ ಪೂರ್ವಕ ಪಂಚಾಮೃತಾಭಿಷೇಕ, ಭೂತಬಲಿ ಜಲಯಾನೋತ್ಸವ, ದೀಪೋತ್ಸವ, ಮಯೂರ ಯಂತ್ರೋತ್ಸವ, ಶ್ರೀಮನ್ಮಹಾರಥೋತ್ಸವ, ಮೃಗಯಾತ್ರೆ, ಗ್ರಾಮಬಲಿ ಚೂರ್ಣೋತ್ಸವ, ಅವಭೃಥ, ಜಲಾಯನೋತ್ಸವ, ಮಹಾಪೂರ್ಣಾವತಿ ಅಂಕುರಾರ್ಪಣೆ, ದೀಪೋತ್ಸವ ಅಂಕುರ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

    ಶಿವರಾತ್ರಿ ವಿಶೇಷ ರಥೋತ್ಸವ
    ಮಹಾರಥೋತ್ಸವವು ಮಾ.14ರಂದು ನಡೆಯಲಿದ್ದು, ಶಿವರಾತ್ರಿ ಅಂಕುರ ಪ್ರಸಾದ ಮಾ.15ರಂದು ನಡೆಯಲಿದೆ. ಮಾ.19ರಂದು ರಥ ಸಪ್ತಮಿಯಂದು ಮಹಾರಥದ ‘ಗಡ್ಡೆ’ ಹೊರತೆಗೆಯುವ ಕಾರ್ಯಕ್ರಮ ನೆರವೇರಲಿದೆ.

    ಭಕ್ತರ ಸಂಖ್ಯೆಯಲ್ಲಿ ಇಳಿಕೆ
    ಪ್ರತಿ ವರ್ಷ ಶಿವರಾತ್ರಿಯ ಹಿಂದಿನ ದಿನದಂದು ಸಾವಿರಾರು ಭಕ್ತರು ಗೋಕರ್ಣಕ್ಕೆ ಬಂದು ತಂಗುತ್ತಾರೆ. ಸೂರ್ಯ ಉದಯದ ಸಂದರ್ಭದಲ್ಲಿ ಸಮುದ್ರ ತೀರಕ್ಕೆ ತೆರಳಿ ಗಂಗಾ ಸ್ನಾನ ಮಾಡಿ, ಮರಳಿನ ಮೂಲಕ ವಿಶೇಷ ಶಿವನ ‘ಲಿಂಗ’ ಪೂಜೆ ಮಾಡುವುದು ವಾಡಿಕೆ. ಆದರೆ ಈ ವರ್ಷ ಕರೊನಾ ಮಹಾ ಮಾರಿ ಹಿನ್ನೆಲೆ ಹೆಚ್ಚು ಜನ ಆಗಮಿಸಿಲ್ಲ. ಹೀಗಾಗಿ ಗಿಜಿಗುಡಬೇಕಿದ್ದ ಗೋಕರ್ಣ ಖಾಲಿ ಹೊಡೆಯುತಿದ್ದು, ಸ್ಥಳೀಯರು ಮಾತ್ರ ಕಾಣಸಿಗುತಿದ್ದಾರೆ.

    ಗೋಕರ್ಣದ ರೆಸಾರ್ಟ್, ವಸತಿ ಗೃಹಗಳು ಪ್ರವಾಸಿಗರು ಹಾಗೂ ಶಿವಭಕ್ತರ ಸಂಖ್ಯೆ ವಿರಳತೆಯಿಂದ ಹಲವು ಕಡೆ ಖಾಲಿ ಹೊಡೆಯುತ್ತಿದೆ. ಸ್ಥಳೀಯರು ಹೇಳುವಂತೆ ಈ ಬಾರಿ ಶಿವರಾತ್ರಿಯ ಹಿಂದಿನ ದಿನವಾಗಿದ್ದರೂ, ಶಿವ ದರ್ಶನಕ್ಕೆ ಭಕ್ತರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಶಿವರಾತ್ರಿ ದಿನವೂ ಕಡಿಮೆ ಆಗಲಿದೆ ಎನ್ನುತಿದ್ದಾರೆ.